ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ

( ಚಿತ್ರ: ಅಶೋಕ್ ಬೆಲ್ಮಣ್)

ದುಬೈ:ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಒಂದಾಗಿರುವ ಗಾಣಿಗ ಸಮಾಜ ದುಬೈ,ಯು.ಎ.ಇ.ಸಂಘಟನೆ ಪವಿತ್ರ ರಂಜಾನ್ ಮಾಸಾಚರಣೆಯ ಈ ಸುಸಂದರ್ಭದಲ್ಲಿ ರಕ್ತದಾನ ಶಿಭಿರವನ್ನು ದುಬಾಯಿ ಲತಿಫಾ ಅಸ್ಪತ್ರೆಯಲ್ಲಿ (ಅಲ್ ವಾಸಲ್ ಆಸ್ಪತ್ರೆ)೨೦೧೨ ಆಗಸ್ಟ್ ೬ನೇ ಸೋಮವಾರ ರಾತ್ರಿ ೭.೦೦ ರಿಂದ ರಾತ್ರಿ ೧೦.೦೦ ಗಂಟೆಯವರೆಗೆ ಏರ್ಪಡಿಸಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನಿಗಳು ಆಗಮಿಸಿ ರಕ್ತ ದಾನ ಶಿಭಿರವನ್ನು ಯಶಸ್ವಿಗೊಳಿಸಿದರು.

ಗಾಣಿಗ ಸಮಾಜ ದುಬೈ ಯು.ಎ.ಇ.ಸಮುದಾಯದ ಎಲ್ಲಾ ಸದಸ್ಯರುಗಳು ಅತೀ ಉತ್ಸಾಹದಿಂದ ರಕ್ತದಾನ ಶಿಭಿರದ ಅವರಣದಲ್ಲಿ ಹಾಜರಿದ್ದು ರಕ್ತದಾನಿಗಳನ್ನು ಸಂತೋಷದಿಂದ ಬರಮಾಡಿಕೊಂಡರು.ಅತ್ಯಂತ ಆತ್ಮೀಯ ವಾತವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಬಂಧುಮಿತ್ರರು ನಿಗಧಿತ ಫಾರಂಗಳನ್ನು ಭರ್ತಿಮಾಡಿ ರಕ್ತದ ಪೂರ್ವ ಪರೀಕ್ಷೆಯನ್ನು ಮಾಡಿಕೊಂಡು ರಕ್ತ ದಾನ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು.ತಾವು ನೀಡಿರುವ ರಕ್ತ ಮಾನವನ ಜೀವವನ್ನು ಉಳಿಸುವ ತೃಪಿಯೊಂದಿಗೆ ತಾವು ಕೂಡ ಆರೋಗ್ಯವಂತರಾಗಿ ಇರುವುದಕ್ಕೆ ಸಾಕ್ಷೀಕರಿಸಿದ ಭಾವನೆ ಪ್ರತಿಯೊಬ್ಬರ ಮುಖಗಳಲ್ಲಿ ವ್ಯಕ್ತವಾಗಿತ್ತು.  

ಗಾಣಿಗ ಸಮಾಜ ದುಬೈ ಯು.ಎ.ಇ.ಸಮುದಾಯದ ರಕ್ತದಾನ ಶಿಭಿರದಲ್ಲಿ ಶ್ರೀಯುತರುಗಳಾದ ದಯಾಕಿರೋಡಿಯನ್ ದುಬಾಯಿ ಕರ್ನಾಟಕ ಸಂಘ,ಬಾಲಕೃಷ್ಣ ಸಾಲಿಯನ್ ಮೊಗವೀರ್ಸ್ ಯು.ಎ.ಇ.ಉಪಾಧ್ಯಕ್ಷರು,ಸುಧಾಕರ್ ತುಂಬೆ ಬಿಲ್ಲವ ಬಳಗ ದುಬಾಯಿ ಅಧ್ಯಕ್ಷರು,ಯು.ಎ.ಇ. ಬಂಟ್ಸ್ ವತಿಯಿಂದ ಸುಧಾಕರ್ ಆಳ್ವ,ಧ್ವನಿ ಪ್ರತಿಷ್ಠಾನದ ಅಧ್ಯಕ್ಷರು ಪ್ರಕಾಶ್ ರಾವ್ ಪಯ್ಯಾರ್, ಕನ್ನಡ ಕೂಟ ಯು.ಎ.ಇ.ಅರುಣಾ ಮುತ್ತಗದ್ದೂರ್,ಸದನ್ ದಾಸ್,ಬಸವ ಸಮಿತಿಯಿಂದ ಮುರುಗೇಶ್ ಗಾಜರೆ,ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಗಣೇಶ್ ಪ್ರಸಾದ್,ಗಲ್ಫ್ ಕನ್ನಡಿಗದ ಅಶೋಕ್ ಬೆಳ್ಮಣ್,ಮ್ಯಾಂಗ್ಳೂರ್ ವೆಬ್ ಮೀಡಿಯಾದ ಪ್ರಶಾಂತ್ ಹಾಗೂ ಇನ್ನಿತರ ಹಲವಾರು ಆತ್ಮೀಯರು ಭಾಗವಹಿಸಿದ್ದರು.

ಗಾಣಿಗ ಸಮಾಜ ದುಬೈ ಯು.ಎ.ಇ.ಸಮುದಾಯದ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣ ರವರು ಮತ್ತು ಕಾರ್ಯಕಾರಿ ಸಮಿತಿಯವರು ಪ್ರಥಮ ಬಾರಿಗೆ ಏರ್ಪಡಿಸಿದ್ದ ಯಶಸ್ವಿ ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವರಿಗೂ ಮತ್ತು ಮಾಧ್ಯಮದವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ರಕ್ತದಾನ ಶಿಭಿರದಲ್ಲಿ ಭಾಗವಹಿಸಿದ ರಕ್ತದಾನಿಗಳಿಗೆ ಗಾಣಿಗ ಸಮಾಜದ ವತಿಯಿಂದ ಮತ್ತು ಶ್ರೀ ಸತೀಶ್ ವೆಂಕಟರಮಣರವರ ಸಂಸ್ಥೆಯಾದ ಚಿಲ್ಲಿ ವಿಲ್ಲಿ ಟ್ರೇಡಿಂಗ್ ಕಂಪೆನಿ ದುಬಾಯಿ ವತಿಯಿಂದ ಪ್ರಶಂಸಾ ಪತ್ರ,ಟಿ ಶರ್ಟ್,ಕ್ಯಾಪ್,ಪೆನ್,ಜೂಸ್,ಸ್ನಾಕ್ಸ್ ವಿತರಿಸಲಾಯಿತು.

ಪವಿತ್ರ ರಂಜಾನ್ ಮಾಸದಲ್ಲಿ ಕರ್ನಾಟಕ ಪರ ವಿವಿಧ ಸಂಘಟನೆಗಳು ಏರ್ಪಡಿಸಿದ ರಕ್ತದಾನ ಅಭಿಯಾನದಲ್ಲಿ ಗಾಣಿಗ ಸಮಾಜ ದುಬೈ ಯು.ಎ.ಇ.ಸರ್ಕಾರದ ದಾಖಲೆ ಪುಟದಲ್ಲಿ ಸೇರ್ಪಡೆಯಾಗಿ ಭಾರತೀಯರು ಕೊಲ್ಲಿ ನಾಡಿನ ಈ ಮಣ್ಣಿನಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪವಿತ್ರ ಕಾರ್ಯಕ್ಕೆ ಸಾಕ್ಷಿಯಾದರು.

ಗಲ್ಫ್ ಕನ್ನಡಿಗ ಗಾಣಿಗ ಸಮಾಜ ದುಬೈ ಯು.ಎ.ಇ.ಮತ್ತು ಎಲ್ಲಾ ರಕ್ತದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲು ಹರ್ಷಿಸುತ್ತದೆ.

ಗಣೇಶ್ ರೈ - ಯು.ಎ.ಇ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-08

Tell a Friend

ಪ್ರತಿಸ್ಪಂದನ
Sarvotham Shetty, Abu Dhabi
2012-08-08
Congratulations to GANIGA Samaja for organising this Blood Donation Camp. I could not come for the same because I have been invited for the IFTHAR koota on the same day here in Abu Dhabi. Othewise I wanted to come and donate blood. GOD bless Satish, Mamatha and each and every member of Ganiga Samaja.
ಈರಣ್ಣ ಮೂಲೀಮನಿ(ಕಸ್ತೂರಿಪ್ರಿಯ), ದುಬೈ
2012-08-08
'ರಕ್ತ ದಾನ ಮಹಾದಾನ"ರಕ್ತದಾನದಲ್ಲಿ ಪಾಲ್ಗೊಂಡ ಎಲ್ಲ ದಾನಿಗಳಿಗೆ, ಜೀವರಕ್ಷಕರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ. ಇಂಥ ಸತ್ಕಾರ್ಯವನ್ನು ನಡೆಸಿ ತಾಯ್ನಾದಿನ ಹಿರಿಮೆ, ಪಾವಿತ್ರತೆ ಎತ್ತಿ ತೋರಿಸಿದ ಗಾಣಿಗ ಸಮಾಜದ ಅಧ್ಯಕ್ಷರು ಹಾಗೂ ಅದರ ಪದಾಧಿಕಾರಿಗಳಿಗೆ ಹಾಗೂ ಶಿಬಿರದ ಉಸ್ತುವಾರಿ ವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು
Balakrishna M Salian , Yermal Bada / Dubai
2012-08-08
Congratulation to Ganiga Samaja Dubai, U.A.E.for ( "Donate Blood save Life - Live Healthy" ) campaign, G. S. DUBAI, UAE. has enthusiastically come forward to overcome the current shortage of blood during Ramadan, I thank all the donors , different organizations and their eminent personalities for taking time and attending this noble cause ( Gift Of Life )

One Donor's Blood ( One Unit 450ml ) can save 3 to 4 children suffering from Thalassaemia. People can safely give whole blood 4 times a year because our body takes up to 4 weeks to replace the red cells that have been removed, so please donate with love.

Ganiga Samaja Dubai, UAE will organise 2nd Blood Donation Camp On 1/2/2013

special thanks to Mr. Sathish Venkataramana for supporting to Save Life campain.

We Mogaveers UAE, hereby request all the Indian /Karnataka Associations and Community people to come forward for the noble cause.

Thanks to Mr. Ashok Belman , Ganesh Rai and Gulfkannadiga.com

Balakrishna M Salian, Vice President, Mogaveers UAE and Promoter of Blood Donation Drive in Dubai.

Sharath, Suratkal
2012-08-08
ದುಬಾಯಿಯಲ್ಲಿ ಕೆಲವು ವರ್ಷಗಳಿಂದ ರಕ್ತದಾನ ಶಿಬಿರ ನಡೆಯುತ್ತಿದ್ದು, ಗಲ್ಫ್ ಕನ್ನಡಿಗದ ಮೂಲಕ ವೀಕ್ಷಿಸುತ್ತಿರುವ ನನಗೆ ರಕ್ತದಾನದ ಮಹತ್ವ ಹೆಚ್ಚು ದೊರೆತ್ತದ್ದು ಮಾಧ್ಯಮದಲ್ಲಿ. ಯು.ಎ.ಇ.ಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳು ರಕ್ತದಾನದ ಮೂಲಕ ಸಮಾಜ ಸೇವೆ ಮಾಡುತ್ತಿರುವುದು ತುಂಬಾ ಮೆಚ್ಚಿಗೆಯಾಗಿದೆ.

ಪ್ರತಿಬಾರಿ ನಡೆಯುತ್ತಿರುವ ರಕ್ತದಾನ ಶಿಬಿರದ ಪೂರ್ಣ ಮಾಹಿತಿಯನ್ನು ಚಿತ್ರದ ಮೂಲಕ ಗಲ್ಫ್ ಕನ್ನಡಿಗ ಉತ್ತಮವಾಗಿ ಪ್ರಕಟಿಸುತ್ತಾ ರಕ್ತದಾನಕ್ಕೆ ಬೆಂಬಲ ನೀಡುತ್ತಿದೆ.

ಗಾಣಿಗ ಸಮಾಜದ ರಕ್ತದಾನ ಶಿಬಿರವನ್ನು ನಡೆಸಿದ ಅಧ್ಯಕ್ಷರು ಮತ್ತು ತಂಡದವರು ಮತ್ತು ರಕ್ತ ದಾನಿಗಳು ಹಾಗೂ ಭಾಗವಹಿಸಿದವರೆಲ್ಲರಿಗೂ ಅಭಿನಂಧನೆಗಳು.

satish chilly willy, dubai
2012-08-08
ಡಿಯರ್ ಗಣೇಶ್ ರೈ Thank you very much for your prompt publication of our Ganiga Samaja Dubai Blood donation Camp held yesterday
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»New pension scheme for Indians in UAE
»ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
»Restaurant manager of Arab Udupi Restaurant in Bur Dubai charred to death in blaze
»ಅ.5ರಂದು ’ನಮ ತುಳುವೆರ್ ’ ಸಾದರಪಡಿಸುವ ತುಳು ಪರ್ಬ ಸಂಭ್ರಮಕ್ಕೆ ಭರದ ಸಿದ್ದತೆ : ಡಾ.ವಿವೆಕ್ ರೈ, ಡಾ.ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತುಳುವರ ಮಹೋನ್ನತ ಸಾಂಸ್ಕೃತಿಕ ಹಬ್ಬ
»Dubai: US woman jumps to death from 10th floor in Marina area
»ಯಶಸ್ವಿ ರಕ್ತದಾನದ ಶಿಬಿರದ ಮೂಲಕ ಯು.ಎ.ಇ. ಸರ್ಕಾರದ ದಾಖಲೆಯಲ್ಲಿ 'ಉಸ್ವಾಸ್' ಸೇರ್ಪಡೆ
»ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರಿಗೆ ದುಬಾಯಿಯಲ್ಲಿ ಗೌರವ ಸಲ್ಲಿಕೆ
»ರಾಸ್ ಅಲ್ ಕೈಮ: ಕಾರು ಅಫಘಾತದಲ್ಲಿ ಮೂರು ಭಾರತೀಯರ ದಾರುಣ ಮರಣ
»ಯು.ಎ.ಇ ಯ ಪ್ರಭಾವಯುತ ಭಾರತೀಯರ ಪಟ್ಟಿಯಲ್ಲಿ ತುಂಬೆ ಮೊಯಿದ್ದೀನ್
»ದುಬೈ ಮಾಲ್ ನಲ್ಲಿ ಬೆಂಕಿ. ಗ್ರಾಹಕರ ಸ್ಥಳಾಂತರ; ಸುರಕ್ಷಿತ
»ಅಬುದಾಬಿ:ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ
»ರಂಜಾನ್ ಮತ್ತು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯು.ಎ.ಇ. ಬಸವ ಸಮಿತಿ ಆಶ್ರಯದಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ
»ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ
»ಎನ್ನಾರೈಗಳು ಹೆಚ್ಚು ಚಿನ್ನ ತರಲು ಕೇಂದ್ರಕ್ಕೆ ಭಾರತೀಯ ರಾಯಭಾರ ಕಚೇರಿ ಪ್ರಸ್ತಾವನೆ
»ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ
»ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ
»Police explains what is the speed grace margin for Dubai roads
»ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ವತಿಯಿಂದ ದುಬಾಯಿಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ
»ಬ್ಯಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಇಪ್ತಾರ್ ಕೂಟ; ಎಲ್ಲಾ ಸಮುದಾಯದ 400 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧಾರ
»ಡಾ. ಬಿ. ಆರ್. ಶೆಟ್ಟಿಯವರ ಜನ್ಮದಿನಾಚರಣೆ... ರಕ್ತದಾನ ಶಿಭಿರದ ಮೂಲಕ ಶುಭ ಹಾರೈಸಿದ ಎನ್ ಎಂ. ಸಿ ಟ್ರೇಡಿಂಗ್ ಅಲ್ ಐನ್ ಸಿಬ್ಬಂದಿವರ್ಗ.
»30ಸಾವಿರ ದಿರಹಂನೊಂದಿಗೆ ಶಾರ್ಜಾದಲ್ಲಿ ಭಿಕ್ಷುಕನ ಬಂಧನ
»ಯುಎಇಗೆ ಮುಸುಕಿದ ಧೂಳಿನ ಚಾದರ :ತಾಪಮಾನ 49.4ಡಿಗ್ರಿ ಬಾಧಿಸುವ ಸಾಧ್ಯತೆ
»ವೈದ್ಯಕೀಯ ರಜೆ ಸರ್ಟಿಫಿಕೇಟಿಗೆ ಎಮಿರೇಟ್ ಗುರುತು ಪತ್ರ ಅಗತ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri