ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕರ್ನಾಟಕದಲ್ಲಿ ಕುಸಿಯುತ್ತಿರುವ ರಾಜಕೀಯ ಸಂಸ್ಕೃತಿ...

ಬಹುಶಃ ಕೆಳಮಟ್ಟಕ್ಕಿಳಿಯುವ ಓಟದ ಸ್ಪರ್ಧೆ ಕುರಿತು ನಾವಿಲ್ಲಿ ಮಾತನಾಡಬಹುದು ಎಂಬುದು ನನಗೆ ಗೊತ್ತಿದೆ. ಹೀಗಿದ್ದೂ ನಾನು ವಾಸಿಸುತ್ತಿರುವ ಕರ್ನಾಟಕದ ರಾಜಕೀಯ ಸಂಸ್ಕೃತಿ ರಾಷ್ಟ್ರದ ಬೇರೆ ಯಾವುದೇ ರಾಜ್ಯದಲ್ಲಿರುವುದಕ್ಕಿಂತ ತೀರಾ ಕೆಳಮಟ್ಟದಲ್ಲಿದೆ ಎಂದು ಪ್ರತಿಪಾದಿಸಲು ನಾನು ಬಯಸುತ್ತೇನೆ.

ಕಳೆದ ಜುಲೈನಲ್ಲಿ ಒಂದೇ ತಿಂಗಳಲ್ಲಿ ಸಂಭವಿಸಿದ ಈ ಮೂರು ಬಿಡಿಬಿಡಿಯಾದ ಪ್ರಸಂಗಗಳನ್ನು ಪರಿಗಣಿಸಿ:

1. ಜುಲೈ ಆರಂಭದಲ್ಲಿ, ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರಿದ ಕರ್ನಾಟಕ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಮ್ಮ ಹನ್ನೊಂದು ತಿಂಗಳ ಅಧಿಕಾರಾವಧಿಯ ನಂತರ ರಾಜಿನಾಮೆ ನೀಡುವುದು ಅನಿವಾರ್ಯವಾಯಿತು.

ಭ್ರಷ್ಟಾಚಾರ ಆರೋಪಗಳಡಿ ಅವರ ಹಿಂದಿನ ಮುಖ್ಯಮಂತ್ರಿ ಹಾಗೂ ಪಕ್ಷದ ಸಹೋದ್ಯೋಗಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮಗಳು ಶುರುವಾದ ನಂತರ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದರು. ಕುಟುಂಬದವರ ಹೆಸರಿಗೆ ಸಾರ್ವಜನಿಕ ಭೂಮಿಯ ವರ್ಗಾವಣೆ ಹಾಗೂ  ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ ಆರೋಪ ಯಡಿಯೂರಪ್ಪ ಅವರ ಮೇಲಿತ್ತು.

ಇದರಿಂದ ಸಾರ್ವಜನಿಕ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮತ್ತು ಪರಿಸರಕ್ಕೆ ಅಪಾರ ಹಾನಿಯುಂಟಾಗಿದೆ ಎಂದೂ ಆರೋಪಿಸಲಾಗಿತ್ತು. ಯಡಿಯೂರಪ್ಪನವರ ಆಡಳಿತಕ್ಕೆ ತದ್ವಿರುದ್ಧವಾಗಿ  ಅಷ್ಟೇನೂ ವಿವಾದಗಳಿಲ್ಲದ ಆಡಳಿತವನ್ನು ಸದಾನಂದಗೌಡ ನೀಡಿದ್ದರು.

ಹೀಗಿದ್ದೂ  ಅನೇಕ ಬಿಜೆಪಿ ಶಾಸಕರ ಮೇಲೆ ಯಡಿಯೂರಪ್ಪನವರು ನಿಯಂತ್ರಣ ಸಾಧಿಸಿದ್ದರು. ಅಂತೂ ಅನೇಕ ತಿಂಗಳುಗಳ ಪ್ರಯತ್ನಗಳ ನಂತರ ಸದಾನಂದ ಗೌಡರನ್ನು ಅಧಿಕಾರ ಗದ್ದುಗೆಯಿಂದ ಕೆಳಗಿಳಿಸಲು ಅವರು ಯಶಸ್ವಿಯಾಗಿದ್ದರು.

ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಮುಂಚಿನ ದಿನಗಳಲ್ಲಿ ಬಣಗಳನ್ನಾಧರಿಸಿ ತೀವ್ರ ಲಾಬಿಗಳು ನಡೆದವು. ಅತಿ ಪ್ರಮುಖ ಸಚಿವ ಖಾತೆಗಳು ತಮಗೇ ದಕ್ಕಬೇಕೆಂದು ವಿವಿಧ ಜಾತಿಗಳ ನಾಯಕರು ಹಲವು ನೆಲೆಗಳಲ್ಲಿ ಪ್ರಯತ್ನಿಸಿದರು. ಈ ಮಧ್ಯೆ ಹಿನ್ನೆಲೆಯಲ್ಲಿ ಮುಂಗಾರು ಬೇರೆ ಕೈಕೊಟ್ಟಿತು. ರಾಜ್ಯದ ರೈತರಿಗೆ ತೀವ್ರ  ಬರ ಎದುರಾಯಿತು.

ಆದರೆ ಇದು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದ ಶಾಸಕರುಗಳ ಗಮನಕ್ಕೆ ಬಂದಂತೆ ಕಾಣಲಿಲ್ಲ. ಸದಾನಂದ ಗೌಡರು ಹಗರಣ ಮುಕ್ತ ಆಡಳಿತವನ್ನು ನೀಡಿದ್ದರೂ ಮುಂದಿನ ಚುನಾವಣೆಯನ್ನು ಲಿಂಗಾಯತ ನಾಯಕನ ನೇತೃತ್ವದಲ್ಲಿಯೇ ಪಕ್ಷ ಎದುರಿಸಬೇಕಿರುವುದರಿಂದ ಗೌಡರನ್ನು ಬದಲಿಸಬೇಕಿದೆ ಎಂಬಂತಹ ಹೊಸ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಾಧ್ಯಮಗಳಿಗೆ ನೀಡಿದರು. ಆ ಮೂಲಕ ನೀತಿಪ್ರಜ್ಞೆಯಿಲ್ಲದ ಕರ್ನಾಟಕ ಬಿಜೆಪಿಯ ವಾದಕ್ಕೆ ಸಮರ್ಥನೆ ದೊರಕಿಸಿಕೊಟ್ಟರು.

2. ಜುಲೈ ತಿಂಗಳ ಮಧ್ಯಭಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರ ಸಮಾವೇಶ ನಡೆಸಿದರು.  1997ರಲ್ಲಿ ನವದೆಹಲಿಯಲ್ಲಿ ಅಧಿಕಾರ ತೊರೆದಾಗಲಿಂದಲೂ, ಕರ್ನಾಟಕದಲ್ಲಿ ತಮ್ಮ ಪುತ್ರ ಎಚ್ .ಡಿ. ಕುಮಾರಸ್ವಾಮಿಯವರ ರಾಜಕೀಯ ವೃತ್ತಿಯನ್ನು ಬೆಳೆಸುವುದೇ ಅವರ ಏಕೈಕ ಗುರಿಯಾಗಿದೆ.

ಕುಮಾರಸ್ವಾಮಿಯವರು ಜನತಾದಳ (ಜಾತ್ಯತೀತ) ಹಾಗೂ ಭಾರತೀಯ ಜನತಾ ಪಕ್ಷದ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಕಾಲ ಮುಖ್ಯಮಂತ್ರಿಯೂ ಆಗಿದ್ದರು. ಈಗ ಆ ಸಂಪರ್ಕವನ್ನು ನಿರಾಕರಿಸುತ್ತಾ ಹಾಗೂ ತಮ್ಮನ್ನು ತಾವು ಮತ್ತೆ `ಜಾತ್ಯತೀತ` ಎಂದು ಪ್ರಚಾರ ಮಾಡಿಕೊಳ್ಳುತ್ತಾ, ಜೆಡಿ(ಎಸ್) ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸರ್ಕಾರಿ ಕೆಲಸಗಳಲ್ಲಿ ಧರ್ಮದ ಆಧಾರದ ಮೇಲೆ ಮೀಸಲು ಒದಗಿಸುವ ವಚನವನ್ನು ತಂದೆ-ಮಗ  ನೀಡಿದ್ದಾರೆ.

ಬಡ ಹಿಂದೂಗಳು ಹಾಗೂ ಬಡ ಕ್ರೈಸ್ತರಂತೆ ಬಹುತೇಕ ಬಡ ಮುಸ್ಲಿಮರು ಇಂಗ್ಲಿಷ್ ಭಾಷಾ ಶಿಕ್ಷಣ ಹಾಗೂ ಆಧುನಿಕ (ಅಥವಾ ಖಾಸಗಿ) ವಲಯದಲ್ಲಿ ಘನತೆಯ ಉದ್ಯೋಗವನ್ನು ಬಯಸುತ್ತಾರೆ.

ಸರ್ಕಾರಿ ಉದ್ಯೋಗಗಳಲ್ಲಿ ನಿಗದಿತ ಪಾಲು ನೀಡುವ ಕ್ರಮ ಖಂಡಿತಾ ಅವರ ಹಿತಾಸಕ್ತಿಗೆ ಅನುಗುಣವಾಗಿರದಂತಹ ಹಳೆಯ, ಸಿನಿಕತನದ, ಹಿಂದುಳಿದ ತಂತ್ರ. ಹೀಗಿದ್ದೂ, ಮುಸ್ಲಿಮರಿಗೆ ಶೇ 4ರಷ್ಟು ಸರ್ಕಾರಿ ಉದ್ಯೋಗಗಳ `ವಚನ`ವನ್ನು ದೇವೇಗೌಡರು ನೀಡಿದ ನಂತರ, ತಾವೇನೂ ಕಮ್ಮಿ ಇಲ್ಲ ಎಂಬಂತೆ ತಮ್ಮ ಪಕ್ಷ ಶೇ 6ರಷ್ಟು ಮೀಸಲು ನೀಡುವುದೆಂದು ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಘೋಷಿಸಿದ್ದು ಅಚ್ಚರಿಯ ಸಂಗತಿ!

3. ಪಶ್ಚಿಮ ಘಟ್ಟಗಳನ್ನು `ವಿಶ್ವ ಪರಂಪರೆಯ ತಾಣ` ಎಂದು ಘೋಷಿಸುವ ಯುನೆಸ್ಕೊದ ಇತ್ತೀಚಿನ ನಿರ್ಧಾರವನ್ನು ಖಂಡಿಸಿ ರಾಜ್ಯ ವಿಧಾನಸಭೆಯ ಸದಸ್ಯರು ಜುಲೈ ತಿಂಗಳ ಕಡೆಯ ವಾರದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದರು.

ನಿಜಕ್ಕೂ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅತಿ ಕಾತರದಿಂದ ಕಾಯುವಂತಹ ಅಂಕಿತ ಇದು. ಈ ವಿಶ್ವ ಪರಂಪರೆ ಸ್ಥಾನಮಾನ ಪಡೆದುಕೊಳ್ಳುವುದಕ್ಕಾಗಿ ವಿಶ್ವದಲ್ಲಿರುವ ರಾಷ್ಟ್ರಗಳು ತಮ್ಮ ವ್ಯಾಪ್ತಿಯಲ್ಲಿರುವ ಅಪರೂಪದ ಕಟ್ಟಡಗಳು, ಪುರಾತನ ನಗರಗಳು ಹಾಗೂ ವಿನಾಶದಂಚಿಗೆ ಸಿಲುಕಿದ ಪರಿಸರ ತಾಣಗಳನ್ನು ಪಟ್ಟಿ ಮಾಡುತ್ತವೆ.

ಅವುಗಳ ಮಹತ್ವ ಕುರಿತಂತೆ ಪರಿಣತ ತಜ್ಞರುಗಳಿಂದ ವರದಿಗಳನ್ನು ಬರೆಸುತ್ತವೆ. ಹಾಗೆಯೇ ಯುನೆಸ್ಕೊ ಜೊತೆ ತೀವ್ರ ಲಾಬಿ ನಡೆಸುತ್ತವೆ. ಪ್ರತಿ ವರ್ಷ ಇದಕ್ಕಾಗಿ ಕೆಲವೇ ಅರ್ಜಿಗಳನ್ನಷ್ಟೇ ಮಾನ್ಯ ಮಾಡಲಾಗುತ್ತದೆ.

`ವಿಶ್ವ ಪಾರಂಪರಿಕ ತಾಣ` ಎಂಬ ಬಿರುದು ಪಡೆದುಕೊಳ್ಳುವುದು ಅತ್ಯಂತ ಪ್ರತಿಷ್ಠಿತವಾದದ್ದು. ಇದು ಈ ತಾಣಗಳ ಸಂರಕ್ಷಣೆಗೆ ಹಣಕಾಸು ನೆರವು ಪಡೆದುಕೊಳ್ಳಲು ಸಹಾಯಕವಾಗಬಹುದು. ಜೊತೆಗೆ ಪ್ರವಾಸೋದ್ಯಮದಿಂದ ಆದಾಯ ಸೃಷ್ಟಿಗೂ ಅನುಕೂಲವಾಗಬಹುದು.

ಪಶ್ಚಿಮ ಘಟ್ಟಗಳಲ್ಲಿ ನಿಮ್ಮನ್ನು ನಿಬ್ಬೆರಗಾಗಿಸುವ ಪ್ರಮಾಣದ ಸಸ್ಯ ಹಾಗೂ ಪ್ರಾಣಿಗಳ ಜೀವವೈವಿಧ್ಯಗಳಿವೆ. ರಮಣೀಯ ನೈಸರ್ಗಿಕ ತಾಣಗಳಿವೆ. ಇದು ಭಾರತದ ಹಲವು ಪ್ರಮುಖ ನದಿಗಳ ಉಗಮ ಸ್ಥಾನವೂ ಹೌದು. ಅನೇಕ ಪವಿತ್ರ ತಾಣಗಳಿಗೂ ನೆಲೆ. ಇದರ ಸಂಪನ್ಮೂಲಗಳು ಹಾಗೂ ಸವಲತ್ತುಗಳು ಲಕ್ಷಾಂತರ ಭಾರತೀಯರಿಗೆ ಪೋಷಣೆ ನೀಡುತ್ತಿದೆ.

ಯುನೆಸ್ಕೊ ನೀಡಿದ ಪಟ್ಟವನ್ನು ಸ್ವಾಗತಿಸುವುದರ ಬದಲಿಗೆ ಕರ್ನಾಟಕದ ಶಾಸಕರು ಅದನ್ನು ಖಂಡಿಸಿದ್ದು ವಿಶೇಷ. ಘಟ್ಟಗಳನ್ನು ವಿಶ್ವ ಪರಂಪರೆ ತಾಣ ಎಂದು ಒಮ್ಮೆ  ಘೋಷಿಸಿದಲ್ಲಿ, ಗಣಿ ಕಂಪೆನಿಗಳು, ರಿಯಲ್ ಎಸ್ಟೇಟ್ ಮಂದಿ  ಹಾಗೂ ಅಣೆಕಟ್ಟು ನಿರ್ಮಾಣಕಾರರಿಗೆ ಆ ಪ್ರದೇಶಗಳಲ್ಲಿ  ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತದೆ.

ಹೊಸ ಯೋಜನೆಗಳ ಪ್ರವರ್ತಕರು ಸಂಬಂಧಿಸಿದ ಸಚಿವರ ಮನ ಒಲಿಸುವುದಕ್ಕಿಂತ ಹೆಚ್ಚಾಗಿ ಸ್ಥಳೀಯ ಸಮುದಾಯಗಳ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಜೊತೆಗೆ ವೈಜ್ಞಾನಿಕ ತಜ್ಞರ ಅನುಮೋದನೆಗಳನ್ನೂ ಪಡೆದುಕೊಳ್ಳಬೇಕಾಗುತ್ತದೆ.

ನಾನು ಎತ್ತಿ ತೋರಿಸಿರುವ ಈ ಮೂರೂ ಪ್ರಸಂಗಗಳೂ, ಕರ್ನಾಟಕದಲ್ಲಿನ  ರಾಜಕಾರಣಿಗಳ ದೂರದೃಷ್ಟಿಯಿಲ್ಲದ ಸ್ವಾರ್ಥದತ್ತ ಬೆರಳು ತೋರುತ್ತದೆ. ಇದು ಎಲ್ಲಾ ಪಕ್ಷಗಳಲ್ಲೂ ಸಮಾನವಾಗಿಯೇ ವ್ಯಕ್ತವಾಗಿವೆ.

ಮೊದಲ ಎರಡು ಪ್ರಸಂಗಗಳು -  ಲಾಭದಾಯಕ ಸಚಿವ ಹುದ್ದೆಗಳಿಗಾಗಿ ಹಾತೊರೆಯುವಿಕೆ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣ ಎಂಬಂತಹದ್ದು ಇಡೀ ಭಾರತದಾದ್ಯಂತ ಇರುವ ವಿದ್ಯಮಾನ. ಕಡೆಯ ಮೂರನೆಯ ಪ್ರಸಂಗ ಮಾತ್ರ ವಿಶೇಷವಾದದ್ದು.  ಹೀಗಾಗಿ ಹೆಚ್ಚು ಹತಾಶೆಗೂ ದೂಡುವಂತಹದ್ದು. ಪಶ್ಚಿಮ ಘಟ್ಟಗಳು ಬರೀ ಬೃಹತ್ ನದಿಗಳ ಮೂಲ ಮಾತ್ರವಲ್ಲ.

ಶ್ರೇಷ್ಠ ಸಂಗೀತ, ಕಲೆ, ಕಾವ್ಯ ಹಾಗೂ ಸಾಹಿತ್ಯಕ್ಕೂ ಸಂಬಂಧಿಸಿದ್ದು. ಕೆ.ವಿ. ಪುಟ್ಟಪ್ಪ (ಕುವೆಂಪು), ಕೋಟ ಶಿವರಾಮ ಕಾರಂತ, ಯು. ಆರ್. ಅನಂತಮೂರ್ತಿ ಹಾಗೂ ಪೂರ್ಣಚಂದ್ರ ತೇಜಸ್ವಿಯಂಥವರು ಹುಟ್ಟಿದ್ದು, ಬೆಳೆದದ್ದು ಪಶ್ಚಿಮ ಘಟ್ಟಗಳ ಸಮೀಪದಲ್ಲೇ.  ಈ ಸಾಹಿತಿಗಳ ಕಾವ್ಯ, ನಾಟಕ, ಕಥೆ - ಕಾದಂಬರಿಗಳು ಆ ಪ್ರದೇಶದ ಹಾಗೂ ಅಲ್ಲಿನ ಜನಜೀವನದ (ಮನುಷ್ಯ ಹಾಗೂ ಪ್ರಾಣಿಲೋಕ ಎರಡೂ) ದಟ್ಟ ವಿವರಗಳಿಂದ ಕೂಡಿದೆ.

ಘಟ್ಟಗಳನ್ನು ವಾಣಿಜ್ಯ ಹಿತಾಸಕ್ತಿಗಳಿಂದ ತೀವ್ರತರ ಶೋಷಣೆಗೆ ಒಳಪಡಿಸುವುದು ಎಂದರೆ ಪರಿಸರ ವಿನಾಶವನ್ನಷ್ಟೇ ಉತ್ತೇಜಿಸುವುದಲ್ಲ,  ಆಧುನಿಕ ಕನ್ನಡ ಸಂಸ್ಕೃತಿ ಹಾಗೂ ನಾಗರೀಕತೆಯ ಮೂಲಾಧಾರವನ್ನೇ ವಿನಾಶ ಮಾಡಿದಂತೆ.

ಅಬ್ಬಾ, ಜುಲೈ 2012ರ ಘಟನಾವಳಿಗಳು ತೀರಾ ವಿಶೇಷ! ಇತ್ತೀಚಿನ ವರ್ಷಗಳಲ್ಲಿ ಯಾವುದೇ ರಾಜ್ಯವೂ ಇಷ್ಟೊಂದು ಅದಕ್ಷತೆಯ ಭ್ರಷ್ಟ ಆಡಳಿತವನ್ನು ಕಂಡಿರಲಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿ‌ಎಸ್ - ಈ ಯಾವುದೇ ಪಕ್ಷಗಳ ಮುಖ್ಯಮಂತ್ರಿಗಳ ನೇತೃತ್ವವಿರಲಿ, ಕಳೆದ ಮೂರು ದಶಕಗಳಿಂದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸುಸ್ಥಿರ ಪರಿಸರ ಅಥವಾ ಸಾಂಸ್ಕೃತಿಕ ಸೃಜನಶೀಲತೆಯ ಪರಿಗಣನೆಗಳಿಗೆ ನೇರ ವಿರೋಧ ಕಾಣಿಸದಿದ್ದರೂ ದಿವ್ಯ ನಿರ್ಲಕ್ಷ್ಯವನ್ನಂತೂ ಕರ್ನಾಟಕ ಸರ್ಕಾರ ತಾಳಿದೆ.

ತನ್ನ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಯಾವುದಾದರೂ ಅರ್ಥಪೂರ್ಣ ರೀತಿಯಲ್ಲಿ ಸಂಬಂಧ ಹೊಂದಿದ್ದ ಕಡೆಯ ರಾಜ್ಯ ಸರ್ಕಾರವೆಂದರೆ ಬಹುಶಃ 1983ರಿಂದ 1989ರವರೆಗೆ ಆಡಳಿತ ನಡೆಸಿದ ಜನತಾ ಪಕ್ಷದ ಸರ್ಕಾರ.

ರಾಜಕೀಯ ವಿಕೇಂದ್ರೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿಯ ನಿರ್ದಿಷ್ಟ ಕಾರ್ಯಸೂಚಿಯನ್ನು ಇದು ಹೊಂದಿತ್ತು. ಮೈಸೂರಿನ ಸಮಾಜವಾದಿ ಅಬ್ದುಲ್ ನಜೀರ್ ಸಾಬ್ ಅವರಂತಹ ಕೆಲವು ಬಹಳ ಸಮರ್ಥ ಸಚಿವರಿದ್ದರು. ರಾಜ್ಯದ ದೂರದೂರದ ಹಳ್ಳಿಗಳಿಗೆಲ್ಲಾ ಕೊಳವೆಬಾವಿ ನೀರು ಕೊಡಲು ಅವರು ತೀವ್ರವಾಗಿ ಶ್ರಮಿಸಿದರು.

1984-85ರಲ್ಲಿ ಉತ್ತರ ಕರ್ನಾಟದ ಗ್ರಾಮಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ, ಗ್ರಾಮೀಣಾಭಿವೃದ್ಧಿ ಸಚಿವ ನಜೀರ್ ಸಾಬ್‌ರನ್ನು ಪ್ರೀತಿಯಿಂದ `ನೀರ್ ಸಾಬ್` ಎಂದು ಜನ ಕರೆಯುತ್ತಿದ್ದುದನ್ನು ಕಂಡುಕೊಂಡಿದ್ದೆ.

ನಜೀರ್ ಸಾಬ್‌ರ ಬದ್ಧತೆ ಹಾಗೂ ಸಾಹಸ, ಹೆಚ್ಚು ಪ್ರಾಮಾಣಿಕತೆಯಿಂದ  ಕಷ್ಟಪಟ್ಟು ಕೆಲಸ ಮಾಡಲು ಅವರ ಅನೇಕ ಸಹೋದ್ಯೋಗಿಗಳಿಗೂ ಪ್ರೇರಕವಾಯಿತು. ಆದರೆ 1988ರಲ್ಲಿ ನಜೀರ್ ಸಾಬ್ ಕ್ಯಾನ್ಸರ್ ಕಾಯಿಲೆಗೆ ತುತ್ತಾದರು.

ಮರಣಶಯ್ಯೆಯಲ್ಲಿದ್ದ ನಜೀರ್ ಸಾಬ್‌ರನ್ನು ಮುಖ್ಯಮಂತ್ರಿಗಳು ಭೇಟಿಯಾದಾಗ, ತಾವು ಆರಂಭಿಸಿದ್ದ ಜನರ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಕೇಳಿಕೊಂಡಿದ್ದರಂತೆ. ದುರದೃಷ್ಟವಶಾತ್ 1988ರ ಅಕ್ಟೋಬರ್‌ನಲ್ಲಿ ಈ ಸಮಾಜವಾದಿ ನಾಯಕನ ಸಾವಿನ ನಂತರ, ಜನತಾ ಸರ್ಕಾರ ತನ್ನ ನೆಲೆ ಕಳೆದುಕೊಂಡಿತು. ಸ್ವಲ್ಪ ದಿನಗಳಲ್ಲೇ  ಸರ್ಕಾರವೂ ಪತನವಾಯಿತು.

ಪಶ್ಚಿಮ ಘಟ್ಟಗಳ ಪರಿಸರದ ಬಗ್ಗೆ ಕರ್ನಾಟಕ ಶಾಸಕರ ಈಗಿನ ತಿರಸ್ಕಾರದ ದೃಷ್ಟಿಯ ಹಿನ್ನೆಲೆಯಲ್ಲಿ, ಸುಸ್ಥಿರ ಅಭಿವೃದ್ಧಿಗೆ 1980ರ ದಶಕದ ಜನತಾ ಸರ್ಕಾರ ಒಂದಿಷ್ಟಾದರೂ ಬದ್ಧತೆ ತೋರಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಪ್ರಸ್ತುತ. 1980ರ ದಶಕದಾದ್ಯಂತ ರಾಜ್ಯದ ಪರಿಸರ ಇಲಾಖೆ ಉತ್ಕೃಷ್ಟ ವಾರ್ಷಿಕ ಸಮೀಕ್ಷೆಗಳನ್ನು ಪ್ರಕಟಿಸುತ್ತಿತ್ತು.

ಹೆಸರಾಂತ ಸಸ್ಯಶಾಸ್ತ್ರಜ್ಞ ಸೆಸಿಲ್ ಜೆ ಸಲ್ಡಾನಾ ಅವರು ಇದರ ಸಂಪಾದಕರಾಗಿದ್ದರು. ಇದಕ್ಕೆ ಕರ್ನಾಟಕದ ಅತ್ಯುತ್ತಮ ವಿಜ್ಞಾನಿಗಳು ಹಾಗೂ ಸಮಾಜ ವಿಜ್ಞಾನಿಗಳು ಲೇಖನಗಳನ್ನು ಬರೆಯುತ್ತಿದ್ದರು. ಗ್ರಾಮೀಣ ಅಭಿವೃದ್ಧಿ ಹಾಗೂ ಪರಿಸರ ನಿರ್ವಹಣೆಗಾಗಿ ಸರ್ಕಾರ ರೂಪಿಸಿದ ಯೋಜನೆಗಳು - ನಾಗರಿಕ ಗುಂಪುಗಳು ಹಾಗೂ ಶಿವರಾಮ ಕಾರಂತರಂತಹ ಪ್ರಭಾವಿ ಸಾಹಿತಿ, ಚಳವಳಿಕಾರರಿಂದ ನಿರಂತರ  ಪರಾಮರ್ಶೆಗೊಳಪಡುತ್ತಿದ್ದವು.

1980ರ ದಶಕದ ಜನತಾ ಸರ್ಕಾರದಲ್ಲಿದ್ದ ನಜೀರ್ ಸಾಬ್‌ರ ಸಹೋದ್ಯೋಗಿಗಳಲ್ಲಿ ಎಸ್. ಆರ್. ಬೊಮ್ಮಾಯಿ ಹಾಗೂ ಎಚ್. ಡಿ. ದೇವೆಗೌಡ ಅವರೂ ಸೇರಿದ್ದರು. ಅವರ ಪುತ್ರರು ಇಂದಿನ ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯರಾಗಿದ್ದು ಪ್ರಭಾವಶಾಲಿಗಳಾಗಿದ್ದಾರೆ. ಆದರೆ ಅವರು ಅಥವಾ ಅವರ ಸಮಕಾಲೀನರಿಗೆ `ನೀರ್ ಸಾಬ್`ರ ಪರಂಪರೆಯ ಅರಿವಿದೆಯೆ ಅಥವಾ ಅದರ ಕಾಳಜಿ ವಹಿಸುತ್ತಾರೆಯೇ ಎಂಬುದೇ ಸಂಶಯಾಸ್ಪದ.

ರಾಜ್ಯದ ಸಾಮಾನ್ಯ ಪ್ರಜೆಗಳ ಕಾಳಜಿಗಳಿಗಿಂತ ಗಣಿ ಹಾಗೂ ರಿಯಲ್ ಎಸ್ಟೇಟ್ ಲಾಬಿಗಳ ಹಿತವೇ ಈಗ ಎಲ್ಲಾ ಪಕ್ಷಗಳ ಶಾಸಕರು ಹಾಗೂ ಸಚಿವರುಗಳಿಗೆ ಮುಖ್ಯವಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರಾಮಚಂದ್ರ ಗುಹಾ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-11

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri