ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ

ಮುಂಬಯಿ: ಮುಂಬಯಿ ಮಹಾನಗರದ ಪೊವಾಯಿ (ಲೇಕ್) ಕೆರೆಯಲ್ಲಿರುವ ಪ್ರತಿಷ್ಠಿತ ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಸಂಘಟನೆಯ ಅಧ್ಯಕ್ಷರಾಗಿ ಮೂಡಬಿದ್ರಿ ಶಿರ್ತಾಡಿ ಮೂಲದ ವಿಲಿಯಂ ಮಸ್ಕರೇನ್ಹಸ್ ಆಯ್ಕೆ ಆಗಿದ್ದಾರೆ.
೧೯೩೬ರಲ್ಲಿ ಸ್ಥ್ಥಾಪನೆಯಾಗಿದ್ದ ಈ ಸಂಘಟನೆ ಮುಂಬಯಿ ಮಹಾನಗರ ಪಾಲಿಕೆ, ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕೇಂದ್ರ ವಿನುಗಾರಿಕಾ ಪ್ರಾಧಿಕಾರದ ನೆರವಿನಿಂದ ಈ ಸಂಘಟನೆಯು ಪೊವಾಯಿ ಕೆರೆಯಲ್ಲಿರುವ ಜಲಚರಗಳು ಮತ್ತು ಅಪಾಯದ ಅಂಚಿನಲ್ಲಿರುವ ಪ್ರಭೇದಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿಶೇಷವಾದ ಸಂಘಟನೆ ಆಗಿ ಕಾರ್ಯನಿರ್ವಾಹಿಸುತ್ತಿದೆ.ಈ ಆಂಗ್ಲಿಂಗ್ ಸಂಘಟನೆಯನ್ನು ರಾಷ್ಟ್ರದ ಸುಪ್ರಸಿದ್ಧ ಸಂಗೀತಕಾರ ಶ್ರೀ ನೌಷದ್ ಆಲಿ ಅವರ ಹೆಸರಿನಲ್ಲಿ ‘ನೌಷದ್ ಆಲಿ ಸರೋವರ್ ಸಂವರ್ಧಿನಿ’ ಎಂಬ ಸರಕಾರೇತರ ಸಂಸ್ಥೆಯನ್ನು ಸಹ ನಡೆಸುತ್ತಿದೆ. ಈ ಆಂಗ್ಲಿಂಗ್ ಸಂಘಟನೆಯ ಮಾಜಿ ಅಧ್ಯಕ್ಷರಾಗಿದ್ದು ಪೊವಾಯಿ ಕೆರೆಯಲ್ಲಿ ಯಾವಾಗಲೂ ಗಾಳ ಹಾಕಿ ವಿನು ಹಿಡಿಯುತ್ತಿದ್ದ ನೌಷದ್ ಆಲಿ ಇಲ್ಲಿಯೇ ಅನೇಕ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಲ್ಲದೆ ಈ ಕೆರೆ ಅವರ ಬದುಕಿಗೆ ಪ್ರಮುಖ ಪ್ರೇರಣೆಯಾಗಿತ್ತು ಎನ್ನಲಾಗಿದೆ.ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಸಂಘಟನೆ ಈಗ ಬೃಹತ್ ಸಂಘಟನೆಯಾಗಿ ಬೆಳೆದಿದ್ದು ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ‘ವಾಟರ್ ಹೈಸಿಂತ್’ನಂತಹ ಕಳೆಗಳನ್ನು ಕೀಳುವುದು, ಪ್ರತಿ ತಿಂಗಳು ನೀರು ಮತ್ತು ಪರಿಸರದ ವಿಶ್ಲೇಷಣೆ, ೨೪ ಗಂಟೆ ಭದ್ರತೆ ಒದಗಿಸುವುದು ಹಾಗೂ ಯಾರೂ ಮೀನು ಕದಿಯದಂತೆ ನೋಡಿಕೊಳ್ಳಲು ಕೆರೆಯ ಸುತ್ತಲೂ ಗಸ್ತು ಕಾಯುವುದು ಮುಂತಾದ ಕಾರ್ಯಕ್ರಮದ ಮೂಲಕ ಈ ಸಂಘಟನೆಯು ಕೆರೆಯನ್ನು ರಕ್ಷಿಸುತ್ತಾ ಬಂದಿದೆ. ಈ ಸಂಘಟನೆಯು ತಮ್ಮ ಜೊತೆ ಸದಸ್ಯತ್ವ ಹೊಂದಿರುವ ದೇಶದ ಇತರ ಆಂಗ್ಲಿಂಗ್ ಮತ್ತು ಪರಿಸರ ಸಂಸ್ಥೆಗಳ ಜೊತೆ ನಿರಂತರ ವಿಚಾರ ವಿನಿಮಯ ನಡೆಸುತ್ತದೆ ಹಾಗೂ ಮೀನು ಹಿಡಿಯುವುದನ್ನು ಒಂದು ಕ್ರೀಡೆಯಾಗಿ ಪ್ರವರ್ತಿಸಲು ಶ್ರಮಿಸುತ್ತಿದೆ. ರಾಷ್ಟ್ರದಲ್ಲೇ ಅಪರೂಪ ಎನ್ನುವ ‘ಮಹಾಶೇರ್’ ತಳಿಯ ವಿನು ಕರ್ನಾಟಕದ ಕಾವೇರಿ, ಗಂಗಾ ಹಾಗೂ ಗಾಗ್ರಾ ನದಿಗಳಲ್ಲಿವೆ ಎನ್ನುತ್ತಾರೆ. 
ನೂರಾರು ಸದಸ್ಯರನ್ನೊಳಗೊಂಡ ಈ ಸಂಘಟನೆಯು ಸರೋವರದ ರಕ್ಷಣೆ, ಕೆರೆಯ ಪುನರ್ ಜೀವನಗೈದು ಕೆರೆಯಲ್ಲಿನ ಬಹುತೇಕ ವರ್ಗದ ಬೃಹದಾಕಾರದ ವಿನುಗಳನ್ನು ಗಾಳ ಹಾಕಿ (ಒಂದು ಕ್ರೀಡೆಯಾಗಿರಿಸಿ, ಯಾವುದೇ ವಿನುಗಳಿಗೆ ಗಾಯಗೊಳಿಸದೆ, ನೋಯಿಸದೆ) ಹಿಡಿದು ಅವುಗಳ ತಳಿ, ಭಾರ, ಉದ್ದಗಳ ಸೇರಿದಂತೆ ಸಂಶೋಧನೆ ಗೈದು ಹಿಡಿದ ವಿನುಗಳಿಗೆ ಯಾವುದೇ ರೀತಿಯಲ್ಲಿ ಹಾನಿಗೊಳಿಸದೆ ಅವುಗಳ ಸಂತನೋತ್ಪತ್ತಿಗೆ ಮಹತ್ವ ನೀಡಿ ಮತ್ತೆ ನೀರಿಗೆ ಬಿಡಲಾಗುವುದು. ಮಾತ್ರವಲ್ಲದೆ ಜಲ ಸಂರಕ್ಷಣೆಯ ತಜ್ಞರು, ಮತ್ಸ  ರಕ್ಷಕರು, ಪರಿಸರ ಸಂಶೋಧಕರು ಹಾಗೂ ಕ್ರೀಡಾಸಕ್ತ ಮೀಂಗುಲಿಗರನ್ನೊಳಗೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಏರ್ಪಾಡಿಸಿ ಕೆರೆ ಮತ್ತು ಜಲ ಸಂರಕ್ಷಣೆ ಹಾಗೂ ಪರಿಸರಸಯ್ಯ ಚರ್ಚೆಗಳನ್ನು ಆಯೋಜಿಸಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಇಲ್ಲಿನ ನೆಲ್ಲಿಕಾರು-ಶಿರ್ತಾಡಿ ಮೂಲದ ಲೂಯಿಸ್ ಮಸ್ಕರೇನ್ಹಸ್ ಮತ್ತು ಶ್ರೀಮತಿ ಅನ್ನಾ ಮೇರಿ (ಪಿಂಟೋ) ದಂಪತಿಯ  ಏಳು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳ ಒಟ್ಟು ೧೧ ಮಂದಿ ಮಕ್ಕಳ ತುಂಬು ಸಂಸಾರದಲ್ಲಿ ೫ನೇ ಮಗುವಾಗಿ ಜನಿಸಿದ ವಿಲಿಯಂ ಮಸ್ಕರೇನ್ಹಸ್ ವಿದ್ಯಾಥಿ ಜೀವನದಲ್ಲೇ ಪರಿಸರ ಪ್ರೇಮವನ್ನು ರೂಢಿಸಿಕೊಂಡ ಪ್ರತಿಭಾ ಸಂಪನ್ನರು. ಹಲವಾರು ವರ್ಷಗಳಿಂದ  ಮುಂಬಯಿಯನ್ನು ನೆಲೆಯಾಗಿರಿಸಿ ಉದ್ಯಮಿಯಾಗಿ ಕಾರ್ಯನಿರತ ವಿಲಿಯಂ ಅವರು ಸದಾ ಗಿಜಿಗುಟ್ಟುವ ಮುಂಬಯಿಯಲ್ಲಿ ಬದುಕಿನ ಒತ್ತಡದ ನಡುವೆಯೂ ಲಾಭೋದ್ದೇಶವಿಲ್ಲದ ಈ ಸಂಘಟನೆಯ ಅಧ್ಯಕ್ಷರಾಗಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರ ಸಹಯೋಗದೊಂದಿಗೆ ಪರಿಸರ-ಜಲ ಮತ್ತು ಜಲಚರಗಳ ಸಂರಕ್ಷಣೆಯ ಸೇವೆಗೈಯುತ್ತಿರುವುದು ಶ್ಲಾಘನೀಯ. ಇಂತಹ ಸಂಘಟನೆಗೆ ತುಳುನಾಡಿನ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿರುವುದು ತುಳುನಾಡಿನ ಜನರಿಗೆ ಹೆಮ್ಮೆಯ ವಿಷಯವಾಗಿದೆ.    

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : (ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್)
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri