ಸಾಮಾಜಿಕ ಅರಿವು ಮೂಡಿಸುವ ಪ್ರಕಟಣೆಗಳಿಗೆ ಹಣ ಕೇಳುವ "ಫೇಸ್ಬುಕ್"ಗೆ ಯುಎಇಯಲ್ಲಿ ಛೀಮಾರಿ ! |
ಪ್ರಕಟಿಸಿದ ದಿನಾಂಕ : 2012-08-03
ಸಾಮಾಜಿಕ ಅರಿವು ಮೂಡಿಸುವ ಪ್ರಕಟಣೆಗಳಿಗೆ ಹಣ ಕೇಳುವ "ಫೇಸ್ಬುಕ್"ಗೆ ಯುಎಇಯಲ್ಲಿ ಛೀಮಾರಿ !
ದುಬೈ,ಆ.3:ಸಾಮಾಜಿಕ ಅರಿವು,ಜಾಗೃತಿ ಮೂಡಿಸುವ ಅಥವಾ ರಕ್ತದಾನ ಮುಂತಾದ ಒಳ್ಳೆಯ ಕಾರ್ಯಗಳಿಗೆ ಪ್ರಮುಖ ಪ್ರಕಟಣೆಯನ್ನಾಗಿ ಪ್ರಕಟಿಸಲು ಯುಎಇಯಲ್ಲಿ ಫೇಸ್ಬುಕ್ ಸಂಸ್ಥೆ ಹಣ ವಸೂಲಿ ಮಾಡುವ ಬಗ್ಗೆ ವರದಿಯಾಗಿದೆ.ಈ ಬಗ್ಗೆ ಸರಕಾರೇತರ ಸಮಾಜ ಸೇವಾ ಸಂಸ್ಥೆಗಳು (ಎನ್.ಜಿ.ಓ) ಛೀಮಾರಿ ಹಾಕಿದೆ.
ಇಂತಹ ಪ್ರಕಟಣೆಗಳು ಹೆಚ್ಚು ಮಂದಿಗೆ ತಲಪಲು ಸಮಾಜ ಸೇವಾ ಸಂಸ್ಥೆಗಳು ಕೋರಿಕೊಂಡ ಸಂದರ್ಭ,ಫೇಸ್ಬುಕ್ಕು ಹಣ ಕೇಳುತ್ತಿದೆ ಎನ್ನಲಾಗಿದೆ.ಇತ್ತೀಚೆಗೆ ವಾಣಿಜ್ಯ ಕಾರ್ಯಗಳ ಜಾಹೀರಾತು ಅಭಿವೃದ್ದಿ ಪಡಿಸಲು ಫೇಸ್ಬುಕ್ಕು ಯುಎಇಯಲ್ಲಿ ತನ್ನ ಕಚೇರಿ ತೆರೆದಿದ್ದು,ಪ್ರಕಟಣೆ ಹೆಚ್ಚು ಮಂದಿಗೆ ತಲುಪಲು ಇಂತಿಷ್ಟು ಹಣ ಸಂಗ್ರಹಿಸುತ್ತಿದೆ.ಆದರೆ,ಸಾಮಾಜಿಕ ಕಾರ್ಯಗಳಂತ ವಿಚಾರಗಳನ್ನು ಪ್ರಮುಖ ವಿಷಯವನ್ನಾಗಿ ಪ್ರಕಟಿಸಿ ಹೆಚ್ಚು ಮಂದಿಗೆ ಮುಟ್ಟಿಸುವ ವಿಚಾರಕ್ಕೂ ಹಣ ಪಡೆಯುತ್ತಿರುವುದನ್ನು ಹಲವು ಸಮಾಜ ಸೇವಾ ಕಾರ್ಯಕರ್ತರು ವಿರೋಧಿಸಿದ್ದಾರೆ.
ಫೇಸ್ಬುಕ್ಕು ಬಳಕೆದಾರರಿಗೆ ತಮ್ಮ ಪ್ರಕಟಣೆಯನ್ನು ಮುಖ್ಯ ವಿಷಯವಾಗಿ ಬಿಂಭಿಸಿ ಹೆಚ್ಚು ಮಂದಿಗೆ ತಲಪಿಸಲು "ಪೇ ಟು ಪ್ರಮೋಟ್"ಪದ್ದತಿಯ ಪ್ರಕಾರ 2ಡಾಲರ್ (7.35ದಿರಹಂ) ನಿಂದ 50 ಡಾಲರ್ ವರೆಗೆ ಖರ್ಚು ಸಂಗ್ರಹಿಸುತ್ತಿದೆ. ಕೆಲವರ ಪ್ರಕಾರ ಫೇಸ್ಬುಕ್ಕಿನ ಈ ಪ್ರಕಟಣೆ ಹೆಚ್ಚು ಮಂದಿಯನ್ನು ತಲಪುತ್ತಿಲ್ಲ ಅನ್ನುವ ಆರೋಪವಿದೆ.
ಇತ್ತೀಚಿನ ಅನುಭವದ ಪ್ರಕಾರ ಸಮಾಜ ಸೇವಾ ಕಾರ್ಯಕರ್ತೆಯೊಬ್ಬರು ತಮ್ಮ ಕಾರ್ಯಾಗಾರದ ಮಾಹಿತಿ ಎಲ್ಲರಿಗೂ ತಲುಪಲಿ ಎನ್ನುವ ದಿಸೆಯಿಂದ" ವಾಹನದಲ್ಲಿ ಚಲಿಸುವಾಗ ಬೆಲ್ಟ್ ಹಾಕಿಕೊಳ್ಳಿ"ಎಂಬ ಸಾರ್ವಜನಿಕ ಜಾಗೃತಿ ಮೂಡಿಸುವ ಪ್ರಕಟಣೆ ಕೊಟ್ಟಿದ್ದರು.ಆದರೆ ಫೇಸ್ಬುಕ್ಕು ಇದಕ್ಕೆ ಹಣ ಕೊಡುವಂತೆ ಪೀಡಿಸಿತ್ತು ಎಂದು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು "ಈ ಪ್ರಕಟಣೆ ಜೀವವನ್ನು ಉಳಿಸುವಂತಹದ್ದು, ಹಣ ಮಾಡುವಂತಹದ್ದಲ್ಲ" ಎಂದಿದ್ದಾರೆ.
ಅದೇ ರೀತಿ ರಕ್ತದಾನಕ್ಕೆ ಪ್ರಕಟಣೆ ಹಾಕಿದಾಗಲೂ ಈ ರೀತಿಯ ಹಣ ಪೀಡನೆ ಮತ್ತು ಹೆಚ್ಚು ಮಂದಿಗೆ ತಲಪಿಸುವಲ್ಲಿ ಫೇಸ್ಬುಕ್ಕು ಹಿನ್ನಡೆ ಸಾಧಿಸುತ್ತಿದೆ ಎನ್ನಲಾಗಿದೆ.
ವರದಿಯ ವಿವರಗಳು |
 |
ಕೃಪೆ : ನೀಲಾಂಜನ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-03
|
|
|