ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಇಂದು ಪತ್ರಿಕಾ ದಿನಾಚರಣೆ; ಗಡಿನಾಡಿನಲ್ಲಿ ಕನ್ನಡ ಪತ್ರಿಕೋದ್ಯಮದ ಹೆಜ್ಜೆ ಗುರುತು

ಜಯ ಮಣಿಯಂಪಾರೆ. 

ಪೆರ್ಲ:ಕಾಸರಗೋಡಿನ ಕನ್ನಡ ಪತ್ರಿಕೋದ್ಯಮವನ್ನು ನೋಡಿದಾಗ ಅಲ್ಪ ಸಂಖ್ಯಾತರಾದ ಓದುಗರನ್ನು ಸದಾ ಕೀÅಯಾಶೀಲವಾಗಿಡುವಲ್ಲಿ ಇಲ್ಲಿನ ಪತ್ರಿಕಾ ಜಗತ್ತು ಪ್ರಧಾನ ಪಾತ್ರವಹಿಸಿದೆ ಎನ್ನುವುದು ಸ್ಪಷ್ಟವಾಗಿದೆ.ಕೇರಳಕ್ಕೆ ತಳ್ಳಲ್ಪಟ್ಟ ಈ ಗಡಿನಾಡಿನ ಪ್ರಾದೇಶಿಕ ಇತಿ ಮಿತಿಗಳನ್ನು ಇಲ್ಲಿನ ಪತ್ರಿಕೆಗಳು ನೂರು ಶೇಕಡ ಬಿಂಬಿಸಿದೆ ಮಾತ್ರವಲ್ಲ ತನ್ನ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವಲ್ಲಿ ಅತೀವ ಕಾಳಜಿವಹಿಸಿಕೊಂಡಿದೆ.ಸ್ವಾತಂತ್ರ ಪೂರ್ವಕಾಲದಿಂದ ಹಿಡಿದು ಇತೀ¤ಚಿಗಿನವರೆಗಿನ ಕನ್ನಡ ಭಾಷಾ ಅಲ್ಪಸಂಖ್ಯಾತ ಹೋರಾಟಕ್ಕೆ ಸಹ ಇಲ್ಲಿನ ಕನ್ನಡ ಪತ್ರಿಕೆ ಮುಖವಾಣಿಯಾಗಿ ಮಾರ್ದನಿಸಿದೆ.ಆದರೆ ಬರ ಬರುತ್ತಾ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಕೂಗು ಸಂಬಂಧಪಟ್ಟವರ ಕಿವಿಗೆ ಬೀಳದ ಪರಿಸ್ಥಿತಿ ನಿರ್ಮಾಣವಾಗಿದ್ದು ಒಂದು ರೀತಿಯ ಅನಾಥ ಪ್ರಜ್ಞೆ ನಿರಂತರ ಕಾಡುತ್ತಿದೆ.

ಕೇರಳ ಸರಕಾರದ ಭಾಷಾ ತಾರತಮ್ಯ ಧೋರಣೆಯಿಂದ ಒಂದು ವೇಳೆ ಇಲ್ಲಿ ಕನ್ನಡ ಸತ್ತರೆ ಇಲ್ಲಿನ ಕನ್ನಡ ಪತ್ರಿಕೆಗಳು ಸಹಗಮನವಾಗುವುದು ಕೂಡ ಅನಿವಾರ್ಯ ಎಂಬ ಲಕ್ಷಣ ಕಂಡುಬರುತ್ತಿದೆ. ಇದಕ್ಕೆಲ್ಲ ಪರೋಕ್ಷ ಕಾರಣಿಭೂತರು ಸ್ವತಃ ನಾವೇ ಆಗಿದೇªವೆ ಎಂಬುದು ವಿಷಾದನೀಯ ಸಂಗತಿ.ಈಗಿನ ಯುವ ತಲೆಮಾರುಗಳಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಕುಂಠಿತಗೊಂಡಿದೆ.ವಿದ್ಯುನ್ಮಾದ ಮಾಧ್ಯಮಗಳು ಈ ಆಸಕ್ತಿಯನ್ನು ಅತಿಕ್ರಮಿಸಿಕೊಂಡಿವೆ.ಮಾತ್ರವಲ್ಲ ನಮ್ಮ ಮಕ್ಕಳನ್ನು ಪ್ರತಿಷ್ಠೆಯ ದೃಷ್ಟಿಯಿಂದ ಆನ್ಯ ಭಾಷಾ ಶಾಲೆಗಳಿಗೆ ಕಲಿಯಲು ಕಳಿಸುವುದು ಇಲ್ಲಿನ ಕನ್ನಡಿಗರಿಗೊಂದು ಅತ್ಯುತ್ಸಾಹದ ವಿಷಯವು ಆಗಿದೆ.ಆದರೆ ಈ ಎಲ್ಲಾ ವಿದ್ಯಮಾನಗಳು ನಮ್ಮ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬ ಅಲ್ಪ ಜ್ಞಾನವೂ ನಮಗಿಲ್ಲದೆ ಹೋಯಿತು ಏಕೆಂದು ಪ್ರತಿಯೊಬ್ಬ ಕನ್ನಡಿಗರು ಚಿಂತಿಬೇಕಾದ ಸಕಾಲ ಬಂದೊದಗಿದೆ. ಕಾಸರಗೋಡಿನ ಪತ್ರಿಕೋದ್ಯಮದ ದೃಷ್ಠಿಯಲ್ಲಿ ಈ ತನಕ ಕರ್ನಾಟಕದ ಮಟ್ಟಿಗೆ ಜಿಗಿದೇಳದಿದ್ದರೂ ಇಲ್ಲಿನ ಪತ್ರಿಕೋದ್ಯಮಿಗಳು ಅಖೀಲ ಕರ್ನಾಟಕ ಮಟ್ಟಕ್ಕೆ ಬೆಳೆದಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ಗಡಿನಾಡಿನ ಪತ್ರಿಕಾ ಇತಿಹಾಸ:ಕಾಸರಗೋಡಿನ ಪತ್ರಿಕೋದ್ಯಮಕ್ಕೆ ವಾಸ್ತವವಾಗಿ ಪೇÅರಣೆ ಹಾಗೂ ಚಾಲನೆ ದೊರೆತದ್ದು ಕಾಸರಗೋಡು ಪ್ರದೇಶವನ್ನು ಪೂರ್ಣವಾಗಿ ಕೇರಳದ ಆಡಳಿತಕ್ಕೆ ಒಳಪಡಿಸಿದ ನಂತರವಾಗಿದೆ.ಭಾಷವಾರು ಪ್ರಾಂತ್ಯ ನಿರ್ಮಾಣದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಕಾಸರಗೋಡನ್ನು ಕೇರಳಕ್ಕೆ ಸೇರಿಸಲಾಯಿತು.ಆಗ ಕಾಸರಗೋಡು ಸಮಾಚಾರ ಎಂಬ ಪತ್ರಿಕೆ ವಾರಕ್ಕೆ ಎರಡು ಬಾರಿ ಪ್ರಕಟವಾಗತೊಡಗಿತು.1956ರಲ್ಲಿ ಸಿರಿಗನ್ನಡ ಮುದ್ರಣಾಲಯದ ಕೃಷ್ಣ ಭಟ್ಟ ಪ್ರಕಾಶಕರಾಗಿ ವೈ.ಮಹಾಲಿಂಗ ಭಟ್ಟ ಸಂಪಾದಕರಾಗಿ ಈ ಪತ್ರಿಕೆ ಕನ್ನಡಿಗರ ಹೋರಾಟಕ್ಕೆ ಪ್ರತ್ಯಕ್ಷ ಬೆಂಬಲ ನೀಡಿತ್ತು.ಈ ಪತ್ರಿಕೆ ಪ್ರಕಟಣೆ ನಿಲ್ಲಿಸಿದ ಬಳಿಕ ಕಾಸರಗೋಡಿನಿಂದ ಪತ್ರಿಕೆ ಹೊರಡುವುದು ಸ್ವಲ್ಪ ಸಮಯದ ವರೆಗೆ ನಿಂತು ಹೋಯಿತು.

ಬಳಿಕ ಅಖೀಲ ಕರ್ನಾಟಕ ಮಟ್ಟದ ಸಾಹಿತ್ಯ ಪತ್ರಿಕೆಯೊಂದು ಬದಿಯಡ್ಕದಿಂದ ಹೊರಡುತಿತ್ತು. ನವಚೇತನ ಎಂಬ ಈ ಪತ್ರಿಕೆಗೆ ಕೋಳಾರಿ ವೆಂಕಟ್ರಮಣ ಭಟ್ಟರು ಸಂಪಾದಕರಾಗಿದ್ದರು.ದಿ.ಮಹಾಬಲ ಭಂಡಾರಿಯವರ ನೇತೃತ್ವದಲ್ಲಿ ಸಮರ್ಥ ಲೇಖಕರ ಮಂಡಳಿಯೇ ಇವರ ಬೆಂಬಲಕ್ಕಿತ್ತು.ಇದು ಕೆಲವು ಸಮಯಗಳವರೆಗೆ ಮುಂದುವರಿಯಿತ್ತಷ್ಟೆ.ಅನಂತರ ಕನ್ನಡಪರ ಹೋರಾಟಗಾರ ಎಂ.ವಿ.ಬಳ್ಳುಳ್ಳಾಯರು ನಾಡಪೇಮಿ ಎಂಬ ದಿನ ಪತ್ರಿಕೆಯನ್ನು ಆರಂಭಿಸಿದರು.ಅದು ತಣ್ಣಗೆ ಕಾಣುತ್ತಿದ್ದ ಚಳುವಳಿಯನ್ನು ಬಡಿದೆಬ್ಬಿಸಿ ಕನ್ನಡಿಗರ ಹೋರಾಟಕ್ಕೆ ಮತೋ¤ಮ್ಮೆ ಶಕ್ತಿ ನೀಡಿತ್ತು.ರಾಜಕೀಯ ವಿವರಗಳು ಮಾತ್ರವಲ್ಲದೆ ಕತೆ,ಕವನ,ವಿಡಂಬನಾತ್ಮಕ ಲೇಖನಗಳು ಈ ಪತ್ರಿಕೆಯಲ್ಲಿ ಸ್ಥಾನ ಪಡೆದಿದ್ದವು.ಆರ್ಥಿಕವಾಗಿ ಹಿನ್ನಡೆ ಅನುಭವಿಸಿದ ಕಾರಣ ಬಳ್ಳುಳಾಯರು ನಾಲ್ಕು ವರ್ಷದ ನಂತರ ನಾಡಪೇÅಮಿಯನ್ನು ನಿಲ್ಲಿಸಿದರು.

1967ರಲ್ಲಿ ಕಾಸರಗೋಡಿನಿಂದ ಅಜಂತ ಎಂಬ ಮಾಸ ಪತ್ರಿಕೆ ಹುಟ್ಟಿಕೊಂಡಿತು.ಕನ್ನಡದ ಶ್ರೇಷ್ಟ ಕತೆಗಾರ ಎಂ.ವ್ಯಾಸರು ಸಂಪಾದಕರಾಗಿ ಹಾಗೂ ಎಂ.ಗಂಗಾಧರ ಭಟ್ಟರು ಸಹ ಸಂಪಾದಕರಾಗಿ ಇದ್ದ ಈ ಪತ್ರಿಕೆ 13ತಿಂಗಳುಗಳಕಾಲ ಮಾತ್ರ ನಡೆದು ಕೊನೆಗೊಂಡಿತು.ಕಾಸರಗೋಡಿನ ಅಂದಿನ ಉದಯೋನ್ಮುಖ ಲೇಖಕರಿಗೆ ಅಜಂತ ನೀಡಿದ ಬೆಂಬಲ ಉಲ್ಲೇಖನಾರ್ಹವಾಗಿತ್ತು.ಕತೆ,ಕವನ,ವಿಮರ್ಶೆ,ವೈಚಾರಿಕ ಬರಹಗಳಿಂದ ತುಂಬಿದ 64ಪುಟಗಳ ಅಜಂತ ಉನ್ನತ ಮಟ್ಟದ ಸಾಹಿತ್ಯಿಕ ಪತ್ರಿಕೆಯಾಗಿತ್ತು.ಇದೇ ಸಂದರ್ಭದಲ್ಲಿ ಕತೆಗಾರ ಕಾ.ರಾ.ಸಾರಂಗ ಮತ್ತು ತೇಜಶ್ಚಂದ್ರ ಶೆಟ್ಟಿ ಎಂಬವರ ಸಂಪಾದಕತ್ವದಲ್ಲಿ ಲಲಿತ ಎಂಬ ಮಾಸ ಪತ್ರಿಕೆಯು ಕೆಲವು ತಿಂಗಳ ಕಾಲ ಪ್ರಕಟವಾಗುತ್ತಿತ್ತು.ಇದರಲ್ಲೂ ಉತ್ತಮ ಕತೆ,ಲೇಖನಗಳಿಗೆ ಪ್ರಾಶಸ್ತÂ ಕೊಟ್ಟಿದ್ದರು.

1968ರ ನಂತರ 16 ವರ್ಷಗಳ ಕಾಲ ಯಾವುದೇ ನಿಯತಕಾಲಿಕಗಳು ಕಾಸರಗೋಡಿನಿಂದ ಹೊರಡುತ್ತಿರಲಿಲ್ಲ. ಈ ದೀರ್ಘ‌ ಶೂನ್ಯ ಕಾಲವನ್ನು ಸರಿಸಿ ಬಂದದ್ದು ಗಡಿನಾಡು ಎಂಬ ದೈನಿಕವಾಗಿದೆ.ಕೆ.ಗಣೇಶ ಎಂಬವರು ಈ ಪತ್ರಿಕೆಯನ್ನು ಸಂಪಾದಕ ಹಾಗೂ ಪ್ರಕಾಶಕರಾಗಿ ನಡೆಸಿಕೊಂಡು ಬರುತ್ತಿದ್ದರು.1985ರಲ್ಲಿ ಸಾಹಸವೆನ್ನುವಂತೆ ಪ್ರಶಾಂತ್‌ ಕುಮಾರ್‌ ಅವರು ಪ್ರತಿಸೂರ್ಯ ಎಂಬ ಮಾಸ ಪತ್ರಿಕೆಯನ್ನು ಕಾಂಞಗಾಡಿನಿಂದ ಹೊರಡಿಸುತ್ತಿದ್ದರು.ಕೆಲವು ಸಮಯಗಳೊಳಗೆ ಅದು ಮಾಯವಾಗಿ ಬಿಟ್ಟಿತು.1988ರಲ್ಲಿ ಅದೇ ಹೆಸರಿನಿಂದ ಪ್ರತಿಸೂರ್ಯ ಎಂಬುದಾಗಿ ಕಾಸರಗೋಡಿನಿಂದ ಕೆ.ಭಾಸ್ಕರ ಎಂಬವರು ಹೊರಡಿಸಿದ ಸಂಜೆ ದಿನ ಪತ್ರಿಕೆ ಅಚ್ಚ ಕನ್ನಡ ಪತ್ರಿಕೆ ಎಂಬ ಕಾರಣಕ್ಕೆ ಓದುಗರ ಅಭಿಮಾನಕ್ಕೆ ಪಾತ್ರವಾಯಿತು.ಅ ಬಳಿಕ ತಂತ್ರಜ್ಞಾನದ ಪೈಪೋಟಿಯಲ್ಲಿ ಅದು ಸ್ತಗಿತಗೊಂಡಿತು.ಬಳಿಕದ ಸಂದರ್ಭದಲ್ಲಿ ಕೆ.ಮೋನಪ್ಪ ಎಂಬವರ ಸಂಪಾದಕತ್ವದಲ್ಲಿ ಬಯ್ಯಮಲ್ಲಿಗೆ ಹಾಗೂ ಎಂ.ರಾಮಣ್ಣ ರೈಯವರ ಕಾಸರಗೋಡು ಸಮಾಚಾರ ಕಾಸರಗೋಡಿನ ಸಾಯಂ ದೈನಿಕಗಳಾಗಿ ಪ್ರಕಟಗೊಳ್ಳುತ್ತಿದ್ದರೂ ಯಶಶ್ವಿ‌ಯಾಗಿ ಮುಂದುವರಿಯುವಲ್ಲಿ ಅದು ಸಫಲವಾಗಲಿಲ್ಲ.

ಮಾಸ ಹಾಗೂ ವಾರ ಪತ್ರಿಕೆಗಳು:ಈ ನಡುವೆ ಕೆಲವು ಅನಿಯತಕಾಲಿಕಗಳು ಇಲ್ಲಿ ಪ್ರಕಟವಾಗುತ್ತಿದ್ದವು.ಕಾವ್ಯರಂಗದವರು ಮುರಹರಿಯ ಸಂಪಾದಕತ್ವದಲ್ಲಿ ಕನ್ನಡ ಮೇಳ ಎಂಬ ಸಾಹಿತ್ಯಿಕ ತೈÅಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದರು.ಹಾಗೆಯೇ ನೆಲ್ಲಿಕಟ್ಟೆಯ ಶೇಣಿ ಆಕಾಡೆಮಿಯಿಂದ ಯಕ್ಷಮೇಳ ಎಂಬ ಯಕ್ಷಗಾನಕ್ಕೆ ಸಂಬಂಧಿಸಿದ ಮಾಸ ಪತ್ರಿಕೆಯನ್ನು ಹೊರಡಿಸುತ್ತಿದ್ದರು.ಬದಿಯಡ್ಕದಿಂದ ರಾಜೇಶ್‌ ಆಳ್ವರ ಸಂಪಾದಕತ್ವದಲ್ಲಿ ಕರಾವಳಿ ಮಾಧ್ಯಮ ಎಂಬ ವಾರ ಪತ್ರಿಕೆಯು ಪ್ರಕಟವಾಗುತ್ತಿತ್ತು.ಸಿರಿಗನ್ನಡ ಪ್ರಸ್‌ನಿಂದ ಕೆ.ವಿ.ರಮೇಶ್‌ರ ಸಂಪಾದಕತ್ವದಲ್ಲಿ ಕಾಸರಗೋಡು ಮಿತ್ರನೆಂಬ ವಾರ ಪತ್ರಿಕೆ, ಧನಂಜಯ ಕುಂಬಳೆಯವರ ನವೀನ ಕಾರ್ಡು ಮಾಸ ಪತ್ರಿಕೆ,ಗಣಪತಿ ದಿವಾಣರ ದರ್ಪಣ,ಅಬ್ದುಲ್‌ ರಹಿಮಾನ್‌ ಸುಬ್ಬಯ್ಯಕಟ್ಟೆಯವರ ಕನ್ನಡ ಕೈರಳಿ ಎಂಬ ಮಾಸ ಪತ್ರಿಕೆ ,ಕಾಸರಗೋಡು ಸರಕಾರಿ ಕಾಲೇಜಿನ ಸೇ°ಹರಂಗದವರ ಕನ್ನಡಧ್ವನಿ,ಡಯಟ್‌ ಮಾಯಿಪ್ಪಾಡಿಯ ಬಿಂಬ ಎಂಬ ಖಾಸಗಿ ಪತ್ರಿಕೆ ಪ್ರಕಟವಾಗಿ ಗಮನ ಸೆಳೆದಿದೆ.

 ಜಿಲ್ಲೆಯಲ್ಲಿ ಬೆಳವಣಿಗೆ ಕಂಡ ಕನ್ನಡ ಪತ್ರಿಕೆಗಳು:ಇದೀಗ ಕಾಸರಗೋಡಿನ ಪತ್ರಿಕಾ ಜಗತ್ತಿನ ಬೆಳವಣಿಗೆಯಲ್ಲಿ ಅತ್ಯಾದುನಿಕ ತಂತ್ರಜ್ಞಾನದಲ್ಲಿ ಮಲಯಾಳಂ ಸಂಜೆ ಪತ್ರಿಕೆ ಕಾರವಲ್‌ನ ಹಾಗೂ ಉತ್ತರದೇಶ ಎಂಬಿವುಗಳ ಕನ್ನಡ ಅವೃತ್ತಿ ಮಾತ್ರ ಜಿಲ್ಲೆಯಿಂದ ಪ್ರಕಟಣೆಯಲ್ಲಿ ಯಶಶ್ವಿ‌ಯಾಗಿದೆ.ಮಾತ್ರವಲ್ಲದೆ ಎಂ.ನಾ.ಚಂಬಲ್ತಿಮಾರ್‌ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಕರಾವಳಿಯ ಕಲೆ ,ಆಚಾರ ಅನುಷ್ಠಾನಗಳಿಗೆ ಮೀಸಲಾದ ಕಣಿಪುರ ಎಂಬ ಖಾಸಗಿ ಮಾಸ ಪತ್ರಿಕೆ ,ಇದಲ್ಲದೆ ಕರ್ನಾಟಕದಿಂದ ಪ್ರಕಟಗೊಳ್ಳುತ್ತಿರುವ ಕನ್ನಡ ದೈನಿಕಗಳು ಮಾತ್ರ ಇಲ್ಲಿನ ಕನ್ನಡಿಗರಿಗೆ ಸುದ್ದಿಗಳನ್ನು ಅರಗಿಸಿಕೊಳ್ಳಲಿರುವ ಏಕೈಕ ಮಾರ್ಗವಾಗಿದೆ.ಇದರಲ್ಲಿ ಕೇವಲ ಕಾಸರಗೋಡಿನ ಸುದ್ದಿ ,ಮಾಹಿತಿಗಳಿಗೆ ಮಾತ್ರ ಪ್ರಾಶಸ್ತÂನೀಡಿ ನಾಲ್ಕು ಪುಟಗಳ ಸಮಗ್ರ ಜಿಲ್ಲಾ ಅವೃತ್ತಿಯನ್ನು ಹೊರತರುವ ಉದಯವಾಣಿ ಸಹಿತ ಇತರ ಕನ್ನಡ ಪತ್ರಿಕೆಗಳು ಕಾಸರಗೋಡಿನ ಓದುಗರಲ್ಲಿ ಸಂಚಲನ ಸೃಷ್ಠಿಗೆ ಹಾಗೂ ಭಾಷಾ ಪೇÅಮ ಕಾಯ್ದುಕೊಳ್ಳಲು ಪ್ರಧಾನ ಕಾರಣವಾಗಿದೆ.

ಕನ್ನಡ ಪತ್ರಕರ್ತರ ಬದುಕು-ಬವಣೆ:ಗಡಿನಾಡದ ಕಾಸರಗೋಡಿನಲ್ಲಿ ಕನ್ನಡ ಪತ್ರಿಕ ರಂಗ ಹಲವಾರು ಏಳು ಬೀಳುಗಳನ್ನು ಕಂಡಿದ್ದರೂ ಇಲ್ಲಿನ ಪತ್ರಕರ್ತರ ಬದುಕು ಬವಣೆಗಳು ಇದಕ್ಕಿಂತ ಭಿನ್ನವೇನಲ್ಲ.ಇಲ್ಲಿನ ಪ್ರತಿಯೊಬ್ಬ ಕನ್ನಡ ಪತ್ರಿಕಾ ನೌಕರರು ತಮ್ಮ ಬದುಕನ್ನು ಸುಭದ್ರಗೊಳಿಸಲಿಲ್ಲವೆಂದರೂ ಪತ್ರಿಕೆಯನ್ನು ಕಟ್ಟಿ ಬೆಳೆಸುವ ಕಾಯಕದಲ್ಲಿ ವೃತ್ತಿ ನಿಷ್ಠೆ ಮೆರೆದವರೇ ಆಗಿದ್ದಾರೆ. ಉಳಿದ ಮಲಯಾಳಂ ಇನ್ನಿತರ ಭಾಷಾ ಪತ್ರಿಕೆಗಳಂತೆ ಈ ಗಡಿನಾಡಿನ ಕನ್ನಡ ಪತ್ರಿಕೋದ್ಯಮಿಗಳಿಗೆ ಸರಕಾರದಿಂದ ಇಷ್ಟರ ವರೆಗೆ ಯಾವುದೇ ಸೌಲಭ್ಯಗಳು ,ಸವಲತ್ತುಗಳು ಲಭಿಸಿದ್ದಿಲ್ಲ.ಅಷ್ಟು ಮಾತ್ರ ಯಾಕೆ ಇಲ್ಲಿನ ನೊಂದಾಯಿತ ಪತ್ರಿಕಾ ಕ್ಲಬ್‌ಗಳಲ್ಲಿ ಕನ್ನಡ ಪತ್ರಿಕೆಯ ಪತ್ರಕರ್ತರಿಗೆ ಸದಸ್ಯತ್ವ ನೀಡಲು ಹಿಂದೆ ಮುಂದೆ ನೋಡಲಾಗುತ್ತದೆ.ಮಾತ್ರವಲ್ಲ ಇಲ್ಲಿ ಕನ್ನಡ ಪತ್ರಿಕೆಗೆ ನೀಡುವ ಸರಕಾರದ ಇನ್ನಿತರ ಪ್ರಕಟಣಾ ವರದಿಗಳು ಕೂಡ ಮಲೆಯಾಳಂ ಭಾಷೆಯಲ್ಲಾಗಿದೆ ಎಂಬುದು ಖೇದನೀಯ ವಿಷಯವಾಗಿದೆ.ಇಷ್ಟೆಲ್ಲ ಇತಿ ಮಿತಿಗಳನ್ನು ದಾಟಿಕೊಂಡು ಕಾಸರಗೋಡಿನ ಪತ್ರಕರ್ತರು ಸೀಮೋಲ್ಲಂಘನಗೈದು ಕನ್ನಡದ ಪತ್ರಿಕೋಧ್ಯಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂಬುದು ಈ ಗಡಿನಾಡಿನ ಸತ್ಯ ಸಂಗತಿಯಾಗಿದೆ.

ಕಯ್ನಾರ,ಪುಣಿಂಚಿತ್ತಾಯರಿಂದ ಹಿಡಿದು ಇತೀ¤ಚೇಗಿನ ಉದಯೋನ್ಮುಖ ಲೇಖಕ-ವಿದ್ಯಾರ್ಥಿ ಮಿತ್ರರವರೆಗೆ ಎಲ್ಲರೂ ಕನ್ನಡ ಪತ್ರಿಕಾ ಸಂಗ ಮಾಡಿದವರೇ ಆಗಿದ್ದಾರೆ.ಪ್ರತಿಯೊಂದು ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾಸರಗೋಡಿನ ಒಬ್ಬರಾದರೂ ಇದ್ದಾರೆ.ಆದುದರಿಂದ ಇಂಗೇಂಡಿನವರೆಲ್ಲರು ನಾವಿಕರಾಗಿರುವಂತೆ ಕಾಸರಗೋಡಿನವರೆಲ್ಲರು ಪತ್ರಕರ್ತರು ಆಗಿದ್ದಾರೆ ಎನ್ನಬಹುದು....

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಜಯ ಮಣಿಯಂಪಾರೆ | ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-07-01

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri