ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಸ್ತ್ರೀ ಬಗ್ಗೆ ಒಂದು ಚಿಕ್ಕ ಲೇಖನ- ಅನಿತಾ ಗೌಡ

ಸ್ತ್ರೀ ಎಂಬ ಪದದಲ್ಲಿ ಅದೆಷ್ಟು ಅರ್ಥವಿದೆ. ಸಹನೆ, ಪ್ರೀತಿ, ವಾತ್ಸಲ್ಯ, ಮಮತೆ, ತ್ಯಾಗ, ಕರುಣೆ ಇದೆಲ್ಲದರ ಪ್ರತಿರೂಪ ಸ್ತ್ರೀ...ಆದಿಮಾನವನ ಕಾಲದಿಂದಲೂ ಮಹಿಳೆಯು ತನ್ನ ಪ್ರಾಬಲ್ಯ ಮೆರೆದಿದ್ದಾಳೆ..

ಒಂದು ಹೆಂಡತಿಯಾಗಿ, ಮಗಳಾಗಿ, ತಾಯಿಯಾಗಿ, ಸಹೋದರಿಯಾಗಿ, ಮನೆ ಬೆಳಗೋ ಸೊಸೆಯಾಗಿ, ಪ್ರೀತಿ ತೋರೋ ಅತ್ತಿಗೆಯಾಗಿ ಒಂದು ಸಂಸಾರದ ಕಣ್ಣಾಗಿ ತನ್ನೆಲ್ಲಾ ಪ್ರೀತಿಯ ಧಾರೆಯೇರೆದಿದ್ದಾಳೆ..ಆದಿ ಮಾನವನ ಕಾಲದಲ್ಲಿ ಹೆಣ್ಣು ಗಂಡಿಗೆ ಸಹಕಾರಿಯಾಗಿ ನಾಲ್ಕು ಗೋಡೆಗಳ ನಡುವೆ ಬದುಕುತ್ತಾ ಒರಟು ಗಂಡಿಗೆ ಪ್ರೀತಿ ತೋರಿದ ಮೃದು ಹೃದಯಿ ಹೆಣ್ಣು ಸಹನಾಶೀಳಲಾಗಿದ್ದಾಳೆ..

ಹಸಿ ಪದಾರ್ಥ ಗೆಡ್ಡೆ ಗೆಣಸು ತಿಂದು ಬದುಕುತಿದ್ದ ಕಾಲದಲ್ಲಿ ಅದನ್ನು ಬೇಯಿಸಿ ರುಚಿಕರ ಆಹಾರ ಪದಾರ್ಥ ತಯಾರಿಸಿ ಬೇಟೆಯಾಡಿ ಬಂದ ಗಂಡಿಗೆ ಮನೆಮಂದಿಗೆ ಬಡಿಸಿ ಊಟ ಕೊಟ್ಟ ಅನ್ನ ಪೂರ್ಣೆಶ್ವರಿಯಾಗಿದ್ದಾಳೆ.. ಮಕ್ಕಳ ಹಡೆದು ಅದರ ತೊದಲು ನುಡಿ ಗ್ರಹಿಸಿ ತಪ್ಪು ಹೆಜ್ಜೆ ಸರಿಪಡಿಸಿ ಆ ಮಗುವಿಗೆ ಅಕ್ಷರ ಕಳಿಸಿ ಮೊದಲ ಗುರುವಾಗಿ ಪ್ರೀತಿಯ ಧಾರೆಯೆರೆದು ತಾಯಿಯಾಗಿ ಬದುಕುತಿದ್ದಾಳೆ..

ಒಂದು ಕುಟುಂಬದ ಎಲ್ಲ ಕಷ್ಟ ಸುಖಗಳಲ್ಲಿ ಒಂದಾಗಿ ತನ್ನನ್ನು ತಾನು ತೊಡಗಿಸಿಕೊಂಡು ಗಂಡನೊಂದಿಗೆ ಸಹಧರ್ಮಿಣಿಯಾಗಿ ಜೀವನ ಪೂರ್ಣ ಗೊಳಿಸುವ ಈ ಸ್ತ್ರೀ ಯಾವ ಹೊಗಳಿಕೆಗೂ ಕಡಿಮೆಯೇ..ಕಾಲ ಕಳೆದಂತೆ ಹೆಣ್ಣು ತಾನು ಬೇಟೆಗೆ ಹೊರಟು,, ನಂತರದ ದಿನಗಳಲ್ಲಿ ಅವಳು ಗಂಡಿನ ಸರಿಸಮಳಾಗಿ ದುಡಿಯತೊಡಗಿದಳು..

ಪುರಾತನ ಯುಗದಲ್ಲಿ ಹೆಣ್ಣಿಗೆ ದೇವತೆಯ ಸ್ಥಾನ ಕೊಟ್ಟು ಗೌರವಿಸುತಿದ್ದರು..ಕೆಲವು ಕಡೆ ಹೆಣ್ಣಿನ ಶೋಷಣೆ ನಡೆಯುತಿದ್ದರೆ,, ಮತ್ತೆ ಕೆಲವು ಕಡೆ ಹೆಣ್ಣೇ ರಾಜ್ಯಭಾರ ಮಾಡುತಿದ್ದಳು.. ಪುರಾತನ ಕಾಲದಿಂದಲೂ ಮಹಿಳೆಯರು ಎಷ್ಟೋ ಸಾದನೆಗಳನ್ನು ಮಾಡಿ ಇತಿಹಾಸದ ಪುಟ ಸೇರಿದ್ದಾರೆ..ಹೆಣ್ಣು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗದೆ ಅವಳ ವ್ಯಾಪ್ತಿಯನ್ನು ತನ್ನದೇ ಆದ ರೀತಿಯಲ್ಲಿ ಮೂಡಿಸಿಕೊಂಡು ಬದುಕುತಿದ್ದಾಳೆ..

ಹೆಣ್ಣು ಯಾವ ಕ್ಷೇತ್ರದಲ್ಲೂ ತಾನು ಕಡಿಮೆಯಿಲ್ಲ ಎಂದು ಬದುಕುತಿದ್ದಾಳೆ.. ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಮಲ್ಲಮ್ಮ, ಕೆಳದಿ ಚನ್ನಮ್ಮ ಹೀಗೆ ಹೇಳುತ್ತಾ ಹೋದರೆ ಸಾಲು ಸಾಲು ವೀರ ಮಹಿಳೆಯರು ನೂರಾರು ಮಹಿಳೆಯರು ನಮ್ಮ ನಾಡಿಗಾಗಿ ಅದರ ಉಳಿವಿಗಾಗಿ ವಿರೋದಿಗಳ ಎದುರು ವೀರಾ ವೇಷದಿಂದ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಇತಿಹಾಸ ಸೇರಿದ್ದಾರೆ..ಅಂದಿನ ಯುಗದಿಂದಲೂ ಇಂದಿನ ಯುಗದವರೆಗೂ ಮಹಿಳೆಯು ತನ್ನ ಸಾದನೆಯನ್ನು ಮೆರೆದಿದ್ದಾಳೆ.. ತನ್ನ ಗಂಡನ ಪ್ರಾಣವನ್ನು ಮತ್ತೆ ಪಡೆದ ಸತಿ ಸಾವಿತ್ರಿ, ಗಂಡನಿಗಾಗಿ ಕಾಡು ಸೇರಿ ಅನೇಕ ಕಷ್ಟ ಅನುಭವಿಸಿ ಗೆದ್ದು ಬಂದ ಸೀತೆ, ರಾಮನ ಬರುವಿಕೆಗಾಗಿ ಎಷ್ಟೋ ವರ್ಷ ಕಾದು ತನ್ನ ಜನ್ಮ ಸಾರ್ಥಕ ಗೊಳಿಸಿದ ಶಬರಿ, ಪ್ರೀತಿಗೆ ಹೆಸರಾದ ರಾಧೇ, ಭಕ್ತಿಗೆ ಮನೆಮಾತದ ಮೀರಾ, ಸಕುಭಾಯಿ, ಅಕ್ಕಮಹಾದೇವಿ, ಹೀಗೆ ಎಷ್ಟೋ ಮಹಿಳೆಯರು ಸಾಧನೆಯ ತುತ್ತ ತುದಿಗೆರಿದ್ದರೆ..

ಆಧುನಿಕ ಕಾಲಕ್ಕೆ ಬಂದಂತೆ ಮಹಿಳೆಯು ತನ್ನ ಜೀವನ ಶೈಲಿಯನ್ನು ಬದಲಿಸುತ್ತಾ, ಹೊರಗಿನ ಜಗತ್ತಲ್ಲಿ ತಾನು ಯಾವ ಪುರುಷನಿಗೂ ಕಮ್ಮಿ ಎಲ್ಲ ಎಂದು ಸಾಧಿಸಿ ತೋರಿದ್ದಾಳೆ..ರಾಜಕೀಯ ಕ್ಸೆತ್ರದಲ್ಲಿ ಇಂದಿರಾ ಗಾಂಧೀ ಪ್ರಪ್ರಥಮವಾಗಿ ಭಾರತ ದೇಶದ ಮಹಿಳಾ ಪ್ರಧಾನ ಮಂತ್ರಿಯಾಗಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ..

ಮಹಿಳೆಯು ರಾಜಕೀಯವಾಗಿ, ಕ್ರೀಡಾ ಕ್ಷೇತ್ರದಲ್ಲಿ, ಸಾಹಿತ್ಯದಲ್ಲಿ, ಸಂಗೀತ, ಸಾಂಸ್ಕೃತಿಕ ಕ್ಷೇತ್ರ, ವೈಜ್ಞಾನಿಕ, ರಕ್ಷಣಾ ವಿಭಾಗದಲ್ಲಿ ಹೀಗೆ ಮಹಿಳೆ ಪ್ರತಿ ಕ್ಷೇತ್ರದಲ್ಲೂ ತಾನು ಸೇವೆ ಸಲ್ಲಿಸುತ್ತಾ ಸಾದನೆ ಮಾಡುತಿದ್ದಾಳೆ..

ಇವುಗಳ ನಡುವೆಯೂ ತನ್ನ ಸಂಸಾರದ ಹೊಣೆ ಹೊತ್ತು ಅದರಲ್ಲೂ ಯಾವುದೇ ಲೋಪ ಬರದಂತೆ ಪ್ರೀತಿಯ ದೇವತೆಯಾಗಿದ್ದಾಳೆ.. ಅಮೃತದ ಸಿಂಚನವಾಗಿದ್ದಾಳೆ.. "ಸ್ತ್ರೀ" ಬಗೆ ಹೇಳುತ್ತಾ ಹೋದಷ್ಟು ಹೇಳುತ್ತಲೇ ಇರಬೇಕು.. ಅದು ಕೊನೆಯಿಲ್ಲದ ಸಮುದ್ರದ ಹಾಗೆ,ಎಷ್ಟು ಹೇಳಿದರು ಅದು ತುಂಬಾ ಕಡಿಮೆಯೇ..ಹೆಣ್ಣೇ ನಿನಗೆ ನನ್ನ ನಮನಗಳು.. ನಾನು ಹೆಣ್ಣಾಗಿ ಹುಟ್ಟಿದು ನನ್ನ ಸೌಭಾಗ್ಯ..


 ಅನಿತಾ ಗೌಡ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅನಿತಾ ಗೌಡ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-07-31

Tell a Friend

ಪ್ರತಿಸ್ಪಂದನ
mahabala , Goa
2012-08-17
ಲೇಖನ ಚೆನ್ನಾಗಿದೆ. ಸ್ತ್ರೀಯರನ್ನು ಗೌರವಿಸಬೇಕು ಎನ್ನುವವರಲ್ಲಿ ನಾನು ಒಬ್ಬ. ಯತ್ರ ನಾರ್ಯಸ್ತು ... ಎನ್ನುವ ಮನುವಕಾನದಲ್ಲಿ ನನಗೂ ಶ್ರದ್ಧೆಯಿದೆ. ಆದರೆ ನನಗೆ ಕೆಲವು ಅನಿಸಿಕೆಗಳು- ಪತಿದೇವರು ಎಂಬ ಕಾನ್ಸೆಪ್ಟ್ ಜೊತೆಗೆ ಪತಿಗೆ ಕೆಲವೊಂದು ನಿಬಂಧನೆಗಳನ್ನು ಹಾಕಿದ್ದಾರೆ. ಪತ್ನಿಯ ಸಂಪೂರ್ಣ ಜವಾಬ್ದಾರಿಯನ್ನು ಅವನ ಮೇಲೆ ಹಾಕಿದ್ದಾರೆ. ಹಾಗೆಯೇ ಸ್ತ್ರಿಯನ್ನು ಪೂಜಿಸಬೇಕು ಎಂದಾಗ ಅದರ ಜೊತೆಗೆ ಎಂಥಾ ಸ್ತ್ರಿಯನ್ನು ಎಂಬ ಪ್ರಸ್ನೆ ಏಳುತ್ತದೆ. ಸೀತೆ, ಸಾವಿತ್ರಿಯಂತಹ ಸ್ತ್ರೀಯರನ್ನು ಮಾತ್ರವೇ ಅಥವಾ ಗನ್ದಸರೊಂದಿಗೆ ಸಮಾನತೆ ಸಾಧಿಸುವುದಕ್ಕೊಸ್ಕರ ಪಬ್ಬು ಬಾರುಗಳಿಗೆ ಹೋಗಿ ಕುಡಿಯುವುದು ಸೇದುವುದು ಮಾಡುವ ಮಾಡುವ ಸ್ತ್ರೀಯರನ್ನು ಕೂಡ ಗೌರವಿಸಬೇಕೆ?
Digitalgowda, Bangalore
2012-08-01
ತುಂಬಾ ಶ್ರಮವಹಿಸಿ ಲೇಖನ ಬರೆದಿದ್ದೀರಿ ಅಭಿನಂದನೆಗಳು. ಈಗಿನ ಕಾಲಕ್ಕೆ ಬೇಕಿರುವುದು ಬರೀ ಲೇಖನಗಳು, ಕಥೆ ಕಾವ್ಯಗಳಲ್ಲ. ನಿಜವಾಗಲೂ ಸಮಾನತೆ ಕೊಡುವಂತಹ ತಿಳುವಳಿಕೆ ಅದು ಬರುವುದು ನಿರ್ಮಲವಾದ ನಿಷ್ಕಲ್ಮಷವಾದ ನಿಷ್ಪಕ್ಷಪಾತವಾದ ಮನಸ್ಸಿನಿಂದ ಮಾತ್ರ. ಈ ರೀತಿಯ ಉದಾರ, ಉದಾತ್ತ ಮನೋಭಾವವನ್ನು ನಮ್ಮ ಮುಂದಿನ ಮತ್ತು ಸಮಕಾಲೀನ ಪೀಳಿಗೆಯವರಲ್ಲಿ ಬೆಳೆಸಿದ್ದಲ್ಲಿ ಮಾತ್ರ ಮೇಲ್ಕಂಡ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವುದು.
anitha, kikkeri
2012-08-01
ಮೊದಲನೆಯದಾಗಿ ಗಲ್ಫ್ ಕನ್ನಡಿಗ ಪತ್ರಿಕೆಗೆ ನನ್ನ ಮನಪೂರ್ವ ನಮನಗಳು.. ನನ್ನ ಈ ಚಿಕ್ಕ ಲೇಖನವನ್ನು ಪ್ರಕಟಿಸಿದಕ್ಕೆ.. ನನ್ನ ಈ ಲೇಖನ ಮೆಚ್ಚಿ ಪ್ರತಿಕ್ರಿಯೆ ಕೊಟ್ಟ ನಿಮ್ಮೆಲ್ಲರಿಗೂ ತುಂಬು ಮನದ ವಂದನೆಗಳು.. ಕ್ಷಮಿಸಿ ನಾನು ಡಾಕ್ಟರ್ ಅಲ್ಲ..
Sanjeev Kumar, Abu Dhabi
2012-08-01
ಸ್ತ್ರೀ ಬಗ್ಗೆ ಇಷ್ಟೋ ವಿಚಾರ ಗೊತ್ತಿದ್ದರೂ ನಮ್ಮ ಜನ ಎಲ್ಲವನ್ನು ಮರೆತು ಅವರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಾರೆ. ಅನಿತಾ ಗೌಡ ಒಬ್ಬ ಹೆಣ್ಣೆ ಇನ್ನೊಂದು ಹೆಣ್ಣಿಗಿ ಶತ್ರು ಅನ್ನೊದು ಬಹಳ ಕಡೆ ಕೇಳಿದ್ದು ನೋಡಿದ್ದು ಉಂಟು ಆದರೆ ನಿಮ್ಮ ಲೆಖನ ನೊಡಿ ಕೆಲೊವಮ್ಮೆ ಸುಳ್ಳು ಇರಬಹುದು ಅನಿಸುತ್ತಿದೆ , ಹೆಣ್ಣು ಅನಾದಿ ಕಾಲದಿಂದಲೂ ಒಬ್ಬ ಗಂಡಿಗೆ , ಒಂದು ಊರಿಗೆ , ಒಂದು ರಾಜ್ಯಕ್ಕೆ ಒಂದು ದೆಶಕ್ಕೆ ಬೆನ್ನು, ಜೀವಾ , ಆತ್ಮ ಅವಳು ಸಹಾನುಭೂತಿ , ಅವಳು ಸ್ನೆಹದರ್ಮಿಣಿ , ಕರುಣಾಮೂರ್ತಿ , ಪ್ರೀತಿ ಮಾತೆ , ಮಮತೆಯೆ ಸಾಗರ , ಇವಳ ಬಣ್ಣಿಸಲು ಪದಗಳು ಅಲ್ಲ ಆಕಾಶದ ನಕ್ಷತ್ರಗಳ ಜೋಡಿಸಿ ಬರೆದರು ಸಾಲದು ನಿಮ್ಮ ಸ್ತ್ರೀ ಲೇಖನ ಹಾಗು ಸ್ತ್ರೀ ಕಾಳಜಿಗೆ, ಮತ್ತು ಕೊನೆಯದಾಗಿ ಹೇಳಿದ ಮಾತು ಎಲ್ಲರು ಹೆಣ್ಣಾಗಿ ಹುಟ್ಟಿದು ಶಾಪ ಅಂದುಕುಳ್ಳುವವರಿಗೆ ಒಂದು ಕಿವಿ ಮಾತು ನಿಮ್ಮ ಕೊನೆಯ ಸಾಲು ನಾನು ಹೆಣ್ಣಾಗಿ ಹುಟ್ಟಿದೆ ನನ್ನ ಸೌಬಾಗ್ಯ ಬಹಳ ಮೆಚ್ಚುಗೆಯಾಯಿತು ನಿಮ್ಮ ಹೆಣ್ಣುತನದ ಹಿರಿಮೆಗೆ ನಿಮ್ಮ ಲೇಖನಕ್ಕೆ ಇದೋ ನನ್ನ ತುಂಬು ಹೃದಯದ ನಮನಗಳು
ಸಹೋದರ, ಕರ್ನಾಟಕ
2012-07-31
ಸ್ತ್ರೀ ಬಗ್ಗೆ ಚಿಕ್ಕ ಲೇಖನ....ಅತ್ಯಂತ ಗೌರವ ಭಾವನೆ ಮೂಡಿಸುವ ಚೊಕ್ಕದಾದ ಅರ್ಥಪೂರ್ಣ ಲೇಖನ, ಪ್ರಸ್ತುತ ವಿದ್ಯಾಮಾನಗಳಿಗೆ ಹಿಡಿದ ಕೈಗನ್ನಡಿ. ಡಾ ಅನಿತಾ ಗೌಡ ರವರಿಗೆ ಗೌರವ ಪೂರ್ವಕ ಪ್ರಣಾಮಗಳು.
ವಾಮನ ನಂದಾವರ , ಮಂಗಳೂರು
2012-07-31
ಸ್ತ್ತ್ರೀ ಕುರಿತ ಲೇಖನ ಸಕಾಲಿಕ. ಕೆಳದಿ ಚೆನ್ನಮ್ಮ ಮೊದಲಾದವರ ಸಾಲಿನಲ್ಲಿ ೧೬ನೆಯ ಶತಮಾನದಲ್ಲಿ ಪೋರ್ಚುಗೀಸರೊಡನೆ ಹೋರಾಡಿ ಹಿಮ್ಮೆಟ್ಟಿಸಿದ ವೀರ ರಾಣಿ ಉಳ್ಳಾಲ ಅಬ್ಬಕ್ಕನನ್ನೂ ನೆನಪಿಸೋಣ. ನಿಮಗೆ ಅಭಿನಂದನೆಗಳು.
KANAKAMABARI, SHIMOGA,ABUDHABI
2012-07-31
ಅನಿತಾರವರ ಲೇಖನ ತುಂಬಾ ಚೆನ್ನಾಗಿದೆ. ಮೊದಲು ನಿಮ್ಮನ್ನು ಲೇಖನವನ್ನು ಈ ಸಂದರ್ಭದಲ್ಲಿ ಹೊರ ತಂದುದಕ್ಕೆ ಅಭಿನಂದನೆಗಳು. ಸ್ತ್ರೀ ಬಗ್ಗೆ ಬರೆಯಲು ಬೇಕಾದಷ್ಟಿದೆ. ಆದರೆ ಈ ಸಮಾಜದಲ್ಲಿ ಸ್ತ್ರೀ ಗೆ ಬೆಲೆ ಇದೆಯೇ ?? ಹಡೆದ ತಾಯಿಯನ್ನೇ ಕೊಲೆ ಮಾಡುವ ಮಗನಿದ್ದಾನೆ. ಮಗಳನ್ನೇ ಅತ್ಯಾಚಾರ ಮಾಡುವ ತಂದೆ ಇದ್ದಾನೆ. ಸಹೋದರಿಯನ್ನೇ ಮಾರಾಟ ಮಾಡುವವನಿದ್ದಾನೆ. ವರದಕ್ಷಿಣೆಗಾಗಿ ಸೊಸೆ, ಅತ್ತಿಗೆಯನ್ನೇ ಕೊಲೆ ಮಾಡುತಿದ್ದಾರೆ.

ಅಷ್ಟೇ ಏಕೆ ಮೊನ್ನೆ ಇದೇ ಸ್ತ್ರಿಗಳ ಮೇಲೆ ದುರುಳ ದುಶ್ಯಾಸನ ವಂಶಜರು, ಕೀಚಕನ ಸಂತತಿಯವರು ನಡೆಸಿದ ಕೌರ್ಯ ನೋಡಿದರೆ ಸಮಾಜದಲ್ಲಿ ಸ್ತ್ರೀಗೆ ಗೌರವ ಇದೆಯೇ?? ಅಂದು ಆ ಜಾಗದಲ್ಲಿ ಸೇರಿದ ಮಹಿಳೆಯರು ನಿಮ್ಮ ಲೇಖನದ ಸ್ತ್ರೀಯರೇ? ಸ್ತ್ರೀ ಆಗಿ ಇನ್ನೊಂದು ಸ್ತ್ರೀ ಯಾ ಮಾನ ಹರಾಜು ಮಾಡುವಾಗ ಮಾಧ್ಯಮದವರ ಚಿತ್ರೀಕರಣಕ್ಕೆ ಪೋಸು ಕೊಡುತ್ತಿದ್ದಾರೆ. ಸ್ತ್ರೀಯ ಮಾನ ಹರಣಕ್ಕೆ ಉತ್ತೆಜಿಸುತ್ತಿದ್ದಾರೆ. ಈ ದುರುಳರು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲ ! ಮಾನವಂತ ಸ್ತ್ರೀ ಗೆ ಇದೋ ನನ್ನ ನಮನ .

Subhashini , Kasaragod
2012-07-31
" ಸ್ತ್ರೀ " ಎಂಬ ಮೂರಕ್ಷರದ ಪದಗುಚ್ಛ ,  ಪೂಜನೀಯತೆಯ ಮೂರ್ತರೂಪ . ... ವರ್ಣಚಿತ್ರವೂ ಸೊಗಸಾಗಿದೆ .
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri