ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ

ಯು.ಎ.ಇ.ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನದಲ್ಲಿ ಮುಖ್ಯವಾಗಿ ಪವಿತ್ರ ರಂಜಾನ್ ಮಾಸದಲ್ಲಿ ವಿಶೇಷ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸಾವಿರಾರು ರಕ್ತದಾನಿಗಳು ರಕ್ತದಾನ ನೀಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ್ದಿದ್ದಾರೆ.

ಯು.ಎ.ಇ. ಯಲ್ಲಿ ರಂಜಾನ್ ಮಾಸದಲ್ಲಿ ರಕ್ತದ ಬೇಡಿಕೆ ಹೆಚ್ಚು


ಯು.ಎ.ಇ.ಯಲ್ಲಿ ರಂಜಾನ್ ಮಾಸದಲ್ಲಿ ಇನ್ನಿತರ ಮಾಸದಲ್ಲಿ ರಕ್ತ ಕೇಂದ್ರಗಳಲ್ಲಿ ಸಂಗ್ರಹವಾಗುವಷ್ಟು ರಕ್ತ ಶೇಖರಣೆಯಾಗುವುದಿಲ್ಲ.ರಾತ್ರಿಯ ವೇಳೆ ಮಾತ್ರ ದಾನಿಗಳು ಆಗಮಿಸಿ ರಕ್ತದಾನ ನೀಡುತ್ತಾರೆ.ಇನ್ನಿತರ ಮಾಸಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಅಪಘಾತಗಳು ಸಂಭವಿಸುವುದರಿಂದ ಹೆಚ್ಚಿನ ರಕ್ತದ ಬೇಡಿಕೆ ಇದೆ."ತಲೆಸ್ಮಿಯಾ"ರಕ್ತ ಹಿನತೆಯಿಂದ ಬಳಲುತಿರುವ ಸುಮಾರು ಅರುನೂರರಿಂದ ಏಳುನೂರರವರೆಗೆ ಪುಟ್ಟ ಮಕ್ಕಳಿಂದ ವಯೋವೃದ್ದರವರೆಗೆ ದುಬಾಯಿ ಆರೋಗ್ಯ ಕೇಂದ್ರದಲ್ಲಿಯೆ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರತಿನಿತ್ಯ ಎಪ್ಪತೈದು ಮಂದಿ ದಾನಿಗಳು ನೀಡುವ ರಕ್ತ ಇವರಿಗೆ ನೀಡ ಬೇಕಾಗಿದೆ.ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್,ಲ್ಯುಕೆಮಿಯಾ,ಗರ್ಭಿಣಿಯರ ಪ್ರಸವ ಸಮಯದಲ್ಲಿ ರಕ್ತದ ಅವಶ್ಯಕತೆ,ಶಸ್ತ್ರಕ್ರಿಯೇ ಸಂದರ್ಭ ಇತ್ಯಾದಿ ಸಂದರ್ಭಗಳಿಗೆ ಅನುಸಾರವಾಗಿ ರಕ್ತದ ಬೇಡಿಕೆ ಹೆಚ್ಚು ಇದ್ದು ಶಾರ್ಜಾ,ಅಜ್ಮಾನ್ ಹಾಗೂ ಇನ್ನಿತರ ಎಮೀರೆಟ್ಸ್ ಗಳಿಂದ ಬೇಡಿಕೆ ಹೆಚ್ಚು ಇರುತ್ತದೆ.


ಕರ್ನಾಟಕದಿಂದ ಯು.ಎ.ಇ.ಗೆ ಬಂದು ಉಧ್ಯಮಗಳನ್ನು ಸ್ಥಾಪಿಸಿರುವ ಸಂಸ್ಥೆಗಳು ನಿರಂತರವಾಗಿ ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ.ಎನ್.ಎಂ.ಸಿ.ಹೆಲ್ತ್ ಕೇರ್, ಗಲ್ಫ್ ಮೆಡಿಕಲ್ ಕಾಲೇಜ್ ಆಸ್ಪತ್ರೆ,ಯು.ಎ.ಇ.ಎಕ್ಸ್ ಚೇಂಜ್ ಮತ್ತು ಇನ್ನಿತರ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದವರು ಪ್ರತಿವರ್ಷ ಆಯೋಜಿಸುತ್ತಿರುವ  ರಕ್ತದಾನ ಶಿಬಿರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರಕ್ತದಾನ ಮಾಡಿಕೊಂಡು ಬರುತಿದ್ದಾರೆ.ಅದೇ ರೀತಿ ಇನ್ನಿತರ ರಾಜ್ಯದವರು ಅವರ ಸಂಘಟನೆಗಳ ಮೂಲಕ ರಕ್ತದಾನ ಅಭಿಯಾನ ನಡೆಸಿಕೊಂಡು ಬರುತ್ತಿದ್ದಾರೆ.


ಭಾರತೀಯರಾಗಿ ಕೊಲ್ಲಿನಾಡಿನಲ್ಲಿ ರಕ್ತದಾನದ ಮೂಲಕ ಮಾನವೀಯತೆ ಮೆರೆದ ಕರ್ನಾಟಕ ಪರ ಸಂಘಟನೆಗಳು

ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘ ಸಂಸ್ಥೆಗಳು ತಮ್ಮ ವಾರ್ಷಿಕ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಕಡ್ಡಾಯವಾಗಿ ನಡೆಸಿಕೊಂಡು ಬರುತ್ತಿದೆ.ಕರ್ನಾಟಕದ ಭಾಷೆ ಮತ್ತು ಸಮುದಾಯ ಸಂಘ ಸಂಸ್ಥೆಗಳ ಸದಸ್ಯರು ನಿರಂತರವಾಗಿ ಸಾವಿರಾರು ಸಂಖ್ಯೆಯಲ್ಲಿ ಪವಿತ್ರ ರಕ್ತದಾನ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ರಕ್ತದಾನಿ ಗಳಾಗಿದ್ದಾರೆ


ಮಂಗ್ಲೂರ್ ಕೊಂಕಣ್ಸ್ ದುಬಾಯಿ 1980ರಲ್ಲಿ ರಕ್ತದಾನ ಶಿಬಿರವನ್ನು ನಡೆಸಿ ಸರ್ಕಾರದ ದಾಖಲೆಯ ಪುಟದಲ್ಲಿ 1980ರ ದಶಕದಲ್ಲೇ ದಾಖಲಾಗಿದ್ದಾರೆ.ಜೆಬೆಲ್ ಆಲಿ ಕರ್ನಾಟಕ ಮಿತ್ರರು ಜೆಬೆಲ್ ಆಲಿಯಲ್ಲಿ ರಕ್ತದಾನ ಮಾಡಿ ರಕ್ತದಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಶಾರ್ಜಾ ಕರ್ನಾಟಕ ಸಂಘ ಗಲ್ಫ್ ಮೆಡಿಕಲ್ ಆಸ್ಪತ್ರೆ ಸಹಯೋಗದೊಂದಿಗೆ ಶಾರ್ಜಾ ಮಿನಿಸ್ಟ್ರಿ ಆಪ್ ಹೆಲ್ತ್ ಆಶ್ರಯದಲ್ಲಿ 2006 ರಲ್ಲಿ ಅಜ್ಮಾನ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.ಅಂದಿನ ದಿನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾರತೀಯರೊಂದಿಗೆ,ಅರಬ್ ಪ್ರಜೆಗಳು,ಪಾಕಿಸ್ಥಾನಿಯರು,ಶ್ರೀಲಂಕಾ,ಬಾಂಗ್ಲಾ,ಫಿಲಿಪೈನ್ಸ್, ಈಜಿಪ್ತ್ ದೇಶಿಯರು ರಕ್ತದಾನ ಮಾಡಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ.

ಡಿಸೆಂಬರ್ 2ನೇ ತಾರೀಕು ನಡೆಯುವ ಯು.ಎ.ಇ. ನ್ಯಾಶನಲ್ ಡೇ ಪ್ರಯುಕ್ತ ಮೊಗವೀರ್ಸ್ ಯು.ಎ‌ಇ. ಸಂಘಟನೆ ರಕ್ತದಾನ ಶಿಭಿರವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದ್ದು ರಾಷ್ಟ್ರೀಯ ಹಬ್ಬಕ್ಕೆ ತನ್ನ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ.ಮೋಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಸಾಲಿಯಾನ್ ರವರು ಹಲವಾರು ಬಾರಿ ರಕ್ತದಾನ ಮಾಡಿರುವುದರ ಜೊತೆಗೆ ದುಬಾಯಿಯಲ್ಲಿ ಸಂಘ ಸಂಸ್ಥೆಗಳ ರಕ್ತದಾನ ಶಿಬಿರಕ್ಕೆ ವ್ಯವಸ್ಥೆ ಮಾಡಿಕೊಡುವ ಜವಬ್ಧಾರಿ ವಹಿಸಿಕೊಂಡು ರಕ್ತದಾನಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಯು.ಎ.ಇ.ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡಿರುವ ಕರ್ನಾಟಕ ಪರ ಸಂಘ ಸಂಸ್ಥೆಗಳು:

 ಅಬುಧಾಬಿ ಕರ್ನಾಟಕ ಸಂಘ,ದುಬಾಯಿ ಕರ್ನಾಟಕ ಸಂಘ,ಶಾರ್ಜಾ ಕರ್ನಾಟಕ ಸಂಘ,ಅಲ್ ಐನ್ ಅಲ್ ಬುರೆಮಿ ಕನ್ನಡ ಸಂಘ, ಯು.ಎ.ಇ.ಬಂಟ್ಸ್, ಮೊಗವೀರ್ಸ್ ಯು.ಎ.ಇ.,ಅಮ್ಚಿಗೆಲೆ ಸಮಾಜ,ವಿಶ್ವಕರ್ಮ ಸೇವಾ ಸಮಿತಿ ಯು.ಎ.ಇ., ರಾಮಕ್ಷತ್ರೀಯ ಸಂಘ ಯು.ಎ.ಇ., ಬಿಲ್ಲವಾಸ್ ದುಬಾಯಿ ಅಂಡ್ ನಾರ್ಥ್ರನ್ ಎಮಿರೇಟ್ಸ್, ಬಿಲ್ಲವ ಬಳಗ ದುಬಾಯಿ,ಬಿಲ್ಲವರ ಬಳಗ ಅಬುಧಾಬಿ,ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ,ಪದ್ಮಶಾಲಿ ಸಮುದಾಯ ಯು.ಎ.ಇ.,ಮಿತ್ರಕೂಟ ಯು.ಎ.ಇ.,ಬ್ರಾಹ್ಮಣ ಸಮಾಜ,ಗಾಣಿಗ ಸಮಾಜ ದುಬಾಯಿ ಯು.ಎ.ಇ.,ದೇವಾಡಿಗ ಸಂಘ ದುಬಾಯಿ, ಯು.ಎ.ಇ. ಬಸವ ಸಮಿತಿ, ಧ್ವನಿ ಪ್ರತಿಷ್ಠಾನ ಯು.ಎ.ಇ.,ಕುಂದಾಪುರ ದೇವಾಡಿಗ ಮಿತ್ರ(ಕದಮ್),ವಕ್ಕಲಿಗ ಸಂಘ ಯು.ಎ.ಇ.,ಯಕ್ಷ ಮಿತ್ರರು ದುಬಾಯಿ,ತೀಯಾ ಸಮಾಜ ಯು.ಎ.ಇ., ಕನ್ನಡ ಕೂಟ ಯು.ಎ.ಇ., ನಮ ತುಳುವೆರ್ ಯು.ಎ.ಇ., ತುಳು ಪಾತೆರ್ಕಾ ತುಳು ಒರಿಪಕಾ.,ಮಂಗ್ಲೂರ್ ಕೊಂಕಣ್ಸ್,ಕೊಂಕಣ್ಸ್ ಬೆಲ್ಸ್ ದುಬಾಯಿ, ಪಾಂಗಳಿಯೇಟ್ಸ್ ದುಬಾಯಿ,ದಾಯಿಜಿ ರಂಗ್ ಮಂದಿರ್,ಕರಾವಲ್ ಮಿಲನ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಯು.ಎ.ಇ.ರಕ್ತದಾನ ಅಭಿಯನದಲ್ಲಿ ಭಾಗವಹಿಸುತ್ತಾ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ರಕ್ತದಾನ ಮಾಡುತ್ತಿರುವುದು ರಕ್ತದಾನ ಅಭಿಯಾನಕ್ಕೆ ಇನ್ನಷ್ಟು ಯಶಸ್ಸು ದೊರಕಿದೆ.ಯು.ಎ.ಇಯಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಲ್ಲಿ ರಕ್ತದಾನದಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಆರೋಗ್ಯವಂತಾರಾಗಿ,ತಮ್ಮ ರಕ್ತವನ್ನು ದಾನ ಮಾಡಿ ರಕ್ತದ ಅವಶ್ಯಕತೆ ಇರುವವರ ಜೀವವನ್ನು ಉಳಿಸುವುದರೊಂದಿಗೆ,ತಾವು ಸಹ ಆರೋಗ್ಯವಂತರೆಂದು ದೃಡಿಕರಿಸಿ ಕೊಳ್ಳುವಂತಾಗಬೇಕು.

ವೆಬ್ ಮಾಧ್ಯಮದ ಮೂಲಕ ದಾಯಿಜಿವರ್ಲ್ಡ್,ಗಲ್ಫ್ ಕನ್ನಡಿಗ,ಮ್ಯಾಂಗ್ಳೂರಿಯನ್, ಕರಾವಳಿ ಮಿಲನ್,ವಿಶ್ವಕನ್ನಡಿಗ ನ್ಯೂಸ್,ಸಾಹಿಲ್ ಆನ್ ಲೈನ್,ರೇಡಿಯೋ ಸ್ಪೈಸ್, ನಮ್ಮ ಟಿ.ವಿ. ಊರಿನ ಉದಯವಾಣಿ ಹೆಚ್ಚು ಪ್ರಚಾರ ನೀಡುತ್ತಾ ಜಾಗೃತಿ ಮೂಡಿಸಿದೆ.

ರಕ್ತದಾನಿಗಳು ಎಂದಿಗೂ ಆರೋಗ್ಯವಂತರು, ಜೀವ ಉಳಿಸುವವರು...

ಪ್ರತಿ ಕ್ಷಣ,ಪ್ರತಿದಿನ ತುರ್ತಾಗಿ ಜೀವವನ್ನು ಉಳಿಸಲು ರಕ್ತದ ಅಗತ್ಯವಿದೆ.ಜಗತಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಪಡೆದು ರಕ್ತಬ್ಯಾಂಕಿಗೆ ನೀಡಿ ಕೋಟ್ಯಾಂತರ ಜೀವ ರಕ್ಷಕರಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.ಪ್ರತಿ ಬಾರಿಯೂ ರಕ್ತದಾನ ಮಾಡುವವರು ಆರೋಗ್ಯವಂತರಾಗಿದ್ದು ತಮ್ಮ ತಮ್ಮ ಅರೋಗ್ಯವನ್ನು ಕಾಪಾಡಿಕೊಂಡಿರುವುದು ರಕ್ತದಾನಿಗಳ ಆರೊಗ್ಯದ ಗುಟ್ಟು.ರಕ್ತದಾನಿಗಳು ರಕ್ತದ‌ಒತ್ತಡ,ಹೈ ಕೊಲಸ್ಟ್ರಾಲ್,ಕ್ಯಾನ್ಸರ್,ಸ್ಟ್ರೆಸ್ಸ್,ಹೆಚ್ಚು ತೂಕದ ಮತ್ತು ಇನ್ನಿತರ ಹಲವಾರು ಸಮಸ್ಯೆಗಳಿಗೆ ತುತ್ತಗಾದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಬಂದಿರುವ ರಕ್ತದಾನಿಗಳು ನಿರಂತರವಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.  ವಿಶೇಷವಾಗಿ ವಿದ್ಯಾವಂತರಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಅರಿವು ಮೂಡ ಬೇಕಿದೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ದಾನಿಗಳು ಪಾಲ್ಗೊಂಡು ರಕ್ತದಾನದ ಬಗ್ಗೆ  ಜಾಗೃತಿ ಮೂಡಿಸಬೇಕಾಗಿದೆ.

* ರಕ್ತ ದಾನಿಗಳು ಜೀವ ರಕ್ಷಕರು.
* ರಕ್ತ ದಾನ ಸಾಮಾಜಿಕ ಜವಬ್ಧಾರಿ.
* ನಿಮ್ಮ ರಕ್ತ ಒಂದು ಜೀವ ಉಳಿಸಬಹುದು.
* ನಿಮ್ಮ 5 ನಿಮಿಷದ ಸಮಯ ಇನ್ನೊಬ್ಬರ ಜೀವಿತಾ ಅವಧಿಯಾಗಿರುತ್ತದೆ. ರಕ್ತ ದಾನ ಮಾಡಿ ಜೀವ ಉಳಿಸಿ.
* ಬನ್ನಿ ಸ್ನೇಹಿತರೆ ರಕ್ತದಾನ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೊಣ

ರಕ್ತ ದಾನ ಶಿಬಿರದ ಸುದ್ದಿ ಸಿಕ್ಕಿದಾಗ ತಾವು ಬನ್ನಿ ತಮ್ಮ ಸ್ನೇಹಿತರನ್ನು ಕರೆತನ್ನಿ.ರಕ್ತದಾನಿಗಳ ಮುಖದಲ್ಲಿ ಸಂತೃಪ್ತಿಯ ನಗುವನ್ನು ಕಾಣಬಹುದಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಗಣೇಶ್ ರೈ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-13

Tell a Friend

ಪ್ರತಿಸ್ಪಂದನ
Manoj Menezes, Shirva
2012-08-21
ಬಹಳ ಉತ್ತಮವಾದ ಲೇಖನ. ಓದಿ ಹ್ರದಯಕ್ಕೆ ತಟ್ಟಿತು. ಗಣೇಶ್ ರೈ ವರೆ ತಮ್ಮ ಈ ಲೇಖನ ಓದುಗರಿಗೆ ರಕ್ತದಾನ ಮಾಡಲು ಸ್ಪೂರ್ತಿ. ರಕ್ತದಾನ ಮಾಡುವುದರಿಂದ ನಮಗೆ ಗೊತ್ತಿಲ್ಲದವರ ವ್ಯಕ್ತಿಯ ಜೀವನ ಉಳಿಯಬಹುದು. ದಾನಗಳಲ್ಲಿ ಮಹದಾನವೆ ರಕ್ತದಾನ. ನಿಮಗೆ ತುಂಬಾ ದನ್ಯವಾದಗಳು .

ನಾವು (ಉಸ್ವಾಸ್ ಶಿರ್ವ ಸಂಘ) ಬರುವ ಶುಕ್ರವಾರ ಆಗಸ್ಟ್ ೨೪ ದಿನಾಂಕದಂದು ರಕ್ತದಾನ ಶಿಬಿರವನ್ನು ಲತಿಫಾ ಆಸ್ಪತ್ರೆ ದುಬೈ ಇಲ್ಲಿ ಆಯೋಜಿಸಿದ್ದೇವೆ. ಸಮಯ ಬೆಳಿಗ್ಗೆ ೯ ಗಂಟೆ ಯಿಂದ ೧೨ ಗಂಟೆಯವರೆಗೆ. ತಮಗೆಲ್ಲರಿಗೂ ಸ್ವಾಗತ.

premjeeth, Dubai
2012-08-21
Thank u for all www.facebook.com/groups/tulupatherga group members .....
premjeeth, Dubai
2012-08-21
ತುಳು ಪಾತೆರೆಗಾ ತುಳು ಒರಿಪಗ ಇದು facebook ನಲ್ಲಿ ಸಕ್ರಿಯ ಇರುವ ತುಳು ಲಿಪಿ , ತುಳು ಭಾಷೆ ಗಾಗಿ ಕೆಲಸ ಮಾಡುತ್ತ ಇತರ ಜನ ಪರ ಕೆಲಸ ಮಾಡುವ ಗ್ರೂಪ್ ..... ಇ ಗ್ರೂಪ್ ಪರವಾಗಿ ಎಲ್ಲರಿಗೂ ವಂದನೆಗಳು ... ನಿಮ್ಮ ಎಲ್ಲೆರ ಸಹಕಾರ ನಮಗೆ ಶ್ರೀ ರಕ್ಷೆ ....

ಎಲ್ಲ ಅಡ್ಮಿನ್ ಪರವಾಗಿ.. ಪ್ರೇಮ್ ಜೀತ್

ತುಳು ಪಾಥೆರ್ಗ ತುಳು ಒರಿಪಗ

Abdul Sathar Uchil, Mangalore
2012-08-16
A very good initiative, saving life is equal to saving mankind.
Vasanth, Dubai
2012-08-16
Great Indians, Highly appreciable for your social work Congratulations dear Blood Donors.
Pradeep, Sharjah
2012-08-16
Excellent article about Blood Donation. Motive and Informative. Thanks Gulfkannadiga Team.
Suresh Kumar, Dubai
2012-08-16
ಕರ್ನಾಟಕದ ಸಂಘ ಸಂಸ್ಥೆಗಳು ಯು.ಎ.ಇ. ಯಲ್ಲಿ ರಕ್ತದಾನ ಶಿಬಿರವನ್ನು ನಡೆಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ತಮಗೆ ಅಭಿನಂದನೆಗಳು. ಗಲ್ಫ್ ಕನ್ನಡಿಗದ ಬೆಂಬಲವನ್ನು ಪ್ರತಿಬಾರಿ ರಕ್ತದಾನ ಶಿಬಿರ ನಡೆಯುವಾಗ ನೋಡುತ್ತೇವೆ. ಹೇಗೇ ನಿಮ್ಮ ಬೆಂಬಲ ಮುಂದುವರಿಯಿಲಿ...
ಸತೀಶ್ ಪೂಜಾರಿ, ಶಾರ್ಜಾ
2012-08-14
ಯು.ಎ.ಇ.ಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ಪರ ವಿವಿಧ ಸಂಘ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ತೃಪಿಯನ್ನು ಕಂಡಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಸ್ವ ಇಚ್ಚೆಯಿಂದ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸಂಘ ಸಂಸ್ಥೆಗಳಿಗೆ ಬೆಂಬಲ ನೀಡಿ ಯಶಸ್ವಿಗೊಳಿಸಿ ಭಾರತೀಯತೆಯನ್ನು ಎತ್ತಿ ಹಿಡಿಯೊಣ.

ರಕ್ತ ದಾನಿಗಳನ್ನು ಜಾಗೃತಿಗೊಳಿಸುವ ಅತ್ಯುತ್ತಮ ಲೇಖನ ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿರುವ ಗಲ್ಫ್ ಕನ್ನಡಿಗ ಬಳಗಕ್ಕೆ ಧನ್ಯವಾದಗಳು.

ಸತೀಶ್ ಪೂಜಾರಿ, ಅಧ್ಯಕ್ಷರು, ಕರ್ನಾಟಕ ಸಂಘ ಶಾರ್ಜಾ

ರಫೀಕ್ ದಲ್ಕಾಜೆ, ಕೋಲ್ಪೆ
2012-08-14
ಮನುಷ್ಯನ ಶರೀರದ ನಾಡಿಯಲ್ಲಿ ಬೇರೆ ದೇಹದ ರಕ್ತ ಹರಿಯುದರಿಂದ ಮನುಷ್ಯತ್ವದ ಮೌಲ್ಯಗಳಿಗೆ ಪುಷ್ಠಿ ನೀಡುವುದರಲ್ಲಿ ಸಂದೇಹವಿಲ್ಲ, ಅದರಲ್ಲೂ ಈಗ ಕೊಲ್ಲಿ ರಾಷ್ಟ್ರದಲ್ಲಿ ಮನುಷ್ಯನ ದೇಹಕ್ಕೆ ಸಹಿಸಲಾಸಾದ್ಯವಾದ ಉಷ್ಣಾಂಶ ಮದ್ಯೆ ಕರ್ನಾಟಕದ ವಿವಿಧ ಸಂಘಟನೆಗಳ ಸಮ್ಮಿಲನದಿಂದ ನಡೆದ ಈ ರಕ್ತದಾನ ಅಭಿಯಾನ ಯುಎಇ ಯಲ್ಲಿರುವ ಕನ್ನಡಿಗರ ಒಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ.

ಕನ್ನಡ ಸಂಘಟನೆಗಳು ನಡೆಸುತ್ತಿರುವ ಜೀವಕಾರುಣ್ಯ ಕೆಲಸ ಕಾರ್ಯದ ಸವಿಸ್ತಾರವಾದ ವಿವರಣೆಯನ್ನು ಮಾಧ್ಯಮದ ಮೂಲಕ ನೀಡಿದ ಗಣೇಶ್ ರೈ ರವರಿಗೆ ಕೃತಜ್ಞತೆಗಳು. ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದ ಎಲ್ಲಾ ಕನ್ನಡ ಸಂಘಟನೆಗಳಿಗೂ ಅಭಿನಂದನೆಗಳು.

Sudhakar , Thumbay
2012-08-13
"CONGRATS" Mr.Ganesh Rai Nice article, some people thinking only "MONEY" but i know without money also help each other. only the best way "JUST DONATE UR BLOOD" save a life.
Aruna Muthugadur, Davangere
2012-08-13
ಶ್ರೀ. ಗಣೇಶ್ ರೈ, ತಾವು ಬರೆದ ಲೇಖನ ಅತ್ಯಂತ ಸುಂದರವಾಗಿದೆ. ಯಾರೇ ಓದಿದರೂ ಅವರಿಗೆ ರಕ್ತದನ್ನ ಮಾಡುವ ಮನಸ್ಸಾಗುತ್ತದೆ.
Balakrishna M Salian, Yermal Bada / Dubai
2012-08-13
ಎಲ್ಲಾ ಕರ್ನಾಟಕ ಪರ ಸಂಘದವರಲ್ಲಿ ( ನೂರಕ್ಕೂ ಹೆಚ್ಹು ) ಈ ಮೂಲಕ ಕಳಕಳಿಯ ವಿನಂತಿ ದಯವಿಟ್ಟು ವರ್ಷಕ್ಕೊಮ್ಮೆ ಆದರೂ ರಕ್ತ ದಾನ ಶಿಬಿರವನ್ನು ಆಯೋಜಿಸಿ ಜೀವ ಉಳಿಸುವಲ್ಲಿ ಭಾರತೀಯರ ಮೆಲುಗೈಯನ್ನು ತೋರಿಸಿಕೊಡಬೇಕಾಗಿ ವಿನಂತಿ.

ನಾವು ಹುಟ್ಟಿ ಸಾಯುವವರೆಗೂ ಉಪಯೋಗಿಸುದು ಯಾರೋ ಕಟ್ಟಿಸಿದ ಆಸ್ಪತ್ರೆ , ಶಾಲೆ ,ಉಪವನ, ಸಾರಿಗೆ ಸಂಚಾರ, ಹಾಗೇನೆ ಮದುವೆ ಮಂಟಪ ಇನ್ನೂ ಎಸ್ಟೂ ಇದೆ ಆದರೆ ನಮ್ಮಿಂದ ಸಮಾಜಕ್ಕೆ ಏನುಕೊಟ್ಟಿದ್ದೇವೆ ಅಥವ ಎನನ್ನು ಕೊಡಬಹುದು ಇಲ್ಲಿದೆ ಉತ್ತರ ".. ರಕ್ತ ದಾನಿಗಳಗಿ ಜೀವ ಉಳಿಸಿ ಆರೋಗ್ಯವಂತರಾಗಿರಿ " ದಯವಿಟ್ಟು ಎಲ್ಲಿಯೇ ಇರಿ ಆದರೆ ರಕ್ತ ದಾನಿಗಳಾಗಿರಿ .

ಬಿ . ಜಿ . ಮೋಹನದಾಸ್ ರವರಿಗೆ ಕೋಟಿ ಪ್ರಣಾಮ ನಿಮ್ಮ ಪ್ರೋತ್ಸಾಹ ರಕ್ತ ದಾನಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲು ಹೆಮ್ಮೆಪಡುತೇನೆ, ಹಿ ಗೆಯೇ ನಿಮ್ಮ ಪ್ರೋತ್ಸಾಹ ಇನ್ನು ಮುಂದಕ್ಕೂ ಇರಲಿ ಎಂದು ವಿನಂತಿಸುತೇನೆ ( ಬನ್ನಿ ಜೀವ ಉಳಿಸೋಣ )

Balakrishna M Salian, Vice President, Mogaveers UAE and Promoter of Blood Donation Drive in Dubai.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»New pension scheme for Indians in UAE
»ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
»Restaurant manager of Arab Udupi Restaurant in Bur Dubai charred to death in blaze
»ಅ.5ರಂದು ’ನಮ ತುಳುವೆರ್ ’ ಸಾದರಪಡಿಸುವ ತುಳು ಪರ್ಬ ಸಂಭ್ರಮಕ್ಕೆ ಭರದ ಸಿದ್ದತೆ : ಡಾ.ವಿವೆಕ್ ರೈ, ಡಾ.ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತುಳುವರ ಮಹೋನ್ನತ ಸಾಂಸ್ಕೃತಿಕ ಹಬ್ಬ
»Dubai: US woman jumps to death from 10th floor in Marina area
»ಯಶಸ್ವಿ ರಕ್ತದಾನದ ಶಿಬಿರದ ಮೂಲಕ ಯು.ಎ.ಇ. ಸರ್ಕಾರದ ದಾಖಲೆಯಲ್ಲಿ 'ಉಸ್ವಾಸ್' ಸೇರ್ಪಡೆ
»ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರಿಗೆ ದುಬಾಯಿಯಲ್ಲಿ ಗೌರವ ಸಲ್ಲಿಕೆ
»ರಾಸ್ ಅಲ್ ಕೈಮ: ಕಾರು ಅಫಘಾತದಲ್ಲಿ ಮೂರು ಭಾರತೀಯರ ದಾರುಣ ಮರಣ
»ಯು.ಎ.ಇ ಯ ಪ್ರಭಾವಯುತ ಭಾರತೀಯರ ಪಟ್ಟಿಯಲ್ಲಿ ತುಂಬೆ ಮೊಯಿದ್ದೀನ್
»ದುಬೈ ಮಾಲ್ ನಲ್ಲಿ ಬೆಂಕಿ. ಗ್ರಾಹಕರ ಸ್ಥಳಾಂತರ; ಸುರಕ್ಷಿತ
»ಅಬುದಾಬಿ:ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ
»ರಂಜಾನ್ ಮತ್ತು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯು.ಎ.ಇ. ಬಸವ ಸಮಿತಿ ಆಶ್ರಯದಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ
»ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ
»ಎನ್ನಾರೈಗಳು ಹೆಚ್ಚು ಚಿನ್ನ ತರಲು ಕೇಂದ್ರಕ್ಕೆ ಭಾರತೀಯ ರಾಯಭಾರ ಕಚೇರಿ ಪ್ರಸ್ತಾವನೆ
»ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ
»ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ
»Police explains what is the speed grace margin for Dubai roads
»ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ವತಿಯಿಂದ ದುಬಾಯಿಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ
»ಬ್ಯಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಇಪ್ತಾರ್ ಕೂಟ; ಎಲ್ಲಾ ಸಮುದಾಯದ 400 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧಾರ
»ಡಾ. ಬಿ. ಆರ್. ಶೆಟ್ಟಿಯವರ ಜನ್ಮದಿನಾಚರಣೆ... ರಕ್ತದಾನ ಶಿಭಿರದ ಮೂಲಕ ಶುಭ ಹಾರೈಸಿದ ಎನ್ ಎಂ. ಸಿ ಟ್ರೇಡಿಂಗ್ ಅಲ್ ಐನ್ ಸಿಬ್ಬಂದಿವರ್ಗ.
»30ಸಾವಿರ ದಿರಹಂನೊಂದಿಗೆ ಶಾರ್ಜಾದಲ್ಲಿ ಭಿಕ್ಷುಕನ ಬಂಧನ
»ಯುಎಇಗೆ ಮುಸುಕಿದ ಧೂಳಿನ ಚಾದರ :ತಾಪಮಾನ 49.4ಡಿಗ್ರಿ ಬಾಧಿಸುವ ಸಾಧ್ಯತೆ
»ವೈದ್ಯಕೀಯ ರಜೆ ಸರ್ಟಿಫಿಕೇಟಿಗೆ ಎಮಿರೇಟ್ ಗುರುತು ಪತ್ರ ಅಗತ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri