ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಆರ್‌ಟಿಐ ಮೂಲಕ ಗ್ರಾಮಕ್ಕೆ ಅಭಿವೃದ್ಧಿಯ ದಾರಿ ತೋರಿಸಿದ ಅಂಧ!

-ಆರ್.ಎನ್.

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ರಂಗ್‌ಪುರ ಗ್ರಾಮಕ್ಕೆ ಕಾಲಿಟ್ಟಾಗ ನೀವು ಅತ್ಯಂತ ನುಣುಪಾದ ಡಾಮರು ರಸ್ತೆಯನ್ನು ಕಂಡು ಚಕಿತಗೊಳ್ಳುವಿರಿ. ನಗರಗಳಲ್ಲಿಯೂ ಅಪರೂಪವಾದ ಒಂದಿಷ್ಟೂ ಬಿರುಕುಗಳಿಲ್ಲದಿರುವ ಈ ರಸ್ತೆ ಈ ಕುಗ್ರಾಮದಲ್ಲಿ ಹೇಗೆ ಬಂತಪ್ಪಾ ಎಂದು ಅಚ್ಚರಿಗೊಳ್ಳುತ್ತಾ ನೀವು ಅದರಲ್ಲಿ ಪ್ರಯಾಣಿಸಿದರೆ, ಅನತಿ ದೂರದಲ್ಲೇ ಹಲವಾರು ಮನೆಗಳಿರುವ ಜನವಸತಿ ಸ್ಥಳವೊಂದು ಕಾಣಸಿಗುವುದು. ಅಂದ ಹಾಗೆ ಈ ಕುಗ್ರಾಮದಲ್ಲಿ ಒಂದು ಅಚ್ಚುಕಟ್ಟಾದ ರಸ್ತೆಯನ್ನು ನಿರ್ಮಾಣಗೊಳ್ಳಲು ಓರ್ವ ಅಂಧ ಕಾರಣನೆಂದರೆ ಯಾರಿಗೂ ಆಶ್ಚರ್ಯವಾಗದೆ ಇರದು.

 ಹೌದು. 32 ವರ್ಷದ ರತನ್ ಆಲಾನನ್ನು ನೀವು ಕಂಡಾಗ, ಭಾರತದಲ್ಲಿ ನಿಜವಾದ ಕ್ರಾಂತಿ ಯಾಗುವುದು ಜಂತರ್‌ಮಂತರ್‌ನಲ್ಲಿ ಧರಣಿ ಕೂಡುವ ರಾಜಕೀಯ ಪುಢಾರಿಗಳಿಂದಲ್ಲ. ಬದಲು ದೇಶದ ಮೂಲೆಮೂಲೆಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಜಾಗೃತ ಜನರಿಂದ ಎಂಬ ಸತ್ಯ ಅರಿವಾಗದೆ ಇರದು.

 2006ರಲ್ಲಿ ರತನ್ ಆಲಾಗೆ ತನ್ನ ಗ್ರಾಮದ ರಸ್ತೆಯು ತೀರಾ ಕಳಪೆ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿತು. ಸಂಪೂರ್ಣ ಗುಂಡಿಗಳಿಂದ ತುಂಬಿದ್ದ ಈ ರಸ್ತೆಯ ಎರಡು ಬದಿಗಳಲ್ಲೂ ಬಿದಿರು ಮೆಳೆಗಳು ಮಿತಿ ಮೀರಿ ಬೆಳೆದುದರಿಂದ ಗ್ರಾಮಸ್ಥರಿಗೆ ನಡೆದಾಡುವುದೇ ಕಷ್ಟವಾಗುತ್ತಿತ್ತು.

ಆಲಾ ಒಮ್ಮೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ರೇಡಿಯೋದಲ್ಲಿ ಪ್ರಸಾರವಾದ ಕಾರ್ಯಕ್ರಮ ವೊಂದನ್ನು ಆಲಿಸಿದ. ತನ್ನ ಗ್ರಾಮದ ರಸ್ತೆ ದುಸ್ಥಿತಿಯ ನಿವಾರಣೆಗಾಗಿ ಆ ಕಾಯ್ದೆಯನ್ನು ಬಳಸಿಕೊಳ್ಳಲು ಆತ ನಿರ್ಧರಿಸಿದ. ಹತ್ತನೆ ತರಗತಿ ಉತ್ತೀರ್ಣನಾದ ಆಲಾ, ಬ್ರೈಲಿ ಲಿಪಿ ಶಿಕ್ಷಣದಲ್ಲಿ ಡಿಪ್ಲೊಮಾ ಪದವಿ ಕೂಡಾ ಪಡೆದಿದ್ದಾನೆ.

ಆದಾಗ್ಯೂ, ಆತ ಆರ್‌ಟಿಐ ಅರ್ಜಿಯನ್ನು ಪಂಚಾಯತ್ ಕಚೇರಿಗೆ ಸಲ್ಲಿಸಲು ಹೋದಾಗ, ಗ್ರಾಮದ ಸರಪಂಚ ಹಾಗೂ ಆತನ ಬೆಂಬಲಿಗರು ಆತನನ್ನು ಹೀಯಾಳಿಸಿದರು. ರಸ್ತೆ ಸರಿಯಾಗಿ ದ್ದರೂ, ಇಲ್ಲದಿದ್ದರೂ ಕುರುಡನಿಗೆ ಎರಡೂ ಒಂದೇ ಅಲ್ಲವೇ ಎಂದವರು ವ್ಯಂಗ್ಯವಾಡಿದರು. ‘‘ಆದರೆ ಅವರು ಮಾಡಿದ ಅಪಮಾನವು ಮಾಹಿತಿ ಹಕ್ಕನ್ನು ಪಡೆದುಕೊಳ್ಳುವ ತನ್ನ ನಿರ್ಧಾರವನ್ನು ಇನ್ನಷ್ಟು ಬಲಪಡಿಸಿತು. ಏಕೆಂದರೆ ಭಾರತದ ಇತರ ನಾಗರಿಕರಷ್ಟೇ ಹಕ್ಕುಗಳು ನನಗೂ ಇವೆ ಎಂಬುದನ್ನು ನಾನು ಅವರಿಗೆ ತೋರಿಸಿಕೊಡಲು ನಿರ್ಧರಿಸಿದೆ’’ ಎಂದು ಆಲಾ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಆಲಾ ತನ್ನ ಅರ್ಜಿಯನ್ನು ತಹಶೀಲ್ದಾರರಿಗೆ ರವಾನಿಸಿದರು. ಆದರೆ ತನ್ನ ಮನವಿಯನ್ನು ತಾಲೂಕು ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದ ಬಳಿಕವೇ ಅವರಿಗೆ ಮಾಹಿತಿ ಲಭ್ಯವಾಯಿತು.

ಆದರೆ ತಾಲೂಕು ಅಭಿವೃದ್ಧಿ ಕಚೇರಿಯಿಂದ ದೊರೆತ ದಾಖಲೆಪತ್ರಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಿಂದ ಆ ಗ್ರಾಮಕ್ಕೆ ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ರಸ್ತೆಯನ್ನು ನಿರ್ಮಿಸಿಕೊಡಲಾಗಿತ್ತು. ಈ ದಾಖಲೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಆಲಾ ಮೇಲಧಿಕಾರಿಗಳಿಗೆ ದೂರು ನೀಡಿ, ವಾಸ್ತವವಾಗಿ ದಾಖಲೆಗಳಲ್ಲಿ ತೋರಿಸಲಾದ ರಸ್ತೆ ಕಾಮಗಾರಿ ತನ್ನ ಗ್ರಾಮದಲ್ಲಿ ನಡೆದೇ ಇಲ್ಲವೆಂಬುದನ್ನು ಸಾಬೀತುಪಡಿಸಿದರು. ಅಷ್ಟೇ ಪ್ರಾದೇಶಿಕ ಸುದ್ದಿ ಮಾಧ್ಯಮಗಳಿಗೆ ಹಾಗೂ ದೂರದರ್ಶನಗಳಿಗೂ ರಸ್ತೆ ಕಾಮಗಾರಿಯಲ್ಲಿ ನಡೆದ ಅಕ್ರಮದ ಬಗ್ಗೆ ದೂರು ನೀಡಿದರು. ಆಲಾನ ಹೋರಾಟಕ್ಕೆ ತಕ್ಷಣವೇ ಸ್ಥಳೀಯಾಧಿಕಾರಿಗಳು ಸ್ಪಂದಿಸಿದರು. ಅಂತೂ ಗ್ರಾಮಸ್ಥರಿಗೊಂದು ಅಚ್ಚುಕಟ್ಟಾದ ರಸ್ತೆ ನಿರ್ಮಾಣವಾಯಿತು.

 ಆರ್‌ಟಿಐ ಕಾಯ್ದೆಯನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಿಕೊಂಡುದ್ದಕ್ಕಾಗಿ ಆಲಾಗೆ 2009ರಲ್ಲಿ ರಾಹುಲ್ ಮಂಗಾವೊಂಕರ್ ಪ್ರಶಸ್ತಿ ದೊರೆತಾಗ ಅವರು ದೇಶಾದ್ಯಂತ ಸುದ್ದಿಯಾದರು.

ಆದಾಗ್ಯೂ ಆಲಾಗೆ ಇದೊಂದು ಕೇವಲ ಆರಂಭವಷ್ಟೇ. ಆನಂತರ ಅವರು ಆರ್‌ಟಿಐ ನೆರವಿನೊಂದಿಗೆ ರಂಗ್‌ಪಾರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಲವು ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವಲ್ಲಿ ಯಶಸ್ವಿಯಾದರು.

ಒಮ್ಮೆ ತನ್ನ ಗ್ರಾಮದ 281 ಎಕರೆ ಗೋಮಾಳ ಭೂಮಿಯನ್ನು ವಾಚ್ ತಯಾರಿಕಾ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲು ಸರಕಾರ ಹುನ್ನಾರ ನಡೆಸಿದಾಗ, ಆಲಾ ಅದರ ವಿರುದ್ಧ ಹೋರಾಟಕ್ಕಿಳಿದರು.

ವಾಚ್ ಕಂಪೆನಿಗೆ ಜಮೀನು ನೀಡಿದ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಆಲಾ ಕೇಳಿದ ಪ್ರಶ್ನೆಗೆ ಆಡಳಿತವು ವೌಖಿಕ ರೂಪದ ಉತ್ತರವನ್ನೇ ನೀಡಿತು. ಈ ನಡುವೆ ವಿಷಯದ ಬಗ್ಗೆ ಮುಂದುವರಿಯದಂತೆ ಆಲಾಗೆ ಬೆದರಿಕೆಯ ಕರೆಗಳೂ ಬರತೊಡಗಿದವು. ಆದರೆ ಇವ್ಯಾವುದಕ್ಕೂ ಜಗ್ಗದ ಆಲಾ, ವಿಷಯವನ್ನು ಗ್ರಾಮಸಭೆಯಲ್ಲಿ ಎತ್ತಿದರು. ಕೊನೆಗೂ ಗ್ರಾಮಸ್ಥರ ಒಕ್ಕೊರಲಿನ ವಿರೋಧಕ್ಕೆ ಮಣಿದು, ಗ್ರಾಮಸಭೆಯು ಗೋಮಾಳ ಭೂಮಿಯನ್ನು ಮಾರಾಟವನ್ನು ತಡೆಹಿಡಿಯಲು ನಿರ್ಧರಿಸಿತು.

32ರ ಹರೆಯದ ಆಲಾ ಕಳೆದ ವರ್ಷ ಗ್ರಾಮಸ್ಥರಿಂದ ಸಾಮೂಹಿಕವಾಗಿ ಆರ್‌ಟಿಐ ಅರ್ಜಿಗಳನ್ನು ಹಾಕಿಸಿ, ಗ್ರಾಮದಲ್ಲಿ ನೂರಾರು ನಕಲಿ ಮತದಾರರ ನೋಂದಾವಣೆಯಾಗಿರುವು ದನ್ನು ಬಯಲುಗೊಳಿಸಿದರು.

ಈ ಗ್ರಾಮದ 671 ಮತದಾರರ ಪೈಕಿ 154 ಮಂದಿ ನಕಲಿಯೆಂಬುದು ಈ ಆರ್‌ಟಿಐ ಅರ್ಜಿಗಳ ಮೂಲಕ ಬೆಳಕಿಗೆ ಬಂದಿತ್ತು. ಏಳು ಮಂದಿ ಮೃತರ ಹೆಸರುಗಳೂ ಕೂಡಾ ಮತದಾರ ಪಟ್ಟಿಯಲ್ಲಿದ್ದವು. ಇನ್ನು 10 ಮತದಾರರ ಛಾಯಾಚಿತ್ರವೇ ಇರಲಿಲ್ಲ. ಇನ್ನುಳಿದ 137 ಮಂದಿ ಗ್ರಾಮದಿಂದಲೇ ನಾಪತ್ತೆಯಾಗಿದ್ದರು.

 ಮುಂದಿನ 10 ತಿಂಗಳುಗಳಲ್ಲಿ, ಈ ನಕಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವಂತೆ ಮಾಡುವಲ್ಲಿ ಆಲಾ ಮತ್ತವರ ಬಳಗವು ಯಶಸ್ವಿಯಾಯಿತು. ತಮ್ಮ ಗ್ರಾಮದಲ್ಲಿ ಉತ್ತಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಆಲಾ ಅವರ ನಿರಂತರ ಪರಿಶ್ರಮವನ್ನು ಮೆಚ್ಚಿದ ಗ್ರಾಮಸ್ಥರು ಅವರನ್ನು ಈ ವರ್ಷದ ತಮ್ಮ ಉಪಸರಪಂಚನನ್ನಾಗಿ ಆಯ್ಕೆ ಮಾಡಿದ್ದಾರೆ.

ಈಗಾಗಲೇ ತಾನು ಹೋರಾಟಗಾರನಾಗಿ ನಡೆಸುತ್ತಿರುವ ಜನಕಲ್ಯಾಣ ಕಾರ್ಯಗಳಿಗೆ ಈ ಹುದ್ದೆಯಿಂದ ನೆರವಾಗಲಿದೆಯೆಂದು ಆಲಾ ಹೇಳುತ್ತಾರೆ. ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಲು ಕಣ್ಣುಗಳ ಅಗತ್ಯವಿದೆಯೆಂದು ಇನ್ನು ಯಾರು ತಾನೇ ಹೇಳಬಲ್ಲರು?

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-13

Tell a Friend

ಪ್ರತಿಸ್ಪಂದನ
ರಾಜು, ದಾವಣಗೆರೆ
2012-08-15
ಕಣ್ಣಿಲ್ಲದ ಕುರುಡು ಗೆಳೆಯನಿಗೆ ಇರುವ ಕಾಳಜಿ ನಮಗೆಲ್ಲರಿಗೂ ಬಂದು ಬಿಟ್ಟರೆ, ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಭೂತವನ್ನು ಶಾಶ್ವತವಾಗಿ ಕಿತ್ತೊಗೆಯಬಹುದು.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri