ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ

ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ

-ರವಿಕುಮಾರ್ ಭದ್ರಾವತಿ

ಬೆಂಗಳೂರು ಆ. ೨೨.‘ತಂದೆಯವರು ಲಿವ್ ಲೈಕ್ ಎ ಸೇಂಟ್ (ಸಂತನಂತೆ ಬದುಕು) ಎಂಬ ಮಾತನ್ನು ಹೇಳುತ್ತಿದ್ದರು. ಅವರು ಹಾಕಿಕೊಟ್ಟ ಸರಳ ಮಾರ್ಗದಲ್ಲಿಯೇ ಇಂದಿಗೂ ಸಾಗಿದ್ದೇನೆ. ನೂರು ವರ್ಷಗಳು ಪೂರೈಸುತ್ತಿರುವ ಜೀವನದಲ್ಲಿ ಎಂದಿಗೂ ದುರಾಸೆ ಪಟ್ಟವನಲ್ಲ. ತೃಪ್ತಿ ಇದ್ದರೆ ಸಾಕು ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎನ್ನುವ ತಂದೆಯವರ ಮಾತು ಇಂದಿಗೂ ಸತ್ಯ. ಜೀವನದಲ್ಲಿ ದುಶ್ಚಟಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದು ನನ್ನ ಆರೋಗ್ಯದ ಗುಟ್ಟು’. ಕನ್ನಡ ಸಾಹಿತ್ಯ ಲೋಕದಲ್ಲಿ‘ನಿಘಂಟು ಬ್ರಹ್ಮ’ ಎಂದೇ ಖ್ಯಾತರಾಗಿರುವ ಮತ್ತು ಗುರುವಾರ ೧೦೦ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿರುವ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡ ಮನದಾಳದ ಬಿಚ್ಚು ನುಡಿಗಳು ಇವು.

- ೧೦೦ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿಮ್ಮ ಆರೋಗ್ಯದ ಗುಟ್ಟೇನು?
ಉತ್ತಮ ಆರೋಗ್ಯಕ್ಕೆ ಇಂತಹದ್ದೇ ಗುಟ್ಟು ಎನ್ನುವುದಿಲ್ಲ. ೨೦ನೇ ವಯಸ್ಸಿನಲ್ಲಿಯೇ ಪ್ರಾರಂಭ ಮಾಡಿಕೊಂಡ ಮುಂಜಾನೆಯ ವಾಯುವಿಹಾರಕ್ಕೆ ಇದೀಗ ೮೦ರ ಹರೆಯ. ಬಹುಶಃ ಅದು ನನ್ನ ಆರೋಗ್ಯದ ಗುಟ್ಟಾಗಿರಬಹುದು. ಆದರೆ, ನಮ್ಮ ವಂಶದಲ್ಲಿ ದೀರ್ಘ ಕಾಲದವರೆಗೆ ಬದುಕಿದವರ ಸಂಖ್ಯೆ ಹೆಚ್ಚಿದೆ. ನನ್ನ ತಾಯಿ ೧೦೭, ನನ್ನ ಸೋದರ ಮಾವ ೧೦೩ ವರ್ಷ ಕಾಲ ಬದುಕಿದ್ದರು. ಆದ್ದರಿಂದ ಇದು ನನಗೆ ವಂಶಪಾರಂಪರ್ಯವಾಗಿ ಬಂದ ಕೊಡುಗೆ.

- ನಿಮ್ಮನ್ನು ನಿಘಂಟು ಬ್ರಹ್ಮ ಎಂದೇ ಸಾಹಿತ್ಯ ಲೋಕದಲ್ಲಿ ಗುರುತಿಸಲಾಗುತ್ತದೆ. ನಿಘಂಟು ರಚನೆಗೆ ಪ್ರೇರಣೆ ಯಾರು ?
ನಿಘಂಟು ರಚನೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಲು ಎ.ಆರ್.ಕೃಷ್ಣಶಾಸ್ತಿಗಳು ಪ್ರಮುಖ ಕಾರಣ. ಅವರು ನಿಘಂಟು ಶಾಸ್ತ್ರದ ಬಗ್ಗೆ ಹೊಂದಿದ್ದ ಜ್ಞಾನ ನನ್ನನ್ನು ಆ ಕ್ಷೇತ್ರದತ್ತ ಸೆಳೆಯಿತು. ನಿಘಂಟು ರಚನೆ ಮಾಡುವಾಗ ಅನೇಕ ಪದಗಳಿಗೆ ಅರ್ಥ ಹುಡುಕಬೇಕಾಗುತ್ತದೆ. ಒಂದು ಪದಕ್ಕೆ ಹತ್ತಾರು ಅರ್ಥಗಳಿರುತ್ತವೆ. ಪ್ರತಿ ಅರ್ಥಗಳಿಗೂ ನಿರ್ದಿಷ್ಟ ದೃಷ್ಟಾಂತಗಳನ್ನು ಉದಾಹರಣೆಯಾಗಿ ನೀಡಬೇಕಾಗುತ್ತದೆ. ಆದ್ದರಿಂದ ನಿಘಂಟು ರಚನೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಲು ಕಾರಣವಾಯಿತು.

- ನಿಮ್ಮ ಜೀವನದಲ್ಲಿ ಅತ್ಯಂತ ಸಂತೋಷ ಮತ್ತು ಮರೆಯಲಾಗದ ಕ್ಷಣ ಯಾವುದು?
ನೂರು ವರ್ಷಗಳ ತುಂಬು ಜೀವನದಲ್ಲಿ ಅನೇಕ ಸಂತೋಷದ ಕ್ಷಣಗಳನ್ನೊಳಗೊಂಡ ಘಟನೆಗಳು ಜರುಗಿವೆ. ನಿಘಂಟು ರಚನೆಯ ವೇಳೆ ಕಷ್ಟಪಟ್ಟು ನಿರ್ದಿಷ್ಟ ಪದಕ್ಕೆ ಅರ್ಥ ಕಂಡುಕೊಂಡಾಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ದಿನಗಳು ಮತ್ತು ಅದರಿಂದ ದೊರೆತ ಸಂತೃಪ್ತಿ ಜೀವನದಲ್ಲಿ ಮರೆಯಲಾಗದ ಕ್ಷಣಗಳು.

- ನಿಮ್ಮ ಜೀವನದ ಅತ್ಯಂತ ನೋವಿನ ಕ್ಷಣಗಳು ಯಾವುವು?
ಜೀವನದ ಎಲ್ಲ ಹಂತದಲ್ಲಿಯೂ ಮಾರ್ಗದರ್ಶಕರಾಗಿದ್ದ ತಂದೆ - ತಾಯಿಯನ್ನು ಕಳೆದುಕೊಂಡದ್ದು ನನ್ನ ಜೀವನದ ಮರೆಯಲಾಗದ ನೋವಿನ ಕ್ಷಣ. ತಂದೆಯವರ ಹಾದಿಯನ್ನು ಸದಾ ಅನುಸರಿಸುತ್ತಿದ್ದ ನಾನು ಅವರನ್ನು ಕಳೆದುಕೊಂಡಾಗ ತುಂಬಾ ದುಃಖ ಅನುಭವಿಸಿದ್ದೇನೆ. ತಮಗೆ ಬರುತ್ತಿದ್ದ ರು. ೬೫ ವೇತನದಲ್ಲಿ ೯ ಮಕ್ಕಳನ್ನೊಳಗೊಂಡ ತುಂಬು ಸಂಸಾರವನ್ನು ಅವರು ನಡೆಸುತ್ತಿದ್ದರು. ಆ ಒಂಭತ್ತು ಜನರಲ್ಲಿ ೩ ಜನ ಮಾತ್ರ ಉಳಿದಿದ್ದೇವೆ.

- ಸಾಹಿತ್ಯದ ಹೊರತಾಗಿ ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ?
ಸಾಹಿತ್ಯದ ಹೊರತಾಗಿ ಚೆಸ್ ಮತ್ತು ಕೇರಂ ಆಟದಲ್ಲಿ ವಿಶೇಷ ಆಸಕ್ತಿ ಹೊಂದಿದ್ದೇನೆ. ಚೆಸ್ ಆಟದಲ್ಲಿ ಬುದ್ಧಿವಂತಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಚೆಸ್ ಚಾಂಪಿಯನ್ ಆಗಿದ್ದೆ. ಆಟ ಪ್ರಾರಂಭವಾದರೆ ಮುಗಿಯಿತು ಪಾನ್‌ಗಳೆಲ್ಲ ಪೌಚ್ ಸೇರಿಕೊಳ್ಳುತ್ತಿದ್ದವು.

- ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ?
ದೇವರಲ್ಲಿ ಪ್ರೀತಿ ಉಂಟಾದರೆ ಅದನ್ನು ಭಕ್ತಿ ಎನ್ನುತ್ತೇವೆ. ಗಂಡು-ಹೆಣ್ಣಿನ ನಡುವೆ ಪ್ರೀತಿ ಉಂಟಾದರೆ ಆಸಕ್ತಿ. ಸ್ನೇಹಿತರಲ್ಲಿ ಪ್ರೀತಿ ಉಂಟಾದರೆ ಸಹಾಯ-ಸಹಕಾರ. ಮಕ್ಕಳು ಮತ್ತು ಮೊಮ್ಮಕ್ಕಳ ಮೇಲೆ ಪ್ರೀತಿ ಉಂಟಾದರೆ ಪ್ರತಿ ಪ್ರೀತಿ. ಹೀಗೆ ಪ್ರೀತಿ ಎನ್ನುವುದು ಹಲವಾರು ಅರ್ಥಗಳನ್ನು ತಳೆಯುತ್ತದೆ. ನಿಮ್ಮ ಪ್ರಶ್ನೆಯನ್ನು ನೇರವಾಗಿ ಕೇಳಿ.

- ನೀವು ಯಾರನ್ನೂ ಪ್ರೀತಿಸಲಿಲ್ಲವೇ ?
ನಾನು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಹುಡುಗಿಯರೇ ಇರಲಿಲ್ಲ. ೩೦೦ ಜನ ಹುಡುಗರು ಇರುವ ಕಾಲೇಜಿನಲ್ಲಿ ಪ್ರೀತಿಗೆ ಅವಕಾಶವೇ ಇರಲಿಲ್ಲ.

- ಜೀವನದಲ್ಲಿ ಯಾರನ್ನಾದರೂ ಪ್ರೀತಿಸಬೇಕಿತ್ತು ಎನ್ನುವ ಭಾವನೆ ಕಾಡಿದ್ದುಂಟೇ ?
ಅಂತಹ ಭಾವನೆ ಎಂದಿಗೂ ನನ್ನನ್ನು ಕಾಡಲಿಲ್ಲ. ಕಾರಣ, ನನಗೆ ಪ್ರೀತಿಯ ಪರಿಚಯವಾಗಿದ್ದೇ ನನ್ನ ಪತ್ನಿಯಿಂದ. ಅವಳೊಂದಿಗಿನ ಸಾಗಿಸಿದ ಜೀವನದಲ್ಲಿ ಸಂತೃಪ್ತಿಯನ್ನು ಕಂಡುಕೊಂಡಿದ್ದೇನೆ.

- ನಿಮ್ಮ ಸ್ನೇಹಿತರ ವಲಯದಲ್ಲಿನ ಒಡನಾಟ?
ಎಚ್.ಎಂ.ಶಂಕರನಾರಾಯಣ ಮತ್ತು ಎಸ್.ವಿ.ಪರಮೇಶ್ವರ ಭಟ್ ನನ್ನ ಆತ್ಮೀಯ ಗೆಳೆಯರು. ಸದಾ ಒಟ್ಟಿಗೆ ಇರುತ್ತಿದ್ದ ನಮ್ಮನ್ನು ಕಾಲೇಜು ದಿನಗಳಲ್ಲಿ ತ್ರಿಮೂರ್ತಿಗಳು ಎಂದು ಕರೆಯುತ್ತಿದ್ದರು. ಸಾಹಿತ್ಯ, ಕ್ರೀಡೆ ಮತ್ತಿತರೆ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೆವು.

- ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವ ಬಗೆ ಹೇಗೆ?
ಮಕ್ಕಳು ಮತ್ತು ಮೊಮ್ಮಕ್ಕಳೆಲ್ಲರೂ ದೂರದ ಅಮೆರಿಕಾದಲ್ಲಿದ್ದಾರೆ. ವರ್ಷದಲ್ಲಿ ಒಮ್ಮೆ ಅವರು ಭಾರತಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ವಾರದ ಮಟ್ಟಿಗೆ ನಮ್ಮೊಂದಿಗೆ ತಂಗುತ್ತಾರೆ. ಮೊಮ್ಮಕ್ಕಳಿಗೆ ಕಥೆ ಹೇಳಿ ಕೊಡುತ್ತೇನೆ. ಈ ವಯಸ್ಸಿನಲ್ಲಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕು ಎನ್ನುವ ಬಯಕೆ ಇರುತ್ತದೆ. ಆದರೆ, ಆ ಅದೃಷ್ಟ ಇಲ್ಲವೆಂಬ ಕೊರಗು ನನ್ನನ್ನು ಸದಾ ಕಾಡುತ್ತದೆ.

- ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಆದ ಅನುಭವ?
೯೮ನೆಯ ವಯಸ್ಸಿನಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಲಾಗುವುದು ಎನ್ನುವ ನಿರೀಕ್ಷೆ ಇರಲಿಲ್ಲ. ಆಯ್ಕೆಯಾದಾಗ ತುಂಬಾ ಸಂತೋಷವಾಯಿತು. ಅಂದು ನಡೆದ ಮೆರವಣಿಗೆ ದಸರಾ ಮೆರವಣಿಗೆಯನ್ನು ನಾಚಿಸುವಂತಿತ್ತು.

- ೧೦೦ನೇ ಹುಟ್ಟು ಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತಿದ್ದೀರಿ ?
ಹುಟ್ಟುಹಬ್ಬದಂದು ಹತ್ತಿರದ ಸಂಬಂಧಿಗಳಿಗೆ ಮನೆಯಲ್ಲಿ ಚಿಕ್ಕ ಸಂತೋಷ ಕೂಟ ಆಯೋಜಿಸಲಾಗಿದೆ. ಸ್ನೇಹಿತರು ಮತ್ತು ಸಂಬಂಧಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಿದ್ದಾರೆ. ಯಾವುದೇ ಆಡಂಬರವಿಲ್ಲದೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದೇನೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ ವಾರ್ತೆ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-23

Tell a Friend

ಪ್ರತಿಸ್ಪಂದನ
ಕನ್ನಡಿಗ, ಕರ್ನಾಟಕ
2012-08-23
ಕನ್ನಡ ಸಾಹಿತ್ಯ ಲೋಕದ "ನಿಘಂಟು ಬ್ರಹ್ಮ" ಪ್ರೊ. ಜಿ. ವೆಂಕಟಸುಬ್ಬಯ್ಯರವರಿಗೆ ೧೦೦ ನೇ ಹುಟ್ಟುಹಬ್ಬದ ಶುಭಾಶಯಗಳು.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri