ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಹರ್ಷದ ದಾರಿ

ರಾಮಣ್ಣನವರಿಗೆ ಈಗ ಎಪ್ಪತ್ತು ವರ್ಷ. ತುಂಬ ಸುಖವಾಗಿಯೇ ಬದುಕಿದವರು. ಹಿರಿಯರು ಮಾಡಿಟ್ಟ ಆಸ್ತಿ ಬೇಕಾದಷ್ಟಿತ್ತು. ಅದರೊಂದಿಗೆ ತಾವೂ ಸಾಕಷ್ಟು ಗಳಿಸಿದ್ದರು. ತಮ್ಮ ಐವತ್ತನೆಯ ವಯಸ್ಸಿಗೆ ಅವರಿಗೊಂದು ಆಸೆ ಬಂತು. ನಗರದ ಜೀವನ ಸಾಕಾಗಿ ಹೋಗಿತ್ತು.

ಆದ್ದರಿಂದ ಊರ ಹೊರಗೆ ಒಂದು ತೋಟದ ಮನೆ ಕಟ್ಟಿಸಿಕೊಂಡು ಹಾಯಾಗಿರಬೇಕೆಂದು ತೀರ್ಮಾನಿಸಿದರು. ಸಾಕಷ್ಟು ಹಣ ಖರ್ಚು ಮಾಡಿ ಭವ್ಯವಾದ ಬಂಗಲೆಯನ್ನೇ ಕಟ್ಟಿಸಿದರು. ಬರೀ ಮನೆ ಇದ್ದರೆ ಸಾಕೇ. ಮನೆಯ ಸುತ್ತಮುತ್ತ ಹುಲ್ಲು ಹಾಸು ಹಾಕಿಸಿದರು.

ರಸ್ತೆ ಬದಿಗಳಲ್ಲಿ  ಹೂಗಿಡಗಳನ್ನು ಬೆಳೆಸಿದರು. ಅಲ್ಲಲ್ಲಿ  ತರತರಹದ ಹೂವಿನ ತೋಟಗಳನ್ನು ಮಾಡಿಸಿದರು. ಮನೆಯ ಹಿಂದೆ ಮನೆಯ ಸುತ್ತಮುತ್ತ ದುಂಬಿಗಳ, ಪಾತರಗಿತ್ತಿಗಳ ದಂಡೇ ನೆರೆಯುತ್ತಿತ್ತು. ರಾಮಣ್ಣ ಪ್ರೀತಿಯಿಂದ ಮನೆಯ ಮುಂದೆ ಒಂದು ಸುಂದರವಾದ ಕಾರಂಜಿ  ಸಿದ್ಧಪಡಿಸಿದರು.

ಅದರ ಪಕ್ಕದಲ್ಲೇ ಹುಲ್ಲುಮೆತ್ತೆಯ ಮೇಲೆ ಕುಳಿತು ಮುಂದಿದ್ದ ನೂರಾರು ತೆಂಗಿನ, ಅಡಿಕೆಯ ಮರಗಳನ್ನು ನೋಡುತ್ತ, ಸಮಯ ಕಳೆಯುವುದು ಅವರ ಪ್ರಿಯವಾದ ಕೆಲಸ. ಹೀಗೆಯೇ ಅದೇ ಮನೆಯಲ್ಲಿ  ಇಪ್ಪತ್ತು ವರ್ಷ ಬದುಕಿದರು. ಈಗ ಅದೇ ಮನೆಯಲ್ಲಿ  ಇದ್ದು ಇದ್ದು ಬೇಜಾರಾದಂತೆನಿಸಿತು.

ಅದೇ ಕಾರಂಜಿ, ಅವೇ ಹೂವಿನ ಗಿಡಗಳು, ಅದೇ ಅಡಿಕೆ, ತೆಂಗಿನ ಮರಗಳು, ನಗರದ ಆಕರ್ಷಣೆಗಳು ತುಂಬ ದೂರ, ನಗರದ ಸೌಲಭ್ಯಗಳೂ ಕೆಲವು ಇಲ್ಲಿ  ದೊರಕುವುದಿಲ್ಲ. ಯಾರಾದರೂ ಊರಿಂದ ಬಂದರೆ, ಊರಿಗೆ ಹೋಗುವುದಾದರೆ ಕಾರು ತೆಗೆದುಕೊಂಡು ಹೋಗುವುದೇ ಒಂದು ಕೆಲಸ.

ಮಳೆಗಾಲ ಹತ್ತಿದರೆ ಕರೆಂಟ್ ಹೋಗುತ್ತದೆ, ಕೆಲವೊಮ್ಮೆ ಜನರೇಟರ್ ಕೈಕೊಡುತ್ತದೆ. ಸಣ್ಣಪುಟ್ಟ ದುರಸ್ತಿಗಳಿಗೂ ನಗರದಿಂದಲೇ ಜನ ಬರಬೇಕು. ಅವರು ತಕ್ಷಣ ಬಂದಾರೆಯೆ. ಅವಕ್ಕೆಲ್ಲ ದಿನಗಟ್ಟಲೆ ಕಾಯಬೇಕು. ಮನರಂಜನೆಗೆ ಟಿ.ವಿ. ಬಿಟ್ಟರೆ ಬೇರೇನೂ ಇಲ್ಲ. ಆ ಟಿ.ವಿಯಲ್ಲಿ  ಎಲ್ಲ ಚಾನೆಲ್‌ಗಳು ಬರುವುದಿಲ್ಲ. ಹೀಗೆ ಕೊರಗುಗಳ ಸಾಲು ಸಾಲೇ ಕಾಣತೊಡಗಿದವು. ರಾಮಣ್ಣ ನಿರ್ಧಾರ ಮಾಡಿದರು, ಈ ಮನೆಯನ್ನು ಮಾರಿ ಬೇರೆ ಮನೆಯನ್ನು ಕೊಳ್ಳಬೇಕು.

ಆಗ ಅವರಿಗೆ ರಿಚರ್ಡ್ ನೆನಪಾದ. ಆತನ ಕೆಲಸವೇ ರಿಯಲ್ ಎಸ್ಟೇಟ್. ಮನೆ, ಜಮೀನು ಕೊಡಿಸುವುದು ಮಾರುವುದು ಅವನಿಗೆ ಸಿದ್ಧಿಸಿದ ಕಲೆ. ತುಂಬ ಚೆನ್ನಾಗಿ ಮಾತನಾಡುತ್ತಿದ್ದ ಆತ ಎಂಥ ವ್ಯವಹಾರವನ್ನೂ ಕ್ಷಣದಲ್ಲೇ ಕುದುರಿಸಿ ಬಿಡುತ್ತಿದ್ದ. ರಾಮಣ್ಣ ಅವನನ್ನು ಕರೆದು ತಮ್ಮ ವಿಚಾರವನ್ನು ತಿಳಿಸಿದರು.

ಸರಿ, ಮಾಡೋಣ ಎಂದು ಆಶ್ವಾಸನೆ ಕೊಟ್ಟು ರಿಚರ್ಡ್ ನಡೆದ. ಒಂದು ವಾರ ಕಳೆದಿರಬೇಕು ರಾಮಣ್ಣ ಪತ್ರಿಕೆಯಲ್ಲಿ  ಜಾಹೀರಾತೊಂದನ್ನು ನೋಡಿದರು. ಒಂದು ಸುಂದರವಾದ ಮನೆ ಮಾರಲಿಕ್ಕಿದೆ. ಆ ಜಾಹೀರಾತಿನಲ್ಲಿ  ಮನೆಯ ಸೊಬಗನ್ನು ತುಂಬ ಚೆನ್ನಾಗಿ ವಿವರಿಸಿದ್ದರು.

ರಾಮಣ್ಣನಿಗೆ ಅನ್ನಿಸಿತು ಇದೇ ತಮಗೆ ತಕ್ಕುದಾದ ಮನೆ. ಜಾಹೀರಾತಿನ ಕೆಳಗೆ ಒಂದು ಕಂಪನಿಯ ಹೆಸರು ಮತ್ತು ಫೋನ್ ನಂಬರ್ ಬರೆದಿತ್ತು. ತಕ್ಷಣ ಅದಕ್ಕೆ ಫೋನ್ ಮಾಡಿದರು. ಕಂಪನಿಯವರು ಅರ್ಧಗಂಟೆಯಲ್ಲಿ  ನಮ್ಮ ಏಜೆಂಟ್ ನಿಮಗೆ ಫೋನ್ ಮಾಡುತ್ತಾರೆ ಎಂದು ತಿಳಿಸಿದರು.

ಅವರು ಹೇಳಿದಂತೆಯೇ ಅರ್ಧಗಂಟೆಯಲ್ಲಿ  ಫೋನ್ ಬಂತು. ರಾಮಣ್ಣ ತಮಗೆ ಜಾಹೀರಾತಿನಲ್ಲಿದ್ದ ಮನೆ ಇಷ್ಟವಾಗಿದೆಯೆಂತೂ ತಾವು ಅದನ್ನು ನೋಡಲು ಇಷ್ಟಪಡುವುದಾಗಿಯೂ ತಿಳಿಸಿದರು. ಆ ಕಡೆಯಲ್ಲಿದ್ದ ಏಜೆಂಟ್ ಕೇಳಿದ,   `ಸರ್ ತಾವು ರಾಮಣ್ಣನವರಲ್ಲವೆ`.

ಇವರು ` ಹೌದು, ನಿಮಗೆ ಹೇಗೆ ತಿಳಿಯಿತು`  ಎಂದರು. ಆತ ಜೋರಾಗಿ ನಕ್ಕು  `ಸರ್ ನಿಮ್ಮ ಧ್ವನಿ ನನಗೆ ತಿಳಿಯದೇ. ನಾನೇ ರಿಚರ್ಡ. ಜಾಹೀರಾತಿನಲ್ಲಿ  ತಿಳಿಸಿದ ಮನೆ ನೀವಿದ್ದದ್ದೇ. ಅದೇ ಬೇಕಾ ನಿಮಗೆ`  ಎಂದು ಮತ್ತೆ ನಕ್ಕ. ರಾಮಣ್ಣ ಪೆಚ್ಚಾದರು.

ಇದು ನಮ್ಮೆಲ್ಲರ ಕಥೆ. ನಮ್ಮಲ್ಲಿರುವ ಸುಖಗಳನ್ನು ಅರಿಯದೇ ಇನ್ನೆಲ್ಲೋ ಹುಡುಕಲು ಹೋಗುತ್ತೇವೆ. ನಮ್ಮ ಸ್ವಭಾವವೇ ಹಾಗೆ. ನಮಗಿರುವ ಸುಖಗಳನ್ನು, ಸಂತೋಷಗಳನ್ನು ಅರಗಿಸಿಕೊಂಡು, ಅನುಭವಿಸಿ ಸಂತೋಷಪಡುವುದರ ಬದಲು, ಕೊರತೆಗಳನ್ನು, ಅನಾನುಕೂಲಗಳನ್ನೇ ದುರ್ಬೀನಿಟ್ಟು ನೋಡುತ್ತ ಕೊರಗುತ್ತೇವೆ.

ನಮಗಿಲ್ಲದ ಸುಖಗಳನ್ನು ಬೇರೆಲ್ಲಿಯೋ ಅರಸುತ್ತ ಸುತ್ತಿ ಸುತ್ತಿ ನುಗ್ಗಾಗುತ್ತೇವೆ. ಇರದಿದುರ ಸುಖಕ್ಕೆ ಇದ್ದುದನ್ನು ಮರೆಯುತ್ತೇವೆ. ಆಗ ದುಃಖಗಳನ್ನು ಬೆನ್ನಿಗೆ ಕಟ್ಟಿಕೊಳ್ಳುತ್ತೇವೆ. ಅಂದರೆ ಹೆಚ್ಚಿನದನ್ನು ಬಯಸಲೇಬಾರದು. ಅಲ್ಪತೃಪ್ತರಾಗೇ ಇರಬೇಕು ಎಂದಲ್ಲ. ನಮಗಿರುವ ವ್ಯವಸ್ಥೆಯಲ್ಲೇ ಸುಖ ಹುಡುಕುವ, ಸಂತೃಪ್ತಿ ಕಾಣುವ ಮನೋಭಾವವೇ ಹರ್ಷದ ದಾರಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-15

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri