ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ನರೋಡ ಪಟಿಯಾ ಕೋಮು ಗಲಭೆ: ವಿಶೇಷ ನ್ಯಾಯಾಲಯ ತೀರ್ಪು. ಮೋದಿಗೆ ಹಿನ್ನಡೆ ( Updated)

ಅಹಮದಾಬಾದ್ (ಪಿಟಿ‌ಐ): ಹತ್ತು ವರ್ಷಗಳ ಹಿಂದೆ ಅಲ್ಪಸಂಖ್ಯಾತರ ಕೋಮಿಗೆ ಸೇರಿದ 97 ಜನರ ಸಜೀವ ದಹನ ಕಾರಣವಾಗಿದ್ದ ನರೋಡ ಪಟಿಯಾ ಕೊಮು ಗಲಭೆಗೆ ಸಂಬಂಧಿಸಿದಂತೆ ಇಲ್ಲಿಯ ವಿಶೇಷ ನ್ಯಾಯಾಲಯವು ಮುಖ್ಯಮಂತ್ರಿ ನರೇಂದ್ರ ಮೋದಿ ಆಪ್ತೆ, ಬಿಜೆಪಿ ಶಾಸಕಿ, ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಮತ್ತು ಬಜರಂಗ ದಳದ ಮುಖಂಡ ಬಾಬು ಬಜರಂಗಿ ಸೇರಿದಂತೆ 32 ಜನರು ತಪ್ಪಿತಸ್ಥರು ಎಂದು ಘೋಷಿಸಿದೆ. ಶಿಕ್ಷೆ ಪ್ರಮಾಣವನ್ನು ಈ ತಿಂಗಳ 31ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ನ್ಯಾಯಾಧೀಶೆ ಜೋತ್ಸ್ನಾ ಯಾಜ್ಞಿಕ್ ಅವರು ಇತರ 29 ಮಂದಿಯನ್ನು ನಿರ್ದೋಷಿಗಳು ಎಂದು ಬಿಡುಗಡೆ ಮಾಡಿದ್ದಾರೆ.

ಗೋಧ್ರಾ ಘಟನೆಯ ನಂತರ ನಡೆದ ಕೋಮು ಗಲಭೆಯಲ್ಲಿ ಕೊಡ್ನಾನಿ ಮತ್ತು ಬಾಬು ಬಜರಂಗಿ ಮತ್ತು ಇತರ 30 ಜನರು  ಕ್ರಿಮಿನಲ್ ಸಂಚು ಮತ್ತು ಕೊಲೆಯಲ್ಲಿ ಭಾಗಿಯಾಗಿರುವುದರಿಂದ ಐಪಿಸಿ ಕಲಂ 120ಮತ್ತು  302ರ ಪ್ರಕಾರ ಅಪರಾಧಿಗಳು ಎಂದು ನ್ಯಾಯಾಧೀಶರು ಘೋಷಿಸಿದರು.

ಕ್ರಿಮಿನಲ್ ಸಂಚು ಮತ್ತು ಕೊಲೆ ಅಪರಾಧಕ್ಕೆ ಗರಿಷ್ಠ ಶಿಕ್ಷೆಯಾದ ಮರಣ ದಂಡನೆಯನ್ನು ವಿಧಿಸಬಹುದಾಗಿದೆ ಎಂದು ಸಂತ್ರಸ್ತರ ಪರ ವಕೀಲ ಶಂಶಾದ್ ಪಠಾಣ್ ತಿಳಿಸಿದರು.

ಶಿಕ್ಷೆಯ ಪ್ರಮಾಣದ ಬಗ್ಗೆ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ಶಿಕ್ಷೆಪ್ರಮಾಣವನ್ನು ಈ ತಿಂಗಳ 31ರಂದು ಪ್ರಕಟಿಸಲಾಗುವುದು ಎಂದರು.

2002ರ ಫೆಬ್ರುವರಿ 27ರಂದು ಗೋಧ್ರಾದಲ್ಲಿ ರೈಲಿನಲ್ಲಿ ಸಜೀವ ದಹನ ಪ್ರಕರಣ ನಡೆದ ಮಾರನೇ ದಿನ ನಡೆದ ಕೋಮು ಗಲಭೆಯಲ್ಲಿ 97 ಜನರು ಸಜೀವ ದಹನಗೊಂಡಿದ್ದರು.

2002ರ ಫೆ. 28ರಂದು ವಿಶ್ವ ಹಿಂದೂ ಪರಿಷತ್ ಕರೆ ನೀಡಿದ ಬಂದ್ ಸಂದರ್ಭದಲ್ಲಿ ನರೋಡ ಪಟಿಯಾ ಪ್ರದೇಶದಲ್ಲಿ ಸೇರಿದ್ದ ಭಾರಿ ಸಂಖ್ಯೆಯ ಜನರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿದ್ದರಿಂದ 97 ಜನರು ಮೃತಪಟ್ಟಿದ್ದರು ಮತ್ತು 33 ಜನರು ಗಾಯಗೊಂಡಿದ್ದರು.

ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿರುವ ಮತ್ತು ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಕೊಡ್ನಾನಿ ಅವರನ್ನು 2009ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಸಚಿವರಾಗಿದ್ದರು. ಬಂಧನದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕೊಡ್ನಾನಿ ಅವರು 1988ರಲ್ಲಿ ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ನಂತರ ಎರಡು ಬಾರಿ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2007ರಲ್ಲಿ ಅವರನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಕ ಮಾಡಲಾಗುತ್ತು. ಅಡ್ವಾಣಿ ಅವರ ಸೂಚನೆಯ ಮೇರೆಗೆ ಮಾಯಾ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು ಎನ್ನಲಾಗಿದೆ. ಪ್ರಕರಣದ ವಿಚಾರಣೆಯು 2009ರಲ್ಲಿ ಆರಂಭವಾಗಿತ್ತು. 62 ಜನರ ವಿರುದ್ಧ ದೋಷಾರೋಪ ಸಿದ್ಧಪಡಿಸ ಲಾಗಿತ್ತು. ಅವರಲ್ಲಿ ವಿಜಯ್ ಶೆಟ್ಟಿ ಎಂಬ ವ್ಯಕ್ತಿ ಸತ್ತಿದ್ದಾರೆ.

ಪ್ರತ್ಯಕ್ಷ ಸಾಕ್ಷಿಗಳು, ವೈದ್ಯರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ಒಟ್ಟು 327 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊ ಳ್ಳಲಾಗಿದೆ. ಆಪಾದಿತರ ವಿರುದ್ಧ ಮಾರುವೇಷದ ಕಾರ್ಯಾಚರಣೆ ನಡೆಸಿದ ಟಿವಿ ವರದಿಗಾರ ಅಶಿಶ್ ಖೈತಾನ್ ಸಹ ಸಾಕ್ಷಿ ನೀಡಿದ್ದಾರೆ.

ಆರಂಭದಲ್ಲಿ ಗುಜರಾತ್ ಪೊಲೀಸರು 46 ಮಂದಿಯನ್ನು ಬಂಧಿಸಿದ್ದರು. ನಂತರ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು ವಿಸ್ತ್ರತ ತನಿಖೆ ನಡೆಸಿ 24 ಜನರನ್ನು ಬಂಧಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 70 ಜನರನ್ನು ಬಂಧಿಸಲಾಗಿತ್ತು.

ದೋಷಾರೋಪ ಸಿದ್ಧಪಡಿಸುವ ಮೊದಲೇ ಆರು ಮಂದಿ ಸತ್ತಿದ್ದರು. ಜಾಮೀನಿನ ಮೇಲೆ ಹೊರಗೆ ಬಂದಿದ್ದ ಮೋಹನ್ ನೇಪಾಳಿ ಮತ್ತು ತೇಜಸ್ ಪಾಠಕ್ ಅವರು ಪರಾರಿಯಾಗಿದ್ದು, ಇದುವರೆಗೆ ಪತ್ತೆಯಾಗಿಲ್ಲ.

ಕಳೆದ 10 ವರ್ಷಗಳಲ್ಲಿ ಈ ಕೋಮು ಗಲಭೆ ಪ್ರಕರಣವನ್ನು ಎಂಟು ಅಧಿಕಾರಿಗಳು ತನಿಖೆ ಮಾಡಿದ್ದಾರೆ. ವಿಶೇಷ ತನಿಖಾ ತಂಡದ ಕೊನೆಯ ತನಿಖಾ ಅಧಿಕಾರಿ ಹಿಮಾಂಶು ಶುಕ್ಲಾ.

ಗುಜರಾತ್ ಕೋಮು ಗಲಭೆಯ 9 ಪ್ರಕರಣಗಳಲ್ಲಿ ನರೋದಾ ಪಟಿಯಾ ಪ್ರಕರಣವೂ ಒಂದು.

ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯೆ: ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದು, ಈ ತೀರ್ಪಿನಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಈ ದೇಶದಲ್ಲಿ  ಕಾನೂನು ಯಾವಾಗಲೂ ಸರಿಯಾಗಿ ಪಾಲನೆಯಾಗುತ್ತದೆ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ ಎಂದು ಅವರು ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ಯಾವುದೇ ರೀತಿಯ ಹೇಳಿಕೆ ನೀಡಲು ಸಚಿವರು ನಿರಾಕರಿಸಿದರು.

ಮಹಾರಾಣಾ ಪ್ರತಾಪ್‌ಗೆ ಹೋಲಿಸಿಕೊಂಡಿದ್ದ ಬಾಬು ಬಜರಂಗಿ

ಅಹಮದಾಬಾದ್ (ಪಿಟಿ‌ಐ): ನರೋದಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವ ಬಜರಂಗದಳದ ಮುಖಂಡ ಬಾಬು ಬಜರಂಗ್, ನರಮೇಧವನ್ನು ಸಮರ್ಥಿಸಿ ಮಾತನಾಡಿದ್ದರು ಮತ್ತು ತಮ್ಮನ್ನು ಮುಸ್ಲಿಮರ ವಿರುದ್ಧ ಹೋರಾಡಿದ್ದ ರಜಪೂತ ರಾಜ ಮಹಾರಾಣಾ ಪ್ರತಾಪ್‌ಗೆ ಹೋಲಿಸಿಕೊಂಡಿದ್ದರು.

2007ರಲ್ಲಿ ತೆಹೆಲ್ಕಾ ವರದಿಗಾರ ನಡೆಸಿದ್ದ ಮಾರುವೇಷದ ಕಾರ್ಯಾಚರಣೆಯ್ಲ್ಲಲೂ ಬಾಬು ಅವರು, ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 59 ಮಂದಿ ಕರಸೇವಕರನ್ನು ಸಜೀವ ದಹನ ಮಾಡಿದ್ದಕ್ಕೆ ಪ್ರತೀಕಾರವಾಗಿ ನರೋದ ಪಟಿಯಾದಲ್ಲಿ ಕೋಮ ಗಲಭೆ ನಡೆಸಿ ಅಲ್ಪಸಂಖ್ಯಾತರನ್ನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು.

`ಇದೊಂದು ಕಾನೂನು ಪ್ರಕ್ರಿಯೆ`

ನವದೆಹಲಿ (ಐ‌ಎ‌ಎನ್‌ಎಸ್): ಗುಜರಾತ್ ಕೋಮು ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರನ್ನು ಅಪರಾಧಿ ಎಂದು ನ್ಯಾಯಾಲಯ ಪ್ರಕಟಿಸಿರುವುದನ್ನು `ಇದೊಂದು ಕಾನೂನು ಪ್ರಕ್ರಿಯೆ` ಎಂಬ ತಣ್ಣನೆಯ ಪ್ರತಿಕ್ರಿಯೆಯನ್ನು ಬಿಜೆಪಿ ನೀಡಿದೆ.

ನ್ಯಾಯಾಂಗ ಪ್ರಕ್ರಿಯೆಯಲ್ಲಿ ರಾಜಕೀಯ ಬೆರೆಸಲು ನಾವು ಬಯಸುವುದಿಲ್ಲ, ಇದು ಮೊದಲ ನ್ಯಾಯಾಲಯ ತೀರ್ಪು, ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯುತ್ತ ಹೋಗುತ್ತದೆ  ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ದೋಷಾರೋಪ ಪಟ್ಟಿ ಸಿದ್ಧಪಡಿಸಿದ ಕೂಡಲೇ ಮಾಯಾಬೆನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸ್ವಾಗತ

ಮುಖ್ಯಮಂತ್ರಿಯ ಅನುಮತಿ ಇಲ್ಲದೆ ಯಾವುದೇ ಸಚಿವ ಇಂತಹ ಘಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೂ ತಪ್ಪಿತಸ್ಥರು  ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-30

Tell a Friend
ಇತರ ಸಂಭಂದಪಟ್ಟ ವರದಿಗಳು
»
»ವಿಶ್ವ ಪರಂಪರೆ ಪಟ್ಟಿಗೆ ಪಶ್ಚಿಮ ಘಟ್ಟ ನಿರ್ಣಯದ ಪರ ಪರಿಸರವಾದಿಗಳಿಂದ ಪತ್ರ ಆಂದೋಲನ!
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri