ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಶ್ರೀನಿವಾಸ ಜೋಕಟ್ಟೆ ಅವರ ಸ್ಫಟಿಕ ಶಲಾಕೆಯಂತೆ ಮತ್ತು ಭ್ರಾಮಕ ಜಗತ್ತು ಕೃತಿಗಳ ಬಿಡುಗಡೆ

ಮುಂಬಯಿ: ನಗರದ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಸ್ಫಟಿಕ ಶಲಾಕೆಯಂತೆ (ಸಂದರ್ಶನಗಳು) ಹಾಗೂ ಭ್ರಾಮಕ ಜಗತ್ತು (ಲೇಖನಗಳ ಸಂಗ್ರಹ) ನಾಮಾಂಕಿತ ಎರಡು ಕೃತಿಗಳು ಲೋಕಾರ್ಪಣೆಗೊಂಡವು.


ಕಳೆದ ಶನಿವಾರ ಸಂಜೆ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜೋಕಟ್ಟೆ ಅವರ ಶ್ರೀನಿವಾಸ ಪುಸ್ತಕ ಪ್ರಕಾಶನ ಬೆಂಗಳೂರು ಪ್ರಕಾಶಿತ ಹದಿನೈದನೇ ಕೃತಿ ‘ಸ್ಫಟಿಕ ಶಲಾಕೆಯಂತೆ’ ಮತ್ತು ಶ್ರೀರಾಮ ಪ್ರಕಾಶನ ಮಂಡ್ಯ ಪ್ರಕಾಶಿತ ಹದಿನಾರನೇ ಕೃತಿ ‘ಭ್ರಾಮಕ ಜಗತ್ತು’ ಇವೆರಡು ಕೃತಿಗಳನ್ನು ಮುಖ್ಯ ಅತಿಥಿಯಾಗಿ ಉಪಸ್ಥಿತ ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಎಂ.ಜಿ.ಕರ್ಕೇರ ಅವರು ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಡಾ| ಜಿ.ಡಿ.ಜೋಶಿ  ವಹಿಸಿದ್ದರು.




ಎಂ.ಜಿ.ಕರ್ಕೇರ ಮಾತನಾಡಿ “ ಎಲ್ಲರೂ ಸಾಹಿತಿಯಾಗಲು ಸಾಧ್ಯವಿಲ್ಲ. ನಾನು ಸಾಹಿತಿ ಅಲ್ಲದಿದ್ದರೂ ಸಾಹಿತ್ಯಾಭಿಮಾನಿ. ಸಾಹಿತ್ಯಾಸಕ್ತರಾದ ನಮಗೆ  ಇಂತಹ ಅವಕಾಶಗಳು ಸಂತಸಮಯವಾಗಿದೆ. ಬಹುಸಂಖ್ಯಾತ ಸಾಹಿತಿಗಳು ಶ್ರೀಮಂತರು ಅಲ್ಲದಿದ್ದರೂ ಅವರು ಹೃದಯವಂತರು ಆಗಿ ಸಮಾಜವನ್ನು ಪ್ರತಿನಿಧಿಸುತ್ತಾರೆ. ಪ್ರಸಕ್ತ ಜಾಗತೀಕರಣದ ಈ ಸಮಯದಲ್ಲಿ ಸಾಹಿತ್ಯದ ಅಭಿರುಚಿ  ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರವಾದ ಸ್ಥಾನವಿದೆ. ಇದಕ್ಕೆ ಸಾಕ್ಷಿಯೇ ಕನ್ನಡ ಸಾಹಿತ್ಯ  ಕ್ಷೇತ್ರಕ್ಕೆ ಬಹುತೇಕ  ಜಾನಪೀಠ ಪ್ರಶಸ್ತಿಗಳ ಸಮ್ಮಾನ.  ಆದುದರಿಂದ ಸಾಹಿತ್ಯಾಭಿಮಾನಿಗಳಾದ ನಾವು ಇಂತಹ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು” ಎಂದರು


“ಸಾಹಿತ್ಯಾಭಿಮಾನಿಗಳ ಪ್ರೋತ್ಸಾಹವೇ ಇಷೊಂದು ಕೃತಿಗಳ ಲೋಕಾರ್ಪಣೆಗೆ ಪ್ರೇರಣೆ ಆಗಿದೆ. ಇದು ಕನ್ನಡಾಂಭೆಯ ಸೇವೆಗೆ ಅವಕಾಶವಾಗಿದೆ” ಎಂದ ಕೃತಿಕಾರ ಜೋಕಟ್ಟೆ ನುಡಿದರು


“ಪತ್ರಕರ್ತರೋರ್ವರು ಬಿಡುವಿಲ್ಲದ ಸಮಯದ ಮಧ್ಯೆಯೂ ಬರವಣಿಗೆಗಳನ್ನು ಜೋಡಿಸಿ ಕೃತಿಗಳನ್ನು ಪ್ರಕಾಶಿಸುತ್ತಿರುವುದು ಅಭಿನಂದನೀಯ. ಜೋಕಟ್ಟೆ ಓರ್ವ ಸರಳ ಸಜ್ಜನಿಕೆಯ ಪತ್ರಕರ್ತರಾಗಿ ತೆರೆಯಮರೆಯಲ್ಲಿದ್ದೇ ಇಷ್ಟೊಂದು ಕೃತಿಗಳನ್ನು ಹೊರತರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ” ಎಂದ ಡಾ| ಜಿ.ಡಿ.ಜೋಶಿ ತಿಳಿಸಿದರು.  



ಐ‌ಐಟಿಸಿ ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಲ್, ಯುವ ನೇತಾರ ರವೀಂದ್ರ ಸುವರ್ಣ ಘಾಟ್ಕೋಪರ್, ಬಿ.ಎಸ್ ಕುರ್ಕಾಲ್, ಪಿ.ಕೆ ಸಾಲ್ಯಾನ್, ಹೆಚ್.ಬಿ.ಎಲ್ ರಾವ್, ಎಸ್.ಎನ್ ಉಡುಪ, ಮೋಹನ್ ಮಾರ್ನಾಡ್ ಮುಂತಾದ ಅನೇಕ ಗಣ್ಯರು ಹಾಜರಿದ್ದು  ಕೃತಿಕಾರ ಶ್ರೀನಿವಾಸ ಜೋಕಟ್ಟೆ ಅವರನ್ನು ಅಭಿನಂದಿಸಿದರು.







ಸಂಘದ ಉಪಾಧ್ಯಕ್ಷ ಬಿ.ಜಿ ನಾಯಕ್ ವೇದಿಕೆಯಲ್ಲಿ ಅಸೀನರಾಗಿದ್ದು, ಅತಿಥಿಗಳು ಶ್ರೀನಿವಾಸ ಜೋಕಟ್ಟೆ ಮತ್ತು ಶ್ರೀಮತಿ ಜಯಲಕ್ಷಿ      ಶ್ರೀನಿವಾಸ್ ದಂಪತಿಯನ್ನು ಗೌರವಿಸಿದರು. ಕತೆಗಾರ ರಾಜೀವ ನಾರಯಣ ನಾಯಕ್ ಮತ್ತು ರಂಗನಟ ಅವಿನಾಶ್ ಕಾಮತ್ ಅವರು ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಕರ್ನಾಟಕ ಸಂಘದ ಗೌ| ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಡಾ| ಭರತ್‌ಕುಮಾರ್ ಪೊಲಿಪು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೋನ್ಸ್ ಬಂಟ್ಟಾಳ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-28

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri