ಆರ್ಬಿಐಯಿಂದ ಆನ್ಲೈನ್ ಪಾವತಿ ಸೇವಾ ಶುಲ್ಕ ಕಡಿತ |
ಪ್ರಕಟಿಸಿದ ದಿನಾಂಕ : 2012-07-05
ಸರಕು ಸಾಮಗ್ರಿಗಳ ಖರೀದಿಯಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸುವ ಪ್ರಕ್ರಿಯೆಯಲ್ಲಿ ನಡೆಯುವ ಹಣ ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಸೇವಾ ತೆರಿಗೆಯನ್ನು ಗರಿಷ್ಠ ಶೇಕಡಾ ಒಂದರವರೆಗೆ ಕಡಿತಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ.
ಆನ್ಲೈನ್ ಮುಖಾಂತರ ವ್ಯವಹಾರ ನಡೆಸುವ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಈ ಯೋಜನೆ ಸಾಕಷ್ಟು ಲಾಭದಾಯಕವಾಗಲಿದ್ದು, ಈ ಹಿಂದೆ ಸುಮಾರು ಎರಡು ಪಟ್ಟು ಪಾವತಿಸಬೇಕಾಗಿದ್ದ ಸೇವಾ ಸುಂಕ ಇದೀಗ ಕೇವಲ ಒಂದು ಪಟ್ಟು ಪಾವತಿಸಿದರೆ ಸಾಕು ಎಂಬಂತಾಗಿದೆ.
ಆರ್ಬಿಐನ ನೂತನ ನೀತಿಯನ್ವಯ 2000 ರೂಪಾಯಿವರೆಗಿನ ಆನ್ಲೈನ್ ಖರೀದಿಗೆ ಶೇಕಡಾ 0.75ರಷ್ಟು ಸೇವಾ ಸುಂಕ ನಿಗಧಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ ಶೇಕಡಾ ಒಂದರಷ್ಟು ಬಡ್ಡಿ ನಿಗಧಿಪಡಿಸಲಾಗಿದೆ. ಈ ಹಿಂದೆ ಡೆಬಿಟ್ ಕಾರ್ಡ್ ಬಳಸಿ ನಡೆಯುವ ಖರೀದಿಯಲ್ಲಿ ಶೇಕಡಾ 1.8ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು.
ದೇಶದಲ್ಲಿ ಪ್ರತೀ ವರ್ಷ ಆನ್ ಲೈನ್ ಮಾರಾಟ ಶೇಕಡಾ 30 ರಿಂದ 35ರವರೆಗೂ ಹೆಚ್ಚಾಗುತ್ತಿತ್ತು. ಇದೀಗ ಈ ಯೋಜನೆಯಿಂದಾಗಿ ಆನ್ಲೈನ್ ಮಾರಾಟ ಮತ್ತಷ್ಟು ಬಿರುಸುಗೊಳ್ಳಲಿದೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯಾ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-07-05
|
|
|