ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಅಮೆರಿಕ: ಭಾರತೀಯ ಮುಸ್ಲಿಮರಿಂದ ಸ್ವಾತಂತ್ರ ದಿನಾಚರಣೆ; ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

ಇಲಿನಾಯ್ಸ, ಆ.15: ಭಾರತದ 66ನೆ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿನ ‘ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್’ (ಐಎಎಂಸಿ) ಭಾರತೀಯ ಸಮುದಾಯಕ್ಕೆ ಶುಭಾಶಯ ಸಲ್ಲಿಸಿದೆ. ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ವೀರರ ಬಲಿದಾನವನ್ನು ಈ ಸಂದರ್ಭದಲ್ಲಿ ಅದು ಸ್ಮರಿಸಿದೆ. ರಾಷ್ಟ್ರವು ಅಕ್ರಮ ಬಂಧನ ಹಾಗೂ ಮುಗ್ಧ ನಾಗರಿಕರನ್ನು ನಕಲಿ ಎನ್‌ಕೌಂಟರ್‌ಗಳ ಮೂಲಕ ಹತ್ಯೆಗೈಯುವ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಐಎಎಂಸಿಯ ಅಧ್ಯಕ್ಷ ಶಹೀನ್ ಖತೀಬ್ ತಿಳಿಸಿದ್ದಾರೆ.

‘‘1947ರ ಆಗಸ್ಟ್ 15ರ ಬಳಿಕ ಭಾರತವು ವಿವಿಧ ರಂಗಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಮಾತ್ರವಲ್ಲದೆ, ಜಗತ್ತಿನ ಇತರ ಕೆಲವು ರಾಷ್ಟ್ರಗಳಂತೆಯೇ ಅದು ಮುಂಚೂಣಿಯ ಪಾತ್ರವನ್ನು ನಿರ್ವಹಿಸಿದೆ. ನಮ್ಮ ದೇಶವಾಸಿಗಳು ರಾಷ್ಟ್ರನಿರ್ಮಾಣದ ಪ್ರಮುಖ ಕಾರ್ಯದಲ್ಲಿ ಸಕ್ರಿಯರಾಗಿ ಭಾಗಿಯಾಗಬೇಕೆಂಬುದು ನಮ್ಮ ಆಶಯವಾಗಿದೆ. ನಮ್ಮ ಅಹಿಂಸೆ, ಸಹಾನುಭೂತಿ ಹಾಗೂ ಒಳ್ಳೆಯದಕ್ಕಾಗಿ ಶ್ರಮಿಸುವ ಮೂಲ ತತ್ವಗಳ ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಕೈಗಾರಿಕಾ ಪ್ರಗತಿಯನ್ನು ಖಾತರಿಪಡಿಸಿಕೊಳ್ಳುವ ಅಗತ್ಯವಿದೆ’’ ಎಂದವರು ಹೇಳಿದ್ದಾರೆ.

‘‘ಜಾತ್ಯತೀತ ನೆಲೆಗಟ್ಟಿಗೆ ಉಂಟಾಗಿರುವ ಬೆದರಿಕೆ ಸೇರಿದಂತೆ ರಾಷ್ಟ್ರವು ಬಹುಸ್ತರದ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಹಾದಿಯಲ್ಲಿ ರಾಷ್ಟ್ರವನ್ನು ಮುನ್ನಡೆಸುವ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ’’ ಎಂದೂ ಅವರು ಅಭಿಪ್ರಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಐಎಎಂಸಿ ಕೂಡಾ ತನ್ನ ದಶಮಾನೋತ್ಸವವನ್ನು ಆಚರಿಸಿದೆ. ‘‘2002ರ ಆಗಸ್ಟ್ 15ರಂದು ಐಎಎಂಸಿ ಸ್ಥಾಪನೆಗೊಂಡ ಬಳಿಕ ಅದು ಯಾವುದೇ ಧರ್ಮ, ನಂಬಿಕೆಗಳ ವಿಚಾರವಾಗಿ ತಾರತಮ್ಯ ಮಾಡದೆ ಸಕಲ ಭಾರತೀಯ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದೆ’’ ಎಂದು ಇದೇ ವೇಳೆ ಐಎಎಂಸಿಯ ಪ್ರಧಾನ ಕಾರ್ಯದರ್ಶಿ ಝಾಫರ್ ಹಕ್ ತಿಳಿಸಿದ್ದಾರೆ.

ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
ವಾಷಿಂಗ್ಟನ್, ಆ.15: ಭಾರತೀಯ ಸಮುದಾಯಗಳು ವಿಶ್ವದೆಲ್ಲೆಡೆ ಬುಧವಾರ ಭಾರತದ 66ನೆ ಸ್ವಾತಂತ್ರೋತ್ಸವದ ಸಂಭ್ರಮವನ್ನು ಆಚರಿಸಿದರೆ, ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಅಂತರಿಕ್ಷಧಾಮದಲ್ಲಿ ತ್ರಿವರ್ಣಧ್ವಜ ಅರಳಿಸಿ ಭಾರತೀಯರೆಲ್ಲರಿಗೆ ಶುಭಾಶಯ ಸಲ್ಲಿಸಿದರು.

‘‘ನಾನು ಭಾರತೀಯ ಜನತೆಗೆ ಸ್ವಾತಂತ್ರೋತ್ಸವದ ಶುಭಕಾಮನೆಗಳನ್ನು ಅರ್ಪಿಸುತ್ತೇನೆ. ಭಾರತವು ಒಂದು ಅದ್ಭುತ ರಾಷ್ಟ್ರವಾಗಿದೆ ಮತ್ತು ನಾನು ಅಲ್ಲಿನ ಒಂದು ಭಾಗವಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ’’ ಎಂದು ತಮ್ಮ ಸಂದೇಶದಲ್ಲಿ ಸುನೀತಾ ವಿಲಿಯಮ್ಸ್ ತಿಳಿಸಿದ್ದಾರೆ.
ಭಾರತವು ಸ್ವಾತಂತ್ರ ಗಳಿಸಿ 65 ವರ್ಷಗಳು ಕಳೆದಿದ್ದು, ಇದೇ ಮೊದಲ ಬಾರಿಗೆ ಸ್ವಾತಂತ್ರ ದಿನಾಚರಣೆಯ ಸಂಭ್ರಮ ಅಂತರಿಕ್ಷಧಾಮದಲ್ಲಿ ಗೋಚರಿಸಿದೆ.

‘‘ನಿಜವಾಗಿಯೂ ನಾನು ಅರ್ಧ ಭಾರತೀಯಳು. ನನ್ನ ತಂದೆ ಗುಜರಾತ್ ಮೂಲದವರು. ಭಾರತವು ಒಂದು ವರ್ಣಮಯ ಹಾಗೂ ಅದ್ಭುತ ಪ್ರದೇಶವಾಗಿದೆ. ನಾನು ಭಾರತೀಯ ಮೂಲದವಳೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಭಾರತೀಯ ರೆಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯ ಗಳು’’ಎಂದವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-16

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

» ತಮಿಳುನಾಡು ಭೇಟಿ: ಪ್ರವಾಸಿಗರಿಗೆ ಶ್ರೀಲಂಕಾ ಎಚ್ಚರಿಕೆ
»ದಕ್ಷಿಣ ಕೊರಿಯ ‘ಯೂನಿಫಿಕೇಶನ್’ ಚರ್ಚ್‌ನ ಸ್ಥಾಪಕ ನಿಧನ
»ಪಾಕ್‌ನಲ್ಲಿ ಬಾಂಬ್ ಸ್ಫೋಟ: 2 ಸಾವು, 19 ಜನರಿಗೆ ಗಾಯ
»ಅಮೆರಿಕ: ಭಾರತೀಯ ಸಂಜಾತನಿಗೆ ಪ್ರಮುಖ ಹುದ್ದೆ
»ಸಿರಿಯದಲ್ಲಿ ಬಾಹ್ಯ ಹಸ್ತಕ್ಷೇಪ ಬೇಡ: ಮನಮೋಹನ್ ಸಿಂಗ್
»ಅಣ್ವಸ್ತ್ರಗಳ ಬಳಕೆ ಅಕ್ಷಮ್ಯ ಅಪರಾಧ: ಖಾಮಿನೈ; ನ್ಯಾಮ್ ಶೃಂಗದಲ್ಲಿ ಇರಾನ್ ಮುಖಂಡನ ಹೇಳಿಕೆ
»ಶುಕ್ರವಾರ ಆಗಸದಲ್ಲಿ ಬ್ಲೂ ಮೂನ್‌ ಕೌತುಕ
»ಮಗುವನ್ನು ಮಹಡಿಯಿಂದ ಕೆಳಗೆಸೆದ ತಾಯಿ!
»ನಿಮಗಾದ ತೊಂದರೆಗಾಗಿ ನಾನು ಕ್ಷಮೆ ಕೋರುತ್ತೇನೆ ಇಂದಿರಾ ಗಾಂಧಿ ಬಳಿ ಹೇಳಿದ್ದ ಆರ್ಮ್‌ಸ್ಟ್ರಾಂಗ್
»7.4 quake off El Salvador triggers tsunami alert
»ವೆನೆಝುವೆಲ ತೈಲಾಗಾರ ಸ್ಫೋಟ: ಸಾವಿನ ಸಂಖ್ಯೆ ಕನಿಷ್ಠ 39ಕ್ಕೆ ಏರಿಕೆ
»`ಚಂದ್ರ' ಮಾನವ ಇನ್ನಿಲ್ಲ...
»ವೆನೆಜುವೆಲ: ತೈಲ ಸ್ಥಾವರದಲ್ಲಿ ಸ್ಫೋಟ, ಕನಿಷ್ಠ 19 ಬಲಿ
»ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರಬ್ ಮಹಿಳೆಯರು
»ಕ್ಯುರಿಯಾಸಿಟಿಯ ಸುತ್ತಾಟ ಆರಂಭ
»ಬಿಕಿನಿ ನೀರೆಯರೊಂದಿಗೆ ಬ್ರಿಟಿಷ್ ರಾಜಕುಮಾರ ಹ್ಯಾರಿ!
»ಜೈಪುರ್: ಭಾರೀ ಮಳೆಗೆ 6 ಜನ ಬಲಿ
»ಅನಾರೋಗ್ಯ:ಇಥಿಯೋಪಿಯಾ ಪ್ರಧಾನಿ ಮೆಲೆಸ್ ಜೆನಾವಿ ವಿಧಿವಶ?
»ಜಪಾನಿನ ಯುದ್ಧ ಪತ್ರಕರ್ತೆ ದುರಂತ ಸಾವು
»ರೈಲಿನಿಂದ ಹೊರಗೆಸೆದು ಅಸ್ಸಾಮಿಗರಿಬ್ಬರ ಹತ್ಯೆ(Updated)
»ಅಮೆರಿಕ: ಭಾರತೀಯ ಮುಸ್ಲಿಮರಿಂದ ಸ್ವಾತಂತ್ರ ದಿನಾಚರಣೆ; ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
»ಫೇಸ್ ಬುಕ್ ಕಾಮೆಂಟ್ ಗೆ ನೊಂದು ಸೂಸೈಡ್...
»ಅಂತರಿಕ್ಷದಲ್ಲಿಯೂ ರಾಷ್ಟ್ರಧ್ವಜಾರೋಹಣ...
»ರಿಯೋಗೆ ಬಂದ ಒಲಿಂಪಿಕ್ಸ್ ಬಾವುಟ...
»ಗಿರ್-ಸೋಮ್‌ನಥ್ ನೂತನ ಜಿಲ್ಲೆಯಾಗಿ ಘೋಷಿಸಿದ ಮೋದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri