ಗರ್ಭದಲ್ಲೇ ಮಗುವಿನ ಯಶಸ್ವಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿದ ಲಂಡನ್ ವೈದ್ಯರು |
ಪ್ರಕಟಿಸಿದ ದಿನಾಂಕ : 2012-06-24
ಗರ್ಭದಲ್ಲೇ ಮಗುವಿನ ಯಶಸ್ವಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿದ ಲಂಡನ್ ವೈದ್ಯರು
ದುಬೈ,ಜೂ.24 ಮಗು ಹುಟ್ಟುವ ಮೊದಲೇ ಅದರ ಮುಖದಲ್ಲಿ ಪತ್ತೆಯಾದ ಅಪರೂಪದ ಕ್ಯಾನ್ಸರ್ ಗೆಡ್ಡೆಯೊಂದನ್ನು ಗರ್ಭದಲ್ಲೇ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಶಮನಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಗು ಲ್ಯಾಯ್ನ ಗಾಂಜಲೆಝ್ ಈಗ ಎರಡು ವರ್ಷವಾಗಿದ್ದು,ಶಸ್ತ್ರ ಚಿಕಿತ್ಸೆ ನಡೆಸಿದ ಐದು ತಿಂಗಳ ನಂತರ ಜನ್ಮ ತಾಳಿತ್ತು ಎಂದು ಲಂಡನ್ ಮೂಲದ "ಸನ್" ದೈನಿಕ ವರದಿ ಮಾಡಿದೆ.
ಮಗುವಿನ ಮುಖದಲ್ಲಿ ಈಗ ಚಿಕಿತ್ಸೆಯ ಸಣ್ಣ ಪ್ರಮಾಣದ ಕಲೆ ಮಾತ್ರ ಉಳಿದಿದ್ದು,ಕ್ಯಾನ್ಸರ್ ಮುಕ್ತವಾಗಿದೆ.ತಾಯಿ ಟ್ಯಾಮಿ ಗರ್ಭ ಧರಿಸಿದ 17ವಾರಗಳ ನಂತರ ಈ ಕ್ಯಾನ್ಸರ್ ಚಿಹ್ನೆ ಮಗುವಿನಲ್ಲಿ ಕಾಣಿಸಿಕೊಂಡಿತು.ಈ ಚಿಹ್ನೆ ದಿನೇ ದಿನೇ ಬೆಳೆಯುತ್ತಿರುವ ಲಕ್ಷಣಗಳಿದ್ದವು. ವೈದ್ಯರು ಮಗು ಬದುಕುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು ಎನ್ನಲಾಗಿದೆ.
ಶಸ್ತ್ರಚಿಕಿತ್ಸಕರು ತಮ್ಮ ಪ್ರಯತ್ನವೆಂಬಂತೆ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸಾ ಸೂಜಿಯನ್ನು ತಾಯಿ ಟ್ಯಾಮಿಯ ಗರ್ಭದೊಳಕ್ಕೆ ಹಾಯಿಸಿ,ಮಗುವಿನ ತುಟಿಯಲ್ಲಿ ಕಾಣಿಸಿಕೊಂಡ ಗೆಡ್ಡೆಯನ್ನು ಸುಮಾರು ಒಂದು ಗಂಟೆಗಳ ಸತತ ಪ್ರಯತ್ನದಿಂದ ತೆಗೆದು ಹಾಕಿದ್ದರು ಎಂದು ಫ್ಲೋರಿಡಾ ಜ್ಯಾಕ್ಸನ್ ಮೆಮೋರಿಯಲ್ ಆಸ್ಪತ್ರೆ ಮೂಲಗಳು ಬಹಿರಂಗ ಪಡಿಸಿವೆ
ವರದಿಯ ವಿವರಗಳು |
 |
ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-06-24
|
|
|