ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಸಂಘಪರಿವಾರದ ಮುಖ ಮತ್ತು ಮುಖವಾಡಗಳು

-ಸನತ್ ಕುಮಾರ್ ಬೆಳಗಲಿ

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದೆ ಬ್ರಿಟಿಷ್ ಆಳರಸರ ಏಜೆಂಟಗಿರಿ ಪಾತ್ರವಹಿಸಿದ ಆರೆಸ್ಸೆಸ್‌ಗೆ ಒಂದಲ್ಲ ಹಲವಾರು ಮುಖಗಳು. ಬರೀ ಮುಖಗಳು ಸಾಲದೆಂದು ಮುಖವಾಡ ಗಳನ್ನು ಅದು ಇಟ್ಟುಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ಇಂಥ ಮುಖವಾಡ ಎಂದು ಸಂಘ ಚಿಂತಕ ಗೋವಿಂದಾಚಾರ್ಯ ಹಿಂದೊಮ್ಮೆ ಹೇಳಿದ್ದರು. ಮುಖಗಳು ವಿರೂಪಗೊಂಡಾಗ, ಮುಖವಾಡಗಳು ಕಳಚಿಬಿದ್ದಾಗ, ಹೊಸ ಮುಖವಾಡಗಳನ್ನು ಹಾಕಿಕೊಳ್ಳುವುದು ಈ ರಾಷ್ಟ್ರೀಯ ಸ್ವಯಂ (ಭಕ್ಷಕ) ಸೇವಕ ಸಂಘದ ಚಾಳಿ. ಈ ರಾಷ್ಟ್ರದ ಜನತೆಗೆ ಈ ಸಂಘದ ಚಾಳಿ ಹೊಸದಲ್ಲ. ಆದರೂ ಅನೇಕ ಬಾರಿ ಅಮಾಯಕರು ಈ ಮೋಸದ ಮುಖವಾಡಕ್ಕೆ ಮಾರು ಹೋಗಿ ಖೆಡ್ಡಾಕ್ಕೆ ಬಿದ್ದಿದ್ದುಂಟು.

ಭಾರತ ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದಾಗ ಸಂಘಪರಿವಾರಕ್ಕೆ ಹಿಂದೂ ರಾಷ್ಟ್ರ ಕಟ್ಟುವ ತೆವಲು ಅಂಟಿಕೊಂಡಿತು. ಸ್ವಾತಂತ್ರ ಹೋರಾಟದಲ್ಲಿ ಜಾತಿ-ಧರ್ಮ ಭೇದಕ್ಕೆ ಅವಕಾಶವಿರಲಿಲ್ಲ. ಹಿಂದೂ-ಮುಸ್ಲಿಂ-ಕ್ರೈಸ್ತ ಹೀಗೆ ಎಲ್ಲರೂ ಸೇರಿ ಹೋರಾಟಕ್ಕೆ ಇಳಿದಿದ್ದರು. ಈ ಏಕತೆ ಹಿಂದೂ ರಾಷ್ಟ್ರ ಕಟ್ಟಲು ಹೊರಟ ಆರೆಸ್ಸೆಸ್‌ಗೆ ಅಪಥ್ಯವಾಯಿತು. ಸ್ವಾತಂತ್ರ್ಯ ನಂತರ ಜಾತ್ಯತೀತ ಜನತಾಂತ್ರಿಕ ಭಾರತ ಅಸ್ತಿತ್ವಕ್ಕೆ ಬರುವುದು ಸಂಘಕ್ಕೆ ಬೇಕಾಗಿರಲಿಲ್ಲ. ಅಂತಲೇ ಸ್ವಾತಂತ್ರ ಹೋರಾಟಕ್ಕೆ ದ್ರೋಹ ಬಗೆದ ಅವರು ಹೋರಾಟಗಾರರನ್ನು ಬ್ರಿಟಿಷ್ ಪೊಲೀಸರಿಗೆ ಹಿಡಿದು ಕೊಡುತ್ತಿದ್ದರು.

 ಇಂತಹ ದೇಶದ್ರೋಹ ಪರಂಪರೆ ಹೊಂದಿರುವ ಆರೆಸ್ಸೆಸ್ ಸ್ವಾತಂತ್ರ್ಯ ನಂತರ ತನ್ನ ಕಾರ್ಯತಂತ್ರ ಬದಲಿಸುತ್ತ ಬಂತು. ಒಂದೆಡೆ ಜನಸಂಘದಂತಹ (ಈಗಿನ ಬಿಜೆಪಿ) ರಾಜಕೀಯ ಪಕ್ಷವನ್ನು ಕಟ್ಟಿ ಆ ಮೂಲಕ ರಾಜಕೀಯ ಅಧಿಕಾರ ಹಿಡಿದು ತನ್ನ ಹಿಡನ್ ಅಜೆಂಡ ಜಾರಿಗೆ ತರುವುದು ಸಂಘದ ಒಂದು ಕಾರ್ಯತಂತ್ರ. ಇನ್ನೊಂದೆಡೆ ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸಿ ಕಲಹದ ಕಿಡಿ ಹೊತ್ತಿಸಿ ಬಹುಸಂಖ್ಯಾತರನ್ನು ಒಂದೆಡೆ ಸೇರಿಸಿ ತನ್ನ ಫ್ಯಾಸಿಸ್ಟ್ ಅಜೆಂಡ ಜಾರಿಗೆ ತರಲು ಅದು ಯತ್ನಿಸುತ್ತದೆ. ಇವೆರಡು ಕಾರ್ಯತಂತ್ರ ಅನುಸರಿಸುವಾಗಲೂ ಸಂವಿಧಾನ್ಮಾತಕ ಆಡಳಿತ ಪದ್ಧತಿಯೊಂದಿಗೆ ಮುಖಾಮುಖಿಯಾಗುವ ಸಂದರ್ಭ ಎದುರಾಗುತ್ತದೆ.

ಶಾಸಕಾಂಗದಲ್ಲಿ ಮಾತ್ರವಲ್ಲ, ಪೊಲೀಸ್ ಇಲಾಖೆ, ಶಿಕ್ಷಣ ಕ್ಷೇತ್ರ, ರಕ್ಷಣಾ ವಲಯ, ನ್ಯಾಯಾಂಗ ಹೀಗೆ ಆಡಳಿತಾಂಗದ ಎಲ್ಲ ಆಯಕಟ್ಟಿನ ಜಾಗಗಳಲ್ಲಿ ಸಂಘದ ಕಾರ್ಯಕರ್ತರನ್ನು ನುಸುಳಿಸಿ ತನ್ನ ಫ್ಯಾಸಿಸ್ಟ್ ಕಾರ್ಯಸೂಚಿ ಜಾರಿಗೆ ತರುವುದು ಆರೆಸ್ಸೆಸ್ ಷಡ್ಯಂತ್ರವಾಗಿದೆ. ಸಾವರ್ಕರ್ ತುಂಬ ಹಿಂದೆಯೇ ಈ ರೀತಿ ಎಲ್ಲ ಕಡೆ ಸಂಘದ ಕಾರ್ಯಕರ್ತರು ನುಸುಳಬೇಕೆಂದು ಸಲಹೆ ನೀಡಿದ್ದರು. ಮಂಗಳೂರಿನ ಪಬ್ ಮತ್ತು ಹೋಮ್ ಸ್ಟೇ ಮೇಲಿನ ದಾಳಿ ಈ ಕಾರ್ಯತಂತ್ರದ ಭಾಗ. ಒಂದೆಡೆ ದಾಳಿ ಮಾಡುವ ಕಪಿಗಳ ಸೇನೆ, ಇನ್ನೊಂದೆಡೆ ಅವರನ್ನು ಸಮರ್ಥಿಸುವ ಮಹಿಳಾ ಆಯೋಗದ ಅಧ್ಯಕ್ಷೆ. ಇದೆಲ್ಲ ವ್ಯವಸ್ಥಿತ ಕಾರ್ಯತಂತ್ರ.

ತನ್ನ ಅಜೆಂಡ ಜಾರಿಗೆ ಅನೇಕ ಮುಖವಾಡಗಳನ್ನು ಆರೆಸ್ಸೆಸ್ ಬಳಸಿಕೊಳ್ಳುತ್ತದೆ. ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ನಿರಶನ ನಾಟಕ ನಡೆಸಿದ ಯೋಗಪಟು ಬಾಬಾ ರಾಮ್‌ದೇವ್ ಸಂಘಪರಿವಾರದ ಇಂಥ ಒಂದು ಮುಖವಾಡ. ಅಣ್ಣಾ ಹಝಾರೆ ಎಂಬ ಮುಖವಾಡ ಕಳಚಿ ಬಿದ್ದ ನಂತರ ಈ ಹೊಸ ಮುಖವಾಡವನ್ನು ಫ್ಯಾಸಿಸ್ಟ್ ಶಕ್ತಿಗಳು ಬಳಸಿಕೊಳ್ಳುತ್ತಿವೆ. ಈ ರಾಮ್‌ದೇವ್ ತನ್ನ ನಿರಶನ ಪೆಂಡಾಲಿನ ಹಿಂಬದಿಯಲ್ಲಿ ಭಗತ್‌ಸಿಂಗ್, ಚಂದ್ರಶೇಖರ್ ಆಝಾದ್ ಜೊತೆ ತನ್ನ ಚೋರ ಶಿಷ್ಯ ಬಾಲಕೃಷ್ಣನ್ ಫೋಟೋ ಹಾಕಿ ಈಗಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

ಜನರ ಬಳಿಗೆ ನೇರವಾಗಿ ಹೋಗುವ ನೈತಿಕ ಶಕ್ತಿ ಆರೆಸ್ಸೆಸ್‌ಗಿಲ್ಲ. ಯಾಕೆಂದರೆ ಕರ್ನಾಟಕ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಾನಾ ಹಗರಣಗಳು ನಡೆದಿವೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ಸಂಪತ್ತಿನ ಲೂಟಿಯಾಗಿದೆ. ಸಂಘದ ಕಾರ್ಯಕರ್ತರಾದ ಯಡಿಯೂರಪ್ಪ, ಅನಂತಕುಮಾರ್ ಸೇರಿದಂತೆ ಅನೇಕರು ಹಲವಾರು ಪ್ರಕರಣಗಳಲ್ಲಿ ಮೈತುಂಬ ಹೊಲಸು ಮೆತ್ತಿಕೊಂಡು ನಿಂತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜನರ ಬಳಿಗೆ ಹೋಗಲು ಅಣ್ಣಾ ಹಝಾರೆ, ಬಾಬಾ ರಾಮ್‌ದೇವ್‌ರಂಥ ಮುಖವಾಡಗಳು ಆರೆಸ್ಸೆಸ್‌ಗೆ ಅನಿವಾರ್ಯ ವಾಗಿವೆ.

1974ರಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರುವ ಮುನ್ನ ಜಯಪ್ರಕಾಶ್ ನಾರಾಯಣರನ್ನು (ಜೆಪಿ) ಮುಖವಾಡವಾಗಿ ಬಳಸಿಕೊಂಡ ಆರೆಸ್ಸೆಸ್ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿತು. ಆರೆಸ್ಸೆಸ್ ಜೆಪಿಯವರನ್ನು ಎಷ್ಟು ದಾರಿ ತಪ್ಪಿಸಿತೆಂದರೆ, ಆರೆಸ್ಸೆಸ್ ಕೋಮುವಾದಿಯಾದರೆ ನಾನೂ ಕೋಮುವಾದಿ ಎಂದು ಬಹಿರಂಗವಾಗಿ ಹೇಳುವ ಮೂಲಕ ಜೆಪಿ ತಮ್ಮ ಅಭಿಮಾನಿಗಳಲ್ಲಿ ಭ್ರಮನಿರಸನ ಉಂಟು ಮಾಡಿದ್ದರು. ತುರ್ತು ಪರಿಸ್ಥಿತಿ ನಂತರ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಸರಕಾರ ಅಸ್ತಿತ್ವಕ್ಕೆ ಬಂದಾಗ ಸರಕಾರದ ಒಳಗೆ ಸೇರಿದ ಆರೆಸ್ಸೆಸ್ ತನ್ನ ಅಜೆಂಡ ಜಾರಿಗೊಳಿಸಲು ಯತ್ನಿಸಿತು.

ಮೊರಾರ್ಜಿ ಸರಕಾರದಲ್ಲಿದ್ದ ಸಂಘ ಪರಿವಾರದ ಸಚಿವರು ಶಿಕ್ಷಣದ ಕೇಸರೀಕರಣಕ್ಕೆ ಮುಂದಾಗಿದ್ದರು. ಪಠ್ಯಪುಸ್ತಕಗಳನ್ನು ಕೋಮುವಾದೀಕರಣಗೊಳಿಸುವ ಪ್ರಯೋಗ ಆಗಲೇ (1977) ಆರಂಭವಾಯಿತು. ಆಗ ಸೋಷಲಿಸ್ಟ್ ನಾಯಕ ಮಧುಲಿಮಿಯೆ ಇದನ್ನ ಬಹಿರಂಗವಾಗಿ ವಿರೋಧಿಸಿದರು. ಜನಸಂಘವನ್ನು ವಿಸರ್ಜಿಸಿ ಜನತಾ ಪಕ್ಷದಲ್ಲಿ ಸೋಷಲಿಸ್ಟ್‌ರೊಂದಿಗೆ ಕೈಗೂಡಿಸಿದ ಆರೆಸ್ಸೆಸ್ ನಾಯಕರ ಮೊದಲ ನಿಷ್ಠೆ ಸಂಘಕ್ಕೆ ಇತ್ತು. ಇದರ ಪರಿಣಾಮವಾಗಿ ದೇಶದ ಪ್ರಥಮ ಕಾಂಗ್ರೆಸ್ಸೇತರ ಸರಕಾರದ ಪ್ರಯೋಗ ವಿಫಲಗೊಂಡಿತು.

ಎರಡನೆ ಬಾರಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರನ್ನು ಮುಖವಾಡವಾಗಿ ಬಳಸಿಕೊಳ್ಳಲು ಆರೆಸ್ಸೆಸ್ ಯತ್ನಿಸಿತು. ಆದರೆ ವಿ.ಪಿ.ಸಿಂಗ್ ಸಂಘ ಪರಿವಾರದ ಅಪಾಯ ಮನಗಂಡು ಅದರಿಂದ ದೂರವಾಗುತ್ತಾ ಬಂದರು. ಅವರು ಪ್ರಧಾನಿಯಾಗಿದ್ದಾಗ ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ ಆಯೋಗದ ವರದಿಯನ್ನು ಜಾರಿಗೆ ತಂದರು. ಇದನ್ನ ವಿಫಲಗೊಳಿಸಲು ಮುಂದಾದ ಆರೆಸ್ಸೆಸ್ ಅಡ್ವಾಣಿ ಮೂಲಕ ಅಯೋಧ್ಯೆಯ ಬಾಬರಿ ಮಸೀದಿ- ರಾಮಮಂದಿರ ವಿವಾದ ಸೃಷ್ಟಿಸಿದರು. ಇದರ ಪರಿಣಾಮವಾಗಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿತು.

ಹೀಗೆ ಕಾಂಗ್ರೆಸ್ಸೇತರ ಪಕ್ಷಗಳನ್ನು ಒಂದುಗೂಡಿಸುವ ರಾಜಕಾರಣ ಪ್ರತಿ ಬಾರಿಯೂ ಸಂಘಪರಿವಾರಕ್ಕೆ ಅನುಕೂಲವಾಗುತ್ತ ಬಂದಿದೆ. ಇಂಥ ಸಂಯುಕ್ತರಂಗದ ರಾಜಕಾರಣ ಮಾಡಿ ಸಮಾಜವಾದಿ ಪಕ್ಷ ಸೇರಿದಂತೆ ಇತರ ಪಕ್ಷಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವು. ಆದರೆ ಆರೆಸ್ಸೆಸ್ ತನ್ನ ಅಸ್ತಿತ್‌ವನ್ನು ಹೆಚ್ಚಿಸಿಕೊಳ್ಳುತ್ತ ಬಂತು. ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿಯುವಷ್ಟು ಪ್ರಬಲವಾಗಿ ಬೆಳೆಯಿತು. ಬೆಳೆದ ನಂತರ ತನ್ನ ವಿಭಜನಕಾರಿ ಅಜೆಂಡಾ ಜಾರಿಗೆ ತರಲು ಷಡ್ಯಂತ್ರ ರೂಪಿಸುತ್ತ ಬಂತು.

ಈಗ ರಾಮ್‌ದೇವ್ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದ ನಿರಶನ ಪ್ರಹಸನವು ಸಂಘಪರಿವಾರದ ವಿಭಜನಕಾರಿ ಕಾರ್ಯತಂತ್ರದ ಭಾಗವಾಗಿದೆ. ಯುಪಿಎ ನೇತೃತ್ವದಲ್ಲಿ ಕೇಂದ್ರ ಸರಕಾರದ ಜನವಿರೋಧಿ ಧೋರಣೆಗಳಿಂದ ರೋಸಿ ಹೋಗಿರುವ ದೇಶದ ಜನಸಾಮಾನ್ಯರನ್ನು ಸೆಳೆಯಲು ರಾಮ್‌ದೇವ್‌ರಂಥ ಮುಖವಾಡಗಳು ಬಳಕೆಯಾಗುತ್ತಿವೆ. ಯುಪಿಎ ವಿರುದ್ಧದ ಜನಾದೇಶದ ಬೆಂಬಲವನ್ನು ಬಿಜೆಪಿಯತ್ತ ಕ್ರೋಡೀಕರಿಸುವ ಕಾರ್ಯತಂತ್ರ ರೂಪುಗೊಂಡಿದೆ.

ಅಂತಲೇ ಈ ಮುಖ ಮತ್ತು ಮುಖವಾಡಗಳನ್ನು ಕಿತ್ತು ಬಿಸಾಡಲು ಜಾತ್ಯತೀತ ಪ್ರಗತಿಪರ ಶಕ್ತಿಗಳು ಒಂದೇ ವೇದಿಕೆಗೆ ಬರಬೇಕಿದೆ. ನರೇಂದ್ರ ಮೋದಿಯಂಥ ನರಹಂತಕರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡುವ ಷಡ್ಯಂತ್ರವನ್ನು ಆರೆಸ್ಸೆಸ್ ರೂಪಿಸಿದೆ. ಇದಕ್ಕೆ ದೇಶ-ವಿದೇಶಗಳ ಕಾರ್ಪೊರೇಟ್ ಕಂಪೆನಿಗಳ ಬೆಂಬಲವೂ ಇದೆ. ಬರಲಿರುವ ಈ ಗಂಡಾಂತರದಿಂದ ಭಾರತವನ್ನ ರಕ್ಷಿಸಬೇಕಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-13

Tell a Friend

ಪ್ರತಿಸ್ಪಂದನ
SHAMEEM, MANGALORE
2012-09-02
ಪ್ರಶಾಂತ್ ಅಮಿನ್ ರವರೆ ತಾವು ಭಾರತ್ ರತ್ನ ಅಂಬೇಡ್ಕರ್ ರವರ ಬಗ್ಗೆ ಬರೆದಿದ್ದೀರಿ. ಪ್ರಶಾಂತ್ ಒಂದು ಸರಳ ಪ್ರಶ್ನೆಗೆ ಉತ್ತರಿಸುತ್ತಿರ. ಅಂಬೇಡ್ಕರ್ ರವರು ಯಾಕೆ ಹಿಂದೂ ಧರ್ಮದಿಂದ ಬುದ್ಧ ದರ್ಮಕ್ಕೆ ಮತಾಂತರ ಹೊಂದಿದರು ಎನ್ನುವ ಸತ್ಯಾಂಶವನ್ನು ಓದುಗರಿಗೆ ಸಮಗ್ರವಾಗಿ ತಿಳಿಸುವಿರ ? ಅವರ ಮತಾಂತರಕ್ಕೆ ಪ್ರಬಲವಾದ ಕಾರಣವೇನು ? ಉತ್ತರಿಸಲು ಸಾದ್ಯವಿದೆಯ ?
ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ, ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ. ಖಿಲಾಫತ್‌ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ. 1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು. ಅಂದು 10ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು. ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು. ಹಿಂದೂಗಳ ಕೊಲೆ, ಅತ್ಯಾಚಾರ, ಮತಾಂತರ ನಡೆದವು. ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು.

ಗಾಂಧೀಜಿಯನ್ನು‘ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ ‘ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ಎಂಬ ಸಮೀಕ್ಷೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ ಏನು ಹೇಳಿದ್ದರು?‘ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ. ಅದು ಕಾಲಾಂತರದಲ್ಲಿ ಸಾಬೀತಾಗಿದೆ. ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್‌ಚೇಂಜ್ (ಪಾಕ್‌ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು,ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು)ಮಾಡಿಕೊಳ್ಳಬೇಕು.ಇಷ್ಟಕ್ಕೂ ಮುಸಲ್ಮಾನರ ಬ್ರದರ್‌ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್‌ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಇದನ್ನೆಲ್ಲ ಬಿಟ್ಟು ಈ ರಾಷ್ಟ್ರೀಯ ಸ್ವಯಂ ಸೇವಕರನ್ನು ಭಕ್ಷಕರು ಅ೦ತಿರಲ್ಲ? ಇದು ನ್ಯಾಯವೇ? { DEAR MR.PRASHANTH AMIN..THESE WRITINGS ARE YOUR OWN OR COPIED FROM SOME JOURANL /PAPER. PLEASE CLARIFY ..Immediately. You have not commented on any news till now..now all of a sudden you are expressing views- PLEASE BE AWARE THAT IF THIS IS NOT YOUR OPINION...The comments will be deleted - EDITOR)

ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ಆಗಸ್ಟ್ ೮,ಸಂಸತ್ ಅಧಿವೇಶನ...‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ!ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ...!!ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ...’ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆಗಸ್ಟ್ 11,ಆಝಾದ್ ಮೈದಾನ,ಮುಂಬೈ... ಅಕ್ಬರುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ‘ಅಮರ್ ಜವಾನ್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ.

ಈ ದೇಶದ ಆಂತರಿಕ ಭದ್ರತೆಯನ್ನು, ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ. ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್‌ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!

ಇದೆಲ್ಲ ಯಾವ ಮನಸ್ಥಿತಿಯನ್ನು,ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ? ಇದನ್ನೆಲ್ಲ ಬಿಟ್ಟು ಈ ರಾಷ್ಟ್ರೀಯ ಸ್ವಯಂ ಸೇವಕರನ್ನು ಭಕ್ಷಕರು ಅ೦ತಿರಲ್ಲ? ಇದು ನ್ಯಾಯವೇ?

ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ‘ಖಿಲಾಫತ್ ಚಳವಳಿ. ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಯಾವುದೋ ದೂರದ, ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು. ಅಂದು ಖಿಲಾಫತ್ ಚಳವಳಿಗೆ ತಾವು ಸ್ವ‌ಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು.

ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ, ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?!ಆನಂತರವಾದರೂ ಆಗಿದ್ದೇನು?ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ

gopalakrishna k, India
2012-08-23
ಪುಕ್ಕಟೆ ಪ್ರಚಾರಪಡೆದು ಪ್ರಸಿದ್ಧರಾಗಬೇಕೆಂಬ ದೂ(ದು)ರಾಲೋಚನೆ ಅಲ್ಲದೆ ಹಣದಾಸೆಗಾಗಿ ಬೆಳಗಲಿ ಅಂಥಹವರು ಏನನ್ನೂ ಮಾಡಬಹುದು ನಮ್ಮ ದೇಶದ ಇತಿಹಾಸದುದ್ದಕ್ಕೂ ಇಂತಹವರನೇಕರು ಕಾಣಸಿಗುತ್ತಾರೆ ಅದು ನಮ್ಮ ಕರ್ಮ
ಮಾಜಿ ಸದಸ್ಯ , ಮಂಗಳೂರು
2012-08-13
ಎಷ್ಟೊಂದು ಸತ್ಯ ತಮ್ಮ ಲೇಖನ! ಈ ಸಂಘಿಗಳು ದೇಶ ಪ್ರೇಮದ, ಸಂಸ್ಕೃತಿಯ ಮುಖವಾಡ ಧರಿಸಿ ಸಾಮಾನ್ಯ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದಾರೆ. ನಾಯಕರ ಮಧ್ಯೆ ನಡೆಯುವ ಗುಪ್ತ ಚರ್ಚೆ ಮತ್ತು ಅಜೆಂಡಾ ಗಳು ಪಾಪ ನಿಷ್ಟಾವಂತ ಕಾರ್ಯಕರ್ತನ ತಲೆಗೆ ಹೊಕ್ಕುವುದಿಲ್ಲ ಮತ್ತು ಕಪಟ ಧರ್ಮ ರಕ್ಷಣೆಯ ಹೆಸರಲ್ಲಿ ಇದ್ದ ಬದ್ದ ಕೇಸುಗಳನ್ನು ಮೇಲೆಳಿದು ಕೊಂಡು ಜೀವನ ಪರ್ಯಂತ ಕೋರ್ಟು ಜೈಲು ಅಲೆದಾಡುತ್ತಾನೆ.

ಅದೇ ಸಂಘ ಪರಿವಾರದ ಭ್ರಾಹ್ಮನ ನಾಯಕರ ಮಕ್ಕಳ ಮೇಲೆ ಒಂದು ಕೆಸಾದರು ಇರಲಿ, ಅಥವಾ ಬೀದಿಗೆ ಬಂದು ಧರ್ಮ ರಕ್ಷಣೆಯ ಹೆಸರಲ್ಲಿ ಕಿರಿಕ್ ಮಾಡಲಿ...ಸಾಧ್ಯವೇ ಇಲ್ಲ, ಅವರ ಸ್ವಂತ ಮಕ್ಕಳು ಬ್ಯಾಂಕ್ ನಲ್ಲೋ, ಟೆಕ್ಕಿಯಾಗಿಯೋ, ಉದ್ಯಮದಲ್ಲೋ, ಸರಕಾರೀ ಕೆಲ್ಸದಲ್ಲಿಯೋ, ಅಥವಾ ವೈದ್ಯನಾಗಿಯೋ ಉತ್ತುಂಗದಲ್ಲಿರುತ್ತಾನೆ.

ಏನೇ ಆಗಲಿ ಈಗೀಗ ಒಂದೊಂದೇ ಮುಖವಾಡ ಕಳಚಿ ಬೀಳುತ್ತಿದೆ. ಸನತ್ ರವರೆ ತಮ್ಮ ಉತ್ತಮ ಲೇಖನಕ್ಕೆ ಮತ್ತು ಗಕ ಪ್ರಕತಿಸಿದಕ್ಕೆ ಧನ್ಯವಾದಗಳು.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri