ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಬೀಂಬುಳಿ ...ಬಹಳ ಹುಳಿ ಹುಳಿ...

"ಅದ್ಯಾವ ಹಣ್ಣು ಸಾಮೀ, ಅಲ್ಲಿ ಕಾಣಿಸ್ತಿರೋದು" ಮನೆಗೆ ಬಂದ ಅತಿಥಿಯ ಪ್ರಶ್ನೆ. ಮನೆಯಂಗಳ ದಲ್ಲಿ ಪೊಗದಸ್ತಾಗಿ ಬೆಳೆದು ನಂತಿದ್ದ ಮರದಲ್ಲಿ ಅಡಿಯಿಂದ ಮುಡಿಯವರೆಗೆ ಹಣ್ಣುಗಳ ಅಲಂಕರಣ.

" ಓ, ಅದಾ, ಬೀಂಬುಳಿ ಹಣ್ಣು. ಬರೇ ಹುಳಿ ಹುಳಿ "

" ನಾನು ನೋಡಿಯೇ ಇಲ್ಲ " ಎನ್ನುತ್ತಾ ಆ ಆಸಾಮಿ ಮರದಿಂದ ಹೀಚುಕಾಯಿಗಳನ್ನು ಕಿತ್ತು ತಂದರು."ಚಿಕ್ಕ ಸೌತೆಕಾಯಿಯಂತಿದೆ ಉಪ್ಪು ಹಾಕಿ ತಿನ್ನೋಣ " ತಿಂದಿದ್ದೂ ತಿಂದಿದ್ದೇ. ಮರದಿಂದ ಉದುರಿ ಹಾಳಾದರೂ ಕೇಳುವವರಿಲ್ಲದ ಈ ಹಣ್ಣನ್ನು ಆ ಪ್ಯಾಟೇ ಮಂದಿ ಆಸೆಯಿಂದ ತಿಂದು, ಚೀಲ ತುಂಬ ಕೊಂಡೂ ಹೋದರು.

" ನಾವ್ಯಾಕೆ ಇದನ್ನು ಉಪಯೋಗಿಸ್ತಾ ಇಲ್ಲ ?"

 " ಉಪ್ಪಿನಕಾಯಿ ಸ್ವಲ್ಪ ಹಾಕೋಣ "

ಹದವಾಗಿ ಬಲಿತ ಬೀಂಬ್ಳಿಗಳನ್ನು ಉದ್ದವಾಗಿ ನಾಲ್ಕು ತುಂಡು ಮಾಡಿ,ಒಂದು ಪಿಂಗಾಣಿ ಪಾತ್ರೆಯಲ್ಲಿ ಹಾಕಿಡಿ. ಸ್ಟೀಲು, ಅಲ್ಯುಮೀನಿಯಂ ಬೇಡ. ವಿಟಮಿನ್ ಸಿ ಅತ್ಯಧಿಕವಿರುವುದರಿಂದ ಪಾತ್ರೆ ಕಪ್ಪಗಾದೀತು. ಅಂದಾಜು 3 ಕಪ್ ಹೋಳುಗಳು ಸಾಕು.

3 ದೊಡ್ಡ ಚಮಚ ಸಾಸಿವೆ, 1 ದೊಡ್ಡ ಚಮಚ ಕೊತ್ತಂಬರಿ ಕಾಳು, 1 ಸಣ್ಣ ಚಮಚ ಜೀರಿಗೆ, ಇಷ್ಟನ್ನು ಸ್ವಲ್ಪ ಎಣ್ಣೆ ಪಸೆ ಮಾಡಿ ಹುರಿಯಿರಿ. ಸಾಸಿವೆ ಚಟಪಟ ಹೇಳುವಾಗ ಇಳಿಸಿ. ಸ್ವಲ್ಪ ಇಂಗು, 1 ಚಿಕ್ಕ ಚಮಚ ಅರಸಿನಹುಡಿ ಹಾಕಿ ಚೆನ್ನಾಗಿ ಮಗುಚಿ, 3 ದೊಡ್ಡ ಚಮಚ ಪುಡಿ ಉಪ್ಪು ಸೇರಿಸಿ ಇನ್ನೊಮ್ಮೆ ಒಲೆಯ ಮೇಲಿಟ್ಟು ತೆಗೆಯಿರಿ.

ಈ ಮಸಾಲೆ ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಪೇಟೆಯಿಂದ ಯಾವುದದರೂ ಒಂದು ಉಪ್ಪಿನಕಾಯಿ ಮಿಕ್ಸ್ ತನ್ನಿ. ಅದರಲ್ಲಿ 4 ದೊಡ್ಡ ಚಮಚ ಅಳೆದು ಈಗ ತಯಾರಾದ ಹುಡಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮದೇ ಕೈ ರುಚಿಯ ಈ ಸ್ಪೆಶಲ್ ಮಸಾಲೆಯನ್ನು ಬೀಂಬ್ಳಿ ಹೋಳುಗಳಿಗೆ ಬೆರೆಸಿ ಗಾಜಿನ ಭರಣಿಯಲ್ಲಿ ತುಂಬಿಸಿ ಮುಚ್ಚಿ ಇಡಿ.ಬೇಕಿದ್ದರೆ ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಹಾಕಬಹುದು.ಅರ್ಧ ಗಂಟೆ ಬಿಟ್ಟು ಉಪಯೋಗಿಸಿ. ಕುಚ್ಚಿಲಕ್ಕಿ ಗಂಜಿಯೂಟಕ್ಕೆ ಈ ಉಪ್ಪಿನಕಾಯಿ ಸವಿದು ನೋಡಿ. " ವಾರೆವ್ಹಾ...... ನನ್ನಮ್ಮನಿಗಿಂತಲೂ ಚೆನ್ನಾಗಿ ನಾನು ಮಾಡಬಲ್ಲೆ "ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳು ತ್ತೀರ.ನನಗಂತೂ ನನ್ನಮ್ಮ ಹೇಳಿಕೊಟ್ಟಿದ್ದು.ಅವರು ನೆರೆಮನೆಯ ಗೌಡಸಾರಸ್ವತ ಸ್ನೇಹಿತೆ ಯಿಂದ ಕಲಿತದ್ದು.

ನಮ್ಮ ಕರಾವಳಿಯ ಕೊಂಕಣಿಗರು ಬೀಂಬ್ಳಿಯ ವೈವಿಧ್ಯಮಯ ಅಡುಗೆ ಬಲ್ಲವರು.ಅವರ ಮನೆಹಿತ್ತಿಲುಗಳಲ್ಲಿ ಬೀಂಬ್ಳಿಮರ ಇದ್ದೇ ಇರುತ್ತದೆ.ನೀರಿನಾಶ್ರಯವಿದ್ದಲ್ಲಿ ಯಾವಾಗಲೂ ಫಲ ಕೊಡುತ್ತಿರುತ್ತದೆ. ಒಂದು ಬೇಳೆಸಾರು, ತೊವ್ವೆ ಮಾಡಬೇಕಾದರೂ ಮರದಿಂದ ನಾಲ್ಕು ಬೀಂಬ್ಳಿ ಕಿತ್ತು ತಂದರಾಯಿತು. ಹೇಗೆ ಅಂತೀರಾ ?

4 ಬೀಂಬ್ಳಿಗಳನ್ನು ಹೋಳು ಮಾಡಿ ನೀರಿನಲ್ಲಿ ಹಾಕಿಡಿ, ಇದು ಆಮ್ಲೀಯತೆಯನ್ನು ಕಡಿಮೆ ಮಾಡಲು. ಅವಶ್ಯವಿದ್ದಷ್ಟು ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. 2 ನೀರುಳ್ಳಿ, ತುಂಡು ಶುಂಠಿ ಸಣ್ಣದಾಗಿ ಹಚ್ಚಿಕೊಳ್ಳಿ.2ಹಸಿಮೆಣಸು ಉದ್ದವಾಗಿ ಸಿಗಿಯಿರಿ.ಬೆಳ್ಳುಳ್ಳಿ ಬೇಕಿದ್ದರೆ ಸಿಪ್ಪೆ ತಗೆದಿಟ್ಟುಕೊಳ್ಳಿ. ಇಷ್ಟು ಸಾಮಗ್ರಿಗಳನ್ನು ಬೆಂದ ಬೇಳೆಗೆ ಹಾಕಿ ಪುನಃ ಬೇಯಲಿಡಿ. ಅವಶ್ಯವಿದ್ದಷ್ಟು ನೀರು ಉಪ್ಪು ಹಾಕಿ.ಕುದಯುತ್ತಿದ್ದಂತೆ ನೀರಿನಲ್ಲಿಟ್ಟ ಬೀಂಬ್ಳಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಇಂಗು, ಬೇವಿನಸೊಪ್ಪಿನ ಒಗ್ಗರಣೆ ತಯಾರಿಸಿ, ಸಾಸಿವೆ ಚಟಚಟ ಸಿಡಿಯುತ್ತಿದ್ದಂತೆ 1 ಚಿಟಿಕೆ ಅರಸಿನ ಹುಡಿ, 1ಚಮಚ ಮೆಣಸಿನಹುಡಿ ಹಾಕಿ ಕೂಡಲೇ ತೊವ್ವೆಗೆ ಸುರಿಯಿರಿ. ಇಷ್ಟು ರುಚಿ ಕರ ತೊವ್ವೆ ಇನ್ನೆಲ್ಲಾದರೂ ಕಂಡೀರಾ ಮತ್ತೆ !

ಹದವಾಗಿ ಬಲಿತ ಬೀಂಬುಳಿಗಳನ್ನು ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸಿ .ಡಬ್ಬದಲ್ಲಿ ತುಂಬಿಸಿ ಇಡಿ. ಮಳೆಗಾಲದಲ್ಲಿ ಕೆಸುವಿನ ಪತ್ರೊಡೆಗೆ ಧಾರಾಳ ಹುಳಿ ಬೇಕಾಗುತ್ತಲ್ಲ, ಆಗ ಉಪಯೋಗಿಸಿ.

ಹಣ್ಣಾದ ಬೀಂಬ್ಳಿಗಳನ್ನು ಉಪ್ಪಿನೊಂದಿಗೆ ಗಿವುಚಿಟ್ಟುಕೊಂಡು ದೇವರಮನೆಯ ಹಿತ್ತಾಳೆ, ಕಂಚಿನ ಸಾಮಗ್ರಿಗಳನ್ನು ತೊಳೆಯಬಹುದಾಗಿದೆ.

ಹೇಗೂ ಹುಳಿ ಹುಳಿ ಹಣ್ಣು, ತಂಪು ಪಾನೀಯವನ್ನೂ ತಯಾರಿಸಿ. ಹಣ್ಣುಗಳ ರಸ ಹಿಂಡಿ ತೆಗೆಯಿರಿ, ಬೇಕಾದಷ್ಟು ಸಕ್ಕರೆ,ನೀರು ಸೇರಿಸಿ, ಸುವಾಸನೆಗೆ ಏಲಕ್ಕಿಯನ್ನೂ ಹಾಕಿ ಫ್ರಿಜ್ ನಲ್ಲಿ ಇಡಿ. ಕುಡಿದು ನೋಡಿ.

ನಾನ್ ವೆಜ್,ಮೀನಿನ ಅಡುಗೆಯಲ್ಲೂ ಇದನ್ನು ಬಳಸುತ್ತಾರೆ.ಹೇಗೆಂದು ತಿಳಿದವರನ್ನು ಕೇಳಿ ಕಲಿಯಿರಿ.


15ರಿಂದ 30 ಅಡಿಗಳಷ್ಟು ಬೆಳೆಯುವ ಈ ಮರ ಇಂಡೋನೇಷಿಯಾದ್ದು. ದಾರೆಹುಳಿ ಜಾತಿಗೆ ಸೇರಿದ ಒಂದು ಸಸ್ಯ ಪ್ರಭೇದ. ಸಸ್ಯವಿಜ್ಞಾನಿಗಳ ಪ್ರಕಾರ ಇದು averrhoa bilimbi. ಇದರ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದು.ಚೆನ್ನಾಗಿ ಆರೈಕೆ ಮಾಡಿದಲ್ಲಿ ನೆಟ್ಟ ನಾಲ್ಕೇ ವರ್ಷಗಳಲ್ಲಿ ಫಲ ಸಿಗುವುದು


-ಸುಭಾಷಿಣಿ ಹಿರಣ್ಯ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸುಭಾಷಿಣಿ ಹಿರಣ್ಯ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-06-18

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ
»ಶುಕ್ರವಾರದ ನಂತ್ರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ
»ಸಹರಾ ವಿರುದ್ಧ ಸುಪ್ರೀಂ ತೀರ್ಪು: ಹೂಡಿಕೆದಾರರ 17,400 ಕೋ. ರೂ. ವಾಪಸ್‌ ನೀಡಿ
»ನಕಲಿ ಸ್ಯಾಮ: ಪೇಟೆಂಟ್ ಸಮರ, ಆಪಲ್‌ಗೆ ಜಯ
»ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ
»ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2
»ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ
»ದೂರವಾಣಿ ತರಂಗಾಂತರ ಹಂಚಿಕೆ ಹರಾಜು: ರೂ 14 ಸಾವಿರ ಕೋಟಿ ಮೂಲ ದರ ನಿಗದಿ
»ಪ್ರಯೋಗಾಲಯದಲ್ಲಿ ಕೃತಕ ಚರ್ಮದ ಸೃಷ್ಟಿ
»ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿ‌ಐ ನಿರ್ಧಾರ...
»ಸಾಗರೋತ್ತರ ಖಾತೆಗಳಲ್ಲಿ ಕಾಳಧನ 32 ಲಕ್ಷ ಕೋಟಿ ಡಾಲರ್‌
»5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ವಿನಾಯಿತಿ
»3 ವರ್ಷದಲ್ಲಿ 400 ಕೋಟಿ ಹೂಡಿಕೆ ಮರ್ಸಿಡಿಸ್ ಬೆಂಝ್
»'ಟಾಪ್- 100' ಪಟ್ಟಿಯಲ್ಲಿ ಭಾರತದ 12 ಕಂಪನಿಗಳಿಗೆ ಸ್ಥಾನ
»ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್‌ಐಸಿ
»ಆರ್‌ಸಿಬಿ ಪಾಲು ಮಾರಾಟಕ್ಕೆ ಮಲ್ಯ ಗಂಭೀರ ಚಿಂತನೆ
»ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ
»ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...
»ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ಆರ್‌ಬಿಐ ಚಿಂತನೆ
»ಫೇಸ್‌ಬುಕ್‌ ಇನ್ನು ಕೆಲಸ ಹುಡುಕಿ ಕೊಡಲಿದೆ!
»ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?
»ಆರ್‌ಬಿಐಯಿಂದ ಆನ್‌ಲೈನ್ ಪಾವತಿ ಸೇವಾ ಶುಲ್ಕ ಕಡಿತ
»ರೈಲು ಪ್ರಯಾಣ ದುಬಾರಿ?...ಸ್ಪೀಡ್ ಪೋಸ್ಟ್ ಮೇಲೂ ತೆರಿಗೆ...
»ಜುಲೈ 19ರ ನಂತರ ಡೀಸೆಲ್, ಎಲ್‌ಪಿಜಿ ತುಟ್ಟಿ
»ಪೆಟ್ರೋಲ್ ಬೆಲೆ ರೂ 2.46 ಪೈ ಇಳಿಕೆ... | ಕರ್ನಾಟಕದಲ್ಲಿ ಸೆಸ್ ಇಳಿಕೆ; ಒಟ್ಟಾರೆ ಪೆಟ್ರೋಲ್ ಬೆಲೆ ನಾಲ್ಕು ರೂ ಇಳಿಕೆ ಸಂಭವ!

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri