ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಗರುಡನ ಮಾರ್ಗ...

ಕೆಲ ದಿನಗಳ ಹಿಂದೆ ಕಲಕತ್ತೆಯ ಐ.ಐ.ಎಮ್ ಆವರಣದಲ್ಲಿದ್ದೆ. ನಾನು ಇಳಿದುಕೊಂಡಿದ್ದ ಅತಿಥಿಗಹದ ಮುಂದೆ ಒಂದು ಸುಂದರವಾದ ಸರೋವರವಿದೆ. ಬೆಳಿಗ್ಗೆ ಅದರ ಸುತ್ತ ನಡೆಯುವುದು ಒಂದು ಅಪೂರ್ವ ಅನುಭವ. ನನ್ನ ಕೋಣೆಯ ಕಿಟಕಿಯಿಂದಲೂ ಕೊಳ ಕಾಣಿಸುತ್ತಿತ್ತು.

ಒಂದು ದಿನ ಬೆಳಿಗ್ಗೆ ಸುಮಾರು ಆರು ಗಂಟೆಯ ಹೊತ್ತಿಗೆ ಕಿಟಕಿಯ ಹತ್ತಿರ ಕುಳಿತು ಓದುತ್ತಿದ್ದಾಗ ಒಂದು ವಿಚಿತ್ರ ದಶ್ಯ ಕಣ್ಣಿಗೆ ಬಿತ್ತು. ಸರೋವರದ ಅಂಚಿನಲ್ಲಿರುವ ದೊಡ್ಡ ಮರದ ಕೊಂಬೆಯ ತುದಿಯಮೇಲೆ ಒಂದು ಭಾರೀ ದೊಡ್ಡ ಗೂಬೆ ಸರಿದಾಡುತ್ತಿರುವುದು ಕಂಡಿತು. ಸಾಮಾನ್ಯವಾಗಿ ಬೆಳಗಾಗುವ ಹೊತ್ತಿಗೆ ಗೂಬೆಗಳು ಹೊರಗೆ ಕಾಣಿಸಿಕೊಳ್ಳುವುದು ಅಪರೂಪ. ಇನ್ನಷ್ಟು ದಿಟ್ಟಿಸಿ ನೋಡಿದೆ.

ಕೊಂಬೆಯ ತುದಿಯ ಹತ್ತಿರ ಒಂದು ಹಕ್ಕಿಗಳ ಪುಟ್ಟ ಗೂಡಿದೆ. ಗೂಬೆ ಗೂಡಿನ ಹತ್ತಿರ ಸರಿಯುವುದರ ಒಳಗೆ ನಾಲ್ಕಾರು ಗುಬ್ಬಚ್ಚಿಗಳು ಹಾರಿ ಬಂದವು. ಒಂದು ನೇರವಾಗಿ ಬಂದದ್ದೇ ಗೂಬೆಯನ್ನು ತನ್ನ ಚುಂಚಿನಿಂದ ಹಿಂದೆ ಇರಿಯಿತು.

ಅದು ಅಲ್ಲಿಂದ ಹೊರಡುವ ಮೊದಲೇ ಇನ್ನೊಂದು ಗುಬ್ಬಚ್ಚಿ ಬಂದು ಗೂಬೆಯ ಪಕ್ಕೆಗೆ ತಿವಿಯಿತು. ಅಷ್ಟು ದೊಡ್ಡ ಗೂಬೆಗೆ ಗುಬ್ಬಚ್ಚಿಗಳು ಏನು ಮಾಡಿಯಾವು ಎಂದು ನೋಡುತ್ತಲಿದ್ದೆ. ಗುಬ್ಬಚ್ಚಿಗಳು ಯುದ್ಧವಿಮಾನಗಳಂತೆ ಒಂದಾದ ಮೇಲೆ ಒಂದು ಬಂದು ಗೂಬೆಯ ಮೇಲೆ ದಾಳಿ ಮಾಡಿದವು.

ಗೂಬೆ ತನ್ನ ಕೊಕ್ಕಿನಿಂದ ಅವುಗಳನ್ನು ಕುಕ್ಕಲು ಪ್ರಯತ್ನಿಸಿತು. ರೆಕ್ಕೆಗಳನ್ನು ಪಟಪಟನೇ ಬಡಿದು ಅವುಗಳನ್ನು ಓಡಿಸಲು ನೋಡಿತು. ಸಾಧ್ಯವಾಗಲೇ ಇಲ್ಲ. ಪುಟ್ಟ ಗುಬ್ಬಚ್ಚಿಗಳ ರೋಷಾವೇಶ ನೋಡುವಂತಿತ್ತು. ಚಿವ್, ಚಿವ್ ಎಂದು ಕೂಗುತ್ತ ಹಾರಿಹಾರಿ ಬಂದು ಗೂಬೆಯನ್ನು ಗಾಯಗೊಳಿಸಿದವು. ಕೊನೆಗೆ ಗೂಬೆ ದಿಕ್ಕುಗಾಣದೇ ಹಾರಿ ಮರೆಯಾಗಿ ಹೋಯಿತು.

ನಂತರ ಗುಬ್ಬಚ್ಚಿಗಳು ಬಂದು ಗೂಡಿನ ಸುತ್ತ ನೆರೆದವು. ಗೂಡಿನಿಂದ ಪುಟ್ಟ ಪುಟ್ಟ ಮರಿಗಳು ತಲೆ‌ಎತ್ತಿ ಇವುಗಳ ಕಡೆಗೆ ನೋಡುತ್ತಿರುವುದು ಕಂಡಿತು. ಆಗ ನನಗೆ ಅರ್ಥವಾಯಿತು. ಈ ಗೂಬೆ ಮರಿಗಳನ್ನು ತಿನ್ನಲು ಬಂದಿರಬೇಕು. ತಾಯಿ ಗುಬ್ಬಚ್ಚಿಗೆ ಗಾಬರಿಯಾಗಿದೆ.

ಪಾಪ! ಒಂದೇ ಪುಟ್ಟ ಪಕ್ಷಿ ಏನು ಮಾಡೀತು? ಆತಂಕದಿಂದ ಗಾಬರಿಯಿಂದ ಓಡಿಹೋಗಿ ಸ್ನೇಹಿತರನ್ನು ಕರೆತಂದಿದೆ! ಅವರೆಲ್ಲ ಜೀವದ ಹಂಗು ತೊರೆದು ಗೂಬೆಯನ್ನು ಕಚ್ಚಿ ಕಚ್ಚಿ ಹೋರಾಡಿ ಓಡಿಸಿಬಿಟ್ಟಿವೆ! ಕರುಳಿನ ಕರೆ ಇರುವುದು ಮನುಷ್ಯನಿಗೆ ಮಾತ್ರವಲ್ಲ ಸಮಸ್ತ ಪಶುಪಕ್ಷಿಗಳಲ್ಲಿ ಹಾಸುಹೊಕ್ಕಾಗಿದೆ.

ಈ ಘಟನೆಯನ್ನು ನೋಡುವಾಗ ಗೂಬೆಯ ಬದಲು ದೊಡ್ಡ ಗರುಡವಿದ್ದಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿದೆ. ಹಿಂದಕ್ಕೆಂದೋ ಬಾರಿ ಇಂಥದನ್ನು ಕಂಡಿದ್ದೆ. ಪುಟ್ಟ ಪುಟ್ಟ ಪಕ್ಷಿಗಳು ಅಕ್ರಮಣ ಮಾಡಿ ತೊಂದರೆ ಕೊಟ್ಟರೆ ಅದು ಅಲ್ಲಿಯೇ ಉಳಿಯುವುದನ್ನಾಗಲೀ ಅಥವಾ ಅವುಗಳನ್ನು ಬೆನ್ನಟ್ಟುವುದನ್ನಾಗಲೀ ಮಾಡುವುದಿಲ್ಲ.

ಗಂಭೀರವಾಗಿ ಹಾರಿ ನೇರವಾಗಿ ಸೂರ್ಯನೆಡೆಗೆ ಧಾವಿಸುತ್ತದೆ. ಗರುಡನ ಕಣ್ಣಿನ ಮೇಲೆ ವಿಶೇಷವಾದ ಪೊರೆ ಇರುವುದರಿಂದ ಬೆಳಕಿನಿಂದ ಯಾವ ಅಪಾಯವೂ ಇಲ್ಲ. ಅದು ಮೇಲಕ್ಕೆ ಮೇಲಕ್ಕೆ ಏರಿದಾಗ ಯಾವ ಚಿಕ್ಕ ಪಕ್ಷಿಯೂ ಅದರ ಹತ್ತಿರ ಸುಳಿಯಲಾರದು.

ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಮಸ್ಯೆಗಳು, ಸಂಕುಚಿತ ಮನೋಭಾವದ ಜನ ಕಿರುಕುಳಕೊಟ್ಟಾಗ ಕಚ್ಚಿಸಿಕೊಂಡು ಒದ್ದಾಡುತ್ತೇವೆಯೋ ಅಥವಾ ಗರುಡನಂತೆ ಅಲ್ಲಿಂದ ಹಾರಿ ಮೇಲಕ್ಕೇರಿ ಅವರಿಂದ ದೂರವಾಗುತ್ತೇವೆಯೋ? ಸಣ್ಣ ಜನರ ಟೀಕೆಗಳು, ಅವಮಾನಗಳು, ಚಿಕ್ಕ ಚಿಕ್ಕ ಘಟನೆಗಳು ನಮ್ಮನ್ನು ಬಿಡಲಾರವು.

ಆದರೆ ನಾವು ಗೂಬೆಯಂತೆ ಅವುಗಳಲ್ಲೆೀ ಮನವಿಟ್ಟು ಅವನ್ನೆ ಕೆದಕುತ್ತ ಕುಳಿತರೆ ಬಾಳು ನರಕವಾಗುತ್ತದೆ. ಗರುಡನಂತೆ ಅವುಗಳನ್ನು ದೂರತಳ್ಳಿ ಬೆಳಕಿನತ್ತ ನಡೆದರೆ ಸಣ್ಣ ಜನ, ಸಣ್ಣ ಮಾತು ನಮ್ಮನ್ನು ತಟ್ಟಲಾರವು, ಘನತೆಯನ್ನು ಕುಗ್ಗಿಸಲಾರವು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-30

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri