ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಭಾರೀ ಮಳೆಗೆ ರೈತಾಪಿ ವರ್ಗ ಕಂಗಾಲು

-ಶಶಿಧರ್ ಬಜ್ಪೆ

ಳೆ ಬರುವುದಿಲ್ಲ, ಕೃಷಿ ಕೆಲಸ ನಡೆಯುವುದಿಲ್ಲ ಎಂದು ತಲೆಯ ಮೇಲೆ ಕೈಹೊತ್ತು ಕುಳಿತ್ತಿದ್ದ ರೈತ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾನೆ. ಬಜ್ಪೆಸುತ್ತಮುತ್ತ ಸೆಝ್ ಕಂಪೆನಿಗೆ ಕೃಷಿಭೂಮಿ ಸ್ವಾಧೀನಗೊಂಡ ಬಳಿಕ ಇಲ್ಲಿನ ರೈತರು ಸಂತ್ರಸ್ತರ ಕಾಲನಿಗೆ ಗುಳೆ ಹೋದರೂ ಕೆಲವೊಂದು ಪ್ರದೇಶಗಳಲ್ಲಿ ಈಗಲೂ ಭತ್ತದ ಬೇಸಾಯ ನಡೆಯುತ್ತಿದೆ. ಮುಂಗಾರು ಆರಂಭವಾದೊಡನೆ ಹರುಷದಿಂದ ಬೇಸಾಯ ಕಾರ್ಯದಲ್ಲಿ ತೊಡಗಿದ್ದ ರೈತನ ಉತ್ಸಾಹ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಕುಗ್ಗಿಹೋಗಿದೆ.

ಜುಲೈ ತಿಂಗಳ ಅಂತ್ಯ ಮತ್ತು ಆಗಸ್ಟ್ ತಿಂಗಳ ಪ್ರಥಮಾರ್ಧದಲ್ಲಿ ಬಿತ್ತಿದ ಭತ್ತದ ಬೀಜ ತೆನೆ ಬರುವ ಕಾಲವಾದ್ದರಿಂದ ಬಜ್ಪೆ ಸಮೀಪದ ಎಕ್ಕಾರು, ಕೈಕಂಬ, ಅದ್ಯಪಾಡಿ, ಮಳವೂರು, ಗುರುಪುರ, ಪೊಳಲಿ ಭಾಗದ ರೈತರು ಇಂದಿಗೂ ಭತ್ತದ ಕೃಷಿಯನ್ನು ಅವಲಂಬಿಸಿದ್ದಾರೆ. ಅದ್ಯಪಾಡಿ, ಪೊಳಲಿ, ಗುರುಪುರ, ಎಕ್ಕಾರು ತಗ್ಗು ಪ್ರದೇಶಗಳ ಸಾಲಿನಲ್ಲಿ ಸೇರುವುದರಿಂದ ಇಲ್ಲಿ ಬೇಸಾಯ ಮಳೆಯ ನೀರನ್ನೇ ಅವಲಂಬಿಸಿದೆ. ಹೀಗಾಗಿ ಇಲ್ಲಿ ಗದ್ದೆಗೆ ಅಷ್ಟಾಗಿ ನೀರಿನ ಸಮಸ್ಯೆ ಇರುವುದಿಲ್ಲ. ಗುರುಪುರ, ಅದ್ಯಪಾಡಿ ಭಾಗದಲ್ಲಿ ಫಲ್ಗುಣಿ ನದಿ ಹರಿಯುವುದರಿಂದ ನೆರೆ ನೀರು ಏರಿದಲ್ಲಿ ಭತ್ತದ ಗದ್ದೆಗಳು ನೆರೆನೀರಿನಿಂದ ಆವೃತ್ತವಾಗುತ್ತದೆ. ಹೀಗಾಗಿ ಎಷ್ಟೇ ಕಷ್ಟಪಟ್ಟು ವ್ಯವಸಾಯ ಮಾಡಿದರೂ ಮಳೆಯ ಸಮಸ್ಯೆಯಿಂದ ನಿರೀಕ್ಷಿತ ಫಸಲು ದೊರೆಯುವುದಿಲ್ಲ ಎನ್ನುತ್ತಾರೆ ಈ ಭಾಗದ ರೈತರು.

ಎಕ್ಕಾರು, ಕೊಡೆತ್ತೂರು ಭಾಗದ ರೈತರು ಭತ್ತದ ಬೇಸಾಯದಲ್ಲಿ ಮುಂದಿದ್ದಾರೆ. ನಂದಿನಿ ನದಿ ಈ ಭಾಗದಲ್ಲಿ ಹರಿಯುವ ಕಾರಣ ನೀರಿಗೆ ಏನೂ ಸಮಸ್ಯೆಯಿರುವುದಿಲ್ಲ. ಆದರೆ ಬೆಂಬಿಡದೆ ವಾರಗಳ ಕಾಲ ಮಳೆ ಸುರಿದರೆ ಭತ್ತದ ಗದ್ದೆ ಸಂಪೂರ್ಣ ಜಲಾವೃತವಾಗುವುದೂ ಇದೆ. ಮಳೆಯನ್ನೇ ಅವಲಂಬಿಸಿರುವ ಗದ್ದೆಯನ್ನು ಉತ್ತು, ಬಿತ್ತು ಹದಮಾಡುವ ಜೂನ್, ಜುಲೈ ತಿಂಗಳಲ್ಲಿ ಮಳೆ ಬಂದರೆ ಬೆಳೆಗೆ ಅಷ್ಟಾಗಿ ಸಮಸ್ಯೆ ಬಾರದು. ಆದರೆ ಆಗಸ್ಟ್ ತಿಂಗಳ ಮಳೆ ರೈತರು ದ್ವೇಷಿಸುವಂಥದ್ದೇ. ಕಾರಣ ಆಗಷ್ಟೇ ಮೇಲೆ ಬಂದಿರುವ ತೆನೆ ಜಾಸ್ತಿ ಮಳೆಯಾದರೆ ಕೊಚ್ಚಿ ಹೋಗುತ್ತದೆ. ಹೀಗಾಗಿ ಭತ್ತ ಬೆಳೆಯಲು ಮನಸ್ಸಿದ್ದರೆ ಸಾಲದು, ಮಳೆರಾಯನೂ ಕೈಹಿಡಿಯಬೇಕು ಎನ್ನುವುದು ರೈತರ ಮಾತುಗಳು. ಬೇಸಾಯ ಕೆಲಸಕ್ಕೆ ಜನ ಸಿಗಲು ಪರದಾಡಬೇಕಾದ ಈ ಹೊತ್ತಿನಲ್ಲಿ ಹೊರಗಿನಿಂದ ಕೆಲಸದವರನ್ನು ತಂದು ಅವರಿಗೆ ದುಪ್ಪಟ್ಟು ಸಂಬಳ, ಮೀನು ಊಟ, ಬಾಡಿಗೆ ವಾಹನ, ಮಧ್ಯಾಹ್ನ ಮದ್ಯ ಸರಬರಾಜು ಎಲ್ಲವನ್ನೂ ಕೊಡುತ್ತೇವೆಂದು ಕೈ-ಕಾಲು ಹಿಡಿಯಬೇಕಾಗುತ್ತದೆ. ಹೀಗಾಗಿ ರೈತರು ಅನಿವಾರ್ಯ ಕಾರಣದಿಂದ ಹೊರರಾಜ್ಯದ ಕಾರ್ಮಿಕರನ್ನು ನಂಬಿಕೊಂಡು ಗದ್ದೆಗಿಳಿಯುವುದೂ ಇದೆ.

ಬಜ್ಪೆ ಸುತ್ತಮುತ್ತ ಹಿಂದೆ ವರ್ಷದಲ್ಲಿ ಮೂರು ಬೆಳೆ ತೆಗೆಯುವ ಫಲವತ್ತಾದ ಕೃಷಿ ಭೂಮಿ ಇತ್ತು. ಆದರೆ ಈಗ ಬೃಹತ್ ಕಂಪೆನಿಗಳು ಕೃಷಿಭೂಮಿಯನ್ನು ಅಪೋಶನ ತೆಗೆದುಕೊಂಡ ನಂತರ ನಾಲ್ಕನೆ ಒಂದು ಭಾಗದ ಜನರು ಕೃಷಿಯನ್ನು ಅವಲಂಬಿಸಿಲ್ಲ. ಬಜ್ಪೆಯ ಸುತ್ತ ಕಣ್ಣು ಹಾಯಿಸಿದರೆ ಎಲ್ಲೋ ಕೆಲವು ಕಡೆ ಮಹಿಳೆಯರು ನೇಜಿ ನೆಡುವುದು ಕಂಡುಬರುತ್ತದೆ. ದೂರದ ಗದ್ದೆಯಲ್ಲೆಲ್ಲೋ ಸಾಂಪ್ರದಾಯಿಕ ಉಳುಮೆಯ ಬದಲು ಟ್ರಾಕ್ಟರ್ ಗಾಡಿಯ ಸದ್ದು ಕೇಳುತ್ತದೆ. ಕಣ್ಣು ಹಾಯಿಸಿದಷ್ಟೂ ಹಸಿರಾಗಿ ಕಂಗೊಳಿಸುತ್ತಿದ್ದ ಕುಡುಬಿಪದವಿನ ಭತ್ತದ ಗದ್ದೆ, ಕೃಷಿ ಪ್ರದೇಶ ಈಗ ನೆನಪುಗಳಾಗಿ ಮಾತ್ರ ಉಳಿದಿದೆ.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-13

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri