ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...

ಮಳೆಗಾಲದ ವರ್ಷಧಾರೆ ಪ್ರಾರಂಭವಾಯಿತೋ , ನೆಲದಿಂದ ಮೇಲೆದ್ದು ಬರುವ ಹತ್ತು ಹಲವು ಸಸ್ಯರಾಶಿ ! ಅವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ ತಗತೆ ಗಿಡ . ರಸ್ತಯ ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸಿಗೆಯ ಹಾಗೆ , ಎಲ್ಲೆಲ್ಲ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಮೊಳೆತು ಕಂಗೊಳಿಸುವ ದೃಶ್ಯ ನನ್ನ ಬಾಲ್ಯದಲ್ಲಿ ಸರ್ವೇಸಾಮಾನ್ಯವಾಗಿತ್ತು . ಆ ಕಾಲದ ರಸ್ತೆಗಳು ಇಂದಿನಂತೆ ಕಾಂಕ್ರೀಟು ಹೊದಿಕೆ ಮುಚ್ಚಿದವುಗಳಲ್ಲ . ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಇರಲೇ ಇಲ್ಲ . ಅಂಗಡಿ , ಮಾರ್ಕೇಟು ಕಡೆ ಹೋಗಬೇಕಾದರೆ ಬಟ್ಟೆಯಿಂದ ಹೊಲಿದ ಚೀಲಗಳನ್ನು ಬಳಸುತ್ತಿದ್ದೆವು . ದಿನಸಿ ಅಂಗಡಿಯವನು ನೀಟಾಗಿ ಕಾಗದದ ಪೊಟ್ಟಣದಲ್ಲಿ ಮಾಲು ಕಟ್ಟಿ ಕೊಡ್ತಿದ್ದ . ಪಾರ್ಥೇನಿಯಂ ಕಳೆಯ ಹೆಸರೇ ಗೊತ್ತಿರಲಿಲ್ಲ . ಆಗ ನಮ್ಮಪಾಲಿಗೆ ಈ ತಗತೆ ಗಿಡವೇ ಕಳೆ ಸಸ್ಯ !

ನಮ್ಮ ಮನೆಯ ವಠಾರದಲ್ಲೂ ಅಷ್ಟೇ , ಖಾಲಿ ಜಾಗ ಇದ್ದಲ್ಲೆಲ್ಲ ತಗತೆಯದ್ದೇ ದರ್ಬಾರು . ಚಿಗುರಿದ ಎರಡೇ ತಿಂಗಳಲ್ಲಿ ಹೂವರಳಿ , ಹೂ ಕಾಯಾಗಿ ಉದ್ದನೆಯ ಕೋಡುಗಳು ಬಲಿಯುತ್ತಿದ್ದಂತೆ ಗಿಡದ ಆಯುಸ್ಸು ಮುಗಿಯಿತು . ಮತ್ತೆ ಮುಂದಿನ ಮಳೆಗಾಲಕ್ಕೇ ಅದರ ದರ್ಶನ . ನನ್ನಮ್ಮ ಈ ತಗತೆಯಿಂದ ತಯಾರಿಸದ ಖಾದ್ಯಗಳಿಲ್ಲ . ದುಡ್ಡು ಕೊಟ್ಟು ತರಬೇಕಾಗಿಲ್ಲ , ಮನೆ ಹಿತ್ತಿಲಲ್ಲಿ ಇರುವ ಸಸಿಗಳನ್ನು ಮುರಿದುಕೊಂಡರಾಯಿತು . ಅಚ್ಚುಕಟ್ಟಾಗಿ ಪತ್ರೊಡೆ ತಯಾರಿಸೋರು ನನ್ನಮ್ಮ , ಕೆಸುವಿನ ಹಾಗೆ ತುರಿಸದು . ಹೆಚ್ಚು ಹುಳಿಯ ಅಗತ್ಯವಿಲ್ಲ . ತೊಗರಿ ಬೇಳೆ ಸಾಂಬಾರಿಗೆ ಇನ್ನಿತರ ಸೊಪ್ಪುಗಳನ್ನು ಬಳಸುವಂತೆ ಇದನ್ನೂ ಧಾರಾಳವಾಗಿ ಹಾಕ್ತಿದ್ದರು .

ಪಲ್ಯ ಮಾಡುವುದು ಹೀಗೆ : ಬಾಣಲೆಯಲ್ಲಿ ಒಗ್ಗರಣೆ ತಯಾರಿಸಿ . ಎರಡು ಮುಷ್ಟಿ ಸೊಪ್ಪು ಹಾಕಿ ಸೌಟಿನಲ್ಲಿ ಆಡಿಸಿ . ಒಂದು ಹಿಡಿ ಹಲಸಿನ ಬೇಳೆಗಳನ್ನು ಸಣ್ಣದಾಗಿ ಹಚ್ಚಿ ಹಾಕಿ . ರುಚಿಗೆ ಉಪ್ಪು , ಇನ್ನಿತರ ಮಸಾಲೆ ಬೇಕಿದ್ದರೆ ಹಾಕಿಕೊಳ್ಳಿ. ತುಸು ನೀರು ಹಾಕಿ ಮೆತ್ತಗೆ ಬೇಯಿಸಿ . ಬೆಂದ ಪಲ್ಯಕ್ಕೆ ತೆಂಗಿನತುರಿ ಹಾಕಿದರೆ ಆಯಿತು . " ಹಲಸಿನ ಬೇಳೆ ಎಲ್ಲಿಂದ ತರಲೀ ". ಅಂತೀರಾ , ಬಟಾಟೆ ಸಣ್ಣಗೆ ಹಚ್ಚಿ ಹಾಕಿ . ಪರವಾಗಿಲ್ಲ .

ವಡೆ ಮಾಡುವುದು ಹೀಗೆ : ಅಕ್ಕಿ ಕಡ್ಲೆಬೇಳೆಗಳನ್ನು ತರಿತರಿಯಾಗಿ ರುಬ್ಬಿಕೊಂಡು ಒಂದು ಹಿಡಿ ಸೊಪ್ಪು ಸೇರಿಸಿ ಇನ್ನಿತರ ವಡೆಗಳಂತೆ ವಡೆ ತಟ್ಟಿ ಎಣ್ಣೆಯಲ್ಲಿ ಕರಿದರಾಯಿತು .

ತಂಬುಳಿ ತಯಾರಿಸೋಣ ಹೀಗೆ : ಒಂದು ಹಿಡಿ ಸೊಪ್ಪನ್ನು ತುಪ್ಪದಲ್ಲಿ ಬಾಡಿಸಿಕೊಳ್ಳಿ . ಜೀರಿಗೆ , ತೆಂಗಿನತುರಿ , ದಪ್ಪ ಮಜ್ಜಿಗೆಯೊದಿಗೆ ನುಣ್ಣಗೆ ಅರೆಯಿರಿ . ಸಾಕಷ್ಟು ತೆಳ್ಳಗೆ ಮಾಡಿಕೊಂಡು ಉಪ್ಪು ಸೇರಿಸಿ ಒಗ್ಗರಣೆ ಕೊಟ್ಟು ಬಿಡಿ . ಅಡುಗೆಯ ಒಳಗುಟ್ಟು ಅರಿತಿರುವ ಗೃಹಿಣಿಯರು ಹೊಸ ಹೊಸ ಖಾದ್ಯಗಳನ್ನು ತಾವೇ ತಯಾರಿಸಬಲ್ಲರು .

ಗ್ರಾಮೀಣ ಪ್ರದೇಶದ ಜನತೆ ಇದರ ಔಷಧೀಯ ಗುಣಗಳನ್ನು ಮೊದಲಾಗಿ ಕಂಡುಕೊಂಡವರು .
ನಿಂಬೆರಸದೊಂದಿಗೆ ಇದರ ಬೇರನ್ನು ಅರೆದು ಚರ್ಮವ್ಯಾಧಿಗೆ ಲೇಪ ಹಾಕುವ ಪಧ್ಧತಿ ಇದೆ .ಬೀಜವನ್ನು ಹುರಿದು ಹುಡಿಮಾಡಿ ಕಾಫಿ ಯಂತೆ ಬಳಸಬಹುದು.ಸೊಪ್ಪಿನ ಕಷಾಯ ಅಜೀರ್ಣಕ್ಕೆ ಉತ್ತಮ ’ಹಳ್ಳಿಮದ್ದು’.

ಸೊಪ್ಪನ್ನು ಅರೆದು ’ತುರಿಕಜ್ಜಿ”ರಿಂಗ್ವರ್ಮ್’ಇತ್ಯಾದಿ ಚರ್ಮರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ .
ಇನ್ನೊಂದು ಮಾಹಿತಿಯ ಪ್ರಕಾರ. ....ಉಪಯೋಗ - ರಕ್ತಬೇದಿಗೆ , ತುರಿಕಜ್ಜಿಗೆ , ಜ್ವರಕ್ಕೆ, ದದ್ದಿಗೆ, ಜೇನು ಚೇಳು ಕಡಿತಕ್ಕೆ. ಇದು ಕಳೆಗಿಡವೇ ಆಗಿದ್ದರೂ ಬೇರು , ಎಲೆ , ಕಾಯಿಗಳೆಲ್ಲ ಉಪಯುಕ್ತವಾಗಿವೆ .
ಚೆನ್ನಾಗಿ ಬಲಿತ ಗಿಡದ ಕಾಂಡವನ್ನು ತುಂಡರಸಿ ಚಿಕ್ಕ ಚಿಕ್ಕ ತುಂಡುಗಳನ್ನು ಒಣಗಿಸಿ . ಬೇಕಾದಾಗ ಕಷಾಯ ತಯಾರಿಸಿ . ಇದು ದಾಲ್ಚೀನಿಯಂತೆ ಸುಗಧಭರಿತವಾಗಿರುವುದು .
ಅಡುಗೆಯ ಖಾದ್ಯಗಳ ರುಚಿ ಹಾಗೂ ಗುಣಗಳನ್ನು ಅಧಿಕಗೊಳಿಸುವುದು .

ಆಷಾಢಮಾಸದಲ್ಲಿ ಇದನ್ನು ಅಡುಗೆ ಮಾಡಿ ತಿನ್ನಬೇಕೆಂಬ ಸಂಪ್ರದಾಯವೂ ನಮ್ಮ ತುಳು ಜನಾಂಗದವರಲ್ಲಿದೆ . ತುಳು ಭಾಷೆಯಲ್ಲಿ ಇದು ’ ತಜಂಕ್ ’ ಎಂದೇ ಜನಪ್ರಿಯವಾಗಿದೆ .ಕನ್ನಡದಲ್ಲಿ ತೊಗಟೆ’ ಗಿಡವಾಗಿರುವ ಇದರ ಸಸ್ಯಶಾಸ್ತ್ರೀಯ ನಾಮಧೇಯ Cassia tora .

ಮರಗಿಡಗಳಿಗೆ ಉತ್ತಮ ಹಸಿರೆಲೆ ಗೊಬ್ಬರ , ಜೊತೆಗೆ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುವುದು . ಅಡಿಕೆ ತೋಟಗಳ ಮಣ್ಣಿನ ಆಮ್ಲೀಯತೆ ಹೆಚ್ಚಾದಲ್ಲಿ ಇಳುವರಿ ಕಡಿಮೆಯಾಗುವುದು . ಅಂಥ ಸಂದರ್ಭದಲ್ಲಿ ಮರಗಳ ಬುಡಕ್ಕೆ ತಗತೇಸೊಪ್ಪನ್ನು ತುಂಡರಿಸಿ ಹಾಕಿದಲ್ಲಿ ತೋಟ ನಳನಳಿಸುವುದು . " ತಗತೆ ಸಸ್ಯ ಸಂಕುಲವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಪಾರ್ಥೇನಿಯಂ ಕಳೆ ತೊಲಗಬಹುದು " - ಇದು ಸಸ್ಯ ವಿಜ್ಞಾನಿಗಳ ಅಭಿಮತ .

ಬೀಜದಲ್ಲಿ ಪ್ರೊಟೀನ್ ಅಧಿಕ . ಪಕ್ಷಿಗಳ ಪ್ರಿಯ ಆಹಾರ .ಒಂದು ನೈಸರ್ಗಿಕ ಕೀಟನಾಶಕ . ಸಾವಯವ ಕೃಷಿಕರ ಅಚ್ಚುಮೆಚ್ಚಿನ ಸಸ್ಯ .

ನನ್ನ ಬಾಲ್ಯದಲ್ಲಿ ಹೀಗೆ ಕಂಗೊಳಿಸುತ್ತಿದ್ದ ತಗತೆ ಈಗ ಹಿಂದಿನಂತೆ ಕಾಣಸಿಗುತ್ತಿಲ್ಲ . ಇದಕ್ಕೆ ಪರಿಸರ ಮಾಲಿನ್ಯವೇ ಪ್ರಮುಖ ಕಾರಣ . ಎಲ್ಲೆಂದರಲ್ಲಿ ನಾವು ಬಿಸುಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಇದರ ಬೆಳವಣಿಗೆಯನ್ನು ತಡೆ ಹಿಡಿದಿವೆ . ರಸ್ತೆಬದಿಯಲ್ಲಿ ಕಾಣಸಿಕ್ಕರೂ ಹಿಂದಿನ ಅಪ್ಯಾಯತೆಯಿಂದ ಚಿವುಟಿಕೊಳ್ಳಲು ಮನಸ್ಸು ಬಾರದು .


-ಸುಭಾಷಿಣಿ ಹಿರಣ್ಯ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : -ಸುಭಾಷಿಣಿ ಹಿರಣ್ಯ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-07-08

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ
»ಶುಕ್ರವಾರದ ನಂತ್ರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ
»ಸಹರಾ ವಿರುದ್ಧ ಸುಪ್ರೀಂ ತೀರ್ಪು: ಹೂಡಿಕೆದಾರರ 17,400 ಕೋ. ರೂ. ವಾಪಸ್‌ ನೀಡಿ
»ನಕಲಿ ಸ್ಯಾಮ: ಪೇಟೆಂಟ್ ಸಮರ, ಆಪಲ್‌ಗೆ ಜಯ
»ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ
»ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2
»ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ
»ದೂರವಾಣಿ ತರಂಗಾಂತರ ಹಂಚಿಕೆ ಹರಾಜು: ರೂ 14 ಸಾವಿರ ಕೋಟಿ ಮೂಲ ದರ ನಿಗದಿ
»ಪ್ರಯೋಗಾಲಯದಲ್ಲಿ ಕೃತಕ ಚರ್ಮದ ಸೃಷ್ಟಿ
»ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿ‌ಐ ನಿರ್ಧಾರ...
»ಸಾಗರೋತ್ತರ ಖಾತೆಗಳಲ್ಲಿ ಕಾಳಧನ 32 ಲಕ್ಷ ಕೋಟಿ ಡಾಲರ್‌
»5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ವಿನಾಯಿತಿ
»3 ವರ್ಷದಲ್ಲಿ 400 ಕೋಟಿ ಹೂಡಿಕೆ ಮರ್ಸಿಡಿಸ್ ಬೆಂಝ್
»'ಟಾಪ್- 100' ಪಟ್ಟಿಯಲ್ಲಿ ಭಾರತದ 12 ಕಂಪನಿಗಳಿಗೆ ಸ್ಥಾನ
»ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್‌ಐಸಿ
»ಆರ್‌ಸಿಬಿ ಪಾಲು ಮಾರಾಟಕ್ಕೆ ಮಲ್ಯ ಗಂಭೀರ ಚಿಂತನೆ
»ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ
»ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...
»ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ಆರ್‌ಬಿಐ ಚಿಂತನೆ
»ಫೇಸ್‌ಬುಕ್‌ ಇನ್ನು ಕೆಲಸ ಹುಡುಕಿ ಕೊಡಲಿದೆ!
»ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?
»ಆರ್‌ಬಿಐಯಿಂದ ಆನ್‌ಲೈನ್ ಪಾವತಿ ಸೇವಾ ಶುಲ್ಕ ಕಡಿತ
»ರೈಲು ಪ್ರಯಾಣ ದುಬಾರಿ?...ಸ್ಪೀಡ್ ಪೋಸ್ಟ್ ಮೇಲೂ ತೆರಿಗೆ...
»ಜುಲೈ 19ರ ನಂತರ ಡೀಸೆಲ್, ಎಲ್‌ಪಿಜಿ ತುಟ್ಟಿ
»ಪೆಟ್ರೋಲ್ ಬೆಲೆ ರೂ 2.46 ಪೈ ಇಳಿಕೆ... | ಕರ್ನಾಟಕದಲ್ಲಿ ಸೆಸ್ ಇಳಿಕೆ; ಒಟ್ಟಾರೆ ಪೆಟ್ರೋಲ್ ಬೆಲೆ ನಾಲ್ಕು ರೂ ಇಳಿಕೆ ಸಂಭವ!

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri