ಪ್ರಕಟಿಸಿದ ದಿನಾಂಕ : 2012-08-08
2012ರ ಜುಲೈ 16ರ ನಡುಮಧ್ಯಾಹ್ನ...
ಉತ್ತರಪ್ರದೇಶದ
ಗ್ರಾಮವೊಂದರಲ್ಲಿ ಕಿಶನ್ ಚೌಧುರಿ ಎಂಬ ರೈತ ತನ್ನ ಪುಟ್ಟ ಹೊಲದ ಪಕ್ಕದಲ್ಲೇ ಇರುವ
ವಿಶಾಲವಾದ ಬೇವಿನ ಮರದ ತಂಪುನೆರಳಿನಲ್ಲಿ ತನ್ನ ಪುತ್ರರು, ಸೊಸೆಯರ ಜೊತೆ
ವಿಶ್ರಮಿಸಿಕೊಳ್ಳುತ್ತಿದ್ದಾನೆ. ಆತನ ಕಣ್ಣುಗಳು ಆತನಿಗೆ ಅರಿವಿಲ್ಲದ ಹಾಗೆ ನೀಲಿ
ಆಗಸದತ್ತ ನೋಡುತ್ತವೆ. ಬಳಿಕ ನಿರಾಶೆಯಿಂದ ನಿಟ್ಟುಸಿರೆಳೆಯುತ್ತಾನೆ. ಆತನಿಗಾಗಲಿ ಅಥವಾ
ಮಕ್ಕಳು, ಸೊಸೆಯಂದಿರಿಗಾಗಲಿ ಕಾದ ಕೆಂಡಂತೆ ಸುಡುತ್ತಿರುವ ಬಿಸಿಲಿನ ಬಗ್ಗೆ
ಚಿಂತೆಯಿಲ್ಲ. ಹೆಚ್ಚು ಕಮ್ಮಿ ಜುಲೈ ತಿಂಗಳ ಆರಂಭದಲ್ಲಿಯೇ ಧೋ ಎಂದು ಸುರಿಯಬೇಕಾಗಿದ್ದ
ಮಳೆ ಇನ್ನೂ ಯಾಕೆ ಬಂದಿಲ್ಲವೆಂಬ ದುಗುಡ ಮಾತ್ರ ಅವರನ್ನು ಕಾಡುತ್ತಿದೆ.
ಮಳೆಯಿಲ್ಲದಿರುವುದರಿಂದ ತಮ್ಮ ಹೊಲದಲ್ಲಿ ಅವರಿಗೆ ಜೋಳ ಕೃಷಿಯನ್ನು ಆರಂಭಿಸಲು ಇನ್ನೂ
ಸಾಧ್ಯವಾಗಿಲ್ಲ. ಇದರ ಜೊತೆಗೆ ಮೇವಿಲ್ಲದೆ ಅವರ ಜಾನುವಾರುಗಳು ಕೂಡಾ ಕಾಯಿಲೆ ಹಿಡಿದಿವೆ.
ಇದು
ಚೌಧುರಿಯ ಕುಟುಂಬದ ಕತೆಯಷ್ಟೇ ಅಲ್ಲ, ಭಾರತದ 60 ಕೋಟಿಗೂ ಅಧಿಕ ರೈತರ ಪರಿಸ್ಥಿತಿಯೂ
ಇದೇ ಆಗಿದೆ.ಮುಂಗಾರಿನ ವಿಳಂಬದಿಂದಾಗಿ ಭಾರತದ 60 ಕೋಟಿಗೂ ಹೆಚ್ಚಿನ ರೈತರು ತಲೆಮೇಲೆ
ಕೈಹೊತ್ತು ಕೂತಿದ್ದಾರೆ. ದೇಶದ ಕೋಟ್ಯಂತರ ರೈತರಂತೆ ಚೌಧುರಿಯ ಹೊಲಗಳಿಗೂ ನೀರಾವರಿಯ
ವ್ಯವಸ್ಥೆಯಿಲ್ಲ. ಜೂನ್ನಿಂದ ಹಿಡಿದು ಸೆಪ್ಟಂಬರ್ವರೆಗೆ ಸುರಿಯುವ ಮುಂಗಾರು ಮಳೆಯನ್ನೇ
ಅವರು ಅವಲಂಭಿಸಿ ಕೊಂಡಿದ್ದಾರೆ. ಆದೇನು ದುರದೃಷ್ಟವೋ ಏನೊ, ಜುಲೈ ಕಳೆದರೂ ಮುಂಗಾರು
ಕಣ್ಣಾಮುಚ್ಚಾಲೆಯಾಡುತ್ತಿದೆ. ಕಳೆದ ನೂರು ವರ್ಷಗಳಲ್ಲಿಯೇ ಭಾರತವು ಈ ಬಾರಿ ಅತ್ಯಂತ
ಕೆಟ್ಟ ಮುಂಗಾರನ್ನು ಕಾಣುತ್ತಿದೆ.
ದೇಶದ ಒಟ್ಟು ಮಳೆಯ ಶೇ.80ರಷ್ಟು ನೈಋತ್ಯ ಮುಂಗಾರಿನಿಂದ ದೊರೆಯುತ್ತದೆ. ಆದರೆ
ಜೂನ್ನಿಂದ ಆಗಸ್ಟ್ ತಿಂಗಳ ಮಧ್ಯದ ಅವಧಿಯಲ್ಲಿ ಸರಾಸರಿಗಿಂತ ಶೇ.29ರಷ್ಟು ಕಡಿಮೆ
ಮಳೆಯಾಗಿದೆ. ಮುಂಗಾರಿನ ದಯನೀಯ ವೈಫಲ್ಯದಿಂದ ಭತ್ತ, ಕಬ್ಬು, ಎಣ್ಣೆ ಧಾನ್ಯಗಳ ಕೃಷಿಗಳು
ತತ್ತರಿಸಿವೆ. ಕಳೆದ ಕೆಲವು ದಿನಗಳಲ್ಲಿ ದೇಶದ ಕೆಲವೆಡೆ ಸಾಧಾರಣ ಮಳೆಯಾಗಿದೆಯಾದರೂ,
ಅವುಗಳ ಆಗಮನ ತುಂಬಾ ವಿಳಂಬವಾಗಿದೆ. ಒಂದು ವೇಳೆ ಮುಂದಿನ ಕೆಲವು ದಿನಗಳಲ್ಲಿ ಭಾರೀ
ಮಳೆಯಾದರೂ,ಇದರಿಂದ ಕಬ್ಬು ಬೆಳೆಗೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.ಭಾರತದ
ಆರ್ಥಿಕತೆಯು,ಅಸ್ಥಿರವಾದ ಮುಂಗಾರು ಮಳೆಯನ್ನು ಅತ್ಯಂತ ಗಾಢವಾಗಿ ನಂಬಿಕೊಂಡಿದೆ.
ಶೇ.18ರಷ್ಟು ಭಾರತದ ಒಟ್ಟು ಆಂತರಿಕ ಉತ್ಪನ್ನವು ಕೃಷಿಯಿಂದಲೇ ಬರುತ್ತದೆ.
ಇನ್ನೊಂದು ಮಹತ್ವದ ಅಂಶವೆಂದರೆ, ಶೇ.60ರಷ್ಟು ಭಾರತೀಯರು ಕೃಷಿಯನ್ನೇ ಪ್ರಧಾನ
ಉದ್ಯೋಗವಾಗಿ ಅವಲಂಭಿಸಿದ್ದಾರೆ. 2002ರಲ್ಲಿ ಮುಂಗಾರು ಮಳೆಯು ಸಾಮಾನ್ಯಕ್ಕಿಂತ
ಶೇ.19ರಷ್ಟು ಕಡಿಮೆಯಾದಾಗ, ಒಟ್ಟು ಆಂತರಿಕ ಉತ್ಪನ್ನವು ಶೇ.17ರಷ್ಟು ಕುಸಿದಿತ್ತು ಹಾಗೂ
ಶೇ.5.8ರಷ್ಟಿದ್ದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವು ಶೇ.5.8ರಿಂದ ಶೇ.3.8ಕ್ಕೆ
ಇಳಿಯಿತು.ಮುಂಗಾರು ಮಳೆಯ ವೈಫಲ್ಯದ ಕರಾಳ ಪರಿಣಾಮಗಳು ರೈತರಿಗೆ ಅದರಲ್ಲೂ ಸಣ್ಣಪುಟ್ಟ
ಹಿಡುವಳಿದಾರರಿಗೆ ಈಗಾಗಲೇ ಗೋಚರಿಸ ತೊಡಗಿವೆ. ಮಳೆಯಿಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗದೆ
ರೈತರು ಜೀವನನಿರ್ವಹಣೆಗಾಗಿ ಸಾಲದ ಬಲೆಗೆ ಸಿಲುಕುತ್ತಿದ್ದಾರೆ.
ಬಡ
ರೈತರನ್ನು ಸಾಂತ್ವನ ಹೇಳಲೋ ಎಂಬಂತೆ ಸರಕಾರ ಕೂಡಾ, ತಾನು ಗ್ರಾಮೀಣ ಪ್ರದೇಶಗಳಲ್ಲಿ
ಸಬ್ಸಿಡಿ ಆಹಾರಗಳ ವಿತರಣೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ ಹಾಗೂ ರೈತರ ಬ್ಯಾಂಕ್
ಸಾಲಗಳನ್ನು ವಿಳಂಬವಾಗಿ ಪಾವತಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ. ಗ್ರಾಮೀಣ
ಜನತೆಗೆ ವರ್ಷದಲ್ಲಿ 100 ದಿನಗಳ ಉದ್ಯೋಗ ವನ್ನು ಒದಗಿಸುವ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆಗೆ ನೀಡಲಾಗುವ ಅನುದಾನವನ್ನು ಗಣನೀಯವಾಗಿ ಹೆಚ್ಚಿಸುವುದಾಗಿ ಪ್ರಕಟಿಸಿದೆ. ಕಳೆದ
ವರ್ಷ ಕೇಂದ್ರ ಸರಕಾರ ಸುಮಾರು 700 ಶತಕೋಟಿ ರೂಪಾಯಿಗಳನ್ನು , ಬಡರೈತರ
ಸಾಲಮನ್ನಾಕ್ಕೆಂದು ವ್ಯಯಿಸಿತ್ತು.
ಆದರೆ
ಈ ವರ್ಷ ಸರಕಾರವು ಆ ಬಗ್ಗೆ ಇನ್ನೂ ಕೂಡಾ ಸೊಲ್ಲೆತ್ತಿಲ್ಲ.ದೇಶದ ರೈತಜನತೆ ಈ ವರ್ಷ
ಅತ್ಯಂತ ಹತಾಶಕಾರಿ ಪರಿಸ್ಥಿತಿಯಲ್ಲಿದ್ದಾರೆಂದು ಭಾರತದ ಹಸಿರುಕ್ರಾಂತಿಯ ಜನಕನೆಂದೇ
ಗೌರವಿಸಲ್ಪಡುವ ಎಂ.ಎಸ್.ಸ್ವಾಮಿನಾಥನ್ ಆತಂಕ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳಿಗೆ
ಮೇವು ನೀಡಲಾಗದೆ ರೈತರು ಅವುಗಳನ್ನು ಮಾರತೊಡಗಿದ್ದಾರೆ, ಕೆಲವು ಬರಪೀಡಿತ
ಪ್ರದೇಶಗಳಲ್ಲಂತೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಜುಲೈ ಅಂತ್ಯದ ವೇಳೆಗೆ
ಭಾರತದ ಒಟ್ಟು 600 ಜಿಲ್ಲೆಗಳ ಪೈಕಿ 246 ಜಿಲ್ಲೆಗಳು ತೀವ್ರ ಬರದ ದವಡೆಗೆ ಸಿಲುಕಿವೆ.
ಹರ್ಯಾಣ, ಚಂಡೀಗಢ ಹಾಗೂ ದಿಲ್ಲಿ , ಆಂಧ್ರದ ತೆಲಂಗಾಣ ಪ್ರಾಂತಗಳು ಶೇ.60ರಷ್ಟು ಮಳೆಯ
ಕೊರತೆಯನ್ನು ಈಗಾಗಲೇ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳ ಪರಿಸ್ಥಿತಿ
ಇನ್ನಷ್ಟು ಶೋಚನೀಯವಾಗಲಿದೆ.ಭಾರತದ ಭತ್ತದ ಬೆಳೆಗೆ ಪ್ರಖ್ಯಾತವಾದ ತೆಲಂಗಾಣದಲ್ಲಿ
ಮುಂದಿನ ಕೆಲವು ವಾರಗಳಲ್ಲಿ ಮಳೆಯಾಗದಿದ್ದಲ್ಲಿ ಅಕ್ಕಿಯ ಬೆಲೆ ಎರಡು ಪಟ್ಟು ಹೆಚ್ಚಾಗುವ
ಅಪಾಯವಿದೆಯೆಂದು ಈಗಾಗಲೇ ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ,
ಚೀನದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರೈತರು ಕೃಷಿಗೆ ಮಳೆರಾಯನ ಕೃಪೆಯನ್ನೇ ನಂಬಿ
ಕುಳಿತಿಲ್ಲ. ಅಲ್ಲಿ ಕೃಷಿ ಜಮೀನುಗಳಿಗೆ ಅತ್ಯುತ್ಕೃಷ್ಟವಾದ ನೀರಾವರಿ ವ್ಯವಸ್ಥೆಯಿದೆ,
ಯಥೇಚ್ಛವಾದ ವಿದ್ಯುತ್ ಲಭ್ಯವಿದೆ. ಆದರೆ ಭಾರತೀಯ ರೈತರು ಮಾತ್ರ ಈ ವಿಷಯಗಳಲ್ಲಿ
ನಿಜಕ್ಕೂ ದುರದೃಷ್ಟವಂತರು. ಸ್ವಾತಂತ್ರ ದೊರೆತು ಆರು ದಶಕಗಳೇ ಉರುಳಿದರೂ ನೀರಾವರಿ,
ಕೃಷಿ ವಿದ್ಯುತ್ ಸೌಲಭ್ಯದಿಂದ ನದೇಶದ ಮುಕ್ಕಾಲಂಶ ರೈತರು ಇವತ್ತಿಗೂ ವಂಚಿತರಾಗಿದ್ದಾರೆ.
ಮುಂಗಾರು ಮಳೆಯ ದಯನೀಯ ವೈಫಲ್ಯದಿಂದಾಗಿ ಈ ಬಾರಿ ಭತ್ತದ ಉತ್ಪಾದನೆಯು ಹತ್ತರಿಂದ 15
ಮಿಲಿಯ ಟನ್ಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಭತ್ತದ
ಉತ್ಪಾದನೆಯಲ್ಲಿ ಇಷ್ಟೊಂದು ಗಣನೀಯ ಕೊರತೆಯನ್ನು ಸಹಿಸಿಕೊಳ್ಳಲು ಭಾರತಕ್ಕೆ ನಿಜಕ್ಕೂ
ಕಷ್ಟವೇ ಸರಿ. ಮುಂಗಾರು ಕೈಕೊಟ್ಟ ಪರಿಣಾಮವಾಗಿ ಈ ಸಲ ಇಡೀ ದೇಶವನ್ನು ವಿದ್ಯುತ್ತಿನ
ಕೊರತೆ ಕಾಡಲಿದ್ದು, ಪವರ್ ಕಟ್ಗಳು ಮುಂದಿನ ದಿನಗಳಲ್ಲಿ ಸಾಮಾನ್ಯವಾಗಲಿವೆ.ಬರಪೀಡಿತ
ಭಾರತದಲ್ಲಿ ಈಗಾಗಲೇ ಆಹಾರದರಗಳು ಶೇ.10ರಷ್ಟು ಹೆಚ್ಚಾಗಿವೆಯೆಂದು ಬಿಬಿಸಿ ವರದಿಯೊಂದು
ತಿಳಿಸಿದೆ. ಭಾರತ ‘ಗಂಭೀರ ಸನ್ನಿವೇಶ’ವನ್ನು ಎದುರಿಸುತ್ತಿದೆಯೆಂದು ಎರಡು ತಿಂಗಳ ಹಿಂದೆ
ಕೇಂದ್ರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಪ್ರಣವ್ ಮುಖರ್ಜಿಯವರೇ ಕಳವಳ
ವ್ಯಕ್ತಪಡಿಸಿದ್ದರು.ಆಹಾರದ ಬರವನ್ನು ಸರಿದೂಗಿಸಲು ಆಹಾರಧಾನ್ಯಗಳನ್ನು
ಆಮದುಮಾಡಿಕೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದರು.
ಮತ್ತೆ ಎಡವಿದ ಹವಾಮಾನ ಇಲಾಖೆ
ಈ
ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರುಮಳೆಯಾಗಲಿದೆಯೆಂದು ಜೂನ್ ಆರಂಭದಲ್ಲಿ ಭಾರತೀಯ
ಹವಾಮಾನ ಇಲಾಖೆ (ಐಎಂಡಿ) ನೀಡಿದ ಮುನ್ಸೂಚನೆಯನ್ನು ನಂಬಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ
40 ವರ್ಷದ ರೈತ ಲಕ್ಷ್ಮಣ್ ವಿಶ್ವನಾಥ್ ವಾಡಲೆ ತನ್ನ 60 ಎಕರೆ ಜಮೀನಿನಲ್ಲಿ ಆಹಾರ
ಬೆಳೆಗಳನ್ನು ಬೆಳೆಯಲು, ರಸಗೊಬ್ಬರ ಹಾಗೂ ಬೀಜಗಳಿಗಾಗಿ ಸುಮಾರು 25ಸಾವಿರ ರೂ.
ವ್ಯಯಿಸಿದ್ದ. ಈಗ ಮಳೆಯೂ ಇಲ್ಲ, ಕೃಷಿಗೆಂದು ಸುರಿದ ಹಣವೂ ಹೋಯಿತು. ಮುಂದೇನೆಂದು
ತಿಳಿಯದೆ ಆತ ಕಂಗಾಲಾಗಿದ್ದಾನೆ.ಇಂದು ವಾಡಲೆಯಂತೆ ಲಕ್ಷಾಂತರ ರೈತರು, ಭಾರತೀಯ ಹವಾಮಾನ
ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆದರೆ
ಮುಂಗಾರಿನ ಮುನ್ಸೂಚನೆ ನೀಡುವಲ್ಲಿ ಹವಾಮಾನ ಇಲಾಖೆಯು ಎಡವಿರುವುದು ಇದು ಮೊದಲೇನಲ್ಲ.
ಹೆಚ್ಚುಕಮ್ಮಿ ಪ್ರತಿ ವರ್ಷವೂ ಅದರ ಭವಿಷ್ಯವಾಣಿ ಹುಸಿಯಾಗುತ್ತಲೇ ಬಂದಿದೆ. ಆದರೆ ಈ
ಬಾರಿ ಮುಂಗಾರು ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರಿಗೆ ಅದರ ಪರಿಣಾಮ ಅನುಭವಕ್ಕೆ
ಬಂದಿದೆ.
2009ರಲ್ಲಿಯೂ ಅದು ಎಂದಿನಂತೆ ಸಾಮಾನ್ಯ ಮಳೆಯಾಗುವುದೆಂದು ಮುನ್ಸೂಚನೆ
ನೀಡಿತ್ತು. ಆದರೆ ಆ ವರ್ಷ ದೇಶದ ಹೆಚ್ಚಿನ ಭಾಗಗಳು ಕಳೆದ ನಲ್ವತ್ತು ವರ್ಷಗಳಲ್ಲಿಯೇ
ಅತ್ಯಂತ ಭೀಕರ ಬರಕ್ಕೆ ತುತ್ತಾಗಿದ್ದವು. ಅವರೊಡನೆ ನಡೆದ ಮಾತುಕತೆ
ಸಾವಿತ್ರಮ್ಮನವರಿಗೆ ಸ್ವಲ್ಪ ಹೆಚ್ಚಿನ ಭರವಸೆಯನ್ನು ನೀಡಿರಬೇಕು. ವೈದ್ಯಕೀಯ ಶಾಸ್ತ್ರದ
ಪಾಠದಲ್ಲಿ ಹಾಗೆಯೇ ಇದೆ ತಾನೆ?.... ನೀನು ರೋಗಿಗಳಿಗೆ ಭರವಸೆಯನ್ನು ಕೊಡಬಲ್ಲ ಮೃದು
ಮಾತುಗಳಿಂದ ಮಾತಾಡಿಸಬೇಕು...ಅವರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ನಿನ್ನ
ಪಾತ್ರ ಅತ್ಯಂತ ದೊಡ್ಡದು... ಅವರ ಚಿಂತೆಗೆ ಕಾರಣವೇನು? ಇಂಥದ್ದನ್ನೂ ತಿಳಿದುಕೊಂಡು
ವೈದ್ಯ ರೋಗಿಯನ್ನು ಉಪಚರಿಸ ತೊಡಗಿದಾಗ... ರೋಗಿಯ ಅಂತರಂಗವೆಲ್ಲ
ತೆರೆದುಕೊಳ್ಳುತ್ತದೆ.... ಎಷ್ಟೋ ಕಾಯಿಲೆಗಳಿಗೆ ಮನಸ್ಸೇ ಕಾರಣ ತಾನೆ?! ಕಣ್ಣುಗಳನ್ನು
ಪರೀಕ್ಷೆ ಮಾಡುತ್ತಾ... ಕುಳಿತ ವೈದ್ಯರು ಸಾವಿತ್ರಮ್ಮನ ಪಾಲಿಗೆ ಸ್ವಂತ ಒಡ
ಹುಟ್ಟಿದವನಂತೆ ಭಾಸವಾದಾಗ ಅವರು ಅಳುತ್ತಾ ತನ್ನ ವೈಧವ್ಯದ ಕಷ್ಟಗಳನ್ನೆಲ್ಲಾ ಅವರೊಡನೆ
ಹಂಚಿಕೊಂಡರು....
ಕೊನೆಯದಾಗಿ ಸಾವಿತ್ರಮ್ಮನವರ ಮನದಲ್ಲಿದ್ದ ಒಂದು ಮಹತ್ತಿನ
ಪ್ರಶ್ನೆ ಹೊರ ಬಂತು... ಅಳುತ್ತಲೇ ಅವರು ಕೇಳಿದರು - ‘‘ದೇವರು ತಲೆ ಕೂದಲನ್ನು
ಸೃಷ್ಟಿಸಿದ್ದು ಯಾಕೆ ಹೇಳಿ? ಕಣ್ಣಿಗೆ... ಮೆದುಳಿಗೆ ತಂಪಾಗಲಿ ಎಂದಲ್ಲವೇ? ಮನೆಯ
ಮಾಡಿಗೆ ಮುಳಿಹುಲ್ಲನ್ನು ಹೊದೆಸುವುದು ಯಾಕೆ ಹೇಳಿ - ಒಳಗಿನವರಿಗೆ ಹಲವು ರೀತಿಯ ರಕ್ಷಣೆ
ಒದಗಲೆಂದಲ್ಲವೇ? ಮನುಷ್ಯನ ಮುಖಕ್ಕೊಂದು ಲಕ್ಷಣ ಕೊಡುವ ಈ ತಲೆಕೂದಲನ್ನು ನಮ್ಮ ಜನರು
ಕತ್ತರಿಸಿ ಹಾಕುವುದೇ ಸ್ವಾಮಿ? ದೇವರು ಇದನ್ನು ಮೆಚ್ಚಿಯಾನೆ? ಹುಟ್ಟು ಮತ್ತು ಸಾವು....
ನಮ್ಮ ಜೀವನದ ಸಹಜ ಗುಣ....ಗಂಡನನ್ನು ಕಳಕೊಂಡ ನೋವಿನಿಂದಲೇ ನನಗೆ ಈ ಜನ್ಮದಲ್ಲಿ
ಚೇತರಿಸಿಕೊಳ್ಳಲು ಸಾಧ್ಯವಿಲ್ಲದಾಗ..... ಪ್ರತಿ ತಿಂಗಳು ಆ ಕ್ಷೌರಿಕನ ಎದುರಿನಲ್ಲಿ
ಕುಳಿತುಕೊಂಡು ತಲೆ ಬೋಳಿಸಿ ಕೊಳ್ಳುವುದೇ?
ನಾನು
ಈಗಲೂ ಹೆಣ್ಣಲ್ಲವೇ?.... ನಾನು ತಾಯಿಯಲ್ಲವೇ.... ಒಬ್ಬ ತಾಯಿಯ.... ಹೆಣ್ಣಿನ ಮಾನಸಿಕ
ಸ್ಥಿತಿಗತಿಗಳಿಗೆ ಬೆಲೆಯೇ... ಇಲ್ಲವೇ? ನನ್ನ ತಲೆ ಗೂದಲನ್ನು ಉಳಿಸಲು ದಯಮಾಡಿ ಸಹಾಯ
ಮಾಡುವಿರಾ ಸ್ವಾಮಿ?’’ ಸಾವಿತ್ರಮ್ಮನವರಿಂದ ಮುಂದೆ ಮಾತನಾಡಲಾಗಲಿಲ್ಲ. ಡಾಕ್ಟರರ ಎರಡೂ
ಕೈಗಳನ್ನು ಹಿಡಿದು ಬಿಕ್ಕಿ ಬಿಕ್ಕಿ ಅತ್ತರು.ವೈದ್ಯರ ಹೃದಯವೂ ಕರಗಿರಬೇಕು.....
ಸಾವಿತ್ರಮ್ಮನನ್ನು ಹೊರಗಡೆ ಕಳುಹಿಸಿದ ಅವರು, ಹೊರಗಡೆ ಕಾಯುತ್ತಿದ್ದ ಅವರ ಮಾವನವರನ್ನು
ಒಳಗೆ ಬರಹೇಳಿ.... ಒಂದಷ್ಟು ಹೊತ್ತು ಮಾತನಾಡಿದ್ದರು. ಅವರೊಡನೆ ಡಾಕ್ಟರ್ ಏನು
ಹೇಳಿದರೋ.... ಅದು ಸಾವಿತ್ರಮ್ಮನ ಅರಿವಿಗೆ ಬರಲಿಲ್ಲ... ಆದರೂ... ಆ ಪ್ರಸಂಗದ ನಂತರ...
ಅಷ್ಟು ಸಂಪ್ರದಾಯಸ್ಥರ ಮನೆಗೆ.... ವಿಧವೆಯ ತಲೆಯನ್ನು ಬೋಳಿಸುವ ಕ್ಷೌರಿಕನು ಎಂದೂ
ಬರಲಿಲ್ಲ. ಬರಲೇ ಇಲ್ಲ..... ತನ್ನ ಕಥೆಯನ್ನು ಮುಗಿಸಿದ ಅಜ್ಜಿ... ಎದುರಿನಲ್ಲಿ ಕುಳಿತ
ತನ್ನ ಮೊಮ್ಮಕ್ಕಳನ್ನು ನೋಡಿದರು. ಶ್ರೀನಾಥ ಮತ್ತು ಶ್ರೀನಿಧಿ- ಇಬ್ಬರೂ ಅವರಿಗೆ
ಮೊಮ್ಮಕ್ಕಳೇ....
ವರದಿಯ ವಿವರಗಳು |
 |
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-08
|
|
|