ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ

ಭಾವನೆಗಳು ಮನತುಂಬಿದಾಗ ಮಾತು ಮೌನವಾಗುವುದು, ಹೃದಯ ಉಕ್ಕಿ ಹರಿಯುವುದು ಎನ್ನುವುದಕ್ಕೆ ಸಾಕ್ಷಿಯಾಯಿತು ತುಳುಕೂಟ ಕುವೈಟ್‌ನ ವತಿಯಿಂದ ತಾ1.6.2012 ರ ಶುಕ್ರವಾರ ಸ್ಥಳೀಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಜರುಗಿದ ಬೀಳ್ಕೊಡುಗೆ ಸಮಾರಂಭ. ತುಳುಕೂಟದ ಸ್ಥಾಪಕ ಸದಸ್ಯರೂ, ಮಾಜಿ ಅಧ್ಯಕ್ಷರೂ ಹಾಗೂ ಸಲಹಾ ಸಮಿತಿಯ ಸದಸ್ಯರಾಗಿ ಕೂಟದ ಏಳಿಗೆಗೆ ನಿರಂತರ ಶ್ರಮಿಸಿ, ಕುವೈಟ್‌ನಲ್ಲಿ ತಮ್ಮ 42 ವರ್ಷದ ಯಶಸ್ವಿ ಜೀವನವನ್ನು ಪೂರೈಸಿ, ತಮ್ಮ ನಿವೃತ್ತ ಜೀವನವನ್ನು ತವರೂರಲ್ಲಿ ಮುನ್ನಡೆಸಲು ಹೊರಟಿರುವ ಶ್ರೀಯುತರನ್ನು  ಗೌರವಯುತವಾಗಿ ಬೀಳ್ಕೊಡಲಾಯಿತು. ವಿದಾಯ ಸಮಾರಂಭದಲ್ಲಿ ಕೂಟದ ಅಧ್ಯಕ್ಷ ಶ್ರೀ ರಮೇಶ್ ಕಿದಿಯೂರ್ ಹಾಗೂ ತುಳುಕೂಟದ ಪ್ರಥಮ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿಯವರು ಶ್ರೀ ವಿವೇಕ್ ರಾವ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ-ನೆನಪಿನ ಕಾಣಿಕೆಯಿತ್ತು ಸಮ್ಮಾನಿಸಿದರು.

ಕೂಟದ ಅಧ್ಯಕ್ಷರಾದ ಶ್ರೀ ರಮೇಶ್ ಕಿದಿಯೂರ್ ಅವರು ಮಾತನಾಡುತ್ತಾ, ಯುವಜನಾಂಗಕ್ಕೆ ಆದರ್ಶರಾದ ಶ್ರೀ ವಿವೇಕ್ ರಾವ್ ಕೂಟದ ಅಭಿವೃದ್ಧಿಗೆ ತಮ್ಮ ಅನುಭವವನ್ನು ಧಾರೆಯೆರೆದು, ನಮಗೆ ಬಹಳಷ್ಟು ಪಾಠಗಳನ್ನು ಕಲಿಸಿರುವರು, ಅವರ ಮೌಲಿಕ ಧ್ಯೇಯಗಳನ್ನು ನಾವು ಪಾಲಿಸಿಕೊಳ್ಳಬೇಕೆಂದು ಕರೆಯಿತ್ತರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೂಟದ ಪ್ರರ್ಥಮ ಅಧ್ಯಕ್ಷ ಹಾಗೂ ಪ್ರಸ್ತುತ ಸಲಹೆಗಾರರಾದ ಶ್ರೀ ಸುಧಾಕರ್ ಶೆಟ್ಟಿ ಅವರು, ತಲೆಬಾಗಿ-ಕೈಜೋಡಿಸಿ ನಮಿಸುವ ವ್ಯಕ್ತಿತ್ವ ಶ್ರೀ ವಿವೇಕ್ ರಾವ್ ಅವರದ್ದು, ಶ್ರೀಯುತರು ಕೂಟದ ಉನ್ನತಿಗೆ ಬಹಳಷ್ಟು ಶ್ರಮಿಸಿ, ಕೂಟಕ್ಕೆ ಭದ್ರ ಬುನಾದಿ ಹಾಕಿರುವರೆಂದು ತಿಳಿಸಿದರು.

ಮೃದು ಸ್ವಭಾವದ, ಮಿತಭಾಷಿ, ದಯಾಳು, ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಪೂಜಿಪ ಗೌರವಯುತ ಶ್ರೀ ವಿವೇಕ್ ರಾವ್ ಅವರ ವ್ಯಕ್ತಿತ್ವವನ್ನು ಸಮಿತಿ ಸದಸ್ಯರು ಕೊಂಡಾಡಿದರು. ಸತ್ಕಾರಕ್ಕೆ ಪಾತ್ರರಾದ ಶ್ರೀ ವಿವೇಕ್ ರಾವ್ ಭಾವುಕರಾಗಿ ತಮ್ಮ ಅನಿಸಿಕೆಗಳನ್ನು ಹೊರಚೆಲ್ಲುತ್ತಾ, ಕೂಟಕ್ಕೆ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಉಪಾಧ್ಯಕ್ಷ ಶ್ರೀ ತಾರೇಂದ್ರ ಪಿ. ಶೆಟ್ಟಿಗಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಸಾಲ್ಯಾನ್ ವಂದನಾರ್ಪಣೆಗೈದರು. ಸಮಿತಿಯ ಸರ್ವಸದಸ್ಯರು ಶ್ರೀಯುತ ವಿವೇಕ್ ರಾವ್ ಅವರಿಗೆ ವಿಶ್ರಾಂತಿ ಜೀವನ ಸುಖ:-ಶಾಂತಿ ನೆಮ್ಮದಿಯಿಂದ ಸಾಗಲಿ  ಭಗವಂತನು ಶ್ರೀಯುತರಿಗೆ ಆಯುರಾರೋಗ್ಯ ಭಾಗ್ಯ ಸದಾ ಕರುಣಿಸಲೆಂದು ಅಪೇಕ್ಷಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : Manjeshwar Mohandas Kamath
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-06-12

Tell a Friend

ಪ್ರತಿಸ್ಪಂದನ
Sarvotham Shetty, Abu Dhabi - UAE
2012-06-12
I know Mr.Vivek Rao personally and he is a very simple and humble leader. Today Tulu Koota is prospering in Kuwait just because of the hard work and guidance given by Mr.Vivek Rao and all the former Presidents. On behalf of UAE Tuluva's, I wish Mr.Vivek Rao and his family "best of luck" for all his future endeavours. GOD bless.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ
»ತುಳುಕೂಟ ಕುವೈಟ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.
»ಜಿ.ಎಸ್.ಬಿ.ಸಭಾ ಕುವೈತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ತಮಿ ಆಚರಣೆ .
»ಕುವೈತ್ನಲ್ಲಿ ಮೊದಲ ಬಾರಿಗೆ-" ವಿ’ಬೆಳ್ಮಣ್ ಕ್ರಿಯೇಷನ್ಸ್ ನ-ವಿ’ಶೇಷ್ "
»ಕುವೈತ್: ಮಂಗಳೂರಿನ ಇಬ್ಬರು ತರುಣರ ದಾರುಣ ಮೃತ್ಯು
»ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ
»ರಾಹುಲ್ ಗಾಂಧಿ ಕುವೈತ್ ದೊರೆ ಭೇಟಿ
»ಇನ್ನು ಮುಂದೆ ಆನ್ ಲೈನ್ ವಿಸಾ-ಐಡೆಂಟಿಟಿ ಕಾರ್ಡ್- ಡ್ರೈವಿಂಗ್ ಲೈಸೆನ್ಸ್
»ತುಳುಕೂಟ ಕುವೈಟ್ - ಮನೋರಂಜನೀಯ ರಸಮಂಜರಿ 2012
»ಕುವೈತ್ ವಿಮಾನ ನಿಲ್ದಾಣ ಅಭಿವೃದ್ದಿಗೆ $6 ಬಿಲಿಯನ್
»ಕುವೈತ್ ಕನ್ನಡ ಕೂಟದಿಂದ ಮರಳ ಮಲ್ಲಿಗೆ ದಿನಾಚರಣೆ
»ಇಸ್ಲಾಮಿಕ್ ಕಾನೂನು ತಿದ್ದುಪಡಿ ಪ್ರಸ್ತಾವನೆ ತಡೆಹಿಡಿದ ಕುವೈತ್ ಸರಕಾರ
»ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !
»ಕುವೈಟ್‌ನಲ್ಲಿ ಅಪಘಾತ: ಉಡುಪಿಯ ಪೌಲ್‌ ಸಂತೋಷ್‌ ಸಾವು
»ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.
»Islamists plot against Gulf: Dubai police chief
»ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’
»ಕೆ ಕೆ ಎಂ ಎ ವತಿಯಿಂದ ಮಂಗಳೂರಿಗೆ ಹತ್ತನೇ ಕಿಡ್ನಿ ಡಯಾಲಿಸಿಸ್ ಕೇಂದ್ರ (KDC) ಘೋಷನೆ
»ಕುವೈಟ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
»ಪರಿಚಾರಿಕೆಯನ್ನು ರಸ್ತೆಗೆ ಬಿಸಾಡಿ..ಕಾರು ಓಡಿಸಿ ಕೊಂದ ದಂಪತಿಗೆ ಮರಣ ಶಿಕ್ಷೆ
»ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
»ತುಳುಕೂಟದ ‘ತುಳುಸಿರಿ’ : ಕುವೈಟ್‌ನಲ್ಲಿ ತುಳು ಶಾಲೆ ಆರಂಭ
»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri