ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮ್ಯಾನ್ಮಾರ್ ಹಂತಕರ ವಿರುದ್ಧ ಕ್ರಮ: ಮಕ್ಕಾ ಶೃಂಗಸಭೆಯಲ್ಲಿ ಆದ್ಯತೆ ಇಂದು ಮತ್ತು ನಾಳೆ ಮಕ್ಕಾದಲ್ಲಿ ಇಸ್ಲಾಮಿಕ್ ಏಕತಾ ಶೃಂಗಸಭೆ

ದಮ್ಮಾಮ್(ಸೌದಿ ಅರೇಬಿಯ), ಆ.13: ಮ್ಯಾನ್ಮಾರ್‌ನ ರೊಹಿಂಗ್ಯಾ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವು ಆಗಸ್ಟ್ 14 ಹಾಗೂ 15ರಂದು ಮಕ್ಕಾದಲ್ಲಿ ನಡೆಯುವ ಇಸ್ಲಾಮಿಕ್ ಏಕತಾ ಶೃಂಗಸಭೆಯಲ್ಲಿ ಚರ್ಚಿಸಲ್ಪಡುವ ಪ್ರಮುಖ ವಿಷಯವಾಗಲಿದೆ ಎಂದು ವರದಿಯೊಂದು ತಿಳಿಸಿದೆ.

ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ವಹಿಸಿರುವ ಸೌದಿಯ ದೊರೆ ಅಬ್ದುಲ್ಲಾ ಎರಡು ದಿನಗಳ ಕಾಲ ನಡೆಯಲಿರುವ ಇಸ್ಲಾಮಿಕ್ ಏಕತಾ ಶೃಂಗಸಭೆಯನ್ನು ಏರ್ಪಡಿಸಿದ್ದು, ಇದರಲ್ಲಿ ಜಗತ್ತಿನ ಪ್ರಖ್ಯಾತ ಮುಸ್ಲಿಂ ನಾಯಕರು ಪಾಲ್ಗೊಳ್ಳಲಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಅತಿಕ್ರಮಣಕ್ಕೆ ತುತ್ತಾಗಿರುವ ರೊಹಿಂಗ್ಯಾ ಮುಸ್ಲಿಮರನ್ನು ಒಳಗೊಂಡಿರುವ ಅರಕಾನ್ ಪ್ರಾಂತಕ್ಕೆ ಮಾನವೀಯ ನೆರವು ಒದಗಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಹಾಗೂ ಇಸ್ಲಾಮಿಕ್ ಪರಿಹಾರ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸಬೇಕೆಂದು ಮ್ಯಾನ್ಮಾರ್‌ನ ಜುಂಟಾ ಆಡಳಿತದ ಮೇಲೆ ಒತ್ತಡ ಹೆಚ್ಚುತ್ತಿರುವಂತೆಯೇ ಈ ಶೃಂಗಸಭೆ ನಡೆಯುತ್ತಿದೆ.

ಮ್ಯಾನ್ಮಾರ್‌ನ ಪರಿಸ್ಥಿತಿಯು ಜುಂಟಾ ನಾಯಕತ್ವದಲ್ಲಿ ಆತಂಕ ಹಾಗೂ ಹತಾಶೆ ಮೂಡಿರುವ ಬಗ್ಗೆ ಈಗಾಗಲೇ ಅಲ್ಲಿಗೆ ಭೇಟಿ ನೀಡಿರುವ ಟರ್ಕಿ ವಿದೇಶಾಂಗ ಸಚಿವರ ನೇತೃತ್ವದ ಹಾಗೂ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಶನ್(ಒಐಸಿ)ನ ನಿಯೋಗಗಳು ಸುಳಿವು ನೀಡಿವೆ. ‘‘ಅರಕಾನ್ ಮುಸ್ಲಿಮರ ಯೋಜಿತ ನರಮೇಧದಲ್ಲಿ ಮ್ಯಾನ್ಮಾರ್ ಆಡಳಿತ ಭಾಗಿಯಾಗಿರುವ ಸಂದೇಹ ಸ್ಪಷ್ಟವಾಗುತ್ತಿದೆ’’ ಎಂದು ಇದೇ ವೇಳೆ ಜಿದ್ದಾ ಮೂಲದ ಒಐಸಿಯ ಪ್ರತಿನಿಧಿಯೋರ್ವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟರ್ಕಿಯ ಪ್ರಧಾನಿ ರಸೆಪ್ ತಯ್ಯಿಬ್ ಉರ್ದುಗಾನ್‌ರ ಪತ್ನಿ ಎಮಿನ್ ಹಾಗೂ ಪುತ್ರಿ ಸುಮಯ್ಯ ನೇತೃತ್ವದ ನಿಯೋಗವೂ ಟರ್ಕಿಯ ವಿದೇಶಾಂಗ ಸಚಿವ ಅಹ್ಮದ್ ದಾವುತೊಗ್ಲುರೊಂದಿಗೆ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದು, ಮ್ಯಾನ್ಮಾರ್‌ನ ಅಧ್ಯಕ್ಷ ಥೀನ್ ಸೀನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ಕಳೆದ ಕೆಲವು ವಾರಗಳಲ್ಲಿ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಏನು ನಡೆದಿದೆಯೆಂಬುದರ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನಿಯೋಗದ ಸದಸ್ಯರು ಸಂಗ್ರಹಿಸಿದ್ದಾರೆ. ರೊಹಿಂಗ್ಯಾ ಮುಸ್ಲಿಮರ ಮೇಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮ್ಯಾನ್ಮಾರ್ ಆಡಳಿತದ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಸ್ಲಿಂ ಜಗತ್ತು ಚಿಂತನೆ ನಡೆಸಲಿದೆ ಎಂದೂ ನಿಯೋಗದ ಸದಸ್ಯರೋರ್ವರು ತಿಳಿಸಿದ್ದಾರೆ.

‘‘ಮ್ಯಾನ್ಮಾರ್‌ನ ಅಧ್ಯಕ್ಷ ಥೀನ್ ಸೀನ್ ಹಾಗೂ ಅರಕಾನ್ ಪ್ರಾಂತದ ಮುಖ್ಯಸ್ಥ ಒಳಗೊಂಡಂತೆ ಮ್ಯಾನ್ಮಾರ್‌ನ ಉನ್ನತ ಸೇನಾ ನಾಯಕತ್ವವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಗೆ ಎಳೆಯಲಿದ್ದೇವೆ ಮತ್ತು ಸೂಕ್ತ ವಿಚಾರಣೆಗೆ ಒಳಪಡಿಸಲಿದ್ದೇವೆ’’ ಎಂದವರು ವಿವರಿಸಿದ್ದಾರೆ.

ಮ್ಯಾನ್ಮಾರ್‌ಗೆ ಭೇಟಿ ನೀಡಿರುವ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಶನ್(ಒಐಸಿ)ನ ನೇತೃತ್ವವನ್ನು ಇಂಡೋನೇಶ್ಯದ ಉಪಾಧ್ಯಕ್ಷ ಯೂಸುಫ್ ಕಲ್ಲಾ ವಹಿಸಿದ್ದಾರೆ. ತಮ್ಮ ಸಂಘಟನೆಯು ಮ್ಯಾನ್ಮಾರ್‌ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವು ನೀಡುವ ನಿಟ್ಟಿನಲ್ಲಿ ಹಗಲುರಾತ್ರಿ ಶ್ರಮಿಸುತ್ತಿರುವುದಾಗಿ ಒಐಸಿಯ ಪ್ರಧಾನ ಕಾರ್ಯದರ್ಶಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರೊಹಿಂಗ್ಯಾ ಮುಸ್ಲಿಮರಿಗೆ ಮಾನವೀಯ ನೆರವು
ಕರೆಗೆ ಸ್ಪಂದಿಸಿದ ಯುಎಇ

ದುಬೈ, ಆ.13: ಮ್ಯಾನ್ಮಾರ್‌ನಲ್ಲಿ ತೀವ್ರ ಕಿರುಕುಳಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರಾದ ರೊಹಿಂಗ್ಯಾ ಮುಸ್ಲಿಮರ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಬಗ್ಗೆ ವರದಿಗಳು ಕೇಳಿ ಬರುತ್ತಿರುವಂತೆಯೇ, ಅವರಿಗೆ ಮಾನವೀಯ ನೆರವು ಒದಗಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಕರೆ ನೀಡಿದೆ. ಈ ನಿಟ್ಟಿನಲ್ಲಿ ಯುಎಇ ಸೂಕ್ತವಾಗಿ ಸ್ಪಂದಿಸಿದ್ದು, ತಕ್ಷಣವೇ ಅದು ಮ್ಯಾನ್ಮಾರ್‌ಗೆ ಮಾನವೀಯ ನೆರವು ಕಳುಹಿಸಲಿದೆ. ಯುಎಇಯ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ರವಿವಾರ ಈ ಸಂಬಂಧ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಹ್ಯುಮನಿಟೇರಿಯನ್ ಫೌಂಡೇಶನ್‌ಗೆ ಆದೇಶವೊಂದನ್ನು ಹೊರಡಿಸಿದ್ದು, ತಕ್ಷಣವೇ ಮ್ಯಾನ್ಮಾರ್‌ನಲ್ಲಿ ಸಂಕಷ್ಟಕ್ಕೊಳಗಾಗಿರುವ ರೊಹಿಂಗ್ಯಾ ಮುಸ್ಲಿಮರಿಗೆ ಮಾನವೀಯ ನೆರವು ರವಾನಿಸುವಂತೆ ತಿಳಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಕೋರಿ ಯುಎಇಯ ವಿದೇಶಾಂಗ ಸಚಿವ ಶೇಖ್‌ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪತ್ರವೊಂದನ್ನು ರವಾನಿಸಿದ ಬಳಿಕ ಈ ಆದೇಶ ಹೊರಬಿದ್ದಿದೆ.
 ಮ್ಯಾನ್ಮಾರ್‌ನ ಪಶ್ಚಿಮ ಭಾಗದಲ್ಲಿ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಮೂಲಕ ರೊಹಿಂಗ್ಯಾ ಮುಸ್ಲಿಮರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಮ್ಯಾನ್ಮಾರ್ ಸರಕಾರದ ಮೇಲೆ ಒತ್ತಡ ಹೇರುವಂತೆ ಶೇಖ್ ಅಬ್ದುಲ್ಲಾ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದರು.
ರಮಝಾನ್ ಮಾಸದಲ್ಲಿ ಮತ್ತೆ ಮ್ಯಾನ್ಮಾರ್‌ನಲ್ಲಿ ಹಿಂಸಾಚಾರ ಭುಗಿಲೇಳುತ್ತಿರುವ ಬಗ್ಗೆ ಯುಎಇಯಲ್ಲಿರುವ ಮ್ಯಾನ್ಮಾರ್‌ನ ಪ್ರಜೆಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ತನ್ನ ಮನೆಯನ್ನು ತೊರೆದು ಆಶ್ರಯಕ್ಕಾಗಿ ಪಟ್ಟಣಕ್ಕೆ ತೆರಳಬೇಕಾಗಿದೆ ಎಂದು ಇದೇ ವೇಳೆ ಮ್ಯಾನ್ಮಾರ್‌ನ ಮೊಂಗ್ದು ಜಿಲ್ಲೆಯ ನಿವಾಸಿ ನೂರ್ ಮುಹಮ್ಮದ್ ತಂದಾಮಿಯಾ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

‘‘ಬೌದ್ಧ ಧರ್ಮೀಯ ಉಗ್ರರು ನಮಗೆ ಕೆಲಸ ಅಥವಾ ಪ್ರಾರ್ಥನೆಗೆ ತೆರಳಲು ಬಿಡುತ್ತಿಲ್ಲ. ಸರಕಾರವೂ ಕೂಡಾ ಈ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲ’’ ಎಂದವರು ಹೇಳಿದ್ದಾರೆ. ‘‘ನಮಗೆ ಆಹಾರವಾಗಲಿ ನೀರಾಗಲಿ ದೊರೆಯುತ್ತಿಲ್ಲ. ಒಂದು ವೇಳೆ ನಮ್ಮಲ್ಲಿ ಹಣವಿದ್ದರೂ ಖರೀದಿ ಮಾಡಲೂ ನಮಗೆ ಸಾಧ್ಯವಾಗುತ್ತಿಲ್ಲ’’ ಎಂದವರು ವಿವರಿಸಿದ್ದಾರೆ.
ಸಂಘರ್ಷದಿಂದ ಸ್ಥಳಾಂತರಗೊಂಡಿರುವ ರೊಹಿಂಗ್ಯಾ ಅಲ್ಪಸಂಖ್ಯಾತರಿಗಾಗಿ 32.5 ದಶಲಕ್ಷ ಡಾಲರ್ ಮೊತ್ತದ ಮಾನವೀಯ ನೆರವು ಪೂರೈಸುವಂತೆ ಇತ್ತೀಚೆಗೆ ವಿಶ್ವಸಂಸ್ಥೆ ಕೂಡಾ ಮನವಿ ಮಾಡಿತ್ತು.
ಮ್ಯಾನ್ಮಾರ್‌ನಲ್ಲಿರುವ ಮುಸ್ಲಿಂ ಅಲ್ಪ ಸಂಖ್ಯಾತರಿಗೆ 50 ದಶಲಕ್ಷ ಡಾಲರ್ ಮೊತ್ತದ ನೆರವು ಪೂರೈಸಲಿರುವುದಾಗಿ ಸೌದಿ ಅರೇಬಿಯ ರವಿವಾರ ಘೋಷಿಸಿದೆ ಎಂದು ಅಲ್ಲಿನ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ ಗಲಭೆ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಮಾನವೀಯ ನೆರವು ಸಂಘಟನೆಗಳಿಗೆ ಅವಕಾಶ ಕಲ್ಪಿಸುವಂತೆ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳಿಗೆ ಸಂಬಂಧಿಸಿದ ವಿಶೇಷ ಕಚೇರಿ ಮ್ಯಾನ್ಮಾರ್ ಸರಕಾರವನ್ನು ಒತ್ತಾಯಿಸಿದೆ.

ಅರಕಾನ್ ತಲುಪಿದ ಟರ್ಕಿಯ ನೆರವು
ಅಂಕಾರ, ಆ.13: ಟರ್ಕಿಯ ನೆರವು ಸಂಘಟನೆ ‘ಟರ್ಕ್ ಕಿಝಿಲಾಯಿ’(ರೆಡ್ ಕ್ರೆಸೆಂಟ್) ರೊಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿರುವ ಶಿಬಿರಗಳಿಗೆ ಆಹಾರ ಪೊಟ್ಟಣಗಳು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದೆ. ಟರ್ಕಿಯ ವಿದೇಶಾಂಗ ಸಚಿವ ಅಹ್ಮದ್ ದಾವುತೊಗ್ಲು ಹಾಗೂ ಟರ್ಕಿಯ ಪ್ರಧಾನಿ ರಸೆಪ್ ತಯ್ಯಿಬ್ ಉರ್ದುಗಾನ್‌ರ ಪತ್ನಿ ಎಮಿನ್ ಉರ್ದುಗಾನ್ ರೊಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿರುವ ಬಂಡುಬಾ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ವಿಶ್ವಸಂಸ್ಥೆಯನ್ನು ಹೊರತುಪಡಿಸಿ ಸಂಕಷ್ಟದಲ್ಲಿರುವ ರೊಹಿಂಗ್ಯಾ ಅಲ್ಪಸಂಖ್ಯಾತರಿಗೆ ಮೊದಲ ಬಾರಿಗೆ ವಿದೇಶಿ ನೆರವು ಒದಗಿಸಿರುವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಟರ್ಕಿ ಪಾತ್ರವಾಗಿದೆ.

ಬಂಡುಬಾ ಶಿಬಿರದಲ್ಲಿ 8,532 ಮಂದಿ ಆಶ್ರಯ ಪಡೆದಿದ್ದು, ಶಿಬಿರದಲ್ಲಿ ಒಟ್ಟು 801 ಡೇರೆಗಳಿವೆ ಎಂದು ರೆಡ್ ಕ್ರೆಸೆಂಟ್ ಹೇಳಿದೆ. ಶಿಬಿರಗಳಲ್ಲಿರುವ ನಿರಾಶ್ರಿತರು ಸೂಕ್ತ ಆಹಾರ ಹಾಗೂ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವುದಾಗಿ ಅವರ ಬಗ್ಗೆ ವಿಚಾರಿಸಿದ ಎಮಿನ್ ಉರ್ದುಗಾನ್‌ರಿಗೆ ರೆಡ್ ಕ್ರೆಸೆಂಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಕಿಯ ನಾಯಕರು ಬಳಿಕ ಬೌದ್ಧರ ಶಿಬಿರಗಳಿಗೂ ಭೇಟಿ ನೀಡಿದ್ದು, ಅಲ್ಲಿಯೂ ಮಾನವೀಯ ನೆರವನ್ನು ವಿತರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬೌದ್ಧರು ಹಾಗೂ ಮುಸ್ಲಿಮರು ಸಮಾನ ಹಕ್ಕುಗಳನ್ನು ಹೊಂದಿದ್ದು, ಅವೆರಡೂ ಸಮುದಾಯಗಳು ಶಾಂತಿ ಸೌಹಾರ್ದದಿಂದ ಬಾಳಬೇಕೆಂಬುದು ತಮ್ಮ ನಿರೀಕ್ಷೆಯಾಗಿದೆ ಎಂದು ಇದೇ ವೇಳೆ ಟರ್ಕಿಯ ಪ್ರಧಾನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಂಕಿಅಂಶವೊಂದರ ಪ್ರಕಾರ, ಮ್ಯಾನ್ಮಾರ್‌ನ ಜನಸಂಖ್ಯೆ 55 ದಶಲಕ್ಷವಾಗಿದ್ದು, ಅದು ಶೇಕಡ 90ರಷ್ಟು ಬೌದ್ಧರನ್ನು ಹಾಗೂ ಶೇಕಡ 10ರಷ್ಟು ಮುಸ್ಲಿಮರನ್ನು ಒಳಗೊಂಡಿದೆ.

ಫತೇವುಲ್ಲಾ ಗುಲೇನ್‌ರಿಂದ 10ಸಾವಿರ ಡಾಲರ್ ದೇಣಿಗೆ

ಟರ್ಕಿಯ ಇಸ್ಲಾಮಿಕ್ ವಿದ್ವಾಂಸ ಹಾಗೂ ಪ್ರಾಜ್ಞರಾದ ಫತೇವುಲ್ಲಾ ಗುಲೇನ್ ಮ್ಯಾನ್ಮಾರ್‌ನಲ್ಲಿ ಸಂಕಷ್ಟದಲ್ಲಿರುವ ರೊಹಿಂಗ್ಯಾ ಮುಸ್ಲಿಮರಿಗೆ 10 ಸಾವಿರ ಡಾಲರ್ ದೇಣಿಗೆ ನೀಡಿದ್ದಾರೆ.
ತಮ್ಮ ಗ್ರಂಥಗಳು ಹಾಗೂ ಧ್ವನಿಮುದ್ರಿಕೆಗಳ ಮಾರಾಟದಿಂದ ಗಳಿಸಿರುವ 10 ಸಾವಿರ ಡಾಲರ್ ಮೊತ್ತವನ್ನು ಗುಲೇನ್ ಟರ್ಕಿಯ ಪ್ರಸಿದ್ಧ ನೆರವು ಸಂಸ್ಥೆ ‘ಕಿಮ್ಸೆ ಯೊಕ್ ಮೂ’ಗೆ ದೇಣಿಗೆ ನೀಡಿದ್ದಾರೆ. ಮ್ಯಾನ್ಮಾರ್‌ನಿಂದ ಹಿಂಸಾಚಾರದ ವೇಳೆ ಬಾಂಗ್ಲಾದೇಶಕ್ಕೆ ಪಲಾಯನಗೈದು ಕಾಕ್ಸ್‌ಬಝಾರ್‌ನಲ್ಲಿ ಆಶ್ರಯಪಡೆದಿರುವ ರೊಹಿಂಗ್ಯಾ ಮುಸ್ಲಿಮರಿಗೆ ಸಂಸ್ಥೆಯು ಮಾನವೀಯ ನೆರವನ್ನು ವಿತರಿಸಲಿದೆ. ರಾಖೈನ್ ಪ್ರಾಂತದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಬೌದ್ಧರು ನಡೆಸುತ್ತಿರುವ ಜನಾಂಗೀಯ ದಾಳಿಗೆ ಸಂಬಂಧಿಸಿಮ್ಯಾನ್ಮಾರ್‌ನ ಭದ್ರತಾ ಪಡೆಗಳನ್ನು ‘ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್’ ದೂಷಿಸಿದೆ.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-14

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

» ತಮಿಳುನಾಡು ಭೇಟಿ: ಪ್ರವಾಸಿಗರಿಗೆ ಶ್ರೀಲಂಕಾ ಎಚ್ಚರಿಕೆ
»ದಕ್ಷಿಣ ಕೊರಿಯ ‘ಯೂನಿಫಿಕೇಶನ್’ ಚರ್ಚ್‌ನ ಸ್ಥಾಪಕ ನಿಧನ
»ಪಾಕ್‌ನಲ್ಲಿ ಬಾಂಬ್ ಸ್ಫೋಟ: 2 ಸಾವು, 19 ಜನರಿಗೆ ಗಾಯ
»ಅಮೆರಿಕ: ಭಾರತೀಯ ಸಂಜಾತನಿಗೆ ಪ್ರಮುಖ ಹುದ್ದೆ
»ಸಿರಿಯದಲ್ಲಿ ಬಾಹ್ಯ ಹಸ್ತಕ್ಷೇಪ ಬೇಡ: ಮನಮೋಹನ್ ಸಿಂಗ್
»ಅಣ್ವಸ್ತ್ರಗಳ ಬಳಕೆ ಅಕ್ಷಮ್ಯ ಅಪರಾಧ: ಖಾಮಿನೈ; ನ್ಯಾಮ್ ಶೃಂಗದಲ್ಲಿ ಇರಾನ್ ಮುಖಂಡನ ಹೇಳಿಕೆ
»ಶುಕ್ರವಾರ ಆಗಸದಲ್ಲಿ ಬ್ಲೂ ಮೂನ್‌ ಕೌತುಕ
»ಮಗುವನ್ನು ಮಹಡಿಯಿಂದ ಕೆಳಗೆಸೆದ ತಾಯಿ!
»ನಿಮಗಾದ ತೊಂದರೆಗಾಗಿ ನಾನು ಕ್ಷಮೆ ಕೋರುತ್ತೇನೆ ಇಂದಿರಾ ಗಾಂಧಿ ಬಳಿ ಹೇಳಿದ್ದ ಆರ್ಮ್‌ಸ್ಟ್ರಾಂಗ್
»7.4 quake off El Salvador triggers tsunami alert
»ವೆನೆಝುವೆಲ ತೈಲಾಗಾರ ಸ್ಫೋಟ: ಸಾವಿನ ಸಂಖ್ಯೆ ಕನಿಷ್ಠ 39ಕ್ಕೆ ಏರಿಕೆ
»`ಚಂದ್ರ' ಮಾನವ ಇನ್ನಿಲ್ಲ...
»ವೆನೆಜುವೆಲ: ತೈಲ ಸ್ಥಾವರದಲ್ಲಿ ಸ್ಫೋಟ, ಕನಿಷ್ಠ 19 ಬಲಿ
»ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರಬ್ ಮಹಿಳೆಯರು
»ಕ್ಯುರಿಯಾಸಿಟಿಯ ಸುತ್ತಾಟ ಆರಂಭ
»ಬಿಕಿನಿ ನೀರೆಯರೊಂದಿಗೆ ಬ್ರಿಟಿಷ್ ರಾಜಕುಮಾರ ಹ್ಯಾರಿ!
»ಜೈಪುರ್: ಭಾರೀ ಮಳೆಗೆ 6 ಜನ ಬಲಿ
»ಅನಾರೋಗ್ಯ:ಇಥಿಯೋಪಿಯಾ ಪ್ರಧಾನಿ ಮೆಲೆಸ್ ಜೆನಾವಿ ವಿಧಿವಶ?
»ಜಪಾನಿನ ಯುದ್ಧ ಪತ್ರಕರ್ತೆ ದುರಂತ ಸಾವು
»ರೈಲಿನಿಂದ ಹೊರಗೆಸೆದು ಅಸ್ಸಾಮಿಗರಿಬ್ಬರ ಹತ್ಯೆ(Updated)
»ಅಮೆರಿಕ: ಭಾರತೀಯ ಮುಸ್ಲಿಮರಿಂದ ಸ್ವಾತಂತ್ರ ದಿನಾಚರಣೆ; ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
»ಫೇಸ್ ಬುಕ್ ಕಾಮೆಂಟ್ ಗೆ ನೊಂದು ಸೂಸೈಡ್...
»ಅಂತರಿಕ್ಷದಲ್ಲಿಯೂ ರಾಷ್ಟ್ರಧ್ವಜಾರೋಹಣ...
»ರಿಯೋಗೆ ಬಂದ ಒಲಿಂಪಿಕ್ಸ್ ಬಾವುಟ...
»ಗಿರ್-ಸೋಮ್‌ನಥ್ ನೂತನ ಜಿಲ್ಲೆಯಾಗಿ ಘೋಷಿಸಿದ ಮೋದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri