ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಎಲ್‌ಇಟಿ, ಹುಜಿ ನಂಟು; ಗಣ್ಯರ ಹತ್ಯೆಗೆ ಸಂಚು: ಬೆಚ್ಚಿಬಿದ್ದನಗರ: ಶಂಕಿತ ಉಗ್ರರಲ್ಲಿ ವೈದ್ಯ, ಎಂಜಿನಿಯರ್, ಗುತ್ತಿಗೆದಾರ, ಪತ್ರಕರ್ತ ಹಾಗೂ ಗಾರೆ ಕಾರ್ಮಿಕ! | ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ

 ಹನ್ನೊಂದು ಉಗ್ರರ  ಬಂಧನ

ರಾಜಕಾರಣಿಗಳು, ಪತ್ರಕರ್ತರ ಹತ್ಯೆಗೆ ಸಂಚು

ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿಗಳು ಹಾಗೂ ಮಾಧ್ಯಮ ಪ್ರಮುಖರೂ ಸೇರಿ ಗಣ್ಯರ ಹತ್ಯೆಗೆ ಸಂಚು ರೂಪಿಸಿದ್ದ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಹಾಗೂ ಹರ್ಕತ್-ಉರ್-ಜಿಹಾದ್-ಅಲ್-ಇಸ್ಲಾಮಿ (ಹುಜಿ) ಸಂಘಟನೆಯ ೧೧ ಉಗ್ರರು .

ಬೆಂಗಳೂರು ಹಾಗೂ ಹುಬ್ಬಳ್ಳಿ ನಗರದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಆರೋಪಿಗಳನು ಬಂದಿಸಿದ್ದು, ರಾಜ್ಯದಲ್ಲಿ ನಡೆಯ ಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ವಿಶ್ವೇಶರ ಭಟ್, ಅಂಕಣಕಾರ ಪ್ರತಾಪ ಸಿಂಹ, ವಿಧಾನ ಪರಿಷತ್ ಸದಸ್ಯ ಹಾಗೂ ವಿಜಯವಾಣಿ ಪತ್ರಿಕೆ ಮಾಲೀಕ ವಿಜಯಸಂಕೇಶ್ವರ, ಸಂಸದ ಪ್ರಹ್ಲಾದ ಜೋಷಿ ಸೇರಿದಂತೆ ಹಲವು ಗಣ್ಯರ ಹತ್ಯೆಗೆ ಈ ಉಗ್ರರು ಸಂಚು ನಡೆಸಿದ್ದರು.

ಬೆಂಗಳೂರಿನಲ್ಲಿ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಆಂಗ್ಲ ದಿನಪತ್ರಿಕೆ ವರದಿಗಾರ ಮುತಿ-ಉರ್-ರೆಹಮಾನ್ ಸಿದ್ದಿಕ್ (೨೬) ಸೇರಿದಂತೆ ಶೋಹಿಬ್ ಅಹ್ಮದ್ ಮಿರ್ಜಾ ಅಲಿಯಾಸ್ ಚೋಟು (೨೫), ಅಬ್ದುಲ್ಲಾ ಅಲಿಯಾಸ್ ಅಬ್ದುಲ್ ಹಕೀಂ (೨೫), ಏಜಾಜ್ ಮಹ್ಮದ್ ಮಿರ್ಜಾ (೨೫), ಮಹ್ಮದ್ ಯೂಸೂಫ್ ನಲಬಂದ್ (೨೮), ರಿಯಾಜ್ ಅಹ್ಮದ್ ಬ್ಯಾಹಟಿ (೨೮)ರನ್ನು ಬಂದಿಸಲಾಗಿದೆ.

ಅದೇ ರೀತಿ ಹುಬ್ಬಳ್ಳಿಯ ಕೇಸ್ವಾಪುರ ಬಾದಾಮಿನಗರದ ಒಬೆದುಲ್ಲಾ ಇಮ್ರಾನ್ ಬಹದ್ದೂರ್ ಅಲಿಯಾಸ್ ಸಮೀರ್ ಅಲಿಯಾಸ್ ಇಮ್ರಾನ್ (೨೪), ಮಹ್ಮದ್ ಸಾದಿಕ್ ಲಷ್ಕರ್ ಅಲಿಯಾಸ್ ರಾಜು (೨೮), ವಾಹಿದ್ ಹುಸೇನ್ ಅಲಿಯಾಸ್ ಸಾಹಿಲ್ (೨೬), ಬಾಬಾ ಅಲಿಯಾಸ್ ಮೆಹಬೂಬ್ ಬಾಗಲುಕೋಟೆ (೨೬), ಡಾ. ಜಾಫರ್ ಇಕ್ಬಾಲ್ ಶೂಲಾಪುರ್ (೨೭) ಎಂಬವರನ್ನು ಬಂದಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್‌ರುಕಾಮ್ ಪಚಾವೋ ಹಾಗೂ ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.

ಆರೋಪಿಗಳು ನಿಷೇದಿತ ಭಯೋತ್ಪಾದಕ ಸಂಘಟನೆಗಳಾದ ಎಲ್‌ಇಟಿ ಹಾಗೂ ಹುಜಿ ಜೊತೆ ನಂಟು ಹೊಂದಿದ್ದರು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ತಮ್ಮ ಸೂತ್ರಧಾರರ ಆಣತಿ ಮೇರೆಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು, ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಖ್ಯಾತ ಪತ್ರಕರ್ತರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಪಚಾವೋ ತಿಳಿಸಿದರು.

ಬೆಂಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಜೆ.ಸಿ.ನಗರ ಮುನಿರೆಡ್ಡಿ ಪಾಳ್ಯದಲ್ಲಿ ನೆಲೆಸಿದ್ದ ಆರು ಮಂದಿ ಹಾಗೂ ಹುಬ್ಬಳ್ಳಿಯಲ್ಲಿ ತಂಗಿದ್ದ ಐವರನ್ನು ಬಂದಿಸ್ಸಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸುತ್ತಿದ್ದಾರೆ. ಬಂಧಿತರಲ್ಲಿ ಬಹುತೇಕರು ಹುಬ್ಬಳ್ಳಿ ನಿವಾಸಿಗಳು.

ಐಪಿಸಿ ಕಾಯ್ದೆ:

ಬಂದಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ ೧೨೦ಬಿ, ೧೫೩ಎ, ೩೦೭, ೩೭೯, ಶಸ್ತ್ರಾಸ್ತ್ರ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆ ಎಂಬ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯರಲ್ಲಿ ಆತಂಕ: ಆರೋಪಿಗಳು ತಂಗಿದ್ದ ಬಡಾವಣೆ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಬಂದಿತರು ಕಳೆದ ಐದು ವರ್ಷಗಳಿಂದ ಮುನಿರೆಡ್ಡಿ ಪಾಳ್ಯದಲ್ಲಿ ತಂಗಿದ್ದರು. ಅವರು ಯಾವಾಗ ಹೋಗುತ್ತಿದ್ದರು, ಮನೆಗೆ ಯಾವ ವೇಳೆ ಹಿಂತಿರುಗುತ್ತಿದ್ದರು ಎಂಬ ಬಗ್ಗೆ ಸ್ಥಳೀಯರಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ, ಆರೋಪಿಗಳನ್ನು ನಾವು ನೋಡಿದ್ದೆವು. ಮುಗ್ದರಂತೆ ತೋರುವ ಯುವಕರು ಇಂತಹ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿದ್ದರೇ ಎಂಬ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಎಸ್‌ಎಂಎಸ್ ಅಭದ್ರತೆ: ಇತ್ತೀಚೆಗೆ ಅಸ್ಸಾಂ ಕೋಮುಗಲಭೆಗೆ ಸಂಬಂದಿಸಿದಂತೆ ನಗರದಲ್ಲಿ ಎಸ್‌ಎಂಎಸ್ ಹಾಗೂ ಎಂಎಂಎಸ್ ಕಳುಹಿಸಿ ರಾಜ್ಯದ ಜನತೆಯಲ್ಲಿ ಆತಂಕ ಉಂಟು ಮಾಡಿದ್ದುದು ಇದೇ ಸಂಘಟನೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ಬಂದಿತರೆಲ್ಲರೂ ಭಟ್ಕಳ, ಹೊನ್ನಾವರ, ಶಿರಸಿ, ಬಿಜಾಪುರ ಸೇರಿ ರಾಜ್ಯದ ವಿವಿಧ ನಗರಗಳಲ್ಲಿನ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ.

ಮಿಷನ್ ಕಿಲ್ ಪ್ರತಾಪ್
ಪತ್ರಕರ್ತ ವಿಶ್ವೇಶರ ಭಟ್ ಹಾಗೂ ಪ್ರತಾಪ್ ಸಿಂಹ ಅವರ ಹತ್ಯೆಗೆ ಉಗ್ರರು ‘ಮಿಷನ್ ಕಿಲ್ ಪ್ರತಾಪ್’ ಎಂಬ ಹೆಸರು ನೀಡಿದ್ದರು. ಇವರ ನಡುವಿನ ಸಂಭಾಷಣೆ ಹಾಗೂ ಇ- ಮೇಲ್ ವ್ಯವಹಾರದಲ್ಲಿ ಇದೇ ಹೆಸರು ಆರಂಭದಲ್ಲಿ ಬಳಕೆಯಾಗಿತ್ತು. ನಂತರ ಈ ಬಗ್ಗೆ ಅನುಮಾನ ಇರಬಹುದೆಂದು ಕಾರಣಕ್ಕೆ ಆಪರೇಷನ್ ರಮೇಶ್ ಮ್ಯಾರೇಜ್ ಎಂದು ಹೆಸರು ಕೊಟ್ಟಿದ್ದರು. ರಮೇಶ್ ಎಂದರೆ ಪ್ರತಾಪ್, ಮ್ಯಾರೇಜ್ ಎಂದರೆ ಹತ್ಯೆ ಎಂದು ರಹಸ್ಯ ಭಾಷೆಯ ಅರ್ಥ. ಈ ಶಬ್ದಗಳ ಮೂಲಕವೇ ಕಾರ್ಯಾಚರಣೆ ರೂಪುರೇಷೆ ನಿರ್ಮಾಣವಾಗಿತ್ತು. ಜೊತೆಗೆ ವಿಶ್ವೇಶರ ಭಟ್ ಮತ್ತು ಪ್ರತಾಪ್ ಸಿಂಹ ಅವರ ಚಲನವಲನಗಳನ್ನು ಆರೋಪಿಗಳು ಗಮನಿಸುತ್ತಿದ್ದರು.

ಬೆಂಗಳೂರು ಪೊಲೀಸರ ಸಾಹಸ
ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂದಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರ ನೆರವು ಪಡೆದಿಲ್ಲ. ಬಂದ ಮಾಹಿತಿ ಆಧಾರದ ಮೇಲೆ ಕಳೆದ ಆರೇಳು ತಿಂಗಳಿಂದ ಮಾಹಿತಿ ಕಲೆಹಾಕಿದ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಆರೋಪಿಗಳನ್ನು ಬಂದಿಸುವವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂದಿತರ ವಿರುದ್ಧ ಬೆಂಗಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದರು.

ಸಿಕ್ಕಿಬಿದ್ದದ್ದು ಹೇಗೆ?
ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಂಕಿತರ ಪೋನ್ ಸಂಭಾಷಣೆಯ ಮಾಹಿತಿ ಕಲೆಹಾಕುತ್ತಿದ್ದರು. ಆಗ ಹುಬ್ಬಳ್ಳಿಯಲ್ಲಿ ಜಾಡು ಸಿಕ್ಕಿದೆ. ನಂತರ ಬೆಂಗಳೂರಿನ ಮುನಿರೆಡ್ಡಿ ಪಾಳ್ಯದಲ್ಲಿ ಉಗ್ರರು ನೆಲೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಂತರ ಪತ್ರಕರ್ತ ಸಿದ್ಧಿಕ್ ಹಾಗೂ ಆತನ ತಂಡ ತಂಗಿದ್ದ ಮನೆ ಹಾಗೂ ಅವರ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನೇನು ಸಿಕ್ಕಿದೆ?
ಬಂದಿತರಿಂದ ಹಾರ್ಡ್ ಡಿಸ್ಕ್‌ಗಳು, ಒಂದು ವಿದೇಶಿ ನಿರ್ಮಿತ ೭.೬೫ ಎಂಎಂನ ಪಿಸ್ತೂಲು, ಏಳು ಮದ್ದುಗುಂಡುಗಳು, ಸಿಡಿ, ಕಂಪ್ಯೂಟರ್‌ಗಳು, ಜಿಹಾದಿ ಸಾಹಿತ್ಯ, ವಿವಿಧ ಧರ್ಮಗಳ ಗ್ರಂಥಗಳು, ಹಾಗೂ ಅಗತ್ಯ ದಾಖಲೆಗಳನು? ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಹಿನ್ನಲೆ
ಬಂದಿತರ ಪೈಕಿ ಸಿದ್ದಿಕ್ ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ವರದಿಗಾರನಾಗಿದ್ದ. ಶೋಹಿಬ್ ಡಿಆರ್‌ಡಿಓದಲ್ಲಿ ವಿಜ್ಞಾನಿಯಾಗಿದ್ದ. ಎಜಾಜ್ ಎಂಸಿಎ ವಿದ್ಯಾರ್ಥಿ. ಉಳಿದವರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಇವರಲ್ಲಿ ಸಾಕಷ್ಟು ಮಂದಿ ಮದರಸಾಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಜಾಫರ್ ತಂದೆ ಉಡುಪಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ. ಶೋಹಿಬ್ ಹಾಗೂ ಎಜಾಜ್ ತಂದೆ ರೇಲ್ವೆಯಲ್ಲಿ ಹಾಗೂ ಸಿದ್ಧಿಕ್ ತಂದೆ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಎಲ್‌ಇಟಿ ಹಾಗೂ ಹುಜಿ ಜೊತೆ ನಂಟು ಹೊಂದಿದ್ದರು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ತಮ್ಮ ಸೂತ್ರಧಾರರ ಆಣತಿ ಮೇರೆಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು, ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಖ್ಯಾತ ಪತ್ರಕರ್ತರ ಹತ್ಯೆಗೆ ಸಂಚು ನಡೆಸಿದ್ದರು.
-ಪಚಾವೋ, ಡಿಜಿಪಿ

ಗಣ್ಯರ ಹತ್ಯೆಗೆ ಸಂಚು

ಬಂಧಿತರಲ್ಲಿ ನಗರದ ಆಂಗ್ಲ ಪತ್ರಿಕೆಯ ವರದಿಗಾರ, ಕಿರಿಯ ವಿಜ್ಞಾನಿ, ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ವೈದ್ಯರೊಬ್ಬರು ಸೇರಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಮಹತ್ವದ ಮಾಹಿತಿ ಸಂಗ್ರಹಿಸಿ ಬುಧವಾರ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಂದ ವಿದೇಶಿ ನಿರ್ಮಿತ 7.65 ಎಂ.ಎಂ. ನ ಪಿಸ್ತೂಲ್, ಏಳು ಗುಂಡುಗಳು, ಲ್ಯಾಪ್‌ಟಾಪ್, ಮೊಬೈಲ್‌ಫೋನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುರುವಾರ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಿಜಿಪಿ ಲಾಲ್ ರುಖುಮಾ ಪಚಾವೊ ಮತ್ತು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಈ ವಿಷಯ ತಿಳಿಸಿದರು.

''ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಎಲ್‌ಇಟಿ ಮತ್ತು ಹುಜಿ ಸಂಘಟನೆಗಳ ಸೂತ್ರದಾರರ ಆಣತಿಯಂತೆ, ಕರ್ನಾಟಕದ ಕೆಲ ಸಂಸದರು, ಶಾಸಕರು, ಹಿಂದೂ ಪರ ಸಂಘಟನೆಯ ಪ್ರಮುಖರು ಹಾಗೂ ಪತ್ರಕರ್ತರನ್ನು ಹತ್ಯೆ ಮಾಡಲು ಅವರು 2-3 ತಿಂಗಳಿಂದ ಸಂಚು ರೂಪಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆದರೆ, ಯಾರ ಮೇಲೆ ಸಂಚು ರೂಪಿಸಿದ್ದರು ಎಂಬುದನ್ನು ಬಹಿರಂಗಪಡಿಸಲಾಗದು'', ಎಂದು ಅವರು ಹೇಳಿದರು.

''ಸಿಸಿಬಿ ಪೊಲೀಸರು ಮಾಹಿತಿ ಆಧರಿಸಿ ಶಂಕಿತರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಅವರ ಒಳ ಸಂಚಿನ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿಸಿದ್ದಾರೆ '', ಎಂದು ತನಿಖಾ ತಂಡವನ್ನು ಅವರು ಶ್ಲಾಘಿಸಿದರು. ಬಸವೇಶ್ವರನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ವಿಚಾರಣೆ ನಂತರ ಅವರ ಸಂಚಿನ ಪೂರ್ಣ ಪ್ರಮಾಣ ಮತ್ತು ಭಾಗಿಯಾಗಿರಬಹುದಾದ ಇತರರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ '', ಎಂದು ತಿಳಿಸಿದರು.

''ಇದು ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆ ಸಂಘಟನೆಯ ಜಾಲ ಇರಬಹುದು ಎಂಬ ಗುಮಾನಿ ಇದೆ. ಕರ್ನಾಟಕವಲ್ಲದೆ ಇತರ ರಾಜ್ಯಗಳಲ್ಲೂ ಇದೇ ರೀತಿ ಗುಪ್ತ ಜಾಲಗಳನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಇತ್ತೀಚೆಗೆ ದೇಶಾದ್ಯಂತ ಸುಳ್ಳು ಎಸ್‌ಎಂಎಸ್ ಮತ್ತು ಎಂಎಂಎಸ್ ಮಾಹಿತಿ ರವಾನೆ ಮಾಡಿ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದ ಜಾಲದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ'', ಎಂದು ಹೇಳಿದರು.

ಬೆಂಗಳೂರಲ್ಲಿ ಸಿಕ್ಕಿಬಿದ್ದವರು
ಶೋಹಿಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟು (25), ಅಬ್ದುಲ್ಲಾ ಅಲಿಯಾಸ್ ಹಕ್ಕಿಂ ಜಮಾದಾರ್ (25), ಏಜಾಜ್ ಮಹ್ಮದ್ ಮಿರ್ಜಾ (25), ಮಹಮದ್ ಯೂಸಫ್ ನಲಬಂದ್ (28), ರಿಯಾಜ್ ಅಹಮದ್ ಬ್ಯಾಹಟ್ಟಿ (28), ಮುತಿ ಉರ್-ರೆಹಮಾನ್ ಸಿದ್ದಿಕ್ (26).

ಹುಬ್ಬಳ್ಳಿಯಲ್ಲಿ ಬಂಧಿತರು
ಒಬೇದುಲ್ಲಾ ಇಮ್ರಾನ್ ಬಹದೂರ್ ಅಲಿಯಾಸ್ ಸಮೀರ್ ಉರುಫ್ ಇಮ್ರಾನ್ (24), ಮಹ್ಮದ್ ಸಾದಿಕ್ ಲಷ್ಕರ್ ಅಲಿಯಾಸ್ ರಾಜು (28), ವಾಹಿದ್ ಹುಸೇನ್ ಅಲಿಯಾಸ್ ಸಾಹಿಲ್ (26), ಬಾಬಾ ಅಲಿಯಾಸ್ ಮೆಹಬೂಬ್ ಬಾಗಲಕೋಟೆ (26) ಹಾಗೂ ಡಾ. ಜಾಫರ್ ಇಕ್ಬಾಲ್ ಶೂಲಾಪುರ್ (27).

ಸೆರೆ ಸಿಕ್ಕಿದ್ದು ಹೇಗೆ?
ಸಣ್ಣ ಮಾಹಿತಿ ಆಧರಿಸಿ ಎರಡು ತಿಂಗಳಿಂದ ತೀವ್ರ ನಿಗಾ ವಹಿಸಿದ್ದ ಸಿಸಿಬಿ ತಂಡ ಬೆಂಗಳೂರಿನ ಜೆ.ಸಿ.ನಗರ ಸಮೀಪದ ಮುನಿರೆಡ್ಡಿಪಾಳ್ಯದ ಮುಬಾರಕ್ ಮೊಹಲ್ಲಾದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಶಂಕಿತರನ್ನು ಬಂಧಿಸಿದೆ. ಸಿದ್ದಿಕ್ ಸೇರಿದಂತೆ ಐವರು ಕಳೆದ ಮೂರು ವರ್ಷಗಳಿಂದ ಈ ಮನೆ ಮಾಡಿಕೊಂಡಿದ್ದರು. ಅಕ್ಕ-ಪಕ್ಕದ ಮನೆಯವರ ಜತೆ ಹೆಚ್ಚಿನ ಸಂಪರ್ಕ ಹೊಂದಿರದ ಈ ಯುವಕರು, ಬೆಳಗ್ಗೆ ಮನೆಯಿಂದ ಹೊರಟರೆ, ರಾತ್ರಿ ವಾಪಸಾಗುತ್ತಿದ್ದರು. ಸಿದ್ಧಿಕ್, ಏಜಾಜ್ ಮಹಮದ್ ಹೊರತುಪಡಿಸಿದರೆ ಉಳಿದವರು ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ.

ಬಂಧಿತ ಇಮ್ರಾನನ ಮೂಲ ಹೆಸರು ಉಬೇದುಲ್ಲಾ

 

ಧಾರವಾಡ:ಹುಬ್ಬಳ್ಳಿಯಲ್ಲಿ ಬುಧವಾರ ಬೆಳಿಗ್ಗೆ ಉಗ್ರಗಾಮಿ ಎಂಬ ಶಂಕೆಯಿಂದ ಬಂಧಿತನಾದ ಯುವಕ ಉಬೇದುಲ್ಲಾ ಇಮ್ರಾನ್ ಬಹದ್ದೂರ್ ಇಲ್ಲಿನ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್‌ಟಿಟಿಎಫ್‌ನಲ್ಲಿ 2004-05ನೇ ಸಾಲಿನಲ್ಲಿ `ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್` ಕೋರ್ಸ್‌ಗೆ ಪ್ರವೇಶ ಪಡೆದಿದ್ದ.
 
2008ರಲ್ಲಿ ದ್ವಿತೀಯ ದರ್ಜೆಯೊಂದಿಗೆ ಉತ್ತೀರ್ಣನಾಗಿ, ಬಳಿಕ ಒಂದು ವರ್ಷದ ಕೈಗಾರಿಕಾ ತರಬೇತಿಯನ್ನು ಎನ್‌ಟಿಟಿಎಫ್‌ನಲ್ಲೇ ಪೂರೈಸಿದ್ದ. ನಂತರ ಒಂದೂವರೆ ವರ್ಷ ದುಬೈನಲ್ಲಿ ಕೆಲಸ ಮಾಡಿ ಹಿಂದಿರುಗಿದ್ದ ಎನ್ನಲಾಗಿದೆ.

`ಹುಬ್ಬಳ್ಳಿಯ ತನ್ನ ಮನೆಯಿಂದ ದಿನಾಲೂ ಎನ್‌ಟಿಟಿಎಫ್‌ಗೆ ಬಸ್‌ನಲ್ಲಿ ಬರುತ್ತಿದ್ದ ಉಬೇದುಲ್ಲಾ ಅಲಿಯಾಸ್ ಇಮ್ರಾನ್ ಐದಾರು ಮಂದಿ ಸಹಪಾಠಿಗಳೊಂದಿಗೆ ಹೆಚ್ಚು ಹೊತ್ತು ಕಳೆಯುತ್ತಿದ್ದ. ಆತನ ಇಂಗ್ಲಿಷ್ ಚೆನ್ನಾಗಿತ್ತು.ಪ್ರತಿಯೊಂದು ವಿಷಯದ ಬಗ್ಗೆಯೂ ತನ್ನದೇ ಆದ ವಿಶ್ಲೇಷಣೆ ಮಾಡಲು ಹಂಬಲಿಸುತ್ತಿದ್ದ.

ಕ್ಲಾಸಿಗೆ ಚಕ್ಕರ್ ಹೊಡೆಯುವುದು, ಒಮ್ಮಮ್ಮೆ ಗಲಾಟೆಯನ್ನೂ ಮಾಡುತ್ತಿದ್ದ.ಯಾವುದೇ ಧರ್ಮದ ಬಗ್ಗೆ ಸಿಟ್ಟು,ಅನುಕಂಪ ಎರಡೂ ಇರಲಿಲ್ಲ.ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳನ್ನು ನಾವೆಲ್ಲ ಒಟ್ಟಾಗಿಯೇ ನೋಡುತ್ತಿದ್ದೆವು`ಎಂದು ಆತನ ಸಹಪಾಠಿಯಾಗಿದ್ದ,ಈಗ ಎನ್‌ಟಿಟಿಎಫ್‌ನಲ್ಲಿ ಉಪನ್ಯಾಸಕರಾಗಿರುವ ವಿನೋದ ಮರೋಳ ತಿಳಿಸಿದರು.

ಈ ಯುವಕನ ಉಪನ್ಯಾಸಕ ಬಸವರಾಜ ಸೋಮನಗೌಡರ ಮಾತನಾಡಿ,`ಉಬೇದುಲ್ಲಾ ಯಾವುದೇ ವಿಷಯದ ಬಗ್ಗೆ ಕೇಳಿದರೂ ಅದಕ್ಕೆ ಶೀಘ್ರ ಉತ್ತರವನ್ನು ನೀಡುತ್ತಿದ್ದ.ವಿಷಯ ಗೊತ್ತಿಲ್ಲದಿದ್ದರೂ ಏನಾದರೂ ಹೇಳುತ್ತಿದ್ದ.ಬಹಳಷ್ಟು ಸಮಯದಲ್ಲಿ ಅದು ಸರಿಯಾಗಿಯೇ ಇರುತ್ತಿತ್ತು.ಮುಂದೆ ಎಲ್ಲಿ ಉದ್ಯೋಗಕ್ಕೆ ಹೋದ,ಏನು ಮಾಡುತ್ತಿದ್ದ ಎಂಬುದು ತಿಳಿದಿರಲಿಲ್ಲ` ಎಂದರು.

ಎರಡು ದಿನದಲ್ಲಿ ಚೀನಾಗೆ ಹೋಗಬೇಕಿತ್ತು .....
ಹುಬ್ಬಳ್ಳಿ:
`ಜೀವಮಾನದಲ್ಲಿ ಒಮ್ಮೆಯೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲಿಲ್ಲ.ಈಗ ಪೊಲೀಸರೇ ಮಗನನ್ನು ಹುಡುಕಿಕೊಂಡು ಮನೆಗೆ ಬರುವಂತಾಯಿತು.ನನ್ನ ಮಗನಿಗೆ ಧರ್ಮ ನಿಷ್ಠೆ ಹೆಚ್ಚು.ಆದರೆ ದೇಶದ್ರೋಹದ ಕೆಲಸ ಮಾಡುವವನಲ್ಲ`ಎಂದು ಹುಬ್ಬಳ್ಳಿಯ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ತಾಂತ್ರಿಕ ಮೇಲ್ವಿಚಾರಕರಾಗಿರುವ ಆತನ ತಂದೆ ಮಹಮ್ಮದ್ ಜಾಫರ್.

ಶಂಕಿತ ಉಗ್ರನೆಂಬ ಕಾರಣಕ್ಕೆ ಜಾಫರ್ ಅವರ ಕಿರಿಯ ಮಗ ಉಬೇದುಲ್ಲಾ ಇಮ್ರಾನ್‌ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬೆಳಿಗ್ಗೆ ಪೇಪರ್ ಓದುತ್ತಾ ಕುಳಿತಿದ್ದೆ.ಅವನ ಸ್ನೇಹಿತರು ಎಂದು ಹೇಳಿಕೊಂಡು ಒಳಗೆ ಬಂದ ನಾಲ್ವರು ರೂಮಿನಲ್ಲಿ ಮಲಗಿದ್ದವನನ್ನು ಬಲವಂತವಾಗಿ ಕರೆದೊಯ್ದುರು.ಅವನ ಮೊಬೈಲ್,ಲ್ಯಾಪ್‌ಟಾಪ್ ಹೊತ್ತೊಯ್ದರು ಎಂದು ಅಳಲು ತೋಡಿಕೊಂಡರು.

ಹುಬ್ಬಳ್ಳಿಯ ವಸಂತ ನಗರದ ಪಿ ಅಂಡ್ ಟಿ ಕಾಲೊನಿಯಲ್ಲಿ ವಾಸವಾಗಿರುವ ಜಾಫರ್ ಅವರಿಗೆ ನಾಲ್ವರು ಮಕ್ಕಳು.ಮೊದಲ ಮಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಕಳೆದ 10 ವರ್ಷಗಳಿಂದ ಅಲ್ಲಿಯೇ ವಾಸವಿದ್ದಾರೆ.ದುಬೈನಲ್ಲಿ ಉದ್ಯೋಗದಲ್ಲಿದ್ದ ಉಬೇದುಲ್ಲಾ ಇತ್ತೀಚೆಗೆ ಬೆಂಗಳೂರಿನಲ್ಲಿ ಬೇರೆ ಕಂಪೆನಿಗೆ ಉದ್ಯೋಗಕ್ಕೆ ಸೇರಿದ್ದು,ಆ ಕಂಪೆನಿಯಿಂದ ಎರಡು ದಿನಗಳಲ್ಲಿ ಚೀನಾಗೆ ತೆರಳಬೇಕಿತ್ತು ಎಂದರು
 

ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ

ಹುಬ್ಬಳ್ಳಿ:ನಿಷೇಧಿತ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬುಧವಾರ ಬಂಧಿತರಾಗಿರುವ ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರ ನಿವಾಸವು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಇಲ್ಲಿನ ಮನೆಗೆ ಕೆಲವೇ ಮೀಟರ್‌ಗಳ ದೂರದಲ್ಲಿದೆ.ಹೀಗಾಗಿ ಭದ್ರತೆಯ ಲೋಪ ಕುರಿತು ಅಸಮಾಧಾನ ವ್ಯಕ್ತವಾಗಿದೆ.

ಇಲ್ಲಿನ ಬದಾಮಿನಗರದ ಮಧುರಾ ಎಸ್ಟೇಟ್‌ನಲ್ಲಿರುವ ಮುಖ್ಯಮಂತ್ರಿ ನಿವಾಸ ಹಾಗೂ ಇಕ್ಬಾಲ್ ಮನೆಯ ನಡುವೆ ಕೇವಲ ನಾಲ್ಕು ಮನೆಗಳಿವೆ.ಶೆಟ್ಟರ್ ಅವರ ಮನೆಯ ಬಾಗಿಲಿನಿಂದ ನಿಂತು ನೋಡಿದರೂ ಇಕ್ಬಾಲ್  ನಿವಾಸ ಕಾಣಿಸುತ್ತದೆ.ಆತನ ತಂದೆ ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಗಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸದ್ಯ ಇಕ್ಬಾಲ್ ಸೇರಿದಂತೆ ಮನೆಯಲ್ಲಿ ನಾಲ್ವರು ವಾಸವಿದ್ದು, ಕುಟುಂಬದವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು.

ಸುದ್ದಿ ತಿಳಿಯುತ್ತಲೇ ಸ್ಥಳೀಯ ನಾಗರಿಕರು ಕುತೂಹಲದಿಂದ ಇಕ್ಬಾಲ್ ನಿವಾಸದತ್ತ ಬಂದು ಹೋಗುತ್ತಿದ್ದುದು ಕಂಡು ಬಂತು.ಪ್ರಜಾವಾಣಿ` ಜೊತೆ ಮಾತನಾಡಿದ ಕಾಲೊನಿಯ ನಿವಾಸಿಗಳು, ಬಂಧನದ ಕುರಿತು ಅಚ್ಚರಿ ವ್ಯಕ್ತಪಡಿಸಿದರು.ಮನೆಯ ಸಮೀಪ ಆ ರೀತಿಯ ಯಾವುದೇ ಚಟುವಟಿಕೆ ಮೇಲ್ನೋಟಕ್ಕೆ ಕಂಡುಬರುತ್ತಿರಲಿಲ್ಲ.ಆದರೆ ಇದೀಗ ಬಂಧನದ ಸುದ್ದಿ ತಿಳಿದಿದ್ದು ಆತಂಕಕಾರಿ ಸಂಗತಿಯಾಗಿದೆ ಎಂದರು.

ಪೊಲೀಸರಿಗಿಲ್ಲ ಮಾಹಿತಿ:ಮುಖ್ಯಮಂತ್ರಿಗಳ ಮನೆಯಿಂದ ಕೂಗಳತೆ ದೂರದಲ್ಲಿದ್ದರೂ ಈ ಮನೆಯಲ್ಲಿನ ಚಟುವಟಿಕೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನುತ್ತಾರೆ ಪೊಲೀಸರು.

ಶೆಟ್ಟರ್ ಮುಖ್ಯಮಂತ್ರಿಯಾದ ಮೇಲೆ ಮನೆಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಹಾಗೂ ಆಸುಪಾಸಿನ ಮನೆಗಳಲ್ಲಿನ ಚಟುವಟಿಕೆಯ ಮೇಲೆ ಗಮನ ಹರಿಸುವಂತೆ ಭದ್ರತಾ ಇಲಾಖೆಯು ಇಲ್ಲಿನ ಕೇಶ್ವಾಪುರ ಠಾಣೆ ಪೊಲೀಸರಿಗೆ ಸೂಚಿಸಿತ್ತು.ಹಗಲಿನ ಜೊತೆಗೆ ಪ್ರತಿರಾತ್ರಿ ಇಡೀ ಬಡಾವಣೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.ಬಹುತೇಕ ಸಂದರ್ಭಗಳಲ್ಲಿ ಪೊಲೀಸ್ ವಾಹನವು ಇಕ್ಬಾಲ್ ಮನೆಯ ಮುಂದೆಯೇ ನಿಲ್ಲುತಿತ್ತು ಎನ್ನಲಾಗಿದೆ.

`ಬಹುತೇಕ ವೇಳೆ ಇಲ್ಲಿಯೇ ನಿಲ್ಲುತ್ತಿದ್ದೆವು.ಆದರೆ ಎಂದು ನಮಗೆ ಅನುಮಾನ ಬಂದಿದ್ದಿಲ್ಲ. ಈ ರೀತಿಯ ಚಟುವಟಿಕೆ ನಡೆದಿರಬಹುದೆಂಬ ಕಲ್ಪನೆಯೂ ಇರಲಿಲ್ಲ`ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.

ಎಲ್‌ಇಟಿ,ಹುಜಿ ನಂಟು;ಬೆಚ್ಚಿಬಿದ್ದನಗರ:ಫಶಂಕಿತ ಉಗ್ರರಲ್ಲಿ ವೈದ್ಯ,ಎಂಜಿನಿಯರ್, ಗುತ್ತಿಗೆದಾರ, ಗಾರೆ ಕಾರ್ಮಿಕ!

ಹುಬ್ಬಳ್ಳಿ: ಭಯೋತ್ಪಾದನಾ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ, ಹುಜಿ ನಂಟು ಹೊಂದಿದ ಶಂಕೆಯಲ್ಲಿ ನಗರದ ಕೇಶ್ವಾಪುರ ಮತ್ತು ಹಳೇ ಹುಬ್ಬಳ್ಳಿ ಪ್ರದೇಶದಿಂದ ಬೆಂಗಳೂರು ಸಿಸಿಬಿ ಪೊಲೀಸರು ಐದು ಮಂದಿಯನ್ನು ಬಂಧಿಸಿದ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ.

ಬಂಧಿತರಾದ ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರ (ವೈದ್ಯ), ವಾಹಿದ್ ಹುಸೇನ್ (ಎಂಬಿಎ ಪದವೀಧರ), ಉಬೇದುಲ್ಲಾ (ಎಲೆಕ್ಟ್ರಿಕಲ್ ಎಂಜಿನಿಯರ್), ಮಹಮ್ಮದ್ ಸಾದಿಕ್ ಲಷ್ಕರ್ (ಹಳೆ ಮನೆಗಳನ್ನು ತೆರವುಗೊಳಿಸುವ ಗುತ್ತಿಗೆದಾರ), ಮೆಹಬೂಬ್ (ಗಾರೆ ಕಾರ್ಮಿಕ) ಮಧ್ಯೆ ಬೆಸೆದಿರಬಹುದಾದ `ಬಾಂಧವ್ಯ`ದ ಬಗ್ಗೆ ಕುತೂಹಲ ಮೂಡಿದೆ.

ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಮತ್ತು ಸುಳಿವು ಸಿಗದಂತೆ ಬುಧವಾರ ಬೆಳಿಗ್ಗೆ ಆರು ಗಂಟೆಯಿಂದ ಒಂಬತ್ತು ಗಂಟೆ ಮಧ್ಯೆ ಬಂಧನ ಕಾರ್ಯಾಚರಣೆ ನಡೆದಿದೆ. ಮಫ್ತಿಯಲ್ಲಿ ಬಂದಿದ್ದ ಸಿಸಿಬಿ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಅವರ ಮನೆಗಳಲ್ಲಿ ಆತಂಕ ಆವರಿಸಿದೆ.

`ಬುಧವಾರ ಬೆಳಿಗ್ಗೆ 9.30ಕ್ಕೆ ಮನೆಗೆ ಬಂದ ಆರು ಮಂದಿ, ಕಿರಿಯ ಮಗ ವಾಹಿದ್‌ನ ವಿಚಾರಣೆ ನಡೆಸಬೇಕಿದೆ` ಎಂದು ಕರೆದೊಯ್ದರು. ಗುರುವಾರ ಬೆಳಿಗ್ಗೆ ಟಿವಿ ನೋಡಿದಾಗಲೇ ಅವನನ್ನು ಕರೆದುಕೊಂಡು ಹೋದವರು ಪೊಲೀಸರು ಎಂದು ಗೊತ್ತಾಯಿತು. ಮಗ ಏನು ತಪ್ಪು ಮಾಡಿದ್ದಾನೋ ಗೊತ್ತಿಲ್ಲ` ಎಂದು ರೈಲ್ವೆ ನಿವೃತ್ತ ಉದ್ಯೋಗಿ ಅಬ್ದುಲ್ ಮುನಾಫ್ ಕಣ್ಣೀರಿಟ್ಟರು. ಅಷ್ಟರಲ್ಲಿ ಅಲ್ಲಿಗೆ ಬಂದ ವಾಹಿದ್ ಸಹೋದರ, ನಗರದ ಹರ್ಷ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್ ಅಂಗಡಿ ನಡೆಸುವ ಸರ್ಫ್ರಾಜ್ ಮಾತು ಮುಂದುವರಿಸಿದರು.

`ಬಂದವರ ಪೈಕಿ ಒಬ್ಬನಿಗೆ ಕುರುಚಲು ಗಡ್ಡವಿತ್ತು. ಆತ ಮೊದಲು ನನ್ನ ಕಡೆಗೆ ಬೆರಳು ತೋರಿಸಿದ್ದ. ನಂತರ ವಾಹಿದ್‌ನನ್ನು ತೋರಿಸಿ ಅವನೇ ಎಂದ. ತಕ್ಷಣ ಮಫ್ತಿಯಲ್ಲಿದ್ದರು ವಾಹಿದ್‌ನನ್ನು ವಶಕ್ಕೆ ತೆಗೆದುಕೊಂಡರು. ಬಂದವರನ್ನು `ನೀವ್ಯಾರು ಎಂದು ಪ್ರಶ್ನಿಸಿದ್ದಕ್ಕೆ, ಗುರುತಿನ ಚೀಟಿ ತೋರಿಸಿದ್ರು. ಅದನ್ನು ನೋಡಿ ಮನೆಯವರೆಲ್ಲ ಅಳುವುದಕ್ಕೆ ಆರಂಭಿಸಿದರು. ಆಗ ವಾಹಿದ್, ನೀವ್ಯಾಕೆ ಅಳುತ್ತೀರಿ. ನಾನೇನೂ ಮಾಡಿಲ್ಲ ಎಂದಷ್ಟೆ ಹೇಳಿ ಅವರ ಜೊತೆ ಹೋದ`

`ನಗರದ ತಾರೀಹಾಳದಲ್ಲಿರುವ ಐಎಂಎಸ್ ಕಾಲೇಜಿನಲ್ಲಿ 2009ರಲ್ಲಿ ಎಂಬಿಎ ವ್ಯಾಸಂಗ ಮಾಡಿರುವ ವಾಹಿದ್, ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದ. ಅಲ್ಲಿ ಐದಾರು ತಿಂಗಳು ಇದ್ದು, ಸೂಕ್ತ ಉದ್ಯೋಗ ಸಿಕ್ಕಿಲ್ಲ ಎಂದು ಮರಳಿ ಬಂದಿದ್ದ. ಆಗಾಗ ಬೆಂಗಳೂರಿಗೆ ಹೋಗಿ ಬರುತ್ತಿದ್ದ.
 
ಕಳೆದ ತಿಂಗಳು ಎರಡು ದಿನ ಅಲ್ಲಿದ್ದು ಬಂದಿದ್ದ. ಅವನನ್ನು ಪೊಲೀಸರು ಯಾಕೆ ಕರೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದೆವು. ನಾವು ಯಾರನ್ನೂ ಬಂಧಿಸಿಲ್ಲ. ನಮಗೇನೂ ಮಾಹಿತಿ ಇಲ್ಲ ಎಂದರು` ಎಂದು ಸರ್ಫ್ರಾಜ್ ಹೇಳಿದರು.

`ವಾಹಿದ್‌ನ ಕಲಿಕೆಗಾಗಿ ಬ್ಯಾಂಕ್‌ನಿಂದ (ಎಸ್‌ಬಿಎಂ) ರೂ 2.90 ಲಕ್ಷ  ಸಾಲ ಮಾಡಲಾಗಿತ್ತು. ಬಡ್ಡಿ ಸೇರಿ ಅದೀಗ ರೂ 5 ಲಕ್ಷವಾಗಿದೆ. ಸಾಲ ಮರು ಪಾವತಿಸುವಂತೆ ಬ್ಯಾಂಕ್‌ನಿಂದ ನೋಟಿಸ್ ಬರುತ್ತಿತ್ತು. ಅದರ ಬಗ್ಗೆ ಅವನು ತಲೆಕೆಡಿಸಿಕೊಂಡಿದ್ದ. ಸಾಲ ಆದಷ್ಟು ಬೇಗ ತೀರಿಸಬೇಕು ಎನ್ನುತ್ತಿದ್ದ. ಗದಗದಲ್ಲಿ ನಮ್ಮದೊಂದು ಹಳೆ ಮನೆ ಇತ್ತು. ಅದನ್ನು ಮಾರಿ ಸಾಲ ತೀರಿಸೋಣ ಎಂದು ಅವನಿಗೆ ಹೇಳಿದ್ದೆವು` ಎಂದರು.

ಪಕ್ಕಾ ಧಾರ್ಮಿಕವಾದಿ ವೈದ್ಯ!

ಡಾ.ಜಾಫ‌ರ್‌ ಇಕ್ಬಾಲ್‌ ಸೊಲ್ಲಾಪುರ್‌ನ ಹುಬ್ಬಳ್ಳಿಯಲ್ಲಿರುವ ಮನೆ.

ಬಂಧಿತರ ಪೈಕಿ ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರ ನಗರದ ಪ್ರತಿಷ್ಠಿತ ಕುಟುಂಬದ ಸದಸ್ಯ. ಖಾಸಗಿ ಆಸ್ಪತ್ರೆಯೊಂದರಲ್ಲಿ ದಂತವೈದ್ಯ. ಅವರ ಪತ್ನಿಯೂ ವೈದ್ಯೆ. ಇಬ್ಬರೂ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು.

`ಮನೆಗೆ ಬಂದ ತಂಡವೊಂದು ಜಾಫರ್‌ನನ್ನು ವಶಕ್ಕೆ ಪಡೆದ ಸುದ್ದಿ ಬುಧವಾರ ಬೆಳಿಗ್ಗೆ ಗೊತ್ತಾಯಿತು. ಹೀಗಾಗಿ ಉಡುಪಿಯಿಂದ ಬಂದೆ` ಎಂದು ಜಾಫರ್ ತಂದೆ ಶೇಖ್ ರಫೀಕ್ ಅಹಮ್ಮದ್ ತಿಳಿಸಿದರು.`ಜಾಫರ್ ಪಕ್ಕಾ ಧಾರ್ಮಿಕ ಮನೋಭಾವ ಹೊಂದಿದ್ದ, ದಿನಾ ಕುರಾನ್ ಪಠಿಸುತ್ತಿದ್ದ. ಅದನ್ನು ಬಿಟ್ಟರೆ ಆತನ ಚಟುವಟಿಕೆ ಬಗ್ಗೆ ನನಗೇನೂ ಗೊತ್ತಿಲ್ಲ` ಎಂದಷ್ಟೇ ಹೇಳಿ ಸುಮ್ಮನಾದರು. ಜಾಫರ್‌ನನ್ನು ಪೊಲೀಸರು ಕರೆದೊಯ್ದ ಬಳಿಕ ಅವರ ಮನೆಯಿಂದ ಯಾರೂ ಹೊರ ಬರುತ್ತಿಲ್ಲ.

`ನಿರ್ದಿಷ್ಟ ಜಾಗದಲ್ಲಿ ಸಭೆ`
`ಸಿಮಿ, ಇಂಡಿಯನ್ ಮುಜಾಹ್ದ್ದಿದೀನ್ ಭಯೋತ್ಪಾದನಾ ಸಂಘಟನೆಗಳನ್ನು ನಿಷೇಧಿಸಿದ ಬಳಿಕ ಅದರಲ್ಲಿ ಸಕ್ರಿಯರಾಗಿದ್ದ ಹಲವರು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ ಜೊತೆ ಗುರುತಿಸಿಕೊಂಡಿದ್ದರು. ನಿರ್ದಿಷ್ಟ ಜಾಗದಲ್ಲಿ ಆಗಾಗ ಸಭೆ ಸೇರುತ್ತಿದ್ದ ಎಸ್‌ಐಒ ಕಾರ್ಯಕರ್ತರು, ಸಂಘಟನೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇತ್ತು` ಎಂದು ಪೊಲೀಸ್ ಮೂಲಗಳು ಹೇಳಿವೆ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ | ಕನ್ನಡ ಪ್ರಭ | ವಿಜಯ ಕರ್ನಾಟಕ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-31

Tell a Friend
ಇತರ ಸಂಭಂದಪಟ್ಟ ವರದಿಗಳು
»
»11 ಮಂದಿ ಶಂಕಿತ ಉಗ್ರರ ಬಂಧನ: *ಹತ್ಯೆಗೆ ಸಂಚು, ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಆರೋಪ *ಬಂಧಿತರಲ್ಲಿ ಓರ್ವ ಪತ್ರಕರ್ತ (updated news)
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri