ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಜನರಿಕ್‌ ಔಷಧಿ ಕಡ್ಡಾಯ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಅಕ್ಟೋಬರ್‌ನಿಂದ ಸರ್ವರಿಗೂ ಉಚಿತ ಔಷಧ

ನವದೆಹಲಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ದೇಶದ ಎಲ್ಲ ಪ್ರಜೆಗಳಿಗೂ ಉಚಿತ ಔಷಧಿ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಅಕ್ಟೋಬರ್‌ನಲ್ಲಿ ಚಾಲನೆ ದೊರೆಯಲಿದೆ.

ಪ್ರಧಾನಿ ಮನಮೋಹನಸಿಂಗ್‌ ಅವರು ಅತಿಯಾದ ನಿರೀಕ್ಷೆ ಇಟ್ಟುಕೊಂಡಿರುವ ಈ ಯೋಜನೆಗೆ 2012-13ನೇ ಸಾಲಿನ ಬಾಬಿ¤ನಲ್ಲಿ ಯೋಜನಾ ಆಯೋಗ ಈಗಾಗಲೇ 100 ಕೋಟಿ ರೂ. ಬಿಡುಗಡೆ ಮಾಡಿದೆ. ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಉಚಿತ ಔಷಧ ಯೋಜನೆಗೆ ಒಟ್ಟಾರೆ 28,560 ಕೋಟಿ ರೂ. ಖರ್ಚಾಗುವ ಅಂದಾಜಿದೆ.

ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರ್ಕಾರವೇ ಔಷಧ ಒದಗಿಸುತ್ತಿದೆಯಾದರೂ ಆ ಪಾಲು ಕೇವಲ ಶೇ.22ರಷ್ಟು ಮಾತ್ರ. ಉಳಿಕೆ ಶೇ.78ರಷ್ಟು ಮಂದಿ ಔಷಧಗಳನ್ನು ತಮ್ಮ ಸ್ವಂತ ಹಣದಿಂದಲೇ ಖರೀದಿಸುತ್ತಿದ್ದಾರೆ.

ಈ ಯೋಜನೆಯ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಪಡೆಯುವವರ ಸಂಖ್ಯೆಯನ್ನು 2017ರ ಹೊತ್ತಿಗೆ ಶೇ.52ಕ್ಕೆ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ದೇಶದ 1.6 ಲಕ್ಷ ಉಪ, 23,000 ಪ್ರಾಥಮಿಕ, 5000 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 640 ಜಿಲ್ಲಾ ಆಸ್ಪತ್ರೆಗಳಲ್ಲಿ ಸರ್ವರಿಗೂ ಉಚಿತ ಔಷಧ ದೊರೆಯುವ ಉದ್ದೇಶವನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಔಷಧಿ ಪಟ್ಟಿ ತಯಾರಿ:

ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ರಾಷ್ಟ್ರೀಯ ಅವಶ್ಯ ಔಷಧಗಳ ಪಟ್ಟಿ ತಯಾರಿಸಿ ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ. ಏಡ್ಸ್‌ ಸೇರಿದಂತೆ 348 ರೋಗಗಳಿಗೆ ಸಂಬಂಧಿಸಿದ ಔಷಧಿಗಳು ಈ ಪಟ್ಟಿಯಲ್ಲಿದೆ. ಸ್ಥಳೀಯವಾಗಿ ಬಾಧಿಸುತ್ತಿರುವ ರೋಗಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯಗಳು ತಮ್ಮದೇ ಆದ ಅವಶ್ಯ ಔಷಧಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗುವ ಉಚಿತ ಔಷಧಿಗಳ ಖರೀದಿಗೆ ಕೇಂದ್ರೀಯ ಖರೀದಿ ಸಂಸ್ಥೆ ಸ್ಥಾಪಿಸಲು ಈಗಾಗಲೇ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ. ರಾಜ್ಯಗಳೂ ನೇರವಾಗಿ ಔಷಧ ಉತ್ಪಾದಕರು ಅಥವಾ ಆಮದುದಾರರಿಂದ ಮುಕ್ತ ಟೆಂಡರ್‌ ಆಹ್ವಾನಿಸಿ ಖರೀದಿಸಬಹುದು. ಆದರೆ, ಈ ಔಷಧಗಳು 'ಮಾರಾಟಕ್ಕಲ್ಲ' ಎಂಬ ಲೇಬಲ್‌ ಹೊಂದಿರಬೇಕು ಎಂದು ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಲ್‌.ಸಿ. ಗೋಯಲ್‌ ತಿಳಿಸಿದ್ದಾರೆ.

ಜನರಿಕ್‌ ಔಷಧಿ ಕಡ್ಡಾಯ:

ಉಚಿತ ಔಷಧಿ ಯೋಜನೆ ಜಾರಿಗೆ ಬಂದ ಬಳಿಕ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜನರಿಕ್‌ ಔಷಧಿಯನ್ನೇ ರೋಗಿಗಳಿಗೆ ಬರೆದುಕೊಡಬೇಕಾಗುತ್ತದೆ. ಬ್ರಾಂಡೆಡ್‌ ಔಷಧಿಗಳನ್ನು ಬರೆದುಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.

ತಮಿಳುನಾಡು ಸರ್ಕಾರ ತನ್ನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ 15 ವರ್ಷಗಳಿಂದ ಉಚಿತ ಔಷಧಿ ನೀಡುತ್ತಿದೆ. ರಾಜಸ್ಥಾನವೂ ಕಳೆದ ಅಕ್ಟೋಬರ್‌ನಿಂದ ಉಚಿತ ಔಷಧಿ ವಿತರಣೆ ಮಾಡುತ್ತಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : udayavani
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-06-24

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ
»ಶುಕ್ರವಾರದ ನಂತ್ರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ
»ಸಹರಾ ವಿರುದ್ಧ ಸುಪ್ರೀಂ ತೀರ್ಪು: ಹೂಡಿಕೆದಾರರ 17,400 ಕೋ. ರೂ. ವಾಪಸ್‌ ನೀಡಿ
»ನಕಲಿ ಸ್ಯಾಮ: ಪೇಟೆಂಟ್ ಸಮರ, ಆಪಲ್‌ಗೆ ಜಯ
»ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ
»ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2
»ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ
»ದೂರವಾಣಿ ತರಂಗಾಂತರ ಹಂಚಿಕೆ ಹರಾಜು: ರೂ 14 ಸಾವಿರ ಕೋಟಿ ಮೂಲ ದರ ನಿಗದಿ
»ಪ್ರಯೋಗಾಲಯದಲ್ಲಿ ಕೃತಕ ಚರ್ಮದ ಸೃಷ್ಟಿ
»ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿ‌ಐ ನಿರ್ಧಾರ...
»ಸಾಗರೋತ್ತರ ಖಾತೆಗಳಲ್ಲಿ ಕಾಳಧನ 32 ಲಕ್ಷ ಕೋಟಿ ಡಾಲರ್‌
»5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ವಿನಾಯಿತಿ
»3 ವರ್ಷದಲ್ಲಿ 400 ಕೋಟಿ ಹೂಡಿಕೆ ಮರ್ಸಿಡಿಸ್ ಬೆಂಝ್
»'ಟಾಪ್- 100' ಪಟ್ಟಿಯಲ್ಲಿ ಭಾರತದ 12 ಕಂಪನಿಗಳಿಗೆ ಸ್ಥಾನ
»ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್‌ಐಸಿ
»ಆರ್‌ಸಿಬಿ ಪಾಲು ಮಾರಾಟಕ್ಕೆ ಮಲ್ಯ ಗಂಭೀರ ಚಿಂತನೆ
»ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ
»ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...
»ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ಆರ್‌ಬಿಐ ಚಿಂತನೆ
»ಫೇಸ್‌ಬುಕ್‌ ಇನ್ನು ಕೆಲಸ ಹುಡುಕಿ ಕೊಡಲಿದೆ!
»ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?
»ಆರ್‌ಬಿಐಯಿಂದ ಆನ್‌ಲೈನ್ ಪಾವತಿ ಸೇವಾ ಶುಲ್ಕ ಕಡಿತ
»ರೈಲು ಪ್ರಯಾಣ ದುಬಾರಿ?...ಸ್ಪೀಡ್ ಪೋಸ್ಟ್ ಮೇಲೂ ತೆರಿಗೆ...
»ಜುಲೈ 19ರ ನಂತರ ಡೀಸೆಲ್, ಎಲ್‌ಪಿಜಿ ತುಟ್ಟಿ
»ಪೆಟ್ರೋಲ್ ಬೆಲೆ ರೂ 2.46 ಪೈ ಇಳಿಕೆ... | ಕರ್ನಾಟಕದಲ್ಲಿ ಸೆಸ್ ಇಳಿಕೆ; ಒಟ್ಟಾರೆ ಪೆಟ್ರೋಲ್ ಬೆಲೆ ನಾಲ್ಕು ರೂ ಇಳಿಕೆ ಸಂಭವ!

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri