ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ

ಮಂಗಳೂರು, ಆ.28: ತಿಂಗಳ ಹಿಂದೆ ಪಡೀಲ್ ಬಡ್ಲಗುಡ್ಡೆಯ ಮಾರ್ನಿಂಗ್ ಮಿಸ್ಟ್ ಎಂಬ ಹೋಂ ಸ್ಟೇಗೆ ದಾಳಿ ನಡೆಸಿ ಬರ್ತ್‌ಡೇ ಪಾರ್ಟಿ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ 17 ಮಂದಿ ಆರೋಪಿಗಳ ಜಾಮೀನು ತಿರಸ್ಕರಿಸಿ 1ನೆ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳು ತಮ್ಮನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ 1ನೆ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಡಿ.ನರಸಿಂಹ ಮೂರ್ತಿ ವಾದ-ಪ್ರತಿವಾದಗಳನ್ನು ಆಲಿಸಿ ಜಾಮೀನು ತಿರಸ್ಕರಿಸಿದ್ದಾರೆ. ಬಂಧಿತ ಆರೋಪಿಗಳಾದ ಶರತ್, ತಾರನಾಥ ಕಣ್ಣೂರು ರಾಜೇಶ್ ಚೇತನ್ ಸುನಿಲ್ ಹರೀಶ್ ಶೈಲೇಶ್ ಪುನೀತ್ ವರುಣ್ ಪೂಜಾರಿ ಕಿರಣ್ ಪೂಜಾರಿ ಸುರೇಶ್ ಪೂಜಾರಿ, ಮಿಥುನ್ ಪೂಜಾರಿ, ಸಂಪತ್, ದೀಪಕ್, ರಮೇಶ್ ಕೋಟ್ಯಾನ್, ಜಗದೀಶ್ ಮತ್ತು ನಿತಿನ್ ಎಂಬವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಸರಕಾರದ ಪರವಾಗಿ 1ನೆ ಹೆಚ್ಚುವರಿ ಸೆಶನ್ಸ್ ನ್ಯಾಯಾಲದ ಸರಕಾರಿ ಅಭಿಯೋಜಕ ಮಂಜುನಾಥ್ ವಿ.ಭಟ್ ಪನ್ನೆ ವಾದಿಸಿದ್ದರು.ಕಳೆದ ಜು.28ರಂದು ಸಂಜೆ ಪಡೀಲ್ ಬಡ್ಲಗುಡ್ಡೆಯ ಮಾರ್ನಿಂಗ್ ಮಿಸ್ಟ್ ಎಂಬ ಹೋಂ ಸ್ಟೇಗೆ ದಾಳಿ ನಡೆಸಿ ಬರ್ತ್‌ಡೇ ಪಾರ್ಟಿ ನಡೆಸುತ್ತಿದ್ದ ಯುವಕ-ಯುವತಿಯರ  ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ಎಂದು ಗುರುತಿಸಿಕೊಂಡಿದ್ದ ಯುವಕರ ತಂಡ ಹಲ್ಲೆ ನಡೆಸಿತ್ತು.  

ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಹೇಯಕೃತ್ಯ ರಾಷ್ಟ್ರಾದ್ಯಂತ ಗಮನ ಸೆಳೆದಿತ್ತು. ಈ ಕುರಿತಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು.ಈ ಪ್ರಕರಣದಲ್ಲಿ ಈಗಾಗಲೇ ೨೪ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಮೊದಲ ಇಬ್ಬರು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಮೂವರ ಅರ್ಜಿಗಳ ವಿಚಾರಣೆ ಆ.31ಕ್ಕೆ ನಡೆಯಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ದಕ್ಷಿಣ ಉಪವಿಭಾಗದ ಎ.ಸಿ.ಪಿ. ಟಿ.ಆರ್.ಜಗನ್ನಾಥ್ ಎಸಿಪಿ ಜಗನ್ನಾಥ್ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯಲ್ಲಿದೆ.

ವಾಹನ ಬಿಡುಗಡೆಗೆ ಆದೇಶ: ಪೊಲೀಸರ ವಶದಲ್ಲಿದ್ದ ದಾಳಿ ಪ್ರಕರಣದ ಸಂದರ್ಭದಲ್ಲಿ ಆರೋಪಿಗಳು ಬಳಸಿದ್ದರೆನ್ನಲಾದ ಎರಡು ಕಾರ್‌ಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಮಳೆಗಾಲದಲ್ಲಿ ವಾಹನಗಳು ತುಕ್ಕು ಹಿಡಿದು ಹಾಳಾಗುತ್ತವೆ. ಅದರ ನಿರ್ವಹಣೆಯ ಉದ್ದೇಶದಿಂದ ಕಾರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸರ ವಶದಲ್ಲಿದ್ದ ಕಾರು ಒಂದು ದಾಳಿ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಸುಭಾಷ್ ಪಡೀಲ್‌ಗೆ ಸೇರಿದ್ದಾಗಿದ್ದರೆ, ಇನ್ನೊಂದು ಕಾರು ಶರತ್ ಎಂಬಾತನದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-29

Tell a Friend

ಪ್ರತಿಸ್ಪಂದನ
Ronald, Udupi
2012-09-07
ಎಲ್ಲರೂ ಸರಿ! ತಮ್ಮ ತಮ್ಮ ಕೆಲಸ ನೋಡಿಕೊಂಡು ಹಾಯಾಗಿರಿ! Arguments leads to tensions!! Live and let Live!! ಈ ಫೋಟೋದಲ್ಲಿರುವ ಧಾಳಿ ಕೋರರು ಕೆಲವು ವರ್ಷ ಒಳಗೆ ಇರಲಿ!! ಸಮಾಜಕ್ಕೆ ಬಹಳ ಒಳ್ಳೇದು!!
SHAMEEM, MANGALORE
2012-09-05
ಮಾನ್ಯ ಪ್ರಶಾಂತ್ ನನ್ನ ಪೂರ್ವಜರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ತಾವೂ ನನ್ನ ಪ್ರಶ್ನೆಯನ್ನು ಸರಿಯಾಗಿ ಇನ್ನೊಮ್ಮೆ ಓದಿ ನೋಡಿ. ನಾನು ಕೇಳಿದ್ದು ಯಾರು ಹಿಂದುಗಳು ಎಂದಲ್ಲ "" ಯಾರ ಹಿಂದೂ ರಾಷ್ಟ್ರ"" ? ಎಂದು ನೀವು ಹಾರಿಕೆಯ ಉತ್ತರ ನಿಡಿದ್ದಿರಿ. ದಯಮಾಡಿ ಇನೊಮ್ಮೆ ನನ್ನ ಕಾಮೆಂಟ್ಸ್ ಒದಿ ನೋಡಿ. ಪ್ರಶಾಂತ್ ಅವರೇ ಅಂಬೇಡ್ಕರ್ ಮತಾಂತರದ ಬಗ್ಗೆ ತಾವೂ ಇನ್ನು ಮೌನವಾಗಿದ್ದಿರಿ. ಅಂಬೇಡ್ಕರ್ ಅವರ ಪೂರ್ವಜರ ಬಗ್ಗೆ ಸ್ವಲ್ಪ ವಿವರಿಸುತ್ತಿರ.
Purushottama, Mangalore
2012-09-05
ಗಲ್ಫ್ ಕನ್ನಡಿಗ ಪರಸ್ಪರ ಕಚ್ಚಾಡುವ ವೇದಿಕಯಾಗಿ ಮಾರ್ಪಟ್ಟಿದೆ.ವಿಷಯವನ್ನು ಎಲ್ಲೆಲ್ಲಿಗೋ ಕೊಂಡೊಯುತ್ತಿದ್ದಾರೆ. ಭಾರತ ದೇಶದ ಗೌರವವನ್ನು ಅರಿಯದೆ ಹಿಂದೂ ದೇಶವೆಂದು ಮಾತಾಡುವ ಕೆಲವರಿಗೆ ಮತಿ ಭ್ರಮಣೆ ಆಗಿದೆ. ಇಂತಹ ಜನರಿಂದಾಗಿಯೇ ಇಂದು ಮಂಗಳೂರಿನ ಹೆಸರು ಹಾಳಾಗಿದೆ.ಇವರು ಮಂಗಳೂರಿನಿಂದ ಹೊರಗೆ ಕಾಲಿಡಲಿಲ್ಲ .ಹಾಗಾಗಿ ಇವರ ಸ್ಥಿತಿ ಕೂಪ ಮಂಡೂಕದಂತಾಗಿದೆ .
ಪ್ರಶಾ೦ತ್ ಅಮೀನ್,, , ಮೂಡಬಿದ್ರೆ
2012-09-05
SHAMEEM, MANGALORE ಹಿಂದು ಯಾರು ಎಂದು ಪ್ರಶ್ನೆ ಮಾಡಿದ್ದಿರ ,ನಮ್ಮ ದೇಶದ ಸಂಸ್ಕೃತಿಯನ್ನು ಹಾಗು ಹಿಂದು ದೇವರನ್ನು ಯ್ಯಾರು ಆರಾದಿಸುತ್ತಾರೊ ಅವರೇ ನಿಜಾವದ ಹಿಂದುಗಳು ಶಮೀಮ್ ಅವರೇ ನಿಮ್ಮ ಪೊರ್ವಜರು ಕೂಡ ಹಿಂದುಗಳು ಎಂಬುವದನ್ನು ಮರಿಬೇಡಿ ,ನೀವೆಲ್ಲ ಮತಾಂತರ ಆಗಿರ ಬಹುದು ಅದರೆ ಈ ದೇಶಕ್ಕೆ ಮಾರಕ ಆಗಬೇಡಿ ,ಯ್ಯಾಕೆ ಎಂದರೆ ನಿಮ್ಮ ದೇಹದಲ್ಲಿ ಒಂದು ತೊಟ್ಟು ಆದರೊ ರಕ್ತ ನಿಮ್ಮ ಪೊರ್ವಜರಿಗೆ ಸಂಬಂದ ಪಟ್ಟಿದೆ ,ಗೂತ್ತಿರಲಿ ಸರ್ವಜ್ನನರ ವಚನ ಹೇಳಿದ ತಕ್ಶನ ಊರು ಉದ್ದಾರ ಆಗೋಲ್ಲ,
SHAMEEM, MANGALORE
2012-09-05
"ಎಲುಬಿಲ್ಲ ನಾಲೆಗೆಗೆ ಬಲವಿಲ್ಲ ಬಡವಂಗೆ... ತೊಲೆಗಂಬವಿಲ್ಲ ಗಗನಕ್ಕೆ ..ದೇವರಲ್ಲಿ ಕುಲಭೇದವಿಲ್ಲ ಸರ್ವಜ್ಹ್ನ""

ಮಾನ್ಯ ಪ್ರಶಾಂತ್ ಅಮೀನ್ ಇದು ಶುದ್ದ ಹಿಂದೂ ರಾಷ್ಟ್ರ ಎಂದು ಹೇಳುತ್ತಿದೀರಿ ಖಂಡಿತ ಒಪ್ಪಿಕೊಳ್ಳೋಣ, ಹಿಂದೂ ಮತದಲ್ಲಿ ಇರುವ ಬ್ರಾಹ್ಮಣ, ಕ್ಸತ್ರಿಯ, ವ್ಯಶ್ಯ , ಶೂದ್ರ, ಪಂಚಮ , ದಲಿತ , ಹರಿಜನ, ಗಿರಿಜನ, ಒಕ್ಕಲಿಗ, ಲಿಂಗಾಯತ್ , ಬಿಲ್ಲವ , ಇವರೆಲ್ಲರಲ್ಲಿ ಯಾರ ಹಿಂದೂ ರಾಷ್ಟ್ರ? ಎಂದು ವಿವರಿಸುತ್ತಿರ.

ಪರಕೀಯರು ಯಾರಲ್ಲ ? ಈ ದೇಶಕ್ಕೆ ಎಲ್ಲರೂ ಪರಕೀಯರೆ. ಆರ್ಯರು (ಬ್ರಾಹ್ಮಣರು ) ಮುಸ್ಲಿಮರಿಗಿಂತ, ಕ್ರಿಸ್ತರಿಗಿಂತ ,ಮಂಗೋಲಿಯನ್ನರಿಗಿಂತ, ಬ್ರಿಟಿಷರಿಗಿಂತ, ಸ್ವಲ್ಪ ಮುಂಚೆ ಈ ದೇಶಕ್ಕೆ ದಾಳಿ ಇಟ್ಟವರು. ಆದ ಕಾರಣ ಎಲ್ಲರೂ ಪರಕಿಯರೇ, ಮುಸ್ಲಿಮರನ್ನು ಮಾತ್ರ ಎತ್ತಿ,ಒತ್ತಿ ಹೇಳಿ ಹಿಂದೂ - ಮುಸ್ಲಿಮರಲ್ಲಿ ಒಡಕುಂಟುಮಾಡುವ ಸಂಚು ಯಾಕೆ ? <

ಇವತ್ತು ಇತಿಹಾಸವನ್ನು ಹಿಂದೂ - ಮುಸ್ಲಿಂ ಭೂತಕನ್ನಡಿಗಳ ಮೂಲಕ ಅರ್ಥೈಸುವ ಮತಾಂಧರು ನೆನಪಿಸಿಕೊಳ್ಳಬೇಕು ಶಿವಾಜಿಯ ದಂಡಿನಲ್ಲಿ ಮುಸ್ಲಿಂ ಸೈನಿಕರಿದ್ದರು. ರಣದುಲ್ಲಖಾನ್ ಎಂಬಾತ ಶಿವಾಜಿಯ ಸೇನಾನಿಗಳಲ್ಲಿ ಒಬ್ಬನಾಗಿದ್ದ. ಪ್ರಥ್ವ್ಹಿರಾಜರ ಸೇನೆಯಲ್ಲಿ ಆಫಘಾನರ ಒಂದು ಪ್ರತ್ಯೇಕ ತುಕಡಿಯೇ ಇತ್ತು. ವಿಜಯನಗರ ಅರಸರ ಪಡೆಗಳಲ್ಲಿ ನೂರಾರು ಮುಸ್ಲಿಮರಿದ್ದರು ಎಂದು ಭಾರತದ ನಿಷ್ಪಕ್ಷಪಾತಿ ಇತಿಹಾಸಕಾರ ಅಲ್ ಬೇರೋನಿ ಬರಿಯುತ್ತಾನೆ.

ಮತಾಂಧರ ಕಣ್ಣಿಗೆ ಇದ್ಯಾವುದು ಕಾಣಿಸುದಿಲ್ಲ . ಕಂಡರೂ ಕುರುಡರಂತೆ ಅವರು ವರ್ತಿಸುತ್ತಾರೆ. ಯಾಕೆಂದರೆ ಅವರ ಉದ್ದೇಶ ಬೇರೆಯೇ ಆಗಿರುತ್ತದೆ. ಪರಸ್ಪರರ ಮಧ್ಯೆ ರಕ್ತಪಾತ ಹುಟ್ಟಿಸಿ ರಾಜಕೀಯ, ಅರ್ಥಿಕ ಲಾಭ ಗಯ್ಯುದೇ ಸಂಚು ಅವರದು .

ಸ್ನೇಹಿತ ಪ್ರಶಾಂತ್ ನಾನು ನಿಮಗೆ ಒಂದು ಸರಳ ಪ್ರಶ್ನೆ ಕೇಳಿದ್ದೆ ಅಂಬೇಡ್ಕರ್ ಅವರ ಮತಾಂತರದ ಬಗ್ಗೆ ತಾವೂ ಅದಕ್ಕೆ ಉತ್ತರಿಸುವ ದೈರ್ಯ ಮಾಡಿಲ್ಲ ಅಲ್ಲವೇ ? ಉತ್ತರ ಇಲ್ಲ ಅಲ್ಲವೇ. ಸತ್ಯವನ್ನು ಮರೆಮಾಚಲು ಸಾದ್ಯವಿಲ್ಲ ಅಲ್ಲವೇ ... ಸರ್ವಜ್ಞನ ವಚನ ನಿಮಗೆ ಅರ್ಥವಾಗಬಹುದು. ಅಂದುಕೊಂಡಿದ್ದೇನೆ.

" ನೆಲವನ್ನು ಮುಗಿಲನ್ನು ಹೊಲಿವರು೦ಟೆ೦ದರವ ಹೊಲಿವರು ಹೊಲಿವರೆನಬೇಕು , ಮೂರ್ಖನಲಿ ಕಲಹ ಬೇಡೆಂದ ಸರ್ವಜ್ಹ್ನ""

(ಮಾನ್ಯ ಸಂಪಾದಕರೆ ಸರ್ವಜ್ಹ್ನ ನ ವಚನಗಳು ತ್ರಿಪದಿಗಳಾದ ಕಾರಣ ತಾವೂ ದಯಮಾಡಿ ತ್ರಿಪದಿಗಳ ರೀತಿಯಲ್ಲೇ ಪ್ರಕಟಿಸಬೇಕಾಗಿ ತಮಲ್ಲಿ ಕಳಕಳಿಯ ವಿನಂತಿ)

ಪ್ರಶಾ೦ತ್ ಅಮೀನ್, , ಮೂಡಬಿದ್ರೆ
2012-09-04
ಮಾನ್ಯರೇ,,,ಮೊದಲು ನಿಮ್ಮ ಹುಡುಗಿಯಾರನ್ನ ಅರ್ದಂಬರ್ದ ಉಡುಗೆ ಹಾಕಿ ಕೊಂಡು ರಸ್ತೆಯಾಲ್ಲಿ ಬರ್ಲಿಕೆ ಬಿಡಿ ನೋಡುವ, ಇದು ಶುದ್ದ ಹಿ೦ದು ರಾಷ್ತ್ರ ,,,ನೀವೆಲ್ಲ ಬೇರೆ ದೇಶದಿ೦ದ ವಲಸೆ ಬ೦ದವರು ,,ನಿಮಗೆ ಯಾವ ನೈತಿಕ ಹಕ್ಕು ಇಲ್ಲ ,,ಇದು ಭರತ ದೇಶ ,ಇದು ಕೃಷ್ನ ,ರಾಮರು ಆಳಿದ ದೇಶ ,ಆಗ ಯಾವ ಮುಸ್ಲ್ಮ ನನಾಗಲಿ, ಕ್ರಿಸ್ಛ್ಯನನಾಗಲಿ ಇರಲಿಲ್ಲ .ನೀವು ಹೇಗೆ ಸೃಷ್ಟಿ ಆದ್ರಿ ಅ೦ತ ಯ್ಯಕ್ಶ ಪ್ರಶ್ನೆ ಆಗಿದೆ?, ಈ ಕೀಡಾಗಳಿಂದ ದೇಶಕ್ಕೆ ಕೆಟ್ಟ ಹೆಸರು,ನಿಮಗೆ ನಾಚಿಕೆ ಆಗಬೇಕು ,ನಮ್ಮ ದೇಶದ ಉಪ್ಪು ತಿಂದು ನಮ್ಮ ದೇಶಕ್ಕೆ ೨ ಬಗೆಯುವ ನಿಮಗೆ ಹೇಸಿಗೆ ಆಗಬೇಕು
Anas, Mangalore
2012-09-01
Rajesh P, ಕೊಡಗು ರವರೆ ಮೆಚ್ಚಲೇ ಬೇಕು ನಿಮ್ಮ ಪೊಳ್ಳು ಅಜೆಂಡಾವನ್ನು , ಯಾರಾದರು ಸಂಘ ಪರಿವಾರದ ಪರವಾಗಿ ಬರೆದಲ್ಲಿ ಅವ ಮುಸಲ್ಮಾನ ಬಂಧು, ಇಲ್ಲಾಂದ್ರೆ ದೇಶ ದ್ರೋಹಿ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಯಾವನೇ ಒಬ್ಬ ನರಭಕ್ಷಕ ಅಥವಾ ಹಿಂಸೆಗೆ ವಾಲೀ ಕೊಂಡವ ನಿಜವಾದ ಮುಸಲ್ಮಾನನಾಗಲಾರ ಮತ್ತು ಅಂತವರನ್ನು ಯಾವ ನಿಜವಾದ ಮುಸಲ್ಮಾನನು ಪ್ರತಿಪಾದಿಸಲಾರ. ಆದರೆ ತಾವು ಮತ್ತು ತಮ್ಮ ಸಂಘ ಪರಿವಾರ ಯಾರನ್ನು ನಿಜವಾದ ಹಿಂದೂ, ಪಿತಾಮಹ ಅಥವಾ ಕಟ್ಟರ್ ವಾದಿ ಹಿಂದೂಗಳೆಂದು ಮಾನ್ಯ ಮಾಡುತ್ತೀರಿ..? ಇವರೇ ತಾನೇ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿ ಸಾವಿರಾರು ಮುಸ್ಲಿಮರ ಮಾರಣ ಹೋಮಕ್ಕೆ ಕಾರಣವಾದ ಮತ್ತು ಸಾಬೀತಾದ ಅಧ್ವಾನಿ, ಮುರಳಿ ಮನೋಹರ ಜೋಷಿ, ಬಾಬು ಬಜರಂಗಿ , ಮೋದಿ , ಮುತಾಲಿಕ, ಬಾಲ ಥಾಕ್ರೆ, ಅಸೀಮಾನಂದ, ಪ್ರಜ್ನ ಸಿಂಗ್ , ತೊಗಾಡಿಯ , ಪುರೋಹಿತ್ , ಜಗದೀಶ್ ಕಾರಂತ ಹಾಗು ಪ್ರಭಾಕರ್ ಭಟ್ ನಂತವರನ್ನು ತಾನೇ ಆರಿಸಿ ಕೊಂಡಿರುವುದು.. ಇನ್ನು ನಿಮ್ಮ ಪಾಕಿಸ್ತಾನ ಪ್ರೇಮ, ನೀವು ಹೇಳಿದ ಹಾಗೆ ಅಲ್ಲಾದರೂ ಶಿಕ್ಷೆ ಕೊಡುತ್ತಾರಲ್ಲ...ನಮ್ಮಲ್ಲಿ ಮೇಲೆ ಹೇಳಿದ ಭಜರಂಗಿ ಬಿಟ್ಟು ಬೇರೆ ಯಾರಿಗಾದರೂ ಶಿಕ್ಷೆ ಆಗಿದೆಯ ಅಥವಾ ನಮ್ಮ ಕಾನೂನಿಂದ ಅವರನ್ನು ಸ್ಪರ್ಶಿಸಲು ನಮ್ಮ ಪೊಲೀಸರಿಗೆ ಸಾಧ್ಯವಾಗಿದೆಯ? . ಬಂಧನದಲ್ಲಿರುವ ಪ್ರಜ್ನ ಸಿಂಗ್, ಅಸೀಮಾನಂದ ಮತ್ತು ಪುರೋಹಿತನಿಗೆ ಶಿಕ್ಷೆ ವಿಧಿಸಲು ಮೀನಾ ಮೇಷ ಎಣಿಸುತ್ತಿರುವ ನಮ್ಮ ಕಾನೂನು, ಅದೇ ಮುಸ್ಲಿಮರನ್ನು ಇಲ್ಲದ ಕೇಸಲ್ಲಿ, ಶಂಕಿತ ಹೆಸರಲ್ಲಿ ಕಠಿಣ ಶಿಕ್ಷೆ ಕೊಟ್ಟು ಹತ್ತಾರು ವರ್ಷದ ನಂತರ ಮೇಲಿನ ಭಯೋತ್ಪಾದಕರು ಮನಸು ಕರಗಿ ಒಪ್ಪಿಕೊಂಡಲ್ಲಿ ಮುಸ್ಲಿಮರನ್ನು 'ಸಾಕ್ಷಗಳ ಕೊರತೆ' ಎಂದು ಬಿಡುಗಡೆ ಮಾಡುತ್ತೆ.

ಮುತಾಲಿಕ ಎಂಬ ಭೂಪ ಮೈಸೂರು ಗಲಾಟೆ , ಪಾಕ್ ಧ್ವಜ ಪ್ರಕರಣ, ಹಣಕ್ಕಾಗಿ ಗಲಬೆ ಮತ್ತು ಆತ್ಮ ಹತ್ಯಾದಳದ ಘೋಷಣೆ ಯಲ್ಲಿ ಸಾಬೀತಾದರೂ ಬಂಧಿಸುವುದು ಬಿಡಿ, ಉಗ್ರ ಅಥವಾ ಭಯೋತ್ಪಾದಕ ಪದ ಬಳಸಲು ಭಯ ಪಡುತ್ತೇ ನಮ್ಮ ಮಾಧ್ಯಮಗಳು. ಅದೇ ಹುಬ್ಬಳ್ಳಿಯ ಹುಡುಗರನ್ನು ಬಂಧಿಸಿದಾಗಿನಿಂದ ಉಗ್ರ ಮತ್ತು ಭಯೋತ್ಪಾದಕ ಎಂದು ಸಾಬೀತು ಆಗದಿದ್ದರೂ ಹೇಳುತ್ತಿದೆ.

ಮೊದಲು ತಲೆಗೆ ಆಡರಿದ ಕೋಮು ಎಂಬ ಬೀಜವನ್ನು ಬದಿಗಿಟ್ಟು ಯೋಚನೆ ಮಾಡಿ ಬರೆಯಲು ಕಲೀಬೇಕು ರಾಜೇಶ್ ರವರೆ.

SHAMEEM, MANGALORE
2012-08-31
"ಹೆಣ್ಣಿಗೂ ಮಣ್ಣಿಗೂ ಉಣ್ಣದುರಿಯಲು ಬೇಡ. ಹೆಣ್ಣಿಂದ ಕೆಟ್ಟ ದಶಕಂಠ, ಕೌರವನು . ಮಣ್ಣಿಂದ ಕೆಡನೆ ? ಸರ್ವಜ್ಹ್ನ."

ಇಕ್ಬಲ್ ಷಾ ತಮ್ಮ ಸ್ಪಂದನಕ್ಕೆ ಧನ್ಯವಾದಗಳು. ತಾವೂ ನನ್ನ ಪ್ರತಿಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅದು ನನ್ನ ತಪ್ಪಲ್ಲ. ಮಹಿಳೆಯರ ಮೇಲಿನ ಹಲ್ಲೆಯನ್ನು ನೀವು ಸಮರ್ತ್ತಿಸಿದ್ದಿರಿ. ಅಲ್ಲಿ ಹುಡಿಗಿಯರು ಯಾವುದೇ ಡ್ರೆಸ್ನಲ್ಲಿ ಇರಲಿ ಅದನ್ನು ಕೇಳುವ ಹಕ್ಕು ನಿಮ್ಮ ಸಂಘಟನೆಗೆ ಕೊಟ್ಟವರಾರು. ಪೋಲಿಸ್ ಇಲಾಖೆ ಇತ್ತಲ್ಲವೆ. ನಮ್ಮ ಸಂವಿಧಾನದಲ್ಲಿ ಎಲ್ಲ ರೀತಿಯ ಉಡುಗೆಗಳನ್ನು ತೊಡಲು ಅವಕಾಶವಿದೆ. ಮಹಿಳೆಯರು ಯಾವ ರೀತಿಯ ಉಡುಗೆ ತೊಡಬೇಕು ಎನ್ನುದನ್ನು ನಿಮ್ಮ ಸಂಘಟನೆ ತಿರ್ಮಾನಿಸುವ ಅಗತ್ಯವಿಲ್ಲ. ನಾವು ರಚಿಸಿ ಒಪ್ಪಿಕೊಂಡ ಸಂವಿಧಾನವನ್ನು ಗೌರವಿಸಬೇಕದವ್ರು ಯಾರು? ನಾವೆ ಅಲ್ಲವೇ ?.

ಇನ್ನು ನೀವು ಪ್ರಸ್ತಾಪಿಸಿದ ಜನಸಂಖ್ಯೆ ನಿಜವಾಗಿಯೂ ನಿಮ್ಮ ಜ್ಝಾನದ ಕೊರತೆಯನ್ನು ಎತ್ತಿ ತೋರಿಸಿತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ೩೩ ಕೋಟಿ ಜನಸಂಖ್ಯೆ ಸ್ವಾತಂತ್ರ್ಯ ಬಂದ ೬೫ ವರ್ಷಗಳಲ್ಲಿ ೧೨೦ ಕೋಟಿ ಮೀರಲು ಕಾರಣವೇನು? ನೀವೋಬ್ಬ ಮುಸ್ಲಿಮರಾಗಿದ್ದು ಭಾರತೀಯ ಮುಸ್ಲಿಮರ ಜನಸಂಖ್ಯೆ ಯ ವಿವರ ತಿಳಿಯದೆ ಇದದ್ದು ಹಾಸ್ಯಾಸ್ಪದ. ಗಾಂಧೀಜಿ ಕೊಲೆಯ ಬಗ್ಗೆ ಪ್ರಸ್ತಾಪಿಸುದಾದರೆ ಆ ಕಗೊಲ್ಲೆಯ ಹಿಂದಿನ ನಿಜವಾದ ಉದ್ದೇಶವೇನಿತ್ತು ಎಂಬುದನ್ನು ತಿಳಿಯಬೇಕಾಗುತ್ತದೆ. ಆ ದುಷ್ಟ ಕಾರ್ಯವನ್ನು ಮಾಡುದಕ್ಕೆ ಘೋಡ್ಸೆಗೆ ಯಾರಿಂದ ಪ್ರೇರಣೆ ದೊರೆಯಿತು. ಅರ್ ಎಸ್ಸ್ ಎಸ್ಸ್ ಎಸ್ಸ್ ಆಗಿನ ಸರಸಂಘ ಚಾಲಕರು ಬಹಳ ಕಾಲದಿಂದ ನಡೆಸುತ್ತ ಬಂದಿದ್ದ ವಿಷಪೂರಿತ ಆಲೋಚನೆಗಳ ವ್ಯವಸ್ತಿತ ಪ್ರಚಾರದಿಂದಲೇ ಆತ ಉತ್ತೆಜಿತನಗಿದ್ದ. ಅವರು ಬರೆದಿದ್ದ "ಆಲೋಚನೆಗಳ ಗೊಂಚಲು" ಎಂಬ ಪುಸ್ತಕವನ್ನು ನೀವು ಓದಬಹುದು. ಅದರ ಪ್ರತಿಯೊಂದು ಸಾಲು , ಪ್ರತಿಯೊಂದು ಪುಟವು ಕೋಮುವಾದದ ವಿಷದಿಂದ ಹೇಗೆ ತುಂಬಿ ತುಳುಕಾಡುತಿದೆ ಎನ್ನುದನ್ನು ನೀವು ಕಾಣಬಹುದು.

ನಾನು ಹಿಂದೂ ದ್ವೇಷಿ ಎಂದು ಬರೆದಿದ್ದೀರಿ ಅದು ನೀವು ನನ್ನ ಬರಹವನ್ನು ಮಲ್ಲೆ ಕಣ್ಣಿನಿಂದ ಓದಿದರ ಫಲವದು. ದೇಶ ಯಾವ ಜಾತಿಯ ಗುತ್ತಿಗೆಯು ಅಲ್ಲ. ಬರಿಯ ಜಾತಿ ನಿಷ್ಟೆಯನ್ನೇ ರಾಷ್ಟ್ರನಿಷ್ಟೆಯಾಗಿ ಪ್ರಚಾರ ಮಾಡಲಗುತಿದ್ದೆ.

ನೀವು ಇತಿಹಾಸವನ್ನು ನಂಬುದಿಲ್ಲ ಎಂದು ಹೇಳಿದ್ದಿರಿ. "ಇತಿಹಾಸವನ್ನು ಮರೆತವರು ಇತಿಹಾಸವನ್ನು ಸ್ರಷ್ಟಿಸಲೂ ಆಗುದಿಲ್ಲ" ನಿಮ್ಮ ಪ್ರತಿಕ್ರಿಯೆ ಓದಿದಾಗ ನನಗೆ ಸರ್ವಜ್ಹ್ನ ನ ವಚನ ವೊಂದು ನೆನಪಿಗೆ ಬಂತು ಅದನ್ನು ಬರಯುತ್ತ ನನ್ನ ಬರಹ ಕೊನೆಗೊಳಿಸುತ್ತೇನೆ.

"ಹೊತ್ತಿಗೊದಗದ ಮಾತು ಹತ್ತು ಸಾಸಿರ ವ್ಯರ್ಥ; ಕತ್ತೆ ಕೂಗಿದೆರೆ ಫಲವು೦ಟೆ? ಬರಿಮಾತು; ಕತ್ತೆಗು ಕಷ್ಟ ಸರ್ವಜ್ಹ್ನ"

ಜೈ ಹಿಂದ್ ಜೈ ಕರ್ನಾಟಕ್

Rajesh P, Kodagu
2012-08-30
ಮುಸಲ್ಮಾನ ಬಂಧು ಒಬ್ಬರು ನಿಜಸಂಗತಿಯನ್ನು ಇಲ್ಲಿ ಪ್ರತಿಕ್ರಿಯೆಯಾಗಿ ಬರೆದುದಕ್ಕೆ ಅವರ ವಿರುದ್ದ ಪ್ರತಿಪ್ರಿಯೆಗಳ ಮಹಾಪೂರ.ನಿಜ ಖಂಡಿತವಾಗಿ ನಿಜ. 5 ಸಲ ನಮಾಜು ಮಾಡುವವರು ಮಾತ್ರ ಕಟ್ಟಾ ಮುಸಲ್ಮಾನರಲ್ಲ. ಯಾರು ಹಿಂದೂ ಧರ್ಮವನ್ನು ವಿರೋದಿಸುತ್ತಾರೋ, ಯಾರು ಹಿಂದೂಗಳ ಮೇಲೆ ವಿಷಕಾರುತ್ತಾರೋ, ಯಾರು ನಮ್ಮದೇ ಆಗಿರುವ ದೇಶದ ಮೇಲೆ ಹಗೆ ಸಾಧಿಸುತ್ತ ಬೇರೆ ದೇಶಕ್ಕೆ ಹೋಗಿ ಟ್ರೈನಿಂಗ್ ತೆಗೆದುಕೊಂಡು ಬಂದು ದೇಶದ ಬರ್ಬಾದಿಗೆ ಹೋರಾಡುತ್ತಾರೋ ಅವರು ಮಾತ್ರ ಕಟ್ಟಾ ಮುಸ್ಲಿಮರು ಅಲ್ಲವೇ ಸಹೋದರರೆ? ಇದೇ ತರಹದ ಯಾವುದೇ ದೇಶವಿರೋಧಿ ಕ್ರತ್ಯ ನಮ್ಮ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಮಾಡಿದ್ದರೆ ಆತ ಅಲ್ಲಿನ ಪ್ರಜೆ ಆತ ಮುಸ್ಲಿಮನೇ ಆಗಿದ್ದರೂ ಅದೇ ತಕ್ಷಣ ಆತನ ಕೊರಳಿಗೆ ಉರುಳು ಖಂಡಿತ. ಆದರೆ ನಮ್ಮ ದೇಶದಲ್ಲಿ ನಾವು ದೇಶವಾಸಿಗಳ ದುರ್ಧೈವ... ಇಲ್ಲಿ ಯಾರು ಏನು ಮಾಡಿದರೂ, ವ್ಯಕ್ತಿಗತವಾಗಲೀ ದೇಶದ ಗೌರವದ ಸ್ಮಾರಕಕ್ಕಾಗಲೀ, ದೇಶದ ಮುಕುಟದಂತಿರುವ ಪಾರ್ಲಿಮೆಂಟಿಗೆ ಆಗಲೀ ಏನು ಮಾಡಿದರೂ ಆತನಿಗೆ ಏನೂ ಆಗುವುದಿಲ್ಲ. ಏಕೆಂದರೆ ನಪುಂಸಕ ರಾಜಕಾರಣಿಗಳು ದೇಶವನ್ನು ಆಳುತ್ತಿದ್ದಾರೆ.
Kanakambari, Dubai
2012-08-30
ಇಕ್ಬಲ್ ಷಾ ನ ಸ್ಪಂದನಕ್ಕೆ ದಿಕ್ಕಾರವಿರಲಿ.
Anas, Mangalore
2012-08-30
ಇಕ್ಬಾಲ್ ಷಾ ಉಳ್ಳಾಲ, ಜೆದ್ದ ಎಂಬ ಭೂಪನೆ ತನಗೆ ಯಾರು ಹೇಳಿದ್ದು 5 ಸಲ ನಮಾಜು ಮಾಡುವವ ಮಾತ್ರ ಕಟ್ಟಾ ಮುಸಲ್ಮಾನನಾಗುತ್ತಾನಂತ? ಈ ಹಾಸ್ಯದಲ್ಲಿಯೇ ನಿನ್ನ ಜಾತಕ ಗೊತ್ತಾಗುತ್ತೆ. ಬೇರೆಯವರ ಸ್ವಾತಂತ್ರ್ಯಕ್ಕೆ ಕೈ ಹಾಕುವ ಮತ್ತು ಮತ್ಸರದಿಂದ ಕಸಿದು ಕೊಳ್ಳುವವರನ್ನು ಪ್ರತಿಪಾದಿಸುವಾಗಲೇ ಗೊತ್ತಾಗಿತ್ತು ನಿನ್ನ ಕಟ್ಟರ್ ವಾದಿ ಮತ್ತು ನೀನು ಎಂತವನೆಂದು. ಬೇರೆಲ್ಲ ಉದಾಹರಣೆಗಳು ಸಲೀಸಾಗಿ ನಿನ್ನ ಬರಹದಲ್ಲಿ ಕಾಣುತ್ತೆ, ಅದೇ ಮೊನ್ನೆ ಸಂಸ್ಕೃತಿ, ನಿಮ್ಮ ಧರ್ಮ ಯುದ್ಧ ಎಂದು ಹೋರಾಡುವ ಪಕ್ಷದವರೇ ಹೈ ಟೆಕ್ ವೇಶ್ಯಾವಾಟಿಕೆಯಲ್ಲಿ, ದೇಶ ಪ್ರೇಮದ ಪ್ರಮಾಣ ಪತ್ರ ಸಿಕ್ಕಿದ ಎಲ್ಲಾ ನಾಯಕರಿಗೆ ರಾಖಿ ಕಟ್ಟಿದ ಅಲ್ಪಸಂಖ್ಯಾತ ಮಹಿಳಾಮಣಿಯನ್ನು ಈ ದಂಧೆಗೆ ಸೆಳೆದುಕೊಂಡು ಮಾಂಸ ದಂಧೆ ನಿನಗೆ ಮರೆತು ಹೋದಂತಿದೆ... ಇಂತಹವರೊಂದಿಗೆ ಸ್ವಲ್ಪ ಕೈ ಜೋಡಿಸಿದ್ದಕೆ ಈ ಪರಿಯಾಗಿದೆ, ಇನ್ನು ನಿಮ್ಮ ಪ್ರಕಾರ ಪೂರ್ಣ ಕೈ ಜೋಡಿಸಿದ್ದಲ್ಲಿ ಏನಾಗಬಹುದು? ನಿಮ್ಮ ಉಪದೇಶವನ್ನು ನಿಮ್ಮ ಅಕ್ಕ ತಂಗಿಯರಿಗೆ ಮೊದಲು ಕೊಡಿ.. ನಂತರ ಬೇರೆಯವರನ್ನು ಬಲಿ ತೆಗೆಯಲು ನೋಡಿ...
ಇಕ್ಬಾಲ್ ಷಾ ಉಳ್ಳಾಲ, ಜೆದ್ದ-ಸೌದಿ ಅರೇಬಿಯ
2012-08-30
ಶಮೀಮ್ ಆವರೆ ನಿಮ್ಮ ಕುಚೇಷ್ಟ ಬುದ್ದಿಗೆ ಮೆಚ್ಚಲೇ ಬೇಕು.. ಅಪ್ಪ ಹಾಕಿದ ಆಲದಮರ ಎಂದು ಅದಕ್ಕೆ ನೀನು ಬಿಗಿಯುವುಧು ಸೂಕ್ತವೇ ??? ನಿಮ್ಮ ಪ್ರಕಾರ ಒಬ್ಬ ಮುಸ್ಲಿಂ ಹಿಂಧುಗಳನ್ನು ದ್ವೆಸಿಯಾದರೆ ಎಲ್ಲರೂ ದ್ವೇಸಿಸಬೇಕು ಎನ್ನುವುದು ತಮ್ಮ ವಾದವೇ ???

ನನ್ನೊಬ್ಬ ದಿನಕ್ಕೆ ೫ ಸಲ ನಮಾಜ್ ಮಾಡುವ ಕಟ್ಟಾ ಮುಸಲ್ಮಾನ ನಿಮಗೆ ಡೌಟ್ ಇದ್ದರೆ ನಿನ್ನ ಬರ್ತ್ ಸರ್ಟಿಫಿಕೇಟ್ ಕೊಡೋಣ ... ಇನ್ನು ನೀವು ಪ್ರಸ್ತಾಪಿಸಿಧ ಬಹುಸಂಖ್ಯತ ಜನರು ... ಶಮೀಮ್ ಅವರೇ ಇಂದಿನ ದಿನಕ್ಕೆ ಹಿಂದೂಗಳ ಸಂಕೆಗಿಂತ ಕಾಣಿಸ್ತ ಪಕ್ಷ ೧.೫% ಜಾಸ್ತಿ ನಮ್ಮವರು ಭಾರತದಲ್ಲಿಲ್ಲವೇ ? ? ಮನೆಗೆ ಒಂದೇ ಮಗು ಇರುವ ಲಕ್ಷ ಕುಟುಂಬಗಳು ಹಿಂದುಗಳಲ್ಲಿವೆ. ಆದರೆ ನಮ್ಮದರಲ್ಲಿ ದೇವರು ಕೊಟ್ಟ ಬಿಕ್ಷೆ ಎಂದು ಮನೆಗಳಲ್ಲಿ ಹುಟ್ಟುವ ಮಕ್ಕಳ ಸಾಮಾನ್ಯ ಲೆಕ್ಕ ನಮಗಿದೆಯೇ?? ಹೀಗಿರುವಾಗ ಹಿಂದುಗಳನ್ನು ಬಹುಸಂಖ್ಯಾತರೆಂದು ಹೇಳಲು ಸಾದ್ಯವೇ??

ಇನ್ನು ನೀವು ಹೇಳಿಧ ಗಾಂಧೀಜಿ .. ಅವರು ಮಾಡಿದ್ದಾದರೂ ಏನು .. ಅಣ್ಣ ತಮ್ಮಂದಿರಂತೆ ಬದುಕುತಿದ್ದ ಹಿಂದೂ ಮುಸ್ಲಿಮರಿಗೆ ಭಾರತ ಮತ್ತು ಪಾಕಿಸ್ತಾನ್ ಎಂಬ ಹಣೆ ಪಟ್ಟಿ ಕಟ್ಟಿದ್ದು ಮಾಡಿಧ ಸತ್ಕರ್ಮವೇ ?? ಇದು ನೋಮ್ಮೊಳಗಿನ ದ್ವೇಷಕ್ಕೆ ಒಂದು ಕಾರಣ ಅಲ್ಲವೇ ???

ನನ್ನ ಪ್ರಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ/ ಉಳಿಧ ಕೆಲವು ಹಿಂಧು ಸಂಗಟನೆಗಳು ಮುಸ್ಲಿಂ ವಿರೋಧಿಯೇ !! ಹಾಗೆಂದು ನಮ್ಮ ಕೆಲವು ( ಎಲ್ಲ ಸಂಗಟನೆಗಳು ) ಅವರನ್ನು ಪ್ರೀತಿಸುತಿದೆಯೇ ?? ಮೊದಲು ನಮ್ಮನ್ನು ನಾವು ತಿದ್ದಿಕೊಲ್ಲೋದು ಸೂಕ್ತ ಅಲ್ಲವೇ ??? ನನ್ನ ಮಾತುಗಳಿಂದ ನಮ್ಮ ಬಂದುಗಳಿಗೆ ನೂವಗಿರಬಹುದು ಆಧುರು ಇದು ನಿಜವಧ ಮಾತಲ್ಲವೇ ???

ಇನ್ನು ಇತಿಹಾಸ .. ಆಧಾರಬಗ್ಗೆ ಮಾತಾಡುವುದು ನನ್ಗಿಸ್ತವಿಲ್ಲದ ಮಾತು ಯಾಕಂದರೆ ಅದು ಸಮಯ ಕೊಲ್ಲುವುದಲ್ಲಧೆ ಬೇರೆ ಏನನ್ನು ಮಾಡದು ... ಮಹಿಳೆಯರೇ ಮೇಲೆ ಹಲ್ಲೆ ಮಾಡಿದ್ದೂ ಕಂಡನೀಯ .. ಆಧರೆ ಅದೇ ಮಹಿಳಾ ಮಣಿಗಳು ಮಾಡಿದ್ದೂ ಸರಿ ಎನ್ನುವುಧು ನಿಮ್ಮ ವಾದವೇ ??

ಇನ್ನು ಕುಡಿತ ಮಾತೂ ದುಶ್ಚಟಗಳ ಬಗ್ಗೆ ಆಧರೆ .. ಈಗಿನ ನಮ್ಮ ಯುವ ಪೀಳಿಗೆ ಇದವುದರಲ್ಲಿಯೂ ಹಿಂದುಗಲಿಗಿಂತ ಹಿಂದೆ ಬಿದ್ದಿಲ್ಲ .. ಎಲ್ಲ ಕೆಲಸಗಳಲ್ಲಿ ಅವರಿಲ್ಲವೆ ??? ಭಾರತದ ಹುತಾತ್ಮ ಸೈನಿಕರ ಸ್ಮಾರಕಗಳನ್ನು ಪುಡಿಮಾಡಲಿಲ್ಲವೇ ?? ಕನಕಪುರ ಬೆಂಗಳೂರಿನಲ್ಲಿ ಮಾರ್ಗ ಮದ್ಯದಲ್ಲಿ ೨ ವಿದ್ಯಾರ್ತಿನಿನ್ಯರನ್ನು ಪೀಡಿಸಿದ್ದು ಇನ್ನು ಹಸಿಯಾಗಿಯೇ ಇದೆ ..

ಮಹಿಳೆಯರನ್ನು ಮರ್ದಿಸಿದ್ದು ತಪ್ಪೇ ... ಮಹಿಳೆಯರು ಕೆಟ್ಟ ಉಡುಗೆ ತೊಟ್ಟು ಯಾರೂ ಇಲ್ಲಧ ಆ ಕೊಳಕು ಜಾಗದಲ್ಲಿ ಇದ್ಧುಧು ಸರಿಯೇ .... ಪುಬ್ ಬಾರ್ ಗಳಲ್ಲಿ ಕುಳಿತು ಪ್ರಚೋದನಕಾರಿ ಕೆಲಸಕ್ಕೆ ಈ ಮಹಿಳೆಯರು ಸಹಾಯ ಮಾಡುವುಧು ನಮ್ಮ ಸಂಸ್ಕ್ರ್ತಿಯೇ ??? ನಮ್ಮ ಪಂಗಡ ಮಹಿಳೆಯರು ಈ ಕೆಲಸಕ್ಕೆ ಇಳಿದರೆ ನಾವೇನು ಮಾಡ ಬೇಕಾಗ ಬಹುದು ಎನ್ನುವುದನ್ನು ನಾವೂ ಚಿಂತಿಸ ಬೇಡವೇ ????

SHAMEEM, MANGALORE
2012-08-30
ಇಕ್ಬಾಲ್ ಷಾ ಉಳ್ಳಾಲ . ಮೊದಲಿಗೆ ನಾನು ತಿಳಿಸುದೆನೆಂದರೆ ತಾವೂ ಇಕ್ಬಾಲ್ ಷಾ ಅಲ್ಲ ಕೇವಲ ಗಲ್ಫ್ ಕನ್ನಡಿಗದಲ್ಲಿ ಪ್ರತಿಕ್ರಿಯೆ ಬರೆಯುದ್ದಕ್ಕಾಗಿ ಮತಾಂತರ ಆಗಿದ್ದೀರಿ ತುಂಬಾ ಸಂತೋಷ. ಅದಿರಲಿ

ಹಿಂದೂಗಳೊಂದಿಗೆ ಕೈ ಜೋಡಿಸಬೇಕೆಂದು ತಾವೂ ಉಪದೇಶ ಮಾಡಿದ್ದಿರಿ. ನಮ್ಮ ದೇಶದ ರಕ್ಷಣೆ, ಒಗಟ್ಟು ಮತ್ತು ದೇಶಕ್ಕೆ ಬಲವನ್ನು ತಂದು ಕೊಡಲು ಹಿಂದೂ ಮುಸ್ಲಿಮರು ಕ್ರೈಸ್ತರು ಸಿಕ್ಕರೂ ಜೈನರೂ ಬುದ್ದರು ಎಲ್ಲರು ಕೈ ಜೋಡಿಸಬೇಕಾಗಿದೆ.

ನಮ್ಮ ದೇಶ ಇವತ್ತಿಗೂ ಜಾತ್ಯತೀತ ರಾಷ್ಟ್ರವಾಗಿ ಉಳಿದಿದ್ದರೆ ಅದು ಬಹುಸಂಖ್ಯತ ಹಿಂದುಗಳಿಂದ ಎನ್ನುದು ಸರ್ವವಿದಿತ. ಹಿಂದುಗಳಿಗೂ ಸಂಘಪರಿವಾರಕ್ಕು ಅಜಗಜಾಂತರವಿದೆ. ನಮ್ಮ ದೇಶದಲ್ಲಿ ಕೋಮುವಾದ ಹುಟ್ಟಿರುದು ರಾಮಾಯಣ ಮಹಾಬಾರತ ಮತ್ತು ಗೀತೆ ಗಳಿಂದ ಅಲ್ಲ ಬದಲಾಗಿ ಆರ್ ಎಸ್ಸ್ ಎಸ್ಸ್ ಎಸ್ಸ್ ನವರ ಭಯಾನಕ ಅಜೆಂಡಾ ಗಳಿಂದ. ಗಾಂಧಿಜಿ ಯವರನ್ನು ಗುಂಡಿಟ್ಟು ಕೊಂದ ಬಳಿಕ ನಮ್ಮ ಕೊವಿಗಳಿಗೆ ಒಂದಿಷ್ಟು ಬಿಡುವು ಸಿಕ್ಕಿಲ್ಲ.

ಮಹಾಬಾರತದಲ್ಲಿ ದುಶ್ಯಾಸನ ಪಾಂಚಾಲಿಯ ಸೀರೆಯನ್ನು ಎಳೆದ್ದಿದ್ದನಂತೆ. ಆದರೆ ಸೀರೆ ಹರಿದಿರಲಿಲ್ಲ. ಆದರೆ ಆಕೆಯ ಆಭರಣ ಕದಿಯಲು ಇಲ್ಲ. ಮೇಲೆ ವರದಿಯಲ್ಲಿ ಕಾಣುವ ಕಿರಾತಕರು ದುಶ್ಯಾಸನನನ್ನು ಮಿರಿಸಿದ್ದಾರೆ. ಅಲ್ಲವೇ ಇಕ್ಭಲ್ ಸಾಹೇಬರೇ ? ಇಂತವರೊಂದಿಗ್ಗೆ ಕೈ ಜೋಡಿಸಬೇಕೆ ?? ಇವರು ಮದ್ಯಪಾನ ಮಾಡಿ ಯಾರದ್ದೋ ಮನೆ, ಪಬ್ ಗಳಿಗೆ ನುಗ್ಗಿ ಮಹಿಳೆಯರಿಗೆ ಹೊಡೆಯುತ್ತಾರೆ ಅವರ ಬಟ್ಟೆ ಹರಿಯುತ್ತಾರೆ ಅತ್ಯಾಚಾರ ಮಾಡುತ್ತಾರೆ ಇವರೊಂದಿಗೆ ನಾವು ಕೈ ಜೋಡಿಸಬೇಕೆ ? ಮಹಿಳೆಯರ ವಸ್ತ್ರಾಪಹರಣ ಮಾಡುವ ಸಂಸ್ಕ್ರತಿಯವರೊಡನೆ ಕೈ ಜೋಡಿಸಬೇಕೆ ? ಇಕ್ಭಲ್ ಸಾಹೇಬರೇ ಉತ್ತರಿಸುವಿರಾ ??????

ಇಕ್ಬಾಲ್ ಷಾ ಉಳ್ಳಾಲ, ಜೆದ್ದ-ಸೌದಿ ಅರೇಬಿಯ
2012-08-29
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ????? ಸಂಸ್ಕ್ರತಿಯನ್ನು ಹಾಳುಮಾಡಲು ಹೋರಾಟ ದೂರ್ಥರಿಗೆ ಸರಿಯಾದ ಶಿಕ್ಷೆ ಕೊಟ್ಟ ಹಿಂಧೂ ಬಂಧುಗಳಿಗೆ ಹಾರ್ದಿಕ ಅಬಿನಂದನೆಗಳು ..

ಕೊಳೆತ ಮೊಟ್ಟೆ ಯಾವತ್ಹಿಗೂ ಧುರ್ನಾಥ ಬೀರುವುಧು ಸಹಜ .... ಕೊಳೆತ ಮೊಟ್ಟೆ ಯಾ ದುರ್ವಾಸನೆಯನ್ನಧರೂ ಸಹಿಸ ಬಹುಧು.. ಆದರೆ ಸಮಾಜದಲ್ಲಿ ಎಲ್ಲರ ನಡುವೆ ಒಳ್ಳೆಯವರ ಮುಖವಾದ ದರಿಸಿ ಬದುಕುವ ದುರುಳರನ್ನು ತಿದ್ದಲು ಸಾದ್ಯವಿಲ್ಲ ... ನಾಯಿ ಬಾಲದ ಜಾತಿಯವರು ...

ಅಣ್ಣ ತಮ್ಮಂದಿರೆ ಧರ್ಮ ಯುದ್ದಲ್ಲಿ ಅಡೆತಡೆಗಳು ಸಹಜ ... ಸೋಲುಗಳನ್ನು ಮುಂದಿನ ನಿಮ್ಮ ಯುಧಕ್ಕೆ ಆಯುಧವಾಗಿ ತೆಗೆದು ಮುನ್ನಡೆಯೋಣ ... ಯಾವುಧೆ ಸಂಸ್ಕೃತಿಯನ್ನು ಹಾಳುಮಾಡುವ ಕೆಟ್ಟ ಹುಳುಗಳನ್ನು ಇಲ್ಲಿನ್ಧ ಕಿತ್ತು ಹಾಕೋಣ ...

ನನ್ನ ಪ್ರೀತಿಯ ಮುಸಲ್ಮಾನ್ ಬಂದುಗಳೇ ... ಈ ಪರಿಸ್ತಿತಿ ನಮ್ಮ ಸಂಸ್ಕ್ರತಿಯನ್ನು ಹಾಳುಮಾಡುವ ದಿನ ದೂರ ಇಲ್ಲ ... ದಯವಿಟ್ಟು ಈಗಲೇ ಮುನ್ನೆಚರಿಕೆ ತೆಗೆದುಕೊಂಡು ಹಿಂಧು ಭಂದುಗಳೊಂದಿಗೆ ಕೈಜೋಡಿಸಿ .. ಈ ಅತ್ಯಾಚಾರವನ್ನು ತಡೆಯೋಣ ....

ದೀರರೆ ನಿಮ್ಮ ವಿರುದ್ಧವಾಗಿ ಬಂದ ಈ ತೀರ್ಪಿನಿಂದ ದ್ರಿತಿಗೆಡದೆ ಮುಂದುವರಿಯೋಣ .. ಇದರಿಂದ ಪಾಠ ಕಲಿತ ಬಹಳಷ್ಟು ತಂದೆ ತಾಯಿಯರ / ವಿದ್ಯಾರ್ಥಿಗಲ ಆಶಿರ್ವಾದ ನಿಮಗಿದೆ..

RAMSH NAIK, MANGLORE
2012-08-29
ಆಪ್ಪ ಅಮ್ಮ ಇಲ್ಲದ ಕಾಮುಕರು ಇವರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿ ಒ೦ದೇ ದಿವಸದಲ್ಲಿ ಚಟ್ಟ ಕಟ್ಟಿ ಬಿಡುತ್ತಾರೆ
salam, mangalore
2012-08-29
ತಮಾಮ್ ಗವಾಹೊಂಕೆ ಬಯಾನಾತ್ ಸುನ್ನೇಕೆ ಬಾದ್ ಅದಾಲತ್ ಇಸ್ ನತೀಜೆಪರ್ ಪಹುಂಚಿ ಹೈ.... ಕಿ, ಕಾರುಗಳು ನಿರಪರಾದಿಗಳಾಗಿವೆ. ಇನ್ನು ಮುಂದಿನ ಕಾರು/ಬಾರು ಚಿಕ್ಕ ಬ್ರೇಕ್ನ ನಂತರ. "ಎಲೆ ಮುಳ್ಳಿಗೆ ಬಿದ್ದರೂ ಮುಳ್ಳು ಎಲೆಮೇಲೆ ಬಿದ್ದರೂ ನೋವು ಯಾರಿಗಯ್ಯಾ".. ?
ರಫೀಕ್ ದಲ್ಕಾಜೆ, ಕೋಲ್ಪೆ
2012-08-29
ನ್ಯಾಯಾಲಯದಿಂದ ಬಹಳ ಅಪರೂಪದ ತೀರ್ಪು ಬಂದಿದೆ ಪ್ರಾಯಶಃ ಮಂಗಳೂರು ಜನತೆಗೆ ಸಂತಸ ತಂದಿದೆ ಎಂದು ಭಾವಿಸುತ್ತೇನೆ, ಇದು ಉತ್ತಮ ಬೆಳವಣಿಗೆ ತೀರ್ಪು ನೀಡಿದ ನ್ಯಾಯಾದೀಶರಿಗೆ ಅಭಿನಂದನೆಗಳು. ಏನಿದ್ದರು ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾರಿಗೂ ಕಠಿಣ ಶಿಕ್ಷೆಯ ಆದೇಶ ಬರುವ ವರೇಗೆ ಕಾದು ನೋಡೋಣ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri