ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಗುರುದ್ವಾರ ಗುಂಡಿನ ದಾಳಿ ನಾಳೆಯವರೆಗೆ ಅರ್ಧಮಟ್ಟದಲ್ಲಿ ಅಮೆರಿಕ ಧ್ವಜ

ವಾಷಿಂಗ್ಟನ್, ಆ.8: ವಿಸ್ಕನ್‌ಸಿನ್ ಗುರುದ್ವಾರದ ಮೇಲಿನ ದಾಳಿಯ ವೇಳೆ ಮೃತಪಟ್ಟಿರುವ ಆರು ಮಂದಿ ಸಿಖ್ಖರ ಗೌರವಾರ್ಥ ತನ್ನ ಎಲ್ಲ ಸರಕಾರಿ ಕಟ್ಟಡಗಳು ಹಾಗೂ ವಿವಿಧ ರಾಷ್ಟ್ರಗಳಲ್ಲಿರುವ ರಾಯಭಾರ ಕಚೇರಿಗಳ ಮೇಲೆ ಇದೇ ಆಗಸ್ಟ್ 10ರ ತನಕ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ನಿರ್ಧರಿಸಲಾಗಿದೆ.

ಸೇನೆಯ ಎಲ್ಲ ವಿಭಾಗಗಳ ಕಚೇರಿಗಳ ಮೇಲೂ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಅಧ್ಯಕ್ಷ ಬರಾಕ್ ಒಬಾಮ ಆದೇಶ ನೀಡಿದ್ದಾರೆ.

‘‘ಉಗ್ರವಾದಕ್ಕೆ ಸಿಖ್ಖ್ ಸಮುದಾಯ ಬಲಿಯಾಗುತ್ತಿರುವುದು ದುರದೃಷ್ಟಕರ. ಅಮೆರಿಕಕ್ಕೆ ಸಿಖ್ಖ್ ಸಮುದಾಯ ನೀಡಿರುವ ಕೊಡುಗೆ ಅಪಾರವಾದುದು. 9/11ರ ದಾಳಿಯ ಬಳಿಕ ಅಮೆರಿಕದಲ್ಲಿರುವ ಸಿಖ್ಖರನ್ನು ತಪ್ಪಾಗಿ ಭಾವಿಸಿ ಹತ್ಯೆಗೈಯಲಾಗುತ್ತಿದೆ. ದಾಳಿ ಯಾರ ವಿರುದ್ಧವೇ ನಡೆದರೂ ಅದನ್ನು ಒಪ್ಪಲಾಗದು’’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನಿ ಹೇಳಿಕೆಯೊಂದರಲ್ಲಿ ಇದೇ ವೇಳೆ ತಿಳಿಸಿದ್ದಾರೆ. 


ಭಾರತೀಯ ರಾಯಭಾರಿಯಿಂದ ಶೋಕತಪ್ತ ಕುಟುಂಬಗಳ ಭೇಟಿ
ವಾಷಿಂಗ್ಟನ್, ಆ.8: ವಿಸ್ಕನ್‌ಸಿನ್ ಗುರುದ್ವಾರದಲ್ಲಿ ಇತ್ತೀಚೆಗೆ ದುಷ್ಕರ್ಮಿಯೊಬ್ಬನು ನಡೆಸಿದ ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಗಳನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನಿರುಪಮಾ ರಾವ್ ಭೇಟಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅವರಿಗೆ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಹಾಗೂ ಸ್ಥಳೀಯ ಪೊಲೀಸರು ಘಟನೆಗೆ ಸಂಬಂಧಿಸಿ ಕೈಗೊಳ್ಳಲಾಗಿರುವ ತನಿಖೆಯ ಕುರಿತು ವಿವರ ನೀಡಿದ್ದಾರೆ.

ಶಾಂತಿ ರ್ಯಾಲಿ ಹಾಗೂ ಮೋಂಬತ್ತಿ ಜಾಗರಣೆಗಳ ಮೂಲಕ ರಾಷ್ಟ್ರಾದ್ಯಂತ ಸಿಖ್ಖ್ ಸಮುದಾಯಕ್ಕೆ ಅಪಾರ ಬೆಂಬಲ ವ್ಯಕ್ತಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಓಕ್ ಕ್ರೀಕ್‌ನ ಮೇಯರ್ ಸ್ಟೀವ್ ಸ್ಕಾಫಿದಿಯವರನ್ನು ಭಾರತೀಯ ರಾಯಭಾರಿ ನಿರುಪಮಾ ರಾವ್ ಭೇಟಿಯಾಗಿ ಚರ್ಚಿಸಿದ್ದಾರೆ.

ಶೋಕತಪ್ತ ಕುಟುಂಬಗಳನ್ನು ಭೇಟಿಯಾದ ನಿರುಪಮಾ ರಾವ್, ಭಾರತ ಸರಕಾರದ ಪರವಾಗಿ ಎಲ್ಲ ರೀತಿಯ ನೆರವನ್ನು ತಾವು ನೀಡಲಿರುವುದಾಗಿ ಭರವಸೆ ನೀಡಿದ್ದಾರೆ.


‘ರಹಸ್ಯ ಸಂಕೇತ ಮುಚ್ಚಲು ಹಚ್ಚೆ’
ವಿಸ್ಕನ್‌ಸಿನ್ ಗುರುದ್ವಾರದಲ್ಲಿ ಭೀಕರ ಗುಂಡಿನ ದಾಳಿ ನಡೆಸಿ ಆರು ಮಂದಿ ಸಿಖ್ಖರನ್ನು ಹತ್ಯೆಗೈದ ಬಳಿಕ ಪೊಲೀಸರಿಂದ ಹತನಾಗಿರುವ ಹಂತಕನೆನ್ನಲಾಗಿರುವ ವೇಡ್ ಮೈಕೆಲ್ ಪೇಜ್‌ನ ತೋಳಿನಲ್ಲಿದ್ದ ಹಚ್ಚೆ ಬರಹದಡಿಯಲ್ಲಿ ಜನಾಂಗೀಯ ವಾದವನ್ನು ಬಿಂಬಿಸುವ ಕೆಲವ ರಹಸ್ಯ ಸಂಕೇತಗಳು ಪತ್ತೆಯಾಗಿರುವುದಾಗಿ ವರದಿಯೊಂದು ತಿಳಿಸಿದೆ.

ಗುರುದ್ವಾರದಲ್ಲಿ ಆರು ಮಂದಿ ಸಿಖ್ಖರನ್ನು ಭೀಕರ ಗುಂಡಿನ ದಾಳಿಯ ಮೂಲಕ ಹತ್ಯೆಗೈದಿರುವ 41ರ ಹರೆಯದ ವೇಡ್ ಮೈಕೆಲ್ ಪೇಜ್ ಬಳಿಕ ಪೊಲೀಸರಿಂದ ಹತನಾಗಿದ್ದು, ಆತನ ತೋಳಿನಲ್ಲಿ ಹಚ್ಚೆಬರಹವಿರುವುದು ಪತ್ತೆಯಾಗಿತ್ತು.

ಪೇಜ್‌ನ ತೋಳು ಹಾಗೂ ದೇಹದ ವಿವಿಧೆಡೆಗಳಲ್ಲಿ ಬರೆಯಲಾಗಿದ್ದ ಜನಾಂಗೀಯವಾದಿ ರಹಸ್ಯ ಸಂಕೇತ ಹಾಗೂ ಆತನ ಶ್ವೇತವರ್ಣೀಯ ಶ್ರೇಷ್ಠತಾ ಸಿದ್ಧಾಂತಕ್ಕೆ ಆತನ ನಿಷ್ಠೆಯನ್ನು ಬಿಂಬಿಸುವ ಬರಹಗಳನ್ನು ಮುಚ್ಚಲು ಆ ಭಾಗಗಳಲ್ಲಿ ಹಚ್ಚೆಗಳನ್ನು ಹಾಕಿಸಿಕೊಂಡಿದ್ದನು ಎಂದು ಭಯೋತ್ಪಾದಕತೆಗೆ ಸಂಬಂಧಿಸಿದ ಆ್ಯಂಟಿ ಡಿಫಮೇಶನ್ ಲೀಗ್ಸ್ ಕೇಂದ್ರದ ಸಹ ನಿರ್ದೇಶಕ ಮ್ಯಾರಿಲಿನ್ ಮೇಯೊ ತಿಳಿಸಿದ್ದಾರೆ.

ಆರೋಪಿ ಹಂತಕನ ಮಾಜಿ ಸ್ನೇಹಿತೆಯ ಬಂಧನವಾಷಿಂಗ್ಟನ್, ಆ.8: ವಿಸ್ಕನ್‌ಸಿನ್ ಗುರುದ್ವಾರದಲ್ಲಿ ಭೀಕರ ಗುಂಡಿನ ದಾಳಿ ನಡೆಸಿ ಪೊಲೀಸರಿಂದ ಹತನಾಗಿರುವ ಶಂಕಿತ ಹಂತಕ ವೇಡ್ ಮೈಕೆಲ್ ಪೇಜ್‌ನ ಮಾಜಿ ಸ್ನೇಹಿತೆ 31ರ ಹರೆಯದ ಮಿಸ್ಟಿ ಕುಕ್‌ಳನ್ನು ಇಲ್ಲಿನ ಫೆಡರಲ್ ಕಾನೂನು ಜಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ‘ಎಬಿಸಿ ನ್ಯೂಸ್’ ವರದಿ ಮಾಡಿದೆ. ಮಿಸ್ಟಿ ಕುಕ್ ಬಂದೂಕು ಹೊಂದಿದ್ದ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಸಂಚಾರ ನಿಯಂತ್ರಣ ಅಧಿಕಾರಿಯೊಬ್ಬರ ಕಣ್ಣುತಪ್ಪಿಸಿ ಪಲಾಯನಗೈದಿರುವ ಪ್ರಕರಣದಲ್ಲೂ 2002ರಲ್ಲಿ ಮಿಸ್ಟಿ ಕುಕ್ ಮೇಲೆ ಆಪಾದನೆಯೊಂದನ್ನು ಹೊರಿಸಲಾಗಿತ್ತು.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

» ತಮಿಳುನಾಡು ಭೇಟಿ: ಪ್ರವಾಸಿಗರಿಗೆ ಶ್ರೀಲಂಕಾ ಎಚ್ಚರಿಕೆ
»ದಕ್ಷಿಣ ಕೊರಿಯ ‘ಯೂನಿಫಿಕೇಶನ್’ ಚರ್ಚ್‌ನ ಸ್ಥಾಪಕ ನಿಧನ
»ಪಾಕ್‌ನಲ್ಲಿ ಬಾಂಬ್ ಸ್ಫೋಟ: 2 ಸಾವು, 19 ಜನರಿಗೆ ಗಾಯ
»ಅಮೆರಿಕ: ಭಾರತೀಯ ಸಂಜಾತನಿಗೆ ಪ್ರಮುಖ ಹುದ್ದೆ
»ಸಿರಿಯದಲ್ಲಿ ಬಾಹ್ಯ ಹಸ್ತಕ್ಷೇಪ ಬೇಡ: ಮನಮೋಹನ್ ಸಿಂಗ್
»ಅಣ್ವಸ್ತ್ರಗಳ ಬಳಕೆ ಅಕ್ಷಮ್ಯ ಅಪರಾಧ: ಖಾಮಿನೈ; ನ್ಯಾಮ್ ಶೃಂಗದಲ್ಲಿ ಇರಾನ್ ಮುಖಂಡನ ಹೇಳಿಕೆ
»ಶುಕ್ರವಾರ ಆಗಸದಲ್ಲಿ ಬ್ಲೂ ಮೂನ್‌ ಕೌತುಕ
»ಮಗುವನ್ನು ಮಹಡಿಯಿಂದ ಕೆಳಗೆಸೆದ ತಾಯಿ!
»ನಿಮಗಾದ ತೊಂದರೆಗಾಗಿ ನಾನು ಕ್ಷಮೆ ಕೋರುತ್ತೇನೆ ಇಂದಿರಾ ಗಾಂಧಿ ಬಳಿ ಹೇಳಿದ್ದ ಆರ್ಮ್‌ಸ್ಟ್ರಾಂಗ್
»7.4 quake off El Salvador triggers tsunami alert
»ವೆನೆಝುವೆಲ ತೈಲಾಗಾರ ಸ್ಫೋಟ: ಸಾವಿನ ಸಂಖ್ಯೆ ಕನಿಷ್ಠ 39ಕ್ಕೆ ಏರಿಕೆ
»`ಚಂದ್ರ' ಮಾನವ ಇನ್ನಿಲ್ಲ...
»ವೆನೆಜುವೆಲ: ತೈಲ ಸ್ಥಾವರದಲ್ಲಿ ಸ್ಫೋಟ, ಕನಿಷ್ಠ 19 ಬಲಿ
»ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರಬ್ ಮಹಿಳೆಯರು
»ಕ್ಯುರಿಯಾಸಿಟಿಯ ಸುತ್ತಾಟ ಆರಂಭ
»ಬಿಕಿನಿ ನೀರೆಯರೊಂದಿಗೆ ಬ್ರಿಟಿಷ್ ರಾಜಕುಮಾರ ಹ್ಯಾರಿ!
»ಜೈಪುರ್: ಭಾರೀ ಮಳೆಗೆ 6 ಜನ ಬಲಿ
»ಅನಾರೋಗ್ಯ:ಇಥಿಯೋಪಿಯಾ ಪ್ರಧಾನಿ ಮೆಲೆಸ್ ಜೆನಾವಿ ವಿಧಿವಶ?
»ಜಪಾನಿನ ಯುದ್ಧ ಪತ್ರಕರ್ತೆ ದುರಂತ ಸಾವು
»ರೈಲಿನಿಂದ ಹೊರಗೆಸೆದು ಅಸ್ಸಾಮಿಗರಿಬ್ಬರ ಹತ್ಯೆ(Updated)
»ಅಮೆರಿಕ: ಭಾರತೀಯ ಮುಸ್ಲಿಮರಿಂದ ಸ್ವಾತಂತ್ರ ದಿನಾಚರಣೆ; ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
»ಫೇಸ್ ಬುಕ್ ಕಾಮೆಂಟ್ ಗೆ ನೊಂದು ಸೂಸೈಡ್...
»ಅಂತರಿಕ್ಷದಲ್ಲಿಯೂ ರಾಷ್ಟ್ರಧ್ವಜಾರೋಹಣ...
»ರಿಯೋಗೆ ಬಂದ ಒಲಿಂಪಿಕ್ಸ್ ಬಾವುಟ...
»ಗಿರ್-ಸೋಮ್‌ನಥ್ ನೂತನ ಜಿಲ್ಲೆಯಾಗಿ ಘೋಷಿಸಿದ ಮೋದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri