ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಬಹರೈನ್ ಕನ್ನಡ ಸಂಘ : ಹರ್ಷೋಲ್ಲಾಸದ 'ವಸಂತೋತ್ಸವ -2012 ' ಆಚರಣೆ ಹಾಗೂ 'ಪದಗ್ರಹಣ' ಸಮಾರಂಭ ...

ಮನಾಮ , ಬಹರೈನ್ :  35 ವಸಂತಗಳನ್ನು  ಕಂಡ ರಾಜ್ಯ ಪ್ರಶಸ್ತಿ ವಿಜೇತ "ಕನ್ನಡ ಸಂಘ ಬಹರೈನ್"  ಕಳೆದ 18 ನೇ  ಶುಕ್ರವಾರದಂದು  " ವಸಂತೋತ್ಸವ -2012 " ನ್ನು ಅದ್ದೂರಿಯಿಂದ ಆಚರಿಸಿತು.







ಸ್ಥಳೀಯ " ಸಾಂಸ್ಕೃತಿಕ ಸಭಾಂಗಣ "ದಲ್ಲಿ  ಇದೇ ವೇದಿಕೆಯಲ್ಲಿ ರಾಜ್ ಕುಮಾರ್ ಅಧ್ಯಕ್ಷತೆಯ 2012 - 13 ರ  ಸಾಲಿನ ಸಂಘದ ನೂತನ ಆಡಳಿತ ಸಮಿತಿಯ " ಪದ ಗ್ರಹಣ " ಸಮಾರಂಭವೂ ನೆರವೇರಿತು. ಈ ದಿನದ ಗಣ್ಯಾತಿಗಣ್ಯರನ್ನು ಪೂರ್ಣಕುಂಭ,ಚೆಂಡೆ ಮೇಳದ ವೈಭವದ  ಮೆರವಣಿಗೆಯೊಂದಿಗೆ ಹೃದಯಂಗಮವಾಗಿ ವೇದಿಕೆಗೆ ಕರೆ ತರಲಾಯಿತು.





ಈ ಸಂಜೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಶೆಟ್ಟಿ ಸ್ವಾಗತಿಸಿದ ಬಳಿಕ ಶ್ರೀ ರಾಜ್ ಕುಮಾರ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.


ಈ ವಿಶೇಷ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿಯವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ನೂತನ ಸಮಿತಿಗೆ ಶುಭ ಹಾರೈಸಿದರು. ಶ್ರೀ ಜೋಷಿಯವರು ಮಾತನಾಡುತ್ತಾ  "ಕನ್ನಡದ ಕಲೆ-ಸಂಸ್ಕೃತಿ ಯನ್ನು ಈ ವಿದೇಶಿ ಮಣ್ಣಿನಲ್ಲಿ ಪೋಷಿಸಿ ಬೆಳಸಿದ ತನ್ಮೂಲಕ ಕನ್ನಡದ ನಿಜಾರ್ಥದ ಸೇವೆಯನ್ನು ಮಾಡುವ ಎಲ್ಲಾ ಕನ್ನಡಿಗರನ್ನು ಪ್ರಶಂಸಿದರು. ಇಲ್ಲಿನ ಕನ್ನಡ ಸಂಘವು ಒಂದು ಮಾದರಿ ಸಂಘವಾಗಿ ಬೆಳೆದು ನಿಂತಿದ್ದು ಇನ್ನೂ ಮುಂದಕ್ಕೂ  ಕನ್ನಡದ ಕೀರ್ತಿ ಪತಾಕೆಯನ್ನು ಬಾನೆತ್ತೆರಕೆ ಹಾರಿಸಲಿ , ಈ ಮುಖೇನ ತಾಯಿ ಭುವನೇಶ್ವರಿಯ ಕೃಪಾಶೀರ್ವಾದ  ಸದಾ ಎಲ್ಲರ ಮೇಲಿರಲಿ "  ಎಂದು ಶುಭಾಶೀರ್ವಚನವನ್ನಿತ್ತರು.



ಸಂಘದ ನೂತನ ಅಧ್ಯಕ್ಷ ಶ್ರೀ ರಾಜ್ ಕುಮಾರ್ ಹಾಗೂ ಇನ್ನಿತರ ಗಣ್ಯರು ಶ್ರೀ ಭೀಮೇಶ್ವರ ಜೋಷಿಯವರನ್ನು ಶಾಲು ಹೊದೆಸಿ, ಫಲ ಪುಷ್ಪ, ಹಾರ ಹಾಗೂ ವಿಶೇಷ ಸ್ಮರಣಿಕೆಯೊಂದಿಗೆ ದ್ವೀಪದ ಸಮಸ್ತ ಕನ್ನಡಿಗರ ಪರವಾಗಿ ಗೌರವಿಸಿದರು.


ಈ ಸಭಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಬಹರೈನಿನ ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿಗಳಾದ ಶ್ರೀ ಅಜಯ್ ಕುಮಾರ್, ಹಾಗೂ ಗಣ್ಯರಾದ ರಾಮೀ ಸಮೂಹ ಸಂಸ್ಥೆಗಳ ಸಮೂಹ ಪ್ರಭಂದಕರಾದ ಶ್ರೀ ಶಾಂತಾರಾಮ್ ಶೆಟ್ಟಿ,  I C R F ಮುಖ್ಯಸ್ಥ ಶ್ರೀ  ಜಾನ್ ಐಯ್ಪ್, ಕಿಮ್ಸ್ ಬಹ್ರೈನ್ ನಿರ್ದೇಶಕ ಶ್ರೀ ಬೋಬನ್ ಇಡಿಕ್ಕುಲ, ಬಾರ್ಕೂರು ವಲಯದ ರೋಟರಿ ಅಧ್ಯಕ್ಷ ಶ್ರೀ ಅಬ್ದುಲ್ ಮುಬಾರಕ್ ಭಾಗವಹಿಸಿದ್ದರು .  ಸಭಾ ಕಾರ್ಯಕ್ರಮದ ಕೊನೆಯ ಅಂಗವಾಗಿ  ಜೊತೆ ಕಾರ್ಯದರ್ಶಿ ಶ್ರೀ ರಾಮ್ ಪ್ರಸಾದ್ ವಂದನಾರ್ಪಣೆ ಗೈದರು.




ಮುಂದೆ ಅನಾವರಣ ಗೊಂಡ ಸಾಂಸ್ಕೃತಿಕ ವೈಭವದಲ್ಲಿ ಕರುನಾಡಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಜೋಡಿ ಶ್ರೀ ಸೂರ್ಯ ಯನ್ ರಾವ್ ಹಾಗೂ ಶ್ರೀಮತಿ ಪ್ರಥಮಾ ಪ್ರಸಾದ್ ರಾವ್ ಇವರು ಭಾರತೀಯ ನೃತ್ಯ ಪರಂಪರೆಯ "ಕೂಚುಪುಡಿ " ಮತ್ತು "ಕಥಕ್ " ಗಳ ಅಮೋಘ "ಜುಗಲ್ ಬಂದಿ" ಯನ್ನು ಪ್ರದರ್ಶಿಸಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ನಾಟ್ಯ ಲೋಕದಲ್ಲಿ ಮೈ ಮರೆಯುವಂತೆ ಮಾಡಿದರು.  ಇನ್ನೋರ್ವ ಅತಿಥಿ ಕಲಾವಿದ ಮೈಸೂರಿನ ಖ್ಯಾತ ಹಾಸ್ಯ , ಮಿಮಿಕ್ರಿ ಪಟು ಶ್ರೀ ರಮೇಶ್ ಬಾಬು ತಮ್ಮ  ಹಾಸ್ಯ ಚಟಾಕಿ, ಮಿಮಿಕ್ರಿಯಿಂದ ಎಲ್ಲರನ್ನೂ ನಗೆ ಗಡಲಲ್ಲಿ ತೇಲಾಡಿಸಿದರು.

 ಇವೆಲ್ಲವಕ್ಕೂ ಮುಕುಟವಿಟ್ಟಂತೆ ಸಂಘದ ಪ್ರತಿಭಾನ್ವಿತ ಕಲಾವಿದರು ತಮ್ಮ ಸುಂದರ  ನೃತ್ಯ, ಗಾನಗಳಿಂದ ಸಭಿಕರ ಕಣ್ಮನ ರಂಜಿಸಿದರು.  ಈ ವಿಶೇಷ ಉತ್ಸವದಲ್ಲಿ ಭಾಗವಿಸಿದ ಎಲ್ಲಾ ಕಲಾವಿದರುಗಳನ್ನು ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಹಾಗೂ ಅಧ್ಯಕ್ಷ ಶ್ರೀ ರಾಜ್ ಕುಮಾರ್ ವಿಶೇಷ ಸ್ಮರಣಿಕೆಯೊಂದಿಗೆ ಗೌರವಿಸಿದರು.










ಸಂಘದ ಕಲಾವಿದರ ನೃತ್ಯಗಳನ್ನು ನಿರ್ದೇಶಿಸಿದ  ಶ್ರೀಮತಿ ಹನ್ಸುಲ್ ಗನಿ, ಶ್ರೀಮತಿ ಚಂದ್ರಕಲಾ ಮೋಹನ್, ಕುಮಾರಿ ಸ್ಮೃತಿ ಶೆಟ್ಟಿ, ಕುಮಾರಿ ಸಂಧ್ಯಾ ದಾಮೋದರ್, ಕುಮಾರಿ ಕಾವ್ಯ ಶೆಟ್ಟಿ , ಕುಮಾರಿ ಹೆಯ್ಜಿಲ್ ಡೆಸ ಇವರನ್ನು ಈ ವೇದಿಕೆಯಲ್ಲಿ ಪುರಸ್ಕರಿಸಲಾಯಿತು.



2012 ನೇ ಸಾಲಿನ ಆರ್ಯಭಟ ಪ್ರಶಸ್ತಿ ಪುರಸ್ಕೃತ ದ್ವೀಪ ಕನ್ನಡಿಗ ಶ್ರೀ ಕಮಲಾಕ್ಷ ಅಮೀನ್ ಹಾಗೂ ಸಂಘದ ಮನೋರಂಜನಾ ಕಾರ್ಯದರ್ಶಿ ಶ್ರೀ ನವೀನ್ ಶೆಟ್ಟಿ ಕಾರ್ಯಕ್ರಮದ ನಿರೂಪಕರಾಗಿದ್ದರು.



ಕಾರ್ಯಕ್ರಮದ ಕೊನೆಯಲ್ಲಿ ಮಲಬಾರ್ ಗೋಲ್ಡ್ ಪ್ರಾಯೋಜಕತ್ವದ ಲಕ್ಕಿ ಡ್ರಾದಲ್ಲಿ ಶ್ರೀ ಸತೀಶ್  ಉಳ್ಳಾಲ್ ಅವರು ಅದೃಷ್ಟಶಾಲಿ ವಿಜೇತರಾಗಿ ವಜ್ರದುಂಗುರ ತನ್ನದಾಗಿಸಿಕೊಂಡರು. expat  properties ಪ್ರಾಯೋಜಕತ್ವದ ಅದೃಷ್ಟ ಶಾಲಿ ಡ್ರಾದಲ್ಲಿ ಶ್ರೀ ರಾಘವೇಂದ್ರ ಶೆಟ್ಟಿ ಅವರು ಮುತ್ತಿನ ನೆಕ್ಲೆಸ್ ನ್ನು ಪಡಕೊಂಡರು.


ಈ ಕಾರ್ಯಕ್ರಮದ ಯಶಸ್ಸಿಗೆ ಮಲಬಾರ್ ಗೋಲ್ಡ್ ,ಕಂಟ್ರಿ ಕ್ಲಬ್, UAE exchange , Expat Properties ,ರಾಮೀ ಸಮೂಹ ಸಂಸ್ಥೆ, ಡೆಲ್ಟಾ ಸಂಸ್ಥೆ, ಹಾಗೂ ಶ್ರೀ ರಾಜೇಶ್ ಶೆಟ್ಟಿ  ಮೊದಲಾದವರು  ಪ್ರಾಯೋಜಕರಾಗಿ ಸಹಕರಿಸಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ : ರಾಮ್ ಪ್ರಸಾದ್ ಅಮ್ಮೆನದ್ಕ/ ಬಹರೈನ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-05-24

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಬಹರೈನ್ ಕನ್ನಡ ಸಂಘ : 'ಸ್ವಾತಂತ್ರ್ಯೋತ್ಸವ' ಹಾಗೂ 'ಈದ್' ಹಬ್ಬದ ಸಂಭ್ರಮದ ಆಚರಣೆ
»ಕಾ೦ಚನ್ ಪ್ರತಿಷ್ಠಾನದಿ೦ದ ಭಾರತ ಮತ್ತು ಭ್ರಷ್ಠಾಚಾರ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಪ್ರಬ೦ಧ ಸ್ಪರ್ಧೆ
»ಬಹರೈನ್ ಕನ್ನಡ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ.
»ಬಹರೈನ್ ಕನ್ನಡ ಸಂಘ : ಸಂಭ್ರಮದ ಇಫ್ತಾರ್ ಕೂಟದ ಆಚರಣೆ.
»ಕುಂಜೂರು ಸೌದಾ ಕುಟುಂಬಕ್ಕೆ ಅನಿವಾಸಿ ಭಾರತೀಯರಿಂದ ಧನಸಹಾಯ
»ದ್ವೀಪದ ಹಿರಿಯ ಕನ್ನಡಿಗನಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಬೀಳ್ಕೊಡುಗೆ:ಮೂರೂವರೆ ದಶಕಗಳ ಸುಧೀರ್ಘ ದ್ವೀಪ ವಾಸದ ನಂತರ ತಾಯ್ನಾಡಿನತ್ತ ವಿಟ್ಟಲ್ ಶೆಟ್ಟಿ ದಂಪತಿಗಳು.
»ಕನ್ನಡ ಸಂಘ ಬಹ್ರೈನ್ ನ್ನಲ್ಲಿ 'ಹಾಡಿಗೊಂದು ಹಾಡು 2012'
»ಬಹ್ರೈನ್ : ಶ್ರೀಯುತ ವಿಟ್ಟಲ್ ಶೆಟ್ಟಿ ಯವರಿಗೆ ಕನ್ನಡ ಸಂಘದಲ್ಲಿ ಬೀಳ್ಕೊಡುಗೆ.
»ಬಹರೈನ್:ಬಂಟ್ಸ್ ಆಸೋಸಿಯೇಶನ್ ನ ಅಧ್ಯಕ್ಷರಾಗಿ ಕರ್ಮಾರ್ ನಾಗೇಶ್ ಶೆಟ್ಟಿ ಆಯ್ಕೆ
»ಬಹರೈನ್ ನಲ್ಲಿ 'ರಾಮೀ ಬೇಸಿಗಾ ಶಿಬಿರ'-ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೊಂದು ಸುವರ್ಣಾವಕಾಶ.
»ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಬಹರೈನ್ನಲ್ಲಿನ ಕರ್ನಾಟಕದ ಮಕ್ಕಳ ಸಾಧನೆ.
»ಫಹ್ದ್ ಕ್ಯಾಸ್ವೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ
»ಬಹ್ರೈನ್ ಇಂಡಿಯನ್ ಕ್ಲಬ್ಬ್ 'ಪ್ರಿನ್ಸ್ & ಪ್ರಿನ್ಸೆಸ್ 2012'
»ಬಹ್ರೈನ್ ಕನ್ನಡದ ವಿದ್ಯಾರ್ಥಿಗಳಿಂದ ನಾಡಿನ ಮೂಡುಬೆಳ್ಳೆಗೆ ಗೌರವ
»ಬಹರೈನ್ ಕನ್ನಡ ಸಂಘದಲ್ಲಿ 'ಭಕ್ತ ಸುಧನ್ವ' ಯಕ್ಷಗಾನ ತಾಳ ಮದ್ದಳೆ
»ಆರ್ಯಭಟ ಪ್ರಶಸ್ತಿ ವಿಜೇತ ಕಮಲಾಕ್ಷ ಅಮೀನ್ ರವರಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಸಮ್ಮಾನ.
»ಬಹರೈನ್ ಕನ್ನಡ ಸಂಘದಲ್ಲಿ ಕ್ವಿಜ್ ನೈಟ್...
»ಬಹ್ರೈನ್-ಮಂಗಳೂರು ಏರ್ ಏಂಡಿಯಾ ಹೆಚ್ಚುವರಿ ವಿಮಾನ ಹಾರಾಟಕ್ಕೆ ಕರೆ:ತುಳುನಾಡ ರಕ್ಷಣಾ ವೇದಿಕೆ ಮನವಿ
»ಅದ್ದೂರಿಯಾಗಿ ಜರುಗಿದ 'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರ ಉಪಸ್ಥಿತಿ.
»12ನೇ ತರಗತಿ: ಬಹರೈನ್ ಗೆ ಉಡುಪಿ ಯುವಕ ದ್ವಿತೀಯ
»ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾIಬಿ.ಆರ್.ಶೆಟ್ಟಿ.
»ದ್ವೀಪದಲ್ಲಿ ವರ್ಣರಂಜಿತ ಮುಕ್ತಾಯ ಕಂಡ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ:' ಬಹರೈನ್ ಬಿಲ್ಲವಾಸ್' ನ ಮಡಿಲಿಗೆ ಪ್ರತಿಷ್ಠಿತ 'ಇಂಡಿಯನ್ ಕ್ಲಬ್-ಆಫ್ರಿಕನ್ ಈಸ್ಟರ್ನ್ ಟ್ರೋಫಿ'
»ಬಹರೈನ್ ಕನ್ನಡ ಸಂಘ : ಹರ್ಷೋಲ್ಲಾಸದ 'ವಸಂತೋತ್ಸವ -2012 ' ಆಚರಣೆ ಹಾಗೂ 'ಪದಗ್ರಹಣ' ಸಮಾರಂಭ ...
»ಬಸವ ಸಮಿತಿ ಬಹ್ರೈನ್ ಆಚರಿಸಿದ ವಿಜ್ರಂಭಣೆಯ ಬಸವ ಜಯಂತಿ
»ಬಹ್ರೈನ್‍ಗೆ ನುಸುಳಿದ 20 ಮಂದಿ ಬಾಂಬ್‍ ತಯಾರಕರ ಪತ್ತೆಗೆ ಪೋಲಿಸ್ ಚುರುಕು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri