ಸೋಮವಾರ, 23-09-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ

ಮೂಡಬಿದಿರೆ:'ಮಕ್ಕಳ ಪುಸ್ತಕಗಳು ಸತ್ವಭರಿತವಾಗಿರುವಷ್ಟೇ ರಂಗುರಂಗಾಗಿಯೂ ಇರಬೇಕು; ಅಗ್ಗದ ದರದಲ್ಲಿ ಮಕ್ಕಳ ಕೈಸೇರಬೇಕು.ಹಾಗಾಗಬೇಕಾದರೆ ದೊಡ್ಡ ದೊಡ್ಡ ಪ್ರಕಾಶಕರು ಮನಸ್ಸು ಮಾಡಬೇಕು. ಬಹು ಭಾಷೆಗಳಲ್ಲಿ ಕೃತಿ ಪ್ರಕಟವಾಗುವಂತಾಗಬೇಕು.

ಪ್ರಸಿದ್ಧ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟ ಅವರ ಅಭಿಮತವಿದು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಾಲಿನ 'ಬಾಲಸಾಹಿತ್ಯ ಪುರಸ್ಕಾರ'ಕ್ಕೆ ಆಯ್ಕೆಯಾಗಿರುವ 82ರ ಹರೆಯದ ಪಳಕಳ ಸೀತಾರಾಮ ಭಟ್ಟರನ್ನು ಪುತ್ತಿಗೆ ಮಿತ್ತಬೈಲಿನ ಪಳಕಳದ ಸ್ವಗೃಹದಲ್ಲಿ 'ಉದಯವಾಣಿ' ಪ್ರತಿನಿಧಿ ಮಾತನಾಡಿಸಿದಾಗ, ಅವರು 'ಮಕ್ಕಳ ಪುಸ್ತಕವನ್ನು ಸಾಹಿತಿ ಖಾಸಗಿಯಾಗಿ ಪ್ರಕಟಿಸುವಾಗ ಕಡಿಮೆ ದರದಲ್ಲಿ ಹೊರತರಲು ಸಾಧ್ಯವಿಲ್ಲವಲ್ಲ' ಎಂದರು.

ಪೋಷಕರು, ಶಿಕ್ಷಕರಿಗೆ ಬೇಡವಾಗಿದೆ

ಶಿಕ್ಷಣ ಆರ್ಥಿಕ ದೃಷ್ಟಿಯನ್ನು ಹೊಂದಿರುವ ಇಂದಿನ ದಿನಗಳಲ್ಲಿ ಮಕ್ಕಳು ಕೇವಲ ಪಾಠ, ಪರೀಕ್ಷೆಗಳಲ್ಲೇ ಮುಳುಗಿರುವಂತಾಗಿದೆ. ಪೋಷಕರು ಹಾಗೂ ಶಿಕ್ಷಕರ ಒತ್ತಡವೂ ಅವರನ್ನು ಹಾಗೆ ಮಾಡಿದೆ.ಇದರ ಜತೆಗೆ ಆಂಗ್ಲ ಮಾಧ್ಯಮ ಶಿಕ್ಷಣ,ದೃಶ್ಯ ಮಾಧ್ಯಮಗಳು ಮತ್ತು ಇತರ ಮನೋರಂಜನೆ ಮಕ್ಕಳನ್ನು ಪಠ್ಯೇತರ,ಸಾಹಿತ್ಯ ಕೃತಿಗಳ ಓದಿನಿಂದ ದೂರ ಇರುವಂತೆ ಮಾಡಿವೆ' ಎಂದ ಅವರು, ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರೂ ಶಿಕ್ಷಕರೂ 'ಮಕ್ಕಳಿಗೆ ಸಾಹಿತ್ಯ ಪುಸ್ತಕ ಓದಲು ಪುರುಸೊತ್ತಿಲ್ಲ; ಅದೆಲ್ಲ ಓದಿದರೆ ಶಾಲೆಯ ಓದಿನಲ್ಲಿ ಅವರು ಹಿಂದೆ ಬೀಳುತ್ತಾರೆ ಎಂದು ವಾದಿಸುತ್ತಾರಲ್ಲ, ಏನು ಮಾಡೋಣ' ಎಂದು ವಿಷಾದಿಸಿದರು ಪಳಕಳ.

ಪ್ರಶಸ್ತಿ ಅನಿರೀಕ್ಷಿತ

'ಪ್ರಶಸ್ತಿ ಬಂದದ್ದು ನನಗೆ ಅನಿರೀಕ್ಷಿತ. ನಿಜವಾಗಲೂ ನನಗೆ ಸಂತೋಷವಾಗಿದೆ. ಸಂತೃಪ್ತಿಯಾಗಿದೆ. ಇನ್ನೆರಡು ಪುಸ್ತಕ ಬರೆದು ಮುಗಿಸ್ತೇನೆ; ಅಲ್ಲಿಗೆ ಸಾಕೂಂತ ಕಾಣಿಸ್ತದೆ' ಎಂದು ಕಳೆದ 65ವರ್ಷಗಳಿಂದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಪಳಕಳ ಅವರು ತಮ್ಮ ಮನೆಯಂಗಳದಲ್ಲಿ ಮುಗ್ಧವಾಗಿ ಮುಗುಳ್ನಗುತ್ತ ಹೇಳಿದರು.

ಡಾಕ್ಟರೇಟ್‌ಗೂ ವಸ್ತು

ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಪಳಕಳ ಕುರಿತು ಡಾಕ್ಟರೇಟ್‌ಗಾಗಿ ಅಧ್ಯಯನ ನಡೆಸುತ್ತಿದ್ದು ಈಗಾಗಲೇ ಅವರ ಬಗ್ಗೆ 'ಎಳೆಯರ ಪಳಕಳ'ಕೃತಿಯನ್ನು ಪ್ರಕಟಿಸಿದ್ದಾರೆ. ಕಾಂತಾವರ ಕನ್ನಡ ಸಂಘವು ನೆಂಪು ನರಸಿಂಹ ಭಟ್ಟರು ಪಳಕಳ ಅವರ ಬಗ್ಗೆ ಕೃತಿಯನ್ನು ಪ್ರಕಟಿಸಿದೆ.ಕಿನ್ನಿಗೋಳಿಯ ಯುಗಪುರುಷ ಪ್ರಕಟನಾಲಯವು ಪಳಕಳ ಅವರ 90ಕ್ಕೂ ಮಿಕ್ಕಿದ ಪುಸ್ತಕಗಳನ್ನು ಪ್ರಕಟಿಸಿದ್ದು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪಳಕಳ ಸೀತಾರಾಮ ಭಟ್ಟರಿಗೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ ಎಂದು ಪಳಕಳ ಸ್ಮರಿಸಿಕೊಂಡರು.

ಒಡಿಶಾದ ಭುವನೇಶ್ವರದಲ್ಲಿ ನಡೆದ ಅಕಾಡೆಮಿಯ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ನಿನ್ನೆಯಷ್ಟೇ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರು ರವಾನಿಸಿದ ಟೆಲಿಗ್ರಾಮ್‌ ಅವರ ಟೇಬಲ್‌ ಮೇಲಿತ್ತು. ಪ್ರಶಸ್ತಿಯು 50,000 ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಅಕ್ಟೋಬರ್‌ ಕೊನೇ ವಾರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ಸ್ಥಳ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮೂರನೇ ಪುರಸ್ಕಾರ

ಕೇಂದ್ರ ಸಾಹಿತ್ಯ ಅಕಾಡೆಮಿಯು 2010ರಿಂದ ಮಕ್ಕಳ ಸಾಹಿತಿಗೆ ಬಾಲಸಾಹಿತ್ಯ ಪುರಸ್ಕಾರ ನೀಡಲು ಉಪಕ್ರಮಿಸಿದ್ದು ಒಟ್ಟು 24ಭಾಷೆಗಳಲ್ಲಿ ತಲಾ ಓರ್ವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ.ಈ ಹಿಂದೆ ಕನ್ನಡದಲ್ಲಿ ಬೊಳುವಾರು ಮಹಮ್ಮದ್‌ ಕುಂಞಿ ಹಾಗೂ ನಾ. ಡಿ'ಸೋಜಾ ಪುರಸ್ಕೃತರಾಗಿದ್ದಾರೆ;ಪಳಕಳ ಸೀತಾರಾಮ ಭಟ್ಟರು ಮೂರನೆಯವರು. ಮಕ್ಕಳಿಗಾಗಿ 36 ಕ‌ವನ ಸಂಕಲನಗಳು,58 ಕತೆಗಳು,24 ನಾಟಕಗಳು ಹಾಗೂ ಇತರ ನಾಲ್ಕು ಹೀಗೆ ಮಕ್ಕಳಿಗಾಗಿ 123ಕೃತಿಗಳನ್ನು ಬರೆದಿರುವ ಪಳಕಳರು ಕೆಲವು ಕಾದಂಬರಿಗಳು ಸೇರಿದಂತೆ ಪ್ರೌಢರಿಗಾಗಿ 14 ಪುಸ್ತಕಗಳನ್ನು ರಚಿಸಿದವರು.

ಪರಿಚಯ

1930ರ ಜುಲೈ 5ರಂದು ಈಶ್ವರ ಭಟ್‌- ಲಕ್ಷ್ಮೀ ದಂಪತಿಯ ಹಿರಿಯ ಪುತ್ರನಾಗಿ ಜನನ. ಹುಟ್ಟೂರಲ್ಲಿ ಪ್ರಾಥಮಿಕ,ಜೈನ ಹೈಸ್ಕೂಲಲ್ಲಿ ಪ್ರೌಢ,ಎಂ.ಎ.ಬಿ.ಎಡ್‌.ವರೆಗೆ ಖಾಸಗಿಯಾಗಿ ಶಿಕ್ಷಣ.ಸೋದರತ್ತೆ ಚೆನ್ನಕ್ಕ ಹೇಳುತ್ತಿದ್ದ ಕತೆಗಳಿಂದ,ಪಂಜೆಯವರ ಕತೆ-ಕವನಗಳಿಂದ,ಟಿ. ರಘುಚಂದ್ರ ಶೆಟ್ಟಿ,ಕಾಂತ ರೈ,ರಾಮ ಮೊಳೆಯಾರರಿಂದ ಸಾಹಿತ್ಯ ಚಟುವಟಿಕೆಗೆ ಪ್ರೇರಣೆ. ಪ್ರಾಥಮಿಕ ಶಾಲೆಯಲ್ಲಿ 14ವರ್ಷ,ಜೈನ ಹೈಸ್ಕೂಲಿನಲ್ಲಿ 23ವರ್ಷ ಅಧ್ಯಾಪನ ಸೇವೆ.1960ರಲ್ಲಿ ರಾಜ್ಯ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ,ರಾಜ್ಯಮಟ್ಟದ ವಿವಿಧ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವಿಯಾಗಿ,ಅಧ್ಯಕ್ಷನಾಗಿ ಕಾರ್ಯ ನಿರ್ವಹಣೆ,'ಮಕ್ಕಳ ಸಾಹಿತ್ಯ ಸಂಗಮ'ದ ಸ್ಥಾಪಕ ಅಧ್ಯಕ್ಷ,1996ರಲ್ಲಿ ಹಾಸನದಲ್ಲಿ ನಡೆದ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಕನ್ನಡ ವಾಚನ ಮಾಲೆಯಲ್ಲಿ ಕವನಗಳ ಸೇರ್ಪಡೆ, ಪ್ರಸಾರಭಾರತಿಯಿಂದ 'ಎಪ್ರೂವ್‌x ಪೋಯೆಟ್‌' ಎಂಬ ಮಾನ್ಯತೆ....ಹೀಗೆ ಹಲವಾರು ಮಾನ್ಯತೆ, ಗೌರವಗಳು ಅವರನ್ನು ಅರಸಿ ಬಂದಿವೆ.

ಮದರಾಸು ಸರಕಾರದ ಮಕ್ಕಳ ಸಾಹಿತ್ಯ ಬಹುಮಾನ (1955),ಜಿ.ಪಿ.ರಾಜರತ್ನಂ ದತ್ತಿ ಬಹುಮಾನ (1983),ಹೊಸದಿಲ್ಲಿಯ ಬಾಲಶಿಕ್ಷಾ ಪರಿಷತ್‌ ಪ್ರಶಸ್ತಿ (1987),ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಬಹುಮಾನ, ಪ್ರಶಸ್ತಿ (1999), ಕಿನ್ನಿಗೋಳಿಯ ಕೊ.ಅ. ಉಡುಪ ಪ್ರಶಸ್ತಿ (2002),ಶಿವರಾಮ ಕಾರಂತ ಪ್ರತಿಷ್ಠಾನದ ಗೌರವ ಪ್ರಶಸ್ತಿ (2002),ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2003),ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ (2004), ಆಳ್ವಾಸ್‌ ನುಡಿಸಿರಿ ಪ್ರಶಸ್ತಿ (2005),ಕ.ಸಾ. ಪರಿಷತ್‌ನ ವಾಸುದೇವ ಭೂಪಾಳಂ ದತ್ತಿ ಪ್ರಶಸ್ತಿ (2006),ಅ.ಭಾ.75ನೇ ಕನ್ನಡ ಸಾಹಿತ್ಯ ಸಮ್ಮೇಳನ(ಚಿತ್ರದುರ್ಗ)ದಲ್ಲಿ ಸಮ್ಮಾನ (2009), ಕೊಂಕಣಿ ಮಕ್ಕಳ ಮಾಸಿಕ 'ಕಾಜುಲೋ' ದಶಮಾನೋತ್ಸವ ಸಮ್ಮಾನ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ (2009),ರಾಜ್ಯ ಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ 'ಕರ್ನಾಟಕ ಮಕ್ಕಳ ಸಾಹಿತ್ಯ ರತ್ನ'ಬಿರುದು ಸೇರಿದಂತೆ ಹಲವು ಪ್ರಶಸ್ತಿಗಳಿಗೆ, ಹಲವಾರು ಕಡೆಗಳಲ್ಲಿ ನಡೆದ ಸಮ್ಮಾನಗಳಿಗೆ ಅವರು ಪಾತ್ರರಾಗಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-28

Tell a Friend

ಪ್ರತಿಸ್ಪಂದನ
Irshad moodbidri, Dubai
2012-08-29
ಅಭಿನಂದನೆಗಳು ಸರ್ ನಾನು ನಿಮ್ಮ ವಿಧ್ಯಾರ್ಥಿ.
RAMANANDA M SHETTY, MOODBIDRI
2012-08-28
ಸರ್ ನಿಮಗೆ ಆ ಭಗವಂತ ಇನ್ನಷ್ಟು ಪ್ರಶಸ್ತಿಗಳನ್ನು ದಯಪಾಲಿಸಲಿ ಎಂದು ಭಗವಂತನಲ್ಲಿ ಬೇಡುವ ನಿಮ್ಮ ಪ್ರೀತಿಯ ವಿಧ್ಯಾರ್ಥಿ - ರಾಮಾನಂದ ಎಂ ಶೆಟ್ಟಿ ( ನಿಮ್ಮ ವಿಧ್ಯಾರ್ಥಿ 1986 - 1987 - ಜೈನ್ ಹೈಸ್ಕೂ ಮೂಡಬಿದ್ರಿ ( ದುಬೈ)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri