ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಾಗ್ಮೀಯತೆ ಲಕ್ಷಣ...

ತಾವು ಅನೇಕ ಅದ್ಭುತ ಮಾತುಗಾರರ ಭಾಷಣಗಳನ್ನು ಕೇಳಿರಬಹುದು. ಅವರು ಮಾತನಾಡುವ ಶೈಲಿ, ವಿಷಯ ಪ್ರತಿಪಾದನೆ ಮಾಡುವ ರೀತಿ, ಹಾವಭಾವ ಪ್ರದರ್ಶನ ಮನಸ್ಸನ್ನು ಹಿಡಿಯುತ್ತವೆ. ಅವರ ಹಾಗೆ ನಾವೂ ಮಾತನಾಡಬೇಕು ಎನ್ನಿಸುತ್ತದೆ. ಮಾರ್ಟಿನ್ ಲೂಥರ್ ಕಿಂಗ್  ಅವರ ಭಾಷಣ  `ನನಗೊಂದು ಕನಸಿದೆ`  (ಐ ಹಾವ್ ಎ ಡ್ರೀಮ್) ಇಂದಿಗೂ ರೋಮಾಂಚನವನ್ನುಂಟು ಮಾಡುತ್ತದೆ.

ಅವರ ಅಂದಿನ ಭಾಷಣ ಅಮೆರಿಕದಲ್ಲಿ ರಾಜಕೀಯ ಸ್ಥಿತ್ಯಂತರಗಳನ್ನೇ ಉಂಟುಮಾಡಿತು. ಈಗಲೂ ಅವರ ಭಾಷಣವನ್ನು ಅಮೆರಿಕೆಯ ಟೆಲಿವಿಷನ್‌ದಲ್ಲಿ ಆಗಾಗ ತೋರಿಸುತ್ತಾರೆ. ಎಷ್ಟೋ ಶಾಲಾ ಮಕ್ಕಳು ಅವರ ಭಾಷಣದ ಪೂರ್ತಿ ಪಾಠವನ್ನು ಕಂಠಸ್ಥ ಮಾಡಿಕೊಂಡಿದ್ದಾರೆ.

ಅತ್ಯುತ್ತಮ ಭಾಷಣದ ಪರಿಣಾಮ ಇದು. ನಾವೂ ಅನೇಕ ಉತ್ತಮ ವಾಗ್ಮಿಗಳನ್ನು ನೋಡಿದ್ದೇವೆ. ಅವರ ಈ ಶಕ್ತಿಯ ಗುಟ್ಟೇನು ಎಂದು ಗಮನಿಸಿದರೆ ಒಂದು ವಿಷಯ ತಿಳಿಯುತ್ತದೆ. ಎಲ್ಲ ಶ್ರೇಷ್ಠ ಮಾತುಗಾರರೂ ತುಂಬ ಒಳ್ಳೆಯ ಕೇಳುಗರಾಗಿರುತ್ತಾರೆ. ಯಾರಿಗೆ ಕೇಳಿಸಿಕೊಳ್ಳಲು ತಾಳ್ಮೆ ಇಲ್ಲವೋ ಅವರು ಒಳ್ಳೆಯ ಮಾತುಗಾರ ಆಗಲಾರರು. ಕೆಲ ವರ್ಷಗಳ ಹಿಂದೆ ನಡೆದ ತಮಾಷೆ ಘಟನೆಯೊಂದು ನೆನಪಿಗೆ ಬಂತು.

ಒಮ್ಮೆ ಒಂದು ಪ್ರದೇಶದ ಕುದುರೆ ರೇಸ್ ನಡೆಸುವ ಕಂಪನಿಯ ಜನರು ನನ್ನನ್ನು ಅವರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದರು. ನನಗೊಂದು ದುರಭ್ಯಾಸವೆಂದರೆ ಅವರು ಹೇಳಿದ ಸಮಯಕ್ಕೆ ಹೋಗುವುದು. ಅವರು ತಿಳಿಸಿದಂತೆ ಸರಿಯಾಗಿ ಆರು ಗಂಟೆಗೆ ಹೋದೆ. ಬಾಗಿಲಿನಲ್ಲಿ, ಒಳಗೆ ಒಬ್ಬರೂ ಕಾಣಲಿಲ್ಲ.

ತಪ್ಪು ಸ್ಥಳಕ್ಕೆ ಬಂದಿದ್ದೇನೋ ಎಂದುಕೊಂಡು ಆಮಂತ್ರಣ ಪತ್ರ ನೋಡಿಕೊಂಡೆ. ಇಲ್ಲ, ವಿಳಾಸ ಸರಿಯಾಗಿತ್ತು. ನಿಧಾನವಾಗಿ ಒಳಗಿನ ಕೊಠಡಿಗೆ ಕಾಲಿಟ್ಟೆ. ಅಲ್ಲಿ ಒಬ್ಬ ಮಹಿಳೆ ಮೂರು ಜನ ಕೂಡುವ ಸೋಫಾದ ತುಂಬ ಕುಳಿತಿದ್ದರು. ಮತ್ತೆ ಬೇರೆ ಕುರ್ಚಿ ಇರಲಿಲ್ಲ. ನಾನೇ ವಿನಯದಿಂದ ನನ್ನ ಪರಿಚಯ ಮಾಡಿಕೊಂಡೆ.

ಅವರ ಕಣ್ಣಲ್ಲಿ ಹೊಳಪು ಕಂಡಿತು,  ಓಹೋ, ನೀವೇ ಅಲ್ಲವೇ ಇಂದಿನ ಭಾಷಣಕಾರರು. ಬನ್ನಿ ಕುಳಿತುಕೊಳ್ಳಿ  ಎಂದು ತಮ್ಮ ದೇಹವನ್ನು ಸ್ವಲ್ಪ ಕುಗ್ಗಿಸಲು ಶ್ರಮವಹಿಸಿದರು. ನಾನೂ ಮುಜುಗರದಿಂದ ದೇಹವನ್ನು ಹಿಡಿಮಾಡಿಕೊಂಡು ಅಲ್ಲಿಯೇ ಸೋಫಾದ ತುದಿಯಲ್ಲಿ ಕುಳಿತೆ.

 ಆಕೆ ಉತ್ಸಾಹದಿಂದ,  ನೀವು ಯಾವ ವಿಷಯದ ಬಗ್ಗೆ ಮಾತನಾಡುತ್ತೀರಿ.  ಎಂದು ಕೇಳಿ ನಾನು ಬಾಯಿ ತೆರೆಯುವ ಮೊದಲೇ,  ಹೇ, ಹೇ ಮತ್ತಾವ ವಿಷಯ, ಕುದುರೆಗಳ ಬಗ್ಗೆ ಅಲ್ಲವೇ.  ಎಂದು ಗಹಗಹಿಸಿ ನಕ್ಕರು.  ನಿಮಗೆ ಕುದುರೆಗಳ ಬಗ್ಗೆ ಗೊತ್ತೇ. ನನ್ನದೂ ನಾಲ್ಕು ಕುದುರೆಗಳು ಇವೆ. ರೇಸ್‌ಗಾಗಿ ಓಡುತ್ತಿವೆ.

ಒಂದೊಂದಕ್ಕೂ ಎರಡೆರಡು ಲಕ್ಷ ರೂಪಾಯಿ. ಹಾಗೆ ನೋಡಿದರೆ ಇದೇನೂ ಹೆಚ್ಚಿನ ಬೆಲೆಯಲ್ಲ, ಕೆಲವೊಂದು ಕುದುರೆಗಳ ಬೆಲೆ ಐದು ಲಕ್ಷಕ್ಕೂ ಹೆಚ್ಚಿದೆ... ಅವರ ಮಾತು ಮುಗಿಯುವ ಹಾಗೆಯೇ ತೋರಲಿಲ್ಲ. ನನಗೀಗ ಕುದುರೆಗಳ ಬಗೆಗಿನ ಜ್ಞಾನ ಹೆಚ್ಚಾಗಿತ್ತು. ನನಗೆ ಮಾತನಾಡಲು ಅವಕಾಶವೇ ಇರಲಿಲ್ಲ.

ಕೇವಲ,  ಓಹೊ, ಹಾಂ, ಹೌದೇ, ಭಲೇ  ಎನ್ನುವುದು ಮಾತ್ರ ನನಗೆ ದೊರೆತ ಭಾಗ್ಯ. ಅರ್ಧ ತಾಸು ಆಕೆಯ ಮಾತು ನಡೆಯಿತು. ಆ ಹೊತ್ತಿಗೆ ಜನವೆಲ್ಲ ಸೇರಿದರು. ನಂತರ ಸಭೆ ಪ್ರಾರಂಭವಾಯಿತು. ನನಗೆ ಭಾರಿ ಆಶ್ಚರ್ಯ ಕಾದಿತ್ತು. ನನ್ನೊಂದಿಗೆ ಇದುವರೆಗೂ ಮಾತನಾಡಿದ ಮಹಿಳೆಯೇ ನನ್ನನ್ನು ಪರಿಚಯಿಸಲು ನಿಂತುಕೊಂಡರು.

ನನ್ನ ಬಗ್ಗೆ ಬಹಳಷ್ಟು ವಿಷಯವನ್ನು ತಪ್ಪು ತಪ್ಪಾಗಿ ಹೇಳುವುದು ಮಾತ್ರವಲ್ಲ, ನನ್ನ ಹೆಸರನ್ನು ತಪ್ಪಾಗಿ ಉಚ್ಚರಿಸಿದರು. ಆದರೆ ಆಕೆ ಕೊನೆಗೆ ಹೇಳಿದ ಮಾತು ಚೆನ್ನಾಗಿತ್ತು. ಇಂದು ನಮಗೆ ಭಾಷಣ ನೀಡಲು ಬಂದ ಅತಿಥಿಯವರು ನನ್ನೊಡನೆ ಅರ್ಧ ತಾಸು ಮಾತನಾಡುತ್ತಿದ್ದರು. ಅವರು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಗೊತ್ತಲ್ಲಾ.

ನಾನು ಮಾತೇ ಆಡಿರಲಿಲ್ಲ ಅಥವಾ ಆಕೆ ಮಾತನಾಡುವುದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಆಗ ನನಗೆ ಅರ್ಥವಾಯಿತು, ಚೆನ್ನಾಗಿ ಮಾತನಾಡುವುದೆಂದರೆ ಬಾಯಿಮುಚ್ಚಿಕೊಂಡು ಕೇಳಿಸಿಕೊಳ್ಳುವುದು ಎಂದು. ಇದು ತಮಾಷೆಯ ಮಾತಾದರೂ ತುಂಬ ಸತ್ಯ. ನಾವು ಲಕ್ಷ್ಯವಿಟ್ಟು ಕೇಳಿಸಿಕೊಂಡಷ್ಟು, ಮಾತು ಕಡಿಮೆ ಮಾಡಿ ಕೇಳಿದ್ದನ್ನು ಅರಗಿಸಿಕೊಂಡಷ್ಟೂ ನಾವು ಉತ್ತಮ ಮಾತುಗಾರರಾಗುತ್ತೇವೆ. ಕೇಳಿಸಿಕೊಳ್ಳುವುದು ಮಾತನಾಡುವ ಶಕ್ತಿ ಬೆಳೆಸುತ್ತದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri