ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ

ಬೆಂಗಳೂರು :ನಗರದ ಸಾಫ್ಟ್ವೇರ್‌ ಎಂಜಿನಿಯರ್‌ ಪವನ್‌ಕುಮಾರ್‌ ಸಾವಿನ ಪ್ರಕರಣದ ತನಿಖೆಗೆ ಒತ್ತಾಯಿಸಿ ಮೃತ ಕುಟುಂಬದವರು ಕಾನೂನು ಹೋರಾಟಕ್ಕೆ ಸಿದ್ದವಾಗಿದ್ದು, ಈ ಸಂಬಂಧ ಗುರುವಾರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲ್ಲಿದ್ದಾರೆ.

ಈ ಮಧ್ಯೆ ಪವನ್‌ಕುಮಾರ್‌ ಮೃತ ದೇಹ ಒಪ್ಪಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆಯ ಮನವಿಗೆ ಪ್ರತಿಕ್ರಿಯಿಸಿರುವ ನ್ಯೂಜೆರ್ಸಿಯ ಪೊಲೀಸ್‌ ಅಧಿಕಾರಿಗಳು ಮೃತನ ವೈದ್ಯಕೀಯ ವರದಿ ಸಲ್ಲಿಕೆಯ ಬಳಿಕವಷ್ಟೆ ಮುಂದಿನ ಕ್ರಮ ತೆಗೆದು ಕೊಳ್ಳುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಂಜಯನಗರದ ನಿವಾಸಿ ಅಂಜಪ್ಪ ಹಾಗೂ ರಂಗರತ್ನಮ್ಮ ದಂಪತಿಯ ಪುತ್ರ ಪವನ್‌ ಕುಮಾರ್‌ (26) ಈಚೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ನಾಗವಾರದ ಕಾಗ್ನಿಜೆಂಟ್‌ ಟೆಕ್ನಾಲಜಿಸ್‌ ಸಾಫ್ಟ್ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಆತ ಕೆಲಸದ ನಿಮಿತ್ತ 2011ರ ಮಾರ್ಚ್‌ನಲ್ಲಿ ಅಮೆರಿಕಾಕ್ಕೆ ತೆರಳಿದ್ದರು. ಆದರೆ ಜೂ 16 ರಂದು ಪವನ್‌ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

ಈ ಕುರಿತು ಬುಧವಾರ ಮಾತನಾಡಿದ ಮೃತ ಪವನ್‌ ಚಿಕ್ಕಪ್ಪ ಗೋಪಾಲ ಕೃಷ್ಣ ಅವರು, ಪವನ್‌ ಸಾವಿನ ಪ್ರಕರಣ ಸಂಬಂಧ ಆತ ಕೆಲಸ ಮಾಡುತ್ತಿದ್ದ ಕಾಗ್ನಿಜೆಂಟ್‌ ಟೆಕ್ನಾಜಲಿಸ್‌ ಕಂಪನಿಯ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಈ ದೂರು ದಾಖಲಿಸಿದ ನಂತರ ಪೊಲೀಸ್‌ ಕಮೀಷನರ್‌ ಬಿ.ಜೆ.ಜ್ಯೋತಿಪ್ರಕಾಶ್‌ ಮಿರ್ಜಿ ಅವರನ್ನು ಭೇಟಿಯಾಗಿ ಸಮಗ್ರ ತನಿಖೆ ನಡೆಸುವಂತೆ ಮನವಿ ಸಲ್ಲಿಸುತ್ತೇವೆ. ಈ ಪೊಲೀಸರು ತನಿಖೆಯ ಬಳಿಕ ಹೈ ಕೋರ್ಟ್‌ನಲ್ಲೂ ಕೂಡ ಖಾಸಗಿ ದೂರು ದಾಖಲಿಸುವ ಕುರಿತು ವಕೀಲರ ಜತೆ ಚರ್ಚಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನೌಕರರ ಯೋಗಕ್ಷೇಮದ ಹೊಣೆ ಕೆಲಸಕ್ಕೆ ಸೇರಿಸಿಕೊಂಡ ಕಂಪನಿಗೆ ಸೇರುತ್ತದೆ. ಆದರೆ ಪವನ್‌ ಪ್ರಕರಣದಲ್ಲಿ ಕಾಗ್ನಿಜೆಂಟ್‌ ಟೆಕ್ನಾಜಲಿಸ್‌ ಕಂಪನಿ ಉದಾಸೀನತೆ ತೋರಿದೆ. ಮಗನ ಸಾವಿನ ಸುದ್ದಿಯಿಂದ ಆಘಾತಗೊಂಡಿರುವ ಪವನ್‌ ಪೋಷಕರ ಮನೆಗೆ ಆಗಮಿಸಿ ವಿಚಾರಿಸುವ ಕನಿಷ್ಠ ಸೌಜನ್ಯವನ್ನು ಕಂಪನಿಯ ಅಧಿಕಾರಿಗಳು ತೋರಿಲ್ಲ ಎಂದು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ನಾಗರವಾರದಲ್ಲಿ ರುವ ಕಂಪನಿಯ ಮಾನವ ಸಂಪನ್ಮೂಲದ ಅಧಿಕಾರಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಹೇಳಿದರು.

ಎಸ್‌.ಎಂ.ಕೃಷ್ಣ ಪತ್ರ

ತಮ್ಮ ಪುತ್ರ ಪವನ್‌ಕುಮಾರ್‌ ಮೃತ ದೇಹವನ್ನು ಪತ್ತೆ ಮಾಡಿಕೊಡಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ಭಾರತ ರಾಯಭಾರಿ ಕಚೇರಿಗಳಿಗೆ ಮೃತ ಪವನ್‌ಕುಮಾರ್‌ ಕುಟುಂಬದವರು ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ಅವರು, ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಮೂಲಕ ನ್ಯೂಜೆರ್ಸಿ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಪವನ್‌ ಮೃತ ದೇಹ ನೀಡುವಂತೆ ಕೋರಿದ್ದರು. ಈ ಮನವಿಗೆ ಪವನ್‌ ಕುಮಾರ್‌ ಪ್ರಕರಣದ ವೈದ್ಯಕೀಯ ವರದಿ ಇನ್ನೂ ಇಪ್ಪತ್ತ ನಾಲ್ಕು ತಾಸುಗಳಲ್ಲಿ ಲಭ್ಯವಾಗಲಿದ್ದು, ಆನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎನ್ನಲಾಗಿದೆ.

ಅಲ್ಲದೆ ನ್ಯೂಜೆರ್ಸಿಯಲ್ಲಿರುವ ಭಾರತೀಯ ಮೂಲದ ಸಂಘಟನೆಯ ಸದಸ್ಯರು ಕೂಡ ಅಲ್ಲಿನ ಪೊಲೀಸರನ್ನು ಭೇಟಿಯಾಗಿ ಪವನ್‌ ಪ್ರ ಕರಣದ ಕುರಿತು ಸಮಾಲೋಚಿಸಿದ್ದು, ಮೃತದೇಹವನ್ನು ಪೋಷಕರಿಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ ಎಂದು ಗೋಪಾಲ್‌ ತಿಳಿಸಿದರು.

ಕುಟುಂಬದ ಹಿನ್ನೆಲೆ

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಡಗೆರೆ ಗ್ರಾಮದ ಅಂಜಪ್ಪ ದಂಪತಿಗೆ ಪವನ್‌ ಹಾಗೂ ಗುಣಶೀಲಾ ಸೇರಿ ಇಬ್ಬರು ಮಕ್ಕಳು. ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಬಿ.ಇ ವ್ಯಾಸಂಗ ಮುಗಿಸಿದ ಬಳಿಕ ನಾಗವಾರದ ಕಾಗ್ನಿಜೆಂಟ್‌ ಟೆಕ್ನಾಲಜಿಸ್‌ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಈತನ ಕಾರ್ಯಕ್ಷಮತೆ ಗುರುತಿಸಿದ ಕಂಪನಿಯವರು 2011ರ ಮಾರ್ಚ್‌ನಲ್ಲಿ ಅಮೆರಿಕಾ ನ್ಯೂಜೆರ್ಸಿಯ ಶಾಖೆಗೆ ವರ್ಗಾಯಿಸಿದ್ದರು. ಅಲ್ಲದೆ ಈ ಅವಧಿಯ ಸಂದರ್ಭದಲ್ಲಿ ಲಂಡನ್‌ನಲ್ಲಿ ಕೂಡ ಮೂರು ತಿಂಗಳ ಕಾಲ ಪವನ್‌ ಕಾರ್ಯ ನಿರ್ವಹಿಸಿದ್ದರು.

ಕಳೆದ ಜೂ 20 ರ ಬುಧವಾರ ಕಾಗ್ನಿಜೆಂಟ್‌ ಟೆಕ್ನಾಜಿಸ್‌ ಕಂಪನಿಯ ಬೆಂಗಳೂರು ಶಾಖೆಯ ಅಧಿಕಾರಿ ಪ್ರವೀಣ್‌ ಜೋಷಿ ಎಂಬುವರು ಪವನ್‌ ಕುಟುಂಬದವರಿಗೆ ಕರೆ ಮಾಡಿ ತಮ್ಮ ಪುತ್ರ ಪವನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಮುಂದಿನ ಶ್ರಾವಣದಲ್ಲಿ ಮಗನ ಮದುವೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಪುತ್ರನ ಸಾವಿನ ಸುದ್ದಿ ಬರ ಸಿಡಿಲಿನಂತೆ ಬಂದು ಅಪ್ಪಳಿಸಿದೆ. ಆನಂತರ ಮಗನ ಸಾವಿಗೆ ಕಾರಣ ತಿಳಿಯಲು ಅವರು ಎಷ್ಟೇ ಪ್ರಯತ್ನಿಸಿದ್ದರು ಕಾಗ್ನಿಜೆಂಟ್‌ ಕಂಪನಿಯ ಸಹಕಾರ ವ್ಯಕ್ತವಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಂಪನಿಯ ನಿಲುವೇನು?

ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಪವನ್‌ ಕುಟುಂಬದವರಿಗೆ ಮಾಹಿತಿ ಕೊಟ್ಟಿದ್ದಾರೆ. ಅವರ ಕುಟುಂಬದವರನ್ನು ಭೇಟಿ ಮಾಡಿ ಕಾನೂನು ನೆರವಿನ ಭರವಸೆ ಸಹ ನೀಡಿದ್ದು, ಪವನ್‌ ಮೃತದೇಹ ತರುವುದಕ್ಕೆ ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.

ಆದರೆ ಅಮೆರಿಕಾ ಅಧಿಕಾರಿಗಳು ತನಿಖೆ ಪ್ರಗತಿಯಲ್ಲಿರುವ ಕಾರಣ ಪವನ್‌ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬುದು ಕಾಗ್ನಿಜೆಂಟ್‌ ಕಂಪನಿಯ ಅಧಿಕಾರಿಗಳ ವಾದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಕಿ ಜತೆ ಲವ್‌

ಇಂಟರ್‌ನೆಟ್‌ ಚಾಟಿಂಗ್‌ ಮೂಲಕ ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಹಾಗೂ ಪವನ್‌ ಸ್ನೇಹವಾಗಿತ್ತು. ಜೂ.18 ರಂದು ಇಬ್ಬರು ಒಟ್ಟಿಗೆ ನ್ಯೂಜೆರ್ಸಿಯ ಕಡಲ ಕಿನ್ನಾರೆಯಲ್ಲಿ ಸ್ವತ್ಛಂದವಾಗಿ ವಿಹರಿಸಿದ್ದಾರೆ. ಆನಂತರ ಬೀಚ್‌ ಸಮೀಪದ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದಾಗ ಡೇನಿಯಲ್‌ ಮೆಹಲ್ಮನ್‌ ಕೊಲೆಯಾಗಿತ್ತು. ಈ ಘಟನೆ ನಡೆದ ಬಳಿಕ ಪವನ್‌ ನ್ಯೂಜೆರ್ಸಿಯಲ್ಲಿ ಮತ್ತೂಂದು ಹೋಟೆಲ್‌ನಲ್ಲಿ ಉಳಿದಿದ್ದ.

ಆನಂತರ ಜೂ.19ರಂದು ಹೋಟೆಲ್‌ನಲ್ಲಿ ಪವನ್‌ ಕುಮಾರ್‌ ವಿಪರೀತ ಮಾದಕ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ ಸಂಬಂಧ ಪವನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ.

ಪವನ್‌ ಆತ್ಮಹತ್ಯೆ?

ಅಮೆರಿಕಾದಲ್ಲಿ ಡೇನಿಯಲ್‌ ಮೆಹಲ್ಮನ್‌ ಎಂಬ ಶಿಕ್ಷಕಿ ಕೊಲೆ ಪ್ರಕರಣದಲ್ಲಿ ಪವನ್‌ ಕುಮಾರ್‌ಗೆ ಸ್ಥಳೀಯ ನ್ಯಾಯಾಲಯವು ಬಂಧನದ ವಾರೆಂಟ್‌ ಜಾರಿಗೊಳಿಸಿತ್ತು. ಇದರಿಂದ ಭಯಗೊಂಡು ಪವನ್‌ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯರು ಪೊಲೀಸರು ಶಂಕಿಸಿದ್ದಾರೆ ಎನ್ನಲಾಗಿದೆ. ಈತನ ಮೃತ ದೇಹವನ್ನು ಬೆಲ್ಲೆವೆಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

ಈತನ ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ ಬಹಿರಂಗಗೊಂಡ ಬಳಿಕ ಪವನ್‌ ಸಾವಿನ ರಹಸ್ಯ ತಿಳಿಯಲಿದೆ.

ಫೇಸ್‌ ಬುಕ್‌ನಲ್ಲಿ ಸ್ನೇಹವಿಲ್ಲ ಏಕೆ?

ಪವನ್‌ಕುಮಾರ್‌ ಹಾಗೂ ಡೇನಿಯಲ್‌ ಮೆಹಲ್ಮನ್‌ ಮಧ್ಯೆ ಸ್ನೇಹ ಸಂಬಂಧ ದೃಢಪಡಿಸುವ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಈ ಗೆಳೆತನ ಕುರಿತು ಆತ ಯಾರೊಂದಿಗೂ ಮಾತನಾಡಿರಲಿಲ್ಲ ಎಂಬುದು ಮೃತನ ಕುಟುಂಬದವರ ವಾದವಾಗಿದೆ. ಇಂಟರ್‌ನೆಟ್‌ನ ಸಾಮಾ ಜಿಕ ತಾಣಗಳಾದ ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳಲ್ಲಿ ಪವನ್‌ಕುಮಾರ್‌ ಖಾತೆ ಹೊಂದಿದ್ದು, ಇದರಲ್ಲಿ ಸ್ನೇಹಿತರ ಪಟ್ಟಿಯಲ್ಲಿ ಡೇನಿಯಲ್‌ ಮೆಹಲ್ಮನ್‌ ಪತ್ತೆಯಿಲ್ಲ. ಒಂದು ವೇಳೆ ಆಕೆ ಜತೆ 'ಸ್ನೇಹ' ಇದ್ದದ್ದು ನಿಜವೇ ಆಗಿದ್ದರೆ, ಫೇಸ್‌ಬುಕ್‌ನ ಸಹ ಗೆಳತನವಾಗಬೇಕಿತಲ್ವಾ ಎಂದು ಪವನ್‌ ಸ್ನೇಹಿತ ಶಫಿ ಹೇಳುತ್ತಾರೆ.

ನನ್ನ ಸೋದರ ಮಾದಕ ವ್ಯಸನಿಯಲ್ಲ ಮತ್ತು ಆತ ಯಾರನ್ನು ಪ್ರೀತಿಸುತ್ತಿರಲಿಲ್ಲ. ಈ ಪ್ರಕರಣದ ತನಿಖೆಯ ಹಾದಿ ತಪ್ಪಿಸಲು ಪೊಲೀಸರು ನಡೆಸಿರುವ ಸಂಚಿನ ಭಾಗವಾಗಿದೆ. ನನಗೆ ಕಾರು ಖರೀದಿಗೆ ಹಣ ಸಂಗ್ರಹಿಸಿಟ್ಟಿದ್ದು, ಬೆಂಗಳೂರಿಗೆ ಮರಳಿದ ಕೂಡಲೇ ಕಾರು ಖರೀದಿಸೋಣ ಎಂದಿದ್ದ. ಆದರೆ ವಿಪರ್ಯಾಸವೆಂದರೆ ಈಗ ಜೀವಂತವಾಗಿಯಲ್ಲ ಈಗ ಆತನ ಮೃತ ದೇಹ ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೃತ ಪವನ್‌ ಸೋದರಿ ಗುಣಶೀಲಾ ಅಳಲು ತೋಡಿಕೊಳ್ಳುತ್ತಾರೆ.

ಮುಗ್ಧ ಹಾಗೂ ಸ್ನೇಹಮಯಿ ವ್ಯಕ್ತಿತ್ವದ ಹೊಂದಿದ್ದ ಪವನ್‌ಕುಮಾರ್‌ ಮೇಲೆ ಮಾದಕ ವ್ಯಸನಿ ಎಂದು ಅಮೇರಿಕಾ ಪೊಲೀಸರು ಹೇಳು ತ್ತಿರುವ ಮಾತು ನಿಜಕ್ಕೂ ನಂಬಲು ಅಸಾಧ್ಯವಾಗಿದೆ. ಆತನ ಇಪ್ಪತ್ತಾರು ವರ್ಷಗಳಿಂದ ಉತ್ತಮ ನಡತೆ ಹೊಂದಿದ್ದ ಪವನ್‌ ಕೇವಲ ಮೂರು ತಿಂಗಳಲ್ಲಿ ಮಾದಕ ವ್ಯಸನಿಯಾಗಲು ಹೇಗೆ ಸಾಧ್ಯ? ಎಂದು ಆತನ ಚಿಕ್ಕಪ್ಪ ಗೋಪಾಲ ಕೃಷ್ಣ ಪ್ರಶ್ನಿಸುತ್ತಾರೆ.

ಶ್ರವಣದಲ್ಲಿ ಮದುವೆ ಸಿದ್ದತೆ

ಪವನ್‌ ಕುಮಾರ್‌ ಮದುವೆಗೆ ಆತನ ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ಜುಲೈ 1 ತಾರೀಖೀಗೆ ನ್ಯೂಜೆರ್ಸಿಯಲ್ಲಿ ಕೆಲಸದ ಅವಧಿ ಮುಗಿಸಿ ಬೆಂಗಳೂರಿಗೆ ಮರಳುವುದಾಗಿ ಪವನ್‌ ಕುಮಾರ್‌ ತನ್ನ ಪೋಷಕರಿಗೆ ತಿಳಿಸಿದ್ದ ಎಂದು ಗೋಪಾಲ್‌ ಹೇಳಿದರು.

ಅಮೆರಿಕಾದಿಂದ ಹಿಂತಿರುಗಿದ ಬಳಿಕ ಶ್ರವಣ ಮಾಸದಲ್ಲಿ ಪವನ್‌ ವಿವಾಹ ಮಾಡಲು ಯೋಚಿಸಿದ್ದೇವೆ. ಹೀಗಾಗಿ ಸಂಬಂಧಿಕರ ಪೈಕಿ ಯುವತಿಯರನ್ನು ನೋಡಿ ಪೋಟೋ ಸಹ ಕಳುಹಿಸಿದ್ದೇವು ಎಂದು ಗೋಪಾಲಕೃಷ್ಣ ನುಡಿದರು.

ಪವನ್ ಕುಮಾರ್ ಸಾವಿನ ಪ್ರಕರಣ: ಎಚ್‌ಆರ್‌ಡಿ ಅಧಿಕಾರಿಗಳ ವಿರುದ್ಧ ಕುಟುಂಬದ ದೂರು

ಬೆಂಗಳೂರು: ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪವನ್‌ಕುಮಾರ್ ಅಮೆರಿಕದಲ್ಲಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಕಾಂಗ್ನಿಜಂಟ್ ಟೆಕ್ನಾಲಜಿಸ್ ಸಾಫ್ಟ್‌ವೇರ್ ಕಂಪೆನಿಯ ನಗರ ಶಾಖೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದಾಗಿ ಪವನ್ ಕುಟುಂಬ ಸದಸ್ಯರು ಹೇಳಿದ್ದಾರೆ.

`ಯಾವುದೇ ಕಂಪೆನಿಯು ತನ್ನ ಸಂಸ್ಥೆಯ ಉದ್ಯೋಗಿಯನ್ನು ಕೆಲಸದ ನಿಮಿತ್ತ ವಿದೇಶಕ್ಕೆ ಕಳುಹಿಸುವುದಾದರೆ, ಅವರ ಸಂಪೂರ್ಣ ಹೊಣೆ ಆ ಕಂಪೆನಿಯದ್ದೇ ಆಗಿರುತ್ತದೆ. ಆದರೆ, ಪವನ್‌ಗೆ ಭದ್ರತೆ ಕೊಡುವುದಿರಲಿ, ಆತನ ಶವವನ್ನು ನಗರಕ್ಕೆ ತರುವಲ್ಲಿಯೂ ಕಂಪೆನಿ ನಿರ್ಲಕ್ಷ್ಯ ಮಾಡುತ್ತಿದೆ. ಆದ್ದರಿಂದ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳ ವಿರುದ್ಧ ಬುಧವಾರ ನಗರದ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ` ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ `ಪ್ರಜಾವಾಣಿ`ಗೆ ತಿಳಿಸಿದರು.

`ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರೆ, ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸುತ್ತೇವೆ. ಪವನ್ ಸಾವಿನ ಸತ್ಯ ತಿಳಿಯುವವರೆಗೂ ಕಾನೂನು ಹೋರಾಟ ನಡೆಸುತ್ತೇವೆ. ಅಲ್ಲದೇ, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಶವವನ್ನು ದೇಶಕ್ಕೆ ತರುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಅದೇ ಭರವಸೆಯಿಂದ ಕಾಯುತ್ತಿದ್ದೇವೆ` ಎಂದರು.

`ಪವನ್‌ಗೆ ತಿಂಗಳಿಗೆ ನಾಲ್ಕು ಸಾವಿರ ಡಾಲರ್ (2.2 ಲಕ್ಷ ರೂಪಾಯಿ) ಸಂಬಳ ಬರುತ್ತಿತ್ತು. ಮನೆಗೆ ಸ್ವಲ್ಪ ಹಣ ಕಳುಹಿಸುತ್ತಿದ್ದ ಆತ, ಕಾರು ಮತ್ತು ಮನೆ ಖರೀದಿ ಮಾಡಲು ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದ. ಆದರೆ, ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್‌ನ ನಗರ ಶಾಖೆ ಸೇರಿದಂತೆ ಆತನ ಯಾವುದೇ ಬ್ಯಾಂಕ್ ಖಾತೆಗಳಲ್ಲಿ ಹಣವಿಲ್ಲ. ಹಾಗದರೆ, ಆ ಹಣ ಎಲ್ಲಿ ಹೋಯಿತು? ದುಷ್ಕರ್ಮಿಗಳು ಹಣ ದೋಚಿ ಆತನನ್ನು ಕೊಲೆ ಮಾಡಿರಬಹುದು` ಎಂದು ಗೋಪಾಲಕೃಷ್ಣ ಶಂಕಿಸಿದರು.

`ಪವನ್ ಬಾಲ್ಯದಿಂದಲೂ ಕಷ್ಟದಲ್ಲೇ ಬೆಳೆದಾತ. ಆತ ಹನ್ನೆರಡನೇ ವಯಸ್ಸಿನವನಿದ್ದಾಗಲೇ ಹೋಟೆಲ್‌ನಲ್ಲಿ ಕೆಲಸ ಮಾಡಬೇಕಾಯಿತು. ಇಂತಹ ಒತ್ತಡಗಳ ನಡುವೆ ಚೆನ್ನಾಗಿ ಓದಿ ಯಶಸ್ಸು ಸಾಧಿಸಿದ್ದ. ಆತನನ್ನು ಎಂಜಿನಿಯರ್ ಮಾಡುವುದು ಅಪ್ಪನ ಕನಸಾಗಿತ್ತು. ಬಡತನದ ನಡುವೆಯೂ ತಮ್ಮನನ್ನು ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಲು ಅಪ್ಪ ಕೆಲಸದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡರು. ನಿವೃತ್ತಿ ಸಂದರ್ಭದಲ್ಲಿ ದೊರೆತ ಹಣದಲ್ಲಿ ತಮ್ಮ ಕನಸ್ಸನ್ನು ನನಸು ಮಾಡಿಕೊಂಡಿದ್ದರು` ಎಂದು ಪವನ್ ಅಕ್ಕ ಗುಣಶೀಲಾ ತಿಳಿಸಿದರು.

`ಪವನ್ ಸಾವು ಪೂರ್ವ ನಿಯೋಜಿತ ಕೃತ್ಯ. ಅವನನ್ನು ಯಾರೊ ಕೊಲೆ ಮಾಡಿದ್ದಾರೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳುತ್ತಿರುವ ಪೊಲೀಸರು ಪ್ರಕರಣವನ್ನು ತಿರುಚಲು ಮುಂದಾಗಿದ್ದಾರೆ. ಕಾಫಿ, ಟೀ ಕುಡಿಯುವ ಅಭ್ಯಾಸ ಸಹ ಇಲ್ಲದ ಪವನ್‌ಗೆ ಮದ್ಯವ್ಯಸನಿ, ಮಾದಕ ವಸ್ತುಗಳ ವ್ಯಸನಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ಇದರಿಂದ ಅವರಿಗೆ ಏನೂ ಲಾಭ ಸಿಗಲಿದೆ ಎಂಬುದು ಅರ್ಥವಾಗುತ್ತಿಲ್ಲ` ಎಂದರು.

`ಎಂಜಿನಿಯರಿಂಗ್ ಪದವಿ ಮುಗಿಯುತ್ತಿದ್ದಂತೆ ಆತನ ಪ್ರತಿಭೆಯನ್ನು ಗುರುತಿಸಿದ ಕಾಂಗ್ನಿಜಂಟ್ ಕಂಪೆನಿ, ಕಾಲೇಜಿಗೆ ಬಂದು ಅವನನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿತ್ತು. ಪವನ್ ನಾಲ್ಕೂವರೆ ವರ್ಷದಿಂದ ಆ ಕಂಪೆನಿಗಾಗಿ ದುಡಿದಿದ್ದಾನೆ. ಆದರೆ, ಆತನ ಸಾವಿನ ಬಗ್ಗೆ ಅಪೂರ್ಣ ಮಾಹಿತಿ ನೀಡಿದ್ದನ್ನು ಬಿಟ್ಟರೆ, ಮಾನವೀಯತೆ ದೃಷ್ಟಿಯಿಂದಲೂ ಕಂಪೆನಿಯವರು ಮನೆಯ ಬಳಿ ಬರಲಿಲ್ಲ. ಶವವನ್ನು ನಗರಕ್ಕೆ ತರಲು ಕಾನೂನು ನೆರವು ಕೇಳಿದರೂ ಸಹಕರಿಸುತ್ತಿಲ್ಲ` ಎಂದು ಗುಣಶೀಲಾ ಆರೋಪಿಸಿದರು.

ಮಾಧ್ಯಮಕ್ಕೆ ತಿಳಿಸಬೇಡಿ ಎಂದಿದ್ದ ಅಧಿಕಾರಿ

`ಕಾಂಗ್ನಿಜಂಟ್ ಟೆಕ್ನಾಲಜಿಸ್ ಕಂಪೆನಿಯ ನಗರ ಶಾಖೆಯ ಪ್ರವೀಣ್‌ಜೋಷಿ ಎಂಬ ಅಧಿಕಾರಿ ಜೂ 20ರಂದು ಕರೆ ಮಾಡಿ ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು. ಮತ್ತೆ ರಾತ್ರಿ 10.30ರ ಸುಮಾರಿಗೆ ಕರೆ ಮಾಡಿ, ಕಂಪೆನಿಯ ಕೆಲವು ಕರಾರಿಗೆ ಸಹಿ ಮಾಡಬೇಕು ನಾಳೆ ಕಂಪೆನಿಗೆ ಬನ್ನಿ ಎಂದ್ದಿದ್ದರು. ಅಲ್ಲದೇ ನೀವು ಮೂವರೇ ಬರಬೇಕು, ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಮಾಧ್ಯಮದವರಿಗೂ ಈ ವಿಷಯ ತಿಳಿಸಬೇಡಿ ಎಂದು ನನ್ನ ಮಗಳು ಗುಣಶೀಲಾ ಬಳಿ ಹೇಳಿದ್ದರು` ಎಂದು ಪವನ್ ತಂದೆ ಅಂಜಯ್ಯ `ಪ್ರಜಾವಾಣಿ`ಗೆ ತಿಳಿಸಿದರು.

`ಅದರಂತೆ ಮರುದಿನ (ಜೂ21) ಕಂಪೆನಿಗೆ ಹೋದಾಗಲೂ ಕಂಪೆನಿಯವರೂ ನಮ್ಮಂದಿಗೆ ಸಹಕರಿಸಲಿಲ್ಲ. ಪ್ರವೀಣ್‌ಜೋಷಿ ಅವರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾರೆ. ಸಂಜೆ ಕರೆ ಮಾಡುವಂತೆ ಹೇಳುತ್ತೇನೆ ಎಂದು ಅಲ್ಲಿದ್ದ ಶ್ರೀಕಾಂತ್ ಎಂಬಾತ ಹೇಳಿ ಕಳುಹಿಸಿದ್ದ. ಆದರೆ, ಇದುವರೆಗೂ ಕಂಪೆನಿಯಿಂದ ಕರೆ ಬಂದಿಲ್ಲ` ಎಂದು ಅವರು ಹೇಳಿದರು.

ಅಧಿಕಾರಿಗಳೊಂದಿಗೆ ಸಂಪರ್ಕ

ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪವನ್ ಕುಮಾರ್ ಅಂಜಯ್ಯ (26) ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರಾಜತಾಂತ್ರಿಕ  ಅಧಿಕಾರಿಗಳು ಅಲ್ಲಿನ ರಾಜತಾಂತ್ರಿಕ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ.

`ಪವನ್ ಕುಮಾರ್ ಪ್ರಕರಣದ ಸಂಬಂಧ ನ್ಯೂಯಾರ್ಕ್‌ನಲ್ಲಿರುವ ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಅಲ್ಲಿನ ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಯುವಕ ಕೆಲಸ ಮಾಡುತ್ತಿದ್ದ ಕಂಪೆನಿ ಜತೆ ಸಂಪರ್ಕದಲ್ಲಿದ್ದಾರೆ` ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

`ಇದು ಆತ್ಮಹತ್ಯೆ ಪ್ರಕರಣವಾಗಿರುವುದರಿಂದ ಕಾನೂನುಬದ್ಧವಾದ ದಾಖಲೆಗಳನ್ನು ಕೊಡಲು ಸಮಯ ಹಿಡಿಯಲಿದೆ. ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಈ ಕೆಲಸದಲ್ಲಿ ತೊಡಗಿದ್ದಾರೆ` ಎಂದು ಮೂಲಗಳು ಸ್ಪಷ್ಟಪಡಿಸಿವೆ. ಐಟಿ ಕಂಪೆನಿ ಉದ್ಯೋಗಿ ಪವನ್, ಅಮೆರಿಕದ ಮಹಿಳೆಯನ್ನು ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿದ್ದರು. ಜೂನ್ 19ರಂದು ನ್ಯೂಜೆರ್ಸಿ ಹೊಟೇಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

`ಪವನ್ ಶವವನ್ನು ದೇಶಕ್ಕೆ ತರುವ ಪ್ರಯತ್ನ

`ಪವನ್ ಶವವನ್ನು ದೇಶಕ್ಕೆ ತರುವ ಪ್ರಯತ್ನದಲ್ಲಿದ್ದೇವೆ. ಅದಕ್ಕಾಗಿ ಅಲ್ಲಿನ ಕಾನೂನು ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆದರೆ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈ ಪ್ರಕ್ರಿಯೆ ಕಷ್ಟವಾಗುತ್ತಿದೆ. ಆತನ ಶವವನ್ನು ದೇಶಕ್ಕೆ ತರಲು ತಗುಲುವ ವೆಚ್ಚವನ್ನು ಕಂಪೆನಿಯೇ ಭರಿಸಲಿದೆ. ಅಲ್ಲದೇ ಪವನ್ ಕುಟುಂಬ ಸದಸ್ಯರಿಗೆ ಎಲ್ಲಾ ರೀತಿಯಲ್ಲೂ ನೆರವು ನೀಡಲು ಸಿದ್ಧವಿದೆ` ಎಂದು ಕಾಗ್ನಿಜಂಟ್ ಟೆಕ್ನಾಲಜಿಸ್ ಕಂಪೆನಿಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪಾಧ್ಯಕ್ಷ ರಾಮ್‌ಕುಮಾರ್ ರಾಮ್‌ಮೂರ್ತಿ ತಿಳಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ | ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-06-28

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri