ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ

ಥೈಲ್ಯಾಂಡ್: ಏಳನೇ ಅಂತರಾಷ್ಟ್ರೀಯ ಏಕದಿನದ ಸಾಂಸ್ಕೃತಿಕ ಸೌರಭ ಸಮ್ಮೇಳನವು ಇಂದಿಲ್ಲಿ ಶನಿವಾರ ಸಂಜೆ ಬ್ಯಾಂಕಾಕ್ ರಾಷ್ಟ್ರದ ರಾಜಧಾನಿ ಥೈಲ್ಯಾಂಡ್ ಇಲ್ಲಿನ ಹೌವಾರ್ಡ್ ಸ್ಕೆ ರ್ ಪ್ರೊಗ್ರಾ ಮ್ ಸಭಾಗೃಹದಲ್ಲಿ ಜರಗಿತು. ಥೈ ಕನ್ನಡ ಬಳಗ ಥೈಲ್ಯಾಂಡ್ ಸಂಸ್ಥೆಯ ಪ್ರಧಾನ ಭೂಮಿಕೆಯಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮಿತಿ ಮತ್ತು ಇಂಡೋ ಥೈ ಸಮುದಾಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ೨೦೧೨ನೇ ಸಾಂಸ್ಕೃತಿಕ ಸೌರಭ ಸಮ್ಮೇಳನವನ್ನು ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಸದಸ್ಯ ಡಿ.ಎಸ್ ವೀರಯ್ಯ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ  ಅತಿಥಿಯಾಗಿ ಅರ್ಬನ್ ಸಹಕಾರಿ ಸೊಸೈಟಿಯ ಅಧ್ಯಕ್ಷ ರಾಜಣ್ಣ ಕೋಲಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ವೆಂಕಟಚಲಪತಿ,  ಅಂತರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ ಸಮಿತಿಯ ನಿರ್ದೇಶಕ ವಿನ್ಸೆಂಟ್ ಪಿಂಟೋ, ಥೈ ಕನ್ನಡ ಬಳಗದ ಅಧ್ಯಕ್ಷ ಮುತ್ತುರಾಜ್ ಇಂಗಲಗಿ, ಥೈ ಕನ್ನಡ ಬಳಗದ ನಿಕಟಪೂರ್ವ ಅಧ್ಯಕ್ಷ ಮೋಹನ್ ದಾಸ್ ಮುಂತಾದ ಗಣ್ಯರು ವೇದಿಕೆಯಲ್ಲಿ ಆಸೀನರಾಗಿದ್ದರು. 


ಸಮಾರಂಭದಲ್ಲಿ  ಕಲಾರತ್ನ ಡಾ| ಎನ್. ರಾಮ ರೆಡ್ಡಿ ಬೆಂಗಳೂರು, ಮುಂಬಯಿಯಲ್ಲಿನ ನಿಷ್ಠಾವಂತ ಸಮಾಜ ಸೇವಕ, ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಮಹಾರಾಷ್ಟ್ರ  ಕೊಂಕಣ್ ಎಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷ ವಾಲ್ಟರ್ ಡಿ’ಸೋಜಾ ಕಲ್ಮಾಡಿ, ಅವರಿಗೆ ‘ಇಂಟರ್‌ನ್ಯಾಷನಲ್ ಮ್ಯಾನ್ ಆಫ್ ದ ಈಯರ್ ಆವಾರ್ಡ್’ ಪ್ರಶಸ್ತಿ, ಮುಂಬಯಿಯಲ್ಲಿನ ಯುವ  ಪತ್ರಕರ್ತ ರೋನ್ಸ್ ಬಂಟ್ವಾಳ್, ಮುಕುಂದ್ ಕೆ‌ಆರ್‌ಪುರಂ, ಸಮಾಜ ಸೇವಕ ಜೋನ್ ವೇಗಸ್ ಮುಂಬಯಿ, ಎಂ.ಡಿ.ನಾಯಕ್ ಸಿದ್ಧಾಪುರ, ಕೃಷ್ಣಮೂರ್ತಿ ಬೆಂಗಳೂರು ಅವರಿಗೆ ‘ಇಂಟರ್‌ನ್ಯಾಷನಲ್ ಪರ್ಸನ್ ಆಫ್ ದ ಲ್ಯುಮಿನರಿ’ಸ್ (ಪ್ರತಿಭಾಶಾಲಿ ಪುರಸ್ಕಾರ) ವನ್ನು ಅತಿಥಿಗಳು ಪ್ರದಾನಿಸಿ ಗೌರವಿಸಿದರು.


ಮನೋರಂಜನೆಯ ಅಂಗವಾಗಿ ಝೀ ಟಿವಿ ಪ್ರಸಿದ್ಧಿಯ ಅನಿಲ್ ಗುಪ್ತಾ ಬೆಂಗಳೂರು ಬಳಗವು ಮ್ಯಾಜಿಕ್ ಶೋ ಪ್ರದರ್ಶಿಸಿದ್ದು, ಕೋಲಾರದ ಜಯ ನಾಟ್ಯ ಕಲಾ ಅಕಾಡೆಮಿ ಸದಸ್ಯರು ವಿದ್ವಾನ್ ಕೋಲಾರ್ ರಮೇಶ್ ಅವರ ನಿರ್ದೇಶನದಲ್ಲಿ ‘ದಶವಾತರ’ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಪರಿಣಿತಾ ಕಲಾ ಕೇಂದ್ರ ಸಾಗರ್ ಬಳಗವು ವಿದ್ವಾನ್ ಗೋಪಾಲ್ ಅವರ ನಿರ್ದೇಶನ ಮತ್ತು ಬಿಂಡಿಗನವಿಲೆ ಭಗವನ್ ಅವರ ಸಂಗೀತದೊಂದಿಗೆ ಕು| ಸಹನಾ ಎಲ್.ಶೆಟ್ಟಿ, ಕು| ಐಶ್ವರ್ಯ ಎ.ರೇವಂಣ್ಕರ್ ಅವರು ಅತ್ಯಾಕರ್ಷಕ ‘ಭರತ ನಾಟ್ಯ’ವನ್ನು ಹಾಗೂ ಗೋ.ನಾ.ಸ್ವಾಮಿ ಬೆಂಗಳೂರು ಮತ್ತು ಮನು ಮಂಗಳೂರು ಅವರು ಕನ್ನಡ ಕುಲ ಸಂಗೀತವನ್ನು ಸಾದರಪಡಿಸಿದರು. ಅಲ್ಲದೆ ಇತರ  ಕಲಾಕಾರರು ಭಾರತೀಯ ಸಂಸ್ಕೃತಿ ಸಾರುವ ವೈವಿಧ್ಯಮಯ ನೃತ್ಯಾವಳಿ, ನೃತ್ಯರೂಪಕ, ಜಾನಪದ ಕಾರ್ಯಕ್ರಮಗಳನ್ನು ನೀಡಿದರು.
ಕನ್ನಡವನ್ನು ಸಾಗರದ ಆಚೆ ದಾಟಿಸಿದ ಹಿರಿಮೆ ಈ ಸಂಸ್ಥೆಗಳಿಗೆ ಸಲ್ಲಬೇಕು. ಕನ್ನಡದ ಕ್ರಾಂತಿ ಬೆಳಗಿಸುವಲ್ಲಿ ಇಂತಹ ಸಮ್ಮೇಳನಗಳು ಅರ್ಥಪೂರ್ಣವಾಗಿದ್ದು, ಕನ್ನಡದ ಬಾವುಟವನ್ನು ವಿಶ್ವದ ಉದ್ದಗಲಕ್ಕೂ ಹಾರಾಡಿಸುವಲ್ಲಿ ಇಂತಹ ಸಮ್ಮೇಳನಗಳು ಪೂರಕವಾಗಲಿ. ಥೈಲ್ಯಾಂಡ್ ಧರ್ಮಕ್ಕೆ ಹೊತ್ತು ನೀಡಿದ್ದು ಧಾರಕ, ಅದುದರಿಂದ ಥೈಲ್ಯಾಂಡ್ ಮತ್ತು ಭಾರತದ ಸಹೋದರತ್ವ ಜೊತೆಗೆ ಇನ್ನಷ್ಟು ಗಟ್ಟಿಯಾಗಲಿ. ಈ ಮೂಲಕ ಥೈಲ್ಯಾಂಡ್‌ನಲ್ಲಿ ಕನ್ನಡದ ಕಸ್ತೂರಿ ಪಸರಿಸಿ ಕನ್ನಡಾಂಭೆಯ ಈ ಸಮ್ಮೇಳನ ಸಂಸ್ಕೃತಿ ಬೆಳೆಯಲಿ ಎಂದು ಡಿ.ಎಸ್ ವೀರಯ್ಯ ನುಡಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ವಿ.ಜಿ ಪೈ ಮಂಗಳೂರು, ಸಲಹಾ ಸಮಿತಿ ಸದಸ್ಯರುಗಳಾದ ರಾಮ್ ಶಿರೂರು (ಕೇನ್ಯಾ), ಇ.ವಿ ಸತ್ಯನಾರಾಯಣ್ ಬೆಂಗಳೂರು, ಚೇತನ್ ಶೆಟ್ಟಿ, ನಿಕಿಲ್ ನೊರೊನ್ಹಾ, ನವೀನ್ ಪಿಂಟೊ, ಮೈಕಲ್ ವೇಗಸ್, ಲವೀನಾ ವೇಗಸ್, ಎಸ್.ಎಂ ಫಾರೂಕ್ ಗೋವಾ, ಲಿಯೋ ಫೆರ್ನಾಂಡಿಸ್ ಜೆರಿಮೆರಿ, ಅನಿಲ್ ಮೋರಾಸ್, ಶ್ರೀಮತಿ ಸುಜತಾ ಧರ್ಮಪಾಲ್ ಮುಂತಾದವರು ಉಪಸ್ಥಿತರಿದ್ದರು. 

ಮಂಜುನಾಥ ಸಾಗರ್ ಸ್ವಾಗತಿಸಿದರು. ಗೋ.ನಾ.ಸ್ವಾಮಿ  ಅವರು ಪ್ರಾರ್ಥನೆಗೈದು ಕಾರ್ಯಕ್ರಮ ನಿರ್ವಾಹಿಸಿದರು. ಉಪ ಕಾರ್ಯಾಧ್ಯಕ್ಷ ಸಂಗಮೇಶ್ ಬಡವದಗಿ ವಂದನಾರ್ಪಣೆ ಸಲ್ಲಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೋನ್ಸ್ ಬಂಟ್ಟಾಳ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-05

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri