ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !

ದುಬೈ:ಪ್ರಯಾಣಿಕರಿಗೆ ಅನುಕೂಲಕರ ಸವಲತ್ತುಗಳನ್ನು ಒದಗಿಸುತ್ತಿಲ್ಲ ಅನ್ನುವ ಅಪಾದನೆಗಳನ್ನೇ ಹೊತ್ತಿರುವ ಏರ‍್ ಇಂಡಿಯಾ ಪೈಲೆಟ್‍ಗಳ ಮುಷ್ಕರ,ಮತ್ತೊಮ್ಮೆ  ಭಾರತದಲ್ಲಿ ಬೀದಿಗೆ ಬಂದಿದೆ.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ ಸಿದ್ಧತೆ ನಡೆಸಿದ ಪ್ರಯಾಣಿಕರಿಗೆ ಮೇ.12ರಂದೂ ಪೈಲೆಟ್‍ಗಳ ಮುಷ್ಕರ ಮುಂದುವರೆದ ಪರಿಣಾಮ  ವಿಮಾನ ಹಾರಾಟದ ವೇಳಾಪಟ್ಟಿ ವ್ಯತ್ಯಯ ಮತ್ತು ಕುವೈತ್ ಸಂಚಾರ ಮೊಟಕುಗೊಳಿಸಿದ್ದು ಇಕ್ಕಟ್ಟಿಗೆ ಸಿಲುಕಿಸಿತು.

ಏರ್ ಇಂಡಿಯಾ ಅಧಿಕಾರಿಗಳ ಮಾಹಿತಿ ಪ್ರಕಾರ ಎರಡು ಅಂತರಾಷ್ಟ್ರೀಯ ವಿಮಾನಗಳು  ಮಂಗಳೂರಿನಿಂದ ತಾ.12ರಂದು ಶನಿವಾರ ಹೊರಡುವ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ರಾತ್ರಿ 10ಗಂಟೆಗೆ ಹೊರಡಬೇಕಿದ್ದ ವಿಮಾನಕ್ಕೆ ಭಾನುವಾರ ತಾ.13ರಂದು ಬೆಳಿಗ್ಗೆ 7 ಗಂಟೆಯನ್ನು ನಿಗಧಿಪಡಿಸಲಾಗಿದೆ.

ಈ ಮುಷ್ಕರದ ಪರಿಣಾಮ ಇದೇ ದಿನ ಸಂಜೆ( ತಾ.12) 5.45ಕ್ಕೆ ಹೊರಡಬೇಕಿದ್ದ ಕುವೈತ್ ವಿಮಾನ ಸಂಚಾರವನ್ನು ತಡೆ ಹಿಡಿಯಲಾಗಿದೆ.

ಈ ವಿಮಾನದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಅವರವರ ಪ್ರಯಾಣದ ಖರ್ಚನ್ನು ವಾಪಾಸು ಮಾಡುವುದಾಗಿ ಹೇಳಿರುವ ಏರ್  ಇಂಡಿಯಾ ಮೂಲಗಳು,"ನಮ್ಮ ಮುಂದಿನ ವಿಮಾನವೂ ಭರ್ತಿಯಾಗಿರುವುದರಿಂದ ದುರಾದೃಷ್ಟವಶಾತ್ ಈ ನಿರ್ಧಾರಕ್ಕೆ ಬರಲಾಗಿದೆ. ತಡೆ ಹಿಡಿಯಾಲಾದ ವಿಮಾನದ ವೇಳೆಯನ್ನು ಪರಿಷ್ಕರಿಸುವ ಯಾವುದೇ ಮಾರ್ಗ ನಮ್ಮಲ್ಲಿಲ್ಲ " ಎಂದು ಕೈ ಚೆಲ್ಲಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರಿಗೆ ಪೈಲೆಟ್‍ಗಳು ಒಂದು ವಾರದಿಂದ ಹೂಡಿರುವ  ಈ ಮುಷ್ಕರದಿಂದ ತೊಂದರೆಯಾಗಿದ್ದು ಗಮನಾರ್ಹವಾದುದು.

"ಏರ‍್ ಇಂಡಿಯಾದ ಮಂಗಳೂರು ಕಚೇರಿಯ ಸೇವೆ  ದುಬೈ  ಕಚೇರಿಯ ಸೇವೆಗಿಂತ ಉತ್ತಮ ಮಟ್ಟದಲ್ಲಿದೆ.ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂದು ಮುಂಚಿತವಾಗಿ ನಮಗೆ ಮಾಹಿತಿ ನೀಡಿದ್ದರು.ಅಲ್ಲದೇ, ದೂರದೂರಿನಿಂದ ಬಂದವರಿಗೆ ಉಳಿದುಕೊಳ್ಳಲು ಹೋಟೇಲ್ ಸೌಲಬ್ಯ ನೀಡಲಾಗಿತ್ತು.ಪ್ರಯಾಣವನ್ನು ಸ್ಥಗಿತಗೊಳಿಸಿದ ಪ್ರಯಾಣಿಕರಿಗೆ  ಅವರವರ  ಮನೆಗೆ ಹೋಗಲು ಟ್ಯಾಕ್ಸಿ ಹಣವನ್ನೂ  ಸಹ ಮಂಗಳೂರು ಏರ್ ಇಂಡಿಯಾ ಕಚೇರಿ ವಹಿಸಿತ್ತು.ಇಂತಹ ಸನ್ನಿವೇಷದಲ್ಲಿ ಏರ್ ಇಂಡಿಯಾವನ್ನು ದೂರುವಂತಿಲ್ಲ ಎಂದಿರುವ ಪ್ರಯಾಣದ ವೇಳೆ ವ್ಯತ್ಯಯಗೊಂಡು ದುಬ್ಯ ತಲಪಿದ ಪ್ರಯಾಣಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. " ಈಗಿನ ಸಮಸ್ಯೆ  ಪೈಲೆಟ್‍ಗಳಿಂದ ಸಂಭವಿಸಿದೆ" ಎಂದಿದ್ದಾರೆ.

ಕೆಲವು ವಾರಗಳ ಹಿಂದೆ ಇದೇ ಏರ‍್ ಇಂಡಿಯಾದ  ದುಬೈ- ಮಂಗಳೂರು ವಿಮಾನದ ಪ್ರಯಾಣ ಸಮಯ ಬದಲಿಸಿತ್ತು.ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು ದುಬೈ ಏರ್ ಇಂಡಿಯಾ ಕಚೇರಿಯಿಂದ ಎಂದು ಕೆಂಡಕಾರಿರುವ ಕೆಲವು ಪ್ರಯಾಣಿಕರು.,ದುಬೈ ಏರ‍್ ಇಂಡಿಯಾ ಕಚೇರಿಯ ಅಧಿಕಾರಿ ವರ್ಗಗಳು ಪ್ರಯಾಣಿಕರು ಅತಿಥಿಗಳಂತೆ ಕಾಣದೆ , ಬೇಜವಾಬ್ದಾರಿತನ ತೋರಿಸುತ್ತಾರೆ ಎಂದು ಖಾರವಾಗಿ  ಅಪಾದಿಸಿದ್ದಾರೆ.

ಪ್ರಯಾಣದ ವ್ಯತ್ಯಾಸವನ್ನು ಮತ್ತು ತಡೆಹಿಡಿಯಾಲಾದ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಧ್ಯವಾದಷ್ಟು ತುರ್ತು ಸಂದೇಶವನ್ನು ರವಾನಿಸಲು ಶ್ರಮಿಸಲಾಗುತ್ತಿದೆ ಎಂದಿರುವ ಮಂಗಳೂರು ಏರ್ ಇಂಡಿಯಾ ಕಚೇರಿ ಮೂಲಗಳು,ಕೆಲವು ಪ್ರಯಾಣಿಕರು ಅವರ ಸಂಪರ್ಕ ದೂರವಾಣಿ ಸಂಖ್ಯೆ, ಸಮರ್ಪಕ ವಿಳಾಸ ನಮೂದಿಸಿಲ್ಲ. ನಮೂದಿಸಿದವನ್ನು  ಸಂಪರ್ಕಿಸಿದಾಗ ಸರಿಯಾದ ರೀತಿಯಲ್ಲಿ ಉತ್ತರಿಸುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

-ನೀಲಾಂಜನ್

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ನೀಲಾಂಜನ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-05-13

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ
»ತುಳುಕೂಟ ಕುವೈಟ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.
»ಜಿ.ಎಸ್.ಬಿ.ಸಭಾ ಕುವೈತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ತಮಿ ಆಚರಣೆ .
»ಕುವೈತ್ನಲ್ಲಿ ಮೊದಲ ಬಾರಿಗೆ-" ವಿ’ಬೆಳ್ಮಣ್ ಕ್ರಿಯೇಷನ್ಸ್ ನ-ವಿ’ಶೇಷ್ "
»ಕುವೈತ್: ಮಂಗಳೂರಿನ ಇಬ್ಬರು ತರುಣರ ದಾರುಣ ಮೃತ್ಯು
»ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ
»ರಾಹುಲ್ ಗಾಂಧಿ ಕುವೈತ್ ದೊರೆ ಭೇಟಿ
»ಇನ್ನು ಮುಂದೆ ಆನ್ ಲೈನ್ ವಿಸಾ-ಐಡೆಂಟಿಟಿ ಕಾರ್ಡ್- ಡ್ರೈವಿಂಗ್ ಲೈಸೆನ್ಸ್
»ತುಳುಕೂಟ ಕುವೈಟ್ - ಮನೋರಂಜನೀಯ ರಸಮಂಜರಿ 2012
»ಕುವೈತ್ ವಿಮಾನ ನಿಲ್ದಾಣ ಅಭಿವೃದ್ದಿಗೆ $6 ಬಿಲಿಯನ್
»ಕುವೈತ್ ಕನ್ನಡ ಕೂಟದಿಂದ ಮರಳ ಮಲ್ಲಿಗೆ ದಿನಾಚರಣೆ
»ಇಸ್ಲಾಮಿಕ್ ಕಾನೂನು ತಿದ್ದುಪಡಿ ಪ್ರಸ್ತಾವನೆ ತಡೆಹಿಡಿದ ಕುವೈತ್ ಸರಕಾರ
»ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !
»ಕುವೈಟ್‌ನಲ್ಲಿ ಅಪಘಾತ: ಉಡುಪಿಯ ಪೌಲ್‌ ಸಂತೋಷ್‌ ಸಾವು
»ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.
»Islamists plot against Gulf: Dubai police chief
»ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’
»ಕೆ ಕೆ ಎಂ ಎ ವತಿಯಿಂದ ಮಂಗಳೂರಿಗೆ ಹತ್ತನೇ ಕಿಡ್ನಿ ಡಯಾಲಿಸಿಸ್ ಕೇಂದ್ರ (KDC) ಘೋಷನೆ
»ಕುವೈಟ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
»ಪರಿಚಾರಿಕೆಯನ್ನು ರಸ್ತೆಗೆ ಬಿಸಾಡಿ..ಕಾರು ಓಡಿಸಿ ಕೊಂದ ದಂಪತಿಗೆ ಮರಣ ಶಿಕ್ಷೆ
»ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
»ತುಳುಕೂಟದ ‘ತುಳುಸಿರಿ’ : ಕುವೈಟ್‌ನಲ್ಲಿ ತುಳು ಶಾಲೆ ಆರಂಭ
»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri