ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.

ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ - ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.

ಕೊಲ್ಲಿನಾಡಿನಲ್ಲಿ ಕನ್ನಡಿಗರ ಆತ್ಮೀಯ,ಅಪ್ಪಟ ಕನ್ನಡಿಗ,ಭಾರತೀಯತೆಯನ್ನು ಎತ್ತಿ ಹಿಡಿಯುವ ಮಂಡ್ಯದ ಮಣ್ಣಿನ ಮಗ ಶ್ರೀ ಜಫ್ರುಲ್ಲಾ ಖಾನ್ ೨೦೧೨ ಆಗಸ್ಟ್ ೫ ನೇ ತಾರೀಕಿನಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಮುಸ್ಲಿಂ ಸಮಾವೇಶದಲ್ಲಿ ಜನತಾ ದಳ (ಜಾತ್ಯಾತೀತ)ಪಕ್ಷವನ್ನು ಸೇರಿ ಈಗ ವಿಧ್ಯುಕ್ತವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಗೌರವದ ಪಟ್ಟವನ್ನು ಸ್ವೀಕರಿಸಿದರು.

ಭಾರತದ ಮಾಜಿ ಪ್ರಧಾನಿ ಮಾನ್ಯ ಎಚ್.ಡಿ.ದೇವೆಗೌಡರವರು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡು ಗೌರವದ ಸ್ಥಾನ ನೀಡಿ ಪದವಿ ಪ್ರಧಾನ ಮಾಡಿದರು.

ಪವಿತ್ರವಾದ ಪ್ರಕೃತಿಯ ಎಲ್ಲಾ ಸಂಪತ್ತನ್ನು ಹೊಂದಿರುವ ಪುಣ್ಯ ಭೂಮಿ ಮಂಡ್ಯದಲ್ಲಿ ಜನಿಸಿರುವ ಜನಾಬ್ ಜಫ್ರುಲಾ ಖಾನ್ ಸುಸಂಸ್ಕೃತ ಪರಿಸರದಲ್ಲಿ ಬೆಳೆದು,ತನ್ನ ಎಳೆಯ ವಯಸ್ಸಿನಲ್ಲೇ ದೇಶ ಪ್ರೇಮ,ಭಾಷಾ ಪ್ರೇಮ,ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು,ಹಸಿದವರಿಗೆ, ನೊಂದವರಿಗೆ ಸಹಾಯಹಸ್ತ ಚಾಚುವ ನೀತಿ ಪಾಠವನ್ನು ತಮ್ಮ ಮಾತೃ ಪಿತೃರಿಂದ ಕಲಿತು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿ ಕೊಂಡ ಅತ್ಯಂತ ಸರಳ ವ್ಯಕ್ತಿ.ತಮ್ಮ ಅಸಾಮಾನ್ಯ ಸಾಧನೆ ಮತ್ತು ಮಹೋನ್ನತ ವ್ಯಕ್ತಿತ್ವದಿಂದ ಜನಮನದಲ್ಲಿ ಮಾನ್ಯತೆ ಪಡೆದ ಜನಾಬ್ ಜಪ್ರುಲ್ಲಾ ಖಾನ್ ರವರು ಹೃದಯ ಶ್ರೀಮಂತಿಕೆಯಲ್ಲಿ ಅತಿ ದೊಡ್ಡ ಶ್ರೀಮಂತರು.

"ಮಂಡ್ಯದ ಗಂಡು" ಎಂದು ಅಭಿಮಾನಿಗಳ ಅಚ್ಚುಮೆಚ್ಚಿನ ಜಫ್ರುಲ್ಲಾ ಖಾನ್ ರವರು ೧೯೯೨ ರಲ್ಲಿ ಗಲ್ಪ್ ನಾಡಿಗೆ ಬಂದು ಸ್ವಂತ ಉಧ್ಯಮ ಸ್ಥಾಪಿಸಿದರು.ಪಂಚತಾರ ಹೊಟೆಲ್,ದುಬಾಯಿಯ ಕೇಂದ್ರ ಸ್ಥಾನದಲ್ಲಿರುವ ಜೈನ್ ಇಂಟರ್ ನ್ಯಾಷನಲ್,ರಾಯಲ್ಟನ್,ಡ್ರೀಮ್ ಲ್ಯಾಂಡ್,ಈಸ್ಟ್ ಹೊಟೆಲ್,ರಿಯಲ್ ಎಸ್ಟೆಟ್ ಮತ್ತು ಯೂರೋ ಟ್ರಾವಲ್ಸ್ ಪ್ರಾರಂಭಿಸಿದರು.

ಗಲ್ಫ್ ನಾಡಿನ ವಿತ್ತ ಸಂಪತ್ತಿನ ಅಭಿವೃದ್ದಿಯಲ್ಲಿ ಉದ್ದಿಮೆದಾರರಾಗಿರುವ ಜಫ್ರುಲ್ಲ ಖಾನ್ ರವರ ಕೊಡುಗೆ ಅಪಾರವಿದೆ.ಭಾರತಿಯರಲ್ಲಿ ಕರ್ನಾಟಕದ ಕನ್ನಡಿಗರಾದ ಜನಾಬ್ ಜಪ್ರುಲಾ ಖಾನ್ ರವರು ಅನಿವಾಸಿ ಭಾರತೀಯರಾಗಿ ತಮ್ಮ ಉದ್ಯಮಗಳಲ್ಲಿ ಕನ್ನಡಿಗರಿಗೆ ಮತ್ತು ಇತರ ದೇಶದವರಿಗೆ ಉದ್ಯೋಗ ನೀಡಿ ಸಾವಿರಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.

ಗಲ್ಫ್ ನಾಡಿನಲ್ಲಿ ಕನ್ನಡ ಭಾಷೆ,ಕಲೆ,ಹಾಗೂ ಭಾರತೀಯ ವೈವಿದ್ಯಮಯ ಸಂಸ್ಕೃತಿಯನ್ನು ಬದ್ರ ಬುನಾದಿಯೊಂದಿಗೆ,ಕರ್ನಾಟಕ ಪರ ಸಂಘಟನೆಗಳನ್ನು ಪೋಷಿಸಿ,ಕನ್ನಡಿಗರನ್ನು ಜಾಗೃತಗೊಳಿಸಿದ ಉದ್ಯಮಿಗಳಲ್ಲಿ ಜನಾಬ್ ಜಫ್ರುಲ್ಲಾ ಖಾನ್ ರವರು ಉನ್ನತ ಸ್ಥಾನದಲ್ಲಿದಾರೆ. ಯು.ಎ.ಇ. ಯಲ್ಲಿ ನಡೆಯುವ ಕನ್ನಡ ವಿಶ್ವ ಸಮ್ಮೇಳನವಾಗಿರಲಿ, ಕನ್ನಡ ರಸಮಂಜರಿಯಾಗಿರಲಿ, ರಾಜ್ಯೋತ್ಸವ ಕಾರ್ಯಕ್ರಮವಿರಲಿ,ಬೆಳ್ಳಿ ಮಹೋತ್ಸವವಾಗಿರಲಿ ಅಥವಾ ಕನ್ನಡ ಭಾಷೆಯಲ್ಲಿ ಮುದ್ರಣವಾಗುವ ಸಂಪುಟ,ಸ್ಮರಣ ಸಂಚಿಕೆ,ಪುಸ್ತಕಗಳಾಗಿರಲಿ ಇವೆಲ್ಲದರ ಹಿಂದೆ ಜಫ್ರುಲ್ಲಾ ಖಾನ್ ರವರ ಪ್ರೋತ್ಸಾಹ,ಬೆಂಬಲ,ಪ್ರಾಯೊಜಕತ್ವ ಇರುತ್ತದೆ.

ದುಬಾಯಿಯಲ್ಲಿರುವ ವಿಶಿಷ್ಟ ವಿನ್ಯಾಸದ ವಾಸ್ತುಶಿಲ್ಪ ಕಡಲಿನ ಮೇಲೆ ನಿರ್ಮಿಸಲಾದ ಜಗತ್ತಿನ ಏಕೈಕ ೭ ಸ್ಟಾರ್ ಹೊಟೆಲಿನ ತುತ್ತತುದಿಯ ಭವ್ಯ ಸಭಾಂಗಣದಲ್ಲಿ ೨೦೦೯ ಮಾರ್ಚ್ ೩೦ನೇ ತಾರೀಕು ಸಂಜೆ ೮ ಗಂಟೆಗೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ವಿವಿಧ ಸಂಘಟನೆಗಳ ಮುಖ್ಯಸ್ತರು ಹಾಗೂ ಹಲವಾರು ಗಣ್ಯರ ಹೃದಯಸ್ಪರ್ಶಿ ಮಿಲನ ದುಬಾಯಿಗೆ ಆಗಮಿಸಿದ ಕರ್ನಾಟಕದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಯವರನ್ನು ಬರ ಮಾಡಿಕೊಂಡು ಜನಾಬ್ ಜಫ್ರುಲ್ಲಾ ಖಾನ್ ರವರು ಸನ್ಮಾನಿಸಿ ಗೌರವಿಸಿದರು.ಭಾರತದಲ್ಲಿ ಜಾತಿ ಮತ ಪಂತದ ಎಲ್ಲೆಯನ್ನು ದಾಟಿ ಅನ್ನ,ಅಕ್ಷರ,ಆರೋಗ್ಯ ಕ್ರಾಂತಿಯನ್ನು ಮಾಡಿದ ಪರಮ ಪೂಜ್ಯ ಜಗದ್ಗುರುವಿನಿಂದ ಗಣ್ಯ ಕನ್ನಡಿಗರು ಆಶೀರ್ವಚನ ಪಡೆದು ಭೋಜನ ಕೂಟದಲ್ಲಿ ಭಾಗಿಯಾಗಿದ್ದು ಯು. ಎ. ಇ. ಯಲ್ಲಿ ದಾಖಾಲೆಯಾಯಿತು.

ಕಳೆದ ತಿಂಗಳು ದುಬಾಯಿಗೆ ಆಗಮಿಸಿದ್ದ ಮಾನ್ಯ ಶ್ರೀ ಎಚ್. ಡಿ. ರೇವಣ್ಣ ರವರಿಗೆ ಜಗಮಗಿಸುವ ಭವ್ಯ ಅಟ್ಲಾಂಟಿಸ್ ಸಭಾಂಗಣದಲ್ಲಿ ಕರ್ನಾಟಕ ಪರ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಆಹ್ವಾನಿಸಿ ಭೋಜನ ಕೂಟವನ್ನು ಏರ್ಪಡಿಸಿದ್ದು ಇನ್ನು ಕೊಲ್ಲಿನಾಡಿನ ಗಣ್ಯರ ಮನದಲ್ಲಿ ಹಸಿರಾಗಿಯೇ ಇದೆ.

ಹಲವಾರು ಸಂಘ ಸಂಸ್ಥೆಗಳಿಂದ ಹಲವು ಬಾರಿ ಸನ್ಮ್ಮಾನ ಗೌರವ ಸಲ್ಲಿಸಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ತೃಪ್ತಿ ಪಟ್ಟುಕೊಂಡು ಮನಸಾರೆ ಅಭಿನಂದಿಸಿದ್ದಾರೆ.ಶಾರ್ಜಾ ಕರ್ನಾಟಕ ಸಂಘದ ಅತ್ಯುನ್ನತ ಮಟ್ಟದ ಪ್ರತಿಷ್ಠೆಯ "ಮಯೂರ ಪ್ರಶಸ್ತಿ"ಯನ್ನು ಅರಬ್ ಸಂಯುಕ್ತ ಸಂಸ್ಥಾನದ ಎಲ್ಲಾ ಸಂಘ ಸಂಸ್ಥೆ ಗಳ ಅಧ್ಯಕ್ಷರು ಮತ್ತು ಪದಧಿಕಾರಿಗಳ ಸಮ್ಮುಖದಲ್ಲಿ ನೀಡಿ ಸನ್ಮಾಸಿ ಗೌರವಿಸಿದೆ.ಅಬುಧಾಬಿ ಕರ್ನಾಟಕ ಸಂಘದ "ವಿಶ್ವಮಾನವ ಕುವೆಂಪು ಕಲಾ ಉತ್ಸವ"ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನದಲ್ಲಿ "ಕುವೆಂಪು ವಿಶ್ವ ಮಾನವ ಪ್ರಶಸ್ತಿ -೨೦೧೨"ನೀಡಿ ಗೌರವಿಸಲಾಗಿದೆ.ದುಬಾಯಿ ಕರ್ನಾಟಕ ಸಂಘದ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಗಿದೆ.೨೦೦೫ ರಲ್ಲಿ ರಾಷ್ಟ್ರೀಯ ನೆಹರೂ ಪ್ರಶಸ್ತಿಯನ್ನು ಪಡೆದಿರುವ ಜಫ್ರುಲ್ಲಾ ಖಾನ್ ರವರು ಗೌಸಿಯಾ ಎಜುಕೆಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.ವಿಶ್ವ ವಕ್ಕಲಿಗರ ಮಹಾ ಸಂಸ್ಥಾನ ಮಂಡ್ಯ ಇದರ ಪ್ರಧಾನ ಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ಚಲನ ಚಿತ್ರರಂಗದ ತಾರೆಗಳು,ರಾಜಕೀಯ ವ್ಯಕ್ತಿಗಳು,ಅಧಿಕಾರ ವರ್ಗದವರು, ಸಚಿವರುಗಳು ಸದಾ ಇವರ ಸ್ನೇಹದಲ್ಲಿದ್ದು ಸಲಹೆ ಸೂಚನೆಗಳನ್ನು ಪಡೆಯುತ್ತಾ,ಅತಿ ಪ್ರೀತಿಯಿಂದ ಊರಿನ ಜನರ ಬೇಕು ಬೇಡಿಕೆಗಳನ್ನು ಪೊರೈಸುತ್ತಾ ಜಪ್ರುಲ್ಲಾ ಖಾನ್ ರವರ ಮನಸ್ಸನ್ನು ಗೆದ್ದಿದಾರೆ.

ಗಲ್ಪ್ ನಾಡಿಗೆ ಸಿರಿಸಂಪತ್ತನ್ನು ಸಂಪಾದಿಸಲು ಬಂದಿದ್ದಾರೆ,ಎನ್ನುವ ನಮ್ಮ ತಾಯಿನಾಡಿನ ಹೆಚ್ಚಿನ ಜನರಲ್ಲಿರುವ ಕಲ್ಪನೆಯನ್ನು ಹುಸಿಯಾಗಿಸಿ,ದುಡಿಮೆಯೇ ದುಡ್ಡಿನ ದೇವರು,ಸಮಯ ಅತ್ಯಂತ ಅಮೂಲ್ಯವಾದುದ್ದು ಎನ್ನುವುದು ಪ್ರತ್ಯಕ್ಷವಾಗಿ ತೋರಿಸಿಕೊಟ್ಟು,ನಮ್ಮ ವ್ಯಾವಹಾರಿಕ ಭಾಷೆ ಅಂತರಾಷ್ಟ್ರೀಯವಾದರೂ ನಮ್ಮ ಉಸಿರು ಕನ್ನಡ,ನಮ್ಮ ಆತ್ಮೀಯ ಬಂಧುಗಳಿಗೆ ಸ್ನೇಹಿತರಿಗೆ,ದೇಶ ಭಕ್ತಿ,ಭಾಷಾಭಿಮಾನದ ಕಿವಿ ಮಾತನ್ನು ನೀಡಿ ಮುಂದಿನ ಪೀಳಿಗೆಗೆ ನಮ್ಮ ಜನ್ಮ ಭೂಮಿಯ ಸಂಸ್ಕೃತಿಯಯನ್ನು ಉಳಿಸುವ ಕರೆ ನೀಡುತ್ತಾ ಜನಾಬ್ ಜಪ್ರುಲ್ಲಾ ಖಾನ್ ಭಾರತೀಯರಾಗಿ ಆತ್ಮ ತೃಪ್ತಿ ಅವರ ಮುಖದಲ್ಲಿ ಮಿಂಚುವ ಒಂದು ಸುಂದರ ನಗುವಿನಲ್ಲಿ ಕಾಣಬಹುದಾಗಿದೆ.

ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವ ಶ್ರೀ ಜಫ್ರುಲ್ಲಾ ಖಾನ್ ಈ ಮೊದಲು ರಾಜಕೀಯದಲ್ಲಿ ಗುರುತ್ತಿಸಿಕೊಳ್ಳದಿದ್ದರೂ ದಶಕಗಳಿಂದ ಬಡವರ ದೀನ ದಲಿತರ ಸೇವೆಯಲ್ಲಿ ತೃಪ್ತಿ ಕಂಡವರು.ಮುಂಬರುವ ದಿನಗಳಲ್ಲಿ ಜಾತ್ಯಾತೀತ ಜನತಾ ದಳ ಪಕ್ಷವನ್ನು ಅಧಿಕಾರಕ್ಕೆ ತಂದು ಪ್ರಾದೇಶಿಕ ಪಕ್ಷ ಅಧಿಕಾರ ನಡೆಸುವಂತಾಗುವ ಗುರಿಯನ್ನು ಹೊಂದಿದ್ದು.ರಾಜ್ಯಾದಾದ್ಯಂತ ಉತ್ತಮ ಪ್ರತಿಕ್ರಿಯೇ ದೊರೆತ್ತಿರುವ ಜನತೆ ಮೆಚ್ಚಿರುವ ಜನತಾ ದಳ ಪಕ್ಷಕ್ಕೆ ಶ್ರೀ ಜಫ್ರುಲ್ಲಾ ಖಾನ್ ಸೇರ್ಪಡೆಯಾಗಿದ್ದು ಒಂದು ಆಶಾಕಿರಣ ಮೂಡಿದಂತಾಗಿದೆ.

ಅಪಾರ ಸರ್ವ ಧರ್ಮೀಯರ ಸ್ನೇಹವನ್ನು ಸಂಪಾದಿಸಿರುವ ಶ್ರೀ ಜಫ್ರುಲ್ಲಾ ಖಾನ್ ರವರ್ ಮುಂದಿನ ಹೆಜ್ಜೆ ಯಶಸ್ವಿಯಾಗಿರಲಿ.ಬಹು ನಿರೀಕ್ಷಿತ ಜನತಾ ದಳ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಲಿ ಎಂದು ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು,ಯಶಸ್ಸನ್ನು ಹಾರೈಸಲು ಗಲ್ಫ್ ಕನ್ನಡಿಗ ಹರ್ಷಿಸುತ್ತದೆ.

"ಚಕ್ರವರ್ತಿ"

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-12

Tell a Friend

ಪ್ರತಿಸ್ಪಂದನ
Jayant, MUMBAI/DUBAI
2012-08-22
ಜಫ್ರುಲ್ಲಃ ಖಾನ್ ಸಾಹೇಬರಿಗೆ ಅಭಿನಂದನೆಗಳು. ಪ್ರಥಮ ಅನಿವಾಸಿ ಕನ್ನಡಿಗ ಕರ್ನಾಟಕದ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿದ್ದೀರಾ. ನಿಮ್ಮಿಂದ ಕೊಲ್ಲಿ ರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಬೇಕಾದ ಸಹಾಯ ಸಿಗಲಿ ಎಂದು ಕರ್ನಾಟಕ ಸಂಘ ದುಬೈಯ ಕಾರ್ಯಕಾರಿ ಸಮಿತಿ ಪರವಾಗಿ ಹಾರೈಸುತ್ತೇವೆ
yuvaraj, sharjah
2012-08-18
ಉತ್ತಮವಾದ ಉನ್ನತ ಸ್ಥಾನವನ್ನ ಬಹಳ ಯೋಗ್ಯವಾದ ವ್ಯಕ್ತಿಯಾದ ಮಂಡ್ಯದ ಗಂಡು ಜನಾಬ್ ಜಫ್ಫ್ರುಲ್ಲ ಖಾನ್ ಅವರಿಗೆ ನೀಡಿ ಜಾತ್ಯತ ಜನತಾ ದಳ ಇವತ್ತು ಒಂದು ಉತ್ತಮವಾದ ಹೆಜ್ಜೆ ಹಾಕಿದೆ ಎಂಬುದರಲ್ಲಿ ತಪ್ಪಿಲ್ಲ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ ಜನಾಬ್ ಜಫ್ಫ್ರುಲ್ಲ ಖಾನ್ ಅವರಿಗೆ ಅಭಿನಂದನೆಗಳು
Murugesh. Gajare, Basava Samithi, Dubai
2012-08-15
ಜನಾಬ್ ಜಫ್ರುಲ್ಲ ಖಾನ್ ಅವರಿಗೆ ಬಸವ ಸಮಿತಿ ದುಬೈ, ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಆ ದೇವರು ನಿಮಗೆ ಕನ್ನಡ ಜನಸೇವೆ ಮಾಡಲು ಅವಕಾಶ ಕಲ್ಪಿಸಲಿ ಎಂದು "ಈದ್ ಮುಬಾರಕ್" ದೊಂದಿಗೆ ಶುಭ ಹಾರೈಸುವ - ಮುರುಗೇಶ್ ಗಾಜರೆ. ಹಾಗು ಈ ಲೇಖನದ ವರದಿಗಾರರಿಗೆ ಧನ್ಯವಾದಗಳು.
M.E.Moolur, Dubai/Udupi
2012-08-15
It is in deed a very pleasant news for us in BCF that our Chief Advisor has entered the Indian national Politics in a big way he deserves.

Mr.Zafarulla Khan, who is a great philanthropist NRI, an outstanding orator, an easy accessible, magnanimous hearted human being, and a very successful business tycoon, is one of the most known NRI Indian and a very popular Kannadiga not only in Mandya but in the entire Karnataka.

We are sure that as the Hon. National General Secretary of JDS, he is going to be the voice of AAM JANATHA in general and for Kannadigas in particular.

We are proud of you Mr.Zafarulla Khan Saab and we sincerely hope you will make use of your esteemed position to the fullest benefit of our nation and our people. May God Bless you, -M.E.MOOLUR. (On behalf of BCF)

Mohamed Ali Uchil, Abu Dhbai
2012-08-14
ಪ್ರೀತಿಯ ಖಾನ್ ಸಾಹೇಬರಿಗೆ ಆತ್ಮಿಯ ಅಬಿನಂದನೆಗಳು.ಅಲ್ಲಾಹು ನಿಮಗೆ ಇನ್ನು ಉನ್ನತಿಯನ್ನು ಕರುಣಿಸಲಿ.
Balakrishna M Salian , Yermal Bada / Dubai
2012-08-14
ಶ್ರೀಯುತ ಜಫರುಲ್ಲ ಖಾನ್ ಅವರಿಗೆ ಮೊಗವೀರ್ಸ್ ಯು. ಎ. ಇ ಪರವಾಗಿ ಅಭಿನದನೆಗಳು.

ತಾವು ಇನ್ನೂ ಹೆಚ್ಹಿನ ರಾಜ್ಯೋದ್ದಾರ / ದೆಶೋದ್ದಾರ ಕೆಲಸವನ್ನು ಮಾಡಲು ನಿಮಗೆ ಆ ಅಲ್ಲಾ / ಭಗವಂತನು ಇನ್ನೂ ಹೆಚ್ಹಿನ ಶಕ್ತಿ ,ಧಯ್ರಿಯವನ್ನು ಹಾಗೂ ಆಯುರಾರೋಗ್ಯವನ್ನು ಕರುಣಿಸಿ ಸುಖವಾಗಿರಿಸಲಿ ಎಂದು ಮೊಗವೀರ್ಸ್ ಯು.ಎ.ಇ. ಯಾ ಎಲ್ಲಾ ಬಾನ್ದವರು ಸೇರಿ ದೇವರಲ್ಲಿ ಪ್ರಾರ್ಥಿಸುತ್ತೇವೆ.

Balakrishna M Salian, Vice President, Mogaveers UAE

ashraf alike, mangloore
2012-08-14
ಕನ್ನಡ ಖಾನ್ ಸಾಬ್ ಗೆ ಅಭಿನಂದನೆಗಳು
ರಫೀಕ್ ದಲ್ಕಾಜೆ , ಕೋಲ್ಪೆ
2012-08-14
ಜನಾಬ್ ಜಫರುಲ್ಲಾ ಖಾನ್ ರವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ್ದು ಸಂತಸ ತಂದಿದೆ, ಅವರಿಗೆ ನನ್ನ ಅಭಿನಂದನೆಗಳು.

ಜನಾಬ್ ಜಫರುಲ್ಲಾ ಖಾನ್ ರವರು ಏಕಾಂಗಿ ಜನಪರ ಸೇವೆಗಳ ಬಗ್ಗೆ ಗಲ್ಫ್ ಕನ್ನಡಿಗರಿಗೆ ಮನವರಿಕೆ ಮಾಡಿ ಕೊಡುವ ಅಗತ್ಯವಿಲ್ಲ ಅಂತ ಕಾಣುತ್ತೆ, ಇವರು ಈಗ ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ಹೊಸ ಆಯಾಮ ಸಿಕ್ಕಿದಂತಾಗಿದೆ. ಇದರಿಂದ ದೇಶ ವಿದೇಶಗಳಲ್ಲಿ ಇನ್ನಷ್ಟು ಜನಪರ ಸೇವೆ ವೃದ್ದಿಸಲಿ ಎಂಬುವುದೇ ನನ್ನ ಅಭಿಲಾಷೆ, ಹಾಗೂ ಇವರ ಮುಂದಿನ ದಿನದ ಸಹಾಯ ಸಹಕಾರದಿಂದ ಗಲ್ಫ್ ರಾಷ್ಟ್ರದಲ್ಲಿರುವ ಕಾರ್ಯಚರಿಸುತ್ತಿರುವ ಕನ್ನಡ ಪರ ಸಂಘಟನೆಗಳು ಇನ್ನಸಹ್ತು ಬಲಿಷ್ಠ ಗೊಳ್ಳಲಿ ಎಂದು ನನ್ನ ಹಾರೈಕೆ.

Narayan Badakere, Dubai
2012-08-14
"Congratulation" and wish you all the success. we need person like you to clean up the system and we have lot of hopes from you.
ಸತೀಶ್ ಪೂಜಾರಿ, ಶಾರ್ಜಾ
2012-08-14
ಕೊಲ್ಲಿ ನಾಡಿನ ಕನ್ನಡಿಗರ ಅಪಾರ ಅಭಿಮಾನ ಗಳಿಸಿರುವ ಶ್ರೀ ಜಫ್ರುಲ್ಲ ಖಾನ್ ರವರೇ ತಮ್ಮ ವ್ಯಕ್ತಿತ್ವ ಅತ್ಯಂತ ಎತ್ತರ ಸ್ಥಾನದಲ್ಲಿದ್ದು ಸಂಘ ಸಂಸ್ಥೆಗಳ ಮುನ್ನಡೆಗೆ ತಾವು ನೀಡುತ್ತಿರುವ ಪ್ರೋತ್ಸಾಹ, ಬೆಂಬಲ, ಸಹಾಯ ಈ ನಾಡಿನಲ್ಲಿ ಕನ್ನಡ ಭಾಷೆ, ಕಲೆ ಸಂಸ್ಕೃತಿ ಹಸಿರಾಗಿರಿಸಿದೆ.

ಜನ್ಮ ಭೂಮಿಯಲ್ಲಿ ತಮ್ಮ ರಾಜಕೀಯ ಪ್ರವೇಶ ಬಡವರ, ದೀನ ದಲಿತರ ಸೇವೆಗೆ ಇನ್ನು ಹೆಚ್ಚಿನ ಅವಕಾಶ ಲಭ್ಯವಾಗಲಿದೆ. ಅತ್ಯಂತ ಉನ್ನತ ಮಟ್ಟದ ಜವಾಬ್ದಾರಿಯುತ ಹುದ್ಧೆಯನ್ನು ವಹಿಸಿಕೊಂಡಿರುವ ತಮ್ಮ ಮುಂದಿನ ಕಾರ್ಯಯೋಜನೆ ಫಲಪ್ರದವಾಗಲಿ ಎಂದು ಸರ್ವ ಸದಸ್ಯರ ಪರವಾಗಿ ಹಾರೈಸುತ್ತೇವೆ.

ಅತ್ಯುತ್ತಮ ಅಭಿನಂದನಾ ಲೇಖನ ಪ್ರಕಟಿಸಿದ ಗಲ್ಫ್ ಕನ್ನಡಿಗಕ್ಕೆ ಧನ್ಯವಾದಗಳು.

ಸತೀಶ್ ಪೂಜಾರಿ, ಅಧ್ಯಕ್ಷರು, ಕರ್ನಾಟಕ ಸಂಘ ಶಾರ್ಜಾ

Aruna Muthugadur, Davangere
2012-08-13
ಶ್ರೀಯುತ ಜಫರುಲ್ಲ ಖಾನ್ ಅವರಿಗೆ ಕನ್ನಡ ಕೂಟ ಯು. ಎ. ಇ ಪರವಾಗಿ ಅಭಿನದನೆಗಳು. ತಮ್ಮ ಕೈಯಲ್ಲಿ ಅಧಿಕಾರ ಸಿಕ್ಕರೆ ಕನ್ನಡಿಗರು ಉದ್ದಾರ ಆಗೋದು ಶೇಕಡಾ ನೂರಕ್ಕೆ ನೂರು ಸತ್ಯ

ದೇವರು ತಮಗೆ ಆಯುರಾರೋಗ್ಯವನ್ನು ಕರುಣಿಸಿ ಸುಖವಾಗಿರಿಸಲಿ ಎಂದು ಕನ್ನಡ ಕೂಟ ಯು.ಎ.ಇ. ಯಾ ಎಲ್ಲ ನಿರ್ಧೇಶಕರು ಸೇರಿ ದೇವರಲ್ಲಿ ಪ್ರಾರ್ಥಿಸುತ್ತೇವೆ.

Sudhakar , Thumbay
2012-08-13
"CONGRATS" shri Zafrulla Saab, wish u all the best. **RAMADAN MUBARAK** behalf of All Members "Shri Shanaishchara Seva Samithi"-DUBAI
MOHAMMAD KHALID, TURUVEKERE
2012-08-13
ದಯವಿಟ್ಟು ನನಗೆ ಜಫ್ರುಲ್ಲ ಅಣ್ಣನವರ ಮೊಬೈಲ್ ಪೋನ್ ಕೊಡಿ.
ನಿತ್ಯಾನಂದ ಬೆಸ್ಕೂರ್ , ಉಡುಪಿ, ದುಬೈ
2012-08-13
ಜನಾಬ್ ಜಫ್ರುಲ್ಲ ಖಾನ್ ರಿಗೆ ಕುಂದಾಪುರ ದೇವಾಡಿಗ ಮಿತ್ರದ( ಕದಂ ದುಬೈ) ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಈ ಹುದ್ದೆಗೆ ನೀವು ತಕ್ಕ ವ್ಯಕ್ತಿ. ನಿಮ್ಮ ನಾಯಕತ್ವ ಮೌಲ್ಯ ಬರಿತ ರಾಜಕೀಯಕ್ಕೆ ನಾಂದಿಯಾಗಲಿ..
bekal s raj, SHJ
2012-08-13
ಅಭಿನಂದನೆ ಸರ್
Sarvotham Shetty, Abu Dhabi
2012-08-13
Congratulations Zafrulla Saab and on behalf of UAE Kannadiga's my best wishes to you for your political carreer. May Allah bless you always. Thanks to Gulfkannadiga.com for the brief report with photographs.
ಈರಣ್ಣ ಮೂಲೀಮನಿ , ದುಬೈ
2012-08-13
"ಪವಿತ್ರ ರಮದಾನ್" ತಿಂಗಳಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದೀರಿ. ಹೊರನಾಡಿನ ಕನ್ನಡಿಗರಿಗೆ ಸ್ಪಂದಿಸಿದಂತೆ,ತಾಯ್ನಾಡಿಗೂ ಸೇವೆ ಸಲ್ಲಿಸುವ ಕರ್ತವ್ಯದ ಹೊಣೆ ನಿಮ್ಮದಾಗಿದೆ. ಪಕ್ಷ ಯಾವುದೇ ಇರಲಿ, ಆ ದೇವರು ನಿಮಗೆ ನಿಶ್ಚಲ, ನಿಸ್ವಾರ್ಥ ಜನಸೇವೆ ಸಲ್ಲಿಸುವ ಹೆಚ್ಚಿನ ಶಕ್ತಿ ನೀಡಲಿ ಎಂದು ಶುಭ ಹಾರೈಸುವ-ಈರಣ್ಣ ಮೂಲೀಮನಿ.
ಅನಿವಾಸಿ ಕನ್ನಡಿಗ , ಯು.ಎ.ಇ.
2012-08-12
ಶ್ರೀಯುತ ಜಫ್ರುಲ್ಲಾ ಖಾನ್ ರವರು ಎದುರಿಗೆ ಸಿಕ್ಕಿದರೆ ಮೊದಲು ಒಂದು "ನಮಸ್ಕಾರ" ಅಚ್ಚ ಕನ್ನಡಿಗರಾಗಿರುವ ಇವರ ಮೋಬೈಲ್ ಟೋನ್ "ಸಾರೆ ಜಾಂಹಸೆ ಅಚ್ಚಾ" ಅಪ್ಪಟ ಭಾರತೀಯರಾಗಿ ಕೊಲ್ಲಿನಾಡಿನ ಕನ್ನಡಿಗರ ಮನ ಗೆದ್ದಿರುವ ಖಾನ್ ಸಾಬ್ ಚೆಕ್ ಗೆ ಸಹಿಮಾಡುವಾಗ ಕನ್ನಡ ಉರ್ದು ಹಿಂದಿ ಇಂಗ್ಲಿಷ್ ಎಲ್ಲಾ ಭಾಷೆಯ ಪದಗಳನ್ನು ಬಳಸಿ ಸಹಿ ಹಾಕುವ ಇವರ ಭಾಷಾ ಪ್ರೇಮಕ್ಕೆ ಸರಿ ಸಾಟಿ ಇಲ್ಲ.

ಜನಾಬ್ ತಮ್ಮ ನಿರ್ಧಾರಕ್ಕೆ ಅಭಿನಂದನೆಗಳು. ಶುಭವಾಗಲಿ. ಪೂರ್ಣ ಮಾಹಿತಿಯೊಂದಿಗೆ ಗಲ್ಫ್ ಕನ್ನಡಿಗದ ಪ್ರಕಟಣೆಗೆ ಧನ್ಯವಾದಗಳು.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»New pension scheme for Indians in UAE
»ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
»Restaurant manager of Arab Udupi Restaurant in Bur Dubai charred to death in blaze
»ಅ.5ರಂದು ’ನಮ ತುಳುವೆರ್ ’ ಸಾದರಪಡಿಸುವ ತುಳು ಪರ್ಬ ಸಂಭ್ರಮಕ್ಕೆ ಭರದ ಸಿದ್ದತೆ : ಡಾ.ವಿವೆಕ್ ರೈ, ಡಾ.ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತುಳುವರ ಮಹೋನ್ನತ ಸಾಂಸ್ಕೃತಿಕ ಹಬ್ಬ
»Dubai: US woman jumps to death from 10th floor in Marina area
»ಯಶಸ್ವಿ ರಕ್ತದಾನದ ಶಿಬಿರದ ಮೂಲಕ ಯು.ಎ.ಇ. ಸರ್ಕಾರದ ದಾಖಲೆಯಲ್ಲಿ 'ಉಸ್ವಾಸ್' ಸೇರ್ಪಡೆ
»ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರಿಗೆ ದುಬಾಯಿಯಲ್ಲಿ ಗೌರವ ಸಲ್ಲಿಕೆ
»ರಾಸ್ ಅಲ್ ಕೈಮ: ಕಾರು ಅಫಘಾತದಲ್ಲಿ ಮೂರು ಭಾರತೀಯರ ದಾರುಣ ಮರಣ
»ಯು.ಎ.ಇ ಯ ಪ್ರಭಾವಯುತ ಭಾರತೀಯರ ಪಟ್ಟಿಯಲ್ಲಿ ತುಂಬೆ ಮೊಯಿದ್ದೀನ್
»ದುಬೈ ಮಾಲ್ ನಲ್ಲಿ ಬೆಂಕಿ. ಗ್ರಾಹಕರ ಸ್ಥಳಾಂತರ; ಸುರಕ್ಷಿತ
»ಅಬುದಾಬಿ:ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ
»ರಂಜಾನ್ ಮತ್ತು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯು.ಎ.ಇ. ಬಸವ ಸಮಿತಿ ಆಶ್ರಯದಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ
»ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ
»ಎನ್ನಾರೈಗಳು ಹೆಚ್ಚು ಚಿನ್ನ ತರಲು ಕೇಂದ್ರಕ್ಕೆ ಭಾರತೀಯ ರಾಯಭಾರ ಕಚೇರಿ ಪ್ರಸ್ತಾವನೆ
»ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ
»ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ
»Police explains what is the speed grace margin for Dubai roads
»ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ವತಿಯಿಂದ ದುಬಾಯಿಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ
»ಬ್ಯಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಇಪ್ತಾರ್ ಕೂಟ; ಎಲ್ಲಾ ಸಮುದಾಯದ 400 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧಾರ
»ಡಾ. ಬಿ. ಆರ್. ಶೆಟ್ಟಿಯವರ ಜನ್ಮದಿನಾಚರಣೆ... ರಕ್ತದಾನ ಶಿಭಿರದ ಮೂಲಕ ಶುಭ ಹಾರೈಸಿದ ಎನ್ ಎಂ. ಸಿ ಟ್ರೇಡಿಂಗ್ ಅಲ್ ಐನ್ ಸಿಬ್ಬಂದಿವರ್ಗ.
»30ಸಾವಿರ ದಿರಹಂನೊಂದಿಗೆ ಶಾರ್ಜಾದಲ್ಲಿ ಭಿಕ್ಷುಕನ ಬಂಧನ
»ಯುಎಇಗೆ ಮುಸುಕಿದ ಧೂಳಿನ ಚಾದರ :ತಾಪಮಾನ 49.4ಡಿಗ್ರಿ ಬಾಧಿಸುವ ಸಾಧ್ಯತೆ
»ವೈದ್ಯಕೀಯ ರಜೆ ಸರ್ಟಿಫಿಕೇಟಿಗೆ ಎಮಿರೇಟ್ ಗುರುತು ಪತ್ರ ಅಗತ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri