ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ದಾಳಿಂಬೆ ಬೆಳೆಯುವ ಪ್ರದೇಶ ಹೆಚ್ಚಳ...

ತುಮಕೂರು: ತುಮಕೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಯುವ ಪ್ರದೇಶ ಕಳೆದ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 2010ರಲ್ಲಿ 1300 ಹೆಕ್ಟೇರ್‌ನಷ್ಟಿದ್ದ  ದಾಳಿಂಬೆ ಬೆಳೆಯುವ ಪ್ರದೇಶ ಎರಡು ವರ್ಷದಲ್ಲಿ 1700 ಹೆಕ್ಟೇರ್‌ಗೆ ಹೆಚ್ಚಳವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಮತ್ತು ತುಮಕೂರು ಜಿಲ್ಲೆಯ ಶಿರಾದಲ್ಲಿ ಹೆಚ್ಚು ದಾಳಿಂಬೆ ಬೆಳೆಯಲಾಗುತಿತ್ತು. ಆದರೆ, ರೋಗರಹಿತ ದಾಳಿಂಬೆ ಗಿಡ ನಾಟಿ ಮಾಡಿದರೆ ಲಾಭದಾಯಕ ಎಂದು ಅರಿತ ಸುತ್ತಲಿನ ರೈತರು ದಾಳಿಂಬೆ ಬೆಳೆಯಲು ಆರಂಭಿಸಿದ್ದಾರೆ. ಚಿತ್ರದುರ್ಗದ ಹೊಸದುರ್ಗ, ಹೊಳಲ್ಕೆರೆ, ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ತುಮಕೂರಿನ ಶಿರಾ, ಮಧುಗಿರಿ, ಪಾವಗಡ ತಾಲ್ಲೂಕುಗಳಲ್ಲಿ ದಾಳಿಂಬೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದೆ.

ಹೊಳಲ್ಕೆರೆಯಲ್ಲಿ 20 ವರ್ಷದಿಂದ ಹೆಚ್ಚು ದಾಳಿಂಬೆ ಬೆಳೆಯುತ್ತಿದ್ದಾರೆ. ಇತರ ತಾಲ್ಲೂಕುಗಳಲ್ಲಿ ಈಚೆಗೆ ದಾಳಿಂಬೆ ಹಾಕಲಾಗುತ್ತಿದೆ. ಅರಸೀಕೆರೆ ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷದಲ್ಲಿ 5 ಸಾವಿರ ಎಕರೆಯಲ್ಲಿ ದಾಳಿಂಬೆ ನೆಡಲಾಗಿದೆ. ಸಾಮಾನ್ಯವಾಗಿ ಒಂದೂವರೆಯಿಂದ 2 ವರ್ಷದ ಒಳಗೆ ದಾಳಿಂಬೆ ಫಸಲು ಆರಂಭವಾಗುತ್ತದೆ. ರೋಗ ಮುಕ್ತವಾಗಿದ್ದರೆ 10ರಿಂದ 12 ವರ್ಷ ಬೆಳೆ ಬೆಳೆಯಬಹುದು.

ನೀರಾವರಿ ವ್ಯವಸ್ಥೆ ಇರುವವರು ಮಾತ್ರ ದಾಳಿಂಬೆ ಹಾಕಬಹುದು. ತೋಟಕ್ಕೆ ತಂತಿ ಅಥವಾ ಕಳ್ಳಿ ಬೇಲಿ ಕಡ್ಡಾಯವಾಗಿ ಬೇಕು. ಕಳ್ಳಿ ಅಥವಾ ಸೊಪ್ಪಿನ ಬೇಲಿ ಆದರೆ ಗಾಳಿಯಿಂದ ಗಿಡಗಳನ್ನು ರಕ್ಷಿಸಬಹುದು. ಅಲ್ಲದೆ ರೋಗ ಬರುವುದನ್ನು ಅಲ್ಪ ಪ್ರಮಾಣದಲ್ಲಿ ತಡೆಯಬಹುದು. ಡ್ರಿಪ್ ಮೂಲಕ ನಿಗದಿತ ಪ್ರಮಾಣದಲ್ಲಿಯೇ ನೀರು ಪೂರೈಸಬೇಕು. ಇಲ್ಲದಿದ್ದರೆ ಗಿಡ ಹಾಳಾಗುವ ಸಾಧ್ಯತೆ ಹೆಚ್ಚು.

ಗಾಳಿಯಲ್ಲಿ ರೋಗ ಹರಡುವುದರಿಂದ ಬೆಳೆಗಾರರು ಸತತವಾಗಿ ರೋಗದೊಂದಿಗೆ ಸೆಣಸ ಬೇಕಾಗುತ್ತದೆ. ಗ್ರಾಮದ ಒಂದು ತೋಟಕ್ಕೆ ರೋಗ ಬಂದರೆ ಇಡೀ ಪ್ರದೇಶದ ಬೆಳೆ ರೋಗ ಪೀಡಿತವಾಗುತ್ತದೆ. ಒಮ್ಮೆಗೆ ಎಲ್ಲ ದಾಳಿಂಬೆ ಗಿಡಗಳನ್ನು ತೆಗೆದು ರೋಗ ರಹಿತ ಹೊಸ ಗಿಡಗಳನ್ನು ನಾಟಿ ಮಾಡಬೇಕು. ಎಲ್ಲರೂ ಒಟ್ಟಿಗೆ ಗಿಡ ತೆಗೆಯಲು ಒಪ್ಪದ ಕಾರಣ ರೋಗ ಬೆಳೆಯುತ್ತ ಹೋಗುತ್ತದೆ ಎಂದು ಬೆಳೆಗಾರ ಚೀರನಹಳ್ಳಿ ಸುರೇಶ್ ಹೇಳುತ್ತಾರೆ.

ದಾಳಿಂಬೆ ಬೆಳೆಯಲ್ಲಿ ಸಂಶೋಧನೆ ನಡೆಸುತ್ತಿರುವ ಮತ್ತು ರೋಗ ರಹಿತ ಅಂಗಾಂಶ ಕಸಿ ಮಾಡಿದ ದಾಳಿಂಬೆ ಸಸಿ ಪೂರೈಕೆ ಮಾಡುವಲ್ಲಿ ಪ್ರಸಿದ್ಧಿ ಪಡೆದಿರುವ ಮಹಾರಾಷ್ಟ್ರದ ರಾವೂರಿಯಲ್ಲಿರುವ ಜೈನ್ ಇರಿಗೇಷನ್ ದಾಳಿಂಬೆ ಸಂಶೋಧನಾ ಕೇಂದ್ರಕ್ಕೆ ಜಿಲ್ಲೆಯ ರೈತರನ್ನು ಪ್ರವಾಸ ಕರೆದೊಯ್ದು ತರಬೇತಿ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಎನ್.ಪ್ರಸಾದ್ ತಿಳಿಸಿದ್ದಾರೆ.

ರಫ್ತು‌ಆಧಾರಿತ; ಉತ್ತಮ ಬೆಲೆ

ದಾಳಿಂಬೆ ಹಣ್ಣನ್ನು ಕೊಲ್ಲಿ ರಾಷ್ಟ್ರಗಳು, ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಬೆಳೆಗಾರರಿಗೆ ಸಗಟು ಮಾರಾಟಗಾರರಿಂದ ಕೆ.ಜಿ.ಗೆ ರೂ 100ರಿಂದ ರೂ 150ರ ವರೆಗೆ ಬೆಲೆ ದೊರೆಯುತ್ತದೆ. ಉತ್ತಮ ಗುಣಮಟ್ಟದ ಹಣ್ಣನ್ನು ಬೇರ್ಪಡಿಸಿ ರಫ್ತು ಮಾಡಲಾಗುತ್ತದ್ದು, 2 ಮತ್ತು 3ನೇ ದರ್ಜೆ ಹಣ್ಣು ಸ್ಥಳೀಯ ಮಾರುಕಟ್ಟೆಗೆ ರವಾನೆಯಾಗುತ್ತದೆ.

ಮುಂದಿನ ಒಂದೆರಡು ವರ್ಷದಲ್ಲಿ ಬೆಲೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚುವರಿಯಾಗಿ ಬೆಳೆಯಲಾಗಿರುವ ಸಸಿಗಳಲ್ಲಿ ಉತ್ತಮ ಫಸಲು ನಿರೀಕ್ಷಿಸಲಾಗಿದ್ದು, ಬೆಲೆಯಲ್ಲಿ ಇಳಿಕೆಯಾಗಬಹುದು. ಜಿಲ್ಲೆಯಲ್ಲಿ ದಾಳಿಂಬೆ ಮಾತ್ರವಲ್ಲದೆ ಪಪ್ಪಾಯಿ, ಅಡಿಕೆ ಬೆಳೆಯುವ ಪ್ರದೇಶ ಸಹ ಹೆಚ್ಚಳವಾಗುತ್ತಿದೆ. ಎರಡು ವರ್ಷದಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಸಸಿ ಹಾಕಲಾಗಿದೆ. ಅಲ್ಲದೆ ಹೂ ಮತ್ತು ಹಣ್ಣು ಆಧಾರಿತ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಬೀಜಕ್ಕಾಗಿ ಕಲ್ಲಂಗಡಿ: ಶಿರಾ ತಾಲ್ಲೂಕಿನಲ್ಲಿ ಹಲವು ಬೀಜ ಉತ್ಪಾದಿಸುವ ಕಂಪೆನಿಗಳು ಆರಂಭವಾಗಿದ್ದು, ಬೀಜ ಆಧಾರಿತ ವ್ಯವಸಾಯ ಹೆಚ್ಚಳವಾಗಿದೆ. ಕಲ್ಲಂಗಡಿ, ಕರ್ಬುಜ, ಹಿರೇಕಾಯಿ, ಹಾಗಲಕಾಯಿ ಮುಂತಾದ ಬೀಜಗಳ ಉತ್ಪಾದನೆ ನಡೆಯುತ್ತಿದೆ. ನಾಮಧಾರಿ, ಸಿಜೆಂಟಾ, ಜೆ.ಕೆ.ಸೀಡ್ಸ್, ಇ‌ಎಂಎಸ್ ಪ್ರೊ‌ಆಗ್ರೊ ಸೇರಿದಂತೆ 10ಕ್ಕೂ ಹೆಚ್ಚು ಕಂಪೆನಿಗಳು ಶಿರಾ ಸುತ್ತಮುತ್ತ ನೆಲೆಯೂರಿವೆ.

ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬೀಜ ಕಂಪೆನಿಗಳು, ನಿಗದಿತ ದರ ನೀಡಿ ರೈತರಿಂದ ಹಣ್ಣು ಖರೀದಿಸುತ್ತವೆ. ಅಲ್ಲದೆ ಬೆಳೆಯಲು ಬೇಕಾದ ಬೀಜ, ಗೊಬ್ಬರ, ತಾಂತ್ರಿಕ ಸಲಹೆಯನ್ನು ಕಂಪೆನಿಯೇ ನೀಡುತ್ತದೆ. ಹೀಗಾಗಿ ರೈತರು ಇತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ / ಕೆ.ಎನ್.ನಾಗಸುಂದ್ರಪ್ಪ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-06-27

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ
»ಶುಕ್ರವಾರದ ನಂತ್ರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ
»ಸಹರಾ ವಿರುದ್ಧ ಸುಪ್ರೀಂ ತೀರ್ಪು: ಹೂಡಿಕೆದಾರರ 17,400 ಕೋ. ರೂ. ವಾಪಸ್‌ ನೀಡಿ
»ನಕಲಿ ಸ್ಯಾಮ: ಪೇಟೆಂಟ್ ಸಮರ, ಆಪಲ್‌ಗೆ ಜಯ
»ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ
»ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2
»ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ
»ದೂರವಾಣಿ ತರಂಗಾಂತರ ಹಂಚಿಕೆ ಹರಾಜು: ರೂ 14 ಸಾವಿರ ಕೋಟಿ ಮೂಲ ದರ ನಿಗದಿ
»ಪ್ರಯೋಗಾಲಯದಲ್ಲಿ ಕೃತಕ ಚರ್ಮದ ಸೃಷ್ಟಿ
»ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿ‌ಐ ನಿರ್ಧಾರ...
»ಸಾಗರೋತ್ತರ ಖಾತೆಗಳಲ್ಲಿ ಕಾಳಧನ 32 ಲಕ್ಷ ಕೋಟಿ ಡಾಲರ್‌
»5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ವಿನಾಯಿತಿ
»3 ವರ್ಷದಲ್ಲಿ 400 ಕೋಟಿ ಹೂಡಿಕೆ ಮರ್ಸಿಡಿಸ್ ಬೆಂಝ್
»'ಟಾಪ್- 100' ಪಟ್ಟಿಯಲ್ಲಿ ಭಾರತದ 12 ಕಂಪನಿಗಳಿಗೆ ಸ್ಥಾನ
»ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್‌ಐಸಿ
»ಆರ್‌ಸಿಬಿ ಪಾಲು ಮಾರಾಟಕ್ಕೆ ಮಲ್ಯ ಗಂಭೀರ ಚಿಂತನೆ
»ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ
»ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...
»ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ಆರ್‌ಬಿಐ ಚಿಂತನೆ
»ಫೇಸ್‌ಬುಕ್‌ ಇನ್ನು ಕೆಲಸ ಹುಡುಕಿ ಕೊಡಲಿದೆ!
»ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?
»ಆರ್‌ಬಿಐಯಿಂದ ಆನ್‌ಲೈನ್ ಪಾವತಿ ಸೇವಾ ಶುಲ್ಕ ಕಡಿತ
»ರೈಲು ಪ್ರಯಾಣ ದುಬಾರಿ?...ಸ್ಪೀಡ್ ಪೋಸ್ಟ್ ಮೇಲೂ ತೆರಿಗೆ...
»ಜುಲೈ 19ರ ನಂತರ ಡೀಸೆಲ್, ಎಲ್‌ಪಿಜಿ ತುಟ್ಟಿ
»ಪೆಟ್ರೋಲ್ ಬೆಲೆ ರೂ 2.46 ಪೈ ಇಳಿಕೆ... | ಕರ್ನಾಟಕದಲ್ಲಿ ಸೆಸ್ ಇಳಿಕೆ; ಒಟ್ಟಾರೆ ಪೆಟ್ರೋಲ್ ಬೆಲೆ ನಾಲ್ಕು ರೂ ಇಳಿಕೆ ಸಂಭವ!

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri