ಬಹರೈನ್ ಕನ್ನಡ ಸಂಘದಲ್ಲಿ 'ವಸಂತೋತ್ಸವ'ದ ಕಲರವ ... |
ಪ್ರಕಟಿಸಿದ ದಿನಾಂಕ : 2012-05-10
ಮನಾಮ , ಬಹರೈನ್ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸ್ಥಳೀಯ ಬಹರೈನ್ ಕನ್ನಡ ಸಂಘವು ದ್ವೀಪದ ಕನ್ನಡಿಗರಿಗೆ "ವಸಂತೋತ್ಸವ- 2012 " ಎಂಬ ನೃತ್ಯ, ಹಾಸ್ಯ ಸಿಂಚನದ ವೈವಿಧ್ಯ ಮಯ ಕಾರ್ಯಕ್ರಮವನ್ನು ಉಣ ಬಡಿಸಲು ಸಂಪೂರ್ಣ ಸಜ್ಜಾಗುತ್ತಿದೆ.
ಇದೇ ತಾ. 18 -05 - 2012 ನೇ ಶುಕ್ರವಾರ ಸಂಜೆ 6 ರಿಂದ ಸ್ಥಳೀಯ ಬಹರೈನ್ ಮ್ಯೂಸಿಯಂನ ಸನಿಹದ "ಸಾಂಸ್ಕೃತಿಕ ಸಭಾಂಗಣ "ದಲ್ಲಿ ನಡೆಯುವ ಈ ಅದ್ದೂರಿ ಕಾರ್ಯಕ್ರಮದ ಜೊತೆಗೆ, ಶ್ರೀ ರಾಜ್ ಕುಮಾರ್ ಅಧ್ಯಕ್ಷತೆಯ ಕನ್ನಡ ಸಂಘದ ನೂತನ ಆಡಳಿತ ಸಮಿತಿಯ "ಪದ ಗ್ರಹಣ " ಸಮಾರಂಭವೂ ಜರಗಲಿದೆ.
ಈ ವಿಶೇಷ ದಿನದ ಮುಖ್ಯ ಅತಿಥಿಗಳಾಗಿ ತಾಯ್ನಾಡಿನಿಂದ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿ ಯವರು ಈ ದ್ವೀಪ ರಾಷ್ಟ್ರಕ್ಕೆ ಆಗಮಿಸಲಿದ್ದು, ನೂತನ ಸಮಿತಿ ಹಾಗೂ ಸಮಸ್ತ ಕನ್ನಡಿಗರಿಗೆ ಶುಭಾಶೀರ್ವಚನ ಗೈಯಲಿದ್ದಾರೆ.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಲ್ಲಿ ಖ್ಯಾತರಾದ ಬೆಂಗಳೂರಿನ ಮಹಾಮಾಯಾ ನಾಟ್ಯ ಕಲಾ ಶಾಲೆಯ ನಿರ್ದೇಶಕರಾದ ಶ್ರೀ ಸೂರ್ಯ ಯನ್. ರಾವ್ ಹಾಗೂ ಶ್ರೀಮತಿ ಪ್ರಥಮಾ ಪ್ರಸಾದ್ ರಾವ್ ಇವರು ಅಮೋಘ ಭರತ ನಾಟ್ಯ , ಕಥಕ್,ಕೂಚಿಪುಡಿ ನೃತ್ಯ ಗಳ ಪ್ರದರ್ಶನ ನೀಡಲಿದ್ದಾರೆ. ಅಲ್ಲದೆ ಕರ್ನಾಟಕದ ಹೆಸರಾಂತ ಹಾಸ್ಯ ಪಟು ಶ್ರೀ ರಮೇಶ್ ಬಾಬು, ಬಹರೈನ್ ಕನ್ನಡಿಗರನ್ನು ಹಾಸ್ಯ ಲೋಕಕ್ಕೆ ಕೊಂಡೊಯ್ಯಲಿದ್ದಾರೆ. ಮಾತ್ರವಲ್ಲದೆ ಸಂಘದ ಪ್ರತಿಭಾವಂತ ಕಲಾವಿದರ ವಿವಿಧ ಮನರಂಜನಾ ಕಾರ್ಯಕ್ರಮ ದೊಂದಿಗೆ ವಸಂತೋತ್ಸವ -2012 ವರ್ಣ ರಂಜಿತವಾಗಿ ಅನಾವರಣಗೊಳ್ಳಲಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಸಂಘ ಬಹರೈನ್ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-05-10
|
|
|