ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಚತುರ್ಥ ವಾರ್ಷಿಕ ಮಹಾಸಭೆ:ಸಂಘವು ಪತ್ರಕರ್ತರ ತಾಕತ್ತು ತೋರ್ಪಡಿಸುವ ವೇದಿಕೆ ಆಗಲಿ : ಚಂದ್ರಶೇಖರ ಪಾಲೆತ್ತಾಡಿ

ಮುಂಬಯಿ:ಕನ್ನಡಿಗ ಪತ್ರಕರ್ತರ ಸಂಘ,ಮಹಾರಾಷ್ಟ್ರ (ನೋ.)ಇದರ ೪ನೇ (ಚತುರ್ಥ) ವಾರ್ಷಿಕ ಮಹಾಸಭೆಯು ಇಂದಿಲ್ಲಿ  ಆದಿತ್ಯವಾರ ಪೂರ್ವಾಹ್ನ  ಮಾಟುಂಗ ಪಶ್ಚಿಮದಲ್ಲಿನ ಕರ್ನಾ ಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಹಾಗೂ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪಾಲೆತ್ತಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿದ ಚಂದ್ರಶೇಖರ ಪಾಲೆತ್ತಾಡಿ ಅವರು “ಸಂಘದ ಅವಶ್ಯಕತೆ ಇದೆ ಎನ್ನುವುದಕ್ಕೆ ಇಂದು ನೆರೆದ ೬೭% ಪತ್ರಕರ್ತ ಸದಸ್ಯರ ಹಾಜರಾತಿಯೇ ಸಾಕ್ಷಿಯಾಗಿದೆ. ಆದರೆ ಮುಂದೆ ಇದು ನೂರಕ್ಕೆ ನೂರು ಶೇಕಡಾವಾಗಿ ಕಾಣುವಂತಿರಬೇಕು. ಈ ಮೂಲಕ ಪತ್ರಕರ್ತರ ತಾಕತ್ತು ತೋರ್ಪಡಿಸಿ ಸಮಾಜದಲ್ಲಿ ನಮ್ಮ ಏಕತೆಯ ಶಕ್ತಿಯನ್ನು ಪ್ರದರ್ಶಿಸಬೇಕು.ಕರ್ಮಭೂಮಿಯಲ್ಲಿ ನೆಲೆ ಕಂಡುಕೊಳ್ಳುವ ದೃಷ್ಟಿಯಿಂದ ನಾವೆಲ್ಲರೂ ಸಾಂಘಿಕವಾಗಿ ದುಡಿಯ ಬೇಕಾಗಿದೆ” ಎಂದು ಕರೆಯಿತ್ತರು.

ಕಳೆದ ಜನವರಿಯಲ್ಲಿ ಸಂಘವು ಮೊತ್ತಮೊದಲು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ-ಪ್ರತಿನಿಧಿಗಳ ‘ಸಹಮಿಲನ-ಸಂವಾದ’ ಸಮ್ಮೇಳನವು ಎಲ್ಲರಿಗೂ ಮಾದರಿ ಆಗಿದೆ. ಮುಂಬಯಿ ಮರಾಠಿ ಪತ್ರಕಾರ್ ಸಂಘದ ಉಪಾಧ್ಯಕ್ಷ ಶಶಿಕಾಂತ್ ಸಾಂಡ್‌ಬೋರ್ ಉಪಸ್ಥಿತರಿದ್ದು ಕನ್ನಡ-ಮರಾಠಿಗರ ಸೌಹಾರ್ದತೆಗೆ ಇಂತಹ ಸಂಘವು ಪ್ರೇರಣೆಯಾಗಿದೆ ಎಂದೇಳಿರುವುದನ್ನು ನೆನಪಿಸಿ ಕೊಂಡರು. ಅಲ್ಲದೆ ರಾಯನ್ ಇಂಟರ್‌ನ್ಯಾಷನಲ್ ಶೈಕ್ಷಣಿಕ ಸಮೂಹ ಸಂಸ್ಥೆಗಳ  ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಪತ್ರಕರ್ತರಲ್ಲಿರಿಸಿದ ಮಾನವೀಯತೆ ಸ್ಮರಿಸಿದರು. ಕನಿಷ್ಠಾವಧಿಯಲ್ಲಿ ಗರಿಷ್ಠ ಸಾಧನೆಗೈಯಲು ಸಂಘದ ಸ್ಥಾಪಕ ರೋನ್ಸ್ ಬಂಟ್ವಾಳ್ ಅವರ ಶ್ರಮವನ್ನು ಉಲ್ಲೇಖಿಸಿ ಏಕತೆಗೆ ಶ್ರಮಿಸುವ ಅವರ-ನಮ್ಮೆಲ್ಲರ ಸೇವೆಗೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯವಾಗಿದೆ ಎಂದರು.ಈ ಮುನ್ನ ಆಗಲಿದ ಎಲ್ಲಾ ಪತ್ರಕರ್ತರಿಗೆ ಬಾಷ್ಪಾಂಜಲಿ ಅರ್ಪಿಸಲಾಯಿತು.ಇತ್ತೀಚೆಗೆ ಅಗಲಿದ ಯುವ ಪತ್ರಕರ್ತ ಚಂದ್ರಕಾಂತ್ ಶೆಟ್ಟಿ ಐಕಳ ಅವರನ್ನು ವಿಶೇಷವಾಗಿ ಸ್ಮರಿಸಿದರು.
ಚುನಾವಣಾಧಿಕಾರಿ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿ ಸಂಘದ ೨೦೧೨-೨೦೧೫ರ ಸಾಲಿನ ಕಾರ್ಯಕಾರಿ ಸಮಿತಿಯ ೧೫ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ ಅಭ್ಯಥಿಗಳ ಪಯ್ಕಿ ಆಯ್ಕೆ ಪಡಿಸಲಾದ ಚಂದ್ರಶೇಖರ ಪಾಲೆತ್ತಾಡಿ, ದಯಾ ಸಾಗರ್ ಚೌಟ, ರೋನ್ಸ್ ಬಂಟ್ವಾಳ್, ಹರೀಶ್ ಕೆ.ಹೆಜ್ಮಾಡಿ (ಸಹಾಯಕ ಸಂಪಾದಕರು, ಅಕ್ಷಯ ಮಾಸಿಕ), ಶ್ರೀಮತಿ ಜಿ.ಪಿ.ಕುಸುಮ, ಸುರೇಶ್ ಆಚಾರ್ಯ, ಗುರುದತ್ತ್ ಎಸ್. ಪೂಂಜಾ ಮುಂಡ್ಕೂರು (ವರದಿಗಾರರು, ಕರ್ನಾಟಕ ಮಲ್ಲ), ಲಾರೆನ್ಸ್ ಕುವೆಲ್ಲೋ (ಸಂಪಾದಕರು, ದಿವೋ ಕೊಂಕಣಿ ಸಾಪ್ತಹಿಕ), ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು (ಸಂಪಾದಕರು, ಬಂಟರವಾಣಿ ಮಾಸಿಕ), ಕೆ.ಎನ್.ಸುರೇಶ್ (ಮುಖ್ಯಸ್ಥರು, ದೆಹಲಿ ವಾರ್ತೆ ಕನ್ನಡ ದೈನಿಕ), ಶ್ರೀಮತಿ ಸವಿತಾ ಎಸ್. ಶೆಟ್ಟಿ (ಮಾಜಿ ಸಹ ಸಂಪಾದಕಿ, ಕರ್ನಾಟಕ ಮಲ್ಲ), ಜಯ ಸಿ.ಪೂಜಾರಿ (ಪ್ರೆಸ್ ಕ್ಲಬ್, ಮುಂಬಯಿ),ಶ್ಯಾಮ್ ಎಂ.ಹಂಧೆ (ಕರ್ನಾಟಕ ಮಲ್ಲ),ಜನಾರ್ಧನ ಎಸ್.ಪುರಿಯಾ (ಸಂಪಾದಕರು, ಪರಿವರ್ತನ ಸುದ್ದಿ), ಬಾಬು ಕೆ.ಬೆಳ್ಚಡ (ಸಹ ಸಂಪಾದಕರು, ತೀಯಾ ಜ್ಯೋತಿ) ಅವರ ಯಾದಿಯನ್ನು ಬಹಿರಂಗ ಪಡಿಸಿದರು.

ನ್ಯಾ|ಪ್ರಕಾಶ್ ಶೆಟ್ಟಿ ಮಾತನಾಡಿ “ಸಂಘ-ಸಂಸ್ಥೆಗಳಲ್ಲಿ ಸದಸ್ಯರೆಲ್ಲರ ಭಾಗವಹಿಸುವಿಕೆ ಅತ್ಯವಶ್ಯವಾಗಿದ್ದು,ಏಕತೆಯನ್ನು ಸಾರುವ ದೃಷ್ಟಿಯಲ್ಲಿ ಪತ್ರಕರ್ತರ ಸಂಘಟನೆ ಒಳ್ಳೆಯ ಪ್ರಕ್ರಿಯೆ ಆಗಿದೆ.ಒಮ್ಮತದ ಪಾಲ್ಗೊಳ್ಳುವಿಕೆಯಿಂದ ಸಾಧನೆ ಸಾಧ್ಯ.ಆದುದರಿಂದ ಎಲ್ಲರೂ ಸ್ನೇಹಿಜೀವಿಗಳಾಗಿ ತಮ್ಮ ಪತ್ರಿಕೋದ್ಯಮದ ವೃತ್ತಿಯನ್ನು ಪಾವಿತ್ರ್ಯತೆಯಿಂದ ನಿಭಾಯಿಸಬೇಕು. ಇವೆಲ್ಲಕ್ಕೂ ಈ ಸಂಘವು ಸೂಕ್ತ ವೇದಿಕೆಯಾಗಿದೆ. ಅನಿಷ್ಟಗಳನ್ನು ಎತ್ತಿ ಹಿಡಿಯುವ ಶಕ್ತಿವುಳ್ಳವರೇ ಪತ್ರಕರ್ತರು.ಆದುದರಿಂದ ಪತ್ರಕರ್ತರಿಗೆ ಸಮಾಜದ ಮೇಲೆ ದೊಡ್ಡ ಜವಾಬ್ದಾರಿ ಇದೆ.  ಪತ್ರಕರ್ತರು ಸಮಾಜದ ರಕ್ಷಕರಾಗಿದ್ದು, ಸುಸಂಸ್ಕೃತವಾದ ಸಮಾಜದ ನಿರ್ಮಾಣಕ್ಕೆ, ಭವ್ಯ ಸಮಾಜದ ರಚನೆಗೆ ಪತ್ರಕರ್ತರು ಶ್ರಮಿಸಬೇಕು” ಎಂದ ಸಲಹಿದರು.

ಸಂಸ್ಥಾಪಕಾ ಗೌ|ಪ್ರಧಾನ ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ವಾಳ್ ಸಂಸ್ಥೆಯ ಬೆಳವಣಿಗೆ ಮತ್ತು ಸಾಧಿಸಿದ ಕಾರ್ಯಚಟುವಟಿಕೆಗಳನ್ನು ವಿವರಿಸಿ ಮಾತನಾಡುತ್ತಾ “ಈ ಸಂಸ್ಥೆಯನ್ನು ಹುಟ್ಟು ಹಾಕಿದ ಉದ್ದೇಶವೇ ಪತ್ರಕರ್ತರಲ್ಲಿನ ಏಕತೆಯಾಗಿದೆ.ಸಂಘವು ಎಲ್ಲಾ ಸದಸ್ಯ ಪತ್ರಕರ್ತರ ಆಸ್ತಿಯಾಗಿದ್ದು, ಅದರ ಸದ್ಭಳಕೆ ಪತ್ರಕರ್ತರ ಕರ್ತವ್ಯವಾಗಿದೆ. ಪದಾಧಿಕಾರಿಗಳನ್ನೇ ಹೊಂದಿಕೊಳ್ಳದೆ ಸದಸ್ಯರೆಲ್ಲರೂ ತಮ್ಮ ಆಸಕ್ತಿ ತೋರ್ಪಡಿಸಿ ಸಂಘದ ಬೆಳವಣಿಗೆಗೆ ಶ್ರಮಿಸಬೇಕು.ಪ್ರತ್ರಕರ್ತರೆಂದರೆ ಸಮಾಜದಲ್ಲಿ ವಿಶಿಷ್ಟವಾದ ಸ್ಥಾನಮಾನ ಉಳ್ಳವರು ಎನ್ನುವುದು ರೂಢಿ.ಇದರ ಸದುಪಯೋಗ ಆಗುವಲ್ಲಿ ಪತ್ರಕರ್ತರಲ್ಲಿ ಪ್ರಾಮಾಣಿಕತೆಯ ಅವಶ್ಯವಿದೆ.ಇಂದಿನ ಪತ್ರಕರ್ತರೆಂದರೆ ಎಲ್ಲವನ್ನೂ ತಿಳಿದವರಂತೆ ಅಹಂ ಮನೋಭಾವನೆ ಯನ್ನಿರಿಸಿ ಮುನ್ನಡೆಯುವ ಒಂದು ವರ್ಗವಾಗಿ ಬೆಳೆಯುತ್ತಿರುವುದು ಶೋಚನೀಯ ವಿಷಯ. ಪತ್ರಕರ್ತರು ಅವಿವೇಕಿಗಳಾಗದೆ ತಮ್ಮ ನೈತಿಕ ಜವಾಬ್ದಾರಿಯನ್ನು ನಿಭಾಯಿಸಿ ವಿವೇಕಿ  ಪತ್ರಕರ್ತರುಗಳಾಗುವುದು ಇಂದಿನ ಅವಶ್ಯವಾಗಿದೆ” ಎಂದರು.


ಸಂಘದ ೨೦೧೨-೨೦೧೩ರ ಸಾಲಿನ ಲೆಕ್ಕಪರಿಶೋಧಕರನ್ನಾಗಿ ನಗರದ ಸುಪ್ರಸಿದ್ಧ ಚಾರ್ಟರ್ಡ್ ಎಕೌಂಟೆಂಟ್ ಸಿ‌ಎ| ಐ.ಆರ್ ಶೆಟ್ಟಿ ಅವರನ್ನೇ ಮರು ನೇಮಕಗೊಳಿಸಲಾಯಿತು. ಸಭಿಕ ಸದಸ್ಯರ ಪರವಾಗಿ ಮೊಗವೀರ ಮಾಸಿಕದ  ಸಂಪಾದಕ ಅಶೋಕ್ ಎಸ್.ಸುವರ್ಣ, ಪ್ರೇಮನಂದ ಆರ್.ಕುಕ್ಯಾನ್, ಜನಾರ್ಧನ ಪುರಿಯಾ, ಪ್ರಕಾಶ್ ಎ.ಹೆಗ್ಡೆ ಕುಂಠಿನಿ, ನಿತ್ಯಾನಂದ ಡಿ.ಕೋಟ್ಯಾನ್ ಮುಂತಾದ ಸದಸ್ಯರು ಮಾತನಾಡಿ ಸಂಘದ ಕಾರ್ಯವೈಖರಿಯನ್ನು ಪ್ರಶಂಸಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಸಲಹೆ-ಸೂಚನೆಗಳನ್ನು  ನೀಡಿ ಶುಭಹಾರೈಸಿದರು.

ಕೊಂಕಣಿ ಮಿರರ್ ತ್ರೈಮಾಸಿಕದ ಸಂಪಾದಕ ಮತ್ತು ಸಂಘದ ಉಪಾದ್ಯಕ್ಷರಾದ ಸದಾನಂದ ಡಿ.ನಾಯಕ್ ಸ್ವಾಗತಿಸಿದರು.ಮೊಗವೀರ ಮಾಸಿಕದ ಮಾಜಿ ಸಂಪಾದಕಿ ಹಾಗೂ ಸಂಘದ ಕೋಶಾಧಿಕಾರಿ ಶ್ರೀಮತಿ ಜಿ.ಪಿ.ಕುಸುಮ ಲೆಕ್ಕಪತ್ರಗಳ ಮಾಹಿತಿಯನ್ನಿತ್ತು ಚಾರ್ಟರ್ಡ್ ಎಕೌಂಟೆಂಟ್ ಆಗಿ ಗಣನೀಯ ಮತ್ತು ಉಚಿತ ಸೇವೆಗೈಯುತ್ತಿರುವ ಸಿ‌ಎ| ಐ.ಆರ್ ಶೆಟ್ಟಿ ಮತ್ತು ಅವರ ಸಹವರ್ತಿ ಸಿ‌ಎ|ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ ಅವರನ್ನು ಸ್ಮರಿಸಿ ಅಭಿವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗ ಹಾಗೂ ಉದಯವಾಣಿ ದೈನಿಕದ ಉಪ ಸಂಪಾದಕ ಸುರೇಶ್ ಆಚಾರ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಸವಿಸ್ತಾರವಾದ ವಿವರಗಳನ್ನು ಭಿತ್ತರಿಸಿದರು.ರಿಲಾಯನ್ಸ್ ಮೊಬಾಯ್ಲ್ ಕನ್ನಡ ನ್ಯೂಸ್‌ನ ಸಂಪಾದಕ ಹಾಗೂ ಸಂಘದ ಕಾರ್ಯದರ್ಶಿ ದಯಾ ಸಾಗರ್ ಚೌಟ ಸಭೆಯ ಕಾರ್ಯ ಕಲಾಪಗಳನ್ನು ನಡೆಸಿದರು. ಬಂಟರವಾಣಿ ಮಾಸಿಕದ  ಸಂಪಾದಕ  ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಧನ್ಯವಾದ ಸಮರ್ಪಿಸಿದರು.

ಅಧ್ಯಕ್ಷ ಪಾಲೆತ್ತಾಡಿ ಅವರು ಸಂಘದ ಯಶಸ್ಸಿಗೆ ಸಹಕರಿಸಿ ಸಂಘದ ಪ್ರಪ್ರಥಮ ಪೋಷಕ ಸದಸ್ಯರಾಗಿದ್ದು, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ಸದಾನಂದ ಡಿ.ನಾಯಕ್, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಾಹಿಸಿದ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಬಿಲ್ಲವರ ಎಸೋಸಿಯೇಶನ್‌ನ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ದೆಹಲಿವಾರ್ತೆ ಕನ್ನಡ ದೈನಿಕ ಮುಂಬಯಿ ಆವೃತ್ತಿಯ ಮುಖ್ಯಸ್ಥ ಕೆ.ಎನ್ ಸುರೇಶ್, ತೀಯಾ ಜ್ಯೋತಿ ಮಾಸಿಕದ ಸಂಪಾದಕ ಶ್ರೀಧರ್ ಎಸ್.ಸುವರ್ಣ, ಕರ್ನಾಟಕ ಸಂಘ ಮುಂಬಯಿ ಇದರ ಗೌ| ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಮತ್ತಿತರ  ಗಣ್ಯರನ್ನು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೋನ್ಸ್ ಬಂಟ್ವಾಳ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-27

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri