ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಪಾತ್ರೆಯೊಳಗಿನ ಮೀನು....

ಅವನೊಬ್ಬ ಸೂಫೀ ಸಂತ. ಅವನಿಗೆ ಯಾವ ಅಪೇಕ್ಷೆಗಳೂ ಇಲ್ಲ. ಅವನ ಖ್ಯಾತಿ ಹರಡಿದಷ್ಟು ಅವನ ಹತ್ತಿರ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿತ್ತು. ಪ್ರಚಾರದಷ್ಟು ಘನವಾದ ವೈರಿ ಮತ್ತಾರೂ ಇಲ್ಲ. ಜನ ಪ್ರಚಾರಕ್ಕೆ ಹಾತೊರೆಯುತ್ತಾರೆ.

ಪ್ರಚಾರ ದೊರೆತು ಪ್ರಖ್ಯಾತರಾದ ಮೇಲೆ ಹೇಗೆ ಜನರಿಂದ ತಪ್ಪಿಸಿಕೊಂಡೇವೋ ಎಂದು ಒದ್ದಾಡುತ್ತಾರೆ. ನೀವು ಪ್ರಸಿದ್ಧರಾಗುವುದಕ್ಕಿಂತ ಮೊದಲು ಎಂಥ ಅರ್ಥಗರ್ಭಿತ ಮಾತನ್ನು ಹೇಳಿದರೂ ಕೇಳಿಸಿಕೊಳ್ಳದ ಜನ ನೀವು ಪ್ರಸಿದ್ಧರಾದ ಮೇಲೆ ಹೇಳಿದ ಅತಿ  ಸಾಮಾನ್ಯ ಮಾತನ್ನು ವೈಭವೀಕರಿಸಿ, ವಿಶೇಷವಾಗಿ ಅರ್ಥೈಸಿ ಹೊಗಳುತ್ತಾರೆ, ನಿಮ್ಮನ್ನು ದಾರ್ಶನಿಕ ಎನ್ನುತ್ತಾರೆ.

ಈ ಮಾತನ್ನು ಚೆನ್ನಾಗಿ ತಿಳಿದುಕೊಂಡಿದ್ದ ಸೂಫೀ ಸಂತ ಜನರಿಂದ ದೂರವಾಗಿ ದೂರದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಆದರೂ ಜನ ಹುಡುಕಿಕೊಂಡು ಸಂತನ ಬಳಿಗೆ ಬರುತ್ತಿದ್ದರು. ಒಂದು ದಿನ ಬಗದಾದಿನಿಂದ ಶೇಖ್ ಒಬ್ಬ ಬಂದ. ಅವನೊಬ್ಬನೇ ಬರಲಿಲ್ಲ.

ತನ್ನ ಅಪಾರವಾದ ಪರಿವಾರವನ್ನೂ ಕರೆದುಕೊಂಡು ಬಂದ. ಏನೇನೋ ಕಾಣಿಕೆಗಳ ರಾಶಿಯನ್ನೇ ತಂದು ಸಂತನ ಮುಂದಿಟ್ಟ. ಸಂತನಿಗೆ ಗಾಜಿನ ಚೂರೂ ಒಂದೇ, ವಜ್ರವೂ ಒಂದೇ. ಎಲ್ಲವನ್ನೂ ನಿರಾಕರಿಸಿಬಿಟ್ಟ. ಶೇಖ್‌ನಿಗೆ ನಿರಾಶೆಯಾದರೂ ತೋರಿಸದೇ ಸಂತನ ಶಿಷ್ಯರಿಗೆ ಕೆಲವೊಂದು ವಸ್ತುಗಳನ್ನು ನೀಡಿ ಹೊರಟ.

ಒಂದೆರಡು ದಿನಗಳ ನಂತರ ಸಂತ ಅಲ್ಲಲ್ಲಿ ಶಿಷ್ಯರ ಬಳಿಯಲ್ಲಿದ್ದ ವಸ್ತುಗಳನ್ನು ಗಮನಿಸಿ ಅವುಗಳನ್ನು ಹಾಗೆ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿ ಅವರನ್ನು ಒಪ್ಪಿಸುತ್ತಿದ್ದ. ಆಗ ತನ್ನ ಕೊಠಡಿಯಲ್ಲಿ ಕಿಟಕಿಯ ಮೇಲೆ ಒಂದು ದೊಡ್ಡ ಗಾಜಿನ ಪಾತ್ರೆ ಕಾಣಿಸಿತು.

ಕುತೂಹಲದಿಂದ ನೋಡಿದ. ಅದರಲ್ಲಿ ನೀರಿದೆ ಮತ್ತು ನೀರಿನಲ್ಲಿ ಸುಂದರವಾದ ಬಣ್ಣಬಣ್ಣದ ಮೀನಿದೆ. ನಿಧಾನವಾಗಿ ಆ ಗಾಜಿನ ಪಾತ್ರೆಯನ್ನು ಕೆಳಗೆ ಇಳಿಸಿಕೊಂಡ. ಎಷ್ಟು ಚೆಂದದ ಮೀನು ಅದು. ಆ ಪಾತ್ರೆಯನ್ನು ಹಿಡಿದುಕೊಂಡು ಹೊರಗೆ ಬಂದ. ಆಶ್ರಮದ ಮುಂದೆ ಒಂದು ಕೊಳ. ಅದರ ಹತ್ತಿರ ಹೋಗಿ ನಿಧಾನವಾಗಿ ಮೀನನ್ನು ಪಾತ್ರೆಯಿಂದೆತ್ತಿ ಕೊಳದೊಳಗೆ ಹಾಕಿಬಿಟ್ಟ.

ಅದು ಸಂತೋಷದಿಂದ ಹೊರಟು ಹೋಯಿತು. ಪಾಪ! ಬಂಧನದಲ್ಲಿದ್ದ ಮೀನಿಗೆ ಸ್ವಾತಂತ್ರ್ಯ ಸಿಕ್ಕಿತಲ್ಲ ಎಂದು ಸಂತನೂ ಸಂತೋಷಪಟ್ಟ. ನಂತರ ಆ ಗಾಜಿನ ಪಾತ್ರೆಯನ್ನು ಕೂಡ ನಿಧಾನವಾಗಿ ಕೊಳದಲ್ಲಿ ಮುಳುಗಿಸಿಬಿಟ್ಟ.

ಬೆಲೆಬಾಳುವ ಗಾಜಿನ ಪಾತ್ರೆಯಿಂದ ಸಂತನಿಗೇನು ಪ್ರಯೋಜನ. ಮರುದಿನ ಆತ ಕೊಳದ ಬಳಿ ಕುಳಿತು ಧ್ಯಾನ ಮಾಡುತ್ತಿದ್ದ. ನಂತರ ಶುದ್ಧವಾದ ಕೊಳದ ನೀರನ್ನು ಗಮನಿಸಿದಾಗ ತಳದಲ್ಲಿದ್ದ ಗಾಜಿನ ಪಾತ್ರೆ ಕಂಡಿತು.

ಅರೇ! ಆ ಬಣ್ಣಬಣ್ಣದ ಮೀನು ಪಾತ್ರೆಯ ಒಳಗೇ ಕುಳಿತಿದೆ! ನೀರಿನಲ್ಲಿ ಕೈ ಹಾಕಿ ಪಾತ್ರೆ ಎತ್ತಿ ಮೀನನ್ನು ಕೊಳದೊಳಗೆ ಹಾಕಿ ಮತ್ತೆ ಪಾತ್ರೆಯನ್ನು ಮುಳುಗಿಸಿದ. ಐದೇ ನಿಮಿಷದಲ್ಲಿ ಮತ್ತೆ ಮೀನು ಬಂದು ಪಾತ್ರೆಯಲ್ಲಿ ಕುಳಿತಿತು! ಸಂತನಿಗೆ ಅರ್ಥವಾಯಿತು.

ಒಂದು ಸಲ ಗುಲಾಮಗಿರಿಗೆ ಒಗ್ಗಿಕೊಂಡರೆ ಅದೇ ಅಭ್ಯಾಸವಾಗಿ ಹೋಗುತ್ತದೆ. ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂದು ಬಡಬಡಿಸುವುದು ಸುಲಭ. ಸ್ವಾತಂತ್ರ್ಯ ನಿಭಾಯಿಸುವುದು ಬಲುಕಷ್ಟ. ಜೈಲಿನಲ್ಲಿದ್ದಷ್ಟು ಭದ್ರತೆ ಎಲ್ಲಿಯೂ ದೊರೆಯಲಾರದು.

ಸರಿಯಾದ ಸಮಯಕ್ಕೆ ಆಹಾರ, ಸ್ಥಿರವಾದ ಸೂರು, ಅವಶ್ಯವಿದ್ದಾಗ ವೈದ್ಯಕೀಯ ಸಹಾಯ ಎಲ್ಲವೂ ದೊರೆಯುತ್ತದೆ. ಆದರೆ ಸ್ವಾತಂತ್ರ್ಯದ ಸುಖವಿಲ್ಲ. ಸ್ವಾತಂತ್ರ್ಯಕ್ಕೆ ವಿಮೆ ಇಲ್ಲ. ಸ್ವಾತಂತ್ರ್ಯ ಬೇಕೆನ್ನುವವರು ದುಡಿಯಲು ಸಿದ್ಧರಾಗಿರಬೇಕು. ತಮ್ಮ ಅವಶ್ಯಕತೆಗಳನ್ನು ಪ್ರಾಮಾಣಿಕತೆಯಿಂದ ಪಡೆಯುವ ಶಕ್ತಿ ಪಡೆದಿರಬೇಕು, ಜವಾಬ್ದಾರಿಯನ್ನು ಅರಿತಿರಬೇಕು. ಬರಿ  ಅಧಿಕಾರಕ್ಕಾಗಿ ಹಪಹಪಿಸುವುದು ಸ್ವಾತಂತ್ರ್ಯವಲ್ಲ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-18

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri