ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಿನಾಶಕ್ಕಾಗಿ ಮನುಷ್ಯ. ಮನುಷ್ಯನಿಂದಲೇ ವಿನಾಶ.. ಹೇಮಂತ್ ಕುಮಾರ್

ಎಷ್ಟು ಮುಗಿಸಿದರೂ ಮತ್ತಷ್ಟು ಹುಟ್ಟುತ್ತಲೇ ಇದ್ದರು. ಮತ್ತೆ ಮತ್ತೆ ನಮಗೂ ಕೆಲಸ. ಒಂದು ಊರು ಖಾಲಿ ಮಾಡುವುದು. ಮತ್ತೆ ಮುಂದಿನ ಊರಿಗೆ ಕಾಲಿಡುವುದು. ಅಲ್ಲಿ ಇನ್ನೊಬ್ಬ ನಮ್ಮಂತಹವನ ಸ್ನೇಹ. ಹಾಗೇ ಮುಂದುವರೆದು ಮುಂದೆ ನಮ್ಮದೇ ಒಂದು ದಂಡೇ ಆಯ್ತು. ಕಲವು ಕಡೆ ಜನರೇ ಅವರ ವಿರುಧ ಅವರೇ ಹೊಡೆದಾಡಿ ಸತ್ತರು. ನಾವು ಪ್ರೇಕ್ಷಕರಾಗಿ, ಹುರಿದುಂಬಿಸುತ್ತಾ ಹೊಡೆದುಕೊಂಡು, ಕಚ್ಚಾಡಿಕೊಂಡು ಸಾಯಲು ಪ್ರೇರೇಪಿಸಿದೆವು. ಅದೊಂದು ಹಬ್ಬ, ಹೆಚ್ಚು ಹೆಚ್ಚು ದಿನಗಳು ಹೇಗೇ ಇದ್ದಲ್ಲಿ ಒಂದಷ್ಟು ಮನರಂಜನೆಯಾದರೂ ಸಿಕ್ಕುತ್ತಿತ್ತು.

ನಾನೇ ಮನುಷ್ಯ?!

ಕೊರಳಿನಿಂದ ಚಿಲುಮೆಯೋಪಾದಿಯಲ್ಲಿ ರಕ್ತ ಚಿಮ್ಮುತ್ತಿತ್ತು.ಹಾಡಿಗೆ ಶೃತಿ ಸೇರಿದಂತೆ ಸಮಸ್ತ ದೇಹವು ಅಲೆಅಲೆಯಾಗಿ ನಲುಗುತ್ತಲಿತ್ತು.ರಕ್ತ ಹರಿದು ಆ ಕ್ಲೀನಾದ ನೆಲದ ಬಿಳಿಯ ಟೈಲ್ಸ್ ಮೇಲೆ ಕೆಂಪು ಕಾಲುವೆಯನ್ನು ರಚಿಸಿತ್ತು.ಗಂಡನ ದೇಹದ ರಕ್ತ, ಪಕ್ಕದಲ್ಲಿ ಅದೇ ಸ್ಥಿತಿಯಲ್ಲಿ ಬಿದ್ದಿದ್ದ ಹೆಂಡತಿಯ ದೇಹದ ರಕ್ತದೊಂದಿಗೆ ಬೆರೆತು ಇನ್ನೂ ದೊಡ್ಡ ಕಾಲುವೆಯಂತೆ ಹರಿಯುತ್ತಲಿತ್ತು.ಆಹಾ ಇದಕ್ಕೆ ದಂಪತಿಗಳೆಂದು ಕರೆಯುತ್ತಾರೇನೋ.ಕೊನೆಯ ಘಳಿಗೆಯಲ್ಲಿ ಅವರ ಮುಖಗಳನ್ನೇ ತದೇಕಚಿತ್ತನಾಗಿ ನೋಡುತ್ತಲಿದ್ದೆ.ಆ ಉಸಿರೆಳೆದುಕೊಳ್ಳಲು ಹವಣಿಸುತ್ತಿದ್ದ ಬಾಯಿಗಳಿಂದ ವಿಚಿತ್ರ ಶಬ್ದವು ಸ್ಫುಟವಾಗಿ ಕೇಳಿಸುತ್ತಲಿತ್ತು.ಮನಕೆ ವಿಕೃತವಾದ ಆನಂದ ಸಿಗುತ್ತಲಿತ್ತು.ನೋಡನೋಡುತ್ತಾ ಕೈಲಿದ್ದ ಸೇಬನ್ನು ಮುಗಿಸುವ ಹೊತ್ತಿಗೆ,ದೇಹಗಳು ಶಾಂತವಾಗಿದ್ದವು.ಕಣ್ಣುಗಳು ಹಾಗೇ ತೆರೆದುಕೊಂಡೇ ಇದ್ದವು.ರಕ್ತದ ಕಾಲುವೆಯನ್ನು ತುಳಿದುಕೊಂಡೇ ರಂಗೋಲಿ ಹಾಕುವವನಂತೆ ಎದ್ದು ನಡೆದೆ.

 

ನನ್ನನ್ನು ಹಿಡಿದು ಕೋರ್ಟಿನ ಮುಂದೆ ನಿಲ್ಲಿಸಿದರು.ಎದುರುವಾದಿಸುವರಾರಿಲ್ಲದೆ ನನ್ನ ವಿರುದ್ಧದ ಸಾಕ್ಷಿಗಳು, ಪುರಾವೆಗಳು ಎತ್ತಿ ಹಿಡಿದು ನಾನೇ ತಪ್ಪಿತಸ್ತ ಎಂದು ನಿರ್ಧರಿಸಹೊರಟಿದ್ದರು. ವಕೀಲ ನನ್ನಿಂದ ಮೂರು ಅಡಿ ದೂರದಲ್ಲೇ ನಿಂತು ವಾದ ಮಂಡಿಸುತ್ತಿದ್ದ. ನ್ಯಾಯಾಧೀಶ ತೆಪ್ಪಗೆ ಏನೋ ನೋಡುತ್ತಾ,ಓದುತ್ತಲಿದ್ದ.ಕೈಲಿದ್ದ ಕೋಳದೊಂದಿಗೇ ಪಕ್ಕದಲ್ಲಿದ್ದ ಇನ್ಸ್ಪೆಕ್ಟರ್ ಬಳಿ ಇದ್ದ ರಿವಾಲ್ವರ್ ಕಸಿದುಕೊಂಡು ನೇರವಾಗಿ ಸಾಕ್ಷಿಗಳು,ಮತ್ತು ವಕೀಲನನ್ನು ಸುಟ್ಟೆ,ಬೇಗ ಸತ್ತು ಹೋದರು.ಓಡುತ್ತಲಿದ್ದ ನ್ಯಾಯಾಧೀಶನೆಡೆಗೆ ನೋಡಿದೆ ಎಗರಿ ಅವನ ಮುಂದೆ ನಿಂತೆ ಪಕ್ಕದಲ್ಲಿದ್ದ ಸುತ್ತಿಗೆಯಿಂದ ತಲೆ ಒಡೆದು ಹಾಕಿದೆ. ಓಡಿದವರೆಲ್ಲಾ ಉಳಿದುಕೊಂಡರು,

 

ಹಿಡಿಯಬಂದವರೆಲ್ಲಾ ಹೊಗೆಹಾಕಿಕೊಂಡರು. ಇಡೀ ಕೋರ್ಟನ್ನು ರಕ್ತದಿಂದ ತೊಳೆದು ಬಂದೆ.

ಒಂದು ವಾಹನವೇರಿದೆ.ಹೋಗಹೋಗುತ್ತಾ ದಾರಿಯಲ್ಲಿ ಅಡ್ಡ ಬಂದವರನ್ನೆಲ್ಲಾ ಹೊಡೆದುಕೊಂಡು ಹೋದೆ,ಕೆಲವರ ದೇಹ ಛಿದ್ರವಾಯಿತು,ಜೀವ ಮಾತ್ರ ಉಳಿದುಕೊಂಡಿತು.ಕೆಲವರು ನನ್ನ ವಾಹನದ ಹೊಡೆತದ ರಭಸಕ್ಕೆ ಸಿಲುಕುವ ಮುನ್ನವೇ ಜೀವ ಹಾರಿಸಿಕೊಂಡಿದ್ದರು.ಹೊಡೆತಕ್ಕೆ ಸಿಕ್ಕು ಉಳಿದವರು,ಸುತ್ತಮುತ್ತಲಿದ್ದವರು ಎಲ್ಲ ಬಂದು ನನ್ನ ವಾಹನವನ್ನು ಹೊಡೆದು,ಬೆಂಕಿ ಹಚ್ಚಿ ಒಳಗಿದ್ದ ಆಕ್ರೋಶವನ್ನು ಉರಿಸಿದರು.ಅವರ ಮೂರ್ಖತನಕ್ಕೆ ಆಗಲೇ ವಾಹನದಿಂದ ಹೊರಗೆ ಕುಳಿತಿದ್ದ ನಾನು ನಕ್ಕೆ.ಅವರಲ್ಲಿ ತುಂಬಿದ್ದ ಆಕ್ರೋಶ ನೋಡಲು ಸೊಗಸಾಗಿತ್ತು.ಎದ್ದು ಅಲ್ಲಿಂದ ಹೊರಟೆ,ಒಬ್ಬೊಬ್ಬರನ್ನೇ ಮುಗಿಸುವ ಆಟ ಬೇಸರವೆನಿಸತೊಡಗಿತ್ತು.

 

ದಾರಿಯಲ್ಲಿ ಸಿಕ್ಕ ಗಾಡಿಗಳ ಬ್ರೇಕ್ ಫೈಲ್ ಮಾಡಿದೆ.ಒಟ್ಟಿಗೇ ಒಂದಷ್ಟು ಜನ ಜೀವ ಬಿಟ್ಟರು. ಗಾಡಿ ಗಾಡಿಗಳು ಗುದ್ದಿ ಮುದ್ದಾಡುವುದನ್ನು ನೋಡುವುದೇ ಒಂದು ಅದ್ಭುತವಾದ ವೈಭೋಗ. ತಲೆಯಲ್ಲಿ ಮತ್ತೊಂದು ಚಿಂತನೆ ಮೂಡಿತು.ಉತ್ತುಂಗಕ್ಕೆ ಎದ್ದು ನಿಂತಿರುವ ಬೆಂಕಿಪೊಟ್ಟಣದಂತಹ ಕಟ್ಟಡಗಳನ್ನು ನೋಡುತ್ತಾ,ಅಷ್ಟು ದೊಡ್ಡ ಕಟ್ಟಡದ ಒಂದೇ ಒಂದು ಪಿಲ್ಲರ್ ಕಿತ್ತು ಹಾಕಿದೆ.ಇಡೀ ದೈತ್ಯ ಬಿಲ್ಡಿಂಗ್ ಒಂದೇ ಕ್ಷಣದಲ್ಲಿ ನೋಡನೋಡುತ್ತಲೇ ಉರುಳಿ ಎಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಯಿತು.ಆದರೆ ಎದುರು ಕೂತು ಕೊಲ್ಲುವಾಗ ಸಿಗುತ್ತಿದ್ದ ಆ ಉನ್ಮಾದ, ಆ ಮಜಾ ತಪ್ಪಿಹೋಗುತ್ತಿತ್ತು.ಇನ್ನೂ ಏನೂ ಅರಿಯದವರಂತೆ ಉಳಿದಿದ್ದವರನ್ನೂ ಬೆನ್ನಟ್ಟಿ ಸುಟ್ಟೆ. ನನ್ನನ್ನು ಪತ್ತೆ ಹಚ್ಚಲು ನಿರ್ಧರಿಸಿದವರನ್ನು, ಕಾರ್ಯಪ್ರವೃತ್ತರಾಗುವ ಮುನ್ನವೇ ಮುಗಿಸಿದೆ.ಇಡೀ ಊರು ಸ್ಮಶಾನವಾಯಿತು.ಇಡೀ ಊರಿಗೆ ಊರು ನಿರ್ನಾಮವಾಗಿ ನೀರವತೆಯಲ್ಲಿ ಮುಳುಗಿತ್ತು.

 

ಎತ್ತರದ ಕಟ್ಟಡವೊಂದು ಬಿದ್ದು ನಿರ್ಮಾಣವಾಗಿದ್ದ ಗೋಪುರದ ಮೇಲೆ ಕೂತು ಇಡೀ ಊರನ್ನು ನೋಡಿದೆ.ಸಾಯುವ ಮುನ್ನ ಆಸ್ತಿ,ಗಳಿಕೆ,ಹೆಣ್ಣಿನ ಆಮಿಷಗಳನ್ನು ಒಡ್ಡಿ ಜೀವದಾನ ಕೇಳುತ್ತಿದ್ದವರನ್ನು,ಏನೂ ಗೊತ್ತೇ ಆಗುವ ಮುನ್ನ ಪೆದ್ದು ಪೆದ್ದಾಗಿ ಮುಗಿದುಹೋದವರನ್ನು ನೆನೆದು ನಗು ಬಂತು.ಅದಕ್ಕಿಂತಲೂ ಸತ್ತವರು ಸತ್ತರು,ಉಳಿದಿದ್ದವರು ಅವರ ಸುತ್ತ ಸೇರಿ ಹಲವಾರು ಕಾರಣಗಳಿಟ್ಟುಕೊಂಡು ರೋಧಿಸುತ್ತಿದ್ದುದರ ಪರಿ ನೋಡವುದೇ ಚೆನ್ನ.ಆ ಆನಂದವೆಲ್ಲಾ ಈಗಿಲ್ಲ. ಊರಿಗೆ ಊರೇ ಮುಳುಗಿಹೋಯ್ತು.ಈ ಊರಿನ ಸ್ಮಶಾನದಲ್ಲಿ ಸುಮ್ಮನೆ ಕೂರಲಾಗದೆ ಮುಂದಿನ ಊರಿನ ಕಡೆಗೆ ನಡೆದೆ.

 

ಆ ಊರಿನಲ್ಲಿ ನಿರೀಕ್ಷಿಸಿದಂತೆ ಜನರ ಸಂತೆಯಿರಲಿಲ್ಲ. ಬದಲಾಗಿ, ಹೋದ ತಕ್ಷಣ ಕಣ್ಣಿಗೆ ಬಿದ್ದದ್ದು ವಿಚಿತ್ರವಾದ ಶಬ್ಧದೊಂದಿಗೆ,ಬೆಂಕಿಯ ಬುಗ್ಗೆ,ಬಾಂಬ್ ಸ್ಫೋಟ.ಇದೇನಾಗುತ್ತಿದೆ ಎಂದು ಅರಿವಾಗಲಿಲ್ಲ.ಬಾಂಬ್ ಸ್ಫೋಟ ನೋಡುವುದೇ ಕಣ್ಣಿಗೊಂದು ಹಬ್ಬ.ಸುತ್ತ ಮುತ್ತಲ ಎಷ್ಟೋ ಮೈಲಿಗಳ ವರೆಗೆ ಇದ್ದ ಮನುಷ್ಯರನ್ನೊಳಗೂಡಿ ಎಲ್ಲ ರೀತಿಯ ಜೀವಿಗಳೂ ಕ್ರಿಮಿಗಳಂತೆ ಕೆಲವೇ ಕ್ಷಣಗಳಲ್ಲಿ ಹೇಳಹೆಸರಿಲ್ಲದೇ ಕಾಣೆಯಾಗುವಂತಹ ಅಭೂತಪೂರ್ವ ತಂತ್ರ.ನನ್ನ ಎಷ್ಟೋ ದಿನಗಳ ಶ್ರಮದ ಎದುರು ಇದು ಅಮೋಘವಾದ ಶಕ್ತಿ.ವಿಸ್ಮಯನಾಗಿ ಬಾಂಬ್ ಧಾಳಿ ನಡೆಯುವೆಡೆಯೆಲ್ಲಾ ಹೋಗಿ ನಿಂತು ನೋಡಿ ಆನಂದಿಸುತ್ತಿದ್ದೆ.ಬಾಂಬ್ ಧಾಳಿಯಲ್ಲಿ ತುಂಬಾ ಇಷ್ಟವಾಗುತ್ತಿದ್ದ ವಿಷಯವೆಂದರೆ,ಯಾರೂ ನೂಕದೆ,ಯಾರೂ ಹೊಡೆಯದೆ ಚಕ್ರಾಕಾರದಲ್ಲಿ ಸುತ್ತಲಿದ್ದ ಜನರೆಲ್ಲಾ ರಕ್ತ ಕಾರುತ್ತಾ ತಾವಾಗಿಯೇ ಹಾರುವುದನ್ನು ನೋಡುವುದೇ ಒಂದು ರೀತಿಯ ಮಜಾ. ನನಗಿಂತ ವಿಭಿನ್ನವಾಗಿ ಯಾರು ಈ ರೀತಿಯಲ್ಲಿ ಸಂಭ್ರಮ ಆಚರಿಸುತ್ತಿರುವರು ಎಂದು ಹುಡುಕ ಹೊರಟೆ.ನನಗಿಂತಲೂ ವಿಚಿತ್ರ ಮನುಷ್ಯನೊಬ್ಬ ದೊರೆತ.ಸ್ನೇಹಿತರಾದೆವು. ಅಂದಿನಿಂದ ಅವನ ಆಚರಣೆಗಳಲ್ಲೆಲ್ಲಾ ಇಬ್ಬರೂ ಸೇರಿ ನೆರವೇರಿಸುತ್ತಿದ್ದೆವು.ಇನ್ನೂ ವಿಚಿತ್ರ ವಿಚಿತ್ರ ಶೈಲಿಯಲ್ಲಿ ಸಾಯಿಸುವ ಕಾರ್ಯಕ್ರಮ ಹಂಬಿಕೊಂಡೆವು.

 

ಎಷ್ಟು ಮುಗಿಸಿದರೂ ಮತ್ತಷ್ಟು ಹುಟ್ಟುತ್ತಲೇ ಇದ್ದರು.ಮತ್ತೆ ಮತ್ತೆ ನಮಗೂ ಕೆಲಸ.ಒಂದು ಊರು ಖಾಲಿ ಮಾಡುವುದು.ಮತ್ತೆ ಮುಂದಿನ ಊರಿಗೆ ಕಾಲಿಡುವುದು.ಅಲ್ಲಿ ಇನ್ನೊಬ್ಬ ನಮ್ಮಂತಹವನ ಸ್ನೇಹ.ಹಾಗೇ ಮುಂದುವರೆದು ಮುಂದೆ ನಮ್ಮದೇ ಒಂದು ದಂಡೇ ಆಯ್ತು.ಕಲವು ಕಡೆ ಜನರೇ ಅವರ ವಿರುಧ ಅವರೇ ಹೊಡೆದಾಡಿ ಸತ್ತರು.ನಾವು ಪ್ರೇಕ್ಷಕರಾಗಿ,ಹುರಿದುಂಬಿಸುತ್ತಾ ಹೊಡೆದುಕೊಂಡು, ಕಚ್ಚಾಡಿಕೊಂಡು ಸಾಯಲು ಪ್ರೇರೇಪಿಸಿದೆವು. ಅದೊಂದು ಹಬ್ಬ,ಹೆಚ್ಚು ಹೆಚ್ಚು ದಿನಗಳು ಹೇಗೇ ಇದ್ದಲ್ಲಿ ಒಂದಷ್ಟು ಮನರಂಜನೆಯಾದರೂ ಸಿಕ್ಕುತ್ತಿತ್ತು.ಅವರ ಯುದ್ಧದಲ್ಲಿ ಉಳಿದವರನ್ನ ನಾವು ಹೊಡೆದುಹಾಕಿದೆವು.ಅಂತೂ ಇಡೀ ಪ್ರಪಂಚ ಸ್ಮಶಾನವಾಯ್ತು.ಎಲ್ಲರೂ ವಿಜಯೋತ್ಸವ ಆಚರಿಸಿದೆವು.ಈ ಕುರುಕ್ಷೇತ್ರದಂತಹ ಸ್ಮಶಾನವನ್ನು ನೋಡುತ್ತಾ ಎಷ್ಟೋ ಪ್ರಶ್ನೆಗಳು ಮನದಲ್ಲಿ ಹುಟ್ಟುತ್ತಿದ್ದವು.ಹೀಗೆ ಒಂದೇ ಏಟಿಗೆ,ಒಂದೇ ಕ್ಷಣದಲ್ಲಿ ಜೀವಬಿಟ್ಟುಬಿಡುವ ನಿಶ್ಶಕ್ತರಾದ ಇವರುಗಳು,ಏಕೆ ಹೀಗೆ,ಇಷ್ಟೆಲ್ಲಾ ಹೋರಾಡಿ,ಇಷ್ಟೆಲ್ಲಾ ಅಸ್ತಿಗಳನ್ನು ಮಾಡಿ,ಇಷ್ಟೆಲ್ಲಾ ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟುತ್ತಿದ್ದರು?ಏಕೆ ನಾಳೆ ಬದುಕುವುದಕ್ಕಾಗಿ ಇಂದು ತಮ್ಮ ಜೀವನವನ್ನು ಹಾಳುಗೆಡವಿಕೊಂಡು ನಾಳೆಯೂ ಬದುಕದೆ ಒಂದು ದಿನ ಹೀಗೆ ನಮ್ಮ ಕೈ ಸೇರಿ ಕೊನೆಗೂ ಬದುಕದೆಯೇ ಸತ್ತೇ ಹೋಗುತ್ತಿದ್ದರು?ಎಷ್ಟೋ ಜನರನ್ನು ಸಾಯಿಸುವಾಗ, ನಿಜವಾಗಲೂ ಬದುಕಿದ್ದವರನ್ನ ಕೊಂದೆವಾ ಅಥವಾ ಸತ್ತಿದ್ದವರನ್ನೇ ಮತ್ತೆ ಸಾಯಿಸಿದೆವಾ?ಯಾವ ಪುರುಶಾರ್ಥಕ್ಕಾಗಿ,ಯಾರು ಬದುಕಲಿಕ್ಕಾಗಿ ಹಲವಾರು ಕಾರಣಗಳಿಂದ ಅವರವರಲ್ಲೇ ಹೊಡೆದಾಡಿ ಸತ್ತರು?ಇವರೆಲ್ಲಾ ಇಷ್ಟು ಕ್ಷುಲ್ಲಕವಾಗಿ ಸಾಯಲು ಅಷ್ಟೆಲ್ಲಾ ಶ್ರಮದ ಜೀವನ ಬದುಕಬೇಕಿತ್ತಾ?ಯಾವುದಕ್ಕೂ ಉತ್ತರ ಕೇಳೋಣವೆಂದರೆ ಯಾರು ಇಂದು ಬದುಕುಳಿದಿಲ್ಲ. ಇನ್ನು ಮುಂದೆ ಹುಟ್ಟುವವರನ್ನು ಕೇಳಿ ಪ್ರಯೋಜನವಿಲ್ಲ.

 

ನಾವು ವಿಜಯೋತ್ಸವ ಮುಂದುವರೆಸಿದ್ದೆವು.ಮನುಷ್ಯರ ಸಾವಿಲ್ಲದೇ,ಮನೋರಂಜನೆಯಿಲ್ಲದೆ ಸತ್ತು,ಕೊಳೆತು ನಾರುತ್ತಿದ್ದ ದೇಹಗಳನ್ನೇ ತೆಗೆದುಕೊಂಡು ಅದನ್ನು ಛಿದ್ರ ಗೊಳಿಸಿ ಅಂತ್ಯಕ್ರಿಯೆಯ ಆಟವಾಡತೊಡಗಿದೆವು.ಅವರವರ ಬಂಧುಗಳೆನಿಸಿಕೊಂಡವರು ಸಾವಿನ ಮನೆಯಲ್ಲಿ ಅಳುವಿನ ಆಟವಾಡುತ್ತಿದ್ದುದನ್ನು ನಕಲು ಮಾಡಿ ಆನಂದಿಸಿದೆವು.ನಂತರ ಈ ಮನುಷ್ಯರು ಮಾಡುತಿದ್ದ ಅಂತ್ಯಕ್ರಿಯಾ ವಿಧಾನಗಳನ್ನು ಆಚರಿಸುವ ಆಟವಾಡಲು ತೀರ್ಮಾನಿಸಿದೆವು. ಒಬ್ಬ ಮಣ್ಣು ಮಾಡಬೇಕೆಂದ, ಮತ್ತೊಬ್ಬ ಸುಡಬೇಕೆಂದ,ಇನ್ನೊಬ್ಬ ನೀರಿಗೆ ಹಾಕಬೇಕೆಂದ,ಮಗದೊಬ್ಬ ಗಾಳಿಯಲ್ಲೇ ಬಿಡುವುದು ಶ್ರೇಷ್ಠವೆಂದ.ಇದರ ವಿಷಯವಾಗಿಯೇ ನಮ್ಮ ನಮ್ಮಲ್ಲೇ ಜಗಳಗಳು ಶುರುವಾದವು.ಆತನ ಜಾತಿಗನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು ಅವರ ಬಂಧುಗಳು ಎಂಬ ವಿಷಯ ಪ್ರಸ್ತಾಪವಾಯ್ತು. ಆ ದೇಹಗಳಲ್ಲಿ ಅವರ ಜಾತಿ ಸೂಚಿಸುವ ಯಾವುದೇ ಕುರುಹುಗಳು ಉಳಿದಿರಲಿಲ್ಲ.ಕೆಲವರನ್ನು ಮಣ್ಣು ಮಾಡುವುದಾಗಿಯೂ,ಕೆಲವರನ್ನು ನೀರು,ಗಾಳಿ,ಬೆಂಕಿಗೆ ಒಡ್ಡುವುದಾಗಿಯೂ ತೀರ್ಮಾನಿಸಿದೆವು.ಹೇಗೆ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಕೊನೆಗೆ ಅವನ್ನು ತಿನ್ನುತ್ತಿದ್ದುದು ಜೀವಿಗಳೇ. ಪರಿಸರದಲ್ಲೇ ಲೀನವಾಗುತಿದ್ದರು.

 

ಈ ಹೆಣಗಳೊಂದಿಗಿನ ಆಟ ಆನಂದವನ್ನು ತರುತ್ತಿರಲಿಲ್ಲ.ಹಸಿದ ಪ್ರಾಣಿಗಳಂತಾಗಿದ್ದೆವು. ಬದುಕಲು ಸಾಯಿಸಬೇಕಿತ್ತು ನಮಗೆ.ಅಲ್ಲಿ ಬದುಕಿದ್ದವರು ನಾವು ಮಾತ್ರ.ಸಾಯಿಸದೇ ಬದುಕುವುದು ಹೇಯವೆನಿಸುತ್ತಿತ್ತು. ಆಹಾರ ಸೇರುತ್ತಿರಲಿಲ್ಲ. ಜೀವದಲ್ಲಿ ಚೇತನವಿರಲಿಲ್ಲ. ನಮ್ಮ ನಮ್ಮನ್ನೇ ಗಿರಿಯಾಗಿಸಿಕೊಂಡು ಸಾವಿನ ಆಟವಾಡಿದೆವು.ಎಲ್ಲರೂ ಒಬ್ಬೊಬ್ಬರಾಗಿ ನಿರ್ಗಮಿಸಿದರು. ಯಾರನ್ನು ಯಾವ ರೀತಿ ಕೊಲ್ಲಬೇಕೆಂದು ಪ್ಲಾನ್ ಮಾಡಿ ಸಾವಿಗೆ ತಳ್ಳುತ್ತಿದ್ದೆವು. ಎಲ್ಲರೂ ಸತ್ತರು. ನಾನು ಇನ್ನೂ ಉಳಿದಿದ್ದೆ. ಯಾರೂ ಇಲ್ಲದೆ, ಏನೂ ಇಲ್ಲದೆ ಈ ಸ್ಮಶಾನದಲ್ಲಿ ಮೌನವಾಗಿ ಏನೂ ಮಾಡದೆ ಬಿದ್ದೇ ಇದ್ದೆ.ಇನ್ನು ಬದುಕಿದ್ದವನು ನಾನೇ.ಬದುಕಬೇಕೆಂದರೆ ಸಾಯಿಸಬೇಕಿತ್ತು.ಸಾಯಿಸಲು ಯಾವ ಜೀವಿಯೂ ಉಳಿದಿರಲಿಲ್ಲ.ಮನುಷ್ಯನೇ ಬದುಕುವುದಕ್ಕಾಗಿ ಮುಕ್ಕಾಲು ಜೀವಿಗಳನ್ನು ಮುಗಿಸಿದ್ದ.ನಾನು ಮನುಷ್ಯರನ್ನು ಮುಗಿಸುತ್ತಾ ಅವರೊಂದಿಗೆ ಉಳಿದ ಜೀವಿಗಳನ್ನು ಮುಗಿಸಿದ್ದೆ.ಇನ್ನೂ ಉಳಿದ ಕ್ರಿಮಿಗಳನ್ನು ಸಾಯಿಸುತ್ತಾ ಕಾಲ ಕಳೆಯಲು ಪ್ರಯತ್ನ ಪಟ್ಟೆ ಆಗಲಿಲ್ಲ.ಆನೆಯನ್ನು ಸಾಯಿಸಿದ ಮೇಲೆ ಇರುವೆಯ ಸಾವು ಮಜಾ ನೀಡುತ್ತಿರಲಿಲ್ಲ.ಸತ್ತವರಲ್ಲಿ ಯಾರಿಗಾದರೂ ಚೂರಾದರೂ ಪ್ರಾಣ ಉಳಿದಿದೆಯೇನೋ ಹುಡುಕಿದೆ ಯಾವ ಜೀವವೂ ಸಿಗಲಿಲ್ಲ.ಸತ್ತವರಲ್ಲಿ ಯಾರಿಗಾದರೂ ಮತ್ತೆ ಜೀವ ಕೊಟ್ಟು ಸಾಯಿಸಲಾಗುವುದೋ ಪ್ರಯತ್ನ ಪಟ್ಟೆ ನನ್ನ ಹುಚ್ಚಾಟಕ್ಕೆ ನಗು ಬಂತು, ನನಗೆ ಸಾಯಿಸುವ ಶಕ್ತಿ ಇತ್ತೇ ವಿನಃ ಬದುಕಿಸುವ ಸಾಮರ್ಥ್ಯವಿರಲಿಲ್ಲ.ನನಗೆ ಸಾಯಿಸಲು ಜೀವ ಬೇಕಿತ್ತು.ಜೀವ ಉಳಿದಿದ್ದು ನನ್ನಲ್ಲಿ ಮಾತ್ರ.ನನ್ನನ್ನೇ ಸಾಯಿಸಿಕೊಳ್ಳುವುದೊಂದೇ ಉಳಿದ ಮಾರ್ಗ.ನನ್ನನ್ನೇ ಸಾಯಿಸುತ್ತಾ,ಆ ನೋವಿನಲ್ಲಿ ಸಾವಿನ ಮಾದಕತೆ ಕಂಡುಕೊಂಡೆ.ನನ್ನ ಸಾವನ್ನು ನಾನೇ ಆನಂದಿಸುತ್ತಾ…ಸತ್ತೆ!

-ಹೇಮಂತ್ ಕುಮಾರ್ ಎನ್. ಎಮ್, ಬೆಂಗಳೂರು.

 

ಇವರ ಬ್ಲಾಗಂಗಳ "ಕಥೆಗಳ ಖೆಡ್ಡಾ"

http://hemanthkathecorner.blogspot.in/

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-06-19

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri