ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...

ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು.....

ಪಡೀಲ್‌ನಲ್ಲಿ ನಡೆದ ಹೋಂ ಸ್ಟೇ ಮತ್ತು ನಂತರ ನಡೆದ ಘಟನೆಗಳನ್ನು ನೋಡಿದ ಮೇಲೆ ನನ್ನ ಕೆಲವು ಅನಿಸಿಕೆಗಳನ್ನು ವ್ಯಕ್ತಪಡಿಸಬೇಕೆಂದು ಅನಿಸಿತು. ಬಜರಂಗದಳ, ಹಿಂದೂ ಯುವಸೇನೆ ಅಥವಾ ಹಿಂದೂ ಜಾಗರಣ ವೇದಿಕೆ ಯಂತಹ ಸಂಘಟನೆಗಳು ನಮ್ಮ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಯಾರು ಬೇಕಾದರೂ ಏನೇ ಟೀಕೆ ಮಾಡಲಿ,ಪ್ರತಿಭಟನೆ ನಡೆಸಲಿ,ಲಕ್ಷಾಂತರ ಯುವತಿಯರು, ಮಹಿಳೆಯರು ಇಂದು ನಿರ್ಭೀತಿಯಿಂದ ರಾತ್ರಿ ಕೂಡಾ ಸಂಚರಿಸುವಂತಾಗಿದೆ ಎಂಬುದು ನೂರಕ್ಕೆ ನೂರು ಸತ್ಯ.ಈ ಸಂಘಟನೆಗಳು ಅಸ್ತಿತ್ವಕ್ಕೆ ಬರುವ ಮುಂಚೆ ಯುವತಿಯರು,ಮಹಿಳೆಯರು ಸಂಚರಿಸುವ ಅಥವಾ ಅವರು ಕೆಲಸ ಮಾಡುತ್ತಿರುವ ಜಾಗಗಳಲ್ಲಿ ಕೀಚಕರಿಂದ ವಿವಿಧ ರೀತಿಯ ಕಿರುಕುಳಗಳನ್ನು,ತೊಂದರೆಗಳನ್ನು ಅನುಭವಿಸುತ್ತಿದ್ದರು.

ಯಾವಾಗ ಈ ಸಂಘಟನೆಗಳು ಗೂಸಾದ ರುಚಿ ತೋರಿಸಲು ಆರಂಭಿಸಿದವೋ?ಅಂದಿನಿಂದ ಅನ್ಯ ಧರ್ಮದವರು ಬಿಡಿ;ಹಿಂದೂ ಧರ್ಮದ ಪುಂಡರೂ ಕೂಡ ಯುವತಿಯರನ್ನು, ಮಹಿಳೆಯರನ್ನು ಚುಡಾಯಿಸಲು ಹಿಂದೆ ಮುಂದೆ ನೋಡಲಾರಂಭಿಸಿದರು.ಯುವತಿಯರು ಕೂಡಾ ಈ ರೀತಿ ನಡೆದರೆ ಸಂಘಟ ನೆಯ ಸಹೋದರರಿಗೆ ಸುದ್ದಿಮುಟ್ಟಿಸಿ ಧೈರ್ಯದಿಂದ ಕೆಲಸ ಕಾರ್ಯ ಮಾಡುತ್ತಿದ್ದರು.ಈ ಧೈರ್ಯ ಬಂದದ್ದು ಪೊಲೀಸರಿಂದ ಅಲ್ಲ.ಕೆಲವು ಪುಂಡರು ಯುವತಿಯರನ್ನು ಪ್ರೀತಿ ಪ್ರೇಮದ ನಾಟಕವಾಡಿ ಅವರ ಶೀಲಹರಣ ಮಾಡಿ ಕೊಂದು ಪೊದೆಯಲ್ಲೋ,ನದಿಯಲ್ಲೋ ಎಸೆಯುತ್ತಿದ್ದರು,ವಿದೇಶಗಳಿಗೆ ಮಾರಾಟ,ಮತಾಂತರ ಮಾಡುತ್ತಿದ್ದರು,ವೇಶ್ಯಾವಾಟಿಕೆಗೆ ದೂಡುತ್ತಿದ್ದರು.

ಇತ್ತೀಚೆಗೆ ಇವೆಲ್ಲಾ ಬಯಲಾದದ್ದು ಪೊಲೀಸರಿಂದ ಅಲ್ಲ, ಹಿಂದೂ ಸಂಘಟನೆಗಳ ಯುವಕರಿಂದ. ಈಗ ಇದೇ ಮಾದರಿಯನ್ನು ಇತರ ಧರ್ಮದವರೂ ಮಾಡುತ್ತಿದ್ದಾರೆ.


ಮಂಗಳೂರಿನಲ್ಲಿ ಪಾರ್ಟಿ ಹೆಸರಿನಲ್ಲಿ ಮಸಾಜ್ ಸೆಂಟರ್‌ಗಳಲ್ಲಿ,ಲಾಡ್ಜ್‌ಗಳಲ್ಲಿ,ಪಬ್‌ಗಳಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ತಡೆಯಲು ಪೊಲೀಸರು ವಿಫಲರಾದಾಗ ಹಿಂದೂ ಸಂಘಟನೆಗಳು ಇಲ್ಲಿಗೆ ತಾವೇ ದಾಳಿ ಮಾಡಲು ಪ್ರಾರಂಭಿಸಿದರು.ಗಮನಾರ್ಹವಾದ ಸಂಗತಿ ಎಂದರೆ ಹಿಂದೂ ಸಂಘಟನೆಗಳು ಕೇವಲ ಅಲ್ಪಸಂಖ್ಯಾತ ಸಮುದಾಯದ ಯುವಕರ ಮೇಲೆ ಮಾತ್ರ ದಾಳಿಮಾಡಿದ್ದಲ್ಲ.ಅನೈತಿಕ ಚಟುವಟಿಕೆ ನಡೆಸುವ, ಹುಡುಗಿಯರನ್ನು ಪ್ರೀತಿಸಿ ವಂಚಿಸಿದ ಹಿಂದೂಗಳ ಮೇಲೂ ದಾಳಿಯನ್ನು ನಡೆಸಿವೆ ಎಂಬುದು ಅರಿಯಬೇಕಾಗಿದೆ.

ಇದರ ಮುಂದುವರಿದ ಭಾಗವೇ ಹೋಂಸ್ಟೇ ದಾಳಿ.ಆದರೆ ಇಲ್ಲಿ ಸಂಘಟನೆಯ ಸದಸ್ಯರು ಯುವತಿಯರ ಮೇಲೆ ಹಲ್ಲೆ ನಡೆಸಿದ್ದು ಮಾತ್ರ ಖಂಡನೀಯ. ಸಂಸ್ಕೃತಿಯನ್ನು ರಕ್ಷಿಸಲು ದಾಳಿ ಮಾಡುವವರು ತಾವೇ ಸಂಸ್ಕೃತಿಯನ್ನು ಮರೆತಂತೆ ವರ್ತಿಸಿರುವುದು ಖಂಡನೀಯ.ಇದಕ್ಕೆ ಪ್ರಚೋದನೆ ಯಾರಿಂದ ಹೇಗೆ ಸಿಕ್ಕಿತು ಎಂಬುದು ಜನರಿಗೆ ಗೊತ್ತಾಗಬೇಕಾಗಿದೆ.ಈ ಬಗ್ಗೆ ತನಿಖೆ ನಡೆ ಯಬೇಕು.

ಬರ್ತ್‌ಡೇ ಪಾರ್ಟಿ ನಮ್ಮ ಸಂಸ್ಕೃತಿಯಲ್ಲ. ಆದರೂ ಪಾರ್ಟಿ ನಡೆಸಲೇ ಬಾರದು ಎನ್ನುವಂತಿಲ್ಲ. ಅದು ಅವರವರ ಇಚ್ಛೆ.ಅದಕ್ಕೊಂದು ರೀತಿ,ರಿವಾಜು ಎಂಬುದಿದೆ.ಹಿರಿಯರು ಮನೆ ಮಂದಿ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸುವುದು ನಮ್ಮ ಪದ್ಧತಿ.ಆದರೆ ಪಡೀಲ್ ಹೋಂ ಸ್ಟೇಯಲ್ಲಿ ಆದದ್ದೇನು?ಕೇವಲ ಬರ್ತ್‌ಡೇ ಪಾರ್ಟಿಗೆ ಅಷ್ಟು ದೊಡ್ಡ ಕಟ್ಟಡವನ್ನು ಎರಡು ದಿವಸಕ್ಕೆ ನಿಗದಿಪಡಿಸಲಾಗಿದ್ದು,ಅಲ್ಲಿ ಕೇವಲ ಯುವಕರು ಮತ್ತು ಯುವತಿಯರು ಮಾದಕ ಪೇಯಗಳೊಂದಿಗೆ ಅರೆಬರೆ ಬಟ್ಟೆಯಲ್ಲಿ ಸಿದ್ದರಾದುದು ಯಾವುದಕ್ಕೆ?

ಕುಮುದ ಕಾಮತ್ ಎಂಬವರು ತನ್ನ ಮಗನನ್ನು ಅಲ್ಲಿವರೆಗೆ ಬಿಟ್ಟು ಬಂದಿದ್ದಾರಂತೆ.ಆದರೆ ಬರ್ತ್‌ಡೇ ಪಾಟಿಯಲ್ಲಿ ಅವರೇಕೆ ಭಾಗವಹಿಸಲಿಲ್ಲ.ಅಥವಾ ಅವರಿಗೆ ಪ್ರಾಯಕ್ಕೆ ಬಂದ ಮಗಳಿದ್ದರೆ ಮಗನೊಂದಿಗೆ ಅವಳನ್ನೂ ಕಳುಹಿಸಬಹುದಿತ್ತಲ್ಲವೇ?ಮಸಾಜ್ ಸೆಂಟರ್ ಮತ್ತು ಪಾರ್ಟಿ ಆಯೋಜಿಸಿದ್ದವರ ‘ಕಾಮಪುರಾಣ’ ಹೊರಜಗತ್ತಿಗೆ ಈಗ ಗೊತ್ತಾಗುತ್ತಾಇದೆ.ಇಂತಹ ಬರ್ತ್‌ಡೇ ಪಾರ್ಟಿಗಳನ್ನು ಬೆಂಬಲಿಸುವವರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು, ಮಾದಕ ಪೇಯಗಳನ್ನು, ಮಾದಕ ವಸ್ತು ಸೇವಿಸಿ ಮಜಾ ಉಡಾಯಿಸುವ ಇಂತಹ ಪಾರ್ಟಿಗಳಿಗೆ ಕಳುಹಿಸಿಕೊಡುತ್ತಾರೆಯೇ ಎಂಬುದು ನನ್ನ ಪ್ರಶ್ನೆ.

ಅಲ್ಪಸಂಖ್ಯಾ ತರನ್ನು ಓಲೈಸಲು ಯಾವ ಕಾರಣ ಸಿಗುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯು ತ್ತಿರುವ ಕಾಂಗ್ರೆಸ್,ಜೆಡಿಎಸ್ ಮುಂತಾದ ಜಾತ್ಯತೀತ ಪಕ್ಷಗಳು ಮತ್ತು ಕೇವಲ ಹಿಂದೂ ಧರ್ಮವನ್ನೇ ಗುರಿಯಾಗಿಸಿರುವ ವಿಚಾರವಾದಿಗಳು ಮತ್ತು ಕೇವಲ ಅಲ್ಪಸಂಖ್ಯಾತರ ಪರವಾಗಿ ಮಾತ್ರ ಹೇಳಿಕೆ ನೀಡುವ,ಪ್ರತಿಭಟನೆ ನಡೆಸುವ ಕೋಮು ಸೌಹಾರ್ದ ವೇದಿಕೆಗಳಂತಹವರಿಗೆ ಅಸ್ಸಾಂನಲ್ಲಿ ನಡೆದ ನರಮೇಧ ಕಣ್ಣಿಗೆ ಕಾಣಿಸುವುದೇ ಇಲ್ಲ.ಅದನ್ನು ಖಂಡಿಸಲು ಅವರಿಗೆ ನಾಲಿಗೆ ಇಲ್ಲವೆ?ಪ್ರತಿಭಟನೆ ನಡೆಸಲು ಸಮಯವೇ ಇಲ್ಲವೇ?ಒಂದು ವೇಳೆ ಹೋಂಸ್ಟೇಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವತಿಯರಿದ್ದು,ಅಲ್ಪಸಂಖ್ಯಾತ ಸಂಘಟನೆ ಅಥವಾ ವ್ಯಕ್ತಿಗಳು ದಾಳಿ ನಡೆಸಿದ್ದರೆ ಕಾಂಗ್ರೆಸ್‌ನವರಾಗಲಿ,ಜೆಡಿಎಸ್‌ನವರಾಗಲೀ,ವಿಚಾರವಾದಿಗಳಾಗಲಿ ತುಟಿಬಿಚ್ಚುತ್ತಿದ್ದರೇ? ಅಥವಾ ಕಾಂಗ್ರೆಸ್‌ನ ಅಮ್ರತಾ ಶೆಣೈಯವರು ದಾಳಿ ಮಾಡಿದವರ ಮನೆಗೆ ನುಗ್ಗುತ್ತೇವೆ ಎಂದು ಹೇಳುತ್ತಿದ್ದರೇ?

ವಿಚಾರವಾದಿ,ಚಿಂತಕ ರಾಜಶೇಖರ್‌ರವರೇ ಕರಾವಳಿಯಲ್ಲಿ ಸತ್ಯ,ನ್ಯಾಯ ಸತ್ತು ಹೋಗಿಲ್ಲ. ಅದು ಯಾವತ್ತೂ ಸಾಯಲ್ಲ ಸ್ವಾಮೀ,ಓರ್ವ ಹಿಂದೂ ಯುವತಿ ಯನ್ನು ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿ ಕೋಮು ಸೌಹಾರ್ದತೆ ಮೆರೆದಿದ್ದೇನೆ ಎಂದು ತಮ್ಮ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದೀರಾ? ಕರಾವಳಿಯಲ್ಲಿ ಎಲ್ಲಾದರೂ ಒಂದು ಕಡೆ ಹಿಂದೂ ಹುಡುಗ ಮತ್ತು ಮುಸ್ಲಿಂ ಯುವತಿ ಗುಟ್ಟಾಗಿ ಪ್ರೀತಿಸುತ್ತಿರಬಹುದು.ತಾಕತ್ತಿದ್ದರೆ ಅಂತಹವರನ್ನು ಹುಡುಕಿ ಮದುವೆ ಮಾಡಿಸಿ ನೋಡಿ.ತಮಗೆ ಅಥವಾ ತಮ್ಮ ಕುಟುಂಬದಲ್ಲಿ ಪ್ರಾಯಕ್ಕೆ ಬಂದ ಯುವಕರು ಯಾರಾದರೂ ಇದ್ದರೆ ಅವರಿಗೆ ಓರ್ವ ಬಡ ಮುಸ್ಲಿಂ ಯವತಿಯನ್ನು ತಂದು ಮದುವೆ ಮಾಡಿಸಿ ನೋಡಿ.ಆ ಕ್ಷಣ ದಲ್ಲೇ ನಿಮ್ಮ ವಿರುದ್ಧ ಫತ್ವಾ ಹೊರಡುತ್ತದೆ.ನಿಮ್ಮ ಹತ್ಯೆಗೆ ಸ್ಕೆಚ್ ತಯಾರಾಗುತ್ತದೆ.ಬೇಕಾದರೆ ಪರೀಕ್ಷಿಸಿ ನೋಡಿ.

ನಮ್ಮ ಜಿಲ್ಲೆಯ ವಿಚಾರವಾದಿ ಎಂದು ಹೇಳಿಕೊಳ್ಳುವ ನರೇಂದ್ರ ನಾಯಕರೇ ನಿಮಗೆ ಹಿಂದೂ ಧರ್ಮದ ರಹಸ್ಯಗಳು ಮತ್ತು ಪವಾಡಗಳು ಮಾತ್ರ ಕಾಣುವುದು.ಅನ್ಯ ಧರ್ಮದ ಪವಾಡಗಳನ್ನು ಬಯಲು ಮಾಡಲು ಹೋದರೆ ಏನಾಗುತ್ತದೆ ಎಂದು ನಿಮಗೆ ಗೊತ್ತಿದೆ.ಆದುದರಿಂದ ನೀವು ಹಿಂದೂ ಧರ್ಮ ಬಿಟ್ಟು ಅನ್ಯ ಧರ್ಮದ ಉಸಾಬರಿಗೆ ಹೋಗುವುದಿಲ್ಲ.ಶಾಂತಿಪ್ರಿಯರನ್ನು ಹೀಯಾಳಿಸಿ ಪ್ರಚಾರಗಿಟ್ಟಿಸಲು ನಿಮಗೆ ನಾಚಿಕೆಯೆನಿಸುವುದಿಲ್ಲವೇ?

ಹೋಂ ಸ್ಟೇಯಂತಹಾ ದಾಳಿಗಳು ಮರುಕಳಿಸದೇ ಇರಬೇಕಾದರೆ ನೈತಿಕತೆಯ ಗೆರೆಯನ್ನು ದಾಟದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ.ಅಮಲು ಪದಾರ್ಥ ಸೇವಿಸಿ ಡಿಜೆಗೆ ಮೈಮರೆತು ಕುಣಿಯುವುದು,ದೇಹವನ್ನು ತೆರೆದು ತೋರಿಸುತ್ತಾ ದೇಹ ಬೆಸೆದು ಕಾಮ ತಣಿಸುವುದು ಮಾತ್ರ ಬಾಂಧವ್ಯವಲ್ಲ.ಅದರ ಬದಲು ಮನಸ್ಸುಗಳು ತೆರೆದುಕೊಳ್ಳುವಂತಹಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಲ್ಲಿ ಹಿರಿಯರು,ಯುವಕ-ಯುವತಿಯರು ಪ್ರಯತ್ನಿಸಬೇಕಾಗಿದೆ.ಪಡೀಲ್‌ನ ಹೊಂ ಸ್ಟೇ ಬಗ್ಗೆ ಸ್ಥಳೀಯರು ಆಕ್ರೋಶ ಹೊಂದಿದ್ದರು ಎಂದಾದರೆ ಅಲ್ಲಿ ಏನು ನಡೆಯುತ್ತಿತ್ತು ಎಂಬುವುದನ್ನು ಸಾಮಾನ್ಯ ನಾಗರಿಕನೂ ಅರ್ಥೈಸಿಕೊಳ್ಳಬಹುದಾಗಿದೆ.

-ಪ್ರಭಾ, ಕುಪ್ಪೆಪದವು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-21

Tell a Friend

ಪ್ರತಿಸ್ಪಂದನ
SHAMEEM , MANGALORE
2012-09-02
ಪ್ರಶಾಂತ್ ಅಮೀನ್ ರವರೆ ಇ ವರದಿ ಬಂದ ೧೨ ದಿನಗಳ ನಂತರ ತಾವೂ ಗಾಢ ನಿದ್ದಯಿಂದ ಹೊರಬಂದಿದಿರಿ. ದೇಶದ ಸಮಗ್ರತೆಗೆ ದಕ್ಖೆ ತರುವ ಪ್ರತ್ಯೇಕವಾದ, ಕೋಮುವಾದ ಯಾರೇ ಪ್ರತಿಪಾದಿಸಲಿ ಅವರು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಯಾರೇ ಆಗಿರಲಿ ಪ್ರತಿಬಟಿಸಬೇಕಾದದ್ದು ಜನಹಿತ ಬಯಸುವ ಎಲ್ಲರ ಕೆಲಸವಾಗಿದೆ.

ಇಲ್ಲಿ ಯಾರು ಹಿಂದೂ ಧರ್ಮವನ್ನು ಅವಹೆಳನಮಾಡಿಲ್ಲ. ಸಂಘಪರಿವಾರವೆ ಹಿಂದೂ ಧರ್ಮ ಎಂದೂ ತಾವೂ ತಪ್ಪು ಬಾವಿಸಿದ್ದಿರಿ. ಸಂಘಪರಿವಾರಕ್ಕು ಹಿಂದೂ ಧರ್ಮಕ್ಕೂ ಅಜಗಜಾಂತರವಿದೆ. ನೀವು ಎರಡನ್ನು ಒಂದೇ ಎಂದು ಬಾವಿಸಬೇಡಿ. ಇದನ್ನು ತುಂಬಾ ವಿವರಿಸಬೇಕಾದ ಅಗತ್ಯ ಇಲ್ಲ ಅಲ್ಲವೇ? ದೇಶ ಪ್ರೇಮ ಯಾವ ಜಾತಿಯ ಗುತ್ತಿಗೆಯು ಅಲ್ಲ. ಬರಿಯ ಜಾತಿ ನಿಷ್ಟೆಯನ್ನು ಬರಿಯ ಭೂಪಟ ಪ್ರೇಮವನ್ನು ಮತ್ತು ಸಂಘಪರಿವಾರ ಪ್ರೇಮವನ್ನು ರಾಷ್ಟ್ರ ಪ್ರೇಮವೆಂದು ಪ್ರಚಾರ ಮಾಡಲಗುತಿದ್ದೆ.

ದೇಶ ಎಂದರೆ ಕೇವಲ ಮಣ್ಣು ಅಲ್ಲ, ದೇಶ ಅಂದರೆ ದೇಶದ ಚೈತನ್ಯ ಇಲ್ಲಿನ ಸಂವಿಧಾನ ಗಾಳಿ, ಮರ , ಸಂಪನ್ಮೂಳಗಳೆಲ್ಲ ಒಟ್ಟು ಸೇರಿ ದೇಶ ನಿರ್ಮಾಣವಾಗುತ್ತದ್ದೆ. ದೇಶಕ್ಕೆ ಒಂದು ಅಗೋಚರ ಆತ್ಮವಿದೆ ಇಲ್ಲಿನ ಸಂವಿಧಾನಕ್ಕೆ ವಿರುದ್ದವಾಗಿ ನೀವು ವರ್ತಿಸಿದರೆ ಅ ಆತ್ಮಕ್ಕೆ ವೇದನೆಯಾಗುತ್ತದೆ. ಇಲ್ಲಿನ ಮರಮಟ್ಟುಗಳನ್ನು ಕಡಿದರೆ ವಾತಾವರಣದಲ್ಲಿ ಮತೀಯ ವಿಷ ವಾಯು ತುಂಬಿದರೆ ದೇಶದ ಆತ್ಮ ನರಳುತದೆ . ಪರಸ್ಪರ ಆತ್ಮಗೌರವಕ್ಕೆ ಬೆಲೆ ಕೊಡಬಲ್ಲ ಮನುಷ್ಯ ಮಾತ್ರ ದೇಶದ ಆತ್ಮವನ್ನು ಸರಿಯಾಗಿ ಗುರುತಿಸಬಲ್ಲ. ಮನುಷ್ಯನನ್ನು ಪ್ರಿತಿಸಲರಾದವನು ದೇಶವನ್ನು ಪ್ರಿತಿಸಲಾರ. ಸಂವಿಧಾನವನ್ನು ಗೌರವಿಸದವನು ದೇಶವನ್ನು ಗೌರವಿಸಲಾರ.

ನಾವು ಜೀವಿಸುವ ಜಗತ್ತು ನಮಗಷ್ಟೇ ಅಲ್ಲ ಇತರ ಜೀವಿಗಳಿಗೂ ಸೇರಿದ್ದು ಎಂಬ ಸತ್ಯ ಮಾನವನಿಗೆ ಎಂದೂ ತಿಳಿದೀತು ! ಇಂತಹ ಪರಿಸ್ಥಿತಿಗೆ ಯಾರು ಕಾರಣ? "ನಮ್ಮ ಈ ತಲೆಮಾರಿನಲ್ಲಿ ನಾವು ನೀಚರ ದುಷ್ಕ್ರತ್ಯಗಳಿಗೆ ತಲೆ ತಗ್ಗಿಸುದಕ್ಕಿಂತ ಹೆಚ್ಚು, ಸಜ್ಜನರ ನಿಷ್ಕ್ರಿಯ ಮಾನಕ್ಕೆ ಲಜ್ಜೆಪಡ ಬೇಕಾಗಿದೆ." ಎಂದ ಮಾರ್ಟಿನ್ ಲೂಥರ್ ಕಿಂಗ್ ನ ಮಾತುಗಳು ಮನನಿಯವಾಗಿದೆ.

ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ಆದುದೆಲ್ಲಾ ಒಳ್ಳೆಯದಕ್ಕಾಗಿ ಆಗುವುದೆಲ್ಲವೊ ಒಳ್ಳೆಯದಕ್ಕಾಗಿ ಇನ್ನು ಮು೦ದೆ ಆಗಲಿರುವುದೊ ಒಳ್ಳೆಯದು ಕಳಕೊ೦ಡದ್ದನ್ನು ನೆನೆದು ದು;ಖಿಸುದೇಕ್? ಕಳಕೊ೦ಡದ್ದು ಯಾವುದಾದರೂ ನೀವು ತ೦ದಿರುವುದೋ? ನಾಶವಾದುದು ಯಾವುದಾದರೊ ನೀವು ಸೃಶ್ಟಿಸಿರುವುದೋ? ನೀವು ಪಡೆದುದೆಲ್ಲಾ ನಿಮಗೆ ಇಲ್ಲಿ೦ದಲೇ ದೊರೆತಿರುವುದು ನಿಮಗಿರುವುದೆಲ್ಲಾ ಇಲ್ಲಿ೦ದಲೇ ಪಡೆದಿರುವುದು ಇ೦ದು ನಿಮಗಿರುವುದೆಲ್ಲಾ . ನಿನ್ನೆ ಬೇರೆ ಯಾರದೋ ಆಗಿತ್ತು ನಾಳೆ ಅದು ಮತ್ತೆ ಯಾರದೋ ಆಗುವುದು ಪರಿವರ್ತನೆ ಪ್ರಕೃತಿ ನಿಯಮ.
ಮಲ್ಲಿಕಾರ್ಜುನ, ಹೊಸಪೇಟೆ
2012-08-24
ಸತ್ಯಕ್ಕೆ ತುಂಬಾ ಹತ್ತಿರದ ಲೇಖನ..... ಪ್ರತಿಯೊಬ್ಬರೂ ಇದೇ ರೀತಿ ಅವಲೋಕನ ನಡೆಸಿದರೆ ಹುಚ್ಚು ಹೇಳಿಕೆ ನೀಡಿ ಪೆಚ್ಚರಾಗೋದು ತಪ್ಪುತ್ತೆ... ಅದ್ಕೇ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಅನ್ನೋದು..
ಕೃಷ್ಣ , ತುಳುನಾಡು
2012-08-24
ಅತ್ಯುತ್ತಮವಾದ ಲೇಖನ ಪ್ರಭಾ ಅವರೇ.... ನಿಮ್ಮ ಲೇಖನ ಎಲ್ಲ ಹಿಂದು ಸಹೋದರಿಯರಿಗೆ ಸ್ಪೂರ್ತಿಯಾಗಲೀ..... ಮೇಲೆ ಕೆಲವು ಕಳ್ಳ ದೇಶದ್ರೋಹಿಗಳು ಬಾಯಿಬಡಿದುಕೊಳುತ್ತಿದ್ದಾರೇ.... ನೀವು ತಲೆಕೆಡಿಸಿಕೋಬೇಡಿ.... ಧನ್ಯವಾದಗಳು.... ಈ ಲೇಖನ ಪ್ರಕಟಿಸಿದ "ಗಲ್ಫ್ ಕನ್ನಡಿಗರ ತಂಡಕ್ಕೆ ಧನ್ಯವಾದಗಳು....
ಸಮಾಜವಾದಿ , ತಲಪಾಡಿ
2012-08-23
ಸಂತೋಷ ರವರೆ ಆಹಾ ಎಷ್ಟೊಂದು ಕೇಸರಿಮಯವಾಗಿದೆ ನಿಮ್ಮ ಪ್ರತಿಕ್ರಿಯೆ, ತಾವು ಬೇರೆಯವರ ಪ್ರತಿಕ್ರಿಯೆ ನೋಡಿಯೇ ಅವರ ಜಾತಿ, ಕುಲ ಗೋತ್ರ ಬಗ್ಗೆ ಚಿಂತೆ ಮಾಡುತ್ತೀರಾ, ಯಾವಾಗಲಾದರು ಆ ಬರಹದಲ್ಲಿರುವ ಸತ್ಯವನ್ನು ತಿಳ್ಕೊಳ್ಳೋಕೆ ಪ್ರಯತ್ನ ಮಾಡಿದ್ದೀರಾ? ಇಲ್ಲ.. ಅದು ನಿಮ್ಮ ತಪ್ಪಲ್ಲ ಬಿಡಿ, ಅದು ಕೇಸರಿ ಪಡೆಗಳು ನಿಮಗೆ ಜಾತಿ ಜಾತಿ ಎಂದು ಕಲಿಸಿ ಕೊಟ್ಟ್ದದರ ಫಲ.

ಇನ್ನೊಂದು ವಿಷಯ, ಯಾರ ಭಾರತೀಯತೆ ನಿಮ್ಮ ಕೆಸರಿತನದಿಂದ ಅಳೆಯಬೇಡಿ ಮತ್ತು ಭಾರತೀಯತೆಯನ್ನು ಕೆದಕಲು ಹೋಗಬೇಡಿ. ನಿಮಗೆ ಯಾವುದೇ ಹಕ್ಕಿಲ್ಲ ಯಾರು ಭಾರತೀಯ ಮತ್ತು ಯಾರು ದೇಶ ದ್ರೋಹಿ ಎಂದು ಬೊಗಳಲು . ತಮಗೇನು ಪ್ರಮಾಣ ಪತ್ರ ಸಿಕ್ಕಿದೆಯ ದೇಶ ಪ್ರೇಮದ? ಸಿಕ್ಕಿದ್ದಲ್ಲಿ, ಯಾವುದರಿಂದ ಸಿಂದಗಿ ಪ್ರಕರಣದಲ್ಲೋ, ಚರ್ಚ್ ದಾಳಿಯಲ್ಲೋ, ಬಾಬ್ರಿ ಮಸೀದಿ ಪ್ರಕರಣದಲ್ಲೋ, ಪಬ್ಹ್ ದಾಳಿಯಲ್ಲೋ, ರೆಸಾರ್ಟ್ ದಾಳಿಯಲ್ಲೋ ಅಥವಾ ಭಾರತದಲ್ಲಿ ನಡೆಸಿದ ಯಶಸ್ವೀ ಸ್ಪೋಟ ಪ್ರಕರಣದಲ್ಲೋ?.

ಇನ್ನು ಅಬ್ದುಲ್ ಲತೀಫ್ ಎಂಬ ಮಹಾಶಯ, ತನ್ನ ಕೇಸರಿ ಪಡೆಯತ್ತ ಇರುವ ಒಲವು ಮತ್ತು ಕೇಸರಿ ಮಾರುಕಟ್ಟೆ ವಿಸ್ತರಿಸುವುದನ್ನು ತನ್ನಲ್ಲೇ ಇಟ್ಟುಕೋ. ನಿನ್ನ ಬಗ್ಗೆ ಬಹಳ ಮರುಕ ಹುಟ್ಟುತ್ತೆ ಸಾಹೇಬ್ರೆ...! ನಿಮ್ಮ ಕುಟುಂಬ ಚೆನ್ನಾಗಿ ಇರಲಿ, ಏಕೆಂದರೆ ನಿಮ್ಮಂತೆ ದೇಶ ಸೇವೆ ಮಾಡಲು ಹೋಗಿ ತನ್ನೆಲ್ಲವನ್ನು ಅರ್ಪಿಸಿ ಹೈ ಟೆಕ್ ವೇಶ್ಯಾವಾಟಿಕೆಯಲ್ಲಿ ಇತರ ಸಂಘ ಪರಿವಾರ ನಾಯಕರೊಂದಿಗೆ ನಷೆಯಲ್ಲಿದ್ದಾಗ ಸಿಕ್ಕಿಬಿದ್ದ ಅಲ್ಪಸಂಖ್ಯಾತ 'ಮಹಿಹಾಮಣಿಗಳ' ವಿದೇಶ ಪ್ರೇಮ ನಿಮ್ಮ ಕುಟುಂಬಕ್ಕೆ ಬಾರದಿರಲೆಂದು ಆಶಿಸುತ್ತೇನೆ. ಸಿಕ್ಕಿ ಬಿದ್ದ 'ಮಹಿಹಾಮಣಿಗಳು' ಯೆಡ್ಡಿ ಮತ್ತು ಸಂಘನಿಕೆತನ ಕೇಶವ ಕ್ರುಪದಲ್ಲಿ ಎಲ್ಲ ಸಂಘಪರಿವಾರದವರಿಗೆ ರಾಖಿ ಕಟ್ಟಿ, ಅವರೊಂದಿಗೆ ರಾತ್ರಿಯಲ್ಲಿ ನಶೆಯಲ್ಲಿದ್ದರೆಂದರೆ ನಂಬೋಕ್ಕಾಗಲ್ಲ ಲವ ಸಾಹೇಬರೇ.

ಸಂತೋಷ್ , ಉಡುಪಿ
2012-08-22
ಇಲ್ಲಿ ಪ್ರಭಾ ಕುಪ್ಪೆಪದವು ರವರು ಜಯಕಿರನದಲ್ಲಿ ಬರೆದ ಲೇಖನ ಪ್ರಕಟವಾಗಿದ್ದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದುದನ್ನು ಗಮನಿಸುತ್ತಾ ಇದ್ದವರಲ್ಲಿ ನಾನೂ ಒಬ್ಬ.

ವಿಶೇಷ ವೆಂದರೆ ಪ್ರತಿಕ್ರಿಯೆ ಬರೆದವರಲ್ಲಿ 99 % ಮುಸಲ್ಮಾನ ಬಂಧುಗಳು ಹಾಗೂ ತನ್ನ ಹೆಸರನ್ನು ಮರೆಮಾಚಿ ಹಿಂದೂ ಧರ್ಮದವರ ಹೆಸರನ್ನು ಬರೆದು ಪ್ರತಿಕ್ರಿಯೆ ಬರೆದವರು! ಉದಾಹರಣೆಗೆ Sandesh Shetty, prabhaava, ಇತ್ಯಾದಿ...ನಿಜವಾಗಿ ನೋಡಿದರೆ ಅವರ್ಯಾರಿಗೂ ಈ ಘಟನೆಯಲ್ಲಿ ಎಳ್ಳಷ್ಟೂ ಸಂಬಂಧವಿಲ್ಲ. ಅವರ ಮನೆಯ ಯಾವೊಬ್ಬ ಹುಡುಗ ಯಾ ಹುಡುಗಿ ಈ ಘಟನೆಯಲ್ಲಿರಲಿಲ್ಲ. ಮತ್ಯಾಕೆ ಈ ಮಂದಿ ತಮಗಲ್ಲದ ವಿಷಯದಲ್ಲಿ ತಲೆತೂರಿಸುತ್ತಾರೋ ತಿಳಿಯುತ್ತಿಲ್ಲ.

ಅಂದರೆ ಒಂದರ್ಥದಲ್ಲಿ ಇತರರ ಮನೆಗೆ ಬೆಂಕಿ ಹಾಕಿ ತಾವು ಚಳಿಕಾಯಿಸಿಕೊಳ್ಳುವ ಚಪಲ ಅಷ್ಟೇ ಎನ್ನಬಹುದಲ್ಲದೆ ಬೇರೆ ಅರ್ಥವಿಲ್ಲ. ಕುಂದಾಪುರದ ಒಬ್ಬ ಸಯ್ಯದ್ ಸಾಹೇಬರೆಂತೂ ತಾನೊಬ್ಬನೇ ಮತಿವಂತ ಬೇರೆಲ್ಲರೂ ಹುಚ್ಚರು ಎಂಬಂತೆ ಬರೆದಿದ್ದಾರೆ. ವಿಚಿತ್ರವಾಗಿದೆ ಇವರ ನಡವಳಿಕೆಗಳು. ಯಾವುದೇ ಒಬ್ಬ ತಿಳುವಳಿಕೆ ಉಳ್ಳ ಮನುಷ್ಯ ತನಗೆ ಸಂಬಂಧ ಪದದ ವಿಷಯಗಳಲ್ಲಿ ತಲೆಹಾಕಲಾರ. ಅದರರ್ಥವೆಂದರೆ ಸಮಾಜದಲ್ಲಿ ಕಿಡಿಹಚ್ಚಿ ತಮಾಷೆ ನೋಡುವ ಕ್ರೂರ ಹಗ್ಗೋ ವಿಕ್ರತ ಸ್ವಭಾವ.

ಇಂದು ಪ್ರತಿಕ್ರಿಯೆ ಬರೆದಿರುವ ಅಬ್ದುಲ್ ಲತೀಫ್ ಕಲ್ಲಿಗೆ ಯವರು ನಿಜವಾಗಿಯೂ ಅಪ್ಪಟ ಭಾರತೀಯ. ಮನದಾಳದ ಸಲಾಂ ಅಬ್ದುಲ್ ರವರೆ ನಿಮಗೆ. ಆದರೆ ಕಾದು ನೋಡಿ ನಿಮ್ಮ ನಿಷ್ಕಲ್ಮಶ ಬರಹಕ್ಕೆ ಅದೆಷ್ಟು ಕಲಹ, ಗಲಭೆಪ್ರಿಯರುಗಳ ಪ್ರತಿಕ್ರಿಯೆ ಬರಬಹುದೆಂಬುದನ್ನು...

ಮುನ್ಸಾಮಿ, ಕಾರಯನ್ ಕೊಪ್ಲು
2012-08-22
ಇದ್ದದನ್ನು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಾಂಗೆ ಬರ್ದೌರೆ ಸಿವಾ ಪ್ರತಿಕ್ರಿಯೇಗಳ್ನಾ...
ಸಬ್ಬನ ಕೊಡಿ ಈಶ್ವರ ಭಟ್, ಸಂಯುಕ್ತ ಅರಬ್
2012-08-22
ಪ್ರತಿಕ್ರಿಯೆ ಗಳಲ್ಲಿ ಕಾದಾಟ... ಕೊಳಕು ಅಹಮ್ಮ್ ..... ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಸಿಗರೆಟ್ ಸೇದುವವರು .... ಇನ್ನೊಬ್ಬರ ಕಷ್ಟದಲ್ಲಿ ನಗುವವರು .... ನೋಡಿ ಸ್ವಾಮಿ ನಾವಿರುವುದೇ ಹೀಗೆ ...... ಪ್ರಣವ್ ಮಂಗಳೂರು ಅವರೇ ವಸಿ ತಡ್ಕೊಲಿ ... ನಮ್ಮವರೆಲ್ಲರೂ ಸೇರಿಗೆ ಸವ ಸೇರ್ಗಲೇ!!!! ... ನಮ್ಮೆಲ್ಲರಿಗೂ HI- ಕರೆಂಟ್ ಶಾಕ್ ಕೊಟ್ಟೆ ಕೊಡುತಾರೆ .....
ಅಬ್ದುಲ್ ಲತಿಫ್ ಕಲ್ಲಿಗೆ , ಕಲ್ಲಿಗೆ-ಬಾಇಕಟ್ಟೆ-ಉಪ್ಪಳ
2012-08-22
ಈ ವಾರ್ತೆಗೆ ಬಂದ ಪ್ರತಿಕ್ರಿಯೆ ನೋಡಿಧರೆ ನಾವು ಎಂಥಹ ಮೂಡರ ಲೋಕದಲ್ಲಿ ಬದುಕುತಿದ್ದೇವೆ ಎಂಧು.... ಎದ್ದೇಳಿ ಬಂದುಗಳೇ ಎದ್ದೇಳಿ...... ಮತಭ್ರಸ್ತರು ಮತ್ತು ಮತೀಯ ಗಲಬೆ ಗಳನ್ನೂ ಮಾಡಲೆಂದೇ ಹುಟ್ಟಿದ ಹುಳಗಲಿವರು .....

ನಾನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಜನ್ಮ ಸದಸ್ಸ್ಯ.. ಈ ವಾರ್ತೆಗೆ ಗೆ ಪ್ರತಿಸ್ಪಂದಿಸಿಧ ಕೆಲವು ಹುಳಗಳು ಸಮಾಜವನ್ನು ಹಾಳುಮಾದೆಲೆಂದೇ ಹುಟ್ಟಿದಂತಿದೆ. ನಾನು ಹುಟ್ಟಿ ಬೆಳುದು ಬಂದ ನಾಡಿನಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧ ಭಾವ ವಿರಲ್ಲಿಲ್ಲ. ನಾನೊಬ್ಬ ಕಟ್ಟಾ ಮುಸಲ್ಮಾನ ಹಾಗೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ನನ್ನ ಪರಮ ಮಿತ್ರ . ಬದುಕು ಕಳಿಸಿಕೊಟ್ಟ ಪಾಠ ಶಾಲೆ, ತಪ್ಪು ಮಾಡಿದವರು ಯಾರೇ ಆಗಿರಲಿ ಅವರನ್ನು ದಂಡಿಸಬೇಕು ಎನ್ನುವುದು ನಮ್ಮ ಅಂಬೋಣ.

ಹೋಂ ಸ್ಟೇ ಇದೊಂದು ಕೆಟ್ಟ ಕೆಲಸ ಗಳಿಗಾಗಿ ಮೀಸಲಿಟ್ಟ ಜಾಗ. ದಾಳಿ ನಡೆದ ಸಮಯದಲ್ಲಿ ಜೊತೆಗಿದ್ದ ನಮ್ಮ ಮಿತ್ರರಾದ (ಪತ್ರಕರ್ತ) ರಫೀಕ್ ಅವರ ಅನುಭವದ ಪ್ರಕಾರ. ಅಲ್ಲಿ ಇದ್ಧ ೩ ಮಹಿಹಾಮಣಿಗಳು ಹುಟ್ಟು ಉಡುಗೆಯಲ್ಲಿ ತಮ್ಮ ಜೊತೆಗಾರರ ಜೊತೆ ಶೃಂಗಾರದಲ್ಲಿ ಮಗ್ನ ರಾಗಿದ್ದರು. ದಾಳಿ ಕೋರರ ಜೋತೆಗಿದ್ಧ ಪುಂಡು ಪೋಕರಿಗಳ ಕ್ಯಾಮೆರಾ ಫೋನ್ ನಲ್ಲಿ ಈಗಲೂ ಈ ರಸಮಯ ದ್ರಷ್ಯಗಳು ಹರಿದಾಡುತ್ತಿವೆ ಎನ್ನುವುಧು ನಗ್ನ ಸತ್ಯ. ಈ ಮಾನವಂತೆ ( ತುಳುವಿ ನ ವಂತೆ ) ಯಾರದ ಮಹಿಹಾಮಣಿಗಳು ನಶೆಯಲ್ಲಿ ಇದ್ದರು ಎಂಬುವುದು ಇನ್ನೊಂದು ಕಟೋರ ಸತ್ಯ .. ಈ ಎಲ್ಲ ಸತ್ಯಗಳನ್ನು ಹೊರ ಬರದಂತೆ ಬ್ರೇಕ್ ಹಾಕಿಧ ನಮ್ಮ ಪೋಲಿಸ್ ಇಲಾಖೆಗೆ ದನ್ಯವಾದಗಳು . ( ಆ ಮಹಿಹಾಮಣಿಗಳಲ್ಲಿ ಒಬ್ಬರು ಪೋಲಿಸ್ ಅಧಿಕಾರಿಯ ಸು ಪುತ್ರಿ ಇದ್ದರೆಂದು ಜನರ ಮಾತು )

ಮಹಿಹಾಮಣಿಗಳನ್ನು ಮರ್ದಿಸಿದ್ಧು ಕಂಡನೀಯ. ಇನ್ನು ಪ್ರಭಾವತಿ ಅವರ ಮುಸ್ಲಿಂ ಹುಡುಗಿಯನ್ನು ಅನ್ನಿ ಧರ್ಮೀಯರು ಮಾಡುವೆ ಆಗುವ ವಿಚಾರ .. ಆಧಾರ ಬಗ್ಗೆ ಯಾರ್ರೂ ಚಕಾರ ಎತ್ತಿದಂತಿಲ್ಲ .. ಎಲ್ಲ ಮತಗಲ್ಲಿಯೂ ಕಟ್ಟು ಪದುಗಳಿವೆ ಆಧರೆ ನಮ್ಮ ಮತದಲ್ಲಿ ಅಧಕ್ಕೆ ಪ್ರಮುಕ್ಯ್ಥೆ ಜಾಸ್ತಿ ಇದೆ .

ನಮ್ಮ ಮನೆಯಲ್ಲಿ ನಮ್ಮ ತಂಗಿಯರಿಗೆ ಓದಿಸುವುಧಕ್ಕೆ ಬಹಳ ವಿರೋಧ ವ್ಯಕ್ತ ವಾಗಿತ್ತು .. ನಮ್ಮ ಹಿರಿಯರನ್ನು ಕೆರಸಿ ನಮಗೆ ಮುಸ್ಲಿಂ ವಿರೋಧಿ ಪಟ್ಟ ಕಟ್ಟುವ ಹುನ್ನಾರವೂ ನಡೆದಿತ್ತು .. ಹಿಂದೂ ಮಿತ್ರರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವ ಮಹಾನ್ ಸಂಘಟನೆ ಇಂದ ನಮ್ಮ ಸಂಸಾರದಲ್ಲಿ ಎಲ್ಲರೂ ವಿದ್ಯಾವಂತ ರಾಗಿದ್ದೇವೆ . ನಾನೊಬ್ಬ ಮುಸಲ್ಮಾನ್ ಆಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸದಸ್ಯನಾಗಿ ಬದುಕಲು ಆಸೆ ಪಡುತ್ತಿದೇನೆ ..

ಬಂದುಗಳೇ ದೂರದ ಊರಿನಲ್ಲಿ ಇದ್ಧು ಬೆಂಕಿಯ ಕಿಡಿಯನ್ನು ಹಾಕಿ ತಮಾಷೆ ನೋಡುವುಧು ಸುಲಬವಾದ ಕೆಲಸ .. ಇನ್ನಾದರೂ ಎಚ್ಹೆತ್ತುಕೊಳ್ಳಿ ಇಂಥಹ ಕಚಡ ಸಂಸ್ಕ್ರತಿಗೆ ಯಾರಿಗೂ ಬೇಡ ... ಹೊರ ದೇಶದಲ್ಲಿ ಇರುವ ಬಂದುಗಳೇ ನಮ್ಮ ಸಮಸ್ಕ್ರಿಥಿಯನ್ನು ಒಲಿಸಲು ನಮಗೆ ಸಹಾಯಮಾಡಿ . ಕಿಡಿ ಹಚ್ಹುವುದನ್ನು ನಿಲ್ಲಿಸಿ .. ಈ ಪರಿಸ್ತಿತಿ ಯಾರಿಗೂ ಬರುವುದು ಬೇಡ .. ನಿಮಗೆ ಬಂದರೆ ನಿಮ್ಮ ಮನೆಯವರಿಗೆ ಬಂದರೆ ಎಂದು ಕೇಳುವ ಬದಲು ಯಾರಿಗೂ ಈ ಕಷ್ಟ ಬರದಿರಲಿ ಎಂದು ಆಶಿಸೋಣ ...

Pranav, Mangalore
2012-08-22
ಪ್ರಭಾವ ಮಂಗ್ಲುರ್, ದೇಶಪ್ರೇಮಿಯ ಪ್ರತಿಕ್ರಿಯೇ ಓದಿದ ತಕ್ಷಣ ಕರೆಂಟ್ ಒಡ್ದ ಕಾಗೆ ಯಂತಾಗಿದೆಯಲ್ಲ ಸ್ವಾಮಿ ನಿಮ್ಮ ಪರಿಸ್ಥಿತಿ. ಛೇ.... ಒಸಿ ಸುಧಾರಿಸ್ಕೊಳ್ಳಿ.
Prabhaava, Mangalore
2012-08-22
Quote : ನಿಮ್ಮ ಮನೆಯ ಹೆಣ್ಣುಮಕ್ಕಳು ಅರೆಬರೆ ಬಟ್ಟೆ ಹಾಕಿಕೊಂಡು ಹೋಂ ಸ್ಟೇ ನಲ್ಲಿ ಈ ರೀತಿಯಾಗಿ ತದಕಿಸಿಕೊಂಡಿದ್ದಿದ್ದರೆ ತಮ್ಮ ಪ್ರತಿಕ್ರಿಯೇ ಹೇಗಿರುತ್ತಿತ್ತು? Unquote- ಈ ಪ್ರಶ್ನೆಯನ್ನು ತಮ್ಮಲ್ಲೇ ತಾವು ಕೇಳಿ ನೋಡಿ ಉತ್ತರ ಸಿಕ್ಕೀತು...

Quote :ಇದರಿಂದ ಕೆಲವು ಜನರು, ಮಾಧ್ಯಮ, ಸಂಘಟನೆಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಪ್ರತಿಭಟನೆ ಮಾಡಿ ಟಿ.ವಿ.ಯ ಮುಂದೆ ಫೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಏನಾಯಿತು ಎನಾದರೂ ಪ್ರಳಯವಾಯಿತಾ? Unquote - ಏನೂ ಆಗಲ್ಲ..!ಅದಕ್ಕೆ ಎಲ್ಲರೂ ನಿಮ್ಮ ನರಸತ್ತ ಸರಕಾರದ ಬಗ್ಗೆ ಮತ್ತು ಅದಕ್ಕೆ ಬೆಂಬಲಿಸುವ ನಿಮ್ಮಂತವರ ಬಗ್ಗೆ ಪ್ರತಿಕ್ರಿಯೆಗಳು ಬರೆದಿರುವುದು.

Quote : ಸಂಪ್ರದಾಯಸ್ಥ ಮನೆಯ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಯಾವ ಯಾವ ಪಾರ್ಟಿಗೆ ಕಳುವಿಸ ಬೇಕೆಂಬುದನ್ನು ಈ ಘಟನೆಯಿಂದ ಇನ್ನು ಹೆಚ್ಚು ತಿಳಿದುಕೊಂಡಿದ್ದಾರೆ. Unquote - ಸಂಪ್ರದಾಯಸ್ತರು ಪಾರ್ಟಿ ಮಾಡುತಾರ? ಈ ಘಟನೆಯಿಂದ ಕಲಿಯಬೇಕಾದದ್ದು ಪೋಲಿ ಪುಂಡರಿಗಂತೂ ತುಂಬಾ ಇದೆ, ಸಂಪ್ರ ದಾಯಸ್ತರಿಗೆ ಏನಿದೆ ಒಸಿ ಹೇಳ್ತೀರಾ ದೇಶ ಪ್ರೆಮಿಯವರೇ...

'ಇನ್ನು ಕೋಟ್ಯಾಂತರ ಜನರ ಮೆಚ್ಚುಗೆ' - ಸಂಘ ಪರಿವಾರದಲ್ಲಿ ಪುಂಡ ಸದಸ್ಯರು ಮತ್ತು ವಿಘ್ನ ಸಂತೋಷಿಗಳು ಇಷ್ಟೊಂದು ಸಂಖ್ಯೆಯಲ್ಲಿದ್ದಾರೆಂದು ಈವಾಗಲೇ ಗೊತ್ತಾಗಿದ್ದು, ಬಿಡಿ ಅದೇನು ಮಹಾ..!

ದೇಶ ಪ್ರೇಮಿ , ಮಂಗಳೂರು
2012-08-22
ಪ್ರಭಾ ಕುಪ್ಪೆಪದವು ಬರೆದ ಸತ್ಯಾಂಶದ ಮೇಲೆ ಬೆಳಕು ಚೆಲ್ಲುವ ಲೇಖನವನ್ನು ಓದಿದನಂತರ ಕೆಲವರಿಗೆ ಮೈಕೈ ಪರಚಿಕೊಂಡಾಂತಾಗಿದೆ. ಅದಕ್ಕೆ ಸರಿಯಾಗಿಯೇ ಪ್ರತಿಕ್ರಿಯೆ ಬರೆದಿದ್ದಾರೆ.

ಪ್ರತಿಯೊಂದು ಬಾರಿಯೂ ಆರ್.ಎಸ್.ಎಸ್. ಎಂದು ಪೂರ್ವಾಗ್ರಹ ಪೀಡಿತರಾಗಿ ಬರೆಯುವ ತಮ್ಮಲ್ಲಿ ಒಂದು ಪ್ರಶ್ನೆ? ನಿಮ್ಮ ಮನೆಯ ಹೆಣ್ಣುಮಕ್ಕಳು ಅರೆಬರೆ ಬಟ್ಟೆ ಹಾಕಿಕೊಂಡು ಹೋಂ ಸ್ಟೇ ನಲ್ಲಿ ಈ ರೀತಿಯಾಗಿ ತದಕಿಸಿಕೊಂಡಿದ್ದಿದ್ದರೆ ತಮ್ಮ ಪ್ರತಿಕ್ರಿಯೇ ಹೇಗಿರುತ್ತಿತ್ತು? ಬರೆಯುವವರು ಏನು ಬೇಕಾದರೂ ಬರೆದುಕೊಳ್ಳಿ, ಆದರೆ ಒಂದು ಮಾತ್ರ ಸತ್ಯ, ಪೆಟ್ಟು ತಿಂದ ಮನೆಯವರ ತಂದೆ ತಾಯಿಗಳಿಗೆ ತಮ್ಮ ಮಕ್ಕಳಿಂದ ಮಾಧ್ಯಮದ ಮೂಲಕ ಮಾನ ಮಾರ್ಯಾದೆ ಹರಾಜಾಗಿ ತಲೆ ತಗ್ಗಿಸಿದ್ದು ಮರೆಯಲಾರದ ಘಟನೆಯಾಗಿದೆ.

ಇದರಿಂದ ಕೆಲವು ಜನರು, ಮಾಧ್ಯಮ, ಸಂಘಟನೆಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಪ್ರತಿಭಟನೆ ಮಾಡಿ ಟಿ.ವಿ.ಯ ಮುಂದೆ ಫೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಏನಾಯಿತು ಎನಾದರೂ ಪ್ರಳಯವಾಯಿತಾ? ಆದರೆ ನಿಜವಾಗಿಯೂ ಸಂಪ್ರದಾಯಸ್ಥ ಮನೆಯ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಯಾವ ಯಾವ ಪಾರ್ಟಿಗೆ ಕಳುವಿಸ ಬೇಕೆಂಬುದನ್ನು ಈ ಘಟನೆಯಿಂದ ಇನ್ನು ಹೆಚ್ಚು ತಿಳಿದುಕೊಂಡಿದ್ದಾರೆ. ಯಾವ ನರಸತ್ತ ಆಡಳಿತ ಸರ್ಕಾರದಿಂದ, ಜನರಕ್ಷಣೆಗೆ ಇರುವ ಇಲಾಖೆಗಳು ಭ್ರಷ್ಟಚಾರದಿಂದ ತುಂಬಿ, ಲಂಚದಲ್ಲಿ ಮುಳುಗಿ ಮಜಾಉಡಾಯಿಸಿಕೊಂಡು ಸರ್ಕಾರದ ಸವಲತ್ತಿನಲ್ಲಿ ನಿದ್ದೆ ಮಾಡುವ ವ್ಯವಸ್ಥೆಯಲ್ಲಿ ಈ ರೀತಿಯಾಗಿ ಒಂದೊಂದು ಸಲ ದಾರಿ ತಪ್ಪಿದವರಿಗೆ ಚುರುಕು ಮುಟ್ಟಿಸಿದಾಗಲೆ ಸಮಾಜದಲ್ಲಿ ದಾರಿ ತಪ್ಪಿದವರಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತೆ ಆಗುವುದು.

ಎಲ್ಲಾ ಅಯೋಗದ ಮುಖ್ಯಸ್ಥರು ಜನರ ತೆರಿಗೆಯ ಹಣದಲ್ಲಿ ಜಾಲಿ ಟ್ರಿಪ್ ಮಾಡಿಕೊಂಡು ಎನೇನೊ ವರದಿ ಬರೆದು ಏನು ಕಡ್ದು ಕಟ್ಟೆಹಾಕಿದ್ದು. ಟಿ.ವಿ. ಮಾಧ್ಯಮಗಳು ತಮ್ಮ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಜನಮನದಲ್ಲಿ ಗೊಂದಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹತ್ತಾರು ಜನ ಈ ಲೇಖನದ ಬಗ್ಗೆ ವಿರುದ್ಧವಾಗಿ ಪ್ರತಿಕ್ರಿಯೇ ನೀಡಿರಬಹುದು. ಆದರೆ ಕೋಟ್ಯಾಂತರ ಜನರು ಈ ಲೇಖನದ ಸತ್ಯಾತೆಯನ್ನು ಮೆಚ್ಚಿರುವುದು ಮಾತ್ರ ಖಂಡಿತ.

Sandesh Shetty, udupi
2012-08-22
ಇಲ್ಲೊಬ್ಬ ಹಳದಿಯ ಬಗ್ಗೆ ಮಾತಾಡಿದ್ದಾನೆ. ಏ ಇಲ್ನೋಡು !! ನಿನ್ನ ಹಳೆ ಗಾದೆ ಮಾತು ಬದಲಾಗಿದೆ. ಕೇಸರಿ ಕಣ್ಣಿಗೆ ಕಾಣೂದೆಲ್ಲಾ ಕೇಸರಿಯಂತೆ ಆಗಿದೆ. ಪ್ರಭಾ ಮಂಜುಳಾ (ನಂಜುಳ)ನ ಸಂತಾನದವಳು ಆಗಿರ ಬೇಕು. ಕಲ್ಲಡ್ಕ ಭಟ್ಟ ಮತ್ತು ಕಾರಂತ....
P.P.ABDUL KAREEM THOKUR, POLYA,UCHILA
2012-08-22
ಯುವತಿಯೊಬ್ಬಳ ಮನದಾಳುವಿನ ಮಾತಿಗೆ ಚೆನ್ನಾಗಿ ಪ್ರತಿಕೃಯಿಸಿದ್ದೀರಿ ಶಮೀಮ್ರವರೆ ಈ ಬಗ್ಯೆ ದನ್ಯವಾದಗಳು . ಕಿಲ್ಲರ್ ಮೋಹನ್ ಸುಮಾರು 22 ಹುಡಿಗಿಯರನ್ನು ಆತ್ಯಾಚಾರ ನಡೆಸಿ ಕೊಂದು ಎಲೆಲ್ಲೋ ಬಿಸಡುತ್ತಿದಾಗ ಪ್ರಭಾರವರು ನಿದ್ರಿಸುತ್ತಿದ್ದರೆ .ಅವಾಗ ನಿಮ್ಮ ಮನದಾಳದ ಮಾತು ಎಲ್ಲೊಇಥು ಮೇಡಂ ರವರೆ . ಮಾತ್ರವಲ್ಲ ಹೋಂ ಸ್ಟೇ ದಾಳಿ ನಡೆದು ತಿಂಗಳು ಕಳೆದರು ಈಗ ಅನುಕಂಪ ಬರಲು ಕಾರಣವೇನು ಮೇಡಂ ?.
uadkar, sullia
2012-08-22
ಹಳದಿ ಕಣ್ಣಿಗೆ ಕಾಣುಹುದೆಲ್ಲಹು ಹಳದಿಯೇ! ಇವರು ಯಾಹುದೋ ಕನಸಿನ ಲೋಕದಲ್ಲಿದ್ದಾರೆ! ಆಗಾಗಿ ಇದು ಮನದಾಳದ ಮಾತು ಅಲ್ಲ! ಇವರ ತಪ್ಪನ್ನು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಅಷ್ಟೇ! ಇದಕ್ಕೆ ಹೇಳುತ್ತಾರೆ old wine in new bottle ! Jai Hind !
sheikshiba, ksa riyadh batha
2012-08-22
prabha dis s not ur "manadaladamathu" dis s nanju hedida mathu der s no any comments fever of u
Rahmath , Mangalore
2012-08-22
ಸಹೋದರಿ ಪ್ರಬ ರವರೆ ಇಸ್ತು ಪ್ರಚಾರ ಕೇ ಎಷ್ಟು ಸಿಕ್ಕಿದೆ ?
Venkatesh, Dubಅi
2012-08-22
ಸಹೋದರ ಸಹೋದರಿಯರೇ, ನಿಮ್ಮ ನಿಮ್ಮ ಮನೆಯನ್ನು ಸ್ವಚ್ಛಮಾಡಿ. ಆಗ ಎಲ್ಲವು ಸರಿಯಾಗುತ್ತದೆ. ದಿನಕ್ಕೆ ೮ ರಿಂದ ೧೦ ಗಂಟೆಗಳ ಕಾಲ ಕೆಲಸ ಮಾಡಿ, ಉಳಿದ ಸಮಯವನ್ನು ಕುಟುಂಬಕ್ಕಾಗಿ ಇರಿಸಿ.

ಎಲ್ಲರು ಸಮುದಾಯದ ಮುಖಂಡರು ಎನ್ನಿಸಿಕೊಳಲಾರರು. ಎಲ್ಲರಲ್ಲಿ ಪ್ರೀತಿ, ಸ್ನೇಹ, ಸಹಬಾಳ್ವೆಯನ್ನು ಯಾರು ಹಂಚಿಕೊಳ್ಳುತ್ತಾರೋ ಅವರನ್ನು ಸಮುದಾಯದ ಮುಖಂಡರು ಎಂದು ಗೌರವಿಸಿ. ಒಂದು ವೇಳೆ ಯಾರು ನಿಮ್ಮ ಕಣ್ಣಿಗೆ ಅಂತ ಜನ ಕಾಣಿಸಿಲಿಲ್ಲ ಎಂದರೆ, ನೀವೇ ಅವರಾಗಿಬಿಡಿ. ಆದರೆ ದ್ವೇಷವನ್ನು ಬಿತ್ತಬೇಡಿ. ಅದು ನಿಮ್ಮ ಮನೆಯನ್ನು ಸುಡುತ್ತದೆ.

Sammi, K c road
2012-08-22
ವಾಟ್ ಅ ಐಡಿಯಾ Praha ಸಿಸ್ಟರ್ ಜಿ. ವೆರಿ ಫನ್ನಿ bulshit
Prabhaava, Mangalore
2012-08-21
Quote:ಕೆಲವು ಪುಂಡರು ಯುವತಿಯರನ್ನು ಪ್ರೀತಿ ಪ್ರೇಮದ ನಾಟಕವಾಡಿ ಅವರ ಶೀಲಹರಣ ಮಾಡಿ ಕೊಂದು ಪೊದೆಯಲ್ಲೋ, ನದಿಯಲ್ಲೋ ಎಸೆಯುತ್ತಿದ್ದರು, ವಿದೇಶಗಳಿಗೆ ಮಾರಾಟ, ಮತಾಂತರ ಮಾಡುತ್ತಿದ್ದರು,ವೇಶ್ಯಾವಾಟಿಕೆಗೆ ದೂಡುತ್ತಿದ್ದರು. Unquote- ಸಯನೈಡ್ ಮೋಹನ ಮೇಲೆ ಹೇಳಿದ್ದನ್ನೆಲ್ಲ ಮಾಡುತ್ತಿದ್ದಾಗ ಸಂಸ್ಕೃತಿಯನ್ನು ಗುತ್ತಿಗೆ ತಗೊಂಡ ನಿಮ್ಮ ಸಂಘಟನೆ ಎಲ್ಲಿತ್ತು?.

Quote:ಹಿಂದೂ ಸಂಘಟನೆಗಳು ಕೇವಲ ಅಲ್ಪಸಂಖ್ಯಾತ ಸಮುದಾಯದ ಯುವಕರ ಮೇಲೆ ಮಾತ್ರ ದಾಳಿಮಾಡಿದ್ದಲ್ಲ. ಅನೈತಿಕ ಚಟುವಟಿಕೆ ನಡೆಸುವ, ಹುಡುಗಿಯರನ್ನು ಪ್ರೀತಿಸಿ ವಂಚಿಸಿದ ಹಿಂದೂಗಳ ಮೇಲೂ ದಾಳಿಯನ್ನು ನಡೆಸಿವೆ ಎಂಬುದು ಅರಿಯಬೇಕಾಗಿದೆ, Unquote- ಎಲ್ಲಿತ್ತು ಬಿಜೆಪಿಯ ನಾಯಕ ಮತ್ತು ನಾಯಕಮಣಿಗಳು ಹೈಟೆಕ್ ವೇಶ್ಯಾವಾಟಿಕೆ ಮಾಡುತ್ತಿದ್ದಾಗ?

Quote: ಒಂದು ವೇಳೆ ಹೋಂಸ್ಟೇಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವತಿಯರಿದ್ದು,ಅಲ್ಪಸಂಖ್ಯಾತ ಸಂಘಟನೆ ಅಥವಾ ವ್ಯಕ್ತಿಗಳು ದಾಳಿ ನಡೆಸಿದ್ದರೆ ಕಾಂಗ್ರೆಸ್‌ನವರಾಗಲಿ, ಜೆಡಿಎಸ್‌ನವರಾಗಲೀ, ವಿಚಾರವಾದಿಗಳಾಗಲಿ ತುಟಿಬಿಚ್ಚುತ್ತಿದ್ದರೇ? Unquote- ಅದಕ್ಕೆ ನೀವು, ನಿಮ್ಮ ಬಜರಂಗದಳ, ಸಂಘ ಪರಿವಾರ ಪ್ರತಿಭಟಿಸುವ ಧೈರ್ಯ ತೋರಲಿಲ್ಲ ಅಲ್ವೇ?

SHAMEEM, MANGALORE
2012-08-21
ಪ್ರೀತಿಯ ಸಹೋದರಿ ಪ್ರಭಾ ನಿಮ್ಮ ಮನದಾಳದ ಅನಿಸಿಕೆಗಳು ನಿಮ್ಮ ಸಂಕುಚಿತ ಮನಸ್ಸಿನ ಕೆಟ್ಟ ಫಲವಾಗಿದೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ದಾಳಿ ಮಾಡಿದವರು ಮತ್ತು ಹಲ್ಲೆ ಗೊಳಗದವರು ಹಿಂದೂ ಸಂಘಟನೆಯ ವಕ್ತಿಗಳೇ ಎನ್ನುದು ಸೂರ್ಯನ ಬೆಳಕಿನಷ್ಟೇ ಸತ್ಯ. ಪಡಿಲ್ ನಲ್ಲಿ ಸಮಾಜ ಘಾತುಕ ಶಕ್ತಿಗಳ ಕೈಇಂದ ಪೆಟ್ಟು ತಿಂದ ಗುರು ದತ್ತ್ ಕಾಮತ ಬಜರಂಗ ದಳದ ಕಾರ್ಯಕರ್ತ ಮಾತ್ರವಲ್ಲ ಅದರ DJ ಕೂಡ ಆಗಿದ್ದವನು. ಇಲ್ಲೀ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರೊಂದಿಗೆ ಪಾರ್ಟಿ ಮಾಡುತಿದ್ದಾರೆ ಎಂಬ ತಪ್ಪು ಸಂದೇಶವೇ ಹಿಂದೂ ಸಂಘಟನೆಯ ದಾಳಿಗೆ ಕಾರಣ.

ಸಹೋದರಿ ಪ್ರಭಾ ಅವರೇ ಮಂಗಳೂರಿನ ಯಾವ ರಸ್ತ್ಯೆ ಯಲ್ಲಿ ರಾತ್ರಿ 9 ಗಂಟೆ ಯ ನಂತರ ಒಬ್ಬಂಟ್ಟಿ ಹೆಣ್ಣು ಸಂಚರಿಸುತ್ತಿದ್ದಾಳೆ ಎಂದು ತಿಳಿಸುವಿರಾ?.

ಮೋಹನ್ ಕುಮಾರ್ ಎಂಬ ಕಿರಾತಕ ೨೨ ಹಿಂದೂ ಹುಡುಗಿಯರನ್ನು ಮದುವೆಯಾಗಿ ಕೊಲೆ ಮಾಡಿದಾಗ ನಿಮ್ಮ ಹಿಂದೂ ಸಂಘಟನೆಯ ರಕ್ಷಣೆ ಯಾಕೆ ಆ ಅಮಾಯಕ ಹುಡಿಗಿಯರಿಗೆ ಸಿಕ್ಕಿಲ್ಲ.

ರೇವು ಪಾರ್ಟಿ , ಹುಟ್ಟು ಹಬ್ಬ ದಿನಗಳು ನಿಮ್ಮ ಸಂಸ್ಕ್ರತಿ ಅಲ್ಲ ಎಂದ ಮೇಲೆ. ನಿಮ್ಮದೇ ಬಿಜೆಪಿ ಸರ್ಕಾರ ತನ್ನ ಉಸ್ತುವಾರಿಯಲ್ಲಿ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವ ರೀತಿಯಲ್ಲಿ ಉಡುಪಿಯ ಮಲ್ಪೆ ದ್ವೀಪದಲ್ಲಿ ನಡೆಸಿದ ರೇವು ಪಾರ್ಟಿ ಬಗ್ಗೆ ನಿಮ್ಮ ಸಂಸ್ಕೃತಿ ರಕ್ಷಣೆಯ ಗೂಂಡಾಗಳು ಯಾಕೆ ಮೌನವಗಿದ್ದರು.

ಸಹೋದರಿ ಪ್ರಭಾ ಅವರೇ ನಮ್ಮ ದೇಶದಲ್ಲಿ ಬೇಕಾದಷ್ಟು ಸರಕಾರಿ ಪ್ರಾಯೋಜಿತ ವೇಶ್ಯಲಯ ಕೇಂದ್ರಗಳಿವೆ ಅಲ್ಲಿ ಸಾವಿರಾರು ಹಿಂದೂ ಹುಡುಗಿಯರು ನರಕ ಸದ್ರಶ್ಯ ಜೀವನ ಸಾಗಿಸುತಿದ್ದು ಅವರನ್ನು ಅಲ್ಲಿಂದ ವಿಮೋಚನೆ ಗೊಳಿಸಿ ಅವರಿಗೊಂದು ಸುಂದರ ಬಾಳು ಕೊಡಳು ನಿಮ್ಮ ಸಂಘಟನೆಯಿಂದ ಯಾಕೆ ಸಾಧ್ಯವಾಗಿಲ್ಲ?

ಅವಿವಾಹಿತ ಜೋಡಿಗಳಿಬ್ಬರು ಒಂದೇ ಮನೆಯಲ್ಲೀ ವಸಿಸುದಾದರೆ ಅದಕ್ಕೆ ಯಾವದೇ ರೀತಿಯ ಅಬ್ಯಂತರ ಇಲ್ಲ ಮತ್ತು ಅದರಿಂದ ಅವರಿಗೆ ಮಕ್ಕಳಾದರೆ ಆ ಮಗುವಿಗೆ ಎಲ್ಲ ರೀತಿಯ ಸವಲತ್ತು ಕೊಡಬೇಕು ಎಂದು ನಮ್ಮ ದೇಶದ ಸರ್ವೋಚ ನ್ಯಾಯಾಲಯ ಅನುಮತಿ ಕೊಟ್ಟಿದೆ. ಇದು ಯಾವ ಸಂಸ್ಕ್ರತಿ. ಎಂದು ತಿಳಿಸುವಿರ?.

ಇದರ ಬಗ್ಗೆ ನಿಮ್ಮ ಸಂಘಟನೆಯ ಘಾಡಾ ಮೌನ ಏನನ್ನು ಸೂಚಿಸುತ್ತದೆ. ಯಾಕೆ ನ್ಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿಲ್ಲ.

ಸಹೋದರಿ ಪ್ರಭಾ ಅವರೇ ದಯವಿಟ್ಟು ಬಾವಿಯಲ್ಲಿ ಇರುವ ಕಪ್ಪೆ ಆಗಬೇಡಿ. ಕೆಸರಿನ ಹತ್ತಿರ ನಿಂತು ಕೆಸರಿಗೆ ಕಲ್ಲು ಹೊಡಿಯಬೇಡಿ. ಹಾಗಯೇ ಗಾಜಿನ ಮನೆಯಲ್ಲಿ ಕೂತು ಕಲ್ಲು ಬಿಸಾಡಬೇಡಿ ಇದೆರಡರ ಪರಿಣಾಮ ನಿಮಗೆ ತಿಲಿದಿರಬಹದು.

ಸಹೋದರಿ ಪ್ರಭಾ ಅವರೇ ಕೊನಯದಾಗಿ ಒಂದು ಪ್ರಶ್ನೆ. ಪಡಿಲ್ ದಾಳಿಯಲ್ಲಿ ಒಂದು ವೇಳೆ ನೀವೇ ಇರುತಿದ್ದರೆ ನಿಮ್ಮ ಮೇಲೆ ಆ ರೀತಿಯ ಅಮಾನುಷ ದಾಳಿ ನಡೆದಿದ್ದರೆ ನಿಮ್ಮಮನದಾಳದ ಅನಿಸಿಕೆಗಳು ಯಾವಾ ರೀತಿ ಇರುತಿತ್ತು ? ತಿಳಿಸುವಿರಾ.. .

ಅನಿರುದ್ಧ, ಉಡುಪಿ
2012-08-21
ಶಹಬ್ಬಾಶ್ ಸಹೋದರಿ ಪ್ರಭಾರವರೆ...ಕೇವಲ ಮಂಗಳೂರು ಮಾತ್ರವಲ್ಲ ನಮ್ಮ ಅಖಂಡ ಹಿಂದುಸ್ತಾನದ ಸಂಸ್ಕೃತಿಯಲ್ಲಿ ಹೆಂಗಳೆಯರು ವಹಿಸಬೇಕಾದ ರೀತಿಯೇನು ?

ಹೆಣ್ಣುಮಕ್ಕಳನ್ನು ಹೆತ್ತವರು ಅವರನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಎಂತಹದು? ಇಂತಹ ಘಟನೆಗಳಿಗಾಗಿಯೇ ಕಾದುಕುಳಿತವರಂತೆ ಕಾಣಿಸುವ ವಿರೋದ ಪಕ್ಷದವರು, ವಿಚಾರವಾದಿಗಳೆನಿಸಿಕೊಂಡವರು ಕೆಲವು ಮಾದ್ಯಮದವರನ್ನು ಕೂಡಿಕೊಂಡು ಬೇಯಿಸಿಕೊಳ್ಳುವ ಬೇಳೆಯೇನು? ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಂಘಟನೆಗಳಿಗೂ ರಾಜ್ಯದ ಆಡಳಿತ ಪಕ್ಷಕ್ಕೂ ಕೊಂಡಿಹಾಕಿ ಬೆಸೆತು ಬಾಯಿಗೆ ಬಂದಂತೆ ಮಾತಾಡುವ ಕೆಲವು ಅಧಿಕಪ್ರಸಂಗಿಗಳಿಗೂ ನಿಜಾರ್ಥ ತಿಳಿದುಕೊಳ್ಳುವ ಅಗತ್ಯವಿರುವುದಿಲ್ಲ.

ಏನೇ ಇರಲಿ, ದೇಶ ಹಾಗೂ ದೇಶದ ಸಂಸ್ಕೃತಿಯನ್ನು ಅರಿತಿರುವ ಬಹಳಷ್ಟು ಮಹಿಳೆಯರು ನಮ್ಮಲ್ಲಿದ್ದರೂ ಈ ಘಟನೆಯ ಕುರಿತು ಮನಬಿಚ್ಚಿ ಮಾತಾಡುವ ಧೈರ್ಯ ಈ ತನಕ ಯಾರೂ ತೋರದಿರುವಾಗ ತಾವು ಮುಂದೆಬಂದು ನಿಜ ಸಂಗತಿ ಪತ್ರಿಕೆಮೂಲಕ ತಿಳಿಸುವ ಧೈರ್ಯ ತೋರಿದ್ದು ನಿಜಕ್ಕೂ ಪ್ರಶಂಸನಾರ್ಹ. ತಮ್ಮಂತಹ ಸಮಾಜಪ್ರೇಮಿಗಳು ಲಕ್ಷ ಲಕ್ಷವಾಗಲಿ. ನಡೆಯುವ ಕುಕ್ರತ್ಯಗಳನ್ನು ದಿಟ್ಟತನದಿಂದ ಖಂಡಿಸುವ ಧೈರ್ಯಹೊಂದುವವರಾಗಲಿ ಎಂಬುದು ನನ್ನ ಹಾರೈಕೆ. ತಮಗೆ ಸಹಸ್ರಾರು ನಮನಗಳು...ಪ್ರಕಟಿಸಿದ ಜಯಕಿರಣ ಪತ್ರಿಕೆಗೂ ಅದನ್ನು ಇಲ್ಲಿ ನಮ್ಮ ಮುಂದಿಟ್ಟ ಗಲ್ಪ್ ಕನ್ನಡಿಗಕ್ಕೂ ಹ್ರದಯದಿಂದ ಧನ್ಯವಾದಗಳು..

ಆದರೂ... ನಿರೀಕ್ಷೆಯಲ್ಲಿರೋಣ.. ಶುದ್ಧವಾದ ಈ ಲೇಖನಕ್ಕೆ ಅದೆಷ್ಟು ತದ್ವಿರುದ್ದವಾದ ಪ್ರತಿಕ್ರಿಯೆ ಬರುತ್ತದೆನ್ನುವುದನ್ನು ಗಮನಿಸಲು.

rajan, mangalore
2012-08-21
really from the bottom of heart mrs prabhas article, those who now know what is truth in mangalore home stay attack, people are unneccesary comments with out knowing. everybody know the people those who attacked lady is wrong, but why they are celebarate birthday pary with few ladies, why they mother and father ? what kind of few lady and boys birthday party ? lot of question arising now ? those who understand these point ???the time will answer very soon. kindly i request please respect woman at all time..
sayyad, kundapura
2012-08-21
ನೀನು ಆರ್ ಎಸ್ ಎಸ್ ಗೆ ಸೇರಿದವಳು ಅಂತ ಕಾಣುತ್ತೆ, ಅದಕ್ಕೆ ಹೀಗೆ ಹುಚ್ಹಿ ತರಹ ಹೇಳುತ್ತಿದ್ದೀಯ!?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri