ಚುಕ್ಕಿ ಚಿತ್ರಗಳ ಚಂದ್ರಮ ಮೋಹನ್ ವರ್ಣೇಕರ್ |
ಪ್ರಕಟಿಸಿದ ದಿನಾಂಕ : 2012-07-08
ಚುಕ್ಕಿ ಕಲೆಗಳ ಸಂಗಮ...ಹಕ್ಕಿ ವಿಹಂಗಮ..!
ಅಭೂತಪೂರ್ವ ಕಲೆಗಳ ಸನ್ನಿಧಿಯಲ್ಲಿ ಆಗಸದ ಚುಕ್ಕಿಗಳು ಮನುಷ್ಯಾವತಾರವನ್ನು ಮೈದಾಳಿ ಭೂಮಿ ಮೇಲೆ ಬಿದ್ದರೆ ಹೇಗಿರುತ್ತದೆ?
ಅದು ಈ ಕೆಳಗೆ ಬಿದ್ದ ಸಾಹಿತ್ಯ ನಕ್ಷತ್ರಗಳಾಗಿರುತ್ತವೆ.ಇಲ್ಲಿರುವ ಎಲ್ಲಾ ಚಿತ್ರಗಳ ಛಾಪು ಎಲ್ಲರಿಗೂ ಗೊತ್ತಿರುವಂತಹದ್ದೆ.
ಮರೆತು ಹೋದವರು ಮತ್ತೊಮ್ಮೆ ಮರುಕಳಿಸುವ ಚುಕ್ಕಿ ಚಂದ್ರಮರು. ಬೆಂಗಳೂರಿನ ಮೋಹನ್ ವರ್ಣೇಕರ್ ಅವರ ಕಲಾ ಚಮತ್ಕಾರವಿದು.
ಚುಕ್ಕಿಗಳನ್ನು ಪೋಣಿಸುತ್ತಲೇ ಹೊಸ ಕಲಾ ಪ್ರಾಕಾರಕ್ಕೆ ಒಗ್ಗಿಸಿಕೊಂಡ ಅಪರೂಪದ ಚುಕ್ಕಿ ಕಲೆಗಾರ.
ಯಾವುದೇ ಪ್ರಚಾರದ ಹಂಗಿಲ್ಲದೆ, ತಮ್ಮದೇ ಭಾಷೆಯಲ್ಲಿ ತೆರೆದುಕೊಂಡ ಕಲಾ ಜಗತ್ತಿನ ಸೊಗಸು ಈ ವರ್ಣೇಕರ್ ಅವರದು. ಆಸ್ವಾಧಿಸುವ ಭಾಗ್ಯ ಗಲ್ಫ್ ಕನ್ನಡಿಗ ಓದುಗರದ್ದು....!





ವರದಿಯ ವಿವರಗಳು |
 |
ಕೃಪೆ : ರವಿ ಮೂರ್ನಾಡು ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-07-08
|
|
Tirumalai Ravi , Bengalooru | 2012-07-09 | ಶ್ರೀ ಮೋಹನ್ ವರ್ಣೇಕರ್ ರವರ ಅಭೂತ ಪೂರ್ವ ಈ ಕಲೆ ಬಹು ಶ್ಲಾಘನೀಯ. ಎಲೆಮರೆಕಾಯಂತೆ ಇದ್ದು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದಿರುವ ಅವರಿಗೆ ಅವರೇ ಸಾಟಿ. ಅವರ ಈ ಚಿತ್ರಗಳಲ್ಲಿನ ನೈಜತೆ ಎದ್ದು ಕಾಣುತ್ತದೆ. ಚಿತ್ರದಲ್ಲಿರುವ ವ್ಯಕ್ತಿಗಳು ನಮ್ಮೆದುರೇ ನಿಂತಿದ್ದಾರೆ ಎನ್ನುವ ಭಾವ ಮೂಡಿಸುವ ಅವರ ಚಿತ್ರಗಳು ನಿಜಕ್ಕೂ ಅದ್ಭುತ. ಅವರಿಗೆ ಶುಭವಾಗಲಿ. ಅವರ ಈ ಕಲಾ ಪ್ರಕಾರ ಸಾರ್ವಜನಿಕವಾಗಿ ಬೆಳಕಿಗೆ ಬರಲಿ. |
ಗಣೇಶ್ ರೈ, ಯು.ಎ.ಇ. | 2012-07-08 | ತೈಲವರ್ಣ, ಜಲವರ್ಣ ಕಲಾಕೃತಿ ರಚನೆಗಿಂತಲೂ ಹೆಚ್ಚು ಸಮಯವನ್ನು ವ್ಯಯ ಮಾಡಿ ಚುಕ್ಕಿ ಚಿತ್ರವನ್ನು ರಚಿಸುವಾಗ ಪೂರ್ಣಗೊಳ್ಳಲು ಒಂದೊಂದು ಚುಕ್ಕಿಯೂ ಕಲಾಕಾರನ ತಾಳ್ಮೆಗೆ ಸವಾಲಾಗಿದ್ದು, ಅತ್ಯುತ್ತಮ ಚಿತ್ರಮೂಡಿ ಬಂದಿರುವುದಕ್ಕೆ ಪ್ರಕಟವಾಗಿರುವ ಚಿತ್ರವೇ ಸಾಕ್ಷಿಯಾಗಿದೆ. ಕಲಾವಿದ ಮೋಹನ್ ವರ್ಣೇಕರ್ ರವರಿಗೆ ಅಭಿನಂದನೆಗಳು. ಕಲೆಯನ್ನು ಮಾಧ್ಯಮದ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಿದ ಶ್ರೀಯುತ ರವಿ ಮೂರ್ನಾಡ್ ಮತ್ತು ಗಲ್ಫ್ ಕನ್ನಡಿಗಕ್ಕೆ ಧನ್ಯವಾದಗಳು. |
|