ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಅಂಗಡಿಯಲ್ಲಿ ದೊರಕಿದ ಪವಾಡ...

ಇದೊಂದು ಸತ್ಯ ಘಟನೆ ಎಂದು ಹೇಳುತ್ತಾರೆ. ಅದು ಸತ್ಯವಲ್ಲದಿದ್ದರೂ ನಷ್ಟವಿಲ್ಲ. ಅದು ಒಂದು ಪುಟ್ಟ ಮನೆ. ಮಧ್ಯರಾತ್ರಿಯಾದರೂ ಮನೆಯಲ್ಲಿ ಯಾರಿಗೂ ನಿದ್ರೆಯಿಲ್ಲ. ತಾಯಿ ಒಂದೇ ಸಮನೆ ಅಳುತ್ತಿದ್ದಾಳೆ. ತಂದೆ ದಿಕ್ಕುತೋರದೇ ಆಕಾಶ ನೋಡುತ್ತ ಕುಳಿತಿದ್ದಾನೆ. ಪುಟ್ಟ ಹುಡುಗಿ ಗೌರಿ ಏನೂ ತಿಳಿಯದೇ ಹಿರಿಯರ ಮುಖ ನೋಡುತ್ತಿದ್ದಾಳೆ.

ಆಕೆಗೆ ವಿಷಯ ಏನೆಂಬುದು ಗೊತ್ತಿಲ್ಲ. ಆದರೆ, ತನ್ನ ತಮ್ಮನಿಗೆ ಏನೋ ಆಗಿದೆ. ಅವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬುದು ಮಾತ್ರ ತಿಳಿದಿದೆ. ರಾತ್ರಿ ಒಂಬತ್ತಕ್ಕೆ ತಂದೆ ಆಸ್ಪತ್ರೆಯಿಂದ ಬಂದರು. ತಾಯಿ  `ಏನಾದರೂ ವ್ಯವಸ್ಥೆಯಾಯಿತೇ`  ಎಂದು ಆತಂಕದಿಂದ ಕೇಳಿದರು. ತಂದೆ ನಿರಾಸೆಯಿಂದ ತಲೆ ಅಲ್ಲಾಡಿಸುತ್ತ,  `ಇಲ್ಲ ಏನೂ ಆಗಲಿಲ್ಲ.

ಡಾಕ್ಟರು ಹೇಳಿದರು. ಈ ಅಪರೇಷನ್ ಯಶಸ್ಸಿಯಾಗಬೇಕಾದರೆ ಡಾ. ಚೌಧರಿ ಅವರಿಂದ ಮಾತ್ರ ಸಾಧ್ಯ. ಅವರು ಈ ಆಸ್ಪತ್ರೆಗೆ ಬಂದು ಅಪರೇಷನ್ ಮಾಡುವುದಿಲ್ಲವಂತೆ. ಮಗುವನ್ನು ಅವರ ಆಸ್ಪತ್ರೆಗೇ ತೆಗೆದುಕೊಂಡು ಹೋಗಬೇಕು. ಅದು ತುಂಬ ದೊಡ್ಡ ಆಸ್ಪತ್ರೆ.
ಅಲ್ಲಿ ಈ ಆಪರೇಷನ್ ಮಾಡಲು ಕನಿಷ್ಠ 5 ಲಕ್ಷ ರೂಪಾಯಿ ಖರ್ಚಾಗುತ್ತದಂತೆ. ಈಗ ಸೇರಿಸಿದ ಆಸ್ಪತ್ರೆಯಲ್ಲಿ ಬೇರೆ ಯಾರೋ ವೈದ್ಯರು ಮಾಡಿದರೆ ಐವತ್ತು ಸಾವಿರ ರೂಪಾಯಿಯಲ್ಲಿ ಮುಗಿಯಬಹುದು. ಆದರೆ ಅದು ಯಶಸ್ವಿಯಾಗುತ್ತದೆ ಎಂದು ಹೇಳುವುದು ಕಷ್ಟ. ಮಗುವಿನ ಜೀವಕ್ಕೇ ಅಪಾಯವಿದೆ`  ಎಂದು ಬಿಕ್ಕಳಿಸಿದರು.

ತಾಯಿಗೆ ತಡೆದುಕೊಳ್ಳಲಾಗಲಿಲ್ಲ,  `ಹಾಗಾದರೆ ಬೇರೆ ಯಾವ ಉಪಾಯವೂ ಇಲ್ಲವೇ`  ಎಂದು ಕೇಳಿದರು.  `ನಾನೇನು ಹೇಳಲಿ. ನನ್ನ ಪರಿಸ್ಥಿತಿ ನಿನಗೇ ಗೊತ್ತಲ್ಲ. ನಮ್ಮ ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಮಾರಿದರೂ ಒಂದು ಲಕ್ಷ ರೂಪಾಯಿ ದೊರಕಲಾರದು. ಅಂಥದ್ದರಲ್ಲಿ 5 ಲಕ್ಷ ಹೇಗೆ ಹೊಂದಿಸಲಿ. ಪವಾಡದಿಂದ ಮಾತ್ರ ಮಗು ಬದುಕಬಲ್ಲದು` ಎಂದರು ತಂದೆ. ಈ ಸಂಭಾಷಣೆಯನ್ನು ಎಂಟು ವರ್ಷದ ಪೋರಿ ಗೌರಿ ಕೇಳಿಸಿಕೊಳ್ಳುತ್ತಿದ್ದಳು. ರಾತ್ರಿಯೆಲ್ಲ ಯಾರೂ ಮಲಗಲಿಲ್ಲ.

ಮರುದಿನ ಗೌರಿ ತನಗೆ ಆಗಾಗ ದೊರೆತ ನಾಣ್ಯಗಳನ್ನೆಲ್ಲ ಹಾಕಿಟ್ಟಿದ್ದ ಗೋಲಕ ತೆಗೆದುಕೊಂಡು ಮನೆಯ ಹತ್ತಿರವೇ ಇದ್ದ ದೊಡ್ಡ ಶಾಪಿಂಗ್ ಮಾಲ್‌ಗೆ ಹೋದಳು. ಅಲ್ಲಿ ಹಣವನ್ನು ತೆಗೆದುಕೊಳ್ಳುತ್ತಿದ್ದ ಮ್ಯೋನೇಜರ್ ಹತ್ತಿರ ಹೋಗಿ ಆ ಡಬ್ಬವನ್ನು ಅವನ ಮುಂದಿಟ್ಟು, `ಸರ್, ಈ ಡಬ್ಬಿಯಲ್ಲಿದ್ದ ಹಣವನ್ನೆಲ್ಲ ತೆಗೆದುಕೊಂಡು ನನಗೆ ಒಂದು ಪವಾಡ ಕೊಡಿ`  ಎಂದಳು. ಅವನಿಗೆ ಇಂಥದ್ದನ್ನು ಇದುವರೆಗೂ ಯಾರೂ ಕೇಳಿರಲಿಲ್ಲ.

  `ಮಗೂ, ಪವಾಡ ಇಲ್ಲಿ ಸಿಗುವುದಿಲ್ಲಮ್ಮ, ಅದು ಹೀಗೆ ದುಡ್ಡಿಗೆ ದೊರೆಯಲಾರದು. ಯಾಕೆ ನಿನಗೆ ಪವಾಡ ಬೇಕು` ಎಂದು ಕೇಳಿದ. ಮಗು ಗೌರಿ ತನಗೆ ತಿಳಿದ ಹಾಗೆ ತನ್ನ ತಮ್ಮ ಆಸ್ಪತ್ರೆ ಸೇರಿದ್ದು ಮತ್ತು ತನ್ನ ತಂದೆ ಕೇವಲ ಪವಾಡದಿಂದ ಮಾತ್ರ ಆತ ಬದುಕಬಲ್ಲ ಎಂದು ಹೇಳಿದ್ದನ್ನು ಮ್ಯೋನೇಜರರಿಗೆ ಹೇಳಿ ಹೋ ಎಂದು ಅಳತೊಡಗಿದಳು.

ಕೌಂಟರಿನ ಸುತ್ತಲಿದ್ದ ಐದಾರು ಜನ ಈ ದೃಶ್ಯವನ್ನು ನೋಡುತ್ತಿದ್ದರು. ಅದರಲ್ಲೊಬ್ಬ ಹಿರಿಯರು ಮುಂದೆ ಬಂದು,  `ನಿನ್ನ ಮನೆ ತೋರಿಸುತ್ತೀಯಾ ಮಗು. ನನ್ನಿಂದ ಸಾಧ್ಯವಾದರೆ ಪವಾಡ ತಂದು ಕೊಡುತ್ತೇನೆ`  ಎಂದರು. ಹುಡುಗಿ ಕಣ್ಣೊರೆಸಿಕೊಂಡು ಅವರನ್ನು ಕರೆದುಕೊಂಡು ಮನೆಗೆ ಹೋದಳು.

ಹಿರಿಯರು ಅವಳ ತಂದೆಯ ಜೊತೆಗೆ ಮಾತನಾಡಿ ವಿಷಯ ತಿಳಿದುಕೊಂಡರು. ನಂತರ ತಮ್ಮ ಪರಿಚಯ ಮಾಡಿಕೊಂಡರು. ಆ ಖ್ಯಾತ ವೈದ್ಯ ಡಾ. ಚೌಧರಿ ಅವರ ತಂದೆ ಅವರಾಗಿದ್ದರು. ಅವರು ತಮ್ಮ ಮಗನಿಗೆ ಫೋನ್ ಮಾಡಿದರು. ಆ ವೈದ್ಯ ತಕ್ಷಣವೇ ಆ ಮಗುವನ್ನು ತಮ್ಮ ಆಸ್ಪತ್ರೆಗೆ ಬದಲಾಯಿಸಿಕೊಂಡು ತಾವೇ ಅಪರೇಷನ್ ಮಾಡಿದರು ಒಂದು ಕಾಸನ್ನೂ ತೆಗೆದುಕೊಳ್ಳದೇ. ಮಗುವಿಗೆ ಪುನರ್ಜನ್ಮವಾಗಿತ್ತು.

ಇದೊಂದು ಆಕಸ್ಮಿಕವೆನ್ನಬಹುದು. ಆದರೆ, ನನ್ನ ಬಲವಾದ ನಂಬಿಕೆಯೆಂದರೆ ನಮ್ಮ ಪ್ರಯತ್ನದಲ್ಲಿ ಅಸೀಮ ಪ್ರಾಮಾಣಿಕತೆ ಇದ್ದರೆ ಭಗವಂತ ನಮ್ಮ ಪಕ್ಕದಲ್ಲೇ ನಿಂತು ಕೆಲಸ ಮಾಡುತ್ತಾನೆ. ಅದನ್ನೇ ನಾವು ಪವಾಡವೆಂದು ಕರೆಯುತ್ತೇವೆ. ನಮ್ಮ ಕೆಲಸವಾಗದೇ ಹೋದರೆ ಭಗವಂತನಿರುವುದು ಸುಳ್ಳಲ್ಲ, ನಮ್ಮ ಪ್ರಾಮಾಣಿಕತೆ ಇನ್ನಷ್ಟು ಹೆಚ್ಚಾಗಬೇಕು ಎಂದರ್ಥ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-14

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri