ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...

ಆಗಸ್ಟ್ ೮,ಸಂಸತ್ ಅಧಿವೇಶನ...‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ!ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ...!!ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ...’ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆಗಸ್ಟ್ 11,ಆಝಾದ್ ಮೈದಾನ,ಮುಂಬೈ... ಅಕ್ಬರುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ‘ಅಮರ್ ಜವಾನ್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಅಷ್ಟು ಸಾಲದೆಂಬಂತೆ ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದರು.ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ.ಈ ದೇಶದ ಆಂತರಿಕ ಭದ್ರತೆಯನ್ನು,ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ.ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್‌ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!

ಇದೆಲ್ಲ ಯಾವ ಮನಸ್ಥಿತಿಯನ್ನು,ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ?

ಈ ಮುಂಬೈ ಗಲಭೆಗೂ ಮೊದಲು ಮಸೀದಿಗಳಿಂದ ಎಸ್ಸೆಮ್ಮೆಸ್ಸೊಂದು ಹೊರಬಿದ್ದಿತ್ತು.‘ಬರ್ಮಾ, ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರದ ನಂತರ ಇನ್ನೆಲ್ಲೋ? ಬರ್ಮಾದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸುವ ಸಲುವಾಗಿ ಭಾನುವಾರ ಅಝಾದ್ ಮೈದಾನದಲ್ಲಿ ರ್ಯಾಲಿ ಇದೆ. ಅಮೆರಿಕದಲ್ಲಿ ಐವರು ಸಿಖ್ಖರನ್ನು ಕೊಂದಿದ್ದಕ್ಕೆ ಮಾಧ್ಯಮಗಳು ಹಾಗೂ ಸರ್ಕಾರ ಬೊಬ್ಬಿರಿದವು. ಆದರೆ,ಲಕ್ಷಾಂತರ ಮುಸಲ್ಮಾನರ ಜೀವಗಳಿಗೆ ಯಾವ ಬೆಲೆಯೂ ಇಲ್ಲವೆ?ಎಲ್ಲರೂ ಕಣ್ಣುಮುಚ್ಚಿಕೊಂಡಿದ್ದಾರೆ.ಈ ಎಸ್ಸೆಮ್ಮೆಸ್ಸನ್ನು ಬರುವ ಭಾನುವಾರಕ್ಕೆ ಮೊದಲು ಹಿಂದೂಸ್ಥಾನದ ಎಲ್ಲ ಮುಸಲ್ಮಾನರು, ಮಂತ್ರಿವರ್ಯರು ಹಾಗೂ ಮಾಧ್ಯಮಗಳಿಗೆ ತಲುಪಿಸಿ’.

ಈ ರೀತಿಯ ಸಂದೇಶ ಕಳುಹಿಸುವ ಮೂಲಕ ಯಾವ ಉದ್ದೇಶ ಸಾಧನೆಗಾಗಿ ಹೊರಟಿದ್ದರು? ಅಸ್ಸಾಂನಲ್ಲಿ ಸ್ಥಳೀಯರು ಹಾಗೂ ಬಾಂಗ್ಲಾದೇಶಿ ಅತಿಕ್ರಮಣಕಾರರಿಗೂ ತಿಕ್ಕಾಟ ಏರ್ಪಟ್ಟರೆ ಮುಂಬೈನ ಮುಸಲ್ಮಾನರೇಕೆ ಕೋಪಿಸಿಕೊಳ್ಳಬೇಕು?ಇಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಜರೂರತ್ತಾದರೂ ಏನಿತ್ತು?ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿರಬಹುದು, ಅದಕ್ಕೂ ಭಾರತೀಯ ಮುಸಲ್ಮಾನರಿಗೂ ಸಂಬಂಧವೇನು? ನಮ್ಮ ದೇಶದ ಮುಸ್ಲಿಮರು ಏಕಾಗಿ ಪ್ರತಿಭಟನೆಗೆ ಮುಂದಾದರು?

ಇಂತಹ ಮನಸ್ಥಿತಿ ಇಂದು ನಿನ್ನೆಯದಲ್ಲ!

ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ,ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ‘ಖಿಲಾಫತ್ ಚಳವಳಿ.ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ,ಮುಸಲ್ಮಾನರು ಯಾವುದೋ ದೂರದ,ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು.ಅಂದು ಖಿಲಾಫತ್ ಚಳವಳಿಗೆ ತಾವು ಸ್ವ‌ಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು. ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ,ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?!ಆನಂತರವಾದರೂ ಆಗಿದ್ದೇನು?ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ?

ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ,ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ.ಖಿಲಾಫತ್‌ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ.1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು.ಅಂದು 10ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು.ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು.ಹಿಂದೂಗಳ ಕೊಲೆ, ಅತ್ಯಾಚಾರ,ಮತಾಂತರ ನಡೆದವು.ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು. ಗಾಂಧೀಜಿಯನ್ನು‘ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ ‘ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ಎಂಬ ಸಮೀಕ್ಷೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ.ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ ಏನು ಹೇಳಿದ್ದರು?‘ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ.ಅದು ಕಾಲಾಂತರದಲ್ಲಿ ಸಾಬೀತಾಗಿದೆ.ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್‌ಚೇಂಜ್ (ಪಾಕ್‌ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು,ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು)ಮಾಡಿಕೊಳ್ಳಬೇಕು.ಇಷ್ಟಕ್ಕೂ ಮುಸಲ್ಮಾನರ ಬ್ರದರ್‌ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್‌ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಅದಿರಲಿ, ಖಾಲೀಫನನ್ನು ಪದಚ್ಯುತಗೊಳಿಸಲು ಟರ್ಕಿಯಲ್ಲಿ ಕ್ರಾಂತಿಯಾದರೆ,ಇರಾಕ್‌ನಲ್ಲಿ ಸದ್ದಾಂ ಮೇಲೆ ಅಮೆರಿಕ ಎರಗಿದರೆ,ಅಫ್ಘಾನಿಸ್ತಾನದ ಮೇಲೆ ಬುಷ್ ದಾಳಿ ಮಾಡಿದರೆ,ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರನ್ನು ಹೊರದಬ್ಬಿದರೆ ಭಾರತದ ಮುಸಲ್ಮಾನರೇಕೆ ಪ್ರತಿಭಟನೆ ಮಾಡಬೇಕು?ಹಿಂದೂಗಳ ಮೇಲೇಕೆ ದೌರ್ಜನ್ಯವೆಸಗಬೇಕು?ಹೈದರಾಬಾದ್‌ನಲ್ಲೇಕೆ ಪಾಕಿಸ್ತಾನದ ಬಾವುಟ ಹಾರಿಸಬೇಕು? ಇತ್ತೀಚೆಗೆ ನಮ್ಮ ಸಕಲೇಶಪುರದಲ್ಲಿ ಟ್ಯಾಂಕರ್‌ಗೆ ಗುದ್ದಿ ಇಬ್ಬರು ಬೈಕ್ ಸವಾರ ಬ್ಯಾರಿಗಳು ಸತ್ತ ಕೂಡಲೇ ಮುಸಲ್ಮಾನರೆಲ್ಲ ಒಂದೆಡೆ ನೆರೆದು ಹಿಂದೂಗಳ ಅಂಗಡಿ ಮುಂಗಟ್ಟುಗಳನ್ನು ನಾಶಮಾಡಿದರು.ಹಾಸನದಲ್ಲಿ ರಾತ್ರಿ ವೇಳೆ ಹಿಂದೂಗಳ ೫೦ಕ್ಕೂ ಹೆಚ್ಚು ಕಾರುಗಳನ್ನು ವಿನಾಕಾರಣ ಒಡೆದು 15ಮುಸಲ್ಮಾನ ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ!

ಇಂತಹ ಮನಸ್ಥಿತಿಗೆ ಏನೆನ್ನುವುದು?

ಪ್ರಸ್ತುತ ಪಾಕಿಸ್ತಾನದಿಂದ ಹಿಂದೂಗಳು ಸಾಲುಸಾಲಾಗಿ ಆಶ್ರಯ ಬಯಸಿ ಭಾರತಕ್ಕೆ ಬರುತ್ತಿದ್ದಾರೆ. ಪಾಕಿಸ್ತಾನದ ಹಿಂದೂ ಯುವತಿ ರಿಂಕಲ್ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ್ದಾರೆ,ಸಿಖ್ಖರ ಗುರದ್ವಾರಗಳನ್ನು ಪಾಕ್ ಸರ್ಕಾರವೇ ವಶಪಡಿಸಿಕೊಂಡಿದೆ.ಕಳೆದ ವರ್ಷ ಈದ್ ಸಂದರ್ಭದಲ್ಲಿ ನಾಲ್ವರು ಹಿಂದೂ ವೈದ್ಯರನ್ನು ಪಾಕಿಸ್ತಾನದಲ್ಲಿ ಕಗ್ಗೊಲೆಗೈದರು.ಅದನ್ನೆಲ್ಲ ಕಂಡು ಭಾರತೀಯರಾದ, ಹಿಂದೂಗಳಾದ ನಮ್ಮ ಎದೆಯಲ್ಲೂ ನೋವು ಮಡುಗಟ್ಟುತ್ತಿದೆ,ಆಕ್ರೋಶ ತಲೆಯೆತ್ತುತ್ತಿದೆ. ಹಾಗಂತ ನಾವು ಯಾವುದಾದರೂ ಮಸೀದಿ ಮೇಲೆ ಕಲ್ಲು ಬಿಸಾಡಿದ್ದೇವೆಯೇ?ಪಾಕಿಸ್ತಾನದಲ್ಲಿ ಹಿಂದೂಗಳ ರಕ್ತ ಹಿಂಡುತ್ತಿರುವವರು ಮುಸಲ್ಮಾನರು ಎಂಬುದು ಗೊತ್ತಿದ್ದರೂ ಭಾರತೀಯ ಮುಸಲ್ಮಾನರ ಮೇಲೆ ನಾವೆಂದಾದರೂ ಆಕ್ರಮಣ ಮಾಡಿದ್ದೇವೆಯೇ?1999,ಡಿಸೆಂಬರ್ 24ರಂದು ಮುಸಲ್ಮಾನ ಭಯೋತ್ಪಾದಕರು ನಮ್ಮ ಇಂಡಿಯನ್ ಏರ್‌ಲೈನ್ ವಿಮಾನವನ್ನು ತಾಲಿಬಾನ್ ನಿಯಂತ್ರಿತ ಕಂದಹಾರ್‌ಗೆ ಕೊಂಡೊಯ್ದು 180ಪ್ರಯಾಣಿಕರನ್ನು ಒತ್ತೆಯಾಗಿಟ್ಟುಕೊಂಡಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಎರಗಿ ಬಿದ್ದಿದ್ದೇವೆಯೇ? 2000ರಲ್ಲಿ ಫಿಜಿಯ ಮೊದಲ ಭಾರತೀಯ ಮೂಲದ ಪ್ರಧಾನಿ ಮಹೇಂದ್ರಪಾಲ್ ಚೌಧರಿಯವರನ್ನು ಜಾರ್ಜ್ ಸ್ಪೀಟ್ ಎಂಬಾತ ಅಧಿಕಾರದಿಂದ ಕಿತ್ತೊಗೆದು ಅಲ್ಲಿನ ಸಮಸ್ತ ಹಿಂದೂಗಳಿಗೆ ಪ್ರಾಣ ಬೆದರಿಕೆ ಹಾಕಿದಾಗ ನಾವು ಭಾರತೀಯ ಕ್ರೈಸ್ತರು ಅಥವಾ ಮುಸಲ್ಮಾನರ ಪೂಜಾಸ್ಥಳಗಳನ್ನು ಹಾಳುಮಾಡಿದ್ದೇವೆಯೇ?1969ರಲ್ಲಿ ಅಲ್ ಅಕ್ಷಾ ಮಸೀದಿಯನ್ನು ನಾಶ ಮಾಡಲಾಗಿದೆ ಎಂಬ ವದಂತಿಗೆ ಕಿವಿಗೊಟ್ಟು ಗುಜರಾತ್‌ನ ಜಗನ್ನಾಥ ಮಂದಿರಲ್ಲಿ ಭಜಿಸುತ್ತಿದ್ದವರನ್ನು ಮುಸಲ್ಮಾನರು ಕೊಂದು ಗಲಭೆ ಆರಂಭಿಸಿದರಲ್ಲಾ,2001ರಲ್ಲಿ ತಾಲಿಬಾನಿಗಳು ಬಾಮಿಯಾನ್ ಬುದ್ಧ ಪ್ರತಿಮೆಗಳಿಗೆ ಡೈನಮೈಟ್ ಇಟ್ಟು ನಾಶ ಮಾಡಿದಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಕತ್ತಿ ಝಳಪಿಸಬಹುದಿತ್ತಲ್ಲವೆ?

ಮತ್ತೇಕೆ ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಭಾರತದಲ್ಲಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?

ಯಾವ ಕಾರಣಕ್ಕಾಗಿ ಯೋಧರ ಸ್ಮಾರಕಕ್ಕೆ ಅಪಚಾರವೆಸಗಿದ್ದಾರೆ?ನಾವು ಸುಭಾಶ್ಚಂದ್ರ ಭೋಸ್,ಭಗತ್ ಸಿಂಗ್‌ರನ್ನು ಪೂಜಿಸಿದಷ್ಟೇ ಗೌರವದಿಂದ ಆಶ್ಫಾಕ್ ಖಾನ್ ಮತ್ತು ಪಾಕಿಸ್ತಾನಿ ಟ್ಯಾಂಕರ್‌ಗಳನ್ನು ನಾಶ ಮಾಡಿದ ಹವಾಲ್ದಾರ್ ಹಮೀದ್‌ರನ್ನೂ ಆರಾಧಿಸುತ್ತೇವೆ.ಇಂಥ ಸ್ವಾತಂತ್ರ್ಯ ಕಲಿಗಳ,ಯೋಧರ ಸ್ಮಾರಕಕ್ಕೂ ಒದೆಯುತ್ತಾರೆಂದರೆ ಇವರ ನಿಷ್ಠೆ ಯಾರಿಗೆ? ಧರ್ಮಕ್ಕೋ,ದೇಶಕ್ಕೋ?ಧರ್ಮವೇ ಮುಖ್ಯವೆನ್ನುವವರು 1947ರಲ್ಲೇ ಪಾಕಿಸ್ತಾನಕ್ಕೆ ತೊಲಗಬಹುದಿತ್ತಲ್ಲವೆ?ಈ ರೀತಿಯ ದೇಶದ್ರೋಹಿ ಮನಸ್ಥಿತಿಗಳನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತೀರಿ?

ಒಲಿಂಪಿಕ್ಸ್‌ನಲ್ಲಿ 6ಪದಕ ಗೆದ್ದವರು ಗುರುವಾರ ದಿಲ್ಲಿಯ‘ಅಮರ್ ಜವಾನ್ ಜ್ಯೋತಿ’ಗೆ ನಮಿಸಿ ಬಂದರು.ಈ ದೇಶ ಕಾಯುವ ಸೈನಿಕರ ಬಗ್ಗೆ ಅಂತಹ ಗೌರವವನ್ನು ಪ್ರತಿಯೊಬ್ಬನೂ ಇಟ್ಟುಕೊಂಡಿದ್ದಾನೆ.ಇಟ್ಟುಕೊಳ್ಳದವರು,ಸೈನಿಕರ ಸ್ಮಾರಕಕ್ಕೇ ಅಪಚಾರವೆಸಗಿದವರು ದೇಶದ್ರೋಹಿಗಳಲ್ಲದೆ ಮತ್ತಿನ್ನೇನು?ಒಂದು ವೇಳೆ,ಆರೆಸ್ಸೆಸ್ಸಿಗನೊಬ್ಬ ಅಥವಾ ಬಿಜೆಪಿಯ ಬೆಂಬಲಿಗನೊಬ್ಬ ಅಮರ್ ಜವಾನ್ ಸ್ಮಾರಕ ಬಿಡಿ,ಮುಸಲ್ಮಾನರ ಪೂಜಾಸ್ಥಳಕ್ಕೆ ಅಪಚಾರವೆಸಗಿದ್ದರೆ ಸುಮ್ಮನೆ ಇರುತ್ತಿದ್ದರೆ?ಅಝಾದ್ ಮೈದಾನದಲ್ಲಿ ಗಲಭೆ ಎಬ್ಬಿಸಿ, ಅಮರ್‌ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನೂ ದೇಶದ್ರೋಹ ಅಪರಾಧದ ಮೇಲೆ ಬಂಧಿಸಿ ದಂಡಿಸಬೇಕು ಎಂದು ಹೇಳುವ ತಾಕತ್ತು ಯಾವ ರಾಜಕಾರಣಿ,ಯಾವ ಮಾಧ್ಯಮಕ್ಕಿದೆ?ಮತ್ತೊಂದು ವಿಷಯ ಕೇಳಿ,ಸಿಸಿಟಿವಿ ಫುಟೇಜ್‌ಗಳ ಮೂಲಕ ಅಝಾದ್ ಮೈದಾನದಲ್ಲಿ ನಡೆದ ಗಲಭೆಗೆ ಕಾರಣರಾದ 35ರಿಂದ 40ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ.ಆದರೆ ಈದ್ ಮುಗಿದ ಮೇಲಷ್ಟೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿಕೆ ಹೊರಡಿಸಿದ್ದಾರೆ.2004ರಲ್ಲಿ ಕಂಚಿಯ ಯತಿಗಳಾದ ಜಯೇಂದ್ರ ಸರಸ್ವತಿಯವರನ್ನು ದೀಪಾವಳಿಯ ದಿನ ಅರೆಸ್ಟ್ ಮಾಡಿದ ಪೊಲೀಸರಿಗೆ ಗಲಭೆಕೋರ ಮುಸಲ್ಮಾನರನ್ನು ಬಂಧಿಸಲು ಈದ್ ಮುಗಿಯಬೇಕಂತೆ!

ಖ್ಯಾತ ಅಂಕಣಕಾರ ಸಂದೀಪ್ ಬಾಲಕೃಷ್ಣ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ.ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳೇ ಹೇಗೆ ನಡೆದುಕೊಂಡಿವೆ ಅಂದುಕೊಂಡಿರಿ?1995-1997ರ ಸುಮಾರಿಗೆ ತನ್ನ ದೇಶದಲ್ಲಿ 1ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ಮುಸ್ಲಿಂ ಬಾಹುಳ್ಯದ ಮಲೇಷ್ಯಾಗೆ ತಿಳಿದು ಬಂತು.ವರ್ಷಕ್ಕೆ 50ಸಾವಿರ ಕುಶಲಮತಿಗಳಿಗೆ ತಾನು ಉದ್ಯೋಗ, ಅಶ್ರಯ ನೀಡುವುದಾಗಿ ಬಾಂಗ್ಲಾ ಜತೆ ಒಪ್ಪಂದ ಮಾಡಿಕೊಂಡಿದ್ದ ಮಲೇಷ್ಯಾ ಅಕ್ರಮ ವಲಸಿಗರು ತುಂಬಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಆ ಟ್ರೀಟಿಯನ್ನೇ ಏಕಾ‌ಏಕಿ ರದ್ದು ಮಾಡಿತು. ಅಷ್ಟೇ ಅಲ್ಲ, ಅವರನ್ನು ವಾಪಸ್ ಕಳುಹಿಸಿತು.ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳು ಹಾಗೂ ಇಸ್ಲಾಮಿಕ್ ರಾಜಾಡಳಿತ ಹೊಂದಿರುವ ಸೌದಿ ಅರೇಬಿಯಾ,ಕತಾರ್‌ಗಳೂ ಹಿಂದೆ ಮುಂದೆ ನೋಡದೇ,ಅವರೂ ಮುಸ್ಲಿಮರು ಎಂದು ಯೋಚಿಸದೇ ಬಾಂಗ್ಲಾದೇಶಿಯರನ್ನು ಹೊರದಬ್ಬಿದವು. ಇನ್ನು ಮುಂಬೈ ಮುಸಲ್ಮಾನರು ವಕಾಲತ್ತು ವಹಿಸಲು ಬಂದಿರುವ ಬರ್ಮಾದ ರೋಹಿಂಗ್ಯ ಮುಸ್ಲಿಮರ ವಿಷಯಕ್ಕೆ ಬನ್ನಿ.ಈ ರೋಹಿಂಗ್ಯ ಮುಸ್ಲಿಮರು ಬರ್ಮಾದಲ್ಲಿರುವ ಮಿಲಿಟರಿ ಆಡಳಿತದ ಕಟ್ಟುನಿಟ್ಟಿನ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ನೆರೆಯ ಬಾಂಗ್ಲಾದೇಶಕ್ಕೆ ಓಡಿಬಂದರು. ಅವರನ್ನು ಬಾಂಗ್ಲಾದೇಶ ವಾಪಸ್ ದಬ್ಬಿತು. ಒಂದುವೇಳೆ ಇವರ ಇಸ್ಲಾಮಿಕ್ ಬ್ರದರ್‌ಹುಡ್ ಅಷ್ಟೊಂದು ಗಟ್ಟಿಯೆನ್ನುವುದಾದರೆ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾ ರೋಹಿಂಗ್ಯ ಮುಸ್ಲಿಮರನ್ನು ಏಕೆ ತನ್ನೊಳಕ್ಕೆ ಬಿಟ್ಟುಕೊಳ್ಳಲಿಲ್ಲ?ಮುಸ್ಲಿಂ ರಾಷ್ಟ್ರಗಳೇ ಮುಸಲ್ಮಾನರಿಗೆ ಆಶ್ರಯ ನೀಡದಿರುವಾಗ ಅಸ್ಸಾಂನಲ್ಲಿ ನಮ್ಮ ಜನರ ಅನ್ನ-ನೀರು ಕಸಿದುಕೊಂಡವರನ್ನು ಹೊರಹಾಕಬೇಕೆಂದರೆ ಏಕೆ ಕೋಪಿಸಿಕೊಳ್ಳಬೇಕು ಹೇಳಿ?

ಪ್ರಸ್ತುತ ಇಡೀ ದೇಶವಾಸಿಗಳ ಮನಗೆದ್ದಿರುವ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಿ‌ಎನ್‌ಎನ್-ಐಬಿ‌ಎನ್ ಚಾನೆಲ್ ಅಮೀರ್ ಖಾನ್ ಅವರನ್ನು ಸಂದರ್ಶಿಸಿತು.‘ಹೆಣ್ಣು ಭ್ರೂಣ ಹತ್ಯೆ ಮತ್ತು ಇತರ ವಿಷಯಗಳಂತೆ ಧಾರ್ಮಿಕ ಅಸಹನೆ ಕೂಡ ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದು. ನೀವೊಬ್ಬ ಮುಸ್ಲಿಮನಾಗಿ, ಮುಸ್ಲಿಂ ಸಮಾಜದ ಒಂದು ಭಾಗವಾಗಿ ಈ ಸಮಸ್ಯೆ ನಿಮ್ಮನ್ನೂ ಬಾಧಿಸುತ್ತಿದೆಯೇ?ಈ ಧಾರ್ಮಿಕತೆ ಎಂಬುದೇ ನಿಮ್ಮ ವ್ಯಕ್ತಿತ್ವವನ್ನೂ ರೂಪಿಸಿದೆಯೇ?‘ಎಂದು ಕೇಳಿದಾಗ‘ಖಂಡಿತಾ ಇಲ್ಲ,ಏಕೆಂದರೆ ಮುಸ್ಲಿಮ ಎನ್ನುವುದಕ್ಕಿಂತ ಮೊದಲು ನಾನೊಬ್ಬ ಭಾರತೀಯ ಎಂದೇ ನಾನಂದುಕೊಂಡಿದ್ದೇನೆ.have always felt that I am an Indian first ಎಂದಿದ್ದರು ಆಮೀರ್.

ಅಂತಹ ಭಾವನೆ ಪ್ರತಿಯೊಬ್ಬ ಮುಸ್ಲಿಮರಲ್ಲೂ ಬರಬೇಕು ಹಾಗೂ ಈ ಹಿಂದೂಗಳು ತಮ್ಮ ಎಂದಿನ Inertiaಅಥವಾ ಜಡತ್ವ ಬಿಟ್ಟು ಅಲ್ಪಸಂಖ್ಯಾತರ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು.

ಇಷ್ಟಕ್ಕೂ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಬಾಯಲ್ಲಿ ಉಗುಳಿದರಷ್ಟೇ ಸಾಲದು, ಜೋಕೆ!

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರತಾಪ್ ಸಿಂಹ-ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-18

Tell a Friend

ಪ್ರತಿಸ್ಪಂದನ
ಪ್ರಶಾ೦ತ್ ಅಮೀನ್, , ಮೂಡಬಿದ್ರೆ
2012-09-04
ಮಾನ್ಯರೇ,,, ಇದು ಶುದ್ದ ಹಿ೦ದು ರಾಷ್ತ್ರ ,,,ನೀವೆಲ್ಲ ಬೇರೆ ದೇಶದಿ೦ದ ವಲಸೆ ಬ೦ದವರು ,,ನಿಮಗೆ ಯಾವ ನೈತಿಕ ಹಕ್ಕು ಇಲ್ಲ ,,ಇದು ಭರತ ದೇಶ ,ಇದು ಕೃಷ್ನ ,ರಾಮರು ಆಳಿದ ದೇಶ ,ಆಗ ಯಾವ ಮುಸ್ಲ್ಮ ನನಾಗಲಿ, ಕ್ರಿಸ್ಛ್ಯನನಾಗಲಿ ಇರಲಿಲ್ಲ .ನೀವು ಹೇಗೆ ಸೃಷ್ಟಿ ಆದ್ರಿ ಅ೦ತ ಯ್ಯಕ್ಶ ಪ್ರಶ್ನೆ ಆಗಿದೆ?,
Ash, Mangalore
2012-08-20
ಪ್ರತಾಪ ಸಿಂಹ ಎಂಬವನು ತನ್ನ ಬರವಣಿಗೆಯಲ್ಲಿ ಎಲ್ಲೂ ಪ್ರತಿಪಾದಿಸಲಿಲ್ಲ ಈ ಕೆಳಗಿನ ನಿದರ್ಶನಕ್ಕೆ ಧರ್ಮ ಪ್ರೇಮ ಮುಖ್ಯವಾಗಿತ್ತೋ ಅಥವಾ ದೇಶ ಪ್ರೇಮ ಮುಖ್ಯ ವಾಗಿತ್ತೋ ?...

* ಬಾಬ್ರಿ ಮಸ್ಜಿದ್ ಧ್ವಂಸ ಮತ್ತು ತಡ ನಂತರ ನಡೆದ ಮುಸ್ಲಿಮರ ಮಾರಣ ಹೋಮ.

* ಗುಜರಾತಿನಲ್ಲಿ ಮುಸ್ಲಿಮರನ್ನು ಹುಡುಕಿ ಹುಡುಕಿ ಅತ್ಯಾಚಾರ ಮತ್ತು ಸುಟ್ಟು ದಹನ ಮಾಡಿದ್ದು..

* ಮೆಕ್ಕಾ ಮಸ್ಜಿದ್ ಸ್ಪೋಟ, ಅಜ್ಮೇರ್ ಸ್ಪೋಟ, ಮಾಲೆಗಾವ್ ಸ್ಪೋಟ, ಸಂಜೋತ ಸ್ಪೋಟ ಗಳಿಗೆ (ಮುಂದುವರೆಯುತ್ತೆ) ಪ್ರೇರಣೆಯಾಗಿದ್ದು ಧರ್ಮ ಪ್ರೇಮವೋ ಅಥವಾ ದೇಶ ಪ್ರೇಮವೋ?

* ಸಾದ್ವಿ ಸಿಂಗ್, ಅಸೀಮಾನಂದ, ಪುರೋಹಿತನಿಗೆ ಮತ್ತು ಅವರ ಸನಾತನ ಸಂಸ್ಥೆಯ ಹಲ್ಕಾ ಕೆಲಸಕ್ಕೆ 'ದೇಶದ' ಮೇಲಿರುವ 'ಪ್ರೇಮವೇ' ಪ್ರೇರಣೆಯಾಯಿತೆ?

* ಮಂಗಳೂರಿನ ಪಬ್ ದಾಳಿ, ಚರ್ಚ್ ದಾಳಿ ಮತ್ತು ಇತ್ತೀಚಿನ ರೆಸಾರ್ಟ್ ದಾಳಿಗೆ ಯಾವ 'ಪ್ರೇಮ' ಕೆಲಸ ಮಾಡಿತು?

* ಮುತಾಲಿಕ ಪಡೆ ಪಾಕ್ ಧ್ವಜ ಹಾರಿಸಿದ್ದು ಸ್ಪಷ್ಟ ಮಾಡುತ್ತಾ ದೇಶ ಪ್ರೇಮವನ್ನು? * ಸಮಾಜೋತ್ಸವ ಮಾಡಿ ಅಲ್ಪ ಸಂಖ್ಯಾತರ ವಿರುದ್ದ ಉದ್ದುದ್ದ ಭಾಷಣವನ್ನು ಜಿಲಾಧಿಕಾರಿ ಮತ್ತು ಪೋಲೀಸರ ಸಮ್ಮುಖದಲ್ಲಿಯೇ ನಡೆಸುವ ಪರಿಗೆ ದೇಶ ಪ್ರೇಮವೆಂದರೆ ಮೂರ್ಖತನದ ಪರಮಾವಧಿಯಲ್ಲವೇ?

* ಸುಳ್ಯದಲ್ಲಿ ಪೊಲೀಸರಿಗೆ ಹಲ್ಲೆ ಮಾಡಿ ಬಂಧನವಾದವರನ್ನು ಬಿಡುಗಡೆ ಮಾಡಿ ಸನ್ಮಾನಿಸಿದ ಗೂಂಡ ಪಡೆಯ ಮಹಾ ಕಾರ್ಯಕ್ಕೆ ಏನನ್ನಬೇಕು?

* ಕಂಧಮಾಲ್ ನಲ್ಲಿ ಕ್ರೈಸ್ತರ ಮಾರಣಹೋಮ, ಆಸ್ಟ್ರೇಲಿಯ ಪಾದ್ರಿಯ ಹತ್ಯೆ, ಮತಾಂತರ ಹೆಸರಲ್ಲಿ ನಡೆಯುವ ಹಲ್ಲೆ ಗೆ ಯಾವ 'ಪ್ರೇಮದ' ಹೆಸರು ಕೊಡಬೇಕು?

* ಗಾಂದೀಯ ಹತ್ಯೆ ಮಾಡಿಸಿದ ಸಂಘ ಪರಿವಾರ ದೇಶ ಪ್ರೇಮವನ್ನು ಸಾರುತ್ತಿದೆಯೇ?

* ಸ್ವಾತಂತ್ರ್ಯ ಹಿಂದಿನ ದಿನ ಕಳ್ಳರಂತೆ ಕತ್ತಲಲ್ಲಿ ಪಂಜಿನ ಮೆರವಣಿಗೆ ನಡೆಸಿ ಭಾಗವ್ದ್ವಾಜ ಹಾರಿಸುವ ರಾಷ್ಟ್ರೀಯ ದ್ವ್ಹಜಕ್ಕೆ ಅವಮಾನ ಮಾಡುವ ಕಾರ್ಯ ಯಾವುದಯ್ಯ?

* ದತ್ತ ಪೀಠ ಹೆಸರಲ್ಲಿ, ದನದ ವ್ಯಾಪಾರ ಹೆಸರಲ್ಲಿ, ಹುಡುಗ ಹುಡುಗಿ ಹೆಸರಲ್ಲಿ , ಮಸೀದಿ ಮುಂದೆ ಹಂದಿ ಮಾಂಸ ಎಸೆದು ನಡೆಸುವ ದಾಳಿ, ಹಲ್ಲೆ ಗೆ ಯಾವ ಹೆಸರಿಡಬೇಕು?

ayyub pirs@pp@d, belthangady/kuwait
2012-08-20
ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ ಆದರೆ ಎಲ್ಲ ಭಯೋತ್ಪಾದಕರು ಮುಸ್ಲಿಮರು ಎಂಬ ಸತ್ಯವನ್ನು ಒಪ್ಪಿಕೊಳ್ಳೋಣ ಡಿಯರ್ ಮುಹಮ್ಮದ್ ರವರೆ ನೀವು ತಿಳುವಳಿಕೆಯ ಕೊರತೆ ಇಂದ ಈ ರೀತಿ ಬರೆದಿರಬಹುದೆಂದು ಭಾವಿಸುತ್ತೇನೆ ದೇಶದಲ್ಲಿ ನಡೆದಿರುವ ಹಲವಾರು ಭಯೋತ್ಪಾದಕ ದಾಳಿಯಲ್ಲಿ ಸಂಘಪರಿವಾರದ ಕೈವಾಡ ಬೆಳಕಿಗೆ ಬಂದಿದೆ. ಉದಾಹರಣೆಗೆ ನಾಂದೇಡ್ ಸ್ಪೋಟ , ಮಕ್ಕಾ ಮಸ್ಜಿದ್ ಸ್ಪೋಟ, ಹುಬ್ಬಳ್ಳಿ ಕೋರ್ಟಲ್ಲಿ ಸ್ಪೋಟ, ಗೋವ ದಲ್ಲಿ ಸ್ಪೋಟ ನಡೆಸಿ ಸತ್ತು ಹೋದದ್ದು, ಮಾಲೆಗಾವ್ ಬಾಂಬ್ ಸ್ಪೋಟ ನಡೆಸಿದ್ದು ಮುಂತಾದವು ಕೆಲವೊಂದು ಉದಾಹರಣೆ ಮಾತ್ರ. ತೊಗಾಡಿಯ ಹೇಳಿದ ಮೇಲಿನ ಸ್ಲೋಗನ್ ಆತನಿಗೆ ತಿರುಗು ಬಾಣವಾಗಿದೆ ಮತ್ತು ವಾಗುತ್ತಿದೆ. ನಾವು ಹೇಳಬೇಕಾಗಿದೆ "ಹಿಂದುಗಳೆಲ್ಲ ಭಯೋತ್ಪಾದಕರಲ್ಲ ಸಿಕ್ಕಿ ಬೀಳುತ್ತಿರುವ ಭಯೋತ್ಪಾದಕರಲ್ಲಿ ಹಿಂದುಗಳದ್ದು ಬಹುಪಾಲಿದೆ"
hameed puttur, manglore
2012-08-20
ಈಹಿಂದೆ ವಿದಾನಸಬೆಯಲ್ಲಿ ಬ್ಲೂ ಚಿತ್ರ ನೋಡಿದಾಗ ರೇಣುಕಾಚಾರ್ಯ ನರ್ಸ್ ಜೊತೆ ಹಾಲಪ್ಪ ಗೆಳೆಯನ ಹೆಂಡತಿ ಜೊತೆ ಸರಸವಾಡಿದಾಗ ಇಲ್ಲದ ಮಹಿಳಾ ಜಾಗ್ರತೆ ಹೋಂ ಸ್ಟೇ ಯಲ್ಲಿ ಮುಸ್ಲಿಮರು ಇದ್ದಾರೆ ಎನ್ನುವ ಬಾವನೆಯೊಂದಿಗೆ ದಾಳಿ ಮಾಡುವ ಹಾಗು ರಾಜ್ಯದ ಬ್ರಸ್ತಾಚಾರ ವನ್ನು ಮುಚಿ ಹಾಕಿ ಜನರನ್ನು ದಾರಿ ತಪ್ಪಿಸುತ್ತಿರುವ ಪರಿವಾರದ ಚೆಲಾವಾದ ಈ ಸಿಂಹ ನಿಂದ ಇಂಥ ಲೆಕನವನ್ನು ನಿರಿಕ್ಸಿಸ ಬೇಕಾಗಿದೆ ಗೋ ಹತ್ಯೆ ಹೆಸರಲ್ಲಿ ಮುಸ್ಲಿಮರ ಮಾರಣ ಹೋಮ ನಡೆಸುವ ಹಿಂದೂ ಪರಿವಾರದ ಸಂಗತನೆಗಿಂದಾಗಿ ದೇಸದಲ್ಲಿ ನಿತ್ಯ ಅಲ್ಪಸಂಖ್ಯಾತರ ಮೇಲೆ ನಿರಂತರ ನಡೆಯುತ್ತಿರುವ ದುರ್ಜನ್ಯ ಕಸ್ಮಿರದಲ್ಲಿ ಸೈನಿಕರಿದ ಮುಸ್ಲಿಮರ ಮೇಲಿನ ದುರ್ಜನ್ಯ ದ ಬಗ್ಗೆ ಏಕೆ ಬರೆಯುತ್ತಿಲ್ಲ ಇತ್ತೀಚಿಗೆ ಬಿಜಾಪುರದಲ್ಲಿ ಪಾಕ್ ದ್ವಜ ಹಾರಿಸಿದ ಸಂಘ ಪರಿವಾದ ದುಸ್ಕ್ರತ್ಯದ ಬಗ್ಗೆ ವಿರೋದಿಸದ ಈ ಸಿಂಹ ಈಗ ಮುಂಬೈ ಗಲಬೆಯ ಬಗ್ಗೆ ಸಮಗ್ರ್ಹ ವಾಗಿ ತಿಳಿಯದೆ ತೋಚಿದ ಲೇಕನ ಬರೆಯುದಕ್ಕೆ ಜಥ್ಯಾಥಿತರಾದ ನಮಗೆ virodavide
P.P.ABDUL KAREEM THOKUR, POLYA,UCHILA
2012-08-19
ನಿಮ್ಮ ಈ ಮಾತು ನೂರಕ್ಕೆ ನೂರು ಸತ್ಯ ಪ್ರಸಾದ್ ಶೆಟ್ಟಿ ಯವರೇ ಸತ್ಯ ಯಾವತ್ತೋ ಕಹಿ ಯಾಗಿಯೇ ಇರತ್ತೆ ,,,,,,,, ಆದರೆ ,,,,,,,,,,?
prasad shetty, M@nglore
2012-08-19
ಸತ್ಯ ಅಷ್ಟೆ ಕಹಿ ಆಗುತ್ತೆ ....!
Mazhar Bin Mahmood, Mangalore
2012-08-19
ಈ ಪ್ರತಾಪ ಸಿಂಹ ಹೇಳಿ ಕೇಳಿ ಮುಸ್ಲಿಂ ವಿರೋಧಿ ಮಾತ್ರವಲ್ಲ "ಸಂಘ" ಎಂಬ ವೈರಸ್ ಪೀಡಿತ ವ್ಯಕ್ತಿ. ಈ ಹಿಂದೆ ಈತ ವಿಜಯ ಕರ್ನಾಟಕದಲ್ಲಿ "ಬೆತ್ತಲೆ ಜಗತ್ತು" ಎಂಬ ಅಂಕಣದಲ್ಲಿ ಮುಸ್ಲಿಮರ ಮತ್ತು ಕ್ರೈಸ್ತರ ಬಗೆಗಿನ ಅಪಪ್ರಚಾರದಲ್ಲಿ ತೊಡಗಿದ್ದ . ಅದಕ್ಕಾಗಿ ಮುಸ್ಲಿಂ ಸಂಘಟನೆಯ ಸದಸ್ಯರಿಂದ ತಪರಾಕಿ ತಿನ್ನುತ್ತಿದ್ದಾಗ ಈತನ ಚೋರ ಗುರು ವಿಶ್ವೇಶ್ವರ ಭಟ್ಟ ಈತನನ್ನು ರಕ್ಷಿಸಿಬಿಟ್ಟ. ಕೊನೆಗೆ ವಿ.ಕ.ದಲ್ಲಿ ಕ್ಷಮೆಯಾಚಿಸಿ ವಿಷಾದ ವ್ಯಕ್ತ ಪಡಿಸಿದ (ಲೇಖನದ ತಲೆಬರಹ "ಅವರಿಗೆ ಸಿಗುವುದು ೭೦ ,ನಮಗೆ ಕಾದಿದೆ ಆಪತ್ತು )

ಈಗ ಇದೇ "ಚೋರ ಗುರು ಚಂಡಾಲ ಶಿಷ್ಯ" ಕನ್ನಡ ಪ್ರಭದಲ್ಲಿ ಒಕ್ಕರಿಸಿ ಪುನಹ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಈ ಬೆತ್ತಲೆ ಸಿಂಹನ ಈ ರೀತಿಯ ಕಾಮಾಲೆ ರೋಗ ಈ ಹಿಂದೆ ತಾನು ಕಲಿತ ಉಜಿರೆ ಕಾಲೇಜ್, ಮತ್ತು mangalore ವಿ.ವಿ.ಯಲ್ಲೂ ತೋರಿಸಿದ್ದಕ್ಕೆ ತಕ್ಕ ಪ್ರತಿಫಲ ತಿಂದಿದ್ದಾನೆ .

ನನ್ನ ಕೋರಿಕೆ ಏನೆಂದರೆ ಪ್ರಜ್ಞಾವಂತ ಮತ್ತು ಜಾತ್ಯಾತೀತ ಮನೋಭಾವವುಳ್ಳ ಸಹ್ರದಯರು ಈತನ "ವಿಷ "ಕಾರುವ ಲೇಖನಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಈತನ ಎಲ್ಲಾ "ಮಾಧ್ಯಮ ವ್ಯಭಿಚಾರಕ್ಕೆ" ಸಾಥ್ ಕೊಡುವ ವಿ.ಭಟ್ತನಿಗೂ ಇವರ ಹೊಸ ಆಶ್ರಯ ಸ್ಥಾನ "ಕನ್ನಡ ಪ್ರಭ ಮತ್ತು ಸುವರ್ಣ ಎಂಬ 'ನಿತ್ಯಾ' ವಾಹಿನಿಗೂ " ತಕ್ಕ ಪಾಠ ಕಲಿಸಬೇಕು .. ಆ ಮೂಲಕ ಭವಿಷ್ಯದ " ವೈರಸ್"ಗಳಿಗೆ ಎಚ್ಚರಿಕೆ ನೀಡಬೇಕು

Muhammad, USA
2012-08-19
ಅಸ್ಸಲಾಂ ಅಲೈಕುಂ. ಇಲ್ಲಿರುವ ಎಲ್ಲವನ್ನು ಒಪ್ಪಲು ಸಾಧ್ಯವಿಲ್ಲ. ಲೇಖಕರು ತಮ್ಮ ಮೂಗಿನ ನೇರಕ್ಕೆ ಬರೆದಂತೆ ಕಾಣುತ್ತಿದೆ. ತಮ್ಮ ಚಿಂತನೆಯನ್ನು ಸಾತ್ವಿಕ ಭಾಷೆ ಯಲ್ಲಿ ಬರೆಯಬಹುದಿತ್ತು. ಪ್ರಚೋದನಕಾರಿ ಲೇಖನಕ್ಕೆ ನನ್ನ ವಿರೋಧವಿದೆ. ಆದರೂ ನಾವು ಮೊದಲು ಭಾರತೀಯರು ಧರ್ಮ ಆಮೇಲೆ ಎಂಬುವ ಲೇಖಕರ ಆಶಯ ಸ್ವಾಗತಾರ್ಹ.

ಜಗತ್ತಿನ ಏಕೈಕ ಹಿಂದುರಾಷ್ಟ್ರ ಭಾರತದಲ್ಲಿ ಮುಸ್ಲಿಮರಿಗೆ ಇರುವ ಸ್ವಾತಂತ್ರ್ಯ ಅನನ್ಯವಾದುದು. ಅದಕ್ಕೆ ನಾವೆಲ್ಲರೂ ಕೃತಜ್ಞ ರಾಗಿರಬೇಕು. ಹುತಾತ್ಮ ಯೋಧರಿಗೆ ಅವಮಾನ ಮಾಡಿದವರನ್ನು ಗಲ್ಲಿಗೇರಿಸಬೇಕು. ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ ಆದರೆ ಎಲ್ಲ ಭಯೋತ್ಪಾದಕರು ಮುಸ್ಲಿಮರು ಎಂಬ ಸತ್ಯವನ್ನು ಒಪ್ಪಿಕೊಳ್ಳೋಣ. ಸತ್ಯವನ್ನು ಒಪ್ಪದವರು ಪ್ರವಾದಿ ಸ ಅ ಅವರ ವಿರೋಧಿಗಳು.

gulfkannadiga oduga, soorinje
2012-08-19
ಇಲ್ಲೊಬ್ಬ ಮೂರ್ಖ ಪ್ರತಿಕ್ರಿಯೆ ಬರೆದು ಪ್ರತಾಪನನ್ನು ಸಮರ್ಥಿಸುತ್ತ ಇದರಲ್ಲಿ ಸುಳ್ಳೇನಿದೆ ಮಾಧ್ಯಮಗಳಲ್ಲಿ ಓದಿದ ಮತ್ತು ಹೆಚಿನದ್ದು ಕಣ್ಣಾರೆ ಕಂಡ ಸತ್ಯ ಎಂಬುದಾಗಿ ಪ್ರತಿಕ್ರಿಯೆ ಬರೆದು ಸಮರ್ಥಿಸಿದ್ದಾನೆ.

ಪಾಕಿಸ್ಥಾನದಲ್ಲಿ ಹಿಂದುಗಳಿಗೆ ಆನ್ಯಯವಾದಾಗ ನಮ್ಮ ದೇಶದೆಲ್ಲಡೆ ಪ್ರತಿಬಟನೆಗಳು ನಡೆದವು. ಆಗೇನೆ ಇಲ್ಲಿ ಮುಸ್ಲಿಮರಿಗೆ ಆನ್ಯಯವಾದಾಗ ಅದನ್ನು ಪ್ರತಿಬಟಿಸುವಾಗ ನಿನ್ನ ಕೋಮಿಗೆ ಸೇರಿದ ಜನರು ಕಲ್ಲು ತೂರಿದಾಗ ಹಿಂಸಾಚಾರ ನಡಯಿತು ಮೂರ್ಖ. ಈ ಪ್ರತಾಪ ಇದನ್ನು ಯಾಕೆ ತನ್ನ ಲೇಖನದಲ್ಲಿ ಬರೆಯಲಿಲ್ಲ? .

ಹಿಂದೊಮ್ಮೆ ಈ ಪ್ರತಾಪ ಸುವರ್ಣ ಸುದ್ದಿ ವಾಹಿನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸಿನ ಉಗ್ರಪ್ಪ ನವರೊಂದಿಗೆ ಚೆನ್ನಾಗಿ ಬೈಸಿಕೊಂಡಿದ್ದರು. ಈ ಪ್ರತಾಪ ನಿಜಕ್ಕೂ ಪತ್ರಕರ್ತನಲ್ಲ .ಇವನೊಬ್ಬ ಕಟ್ಟಾ ಮುಸ್ಲಿಂ ವಿರೋಧಿ. ಇವನ ಲೇಖನಕ್ಕೆ ದಿಕ್ಕಾರ .

nityhyanada, nookur
2012-08-18
RSS ಪ್ರತಾಪ್..
siraj, dubai
2012-08-18
ಕನ್ನಡ ಪ್ರಭ ದ ಪ್ರತಾಪ ಸಿಂಹ ರವರೆ ನೀವ್ ಬಹಳ ದೊಡ್ಡ ಮುಸ್ಲಿಂ ವಿರೋಧಿಯಂತೆ ಕಾಣುತ್ತಿರಿ. ಬರೆವಣಿಗೆಯ ರೀತಿ ನೋಡಿದರೆ ಇವನೊಬ್ಬ ದಾರಿತಪ್ಪಿದವ ಎಂಬುದರಲ್ಲಿ ಸಂಶಯವಿಲ್ಲ. ಸ್ವತಂತ್ರ ಹೋರಾಟದಲ್ಲಿ ಮುಸ್ಲಿಮರು ಇದ್ದರು ಅನ್ನುದನ್ನು ಮರೆಯ ಬೇಡ. ಜೈ ಹಿಂದ್ಹ್
suresh , mangalore
2012-08-18
ಸಹೋದರರೆ ಇಲ್ಲಿ ಸುಳ್ಳೇನಿದೆ ? ನಾವು ನಿತ್ಯ ಮಾಧ್ಯಮ ಗಳಲ್ಲಿ ಓದಿದ ಮತ್ತು ಹೆಚ್ಚಿನದ್ದು ಕಣ್ಣಾರೆ ಕಂಡ ಸತ್ಯ. ನಿಮ್ಮ ಪ್ರತಿಕ್ರಿಯೇಗೆಳು ನಿಮ್ಮದೇ ಧರ್ಮಾಂಧತೆಯನ್ನು ಎತ್ತಿ ತೋರಿಸುತ್ತವೆ. ಸತ್ಯವನ್ನು ಒಪ್ಪದಿದ್ದರೆ ಅಲ್ಲಹನೂ ಮೆಚ್ಚಲಾರ.
ayyub pirs@pp@d, belthangady/kuwait
2012-08-18
ಕನ್ನಡ ಪ್ರಭ ದ ಪ್ರತಾಪ ಸಿಂಹ ಯಾ ಎಂ.ವಿ.(ಮುಸ್ಲಿಂವಿರೋಧಿ )ಕಾಮತ ನಿಂದ ಇಂತಹ ಬರಹವಲ್ಲದೆ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ. ಮುಸ್ಲಿಂ ಎಂಬ ಪದ ಇವರ ಬರಹಗಳಿಗೆ ಆಕ್ಷಿಜನ್ ಇದ್ದಂತೆ ಈ ಪದದಿಂದಲೇ ಇವರು ಹೊಟ್ಟೆ ಹೊರೆಯುತ್ತಾರೆ ಮತ್ತು ಸಮಾಜದಲ್ಲಿನ ಸವ್ಹಾರ್ದತೆಯನ್ನು ಕೆಡವುತ್ತಾರೆ.
Purushotama, Mangalore
2012-08-18
ಬರೆವಣಿಗೆಯ ರೀತಿ ನೋಡಿದರೆ ಇವನೊಬ್ಬ ದಾರಿತಪ್ಪಿದವ ಎಂಬುದರಲ್ಲಿ ಸಂಶಯವಿಲ್ಲ. ಮನುಷ್ಯ ಜನ್ಮವನ್ನು ಸಾರ್ಥಕ ಗೊಳಿಸಿ ಇಹಲೋಕ ಪರಲೋಕವನ್ನು ಜಯಿಸ ಬೇಕು ಎಂಬುದು ಪ್ರತಿ ಧರ್ಮದ ತಿರುಳು. ಮುಸಲ್ಮಾನ, ಹಿಂದೂ ಗಳೆಂದು ವಿಭಜಿಸಿ ಮನುಕುಲವನ್ನೇ ಅಧೋಗತಿಗೆ ತಳ್ಳಿದ ಧೂರ್ತ ರಾಜಕಾರಣಿಗಳಿಂದಾಗಿ ಪರಿಸ್ತಿತಿ ಹೀಗಾಗಿದೆ.

ಇಂದಿಗೆ ೩೦ ವರ್ಷಗಳ ಹಿಂದಿದ್ದ ಪ್ರೀತಿ, ವಾತ್ಸಲ್ಯ ಇಂದು ಕಾಣುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಜನರ ಸ್ವಾಸ್ಥವನ್ನೇ ಬಲಿಗೊಟ್ಟು ಇಂದಿನ ಪರಿಸ್ತಿತಿಗೆ ರಾಜಕಾರಣಿಗಳು ಕಾರಣರಾಗಿದ್ದಾರೆ.

ಬಾಬ್ರಿ ಮಸೀದಿ ಕೆಡವಿ ಭಯೋದ್ಪಾಧನೆ, ಉಗ್ರಗಾಮಿಗಳಿಗೆ ವೇದಿಕೆ ತಯಾರಿಸಿದ ರಾಜಕಾರಣಿ ಯಾರೆಂದು ಪ್ರತಿಯೊಬ್ಬ ಪ್ರಜೆಗೂ ತಿಳಿದಿದೆ. ರಾಮ ಮಂದಿರವನ್ನು ಕಟ್ಟುತ್ತೇವೆಂದು ರಾಷ್ಟ್ರದ ಚುಕ್ಕಾಣಿಯನ್ನು ಹಿಡಿದು ರಾಮ ಭಕ್ತರಿಗೆ ರಾಮನಾಮ ಹಾಕಿದವರು, ರಾಮಮಂದಿರ ಕಟ್ಟಲು ಜಮೇ ಮಾಡಿದ ಹಣವೆಲ್ಲಿದೆ? ಹಜಾರೆಯವರೊಂದಿಗೆ ವೇದಿಕೆ ಹಂಚಿಕೆ ಮಾಡಿ ಅವರ ಆಂದೋಲನಕ್ಕೆ ನೀರು ಕುಡಿಸಿ, ಈಗ ಯೋಗ ಸ್ವಾಮಿಯೊಂದಿಗೆ ಸೇರಿ ಈ ಆಂದೋಲನಕ್ಕು ನೀರು ಬಿಟ್ಟರು. ರಾಮ ಮಂದಿರಕ್ಕೆ ಜಮಾ ಆದ ಹಣ ಎಲ್ಲಿದೆ ಎಂದು ರಾಮ ಭಕ್ತರಿಗೆ ತಿಳಿಸಲಿ. ರಾಮನ ಹೆಸರಿನಲ್ಲಿ ಕೊಂದಂತಹ ಜೀವ ಎಷ್ಟು? ಹಿಂದೂ ಮುಸಲ್ಮಾನ ರನ್ನು ಬೇರೆಯಾಗಿಸಿದವರು ಈಗ ಹಿಂದುಗಳನ್ನೇ ವಿರೋಧಿಗಳನ್ನಾಗಿ ಮಾಡಿ ಮುಂಬರುವ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.

muzammil, mangalore
2012-08-18
ತುಂಬಾ ಒಳ್ಳೆ ರೀತಿಯಲ್ಲಿ ಸುಳ್ಳನ್ನು ಬರೆದ್ದಿರಿ , ಎಷ್ಟೋ ಸಲ ಹಿಂದೂ ಗಳು ಹಾಗು rss ನವರು ಮಾಡಿದ ಬಗ್ಗೆ ಹೇಳ ಲಿಲ್ಲ
Jabbu, kuwait
2012-08-18
ಆಲೋ ಪ್ರತಾಪ್ ರವರೆ,ಇ ನಿಮ್ಮ ಲೇಖನ ಸಂಘ ಪರಿವಾರದ ನಿಮ್ಮ ಸದಸ್ಯತ್ವವನ್ನು ಒತ್ತಿ ಕಾನಿಸುವಂತಿದೆ ..ಅವರು ಹೇಳಿದ ರೀತಿಯೇ ಬೇರೆ ನೀವು ಬರೆದ ರೀತಿಯೇ ಬೇರೆ ..ಅಸ್ಸಾಮಿನಲ್ಲಿ ಇಸ್ಟೆಲ್ಲಾ ಮಾರಣ ಹೋಮ ನಡೆಯುತಿರುವಾಗ ಕಣ್ಣು ಮುಚಿ ಕೂತ ನಿಮಗೆ ಅಸ್ಸಾಮಿನ ಬಗೆ ಮುಸ್ಸ್ಲಿಮರ ಮಾರಣ ಹೋಮ ನಡೆಯುದನ್ನು ಖಂಡಿಸಿದ ಅವರನ್ನು ನಿಮಗೆ ದೇಶ ದ್ರೋಹಿಯಾಗಿ ಕಂಡು ಬಂತು .ಇದು ನಿಮ್ಮ double mind stranded ಅಸ್ತೆ
HANEEF, UDUPI
2012-08-18
ಮಾನ್ಯ ಪ್ರತಾಪ ಸಿಂಹ ರವರೇ ತಾವು ಪತ್ರಕರ್ತ ರಾಗಿರಬಹುದು ತಮಗೆ ಇಚ್ಛೆ ಬಂದದ್ದನ್ನು ಬರೆಯುವುದು ಹಾಗೂ ಜನರು ಅದನ್ನೇ ಸತ್ಯವೆಂದು ತಿಳಿಯುತ್ತಾರೆ ಎಂಬ ನಂಬಿಕೆ ತಮಗಿದ್ದರೆ ಆ ಕಾಲ ಕಳೆದು ಹೋಗಿದೆ. ಈಗ ಒಂದು ಲೆಕನವನ್ನು ಹತ್ತು ಕಡೆ ವಿಮರ್ಷಸಿ ಓದುಗರು ಯಾವುದು ಸರಿ ಅನ್ನೋ ತೀರ್ಮಾನಿಸುತ್ತಾರೆ ಎಂದು ತಿಳಿದಿರಲಿ.

ಅವ್ನು ಹೇಳಿರುವ ಮಾತು ಈ ಪ್ರಕಾರದ್ದಾಗಿದೆ "ಅಸ್ಸಾಮಿನ ಮುಸಲ್ಮಾನರಿಗೆ ಸೂಕ್ತ ಪುನರ್ವಸತಿ ಕಲ್ಪಿಸದಿದ್ದರೆ ಎಂಬುದಾಗಿದೆ. ಅವನು ಬಾಂಗ್ಲ ಮುಸಲ್ಮಾನರಿಗೆ ಎನ್ನುವ ಪದವನ್ನೇ ಬಳಸಲಿಲ್ಲ . ಇನ್ನು ಮುಸಲ್ಮಾನರ ಮೂಲಭೂತೀಕರಣ ಈಗಿನ ಪರಿಸ್ತಿತಿಯನ್ನು ನೋಡಿದರೆ ಅದು ಅನಿವಾರ್ಯ ಎಂಬುವುದು ನನಗೆ ಅನಿಸುತ್ತದೆ.

ಇನ್ನು ಬಾರತದ ಯಾವುದೇ ಮೂಲೆಯಲ್ಲಿ ಇತರ ದೇಶದ ಅತಿಕ್ರಮಣಕಾರರಿದ್ದರೆ ಅದು ಮುಸಲ್ಮಾನನಾಗಲಿ ಅಥವಾ ಹಿಂದುವಾಗಲಿ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕಾನುನುರೀತಿಯ ಕ್ರಮವನ್ನು ಸರಕಾರ ಕೈಗೊಳ್ಳಲಿ.

ಈ ಲೇಖನ ಶೇಕಡಾ ೭೦ರಸ್ತು ಮಾನ್ಯ ಪ್ರತಾಪ ಸಿಂಹರವರ ಕಪೋಕಲ್ಪಿತ "ಘರ್ಜನೆ" ಯಂತೆ ಭಾಸವಾಗುತ್ತದೆ. ಮುಸಲ್ಮಾನರನ್ನು ಕೊಂದರೆ ಮುಸಲ್ಮಾನರೇ ಪ್ರತಿಭಟನೆ ಮಾಡಬೇಕು, ಹಿಂದುಗಳನ್ನು ಕೊಂದರೆ ಹಿಂದುಗಲೇ ಪ್ರತಿಭಟನೆ ಮಾಡಬೇಕು ಅನ್ನುವ ನಿಯಮವನ್ನು ತಾವು ಸಾರಿದಂತಿದೆ. ನನ್ನ ಅನಿಸಿಕೆ ಪ್ರಕಾರ ಮಾನವೀಯತೆ ಒಂದು ಇದ್ದರೆ ಪ್ರಪಂಚದಲ್ಲಿ ಮನುಷ್ಯನಿಗೆ ಆಗುವ ತೊಂದರೆಯನ್ನು ಯಾರು ಬೇಕಾದರೂ ಪ್ರತಿಬಟಿಸ ಬಹುದು.

ಇನ್ನು ಲೇಖಕರು ಇತಿಹಾಸವನ್ನು ತಾವೇ ತಯಾರಿಸಿದಂತಿದೆ. ಮಾನ್ಯ ಲೇಖಕರೇ ತಮ್ಮ ಬುರುಡೆಯಲ್ಲಿ ಅಂಟಿಕೊಂಡಿರುವ DOUBLE STANDERD ಅನ್ನು ತೆಗೆದು ಮಾನವೀಯ ನೆಲೆಯಲ್ಲಿ ಆಲೋಚನೆ ಮಾಡಿ ಲೇಖನವನ್ನು ಬರೆಯುವುದು ಉತ್ತಮ ಎಂದು ನನಗನಿಸುತ್ತದೆ.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri