ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು

“ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ ?!!!

ಆದರೆಊರ್ಮಿಳೆಯಾಗಿ, ಹೆಣ್ಣಾಗಿ,ವಿರಹಿಯಾಗಿ

ಕೇಳ ಬಾರದಿತ್ತೆ ಈ ಪ್ರಶ್ನೆ…??

ಹದಿನಾಲ್ಕು ವರುಷ

ಅಯೋಧ್ಯೆಯ ಸೊಸೆಯಾಗಿ…

ಲಕ್ಷ್ಮಣನ ಸತಿಯಾಗಿ..

ಕಟಾಂಜನದ ಮೇಲೆ ಕೈಯಿಟ್ಟು !

 

ತವರು ಮನೆಯ ಸುಖವ ನೆನೆದುಕೊಂಡೇ..

ಮದುವೆಯ ಮುದದ ನೆನಪಲ್ಲಿ

ಮನವ ತಣಿದುಕೊಂಡೆ !

 

ಗಿಳಿ-ಗೊರವಂಕಗಳೊಡನೆ ಕನಸ ಹಂಚಿಕೊಂಡೆ…

ಆಗೊಮ್ಮೆ ಈಗೊಮ್ಮೆ

ಈ ಮದುವೆಯ ವಜ್ರದುಂಗುರವ ತಿಂದು

ಇಹವ ತೊರೆಯಬೇಕೆಂದುಕೊಂಡೆ..!

 

ಆದರೀ ಉಂಗುರದ ಒಡೆಯನ ಬಿಸುಪು,

ನೆನಪೇ ನನ್ನ ಹಿಡಿದಿಟ್ಟಿತ್ತು…

ಹದಿನಾಲ್ಕು ವರ್ಷಗಳ ನಂತರ

ಕಟಾಂಜನದ ಮೇಲೆ ಕೈ ಇಟ್ಟು ಒರಗಿ

ನೋಡುತ್ತಿದ್ದೇನೆ ಲಕ್ಷ್ಮಣನನ್ನು !

 

ಕೊಂಚ ಕೃಶ ಶರೀರ ,

ಒಂದಿನಿತೂ ಕುಂದದ ಕಣ್ಣ ಹೊಳಪು

ಇವರೇ ಅಲ್ಲವೇ .....

ನನ್ನ ಕೈ ಹಿಡಿದು ಆಯೋಧ್ಯೆಗೆ ಕರೆತಂದವರು !

 

ಮೈಯಲ್ಲಿ ಏನೋ ಬಿಗಿತ..

ಕೈಯಲ್ಲಿ ಕಂಪನ..

ಮನದಲ್ಲಿ ತವಕ…

ಗಂಡನನ್ನು ಕಾಯುತ್ತಿರುವ

ಈಗಷ್ಟೇ ಮದುವೆಯಾದ ಹೆಣ್ಣು ನಾನು !

 

ಹದಿನಾಲ್ಕು ವರ್ಷ ಕಳೆದದ್ದು ದೇಹಕ್ಕೆ ಮಾತ್ರ…

ಆದರೆ….

ಲಕ್ಷ್ಮಣನಿಗೆ ರಾಮನ, ಮಹಾಸತಿ ಸೀತೆಯ

ಪ್ರೇಮ, ವಿರಹ, ಮಿಲನಗಳ

ಕಾಡಿನ ಕಥೆ, ವ್ಯಥೆಯದೆ ವಿಷಯ…

ವನವಾಸ ರಕ್ಕಸಯುದ್ಧ ಅವನನ್ನು ಪ್ರೌಡನನ್ನಗಿಸಿದೆ !

ಅಣ್ಣ ಅತ್ತಿಗೆಯರ ಸೇವೆ, ದೇವರ ಧಾನ್ಯ,

ವನವಾಸ ಅವನನ್ನು ನಿರ್ಲಿಪ್ತನನ್ನಾಗಿಸಿದೆ !

 

ಇಂದಿಗಿಂತ ಆ ಕಾಯುತ್ತಿದ್ದ

ಆ ಹದಿನಾಲ್ಕು ವರ್ಷವೇ ಹಿತ ಎನಿಸುತ್ತಿದೆ !

 

ಹಿಡಿದಿಡಲಾರದೆ ಕೇಳಿ ಬಿಟ್ಟೆ

“ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ ?!!!

ಸ್ತಂಭೀಭೂತನಾದ ಲಕ್ಷ್ಮಣ !

ಕಣ್ಣoಚಲ್ಲಿ ನೀರ ತುಂಬಿ ನಾ ಕೇಳಿದ ಪರಿಗೆ !

ಅವನ ಕಣ್ಣಲ್ಲಿ ಚಡಪಡಿಕೆಯೇ ?!

ಇಲ್ಲ ತಪ್ಪಿತಸ್ಥ ಭಾವವೇ.. !

 

ಅಯೋಧ್ಯೆಯ ಸೊಸೆಯಾಗಿ…

ಲಕ್ಷ್ಮಣನ ಮಡದಿಯಾಗಿ…

ಸೀತೆಯ ತಂಗಿಯಾಗಿ…

ನಾ ಕೇಳಿದ್ದು ತಪ್ಪೇನೋ ..

ಆದರೆ…ಊರ್ಮಿಳೆಯಾಗಿ, ಹೆಣ್ಣಾಗಿ,ವಿರಹಿಯಾಗಿ

-ಸುನೀತ ಮಂಜುನಾಥ್, ಮೈಸೂರು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-07-21

Tell a Friend

ಪ್ರತಿಸ್ಪಂದನ
Mohan devadiga, Byndoor
2012-07-22
ಬಹಳ ದಿನಗಳ ನಂತರ ಯಾವ ಪ್ರತಿಮೆಗಳ ಜಟಿಲತೆ ಇಲ್ಲದ ಸರಳ, ಅಷ್ಟೇ ಸುಂದರ ಕವಿತೆ ಓದಿದಂತಾಯಿತು. Thank you Sunita...wonderful
ರವಿ ಮುರ್ನಾಡು,, Cameroun
2012-07-21
“ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ ?!!!

ಕೇಳಬಾರದಿತ್ತೆ ಈ ಪ್ರಶ್ನೆ ???

ನಾನೊಬ್ಬ ಹೆಣ್ಣಾಗಿ, ಊರ್ಮಿಳೆಯಾಗಿ, ಸೀತೆಯಾಗಿ, ವಿರಹಿಯಾಗಿ; ಸಾವಿರಾರು ವರ್ಷಗಳಿಂದ ಇತಿಹಾಸದುದ್ದಕ್ಕೂ ಹರಿದು ಬಂದ ಇಡೀ ಹೆಣ್ಣು ಜನ್ಮಗಳನ್ನು ಪ್ರತಿನಿಧಿಸಿದ್ದ "ಊರ್ಮಿಳೆ" ಎಂಬ ಜಗತ್ಪ್ರಸಿದ್ಧ ರಾಮಾಯಣದ ಈ ಪ್ರತಿಮೆಯ ಈ ಪ್ರಶ್ನೆ ಜಗತ್ತಿನ ಯಾವುದೇ ಸಾಹಿತ್ಯ ಕೇಳಲಿಲ್ಲ. ಭಾರತದ ಜ್ಜಾನ ಪೀಠ,ಸಾಹಿತ್ಯ ಪ್ರಶಸ್ತಿಗಳು, ನೋಬೆಲ್ ಪ್ರಶಸ್ತಿ ವಿಜೇತ ಪುಸ್ತಕ ,ಗ್ರ೦ಥಗಳು ಬರಹಗಳು ಆಲೋಚಿಸಲಿಲ್ಲ.

ಜಗತ್ಪ್ರಸಿದ್ಧ ಸಾಹಿತಿಗಳನ್ನು ಬೆರಗು ಹುಟ್ಟಿಸುವ ಇಂತಹ ಸೃಜನ ಶೀಲ ಪ್ರಶ್ನೆಯ ಹುಟ್ಟು ಕನ್ನಡ ನಾಡಿನಿಂದ ಹುಟ್ಟಿದ್ದು ಹೆಮ್ಮೆ ಪಡುತ್ತೇವೆ.

ಇಡೀ ಕನ್ನಡ ಸಾಹಿತ್ಯ ಲೋಕ ಮಾನ್ಯ ಸುನೀತಾ ಮ೦ಜುನಾಥರನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಲಿ. ಈ ಪ್ರಶ್ನೆ ಆಕಸ್ಮಿಕವಾಗಿ ಹುಟ್ಟಿದ್ದು, ಸುನಿತಾರವರಿಗೆ ಆಶ್ಚರ್ಯವಾಗಿರಬಹುದು.

Sunanda , Bahrain
2012-07-21
ಪ್ರಶ್ನೆ ಕೇಳಿದ್ದರಲ್ಲಿ ಯಾವ ತಪ್ಪು ಇಲ್ಲ ..ಆದರೆ ಊರ್ಮಿಳೆಯ ಪ್ರಶ್ನೆಗೆ ಲಕ್ಹ್ಮಣನಲ್ಲಿ ಇಲ್ಲದಾಯಿತು ಉತ್ತರ. ಸುಂದರವಾದ ಅರ್ಥಗರ್ಭಿತ ಕವನ...ಅಭಿನಂದನೆಗಳು ಸುನೀತ...
N Krishnamurthy Bhadravathi, Bangalore
2012-07-21
ಮನ ಹಿಡಿದಿಡುವ ಕವಿತೆ....
ಸವಿತಾ ಇನಾಮದಾರ್, ಹೊಸ ದೆಹಲಿ
2012-07-21
ಆ ಊರ್ಮಿಳೆಯ ವಿರಹದ ಗಾಥೆಯನ್ನೊದುತ್ತಾ ಹೋದಂತೆ ಅವಳ ಸಹನೆಯ ಆಗರಕ್ಕೆ ತಲೆಬಾಗಬೇಕೆನಿಸುವುದು.ಆ ಲಕ್ಷ್ಮಣನೂ ಅವಳಂತೆಯೇ ವಿರಹಾಗ್ನಿಯಲ್ಲಿ ಬೆಂದರೂ ಅವನ ಮುಂದೊಂದು ಕರ್ತವ್ಯದ ಕರೆಯಿತ್ತು.. ಪಾಪ ನಮ್ಮ ಊರ್ಮಿಳೆಯ ಅಂತರಂಗವನ್ನು ಕೆದಕಿ ನೋಡಿದಲ್ಲಿ ಕಾಣುವ ಅವಳ ವಿವ್ಹಲ ರೋದನಕ್ಕೆ ಪ್ರಶ್ನೆಯನ್ನೂ ಕೇಳದಿದ್ದರೆಂತು?? ಅದೂ ತನ್ನ ಪತಿಗೆ?? ಖಂಡಿತವಾಗಿಯೂ ಆಕೆ ಕೇಳಲೇಬೇಕು.ಅವನ ಕಂಗಳಲ್ಲಿ ಕಾಣುವುದು ತಪ್ಪಿತಸ್ಥ ಭಾವವಲ್ಲ..ಹತಾಷೆಯ ಕಹಿ ನೆರಳು...

ಕವನ ತುಂಬಾ ಸುಂದರವಾಗಿ ಮೂಡಿ ಬಂದಿದೆ ಸುನಿತ..

bharathi.b v, bengalooru
2012-07-21
ಪ್ರಶ್ನೆ ಕೇಳಬಹುದು ಆದರೆ ಉತ್ತರ ಸಿಗುವುದಿಲ್ಲ ಅಲ್ಲವಾ ಸುನಿತಾ?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri