ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಧುವಿನ ದಕ್ಷಿಣೆ - 'ವರದಕ್ಷಿಣೆ'....

ಆಧುನಿಕ ಫ್ಯಾಶನ್ ಯುಗದಲ್ಲಿ ತಂತ್ರ ಜ್ಞಾನಗಳು ಪರಿವರ್ತನೆ ಹೊಂದುತ್ತಾ ಹೋದಂತೆ ಇಂದು ಅದರೊಂದಿಗೆ ಮಾನವ ಜೀವನ ಶೈಲಿಯು ಬದಲಾಗುತ್ತಾ ಸೂರ್ಯೋಧಯ ದಿಂದ ಸೂರ್ಯಾಸ್ತಮಾನದ ನಡುವೆ ತಂತ್ರ ಜ್ಞಾನಗಲು ಕಂಡು ಹಿಡಿಯುವ ಅವಿಷ್ಕಾರಗಳೊಂದಿಗೆ ಮಾನವ ಜೀವನ ಶೈಲಿಯು ಬದಲಾವಣೆಗೆ ಹಾತೊರಿಯುತ್ತಿದೆ.ಇಲ್ಲಿ ಜೀವನ ಶೈಲಿ ಅಂದ ಮೇಲೆ ಅದು ಎಲ್ಲ ವರ್ಗಗಳ ಪ್ರತಿ ಘಟ್ಟಗಳನ್ನೂ ಅವಲಂಬಿಸಿದೆ.ಆದರೆ ಇಲ್ಲಿ ಹೇಳುತ್ತಿರುವ ವಿಷಯ  ಮಾನವ  ಜೀವನದ  ಅತೀ ಅಮೂಲ್ಯ ದಿನ ವಿವಾಹದ ಸಮಯ.ಮದುವೆ

ಅಂದ ಕೂಡಲೇ ಹಲವು ರೀತಿಯ ಚಿತ್ರಣಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆಡಂಬರ,ದುಂದು ವೆಚ್ಚ,ಅಲ್ಲದೆ ಹಲವರಿಗೆ ಹೇಳಿ- ಕೇಳಿ ಸಾಕಾಗಿ ಹೋಗಿರುವ ಪದ "ವರದಕ್ಷಿಣೆ". ಇಲ್ಲಿ ವರದಕ್ಷಿಣೆ ಪದ ವಿಂಗಡನೆಯ ಅರ್ಥವನ್ನು ನೋಡಿ-ವರನು ಬೇಡುವ ದಕ್ಷಿಣೆ ಅದುವೇ ವರದಕ್ಷಿಣೆ,ಅಲ್ಲವೇ...ಇಲ್ಲಿ ವರದಕ್ಷಿಣೆ ಅಂದ ಮೇಲೆ ಕೇವಲ ಲಕ್ಷ ಗಟ್ಟಲೆ ಹಣ,ಪವನಾಧಾರಿತ ಚಿನ್ನಾಭರಣವೇ ಆಗಬೇಕೆಂದಿಲ್ಲ.ಒಬ್ಬ ಪುರುಷನು ಹೆಣ್ಣಿನ ಕುಟುಂಬಿಕರಲ್ಲಿ ವಿದಿಸುವ ಎಲ್ಲ ನಿಭಂಧನೆಗಳೂ ಈ ಪದದ ಅಡಿಯಲ್ಲೇ ಬರುತ್ತದೆ.ಆದರು ಇಂದು ಕೆಲವು ಯುವಕರು ವರದಕ್ಷಿಣೆ ಪಡೆಯುದು ಕೇಳುವುದು ನಾಚಿಕೆ ಎಂದರಿತು  ಆಂತರಿಕ ಕೆಲವು ನಿಭಂಧನೆಗಳ ಮೂಲಕ ತನ್ನದಾಗಿಸಿಕೊಳ್ಳುತ್ತಾರೆ.ಪ್ರಜ್ಞಾವಂತರಾದ ಬೆರಳೆಣಿಕೆಯಷ್ಟು ಜನರು ಮಾತ್ರ ಸಂಪೂರ್ಣ ವಾಗಿ ವಿರೋಧಿಸಲಾರಂಭಿಸಿದ್ದಾರೆ.

ಇಂದು ವರದಕ್ಷಿಣೆ ಎಂಬ ಅನಿಷ್ಟದಿಂದಾಗಿ ಸಮಾಜದಲ್ಲಿ ಹಲವಾರು ಅನಾಹುತಗಳನ್ನು ಕಾಣಬಹುದು.ತವರು ಮನೆಯಿಂದ ಏನನ್ನು ತರಲಿಲ್ಲವೆಂದು  ಗಂಡ ನಾದಿನಿ ಅತ್ತೆ ಮಾವಂದಿರ ಹಿಂಸೆ ಅಪಹಾಸ್ಯ ಕಿರುಕುಳ ಗಳು ಪೋಲಿಸ್  ಠಾಣೆ ನ್ಯಾಯಾಲಯ ಎಂದೆಲ್ಲ ಅಲೆದಾಡುತ್ತಿರುವ ವಿಷಯಗಳು ಇಂದಿನ ಪತ್ರಿಕೆಯ ಮುಖ ಪುಟದ ಬಹು ದೊಡ್ಡ ಸುದ್ದಿಯಾಗಿ ಬಿಟ್ಟಿದೆ.ಅಲ್ಲದೇ  ಈ ಅನಿಷ್ಟ ದಿಂದಾಗಿ ಒಂದು ಹೆಣ್ಣು ಜೀವವನ್ನು ಜೀವಂತ ಸುಡುದಕ್ಕು ಹೇಸದ ಕೆಲ ಪ್ರಾಣಿ ಗಿಂತಲೂ ಕಡು  ಮನಸ್ಸಿನ  ಜನರು ಇದ್ದಾರೆ.ವರದಕ್ಷಿಣೆ ಯಿಂದ ಸಮಾಜದಲ್ಲಿ ಮೇಲು-ಕೀಳು (ಬಡವ-ಶ್ರೀಮಂತ) ಎಂಬ ವರ್ಗ ಹುಟ್ಟಿ ಕೊಂಡಿದ್ದು ಬಹು ಆಳ ವಾಗಿ ಬೇರೂರಿದೆ.ಇದರಿಂದ ಅದೆಷ್ಟೋ ಕುಟುಂಬಗಳು ಬೀದಿಪಾಳಗಿವೆ.ಅದೆಷ್ಟೋ ಹೆಣ್ಣು ಜೀವಗಳು ಕಣ್ಣೀರಿನಿಂದ ದಿನ ದೂಡುತ್ತಿದೆ.ಇನ್ನು ಕೆಲ ಕುಟುಂಬ ಹಗಲು ಕನಸು ಕಾಣುತ್ತಿದೆ.ಅಲ್ಲದೆ ಅದೆಷ್ಟೋ ಹೆಣ್ಣು ಮಕ್ಕಳು ಪ್ರೀತಿ-ಪ್ರೇಮವೆಂದು ಇಸ್ಲಾಂನ ತತ್ವಾದರ್ಶಗಳನ್ನು ಗಾಳಿಗೆ ತೂರಿ ಇತರ ಧರ್ಮಾನುಯಾಯಿಗಳೊಂದಿಗೆ ಪಲಾಯನ,ಆತ್ಮಹತ್ಯೆ,ವೇಶ್ಯೆ ಯಂತಹ ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.ನಮ್ಮ ಜಿಲ್ಲೆಯೊಂದರಲ್ಲೇ 30ವರ್ಷ ಮೀರಿ ಇನ್ನೂ ಮದುವೆಯಾಗದೆ ಮನೆಯಲ್ಲೇ ಉಳಿದಿರುವ ಯುವತಿಯರ ಸಂಖ್ಯೆ ಲಕ್ಷಕ್ಕೂ  ಮೀರಿದೆ, ಇನ್ನೊಂದೆಡೆ ನಮ್ಮ ಮಂಗಳೂರು ಪಟ್ಟಣದಲ್ಲಿ ವರ್ಷಕ್ಕೆ ಮದುವೆಗೆ ಮಾಡುವ ಖರ್ಚು ಎಷ್ಟು ಗೊತ್ತೇ?  ಸುಮಾರು 20 ಕೋಟಿಗಳು. ಇದೊಂದು ಸಣ್ಣ ಉದಾಹರಣೆ ಅಷ್ಟೇ.

ಇವೆಲ್ಲದಕ್ಕೂ ಕಾರಣ,ಜವಾಬ್ದಾರಿ ಈ "ವರದಕ್ಷಿಣೆ" ತಾನೇ..

ಈ ಸಾಮಾಜಿಕ ಪಿಡುಗಿನ ವಿರುದ್ದ ಇಂದು ಹೆಣ್ಣು ಮಕ್ಕಳೇ ಹೋರಾಡುತ್ತಿರುವ ಧುರ್ಗತಿ ನಮ್ಮ ಸಮಾಜಕ್ಕೆ ಬಂದೊದಗಿದೆ.ಇತ್ತೀಚೆಗಿನ ದಿನಗಳಲ್ಲಿ ಅನೇಕ ಮಹಿಳಾ ಸಂಘಟನೆ ಗಳು ವರದಕ್ಷಿಣೆ ವಿರುದ್ದ ಧಿಕ್ಕಾರ ಕೂಗುತ್ತಾ ಸಿಡಿದೆದ್ದಿದೆ.ಇದು ನಮ್ಮಂತಹ ಯುವ ಸಮೂಹಕ್ಕೆ( ವರದಕ್ಷಿಣೆ ಕೇಳುವವರಿಗೆ/ ಪಡೆಯುವವರಿಗೆ) ನಾಚಿಕೆಯ ವಿಷಯವಲ್ಲವೇ..ಇದರಿಂದ ಇಡೀ ಸಮುದಾಯವೇ ತಲೆತಗ್ಗಿಸುವಂತಾಗಿದೆ.

ಹೇಗಾದರೂ ಮಾಡಿ ತಂದೆಯಾದವನ ಮೇಲಿರುವ ಜವಾಬ್ದಾರಿಯಾದ ಹೆಣ್ಣನ್ನು ಮದುವೆ ಮಾಡಲು ಬೀದಿ-ಬೀದಿ ಅಲೆದಾಡಿ ತನ್ನೆಲ್ಲವನ್ನು ಮಾರಿ ಸಾಲಮಾಡಿ ಬೀದಿ ಪಾಲಾಗಿ ಮಗಳ ಸುಖವೇ ತನಗೆ ಸ್ವರ್ಗ ಎಂದು ನೀಡಿದ ಸಂಪತ್ತು ಸಾಲದು ಎಂದು ಆಕೆಯನ್ನು ಹಿಂಸಿಸಿ ವಿಚ್ಚೆದಿಸುತ್ತಿರುವಂತಹ ಘಟನೆಗಳನ್ನು ನೋಡಿದರೆ ಮನಸ್ಸೇ ಧಿಗ್ರಮೆಗೊಳ್ಳುತ್ತಿದೆ.ಇದರ ಬಗ್ಗೆ ಇಂದು ಅದೆಷ್ಟೋ ಯುವ ಸಂಘಟನೆ ಗಳು ಜಾಗೃತಿ ಮೂಡಿಸುತ್ತಾ ಆಹೋರಾತ್ರಿ ಹೋರಾಡುತ್ತಿದ್ದರೂ ಪ್ರತಿಪಲ ಮಾತ್ರ ಕೇವಲ ಹತ್ತರಿಂದ ಹದಿನೈದು ಶೇಕಡಾ. 

ಇಷ್ಟೆಲ್ಲಾ ಅವಾಂತರ ಗಳನ್ನು ಕಣ್ಣಾರೆ ಕಂಡರೂ ಇನ್ನು ಕೆಲವರು ವರದಕ್ಷಿಣೆ ಪಡೆಯುದೆಂದರೆ ತಮ್ಮ ಜನ್ಮ ಸಿದ್ದ ಹಕ್ಕು ಎಂದು ಕಾಣುತ್ತಿದ್ದು ಒಂದು ಫ್ಯಾಶನ್ ತರ ಆವರಿಸಿದೆ.ಇದರಿಂದ ಅದೆಷ್ಟೋ ಯುವ ಪ್ರತಿಭೆಗಳು ತಮ್ಮ ವಿದ್ಯಾರ್ಥಿ ಜೀವನಕ್ಕೆ ನಾಂದಿ ಹಾಡಿ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ಅನಕ್ಷರಸ್ತ ರಾಗಿದ್ದಾರೆ.ಶ್ರೀಮಂತ ವರ್ಗದ ದುಂದು ವೆಚ್ಚ ,ಆಡಂಬರ ದ ಮದುವೆಗೆ ಬಡ ಕುಟುಂಬಗಳು  ಇನ್ನೂ ಕನಸಿನಲ್ಲೇ ದಿನದೂಡುತ್ತಿದೆ.  

ಏನೇ ಇರಲಿ ವರದಕ್ಷಿಣೆ ಅಂತ ಕೊಟ್ಟ ಆಭರಣ ಗಳನ್ನು ಒಂದು ವರ್ಷದ ನಂತರ ನೋಡಿದರೆ ಅದರ ಕಾಲು ಭಾಗವನ್ನು ಕಾಣಲು ಸಾದ್ಯವಿಲ್ಲ...ಕಾರಣ ಈ ಮಹಾನುಬಾವ ಅವುಗಳನ್ನು ಬ್ಯಾಂಕ್,ಫೈನಾನ್ಸೆ ಎಂದೆಲ್ಲ ಮಾರಿ,ಅಡವಿಟ್ಟು ತನ್ನ ಹೊಟ್ಟೆ ತುಂಬಿಸಿರುತ್ತಾನೆ.ಇತರರ ವಸ್ತುವನ್ನು ಉಪಯೋಗಿಸುದು ಕಳ್ಳತನಕ್ಕಿಂತಲೂ ಹೇಯ ಕೃತ್ಯವಲ್ಲವೇ.

ಇವೆಲ್ಲದಕ್ಕೂ ಉತ್ತರಿಸುವ ಕಾಲ ವೊಂದಿದೆ ನೆನಪಿರಲಿ ಸಹೋದರರೇ..ಇನ್ನು ಆಶ್ಚರ್ಯಕರ ವಿಷಯವೆನಂದರೆ ವಿವಾಹದ ಮೊದಲು ನಡೆಯುವ ಸಂಭಾಷಣೆಯಿಂದ ಹೆಣ್ಣು ಮಕ್ಕಳೇ ವರದಕ್ಷಿಣೆ ಕೇಳುವಂತೆ ಯುವಕರನ್ನು ಪ್ರೆರಿಪಿಸುದು,ನೀಡುವಂತೆ ಪೋಷಕರನ್ನು ಭಿಕ್ಷುಕರನ್ನಾಗಿ ಮಾಡುವಂತಹ ಸನ್ನಿವೇಶಗಳೂ ನಮ್ಮ ಕಣ್ಣು ಮುಂದೆ ಇದೆ.ಹೀಗೆ ವರದಕ್ಷಿಣೆ ಯ ಬಗ್ಗೆ ವಿವರಿಸುತ್ತಾ ಹೋದಂತೆ ಅದರ ದುಷ್ಪರಿನಾಮಗಲೇ ಹೆಚ್ಚಿದೆ.ಪಡೆದವನು ಯಾವತ್ತು ಸುಖ ನಿದ್ದೆ ಮಾಡಿದ ಚರಿತ್ರೆಗಳಿರಲ್ಲ ಅನಿಸುತ್ತಿದೆ.ಇದರಿಂದ ಪರಿತಪಿಸುತ್ತಿರುವ ಕುಟುಂಬಗಳನ್ನು ನೋಡಿದರೆ ಇದು ಒಂದು ಮಾನವ ಧರ್ಮವೇ ....? ಎಂಬ ಅನುಮಾನ ಮೂಡುತ್ತದೆ..

ಹೀಗೆ ಯುವಕರ ಬಗ್ಗೆ ಹೇಳುದಾದರೆ ವರದಕ್ಷಿಣೆ ಪಡೆಯುವ ಬಗ್ಗೆ ಕಾರಣ ಪ್ರಶ್ನಿಸಿದರೆ ಆತ ತನ್ನ ಸಹೋದರಿಗೆ  ವರದಕ್ಷಿಣೆ ನೀಡುದಕ್ಕಿದೆ,ಮದುವೆ ಖರ್ಚಿಗೆ ಹಣವಿಲ್ಲ,ಮನೆ ಕೆಲಸ ಬಾಕಿ ಇದೆ ಎಂದೆಲ್ಲದೊಡ್ಡ ಪಟ್ಟಿಯನ್ನೇ ನೀಡುತ್ತಾರೆ.ಆದರೆ ಯುವಕರೇ ಚಿಂತಿಸುವ ಕಾಲವು ಮೀರಿದೆ.ತನ್ನ ಸಹೋದರಿಯ ಮದುವೆಗೆ,ತನ್ನ ಖರ್ಚಿಗೆ,ತನ್ನ ಆಡಂಬರಕ್ಕೆ ತನ್ನಲ್ಲೇ ಹಣವಿಲ್ಲ ಎಂದಾದರೆ ನಾವು ಕೇಳುತ್ತಿರುವ ಹೆಣ್ಣು ಕುಟುಂಬ ಎಲ್ಲಿಂದ ತಾನೇ ಸಂಪಾದಿಸಿಯಾರು.ಅವರು ಕೂಡ ಒಂದು ಮಾನವರಲ್ಲವೇ.ತನಗೆ ಬೇಕಾದ ಸಂಪತನ್ನು ತಾನೇ ಸಂಪಾದಿಸಲಾಗದವನು ಜೀವನದಲ್ಲಿ ಏನು ತಾನೇ ಸಾದಿಸಿಯಾನು ....?

ಇವತ್ತು ವರದಕ್ಷಿಣೆಯ ದುಷ್ಪರಿಣಾಮಗಳನ್ನು ಅರಿತ ಸರಕಾರ ,ಹಾಗು ನ್ಯಾಯಾಲಯ ವರದಕ್ಷಿಣೆ ಪೀಡಕರಿಗೆ,,ವರದಕ್ಷಿಣೆ   ಮೋಹದಿಂದ ನಡೆಸುವ ಕೊಲೆ,ಹಿಂಸೆ,ಕಿರುಕುಳ ಗಳಿಗೆ ಜೀವಾವದಿ ಶಿಕ್ಷೆ ವಿಧಿಸುವ ಮೂಲಕ ಸ್ತ್ರೀ ಕುಟುಂಬಕ್ಕೆ ಆಸರೆಯನ್ನು ನೀಡಿದೆ.ಅಲ್ಲದೆ ಇಂತಹ ಪೀಡಕರಿಗೆ ಜಾಮೀನು ರಹಿತ ಬಂಧನದ ನಿಯಮವನ್ನು ಜಾರಿಗೊಳಿಸಿದ್ದು ಇದು ಹೆಣ್ಣು ಜೀವದ ಹೋರಾಟಕ್ಕೆ ಸಿಕ್ಕ ಫಲವೆಂದೇ ಹೇಳಬಹುದು.ಅಲ್ಲದೆ ಹಲವಾರು ಧಾರ್ಮಿಕ ಮುಖಂಡರು ,ಸಂಘಟನೆಗಳು ಕೂಡ ಇದರ ಬಗ್ಗೆ ಜಾಗೃತಿ ಮೂಡಿಸುತ್ತಾ ಈ ಸಾಮಾಜಿಕ ಅನಿಷ್ಟ ಪದ್ದತಿಯನ್ನು ಕಿತ್ತೆಸೆಯಲು ಹರಸಾಹಸ ಪಡುತ್ತಿದೆ.ಇವರ ಕನಸನ್ನು ಆ ಸರ್ವಶಕ್ತನು ನನಸಾಗಿಸಲಿ ಎಂದೇ ಪ್ರಾರ್ಥಿಸೋಣ.ಈ ಸಮಾಜವನ್ನು ವರದಕ್ಷಿಣೆ ಮುಕ್ತ ಸಮಾಜವಾಗಿ ರೂಪಿಕರಿಸಲು ಆ ಸರ್ವಶಕ್ತನು ಅನುಗ್ರಹೀಸಲಿ (ಆಮೀನ್)

ಬನ್ನಿ ಯುವಕರೇ ಸಮುದಾಯ  ಹಿತ ಕಾಯೋಣ.... ಒಂದು ಹೆಣ್ಣು ಕುಟುಂಬಕ್ಕೆ ಆಸರೆ ಯಾಗೋಣ....

 ಬಡ ಜನರ ಮಾಂಸ ಭಕ್ಷ ಕರಿಂದ ಈ ಸಮುದಾಯ ವನ್ನು ರಕ್ಷಿಸೋಣ .......ಬಡ ಮಧ್ಯಮ ವರ್ಗದ ಹೆಣ್ಣು ಮಕ್ಕಳ ದಿನ ಬೆಳಗಿಸೋಣ.....

ಆಡಂಬರ ದುಂದು ವೆಚ್ಚಕೆ ಸಂಪೂರ್ಣ ವಿರಾಮ ಹಾಕೋಣ...ನಾಳಿನ ಉತ್ತಮ ಭವಿಷ್ಯಕ್ಕ್ಕೆ ಸಾಕ್ಷಿ ಯಾಗೋಣ .....

 ಮುದಾಯದ ಮೇಲು -ಕೀಳು ಬೇದ-ಭಾವವನ್ನು ಮರೆತು ನಮ್ಮ ಸಹೋದರರನ್ನು ನಮ್ಮಂತೆ ಬಾಳಲು ಬಿಡೋಣ.................   

       

ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ                                                                               

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಲೇಖನ - ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-30

Tell a Friend

ಪ್ರತಿಸ್ಪಂದನ
Hassan shareef, Bangalore
2012-09-01
ವರದಕ್ಷಿಣೆಯ ಬಗ್ಗೆ ಯುವ ಜನರು ಅರ್ಥೈಸಿ ಕೊಂಡು,ಮದುವೆಯ ಮಹತ್ವವನ್ನು ಅರಿತು, ಹೆಣ್ಣಿನ ಮನಸ್ಸನ್ನು ಅರಿತು ಸುಖಜೀವನ ನಡೆಸುವಂತೆ ಆಗ ಬೇಕು.ಹಿರಿಯವರಾದ ಮಾತಾಪಿತರು ಸಹಕರಿಸಿ,ಯುವ ಜೋಡಿಯನ್ನು ಹರಸ ಬೇಕು. ಮೊದಲು ಹಿರಿಯರೇ ಮುತುವರ್ಜಿ ವಹಿಸಿ ವರದಕ್ಷಿಣೆಯನ್ನು ನಿಲ್ಲಿಸಬೇಕು.(ಹೆಣ್ಣು ನೋಡಿದಾಗಲೇ ಕೊಡು ಕೊಳ್ಳುವ ಮಾತಿನ ಸಂಪ್ರದಾಯವನ್ನು ಹಿರಿಯರಾದವರು ನಿಲ್ಲಿಸ ಬೇಕು.)
zakariya km, kootathana
2012-09-01
ಜಾಬೀರ್ ಗುಂದ್ಯದ್ಕ ರವರ ಲೇಖನ ಇಂದಿನ ಈ ಸಮಾಜದ ಅನಿಸ್ಟ ಪದ್ದತಿಯು ತಂದಿಟ್ಟ ಆಪತನ್ನು ಪ್ರತಿಬಿಂಬಿಸಿದೆ ...ಸಮುದಯದೊಲೆಗೆ ಆಳವಾಗಿ ಬೇರುಬಿಟ್ಟು ಬಡಜೀವ ಗಳನ್ನು ಹಸಿಯಾಗಿಯೇ ತಿನ್ನುತ್ತಿರುವ "ವರದಕ್ಷಿಣೆ " ಎಂಬ ಅನಾಚಾರಿಕ ಪದ್ದತಿಯ ವಿರುದ್ದ ದ್ವನಿಯೇತ್ತಿರುವ ಜಾಬೀರ್ ಅವರು ಪ್ರಯತ್ನ ಸ್ಲಾಗನಿಯ ...ಕ್ಕೆಪ್ ಇಟ್ ಅಪ್ ..
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri