ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕಾಡಿದ ಒಲಿಂಪಿಕ್ಸ್ ಚಿತ್ರಗಳ ಸುತ್ತಮುತ್ತ...

ಹದಿನಾರು ದಿನಗಳ ಒಲಿಂಪಿಕ್ ಉತ್ಸವದಲ್ಲಿ ಎಷ್ಟೊಂದು ಚಿತ್ರಗಳು? ಒಂದೇ ಎರಡೇ? ನೂರು ಮತ್ತು ಇನ್ನೂರು ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ ಜಮೈಕಾದ ಧಾಂಡಿಗರು, ಈಜುಕೊಳದಲ್ಲಿ ಮಹಿಳೆಯರ ಸಿಂಕ್ರನೈಸ್ಡ್ ಈಜು ವಿಭಾಗದ ಡ್ಯುಯೆಟ್ಸ್ ಸ್ಪರ್ಧೆಯಲ್ಲಿ ಮೀನಿನಂತೆ ಕಸರತ್ತು ಮಾಡಿದ ರಷ್ಯನ್ನರು, ಜಿಮ್ನಾಸ್ಟಿಕ್‌ನಲ್ಲಿ ಕಂಬಿಗಳ ಮೇಲೆ ಕಲಾತ್ಮಕವಾಗಿ ಮೈ ಮಣಿಸಿದ ಅಮೆರಿಕನ್ನರು... ಪತ್ರಿಕೆಗಳ ಪುಟಗಳನ್ನು ತಿರುವಿ ಹಾಕುತ್ತ ಮನಸ್ಸು ಎಲ್ಲೋ ಗಕ್ಕನೆ ಇಥಿಯೋಪಿಯಾದ ಕ್ರೀಡಾಪಟುಗಳ ಮೇಲೆ ನೆಟ್ಟು ನಿಂತಿತು. ಗಾಢ ಕಪ್ಪು ಬಣ್ಣ. ಅಷ್ಟೇನೂ ದೃಢವಲ್ಲದ ನೀಳ ಕಾಯ. ಆ ದೇಶದ ಇತಿಹಾಸ ಹುಡುಕುತ್ತ ಹೋದರೆ ದಟ್ಟ ದಾರಿದ್ರ್ಯ. ಅನಕ್ಷರತೆ, ನಿರುದ್ಯೋಗ. ಹಸಿವು... ಒಲಿಂಪಿಕ್ ಪದಕ ಪಟ್ಟಿಯನ್ನು ಹುಡುಕಿದೆ. ಭಾರತಕ್ಕಿಂತ 56 ವರ್ಷಗಳ ನಂತರ ಒಲಿಂಪಿಕ್ ಅಂಗಣಕ್ಕೆ ಇಳಿದ ಇಥಿಯೋಪಿಯ ನಮಗಿಂತ ಮುಂದೆ ಇದೆ!

ಅದು ದೊಡ್ಡ ದೇಶವೇನೂ ಅಲ್ಲ. ಮೂರು ಕೋಟಿ ಜನಸಂಖ್ಯೆ. 11 ಲಕ್ಷ ಚದರ ಕಿಲೋ ಮೀಟರ್ ಭೂ ಪ್ರದೇಶ. ಅಲ್ಲಿ ನಿತ್ಯ ಬರ. ಕೃಷಿ ಉತ್ಪನ್ನ ನಗಣ್ಯ. ತಲಾ ಆದಾಯ ನೂರು ಡಾಲರ್ ಮಾತ್ರ. ಬಹುತೇಕ ಮಕ್ಕಳಿಗೆ ಏಳು ವರ್ಷಗಳ ಶಿಕ್ಷಣ ಮುಗಿಸುವುದೂ ಆಗುವುದಿಲ್ಲ. `ಅವರಿಗೆಲ್ಲ ಒಂದಿಷ್ಟು ಶಿಕ್ಷಣ ಸಿಗುತ್ತದೆ`. ಅಬ್ಬಬ್ಬ ಅಂದರೆ ಅವರಿಗೆಲ್ಲ ಕೊಂಚ ಬರೆಯಲು, ಕೊಂಚ ಓದಲು ಬರುತ್ತದೆ ಅಷ್ಟೇ. ಅಲ್ಲಿ ಶಾಲೆಗಳು ತೀರಾ ಕಡಿಮೆ. ಇರುವ ಶಾಲೆಗಳಲ್ಲಿ ಪುಸ್ತಕಗಳು ಇಲ್ಲ. ಪಠ್ಯ ಸಾಮಗ್ರಿ ಇಲ್ಲ. ಮೇಜು-ಕುರ್ಚಿಗಳು ಇಲ್ಲ. ಯಾವ ಶಾಲೆಯಲ್ಲಿಯೂ ಶೌಚಾಲಯಗಳು ಇಲ್ಲ... ಆದರೂ ಅಲ್ಲಿನ ಯುವಕ ಯುವತಿಯರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಓಡುತ್ತಿದ್ದಾರೆ. ಓಡಿ ಚಿನ್ನದ ಪದಕ ಗೆಲ್ಲುತ್ತಿದ್ದಾರೆ.

ಬಡವರು ಗುರಿ ಮುಟ್ಟಲು ಬಹುದೂರ ಓಡಬೇಕು. ಇಥಿಯೋಪಿಯದ ಸ್ಪರ್ಧಿಗಳು ದೂರದ ಓಟದಲ್ಲಿಯೇ ಚಿನ್ನ ಗಳಿಸುತ್ತಿದ್ದಾರೆ. ಇದು ಕಾಕತಾಳೀಯ ಇರಲಾರದು. ಹತ್ತು ಸಾವಿರ ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಅವರು ಐದು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಸಾರಿಯ ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದ ಟಿಕಿ ಗೆಲಾನ್ ಕೂಡ ಇಥಿಯೋಪಿಯದವಳೇ.

ಕತ್ತಲೆಯ ಈ ದೇಶದಲ್ಲಿ ಓಟದ ಬೆಳಕು ಕಂಡುದು 1960ರಲ್ಲಿ. ಆ ವರ್ಷ ನಡೆದ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದ ಅಬೆಬೆ ಬಿಕಿಲನ ಬದುಕೇ ಬದಲಾಗಿ ಹೋಯಿತು. ಆತ ಇತರರಿಗೂ ಬೆಳಕಾದ. ಎಲ್ಲರೂ ಅವನ ಹಾಗೇ ಓಡತೊಡಗಿದರು.

ಹನ್ನೆರಡು ವರ್ಷಗಳ ಹಿಂದೆ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಇಥಿಯೋಪಿಯ ಸ್ಪರ್ಧಿಗಳು ನಾಲ್ಕು ಚಿನ್ನ ಸೇರಿ ಒಟ್ಟು ಎಂಟು ಪದಕಗಳನ್ನು ಗೆದ್ದಿದ್ದರು. ಇದುವರೆಗೆ ಆ ದೇಶ ಗೆದ್ದ ಒಟ್ಟು ಪದಕಗಳ ಸಂಖ್ಯೆ 20 ಚಿನ್ನವೂ ಸೇರಿ 42. 112 ವರ್ಷಗಳಿಂದ ಒಲಿಂಪಿಕ್ಸ್‌ಗೆ ಹೋಗಿ ಬರುತ್ತಿರುವ ಭಾರತ ಗೆದ್ದುದು ಎಂಟು ಚಿನ್ನ ಸೇರಿ 24 ಪದಕಗಳು!

ಭಾರತ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದೇ ಇಲ್ಲ. ಗೆಲ್ಲಲು ಇನ್ನೂ ಬಲುದೂರ ಸಾಗಬೇಕೆನಿಸಿದೆ. ಒಲಿಂಪಿಕ್ಸ್ ಪದಕ ಗೆಲ್ಲುವಿಕೆಯಲ್ಲಿ ಒಂದು `ಸಾಮಾನ್ಯ ವಿಧಾನ` ಇದ್ದಂತೆ ಕಾಣುತ್ತದೆ. ಓಟದಲ್ಲಿ ಆಫ್ರಿಕಾ ಮೂಲದವರು, ಜಿಮ್ನಾಸ್ಟಿಕ್ಸ್‌ನಲ್ಲಿ `ಮಂಗೋಲಾಯ್ಡ` ಮೂಲದವರು, ಭಾರ ಎತ್ತುವ ಸ್ಪರ್ಧೆಗಳಲ್ಲಿ ಇರಾನ್, ಕಜಕಸ್ತಾನದವರು, ಈಜು ಸ್ಪರ್ಧೆಗಳಲ್ಲಿ ಅಮೆರಿಕ, ಆಸ್ಟ್ರೇಲಿಯಾದವರು ಮತ್ತು ರಷ್ಯನ್ನರು ಪದಕ ಗೆಲ್ಲುವುದರಲ್ಲಿ ಈ `ಸಾಮಾನ್ಯ ವಿಧಾನ` ಎದ್ದು ಕಾಣುತ್ತದೆ. ಅಂತಲೇ ಒಲಿಂಪಿಕ್ ಪದಕಕ್ಕೂ ವಂಶವಾಹಿ ಸಾಮರ್ಥ್ಯಕ್ಕೂ ಇರುವ ಸಂಬಂಧ ಕುರಿತು ಬೇಕಾದಷ್ಟು ಅಧ್ಯಯನಗಳೂ ನಡೆದಿವೆ.

ಭಾರತದಲ್ಲಿಯೂ ಬುಡಕಟ್ಟು ಮೂಲದವರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ಹುಡುಗ-ಹುಡುಗಿಯರನ್ನು ಆಯ್ದು ಭವಿಷ್ಯದ ಕ್ರೀಡಾಪಟುಗಳನ್ನಾಗಿ ರೂಪಿಸಲು ಅದೇ ಜಿಲ್ಲೆಯ ಮಾರ್ಗರೆಟ್ ಆಳ್ವ ಅವರು ಕೇಂದ್ರದಲ್ಲಿ ಕ್ರೀಡಾ ಸಚಿವೆಯಾಗಿದ್ದಾಗ ಪ್ರಯತ್ನ ಮಾಡಿದ್ದರು.

ಅದು ಒಂದು ಹಂತದವರೆಗೆ ಮಾತ್ರ ಫಲ ನೀಡಿತು. ನಂತರ ಮತ್ತೆ ಸಾಧಕರ ಪಟ್ಟಿಯಲ್ಲಿ ಸಿದ್ದಿಗಳ ಹೆಸರು ಕೇಳಿ ಬರಲಿಲ್ಲ. ಭಾರತದ ಈಶಾನ್ಯ ರಾಜ್ಯಗಳಲ್ಲಿ `ಮಂಗೋಲಾಯ್ಡ` ಮೂಲದವರೇ ಇದ್ದಾರೆ. ಜಿಮ್ನಾಸ್ಟಿಕ್‌ನಲ್ಲಿ ಅವರನ್ನು ತರಪೇತು ಮಾಡಬಹುದಿತ್ತು. ಅದೂ ಸಾಧ್ಯವಾದಂತೆ ಕಾಣುವುದಿಲ್ಲ. ಇಥಿಯೋಪಿಯ ದೇಶದ ಕ್ರೀಡಾ ನೀತಿಯನ್ನು ನೋಡಿದೆ.

ಅದರಲ್ಲಿ ಅಂಥ ವಿಶೇಷವೇನೂ ಕಾಣಲಿಲ್ಲ. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದ ಸ್ಪರ್ಧಿಗೆ ನಗದು ಬಹುಮಾನ ನೀಡುವ ಪ್ರಸ್ತಾಪವೇ ಅಲ್ಲಿ ಇಲ್ಲ. ಭಾರತದ ಒಬ್ಬ ಸ್ಪರ್ಧಿ ಒಂದು ಕಂಚು ಗೆದ್ದರೂ ಐವತ್ತು ಲಕ್ಷ, ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸುವ ರಾಜ್ಯ ಸರ್ಕಾರಗಳು ಇಲ್ಲಿ ಇವೆ. ಆದರೂ ನಾವು ಹಿಂದೆ... ಏಕೆ?

ನಮ್ಮಲ್ಲಿ ಛಲದ ಕೊರತೆ ಇದೆಯೇ? ಭಾರತದ ಹಾಕಿ ತಂಡದ ಆಟದಲ್ಲಿ ಆ ಛಲದ ಕೊರತೆ ಇತ್ತೇ? ಬರೀ ಒಲಿಂಪಿಯನ್ ಎಂದು ಕರೆಸಿಕೊಳ್ಳುವುದರಲ್ಲಿಯೇ ಅವರಿಗೆ ತೃಪ್ತಿಯೇ? ಇಲ್ಲವಾದರೆ ಒಂಬತ್ತು ಸಾರಿ ಚಿನ್ನ ಗೆದ್ದಿದ್ದ ಒಂದು ತಂಡ ಈ ಸಾರಿ ಕೊನೆಯ ಸ್ಥಾನಕ್ಕೆ ಪೈಪೋಟಿ ಮಾಡಬೇಕಿತ್ತೇ? ತಪ್ಪು ಆಟಗಾರರಲ್ಲಿ ಇದೆಯೇ? ಆಯ್ಕೆ ಮಾಡುವವರಲ್ಲಿ ಇದೆಯೇ?

ಇಬ್ಬರೂ ಹೊಣೆಯೇ? ಅಥವಾ ವ್ಯವಸ್ಥೆಯಲ್ಲಿಯೇ ಐಬು ಇರಬಹುದೇ? ಏಷ್ಯನ್, ಕಾಮನ್‌ವೆಲ್ತ್ ಕೂಟಗಳ ಆಚೆ ನಮ್ಮ ಪ್ರತಿಭೆ ಎಂದೂ ಬೆಳಗಿಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲ ದೇಶಗಳಲ್ಲಿಯೂ ಆ ಛಲದ ಕೊರತೆ ಇದೆಯೇ? ಇದೆಲ್ಲದರ ನಡುವೆ ಒಂದಿಷ್ಟು ಪ್ರತಿಭೆಗಳು ಬೆಳಗಿವೆ.

ಮೇರಿ ಕೋಮ್, ಸೈನಾ ನೆಹ್ವಾಲ್, ವಿಜಯಕುಮಾರ್, ಗಗನ್ ನಾರಂಗ್... ಆದರೆ, ಇವೆಲ್ಲ ಮಿಂಚಿನಂಥ ಪ್ರತಿಭೆಗಳು. ಅಭಿನವ್ ಬಿಂದ್ರಾ ಹೀಗೆಯೇ ಮಿಂಚಿ ಮರೆಯಾಗಿ ಬಿಟ್ಟರು. ಇವರೆಲ್ಲ ಧ್ರುವತಾರೆಗಳಂತೆ ಆಕಾಶದಲ್ಲಿ ನೆಟ್ಟಗೆ ನಿಲ್ಲುವಂತೆ ಕಾಣುವುದಿಲ್ಲ. ಪ್ರತಿ ಒಲಿಂಪಿಕ್ ಆಚೆ ಈಚೆ ಹೀಗೆ ಭಾರತದ ಅನೇಕ ಕನಸುಗಳು ಭಗ್ನವಾಗಿವೆ.

ನಮ್ಮ ತಲಾ ಆದಾಯ ಇಥಿಯೋಪಿಯಕ್ಕಿಂತ ಹತ್ತು ಪಟ್ಟು ಹೆಚ್ಚು ಇದೆ. ಇಲ್ಲಿನ ಶಿಕ್ಷಣಕ್ಕೂ, ಸೌಲಭ್ಯಗಳಿಗೂ ಇಥಿಯೋಪಿಯದ ಸೌಲಭ್ಯಗಳಿಗೂ ಅಜಗಜಾಂತರ. ಇಥಿಯೋಪಿಯಕ್ಕಿಂತ ಎಷ್ಟು ಪಟ್ಟು ದೊಡ್ಡದು ಭಾರತ? ವಂಶವಾಹಿ ಪ್ರತಿಭಾವಂತರನ್ನು ಮೀರಿ ನಿಲ್ಲುವ ಪ್ರಯತ್ನ ನಮ್ಮಿಂದ ಆಗಲಿಲ್ಲವೇ? ನಮ್ಮಿಂದ ಸಾಧ್ಯವಿಲ್ಲ ಎಂದು ನಾವು ನಂಬಿ ಕೈ ಸೋತು ಬಿಟ್ಟಿದ್ದೇವೆಯೇ?

ಮತ್ತೆ ಒಲಿಂಪಿಕ್ ಚಿತ್ರಗಳು ಕಣ್ಣ ಮುಂದೆ ಹಾಯ್ದು ಹೋದುವು. 800 ಮೀಟರ್ಸ್ ಹೀಟ್ಸ್‌ನಲ್ಲಿ ಓಡಿದ ಸೌದಿ ಅರೇಬಿಯಾದ ಸಾರಾ ಅತ್ತರ್ ಮೇಲೆ ಕಣ್ಣು ನಿಂತುಕೊಂಡಿತು. ಆಕೆ, ಹಸಿರು-ಕಪ್ಪು ಬಣ್ಣದ ಟ್ರ್ಯಾಕ್ ಸೂಟ್, ತಲೆ ತುಂಬ ಹಿಜಬ್ ಧರಿಸಿ ಓಡಿ ಇಡೀ ಜಗತ್ತಿನ ಗಮನ ಸೆಳೆದರು. ಅವರು ವಿಜೇತೆಗಿಂತ 45 ಸೆಕೆಂಡ್ ಹಿಂದೆ ಇದ್ದರು.

19ರ ಹರಯದ ಈ ತರುಣಿ ತನ್ನ ತಾಯ್ನಾಡು ಸೌದಿ ಅರೇಬಿಯಾವನ್ನು ಒಲಿಂಪಿಕ್‌ನಲ್ಲಿ ಮೊದಲ ಬಾರಿ ಪ್ರತಿನಿಧಿಸಿದವರು. ಆ ದೇಶದ ಪ್ರತಿನಿಧಿಯಾಗಿ ಓಡಿದ ಮೊದಲ ತರುಣಿಯೂ ಈಕೆಯೇ! ಆಕೆ ಹೆಚ್ಚೂ ಕಡಿಮೆ ಕೊನೆಯವರಾಗಿ ಓಡಿ ಗಮ್ಯ ತಲುಪಿದರೂ ಇಡೀ ಕ್ರೀಡಾಂಗಣ ಎದ್ದು ನಿಂತು ಆಕೆಗೆ ಗೌರವ ಸಲ್ಲಿಸಿತು.

ಇಂಥ ಓಟಗಳಲ್ಲಿ ಭಾಗವಹಿಸುವ ವಿದೇಶಿ ಮಹಿಳಾ ಸ್ಪರ್ಧಿಗಳ ವೇಷಭೂಷಣಕ್ಕೂ ಸಾರಾ ಅತ್ತರ್ ವೇಷ ಭೂಷಣಕ್ಕೂ ಇರುವ ಅಂತರ ಎದ್ದು ಕಾಣುವಂಥದು. ಆದರೆ, ಸಾರಾ ಎಲ್ಲಿಯೋ ಎಲ್ಲವನ್ನೂ ಉಲ್ಲಂಘಿಸುವಂತೆ ಕಾಣುತ್ತಿದ್ದರು. ನಮ್ಮಲ್ಲಿ ಸಾರಾಳಂಥ ಉಲ್ಲಂಘಿಸುವ ಗುಣವೂ ಇಲ್ಲ. ಇಥಿಯೋಪಿಯದ ಟಿಕಿ ಗೆಲಾನ್‌ಳಂಥ ಛಲವೂ ಇಲ್ಲ.

112 ವರ್ಷಗಳ ಒಲಿಂಪಿಕ್ಸ್ ಸ್ಪರ್ಧೆಯ ಇತಿಹಾಸದಲ್ಲಿ 120 ಕೋಟಿ ಜನರ ಸಾಧನೆ, ಅಲ್ಪತೃಪ್ತಿಯ ಒಂದು ವಿಷಾದ ಚರಿತ್ರೆಯಂತೆ ಕಾಣುತ್ತದೆ. ಇದಕ್ಕೆ ಯಾರು ಕಾರಣ ಎಂದೆಲ್ಲ ಹುಡುಕುವುದೇ ಒಂದು ವ್ಯರ್ಥ ಕಸರತ್ತು. ಏಕೆಂದರೆ ಪ್ರತಿಸಾರಿ ಒಲಿಂಪಿಕ್ಸ್ ನಡೆದಾಗಲೂ ಇಂಥ ಕಸರತ್ತು ಆಗುತ್ತದೆ. ಯಾರು ತಲೆ ಕೆಡಿಸಿಕೊಳ್ಳುತ್ತಾರೆ?

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಪದ್ಮರಾಜ ದಂಡಾವತಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-12

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri