ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ

ಶಿವಮೊಗ್ಗ, ಆ. 27: ‘ರಾಷ್ಟ್ರಕವಿ ಕುವೆಂಪು ರವರು ಜಗದ, ಯುಗದ ಮಹಾಕವಿ. ಸಂತ ರೂಪದ ಬಹು ರೂಪಿ. ಭಾರತದ ಸಾಹಿತ್ಯ ಲೋಕದಲ್ಲಿ ಕುವೆಂಪುರಂತಹ ಕವಿ ಮತ್ತೊಬ್ಬರಿಲ್ಲ’ ಎಂದು ಹಿರಿಯ ಸಾಹಿತಿ, ನಾಡೋಜ ಪ್ರಶಸ್ತಿ ಪುರಸ್ಕೃತ ದೇ. ಜವರೇಗೌಡ ಅಭಿಪ್ರಾಯ ಪಟ್ಟರು.

ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ಕುವೆಂಪುರವರ ಕಂಚಿನ ಪುತ್ಥಳಿ ಅನಾವರಣದ ವೇದಿಕೆ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಕುವೆಂಪು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ವೈವಿಧ್ಯಮಯ ಕೃತಿಗಳನ್ನು ಕೊಟ್ಟಿದ್ದಾರೆ. ಮಲೆನಾಡಿನ ಮಹತ್ವವನ್ನು ತಿಳಿಸಿ ಕೊಟ್ಟಿದ್ದಾರೆ. ವಿವಿಧ ಸಮುದಾಯಗಳ ಬದುಕನ್ನು ತಮ್ಮ ಬರಹಗಳಲ್ಲಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಿ ಕೊಟ್ಟಿದ್ದಾರೆ. ಅವರ ಎಲ್ಲ ಕೃತಿಗಳನ್ನು ಕನ್ನಡಿಗರು ಓದಬೇಕು. ಅವರು ಜನಿಸಿದ ಶಿವಮೊಗ್ಗ ಜಿಲ್ಲೆ ಪುಣ್ಯದ ಸ್ಥಳವಾಗಿದೆ ಎಂದು ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ತಮ್ಮ ಬರಹಗಳ ಮೂಲಕ ಅಜ್ಞಾನ, ವೌಢ್ಯ, ಅಸಮಾನತೆ ವಿರುದ್ಧ ಜನ ಜಾಗೃತಿ ಮೂಡಿಸಿದರು. ನಿರಂತರ ಹೋರಾಟ ನಡೆಸಿದರು. ಧರ್ಮ ಸಾಮ ರಸ್ಯದ ಮಹತ್ವ ಸಾರಿದರು. ನಾವೆಲ್ಲರೂ ಒಂದೇ ಎಂಬ ವಿಶ್ವ ಮಾನವ ಸಂದೇಶ ವನ್ನು ಬಿತ್ತಿದರು ಎಂದವರು ತಿಳಿಸಿದರು.

ಬಸವೇಶ್ವರ ಹಾಗೂ ಕುವೆಂಪು ಕರ್ನಾಟಕ ರಾಜ್ಯದ ಎರಡು ಕಣ್ಣುಗಳಿ ದ್ದಂತೆ. ಇವರ ಮಾಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ. ಅವರ ತತ್ವಾದರ್ಶ, ವೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪರಿ ವರ್ತನೆ ತರಬೇಕಾಗಿದೆ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಡಾ. ಹಂಪಾ ನಾಗರಾಜಯ್ಯ ಮಾತನಾಡಿ, ಕುವೆಂಪು ಮೇರು ವ್ಯಕ್ತಿತ್ವದ ಮಹಾನ್ ವ್ಯಕ್ತಿಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನವಾಗಿದ್ದಾರೆ. ಅವರ ಪ್ರತಿಯೊಂದು ಕೃತಿಗಳನ್ನು ನಾವೆಲ್ಲರೂ ಓದಬೇಕು ಎಂದು ಅವರು ಕರೆ ನೀಡಿದರು.

ಸೃಷ್ಟಿ ಶಕ್ತಿಯಿಂದ ವಿಜೃಂಭಿಸಿದ ಸೃಜನಶೀಲ, ಧೀಮಂತ ಕವಿ ಕುವೆಂಪು ಹೊಸಗನ್ನಡ ಸಾಹಿತ್ಯದ ದೃಷ್ಠಾರ ಮತ್ತು ವಕ್ತಾರರಾಗಿದ್ದರು. 20ನೆ ಶತಮಾನದಲ್ಲಿ ವಿಸ್ತಾರವಿಲ್ಲದೆ, ಬೆಳವಣಿಗೆ ಕಾಣದೆ ಕುಂಟಿತವಾಗಿದ್ದ ಕನ್ನಡ ಸಾಹಿತ್ಯ ಕ್ಷೇತ್ರದ ಉನ್ನತಿಗೆ ಸಾಂಸ್ಕೃತಿಕ ನಾಯಕ ಕುವೆಂಪು ಸಂಭವಿಸಿದರು ಎಂದ ಅವರು ಕುವೆಂಪುರವರ ಸಾಹಿತ್ಯವನ್ನು ಸಾಧಕರಾಗಿ, ಶೋಧಕ ರಾಗಿ ಅಧ್ಯಯನ ಮಾಡಬೇಕೆಂದರು.

ಕುವೆಂಪುರವರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಉಪ ಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪಮಾತನಾಡಿ, ಕುವೆಂಪು ರಂತಹ ಮಹಾನ್ ಚೇತನ ನಮ್ಮ ಜಿಲ್ಲೆಯವರೆಂದು ಹೇಳಿ ಕೊಳ್ಳು ವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಕಾಳಜಿ ಅನನ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕುವೆಂಪುರವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಸಲಹೆ ನೀಡಿದ ಅವರು, ಕುವೆಂಪುರವರ ಜನ್ಮಸ್ಥಳ ಕುಪ್ಪಳ್ಳಿಯಲ್ಲಿ ಪೊಲೀಸ್ ಉಪ ಠಾಣೆ ತೆರೆಯಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ್, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-28

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri