ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’

ಯುಗ ಯುಗಾದಿ ಕಳೆದು ಮರಳಿ ಮಸ್ಕತ್ ಗೆ ಬಂದ ‘ವಸಂತ’ನನ್ನು ಮಸ್ಕತ್‌ನ ಕನ್ನಡಿಗರು   “ಯುಗಾದಿ ನಗೆ ಹಬ್ಬ ೨೦೧೨” ದೊಂದಿಗೆ  ನಗುನಗುತ್ತಾ ಬರಮಾಡಿಕೊಂಡರು. ಈ ಮೂಲಕ ಮಸ್ಕತ್ ಕನ್ನಡಿಗರು ‘ನಂದನ’ಸಂವತ್ಸರವನ್ನು ನಗು ನಗುತ್ತ ಸಂತೋಷದಿಂದ ಕಳೆದು ಬಿಡುವ  ನಿರ್ಧಾರವನ್ನು ಕೈಗೊಂಡರು.




ಇದಕ್ಕೆ ಕಾರಣ ಮಸ್ಕತ್‌ನ ಸಾಮಾಜಿಕ ಸಂಸ್ಥೆಯ ರಂಗಮಂದಿರದಲ್ಲಿ  ಯುಗಾದಿ ಹಬ್ಬದ ಪ್ರಯುಕ್ತ ಮಸ್ಕತ್ ಕರ್ನಾಟಕ ಸಂಘದ ವತಿಯಿಂದ ತಾರೀಕು ೩೦ ೦೩ ೨೦೧೨ರಂದು  ಎಲ್ಲರನ್ನು ನಕ್ಕು ನಗಿಸಲು “ಯುಗಾದಿ ನಗೆ ಹಬ್ಬ ೨೦೧೨” ವನ್ನು ಆಯೋಜಿಸಲಾಗಿತ್ತು.

ಇತ್ತೀಚೆಗಷ್ಟೆ ನಗೆನಾಟಕ ಆಸ್ವಾದಿಸಿ ಅದರ ಗುಂಗಿನಿಂದ  ಹೊರಬರ್ರುತ್ತಿದ್ದ ಕರ್ನಾಟಕ  ಸಂಘದ ಸದಸ್ಯರಿಗೆ ಈ ಬಾರಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲು“ಡೋಂಟ್ ವರಿ ಮಾಡ್ಕೊಬೇಡಿ” ಅನ್ನುತ್ತಾ ಶ್ರೀಮತಿ ಸುಧಾ ಬರಗೂರು, ಹಾಸ್ಯ ಪ್ರವಚನ ಗಳೊಂದಿಗೆ  ಗಂಗಾವತಿ ಪ್ರಾಣೇಶರ ಶಿಷ್ಯರಾದ ಶ್ರೀ.ಬಸವರಾಜ್ ಮಹಾಮನಿ ಹಾಗೂ ತಮ್ಮ “ಮಾತನಾಡುವ ಬೊಂಬೆ” ಯೊಂದಿಗೆ    ಕುಮಾರಿ ಇಂದುಶ್ರೀಯವರು ದಯಮಾಡಿಸಿದ್ದರು.



ಶ್ರೀಮತಿ ಸುಧಾ ಬರಗೂರು ಹಾಗೂ ಬಸವರಾಜ್ ಮಹಾಮನಿಯವರುಗಳು ತಮ್ಮ ಸ್ವಂತ  ಅನುಭವಗಳನ್ನೇ ಹಾಸ್ಯದ ಬೆಳಕಿನಲ್ಲಿ ವಿವರಿಸಿ ನಾವು ಹೇಗೆ ಹಾಸ್ಯ ಪ್ರಜ್ನೆ ಬೆಳಸಿಕೊಳ್ಳಬೇಕು ಎಂಬುದನ್ನು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದರು. ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೇ ವಿಷಯವಾಗಿಟ್ಟುಕೊಂಡು ಇವರುಗಳು ವಿವರಿಸಿದ ಹಾಸ್ಯ ಪ್ರವಚನ ಎಲ್ಲರೂ ಅದನ್ನು ಮತ್ತೆ ಮತ್ತೆ ಮೆಲುಕು ಹಾಕಿಕೊಂಡು  ನಗುವಂತೆ ಮಾಡುವಂತವುಗಳಾಗಿದ್ದವು.





ಕುಮಾರಿ ಇಂದುಶ್ರೀಯವರು ತಮ್ಮ ಅದ್ವಿತೀಯ “ಮಾತನಾಡುವ ಬೊಂಬೆ” ಗಳ ಹಾಸ್ಯ ಸಂಭಾಷಣೆಗಳ  ಮೂಲಕ  ಸಭಿಕರನ್ನು ಕೆಣಕಿ,ತಿಣುಕಿ ನಗೆಯ ಬುಗ್ಗೆಯನ್ನು ಚಿಮ್ಮುವಂತೆ ಮಾಡಿದರು.ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರನ್ನು ಈ ಮೂವರು ಹಾಸ್ಯ ಪಟುಗಳ  ಹಾಸ್ಯದ ಲಾಸ್ಯ ನಗೆಯ ಒಂದು ಸಾಂಕ್ರಾಮಿಕ ಅಲೆಯನ್ನು  ಪುಂಕಾನುಪುಂಕವಾಗಿ ಸೃಷ್ಟಿಸಿತು. ನಮ್ಮೆಲ್ಲರ ಜೀವನದಲ್ಲಿ ಸಾಮಾನ್ಯವಾಗಿ ಘಟಿಸಿ ಮರೆತು ಹೋಗುವಂತಾ ಅದೆಷ್ಟೊ ಘಟನೆಗಳುಈ ಕಲಾವಿದರಿಗೆ ಹಾಸ್ಯದ ಬುನಾದಿಯಾಗಿರುತ್ತವೆ ಎಂಬುದು ಈ ಕಾರ್ಯಕ್ರಮದಿಂದ ಮನದಟ್ಟಾಗುತ್ತದೆ.




ಯುಗಾದಿ ನಗೆಹಬ್ಬ ಎಷ್ಟು ಸ್ವಾರಸ್ಯಕರವಾಗಿತ್ತೆಂದರೆ ಒಂಭತ್ತು ಗಂಟೆಗೆ  ಮುಕ್ತಾಯವಾಗಬೇಕಾಗಿದ್ದ ಕಾರ್ಯಕ್ರಮ ಹತ್ತು ಗಂಟೆಯಾದರೂ ಪ್ರೇಕ್ಷಕರು-ನಮ್ಮ ರಾಜಕೀಯ ಪಕ್ಷಗಳ ನಾಯಕರುಗಳಂತೆ-ಕುರ್ಚಿ ಬಿಟ್ಟು ಏಳಲು ತಯಾರಿಲ್ಲದ ಕಾರಣ ಎಗ್ಗಿಲ್ಲದೆ ಮುಂದುವರಿದಿತ್ತು.ಒಂದು ಒಳ್ಳೆ ಕಾರ್ಯಕ್ರಮವನ್ನು ಆಸ್ವಾದಿಸಲು ಅವರು  ಈ ಆಪಾದನೆಯನ್ನು ಕೂಡಾ ಹೊತ್ತುಕೊಳ್ಳಲು ಮುಂದಾಗಿದ್ದರೆಂದರೆ ಈ ಹಾಸ್ಯ ಸಂಜೆ ಎಷ್ಟು ಮನೋರಂಜನೆ ನೀಡಿತ್ತು ಎಂಬುದು  ಮನವರಿಕೆಯಾಗುತ್ತದೆ!

ಈ ಮೂರೂ ಹಾಸ್ಯಪ್ರವಚನಕಾರರು ಸುಮಾರು ಮೂರು ಗಂಟೆಗಳ ಕಾಲ ಮಸ್ಕತ್ ನ ಕನ್ನಡಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.ಮಸ್ಕತ್‌ನ ಕನ್ನಡಿಗರ ಹಾಸ್ಯ ಪ್ರಜ್ನೆ ಹಾಗೂ ಅಭಿಮಾನ ಕೂಡಾ ಕನ್ನಡ ನಾಡಿನಿಂದ ಆಗಮಿಸಿದ ಈ ಅತಿಥಿಗಳ ಮನಸೂರೆಗೊಂಡಿತ್ತು.ಕನ್ನಡಿಗರನ್ನು  ಮತ್ತೆ ಮತ್ತೆ ನಗಿಸಲು  ತಾವು ಆಗಾಗ  ಬರುತ್ತಿರುವೆನೆಂದು ಶ್ರೀಮತಿ ಸುಧಾ ಬರಗೂರು ಅವರು ಭರವಸೆ ಇತ್ತರು.

ಆರಂಭದಲ್ಲಿ ಕರ್ನಾಟಕ ಸಂಘದ ಸಂಚಾಲಕರಾದ ಶ್ರೀ ರಾಮಚಂದ್ರ ರಾವ್ ಕಲಾವಿದರನ್ನು,ಸಭಿಕರನ್ನು,ಅತಿಥಿಗಳನ್ನು ಹಾಗೂ ಪ್ರಾಯೋಜಕರುಗಳನ್ನು ಹಾರ್ದಿಕವಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಶ್ರೀಮತಿ ಶ್ರೀಮಾತಾ ಅವರು ಕಾರ್ಯಕ್ರಮದ  ಚುಕ್ಕಾಣಿ ಹಿಡಿದಿದ್ದರು.ಅವರು  ಶ್ರೀಮತಿ ಸುಧಾ ಬರಗೂರು,ಶ್ರೀ ಬಸವರಾಜ್ ಮಹಾಮನಿ ಹಾಗೂ ಕುಮಾರಿ ಇಂದುಶ್ರೀಯವರನ್ನು ಸಭೆಗೆ ಪರಿಚಯಿಸಿದರು.

ಬ್ಯಾಂಕ್ ಮಸ್ಕತ್,ಸರ್ವಿಸಸ್ ಅಂಡ್ ಟ್ರೇಡ್,ಹಾಗೂ ಮಸ್ಕತ್ ಫಾರ್ಮಸಿಯವರು ಈ ಕಾರ್ಯಕ್ರ್ರಮದ ಪ್ರಾಯೋಜಕರುಗಳಾಗಿದ್ದರು.

ಬ್ಯಾಂಕ್ ಮಸ್ಕತ್‌ನ ಶ್ರೀ ರಾಮಕೃಷ್ಣ,ಮಸ್ಕತ್ ಫಾರ್ಮಸಿಯ ಶ್ರೀ ರವಿ ಕುಮಾರ್,ಹಾಗೂ ಭಾರತೀಯ ಸಾಮಾಜಿಕ ಸಂಸ್ಥೆಯ ಶ್ರೀ ಪಿ.ಎಮ್.ಜಾಬಿರ್ ಅವರುಗಳಿಗೆ ಸ್ಮರಣಿಕೆಗಳನ್ನು ನೀಡಲಾಯಿತು.

ಅವರು ಶ್ರೀಮತಿ ಸುಧಾ ಬರಗೂರು,ಶ್ರೀ ಬಸವರಾಜ್ ಮಹಾಮನಿ ಹಾಗೂ ಕುಮಾರಿ ಇಂದುಶ್ರೀಯವರಿಗೆ ಕರ್ನಾಟಕ ಸಂಘದ ವತಿಯಿಂದ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

ಕೊನೆಯಲ್ಲಿ ಸಂಘದ  ಮುಖ್ಯ ಸಲಹೆಗಾರರಾದ ಶ್ರೀ ಅಹಿರಾಜ್ ಗುರುರಾಜ್ ರವರು ಕಾರ್ಯಕ್ರಮದ  ಯಶಸ್ಸಿಗೆ ಕಾರಣ ಕರ್ತರಾದ  ಪ್ರತಿಯೊಬ್ಬರನ್ನು ಹೆಸರಿಸಿ ಕರ್ನಾಟಕ  ಸಂಘ ಎಲ್ಲರಿಗೂ ಆಭಾರಿ ಎಂದು ತಿಳಿಸಿ  ವಂದನೆಗಳನ್ನು ಅರ್ಪಿಸಿದರು.ಒಂದರ ಹಿಂದೆ ಒಂದರಂತೆ ಉತ್ತಮ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ ಹೆಮ್ಮೆ ಕರ್ನಾಟಕ ಸಂಘದ ಪಾಲಿಗಾಯಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ: ಕರುಣಾಕರ ರಾವ್ ಕದ್ರಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-05-02

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri