ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಅಣ್ವಸ್ತ್ರಗಳ ಬಳಕೆ ಅಕ್ಷಮ್ಯ ಅಪರಾಧ: ಖಾಮಿನೈ; ನ್ಯಾಮ್ ಶೃಂಗದಲ್ಲಿ ಇರಾನ್ ಮುಖಂಡನ ಹೇಳಿಕೆ

ಟೆಹ್ರಾನ್, ಆ.30: ಪರಮಾಣು, ರಾಸಾಯನಿಕ ಹಾಗೂ ಇಂತಹುದೇ ಅಸ್ತ್ರಗಳನ್ನು ಬಳಸುವುದನ್ನು ಒಂದು ಅಕ್ಷಮ್ಯ ಅಪರಾಧವೆಂದು ತಮ್ಮ ರಾಷ್ಟ್ರ ಪರಿಗಣಿಸುತ್ತದೆ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹೇಳಿದ್ದಾರೆ.

ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಏರ್ಪಡಿಸಲಾಗಿರುವ 16ನೆ ಅಲಿಪ್ತ ಶೃಂಗಸಭೆಯ ಕಲಾಪಗಳಿಗೆ ಚಾಲನೆ ನೀಡಿದ ವೇಳೆ ಖಾಮಿನೈ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘‘ಇರಾನ್ ಪರಮಾಣು ಅಸ್ತ್ರಗಳನ್ನು ಬಯಸುವುದಿಲ್ಲ. ಆದರೆ ಅದು ಪರಮಾಣು ಇಂಧನದ ತನ್ನ ಅನ್ವೇಷಣೆಯನ್ನು ಕೈಬಿಡಲಾರದು’’ ಎಂದವರು ತಿಳಿಸಿದ್ದಾರೆ. ಖಾಮಿನೈಯವರು ಪರಮಾಣು ವಿಷಯದ ಬಗ್ಗೆ ಹೆಚ್ಚಿನ ಒತ್ತು ನೀಡಿರುವುದು ಹಾಗೂ ಸಿರಿಯ ಬಿಕ್ಕಟ್ಟಿನ ಬಗ್ಗೆ ವೌನ ವಹಿಸಿರುವುದು ತನ್ನದೇ ಆದ ಸಂಕೇತವನ್ನು ನೀಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.‘‘ಇರಾನ್ ಇಸ್ಲಾಮಿಕ್ ಗಣತಂತ್ರವು ಅಣು, ರಾಸಾಯನಿಕ ಹಾಗೂ ಇದಕ್ಕೆ ಸಮನಾದ ಅಸ್ತ್ರಗಳನ್ನು ಬಳಸುವುದು ಒಂದು ಅಕ್ಷಮ್ಯ ಅಪರಾಧವೆಂದು ಭಾವಿಸುತ್ತದೆ.

ನಾವು ‘ಅಣ್ವಸ್ತ್ರ ಮುಕ್ತ ಮಧ್ಯಪ್ರಾಚ್ಯ’ ಪರಿಕಲ್ಪನೆಯ ಬಗ್ಗೆ ಪ್ರಸ್ತಾಪಿಸಿದ್ದೇವೆ ಮತ್ತು ಅದಕ್ಕೆ ನಾವು ಬದ್ಧರಿದ್ದೇವೆ. ಅಂದಮಾತ್ರಕ್ಕೆ ಶಾಂತಿಯುತ ಪರಮಾಣು ಇಂಧನದ ಬಳಕೆ ಹಾಗೂ ಅಣು ಇಂಧನ ಉತ್ಪಾದನೆಯ ಹಕ್ಕನ್ನು ನಾವು ಬಿಟ್ಟುಬಿಡುತ್ತಿದ್ದೇವೆಂದು ಅರ್ಥವಲ್ಲ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಅಣು ಶಕ್ತಿಯ ಶಾಂತಿಯುತ ಬಳಕೆಯು ಪ್ರತಿಯೊಂದು ರಾಷ್ಟ್ರದ ಹಕ್ಕಾಗಿದೆ’’ ಎಂದು ತಮ್ಮ ಭಾಷಣದಲ್ಲಿ ಖಾಮಿನೈ ಗುಡುಗಿದ್ದಾರೆ.

ಅನಿಲ ನಿಕ್ಷೇಪಗಳಿಗೆ ಸಂಬಂಧಿಸಿ ಇರಾನ್ ಪ್ರಪಂಚದಲ್ಲೆ ಎರಡನೆ ಸ್ಥಾನವನ್ನು ಪಡೆದಿದ್ದು, ಪ್ರಮುಖ ತೈಲೋತ್ಪಾದಕ ರಾಷ್ಟ್ರವಾಗಿಯೂ ಹೊರಹೊಮ್ಮಿದೆ.ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದದ ಸಹಿದಾರನಾಗಿರುವ ಇರಾನ್ ಶಾಂತಿಯುತ ಉದ್ದೇಶಗಳಿಗಾಗಿ ಅಣು ಇಂಧನವನ್ನು ಬಳಸುವ ಹಕ್ಕನ್ನು ಪಡೆದಿದೆ. ಆದರೆ ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಾಗಿದ್ದು, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಅಮೆರಿಕ ಹಾಗೂ ಪಶ್ಚಿಮದ ಅದರ ಮಿತ್ರರಾಷ್ಟ್ರಗಳ ಗಂಭೀರ ಆರೋಪವಾಗಿದೆ.

ಇರಾನ್‌ನ ಧೋರಣೆಯು ಮುಂದೊಂದು ದಿನ ನಿಯಂತ್ರಿಸಲಾಗದ ಮಾರಕ ಪರಿಣಾಮವನ್ನು ವಿಶ್ವದ ಮೇಲೆ ಬೀರಲಿದೆ ಎಂದು ಅವು ಭಾರತವನ್ನೂ ಎಚ್ಚರಿಸಿವೆ.ವಿವಾದಿತ ಪರಮಾಣು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇರಾನ್ ಈಗಾಗಲೇ ವಿಶ್ವದ ಇತರ ರಾಷ್ಟ್ರಗಳಿಗಿಂತ ಬೇರೆಯೇ ಆಗಿ ನಿಲ್ಲುವಂತಾಗಿದೆ.

ಇರಾನ್‌ನಲ್ಲಿ ನಡೆಯುತ್ತಿರುವ 16ನೆ ಅಲಿಪ್ತ ಶೃಂಗಸಭೆಯಲ್ಲಿ ವಿಶ್ವಾದ್ಯಂತದ 120 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ ಇತರ 25 ಮಂದಿ ಪ್ರಮುಖರೂ ಪಾಲ್ಗೊಂಡಿದ್ದಾರೆ. ಇರಾನ್‌ನಲ್ಲಿರುವ ನತಾಂಝ್ ಪರಮಾಣು ಸ್ಥಾವರಕ್ಕೆ ಅಲಿಪ್ತ ರಾಷ್ಟ್ರಗಳ ಒಕ್ಕೂಟದ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ಮುಕ್ತ ಪ್ರವೇಶ ನೀಡಲಾಗುವುದೆಂದು ಇರಾನ್ ಸರಕಾರ ಇಷ್ಟರಲ್ಲೇ ಪ್ರಕಟಿಸಿದೆ.ಫೆಲೆಸ್ತೀನಿಯರ ಸಮಸ್ಯೆಯ ಬಗ್ಗೆಯೂ ಖಾಮಿನೈ ಪ್ರಸ್ತಾಪಿಸಿದ್ದಾರೆ.‘ಪರಮಾಣು ಇಂಧನ ಎಲ್ಲರಿಗಾಗಿ; ಅಣ್ವಸ್ತ್ರಗಳು ಯಾರಿಗೂ ಬೇಡ’ ಎನ್ನುವುದು ನಮ್ಮ ಧ್ಯೇಯಸೂತ್ರವಾಗಿದೆ ಎಂದು ಖಾಮಿನೈ ಘೋಷಿಸಿದ್ದಾರೆ.

‘‘ನಾವು ಈ ಎರಡೂ ಮಾರ್ಗದರ್ಶಿ ಸೂತ್ರಗಳಿಗೆ ಒತ್ತು ನೀಡಲಿದ್ದೇವೆ. ಅಲಿಪ್ತ ಚಳವಳಿಯ ರಾಷ್ಟ್ರಗಳ ಸದಸ್ಯರನ್ನೊಳಗೊಂಡಂತೆ ಎಲ್ಲ ಸ್ವತಂತ್ರ ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ(ಎನ್‌ಪಿಟಿ)ವು ಮಹತ್ವವಾದುದೆಂದು ನಮಗೆ ಅರಿವಿದೆ’’ ಎಂದೂ ಖಾಮಿನೈ ವಿವರಿಸಿದ್ದಾರೆ.

ಅಮೆರಿಕ, ಇಸ್ರೇಲ್ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬಗ್ಗೆಯೂ ಪ್ರಸ್ತಾಪಿಸಿರುವ ಖಾಮಿನೈ ಫೆಲೆಸ್ತೀನಿಯರಿಗಾಗಿ ರಾಷ್ಟ್ರವೊಂದನ್ನು ನಿರ್ಮಿಸುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. ಇದೇ ವೇಳೆ ಅವರು ಇಸ್ರೇಲನ್ನು ‘ಕ್ರೂರ ತೋಳಗಳು’ ಎಂದು ಬಣ್ಣಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-31

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

» ತಮಿಳುನಾಡು ಭೇಟಿ: ಪ್ರವಾಸಿಗರಿಗೆ ಶ್ರೀಲಂಕಾ ಎಚ್ಚರಿಕೆ
»ದಕ್ಷಿಣ ಕೊರಿಯ ‘ಯೂನಿಫಿಕೇಶನ್’ ಚರ್ಚ್‌ನ ಸ್ಥಾಪಕ ನಿಧನ
»ಪಾಕ್‌ನಲ್ಲಿ ಬಾಂಬ್ ಸ್ಫೋಟ: 2 ಸಾವು, 19 ಜನರಿಗೆ ಗಾಯ
»ಅಮೆರಿಕ: ಭಾರತೀಯ ಸಂಜಾತನಿಗೆ ಪ್ರಮುಖ ಹುದ್ದೆ
»ಸಿರಿಯದಲ್ಲಿ ಬಾಹ್ಯ ಹಸ್ತಕ್ಷೇಪ ಬೇಡ: ಮನಮೋಹನ್ ಸಿಂಗ್
»ಅಣ್ವಸ್ತ್ರಗಳ ಬಳಕೆ ಅಕ್ಷಮ್ಯ ಅಪರಾಧ: ಖಾಮಿನೈ; ನ್ಯಾಮ್ ಶೃಂಗದಲ್ಲಿ ಇರಾನ್ ಮುಖಂಡನ ಹೇಳಿಕೆ
»ಶುಕ್ರವಾರ ಆಗಸದಲ್ಲಿ ಬ್ಲೂ ಮೂನ್‌ ಕೌತುಕ
»ಮಗುವನ್ನು ಮಹಡಿಯಿಂದ ಕೆಳಗೆಸೆದ ತಾಯಿ!
»ನಿಮಗಾದ ತೊಂದರೆಗಾಗಿ ನಾನು ಕ್ಷಮೆ ಕೋರುತ್ತೇನೆ ಇಂದಿರಾ ಗಾಂಧಿ ಬಳಿ ಹೇಳಿದ್ದ ಆರ್ಮ್‌ಸ್ಟ್ರಾಂಗ್
»7.4 quake off El Salvador triggers tsunami alert
»ವೆನೆಝುವೆಲ ತೈಲಾಗಾರ ಸ್ಫೋಟ: ಸಾವಿನ ಸಂಖ್ಯೆ ಕನಿಷ್ಠ 39ಕ್ಕೆ ಏರಿಕೆ
»`ಚಂದ್ರ' ಮಾನವ ಇನ್ನಿಲ್ಲ...
»ವೆನೆಜುವೆಲ: ತೈಲ ಸ್ಥಾವರದಲ್ಲಿ ಸ್ಫೋಟ, ಕನಿಷ್ಠ 19 ಬಲಿ
»ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರಬ್ ಮಹಿಳೆಯರು
»ಕ್ಯುರಿಯಾಸಿಟಿಯ ಸುತ್ತಾಟ ಆರಂಭ
»ಬಿಕಿನಿ ನೀರೆಯರೊಂದಿಗೆ ಬ್ರಿಟಿಷ್ ರಾಜಕುಮಾರ ಹ್ಯಾರಿ!
»ಜೈಪುರ್: ಭಾರೀ ಮಳೆಗೆ 6 ಜನ ಬಲಿ
»ಅನಾರೋಗ್ಯ:ಇಥಿಯೋಪಿಯಾ ಪ್ರಧಾನಿ ಮೆಲೆಸ್ ಜೆನಾವಿ ವಿಧಿವಶ?
»ಜಪಾನಿನ ಯುದ್ಧ ಪತ್ರಕರ್ತೆ ದುರಂತ ಸಾವು
»ರೈಲಿನಿಂದ ಹೊರಗೆಸೆದು ಅಸ್ಸಾಮಿಗರಿಬ್ಬರ ಹತ್ಯೆ(Updated)
»ಅಮೆರಿಕ: ಭಾರತೀಯ ಮುಸ್ಲಿಮರಿಂದ ಸ್ವಾತಂತ್ರ ದಿನಾಚರಣೆ; ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
»ಫೇಸ್ ಬುಕ್ ಕಾಮೆಂಟ್ ಗೆ ನೊಂದು ಸೂಸೈಡ್...
»ಅಂತರಿಕ್ಷದಲ್ಲಿಯೂ ರಾಷ್ಟ್ರಧ್ವಜಾರೋಹಣ...
»ರಿಯೋಗೆ ಬಂದ ಒಲಿಂಪಿಕ್ಸ್ ಬಾವುಟ...
»ಗಿರ್-ಸೋಮ್‌ನಥ್ ನೂತನ ಜಿಲ್ಲೆಯಾಗಿ ಘೋಷಿಸಿದ ಮೋದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri