ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ: ಚಿತ್ರನಟ ಅರ್ಜುನ್ ಬಂಧನ

ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಕನ್ನಡ ಚಿತ್ರನಟ ಅರ್ಜುನ್ ಉರುಫ್ ಮಂಜೇಶ್ (34) ಅವರನ್ನು ಪೀಣ್ಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.ಅರ್ಜುನ್ ವಿರುದ್ಧ ಅವರ ಪತ್ನಿ ಲತಾಶ್ರೀ ಅವರು ದೂರು ಕೊಟ್ಟಿದ್ದರು.

ಈ ದೂರು ಆಧರಿಸಿ ಅವರನ್ನು ಬಂಧಿಸಿ ಬುಧವಾರ ಮಧ್ಯಾಹ್ನ ನಗರದ ಏಳನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ನಂತರ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

`ಪತಿ ಮತ್ತು ಅವರ ಕುಟುಂಬ ಸದಸ್ಯರು, ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದರು. ಪತಿ ಪ್ರತಿನಿತ್ಯ ಪಾನಮತ್ತರಾಗಿ ಬಂದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರವಾಗಿ ಮಕ್ಕಳೊಂದಿಗೆ ಮೂರು ತಿಂಗಳುಗಳಿಂದ ತವರು ಮನೆಯಲ್ಲಿ ನೆಲೆಸಿದ್ದೇನೆ. ಪತಿ, ತವರು ಮನೆಗೂ ಬಂದು ವರದಕ್ಷಿಣೆ ಹಣಕ್ಕಾಗಿ ಪೋಷಕರಿಗೆ ಬೆದರಿಕೆ ಹಾಕಿದ್ದಾರೆ` ಎಂದು ಲತಾಶ್ರೀ ದೂರಿನಲ್ಲಿ ತಿಳಿಸಿದ್ದಾರೆ.

ಲತಾಶ್ರೀ ಅವರ ಮದುವೆಯಾಗಿ 11 ವರ್ಷವಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಮಕ್ಕಳೊಂದಿಗೆ ಬಾಗಲಗುಂಟೆ ಬಳಿಯ ಎಂಇಐ ಲೇಔಟ್‌ನಲ್ಲಿರುವ ತವರು ಮನೆಯಲ್ಲಿ ನೆಲೆಸಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಅರ್ಜುನ್ ಅವರ ಮನೆ ಇದೆ. ಅರ್ಜುನ್, `ಮೆಂಟಲ್ ಮಂಜ`, `ತಿಮ್ಮ` ಮತ್ತು `ಮೂರನೇ ಕ್ಲಾಸ್ ಮಂಜ ಬಿ.ಕಾಂ ಭಾಗ್ಯ` ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್‌ಗೆ ಥಳಿತ: ಅರ್ಜುನ್, ಅವರ ತಮ್ಮ ಸಂಪತ್‌ಕುಮಾರ್ ಉರುಫ್ ಸಾಯಿಸಾಗರ್ ಮತ್ತು ಸಂಬಂಧಿಕ ಕುಮಾರ್ ಅವರು ಮಂಗಳವಾರ ರಾತ್ರಿ ಪಾನಮತ್ತರಾಗಿ ಲತಾಶ್ರೀ ಅವರ ತವರು ಮನೆಯ ಬಳಿ ಬಂದು ಸೆಕ್ಯುರಿಟಿ ಗಾರ್ಡ್ ಜತೆ ಜಗಳವಾಡಿದ್ದಾರೆ.

ಸೆಕ್ಯುರಿಟಿ ಗಾರ್ಡ್ ಚಂದಪ್ಪ ಅವರು ಪ್ರವೇಶ ನಿರಾಕರಿಸಿದ್ದರಿಂದ ಕೋಪಗೊಂಡ ಆ ಮೂರು ಮಂದಿ, ಗಾರ್ಡ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಗಾರ್ಡ್ ರಕ್ಷಣೆಗೆ ಧಾವಿಸಿದ ಅವರ ಇಬ್ಬರು ಹೆಣ್ಣು ಮಕ್ಕಳು ಮತ್ತು ಸಂಬಂಧಿಕರ ಮೇಲೂ ಅವರು ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಚಂದಪ್ಪ ಅವರ ಪುತ್ರಿಯರ ಬಟ್ಟೆಗಳನ್ನು ಹರಿದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಚಂದಪ್ಪ ಅವರು ದೂರು ನೀಡಿದ್ದು, ಹಲ್ಲೆ, ಮಹಿಳೆಯ ಗೌರವಕ್ಕೆ ಧಕ್ಕೆ ಮತ್ತು ಪ್ರಾಣ ಬೆದರಿಕೆ ಆರೋಪದ ಮೇಲೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಘಟನೆ ಸಂಬಂಧ ಸಾಯಿಸಾಗರ್ ಮತ್ತು ಕುಮಾರ್ ಅವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಕರಿಂದ ಬೆದರಿಕೆ: `ಅರ್ಜುನ್ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ದೂರು ವಾಪಸ್ ಪಡೆಯುವಂತೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮೊಬೈಲ್‌ಗೆ ನಾಲ್ಕೈದು ಬಾರಿ ಕರೆ ಮಾಡಿದ್ದ ಸಂಬಂಧಿಕರು, ದೂರು ಹಿಂಪಡೆಯದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದರು. ನನಗೆ ಮತ್ತು ಮಕ್ಕಳಿಗೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು` ಎಂದು ಲತಾಶ್ರೀ `ಪ್ರಜಾವಾಣಿ`ಗೆ ತಿಳಿಸಿದರು.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-30

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ
»ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...
»ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್
»ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ
» ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...
»ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ
»ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್
»Iranian athlete refuses to 'shake hands' with Duchess of Cambridge during medal ceremony over 'cultural reasons'
»ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ
»ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ
» `ಸತ್ಯಾಗ್ರಹ'ದಲ್ಲಿ ಕರೀನಾ?...
»ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ
» ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ
»ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್
»ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
»‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’
» ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
»ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ
»ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ
»ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ
»ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ
»ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್
»ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್
»ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri